Gidavagi Baggadu Maravagi Baggite | ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ?

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಗಾದೆ, Gidavagi Baggadu Maravagi Baggite gaade in kannada

Gidavagi Baggadu Maravagi Baggite

Gidavagi Baggadu Maravagi Baggite ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ
Gidavagi Baggadu Maravagi Baggite ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ

ಗಾದೆಗಳು ವೇದಗಳಿಗೆ ಸಮ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರ ಅನುಭವದ ಮುಖಾಂತರ ಮೂಡಿದ ಮಾತುಗಳಾಗಿವೆ,

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ? ಎಂಬ ಗಾದೆಯು ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದಾಗಿದೆ . ಏನನ್ನೇ ಕಲಸಿಬೇಕಾದರೂ ನಾವು ಚಿಕ್ಕಂದಿನಲ್ಲಿಯೇ ಕಲಿಸಬೇಕು .

ಮೂರು ವರುಷಗಳಲ್ಲಿ ಕಲಿತದ್ದು ನೂರು ವರ್ಷಗಳವರೆಗೆ, ಕೂಸಾಗಿ ಕಲಿತದ್ದು ಲೇಸಾಗಿ ವರ್ಧಿಪುದು ಎಂಬಂತೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಗ್ರಹಣಶಕ್ತಿ, ಚುರುಕುತನ ಮೊದಲಾದ ಗುಣಗಳು ಸಹಜವಾಗಿರುತ್ತದೆ.

ಆಗ ನಾವು ಹೇಳಿಕೊಟ್ಟ ಬುದ್ಧಿಮಾತುಗಳು, ವಿದ್ಯೆ ಎಲ್ಲಾ ಶಾಶ್ವತವಾಗಿ ಅವರ ಮನಸ್ಸಿನಲ್ಲಿ ಉಳಿಯುತ್ತದೆ. ಆದ್ದರಿಂದ ಮಕ್ಕಳನ್ನು ಚಿಕ್ಕವಯಸ್ಸಿನಲ್ಲಿಯೇ ಒಳ್ಳೆಯ ಮಾರ್ಗದಲ್ಲಿ ತಿದ್ದಿ ಬೆಳೆಸಬೇಕು.

ಅವರಿಗೆ ಚಿಕ್ಕಂದಿನಲ್ಲಿಯೇ ಉತ್ತಮ ಗುಣಗಳನ್ನು ಒಳ್ಳೆಯ ನೀತಿ ನಡವಳಿಕೆಗಳನ್ನು ಕಲಿಸಿದರೆ ಆ ಮಕ್ಕಳು ಚೆನ್ನಾಗಿ ಕಲಿತು , ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ .

ಹಾಗೆ ಚಿಕ್ಕಂದಿನಲ್ಲಿ ಒಳ್ಳೆಯ ವಿದ್ಯೆ ನಡತೆಗಳನ್ನು ಕಲಿಸದೆ , ಮಕ್ಕಳು ಕೆಟ್ಟದನ್ನ ಮಾಡಿದರೂ , ಚಿಕ್ಕ ಮಕ್ಕಳೆಂದು ಸುಮ್ಮನೆ ಬಿಟ್ಟು ಅವರನ್ನೇ ಹೊಗಳಿ ಬೆಳೆಸಿದರೆ ದೊಡ್ಡವರಾದ ಮೇಲೂ , ಅವರು ಅದೇ ಗುಣಗಳನ್ನು ಪಾಲಿಸುತ್ತಾರೆ .

ಆಗ ಎತ್ತರಕ್ಕೆ ಬೆಳೆದ ಮಕ್ಕಳಿಗೆ ಬುದ್ದಿ ಹೇಳಲು ಹೋದರೆ ಅದು ಪ್ರಯೋಜನವಾಗುವುದಿಲ್ಲ . ಅವರು ಸಮಾಜ ಘಾತುಕರಾಗುತ್ತಾರೆ.ದೇಶದ್ರೋಹಿಗಳಾಗುತ್ತಾರೆ .

ಹಾಗೆಯೇ ಸಸ್ಯಗಳೂ ಸಹ . ಸಸ್ಯಗಳು ಗಿಡಗಳಾಗಿದ್ದಾಗ ಅವುಗಳನ್ನು ಹೇಗೆ ಬೇಕೋ ಹಾಗೆ ನಾವು ನಮಗೆ ತಕ್ಕಂತೆ ಬಗ್ಗಿಸಿ ಬೆಳೆಸಬಹುದು. ಆದರೇ ಅದೇ ಗಿಡ ಬೆಳೆದು ಹೆಮ್ಮರವಾದಾಗ ಅದು ಮುರಿದು ಹೋಗುತ್ತದೆ

ಮರವಾದ ಮೇಲೆ ನಾವು ಅದನ್ನು ಬಗ್ಗಿಸಿ ನೇರ ಮಾಡೋಣ ಎಂದು ಹೋದರೆ ಮರವೇ ಮುರಿದು ಹೋಗುತ್ತದೆ. ಮೂರು ವರುಷಗಳಲ್ಲಿ ಕಲಿತದ್ದು ನೂರು ವರ್ಷಗಳವರೆಗೆ ಎಂಬ ಗಾದೆಯನ್ನು ನಾವು ಇಲ್ಲಿ ನೆನೆಯಬಹುದು.

ಆದ್ದರಿಂದ ಚಿಕ್ಕಂದಿನಿಂದಲೂ ಮಕ್ಕಳನ್ನು ಒಳ್ಳೆಯ ಮಾರ್ಗದಲ್ಲಿ ನಡೆಸಬೇಕು ಎಂಬುದು ಈ ಗಾದೆ ಮಾತಿನ ಸ್ವಾರಸ್ಯವಾಗಿದೆ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ

ಕನ್ನಡ ಗಾದೆ ಮಾತುಗಳು

ಕನ್ನಡ ವ್ಯಾಕರಣ

ಕಾವ್ಯನಾಮಗಳು

ಗಾದೆ ಮಾತು

ತತ್ಸಮ-ತದ್ಭವ

ದೇಶ್ಯ-ಅನ್ಯದೇಶ್ಯಗಳು

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆಯ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh