Good Night in Kannada | Good Night wishes in kannada | Good Night Quotes Kannada

Good Night Wishes latest, Quotes, Kavanagalu, Thoughts Images in Kannada wtsapp ,best good night thoughts in kannada, ಗುಡ್ ನೈಟ್ ಕವನಗಳು good night messages for whatsapp in kannada

ನಿದ್ರಾದೇವಿಯ ಮಡಿಲಲಿ ಲಾಲಿ ಹಾಡ ಕೇಳುತ ಮಲಗುವ ಮುನ್ನ ನಿಮಗೆಲ್ಲ ಶುಭ ರಾತ್ರಿಯ ಶುಭ ಸಂದೇಶ.
*** ಶುಭರಾತ್ರಿ ***.

ಮೋಡವೆಲ್ಲ ಚದುರಿ ಚಂದಿರ ನಕ್ಕಿರಲು, ಬಾನಿನ ತುಂಬೆಲ್ಲ ನಕ್ಷತ್ರ ಮಿನುಗಿರಲು, ರಾತ್ರಿಯ ಕಂಪಿಗೆ ನಿದಿರೆ ಬಂದಿರಲು, ಮಲಗುವ ಮೊದಲು ನಿಮಗೆಲ್ಲ ಶುಭ ಸಂದೇಶಗಳು..
*** ಶುಭರಾತ್ರಿ ***.

ಸಂಜೆಯಾಗಸದ ಮೋಡದಂಚಿನಲಿ ದೂರದಿಗಂತದಿ ಗೋಚರಿಸುವ ನಕ್ಷತ್ರ ಸಮೂಹದಲಿ ನಿಂತು ಹೇಳುವೆ ನಿನಗೆ
*** ಶುಭರಾತ್ರಿ ***.

ಹುಣ್ಣಿಮಯ ದಿನದಂದು ತಿಂಗಳ ಬೆಳಕಿನಲಿ ಭ್ರಮರವಾಗಿ ಝೇಂಕರಿಸುತ್ತಾ ಬಂದು  ನಿನ್ನ ಮುಂಗುರುಳತಾಗಿ ಗುಟ್ಟಾಗಿ ಹೇಳುವೆ
*** ಶುಭರಾತ್ರಿ ***.

ಬೀಸು ತಂಗಾಳಿಯಜೊತೆ ಮಲ್ಲಿಗೆ ಹೂವಿನ ಕಂಪಾಗಿ ತೇಲಿಬಂದು ನಿನ್ನ ಸುವಾಸನೆಯಲಿ ಮೈಮರೆಸಿ ಹೇಳುವೆ ನಿನಗೆ
*** ಶುಭರಾತ್ರಿ ***.

ಕಡಲತಡಿಯಲಿ ಬಡಿವ ಅಲೆಗಳ ಜೊತೆ ಮುತ್ತಾಗಿ ತೇಲಿಬಂದು ನಿನ್ನಂಗಾಲಿಗೆ ತಾಗಿ ಹೇಳುವೆನಿದೋ
**ಶುಭರಾತ್ರಿ***

ಅಂದ ಕಿರುನಗೆಬೀರೆ ಚೆಂದದಾ ನಿನ್ನಂ ದವ ಸವಿದು ಪಿಸುಮಾತಿನಲಿ ನಿನಗೆ ಸುಖ ನಿದ್ರೆಗುಮುನ್ನ ಮತ್ತೊಮ್ಮೆ ಇದೋ
**ಶುಭರಾತ್ರಿ**

ದೇಹವನು ಬದಿಗಿರಿಸಿ, ನಯನಗಳ ವಿಶ್ರಮಿಸು ಚಂದ್ರನಲಿ ಸಂಚರಿಸಿ, ತಾರೆಯಲಿ ಸಂಭ್ರಮಿಸು ಜಾರುತ ನಿದ್ರೆಯಲಿ, ಶುಭರಾತ್ರಿ ಅನುಭವಿಸು
**ಶುಭರಾತ್ರಿ**

ದೇಹ ಹಗುರಾಗಲಿ, ಮನಸು ತಂಪಾಗಲಿ ಭ್ರಮಿಸು ನೀ ತಾರೆಯನು, ಹರಸುವೆ ನಾ ಸುಖ ನಿದ್ರೆಯನು
**ಶುಭರಾತ್ರಿ**

ಅತಿಶಯವಿಲ್ಲ, ಇದರಲಿ ಅನುರಾಗವಿಲ್ಲ ನೀನೊಪ್ಪುತಿರೆ ಕೇವಲ ಶುಭರಾತ್ರಿ ಎಲ್ಲಾ
**ಶುಭರಾತ್ರಿ**

ನಿನ್ನೊಡನೆ ಮಾತಿಗೆ ಕಾರಣವ ನಾ ಹುಡುಕಿದೆನು ಶುಭರಾತ್ರಿ ಹೇಳುವ ನೆಪವ ನಾ ಮಾಡಿದೆನು
**ಶುಭರಾತ್ರಿ**.

ಮಾತಿನ ನೆಪದಲಿ, ಮೌನವ ಮುರಿಯದಿರು ವಿರಸದ ನೆಪದಲಿ, ಸರಸವ ನೀ ಮರೆಯದಿರು ಮಂದಾದ ಬೆಳಕಿನಲಿ, ಅಂದವನು ತೋರುತಿರು ಶುಭರಾತ್ರಿ ಸಮಯದಿ, ನೀ ಎಲ್ಲವನು ಮರೆಸುತಿರು
**ಶುಭರಾತ್ರಿ**.

ನೀ ಬಾರದಿರೆ ಏನು? ನಾನರಸಿ ಬಂದಿರುವೆ ಶುಭರಾತ್ರಿ ನೆಪವೊಡ್ಡಿ ನಿನ್ನೊಡನೆ ಬೆರೆತಿರುವೆ
**ಶುಭರಾತ್ರಿ**.

ದೀಪವು ಅರದಿರಲಿ, ಬೆಳಕು ಬಾಡದಿರಲಿ ಮಂದಾದ ಬೆಳಕಿನಲಿ, ನಿನ್ನ ಮುಖವು ಕಾಣುತಿರಲಿ
**ಶುಭರಾತ್ರಿ**.

ಚಂದಿರ ಬಂದಿಹನು ತಾರೆ ಮೂಡಿಹುದು ನಿನ್ನ ಮುಖದ ಕಾಂತಿಯಲಿ ಎಲ್ಲವೂ ಮರೆಯಾಗಿಹುದು…
**ಶುಭರಾತ್ರಿ**.

ಪಾಳಿಯ ಕೆಲಸ ಮುಗಿಸಿ ನಿರ್ಗಮಿಸಿದ ನೇಸರನ ಬದಲಿಗೆ ಬಂದಿಹನು ಈ ಚಂದ್ರನು…., ಕೋರಲು ನಿನಗೆ ಶುಭರಾತ್ರಿಯನು….,
**ಶುಭರಾತ್ರಿ**.

ರಾತ್ರಿ ಎಂಬುದು ನೇಸರನ ಅಸ್ತಂಗವಲ್ಲ, ಚಂದ್ರಮನ ಆಗಮನವಲ್ಲ, ದಣಿದ ದೇಹವ, ವಿಶ್ರಮಿಸುವ ಪರಿಯನು, ಪ್ರಕೃತಿಯು ತೋರಿದೆ ನಮಗೆಲ್ಲಾ…
**ಶುಭರಾತ್ರಿ**

ಚಂದಿರನ ನೋಡುವ ಆಸೆಯು ಇಲ್ಲ ನೇಸರನ ಕಾಯುವ ತವಕವು ಇಲ್ಲ ಕಣ್ಮುಂದೆ ನಿನ್ನದೆ, ಚಿತ್ರಣ ಇರುತಿರೆ ಈ ರಾತ್ರಿ ನನಗೆ, ಸರಿ ಹೋಗದಲ್ಲ…,
**ಶುಭರಾತ್ರಿ**

ಮುಸುಕು ಹಾಕಿ ಮಲಗಿದೊಡೆ, ಕಾಣ ಸಿಗಲಿ ಒಂದು ಸುಂದರ ಕನಸು…, ಬಡಿದೆಬ್ಬಿಸಿ, ಪ್ರೇರೇಪಿಸಲು ನನಗೆ, ಛಲಬಿಡದೆ ಮಾಡುವೆ ನಾ ನನಸು…,
**ಶುಭರಾತ್ರಿ**

Kavanagalu Good Night Quotes in Kannada

ದಿನವಿಡೀ ದುಡಿದು, ಅವಿರತವಾಗಿ ಬಳಲಿದ ದೇಹವ, ಸುಖ ನಿದ್ರೆಗೆ ಒಲಿಸಲು ನಾ, ಅಸಮರ್ಥನಾದೆ… ನಿದ್ರಾ ಭಂಗ ಮಾಡುವ ನಿನ್ನ ಪಟವು, ಕಣ್ಣ್ಮುಂದೆ ಹಾದು ಹೋಗಲು, ನಿದ್ರೆಗೂ ದೀರ್ಘ ರಜೆಯನ್ನಿಟ್ಟು ನಾ ಕೃತಾರ್ಥನಾದೆ…,
**ಶುಭರಾತ್ರಿ**

ಬಡತನ ಶಾಶ್ವತವಲ್ಲ . ಸಿರಿತನ ಶಾಶ್ವತವಲ್ಲ . ನಮ್ಮಲ್ಲಿ ಇರುವಂತ . ಮಾನವೀಯತೆಯ ಗುಣಗಳೇ . * ಶಾಶ್ವತವಾದದು :ಮೌನದ ಹಿಂದಿರುವ ಮಾತನ್ನು , ನಗುವಿನ ಹಿಂದಿರುವ ನೋವನ್ನು , ಕೋಪದ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳುವವರೇ ನಿಜವಾದ ” ಆತಿಯರು .. *** ಶುಭರಾತ್ರಿ ***.

ಇನ್ನೊಬ್ಬರ ತುಳಿತಕ್ಕೆ ಸಿಗದೆ , ಆಡಿಕೊಳ್ಳುವವರ ಬಾಯಿಗೆ ತುತ್ತಾಗದೆ ಯಾರೂ ಬೆಳೆದಿಲ್ಲ . ಮನುಷ್ಯ ಒಳ್ಳೆಯವನಾಗಿದ್ದರೂ ಮಾತನಾಡುತ್ತಾರೆ , ಕೆಟ್ಟವನಾಗಿದ್ದರೂ ಮಾತನಾಡುತ್ತಾರೆ . ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ ಹಾಗೆಯೇ ಎಲ್ಲರೂ ಎಲ್ಲರಿಗೆ ಕೆಟ್ಟವರಾಗುವದಿಲ್ಲ .*** ಶುಭರಾತ್ರಿ ***.

ನೂರು ಮನಸ್ಸುಗಳ ನೋಯಿಸಿ < ಹಚ್ಚಿದರೇನು ದೇವರ ಮುಂದೆ ದೀಪ , ತಡೆಯುವುದೇನು ಅದು ನೊಂದ ಮನಸ್ಸುಗಳು ನೀಡುವ ಶಾಪ .*** ಶುಭರಾತ್ರಿ ***..

ನಾವು ಬದುಕಲ್ಲಿ ಇಟ್ಟುಕೊಂಡ ನಿರೀಕ್ಷೆಗಿಂತ ಬದುಕು ನಡೆಸೊ ಪರೀಕ್ಷೆ ಗಳೆ ಹೆಚ್ಚು . ಗೆದ್ದರೆ ಮುಂದಿನ ದಾರಿ ಸುಗಮ , ಸೋತರೆ ಬಾಳಿನ ಹೊಸ ಅಧ್ಯಾಯ ಉಗಮ .*** ಶುಭರಾತ್ರಿ ***.

ಪ್ರತಿ ರಾತ್ರಿಗಳ ಕತ್ತಲೆಗೆ ನಾಳೆ ಎಂಬ ಬೆಳಕಿರಲಿಲ್ಲ , ಆ ಬೆಳಕಿನಲ್ಲಿ ಎಲ್ಲಾರ ಬಾಳು ನಗುತ ಸದಾ ಬೆಳಗುತಿರಲಿ.*** ಶುಭರಾತ್ರಿ ***.

ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ , ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ . ಸಂತೋಷವೂ ಹಾಗೆಯೇ , ಜೀವನದಲ್ಲಿ ಆಗಾಗ ಬಂದು , ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ..*** ಶುಭರಾತ್ರಿ ***.

ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಶಿಯಿಂದ ಅನುಭವಿಸಿ , ಏಕೆಂದರೆ ಹೆಚ್ಚು ದಿನ ಉಳಿಯಲಾರದು ಕೆಟ್ಟ ಸಮಯ ಬಂದಾಗಲೂ ಖುಶಿಯಿಂದಲೇ ಅನುಭವಿಸಿ ಕೆಟ್ಟದ್ದು ಹೆಚ್ಚು ದಿನ ಉಳಿಯಲಾರದು ನೆನಪಿಡಿ..ಜೀವನದಲಿ . ಯಾವುದೂ ಶಾಶ್ವತವಲ್ಲ..*** ಶುಭರಾತ್ರಿ ***.

ನಿಮ್ಮ ಕನಸುಗಳ ಹಾದಿಯು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿರಲಿ GOOD..*** ಶುಭರಾತ್ರಿ ***.

Good night wishes and good night images in kannada

Beautiful Good Night images Kannada

kavanagalu good night quotes in kannada
good night sweet dreams in kannada
good night thoughts in kannada
good night wishes in kannada
good night quotes in kannada
good night quotes kannada
shubh ratri kannada
good night kannada thoughts
beautiful good night images in kannada

ಇನ್ನೂ ಹೆಚ್ಚಿನ ಗುಡ್ ನೈಟ್ ಕೋಟ್ಸ್  ಇಮೇಜಸ್,   ಶುಭಾಶಯಗಳು ,  ಕವನಗಳು ಇನ್ನ ಹೆಚ್ಚಿನ ವಿಷಯಗಳಿಗಾಗಿ ಕನ್ನಡ ಥಾಟ್ಸ್ ಆಪನ್ನು ಡೌನ್ಲೋಡ್ ಮಾಡಿ. Download App Good Night Images 

ಇನ್ನು ಹೆಚ್ಚಿನ ವಿಷಯಗಳನ್ನು  ಓದಿ: 

Sad quotes in kannada

Kannada Kavanagalu

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಗುಡ್ ನೈಟ್ ಕವನಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಗುಡ್ ನೈಟ್ ಕವನಗಳನ್ನು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh