Deepavali Wishes in Kannada | ದೀಪಾವಳಿ ಶುಭಾಶಯಗಳು

Deepavali Wishes in Kannada, ದೀಪಾವಳಿ ಹಬ್ಬದ ಶುಭಾಶಯಗಳು, Best Deepawali Wishes in Kannada, Wishes for Diwali Festival in Kannada Diwali Images Kannada Deepavali wishes Deepavali Wishes in Kannada Words 2024 Deepavali Wishes Images 2024 Diwali Greetings 2024 Free Download Images

Deepavali Quotes in Kannada 2024

Deepavali wishes in Kannada | ದೀಪಾವಳಿ ಶುಭಾಶಯಗಳು

Download Wishes

ದೀಪಾವಳಿ

ಇದು ಬರೀ ಹಬ್ಬವಲ್ಲ. ಭಾರತೀಯ ಸಂಸ್ಕೃತಿಯ ಪ್ರತೀಕ. ಈ ನೆಲದ ಸಿರಿಯ ಜೀವಸತ್ವ, ಸಂಪ್ರದಾಯದ ಸಾರ.ಹಿರಿಯರು, ಕಿರಿಯರು, ಮೇಲು ಕೀಳು ಹೀಗೆ ಯಾವ ಭೇದಭಾವವೂ ಇಲ್ಲದೆ ಎಲ್ಲರೂ ಖುಷಿಯಾಗಿ ಆಚರಿಸುವಂತಹ ಹಬ್ಬವಿದು. ನಮ್ಮ ಸಂಸ್ಕೃತಿಯ ಸಾರ… ಭಾರತೀಯರಿಗೆ ದೀಪಾವಳಿ ಎಂದರೆ ಬಹುದೊಡ್ಡ ಹಬ್ಬ. ಇದು ಖುಷಿಯಿಂದ ಕಲೆತು ಬೆರೆತು ಸಂಭ್ರಮಿಸಲು ಸಿಗುವ ಅವಕಾಶವೂ ಹೌದು.

ಬಹಳ ದಿನಗಳಿಂದ ಜನ ಕಾತರದಿಂದ ಕಾಯುತ್ತಿದ್ದ ಕ್ಷಣವೀಗ ಬಂದಿದೆ. ಮುಂಜಾನೆಯೇ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರಿ ಇದೆಯಲ್ವಾ… ಅದನ್ನು ಬರೀ ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ ಇಲ್ಲ… ಹಿರಿಯರು ಕಿರಿಯರು, ಬಡವ ಬಲ್ಲಿದ ಈ ಭೇದ ಭಾವವಿಲ್ಲದೆ ಎಲ್ಲರೂ ಸಂಭ್ರಮಿಸುವ ಹಬ್ಬವಿದು. ಬದುಕಿನ ಅಂಧಕಾರವನ್ನು ತೊಡೆದು ಹಾಕಿ, ಖುಷಿಯ ಬೆಳಕನ್ನು ಚೆಲ್ಲುವ ಈ ಹಬ್ಬದ ಸಂಭ್ರಮವೀಗ ಮೇರೆ ಮೀರಿದೆ.

ದೀಪಾವಳಿ ಎಂದ ತಕ್ಷಣ ನೆನಪಾಗುವುದೇ ಬೆಳಕು. ಪ್ರತಿಯೊಬ್ಬರ ಬದುಕಿಗೂ ಬೆಳಕೇ ಆಧಾರ. ಅಂತರಂಗದ ಬೆಳಕು ನಮ್ಮ ಬದುಕಿಗೆ ದಾರಿಯಾದರೆ, ಬಹಿರಂಗದ ಬೆಳಕು ಜಗತ್ತನ್ನು ಕಾಣಲು ನೆರವಾಗುತ್ತದೆ. ಬೆಳಕೆಂದರೆ ಜ್ಞಾನ, ದೈವ, ಅರಿವು. ಬೆಳಕು ಇಲ್ಲದೆ ಬದುಕೇ ಇಲ್ಲ. ಅದೇ ಈ ದೀಪಾವಳಿಯ ಸಾರ. ನೀರು ತುಂಬುವ ಹಬ್ಬದೊಂದಿಗೆ ದೀಪಾವಳಿಯ ಸಡಗರ ಶುರುವಾಗುತ್ತದೆ. ದೀಪಾವಳಿ ಎಂದರೇನೆ ಸಡಗರ, ದೀಪಾವಳಿ ಎಂದರೇನೆ ನೆನಪಿನ ಬುತ್ತಿಯ ಖುಷಿಯ ಚಿತ್ತಾರ… ದೀಪಾವಳಿ ಎಂದರೇನೆ ಭಕ್ತಿ ಭಾವದ ಸಂಭ್ರಮ…

ನರಕಚತುರ್ದಶಿಯ ಮುಂಚಿನ ದಿನ ಸಂಜೆ ಹಂಡೆಯನ್ನು ಸ್ವಚ್ಛವಾಗಿ ತೊಳೆದು ಸಿಂಗಾರ ಮಾಡಿ ನೀರು ತುಂಬಿಸಿ ಮರುದಿನ ಮುಂಜಾನೆ ಎಣ್ಣೆಯನ್ನು ಮೈಗೆ ಹಚ್ಚಿ ಸ್ನಾನ ಮಾಡುವ ಮೂಲಕ ಹಬ್ಬದ ಆರಂಭವಾಗುತ್ತದೆ. ನರಕಚತುರ್ದಶಿಯಂದು ಎದ್ದು ಅಭ್ಯಂಗಸ್ನಾನ ಮಾಡಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಹೀಗೆ ಲಕ್ಷ್ಮೀಪೂಜೆ, ಬಲಿಪಾಡ್ಯಮಿ ದಿನ ಬಲೀಂದ್ರನ ಆರಾಧನೆಯೊಂದಿಗೆ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡುತ್ತಿರುತ್ತದೆ.

ಹೊಸಬಟ್ಟೆ ತೊಟ್ಟು, ದೀಪಗಳನ್ನಿಟ್ಟು ಈ ಹಬ್ಬ ಆಚರಿಸುವ ಖುಷಿಯೇ ಬೇರೆ…ಮೂರ್ನಾಕು ದಿನ ಕಣ್ಣಾಯಿಸಿದಲ್ಲೆಲ್ಲಾ ಬೆಳಕಿನ ರಂಗವಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಸಾಲು ಹಣತೆಗಳು ಸಂಭ್ರಮಕ್ಕೆ ಸಾಕ್ಷಿಯಾಗುತ್ತವೆ. ಈ ಖುಷಿಯ ಚಿತ್ತಾರದ ನಡುವೆ ನೋವೆಲ್ಲಾ ದೂರವಾಗಿದೆ… ಮನದಾಳದಲ್ಲಿ ನೆಮ್ಮದಿಯೊಂದು ಮನೆ ಮಾಡಿದಂತಾಗುತ್ತಿದೆ… ಇದೇ ನೆಮ್ಮದಿ ಶಾಶ್ವತವಾಗಿ ಉಳಿಯಲಿ… ಬಾಳು ಬೆಳಗಲಿ. ಇಂತಹ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿಕೊಡುವಂತಹ ಶುಭಾಶಯದ ಸಂದೇಶಗಳು ಇಲ್ಲಿವೆ.

Diwali Wishes in Kannada | ಬೆಳಕಿನ ಹಬ್ಬ ದೀಪಾವಳಿಯ ಶುಭ ಸಂದೇಶಗಳು

Download Deepavali Wishes Kannada Click Here

ದೀಪಾವಳಿಯ ದೀಪಗಳು ನಿಮ್ಮ ಜೀವನವನ್ನು ಬೆಳಗಿಸಲಿ, ರಂಗೋಲಿಯ ಬಣ್ಣಗಳು ಸಂತೋಷವನ್ನು ತರಲಿ, ರುಚಿಯಾದ ತಿಂಡಿಗಳು ನಿಮ್ಮ ಜೀವನವನ್ನು ಸಿಹಿಯಾಗಿಸಲಿ, ಲಕ್ಷ್ಮಿ ದೇವಿಯು ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸಲಿ. ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು

ಇದು ಬಲು ಕಷ್ಟದ ವರ್ಷ. ಆದರೆ, ಈ ಕಷ್ಟದಲ್ಲೂ ನಾವು ಸಾಕಷ್ಟು ಕಲಿತಿದ್ದೇವೆ. ಈ ದೀಪಾವಳಿ ನಿಮ್ಮ ಬದುಕಿನ ಈ ಎಲ್ಲಾ ಕಷ್ಟಗಳನ್ನು ದೂರ ಮಾಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು

ನೀವು ಉರಿಸುವ ಒಂದೊಂದು ದೀಪವೂ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಸುಟ್ಟು ಹಾಕಲಿ, ಖುಷಿಯೊಂದೇ ನಿಮ್ಮ ಬದುಕಿನಲ್ಲಿ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಬೆಳಕಿನ ಹಬ್ಬದ ಶುಭಾಶಯಗಳು

ಕರುಣಾಮಯಿ ದೇವರು ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಆರೋಗ್ಯ, ಆಯುಷ್ಯ, ಸಂತೋಷ, ಶಾಂತಿಯನ್ನು ನಿಮಗೆ ಆಶೀರ್ವದಿಸಲಿ. ಎಲ್ಲರಿಗೂ ಶುಭವ ತರಲಿ ದೀಪಾವಳಿ

ನಿಮ್ಮೆಲ್ಲಾ ಕನಸುಗಳು ಈಡೇರಲಿ, ನಿಮ್ಮ ಬದುಕಿನ ಹಾದಿಯಲ್ಲಿದ್ದ ಅಡೆತಡೆಗಳು ಬೆಳಕಿನ ಹಬ್ಬದಲ್ಲಿ ನಿವಾರಣೆಯಾಗಲಿ, ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧಿಯಾಗಲಿ. ಸರ್ವರಿಗೂ ಬೆಳಕಿನ ಹಬ್ಬದ ಶುಭಾಶಯಗಳು

ಮುಖದಲ್ಲಿದ್ದ ನೋವು ಮರೆಯಾಗಲಿ, ಕಣ್ಣೀರಿಟ್ಟಿದ್ದ ಕಣ್ಣುಗಳಲ್ಲಿ ಖುಷಿ ತುಂಬಲಿ, ಕಷ್ಟಗಳು ಮಂಜಿನಂತೆ ಕರಗಲಿ, ದೀಪಗಳ ಪ್ರಭೆ ಮನೆ ತುಂಬಾ ಖುಷಿಯ ಹೂ ಚೆಲ್ಲಲಿ.ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

ಈ ದೀಪಾವಳಿಯಲ್ಲಿ ನಾವು ನಮ್ಮ ಪ್ರಿಯರಾದವರಿಗೆ ಧನ್ಯವಾದ ಅರ್ಪಿಸೋಣ. ನಮ್ಮ ಕುಟುಂಬ, ನಮ್ಮ ಸ್ನೇಹಿತರು, ಸದಾ ಪೊರೆಯುವ ದೇವರಿಗೆ ನಾವು ಕೃತಜ್ಞತೆ ಸಲ್ಲಿಸೋಣ. ಸರ್ವರಿಗೂ ಶುಭವ ತರಲಿ ಈ ದೀಪಾವಳಿ

ಚಿತ್ತಾರ ಬಿಡಿಸಿರುವ ರಂಗೋಲಿಯ ಬಣ್ಣಗಳಂತೆಯೇ ಈ ದೀಪಾವಳಿಯು ಎಲ್ಲರ ಬದುಕಿನಲ್ಲಿ ಖುಷಿಯ ರಂಗು ತರಲಿ, ಹೊಸ ಕನಸುಗಳನ್ನು ಸಾಕಾರಗೊಳಿಸಲಿ, ಸದಾ ನೆಮ್ಮದಿ ತುಂಬುವಂತೆ ಮಾಡಲಿ.ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಮಾತೆ ಲಕ್ಷ್ಮೀಯ ಆಶೀರ್ವಾದದ ಪ್ರಭೆ ಸದಾ ನಿಮ್ಮ ಮನೆಯನ್ನು ತುಂಬಲಿ, ಸಂಪತ್ತಿನ ದೇವತೆ ನಿಮ್ಮ ಅಭಿವೃದ್ಧಿಗೆ ಆಶೀರ್ವದಿಸಲಿ, ನಿಮ್ಮೆಲ್ಲಾ ಕಷ್ಟಗಳನ್ನು ಈ ಹಬ್ಬ ದೂರ ಮಾಡಲಿ. ಎಲ್ಲರಿಗೂ ಹ್ಯಾಪಿ ದೀಪಾವಳಿ

Best Wishes for Deepavali in Kannada

ಇಂತಹ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿಕೊಡುವಂತಹ ಶುಭಾಶಯದ ಸಂದೇಶಗಳು ಇಲ್ಲಿವೆ. ದೀಪಾವಳಿಯ ಶುಭಾಶಯದ ಸಂದೇಶಗಳು

ದೀಪಾವಳಿಯ ದೀಪಗಳು ನಿಮ್ಮ ಜೀವನವನ್ನು ಬೆಳಗಿಸಲಿ, ರಂಗೋಲಿಯ ಬಣ್ಣಗಳು ಸಂತೋಷವನ್ನು ತರಲಿ, ರುಚಿಯಾದ ತಿಂಡಿಗಳು ನಿಮ್ಮ ಜೀವನವನ್ನು ಸಿಹಿಯಾಗಿಸಲಿ, ಲಕ್ಷ್ಮಿ ದೇವಿಯು ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸಲಿ.ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಜ್ಞಾನದ ಬೆಳಕು ಮನಸನು ಬೆಳಗಲಿ
ಹಣತೆಯ ಬೆಳಕು ಮನೆಯನು ಬೆಳಗಲಿ
ಮನದ ಕತ್ತಲು ಕಳೆದು ಬೆಳಕು ದೀಪಾವಳಿಯ ಶುಭಾಶಯಗಳು

ದೀಪಂ ಜ್ಯೋತಿ ಪರಂ ಬ್ರಹ್ಮ
ದೀಪಂ ಸರ್ವ ತಮೋಪಹಂ
ದೀಪೇನ ಸಾಧ್ಯತೆ ಸರ್ವಂ
ಮಮ ಶತ್ರು ವಿನಾಶಾಯ

ಶುಭ್ರಂ ಭವತು ಕಲ್ಯಾಣ
ಆರೋಗ್ಯ ಧನ ಸಂಪದಂ
ಸಂದ್ಯಾ ಜ್ಯೋತಿ ನಮೋಸ್ತುತೇ ।ನಿಮಗೂ
ಹಾಗೂ ನಿಮ್ಮ ಕುಟುಂಬದ ಎಲ್ಲಾ
ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ದಿವಾಳಿ ಬೇಡ ಏಕೆಂದರೆ ದಿವಾಳಿ ಪದದ ಅಥ೯ ಎಲ್ಲವನ್ನು ಕಳೆದುಕೊಳ್ಳುವುದು ಎಂದು ಅಥ೯ ಅದಕ್ಕೆ ದೀಪಾವಳಿ ಅಂಥ ಹೇಳಿ. ಎಲ್ಲ ನನ್ನ ಗೆಳೆಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಮನದ ಕತ್ತಲ ಓಡಿಸುತ
ಒಳಗೆ ದೀಪವ ಬೆಳಗಿಸುತ
ಸಂತಸದಿ, ಸಂಭ್ರಮದಲಿ ಆಚರಿಸುತ
ಸುರಕ್ಷೆಗೆ ಪ್ರಾಧಾನ್ಯ ನೀಡುತ
ಎಲ್ಲರಿಗೂ ದೀಪಾವಳಿಯ ಶುಭವ ಕೋರುತ
ಆಚರಿಸುವ ದೀಪಾವಳಿಯ ಹರ್ಶಿಸುತ

ದೀಪಾವಳಿ ಹಬ್ಬದ ಶುಭಾಶಯಗಳು

ನಿನ್ನ ಹೆಚ್ಚಿನ ದೀಪಾವಳಿ ಹಬ್ಬದ ಸ್ಟೇಟಸ್   ಶುಭಾಶಯಗಳು  ಸಂದೇಶಗಳು  ಗಳನ್ನು ನೋಡಲು ನಾನು ನಿಮಗೆ ಒಂದು ಆಪನ್ನು  ಇಲ್ಲಿ ಕೊಟ್ಟಿದ್ದೇನೆ  ಡೌನ್ಲೋಡ್ ಮಾಡಿ

ದೀಪಾವಳಿ ಹಬ್ಬದ ಕವನಗಳು

1.

diwali quotes in kannada
diwali quotes in kannada

Download

2.

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

Download

Deepavali in Kannada
Deepavali in Kannada

Download

Deepavali wishes in Kannada
Deepavali wishes in Kannada

Download

ದೀಪಾವಳಿ ಹಬ್ಬದ ಕವನಗಳು
ದೀಪಾವಳಿ ಹಬ್ಬದ ಕವನಗಳು
ದೀಪಾವಳಿ ಹಬ್ಬ ಕನ್ನಡ
ದೀಪಾವಳಿ ಹಬ್ಬ ಕನ್ನಡ
 ದೀಪಾವಳಿ ಹಬ್ಬ in kannada
ದೀಪಾವಳಿ ಹಬ್ಬ in kannada
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಇತರ ಹಬ್ಬಗಳ ಶುಭಾಶಯಗಳು ಇಲ್ಲಿವೆ :

Deepavali Kannada Thoughts

Raksha Bandhan

Good Morning Quotes

ಚಿತ್ರಗಳನ್ನು ಡೌನ್ಲೋಡ್ ಮಾಡಲು ನಿಮಗೆ ಬೇಕಾಗ ಇಮೇಜ್ ಮೇಲೆ Long Press ಮಾಡಿ ಡೌನ್ಲೋಡ್ ಮಾಡಿ

download deepavali images in kannada

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ. ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP

Leave a Reply

Your email address will not be published. Required fields are marked *

rtgh