ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ ಕನ್ನಡ , Madaka Vastu Sevaneya Dushparinama Essay In Kannada, Madaka vastu sevane prabandha
ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ
ಈ ಲೇಖನದಲ್ಲಿ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆಯುವಿರಿ
ಪೀಠಿಕೆ:
ಮನುಷ್ಯನು ಸಾಮಾನ್ಯವಾಗಿ ಅನೇಕ ಚಟ ಅಥವಾ ದುರಭ್ಯಾಸಗಳನ್ನು ಬೆಳೆಸಿಕೊಂಡಿರುತ್ತಾನೆ . ಇಲ್ಲಿ ಚಟ ಎಂದರೆ ಇಷ್ಟು ದೊರಕಿದರೆ ಅಷ್ಟು ಬೇಕೆಂಬ ಆಸೆ . ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆಯನ್ನು ಹುಟ್ಟಿಸುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸ . ಆ ವಸ್ತುವಿನ ಸೇವನೆಗೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಕ್ರಿಯೆಗಳೆಲ್ಲಾ ಒಗ್ಗಿ ಹೋಗಿರುತ್ತವೆ . ಇಂದು ಇಂಥ ಅನೇಕ ಚಟಗಳಿಗೆ ನಮ್ಮ ಸಮಾಜವು ಬಲಿಯಾಗಿದೆ .
ಕೆಲವು ಸಾಮಾನ್ಯವಾದ ಅಂದರೆ ತೀವ್ರ ಪರಿಣಾಮವನ್ನು ಉಂಟು ಮಾಡುವ ಚಟಗಳಾದರೆ , ಇನ್ನು ಕೆಲವು ತೀವ್ರವಾದ ರೀತಿಯಲ್ಲಿ ಉತ್ತೇಜನಕಾರಿಯಾದ ಚಟಗಳಾಗಿರುತ್ತವೆ . ಕಾಫಿ , ಟೀ ಸೇವನೆ , ಎಲೆ ಅಡಿಕೆ , ಹೊಗೆಸೊಪ್ಪು , ಅಫೀಮು , ಗಾಂಜಾ ಮೊದಲಾದವುಗಳು ಭಾರತೀಯರ ರಕ್ತನಾಳದಲ್ಲಿ ಹರಿಯುತ್ತಿದ್ದು ಚಟ ಹಿಡಿಸಿಬಿಟ್ಟಿವೆ . ಇವುಗಳಲ್ಲಿ ಕೆಲವು ಹೊರದೇಶಗಳಿಂದ ಆಮದಾದ ಚಟಗಳಿವೆ .
ವಿಷಯ ಬೆಳವಣಿಗೆ :
ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು . ಇದು ಗಂಡು – ಹೆಣ್ಣು , ಬಡವ – ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲೆಡೆಯೂ ಕಂಡುಬರುತ್ತದೆ . ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳೆಂದರೆ , ಮದ್ಯ , ತಂಬಾಕು , ಗಾಂಜಾ , ಕೋಕೇನ್ , ಓಪಿಯಮ್ , ಆಂಫಿಟಮೈನ್ , ಹಿರಾಯಿನ್ , ಎಲ್.ಎಸ್.ಡಿ. , ಪಿ.ಸಿ.ಪಿ. , ನಿದ್ದೆ ಮಾತ್ರೆಗಳು , ಅನಿಲಗಳು ( ವೈಟನರ್ , ಪೆಟ್ರೋಲಿಯಮ್ ಉತ್ಪನ್ನಗಳು ) , ಇತ್ಯಾದಿ .
ಇಂತಹ ಸ್ಥಿತಿಯನ್ನು ಮತ್ತೆ ಮತ್ತೆ ತಲುಪಬೇಕೆಂಬ ಆಸೆಯೇ ಚಟ , ಈ ಡ್ರಗ್ಸ್‌ಗಳಲ್ಲಿ ಅನೇಕ ಗುಂಪುಗಳಿವೆ . ಟ್ರಾಂಕ್ವಿಲೈಸರ್ , ಎನ್‌ರೈಸರ್ ಮತ್ತು ಸೈಕೋಮಿಮೆಟಕ್ ಎಂಬುದಾಗಿ ಇದರಲ್ಲಿ ಮೂರು ಗುಂಪುಗಳಿವೆ . ಎಲ್.ಎಸ್.ಡಿ , ಹೆರಾಯಿನ್ ಮುಂತಾದ ನಾರೆಟಿಕ್ ಈ ಗುಂಪಿಗೆ ಸೇರಿದವು . ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಇಂಥ ವಸ್ತುಗಳ ಕಳ್ಳಸಾಗಣೆ ಮತ್ತು ಸೇವನೆ ಅಪಾಯಕಾರಿ ಮಟ್ಟದಲ್ಲಿ ಬೆಳೆದಿದೆ .
ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳು:
ಅತಿಯಾದರೆ ಅಮೃತವೂ ವಿಷ ಎಂದು ಹೇಳುತ್ತಾರೆ. ಹಾಗಾಗಿ ಈ ಮಾದಕ ವಸ್ತುಗಳಿಂದ ಸಾಕಷ್ಟು ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ನಮ್ಮ ಸಮಾಜವನ್ನು ಕಾಡುತ್ತಿರುವ ಇಂಥ ಚಟಗಳಲ್ಲಿ ಮುಖ್ಯವಾದವು ಡ್ರಗ್ಸ್ ( ಮಾದಕ ವಸ್ತು ) ಸೇವನೆ . ಇಲ್ಲಿ ಡ್ರಗ್ಸ್ ಎಂದರೆ ಮಾದಕ ಉತ್ತೇಜಕ ಪದಾರ್ಥ . ಇಂಥವುಗಳನ್ನು ಸೇವಿಸುವುದರಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿ ತಲುಪುತ್ತಾನೆ .
ಇದರ ಪರಿಣಾಮವಾಗಿ ವ್ಯಕಿಯು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾನೆ. ಇಂಥವುಗಳ ಸೇವನೆಯಿಂದ ವ್ಯಕ್ತಿಯು ಲೋಲುಪ್ತತೆಯನ್ನು ಬೆಳೆಸಿಕೊಳ್ಳುತ್ತಾನೆ . ಸಮಾಜವು ಒಪ್ಪಿಕೊಂಡಿರುವ ರೀತಿ – ನೀತಿಗಳ ವಿಷಯದಲ್ಲೂ ಅವನು ವಿಮುಖನಾಗುವಂತೆ ಅವು ಮಾಡುತ್ತವೆ. ಅಮಲು ಪದಾರ್ಥಗಳ ಸೇವನೆಯು ಕೆಲವು ನಿಮಿಷಗಳ ಕಾಲ ಆನಂದವನ್ನು ನೀಡುತ್ತದೆ ಆದರೆ ಇದು ದೂರಗಾಮಿ ಅಡ್ಡ ಪರಿಣಾಮಗಳನ್ನು ಹೊಂದಿದೆ. ಅದು ವ್ಯಕ್ತಿಯನ್ನು ನಿಧಾನವಾಗಿ ನುಂಗುತ್ತದೆ ಮತ್ತು ಅವನ ಜೀವನವನ್ನು ಎಲ್ಲಾ ರೀತಿಯಲ್ಲಿ ಹಾಳುಮಾಡುತ್ತದೆ.
ಅಂತಹ ಜನರು ಪ್ರತಿದಿನ ಜನರೊಂದಿಗೆ ಜಗಳವಾಡಲು ಪ್ರಾರಂಭಿಸುತ್ತಾರೆ, ಹೊಡೆಯಲು ಪ್ರಾರಂಭಿಸುತ್ತಾರೆ, ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಕೆಲಸ ಮಾಡುವಾಗ ಅಪಘಾತಕ್ಕೀಡಾಗುವುದು, ಸಸ್ಪೆಂಡ್ ಆಗುವುದು, ಪದೇ ಪದೇ ಕೆಲಸ ಬದಲಾಯಿಸುವುದು, ಕೆಲಸ ಬಿಡುವುದು, ಕೆರಳುವ ಮತ್ತು ಕೋಪದ ಸ್ವಭಾವವನ್ನು ತೋರಿಸುವುದು ಎಲ್ಲವನ್ನೂ ಕೊನೆಗೊಳಿಸುತ್ತದೆ. ವ್ಯಕ್ತಿಯ ಕೆಟ್ಟ ದಿನಗಳು ಪ್ರಾರಂಭವಾಗುತ್ತವೆ. ಆದ್ದರಿಂದ, ನಾವು ಅಮಲು ಪದಾರ್ಥಗಳನ್ನು ಸೇವಿಸಬಾರದು. ಈ ಸಮಸ್ಯೆಯಿಂದ ಬಳಲುತ್ತಿರುವವರು ಅದನ್ನು ದೃಢ ಸಂಕಲ್ಪದಿಂದ ಬಿಡಬೇಕು. ಅಮಲು ಒಂದು ವಿಷ ಎಂದು ನೆನಪಿಡಿ.
ವಿದ್ಯಾವಂತರೇ ಅನೇಕ ಕಾರಣಗಳಿಂದ ಈ ಅಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ . ಡ್ರಗ್ ಸೇವನೆಯಿಂದ ಉಂಟಾಗುವ ಪರಿಣಾಮಗಳನ್ನು ಸೈಕೇಡಿಲಿಕ್ ಅನುಭವಗಳೆಂದು ಕರೆಯುತ್ತಾರೆ . ಇವುಗಳ ಸೇವನೆಯಿಂದ ಮನಸ್ಸಿನಲ್ಲಿ ಅಸಾಮಾನ್ಯ ಸ್ಪಷ್ಟ ಉತ್ಪನ್ನವಾಗುತ್ತದೆ . ಇವುಗಳನ್ನು ಸೇವಸುವ ವ್ಯಕ್ತಿಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಉಂಟಾಗುವುದಂತೆ .
ಮಾದಕ ವಸ್ತುಗಳ ಸೇವನೆಯನ್ನು ತಪ್ಪಿಸುವ ಕ್ರಮಗಳು :
- ವ್ಯಸನ ಬಿಡಲು ಮನಸ್ಸು ಮಾಡಿ. ಮನಸ್ಸಿನಲ್ಲಿ ಬಲವಾದ ಆಸೆಯನ್ನು ಹೊಂದಿರುವುದು ಅವಶ್ಯಕ.
- ಪುನರ್ವಸತಿ ಕೇಂದ್ರ / ಪುನರ್ವಸತಿ ಕೇಂದ್ರದಲ್ಲಿ ಪ್ರವೇಶ ಪಡೆಯಲು ಇದು ಉತ್ತಮ ಆಯ್ಕೆಯಾಗಿದೆ , ಅಲ್ಲಿಗೆ ಹೆಚ್ಚು ಜನ ಬರುತ್ತಾರೆ , ವೈದ್ಯರ ಮೇಲ್ವಿಚಾರಣೆಯಲ್ಲಿ ಎಲ್ಲರಿಗೂ ಒಟ್ಟಿಗೆ ಚಿಕಿತ್ಸೆ ನೀಡಲಾಗುತ್ತದೆ. ಗುಂಪು ಚಿಕಿತ್ಸೆಯಲ್ಲಿ, ರೋಗಿಗೆ ಚಿಕಿತ್ಸೆ ನೀಡಲಾಗುತ್ತದೆ.
- ರೋಗಿಗೆ ಮಾನಸಿಕ ವಿಧಾನದಿಂದ ಚಿಕಿತ್ಸೆ ನೀಡಲಾಗುತ್ತದೆ.
- ಧ್ಯಾನ ಮತ್ತು ಯೋಗದ ಮೂಲಕವೂ ಮಾದಕ ವ್ಯಸನವನ್ನು ಬಿಡಬಹುದು.
- ಎಲ್ಲಾ ಸಮಯದಲ್ಲೂ ನಿಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಹಿತೈಷಿಗಳೊಂದಿಗೆ ಇರಿ. ನಿತ್ಯವೂ ಅವರೆದುರು ಇರುವಾಗ ನಶೆಯೇರುವ ಅವಕಾಶವೇ ಸಿಗುವುದಿಲ್ಲ.
- ಮಾದಕ ವ್ಯಸನದಿಂದ ಬಳಲುತ್ತಿರುವ ರೋಗಿಗಳು ಪ್ರತಿದಿನ ಡೈರಿ ಬರೆಯಬೇಕು. ಇದನ್ನು ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಜೀವನದಲ್ಲಿ ಎಲ್ಲವನ್ನೂ ಬರೆಯಬೇಕು , ನಶೆಯ ನಂತರದ ಪರಿಣಾಮಗಳನ್ನು ಬರೆಯುವ ಮೂಲಕ, ಒಬ್ಬ ವ್ಯಕ್ತಿಯು ತನ್ನ ಜೀವನವು ಮಾದಕತೆಯಿಂದ ಹೇಗೆ ಹಾಳಾಗುತ್ತಿದೆ ಎಂಬುದನ್ನು ಅರಿತುಕೊಳ್ಳುತ್ತಾನೆ.
ಉಪ ಸಂಹಾರ:
ಇಂಥ ಸಂದರ್ಭದಲ್ಲಿ ಜನ ಇವುಗಳಿಗೆ ಹೊಸ – ಹೊಸದಾಗಿ ಬಲಿಯಾಗದಂತೆ ಅವರನ್ನು ಸರಿಯಾಗಿ ಜಾಗೃತಗೊಳಿಸುವ – ಪ್ರಯತ್ನವನ್ನೂ ಮಾಡಬೇಕಾಗಿದೆ . ಆದರೆ ಜೊತೆಗೆ ನಾಳಿನ ನಾಗರೀಕರಾದ ಯುವ ಜನತೆ ಮತ್ತು ವಿದ್ಯಾರ್ಥಿಗಳು ಈ ವಿಷಯದಲ್ಲಿ ತಾವು ಸಾಕಷ್ಟು ಎಚ್ಚರಿಕೆಯಿಂದ ಇದ್ದು ಬೇರೆಯವರನ್ನು ಎಚ್ಚರಿಸಬೇಕು . ಯಾವುದೋ ಕಾರಣಗಳಿಂದ ಕೆಲವರು ದುಶ್ಚಟಗಳಿಗೆ ಬಲಿಯಾಗಿರಬಹುದು . ಅಂತಹವರ ಪ್ರೀತಿ – ವಿಶ್ವಾಸಗಳಿಂದ ಗೆದ್ದು , ಅವರಲ್ಲಿ ಅನುಕಂಪವನ್ನು ತೋರಿ ,
ಅವರನ್ನು ಸರಿ ದಾರಿಗೆ ತರಬೇಕು . ಟೀಕಿಸುವುದು , ಹೀಯಾಳಿಸುವುದು , ಕೆಟ್ಟ ನೋಟದಿಂದ ನೋಡುವುದು ತರವಲ್ಲ . ಸಮಾಜ ಜಾಗೃತಿಯ ಕೆಲಸವನ್ನು ವೈಯಕ್ತಿಕವಾದ ಆಸ್ಥೆ , ಶ್ರದ್ಧೆಗಳು , ಮಾನವೀಯ ದೃಷ್ಟಿ ಕೋನಗಳು , ಎಷ್ಟೇ ಸಲ ಇಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೆರವಾಗುತ್ತವೆ ಎಂಬುದನ್ನು ಮರೆಯಬಾರದು .
ಈ ಚಟಕ್ಕೆ ಒಂದು ಸಲ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಕಷ್ಟ . ಇಂದು ಶಾಲಾ – ಕಾಲೇಜಿನ ವಿದ್ಯಾರ್ಥಿಗಳು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ . ಒಟ್ಟಿನಲ್ಲಿ ಆಧುನಿಕ ದೇಶದ ಎಲ್ಲೆಡೆಯಲ್ಲೂ ಕಾಡುತ್ತಿರುವ ರಾಷ್ಟ್ರೀಯ ಸಮಸ್ಯೆ ಇದಾಗಿದೆ . ಆದ್ದರಿಂದ ಈ ಚಟವನ್ನು ತಪ್ಪಿಸುವುದು ಹೇಗೆ ಎಂದು ಎಲ್ಲಾ ದೇಶದ ವಿಜ್ಞಾನಿಗಳು , ಚಿಂತಕರು , ಸರ್ಕಾರದವರು ಚಿಂತಿಸುತ್ತಿದ್ದಾರೆ . ಆದರೆ ಇನ್ನೂ ಪರಿಣಾಮಕಾರಿಯಾದ ಪರಿಹಾರವನ್ನು ಕಂಡು ಹಿಡಿಯಲಾಗುತ್ತಿಲ್ಲ . ಮಾದಕ ವಸ್ತುಗಳ ಸೇವನೆಗೆ ಬಲಿಯಾಗದಂತೆ ನೋಡಿಕೊಳ್ಳುವುದು , ಬಲಿಯಾದವರನ್ನು ಅದರ ದುಷ್ಪರಿಣಾಮಗಳಿಂದ ಮುಕ್ತಗೊಳಿಸುವುದು ಸಮಸ್ಯೆಗಳಾಗಿದೆ . ಏಕೆಂದರೆ ಈ ಡ್ರಗ್ ಸೇವನೆಯಿಂದ ವಿಪರೀತ ಕೆಟ್ಟ ಪರಿಣಾಮಗಳಾಗುತ್ತದೆಂದು ಹೇಳಲಾಗುತ್ತಿದೆ . ಅವು ಯಾವುವು ಎಂದರೆ ಇವು ಮನಸ್ಸನ್ನು ಛಿದ್ರಗೊಳಿಸುತ್ತವೆ . ಇದರಿಂದ ಮನೋರೋಗಗಳು ಉಂಟಾಗುತ್ತವೆ , ಮನೋದೌರ್ಬಲ್ಯ ಉಂಟಾಗುತ್ತದೆ . ಸಾವು ಸಂಭವಿಸಿದರೂ ಆಶ್ಚರ್ಯವಿಲ್ಲ .
ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ, Madaka Vastu Sevaneya Dushparinama Essay In Kannada pdf
ಇತರ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ
ಚನ್ನಾಗಿದೆ
ಚನ್ನಾಗಿದೆ
Good explaination about drinks etc
Verry useful tq so much to sending this 🙏🙏🙏🙏