rtgh

Kuvempu Quotes In Kannada | ಕುವೆಂಪು ಕನ್ನಡ ನುಡಿಗಳು

Kuvempu Quotes in Kannada, Kuvempu Quotes, Kuvempu Quotes on Life, ಕುವೆಂಪು ಕನ್ನಡ ನುಡಿಗಳು, Kuvempu Thoughts in Kannada Kuvempu Quotes About Nature Kuvempu Quotations in Kannada

ಕುವೆಂಪು ಕನ್ನಡ ಕವನಗಳು

Kuvempu Quotes In Kannada
Kuvempu Quotes In Kannada

ಕೋಟಿ ಧನವಿದ್ದರೂ ಪಟ್ಟಣವು ಗೊಳು………….

ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು……..

ಕುವೆಂಪು

ಮುಚ್ಚು ಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ

ಎಲ್ಲಾದರೂ ಇರು

ಎಂತಾದರೂ ಇರು

ಎಂದೆಂದಿಗೂ ನೀ

ಕನ್ನಡವಾಗಿರು

ಕುವೆಂಪು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

ಕುವೆಂಪು

ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.

ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ.

ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು

ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ

Kuvempu Quotes About Kannada

ಕುವೆಂಪು

ನೂರು ದೇವರನೆಲ್ಲ ನೂಕಾಚೆ

ದೂರ ಭಾರತಾಂಬೆಯೆ ದೇವಿ

ನಮಗಿಂದು ಪೂಜಿಸುವ ಬಾರ!

ಕುವೆಂಪು

ಗುಡಿ ಚರ್ಚು ಮಸಜೀದಿಗಳ ಬಿಟ್ಟು

ಹೊರಬನ್ನಿ

ಬಡತನವ ಬುಡಮುಟ್ಟ

ಕೀಳ ಬನ್ನಿ

ಕುವೆಂಪು

ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ ಹೊರನುಡಿಯ

ಹೊರೆಯಿಂದ ಕುಸಿದು ಕುಗ್ಗಿ ರಾಜನುಡಿಯೊಂದು,

ರಾಷ್ಟ್ರನುಡಿಯೆಂದೊಂದು

ದೇವನುಡಿಯೆಂದೊಂದು ಹತ್ತಿ ಜಗ್ಗಿ,

ನಿರನಿಟಿಲು ನಿಟಿಲೆಂದು ಮುದಿಮೂಳೆ

ಮುರಿಯುತಿದೆ ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ

ಕುವೆಂಪು

ಕನ್ನಡದ ವಿಷಯದಲ್ಲಿ ನಾನು

ಟ್ಯಾಂಕರಿನಂತೆ ಮುನ್ನುಗ್ಗುತ್ತೇನೆ.

ನೀವು ದಾರಿಬಿಟ್ಟುಕೊಟ್ಟಿರೋ ಸರಿ,

ಇಲ್ಲವೋ ಅಪ್ಪಚ್ಚಿಯಾಗುತ್ತೀರಿ.

ಕುವೆಂಪು

ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು

ಕೋಟಿ ಧನವಿದ್ದರೂ

ಪಟ್ಟಣವು ಗೋಳು,

ಕಾಸಿಲ್ಲದಿದ್ದರೂ

ಸುಖ ಹಳ್ಳಿ ಬಾಳು

ಕುವೆಂಪು

ಆ ಮತದ ಈ ಮತದ

ಹಳೆಮತದ ಸಹವಾಸ ಸಾಕಿನ್ನು

ಸೇರಿರೈ ಮನುಜಮತಕೆ

ಓ, ಬನ್ನಿ, ಸೋದರರೆ, ವಿಶ್ವಪಥಕೆ!

ಕುವೆಂಪು

ಅರ್ಥವಿಲ್ಲದ ಪ್ರಶ್ನೆಗೆ

ಸುಮ್ಮನಿರುವುದೇ ಉತ್ತರ

ಕುವೆಂಪು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?

ಕುವೆಂಪು

ಅಲ್ಪ ನಾನು ಎಂದು ಕುಗ್ಗಿ

ಮುದುಗ ಬೇಡವೋ ಓ ಅಲ್ಪವೆ ,

ಅನಂತದಿಂದ ಗುಣಿಸಿಕೊ

ನೀನ್ ಅನಂತವಾಗುವೆ

ಕುವೆಂಪು

ಮೊದಲ ಠಕ್ಕನು ಮೊದಲ ಬೆಪ್ಪನಂ

ಸಂಧಿಸಲು ಸಂಭವಿಸಿಹೀ ಮತ

ಎಂಬ ಮತಿವಿಕಾರಮ್ , ದೊರೆ

ಪುರೋಹಿತರ್ ಅವಳಿ

ಮೊಲೆಯೂಡಿ ಸಲಹಿದರಮ್

ಕುವೆಂಪು

ಎಲ್ಲಾ ಧರ್ಮಗಳು ಮನುಷ್ಯ

ಧರ್ಮವೇ ಶ್ರೇಷ್ಠ ಎಂದಿವೆ .

ಅರ್ಥೈಸಿಕೊಳ್ಳುವಲ್ಲಿ ಸೋತ

ನಾವು ನಮ್ಮದೇ ಶ್ರೇಷ್ಠ

ಎನ್ನುತ್ತೇವೆ .

ಕುವೆಂಪು

ನಿತ್ಯವೂ ಅವತರಿಪ ಸತ್ಯಾವತಾರ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ

ನಿತ್ಯವೂ ಅವತರಿಪ ಸತ್ಯಾವತಾರ

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ

ಭಾವಭವದಿ ಭವಿಸಿ , ಓ ಭವವಿದೂರ

ನಿತ್ಯವೂ ಅವತರಿಪ ಸತ್ಯಾವತಾರ .

ಕುವೆಂಪು

ಸುವಾಸನೆಗಿಂತಲೂ ದುರ್ವಾಸನೆ ಬೀಗ ಹರಡುತ್ತದೆ .

ಸತ್ಕೀರ್ತ ಹಬ್ಬುವುದು ನಿಧಾನ.

ಕೆಟ್ಟ ಕೀರ್ತಿ ಕಾಡ್ಗಚ್ಚಿನಂತೆ ಹಬ್ಬುತ್ತದೆ .

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ

ಚರಿತ್ರೆಯಲ್ಲಿದು , ಅಲೌಕಿಕ ನಿತ್ಯ ಸತ್ಯಂಗಳಂ

ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ ,

ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸಿನ

ಮೇರುಕೃತಿ , ಮೇಣ್ ಜಗದ್ಭವ್ಯ ರಾಮಾಯಣಂ !

ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ

ಅವತರಿಸಿಮೀ ಪುಣ್ಯಕೃತಿಯ ರಸಕೋಶಕ್ಕೆ,

ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ!

ಕುವೆಂಪು

ಓ – ಪೂಜಾರಿ

ಕೋಮಲ ಸುಮಗಳ ಕತ್ತನು ಕೊಯ್ದು

ಕಗ್ಗಲ್ಲಿನ ಕಗ್ಗತ್ತಲೆಗೊಯ್ದು

ಗುಡಿಯ ಕಲ್ಲಿಗೆ ಬಲಿಕೊಡದಿದ್ದರೆ

ಪರಮಾತ್ಮಗೆ ತೃಪ್ತಿಯೇ ಇಲ್ಲೇನು ?

ಈ ಗಿಡದೊಳ ರಾರಾಜಿಸುತ್ತಿದ್ದರೆ

ಶಿವ ಪೂಜೆಯು ಸಲ್ಲುವುದಿಲ್ಲೇನು ?

ಸೌಂದರ್ಯ ಸುಮ ನಯನವಕಿತರೆ

ಶಿವ ಮುಖ ಚಂದ್ರಿಕೆ ಚಲುವದು ಸತ್ತರೆ

ಭುವನಕೆ ಮಂಗಳವಾದೀತೆ ?

ಬಿಡೋ ಅಲ್ಲಿರಲಿ ಆ ಹೂವು

ನೀ ಸಷ್ಟಿಸಲಿರದ ಚೆಲುವಿಗೆ

ನಿನ್ನಿಂದೇತಕೆ ಸಾವು

ಕುವೆಂಪು

ಉತ್ಸಾಹವೆಂಬುದು ಕಲ್ಲಿದ್ದಲ

ಒಳಗೆ ಕುದುಯುತ್ತಿರುವ

ಕಾವಾಗಬೇಕೇ ವಿನಃ !

ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು !!

ಕುವೆಂಪು

ಅಮ್ಮನ ಮಡಿಲೊಳು

ಮಲಗಿಹ ನನಗೆ ಗುಮ್ಮನ

ಭಯವಿಹುದೇನಣ್ಣ !

FAQ :

ಕುವೆಂಪು ಪೂರ್ಣ ಹೆಸರೇನು

ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಕುವೆಂಪು ಅವರ ಮೊದಲ ಕವನ ಯಾವುದು?

ಶ್ರೀ ರಾಮಾಯಣ ದರ್ಶನ

ಇನ್ನು ಹೆಚ್ಚಿನ ವಿಷಯಗಳನ್ನು  ಓದಿ:

Kuvempu Information in Kannada

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಕುವೆಂಪು ಅವರ ಬಗ್ಗೆ ಮಾಹಿತಿ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಕುವೆಂಪು ಕೋಟ್ಸ್‌ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *