ದೀಪಾವಳಿ ಹಬ್ಬದ ಬಗ್ಗೆ ಮಾಹಿತಿ 2024, Deepavali Information in Kannada, About Deepavali Celebaration in Kannada, Deepavali in Kannada 2024 Information About Deepavali in Kannada Deepavali Habba in Kannada Diwali in Kannada
ಈ ಲೇಖನದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ವಿಶೇಷತೆ ಹಾಗೂ ದೀಪಾವಳಿ ಹಬ್ಬದ ಬಗ್ಗೆ ಮಾಹಿತಿಯನ್ನು ಪಡೆಯುವಿರಿ.
ದೀಪಾವಳಿ
ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು.
ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ, ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ, ಬೆಳಕಿನ ಸಂಕೇತವಾಗಿ ಕಾಣುತ್ತೇವೆ. ಭಾರತದಲ್ಲಿ, ಅತ್ಯಂತ ಮಹತ್ವದ ಹಬ್ಬವೆಂದರೆ ದೀಪಾವಳಿ, ಅಥವಾ ಬೆಳಕಿನ ಹಬ್ಬ. ಇದು ಐದು ದಿನಗಳ ಆಚರಣೆಯಾ ದೀಪಾವಳಿಯು ಭಾರತದ ಅತ್ಯಂತ ದೊಡ್ಡ ಮತ್ತು ವರ್ಷದ ಪ್ರಮುಖ ರಜಾದಿನವಾಗಿದೆ.
ಆಧ್ಯಾತ್ಮಿಕ ಕತ್ತಲೆಯಿಂದ ರಕ್ಷಿಸುವ ಆಂತರಿಕ ಬೆಳಕನ್ನು ಸಂಕೇತಿಸಲು ಭಾರತೀಯರು ತಮ್ಮ ಮನೆಗಳ ಹೊರಗೆ ಬೆಳಗಿಸುವ ಮಣ್ಣಿನ ದೀಪಗಳ ಸಾಲು (ಅವಲಿ) ನಿಂದ ಈ ಹಬ್ಬವು ತನ್ನ ಹೆಸರನ್ನು ಪಡೆದುಕೊಂಡಿದೆ. ಕ್ರಿಶ್ಚಿಯನ್ನರಿಗೆ ಕ್ರಿಸ್‌ಮಸ್ ಹಬ್ಬ ಎಷ್ಟು ಮುಖ್ಯವೋ ಹಿಂದೂಗಳಿಗೂ ಈ ಹಬ್ಬ ಮಹತ್ವದ್ದು.
ಹಿನ್ನೆಲೆ
ದೀಪಾವಳಿಯನ್ನು ಏಕೆ ಆಚರಿಸಲಾಗುತ್ತದೆ ಇದರ ಮಹತ್ವವೇನು ಎಂದು ಯಾರನ್ನಾದರೂ ಕೇಳಿದರೆ ಅವರುಗಳೆಲ್ಲಾ ತಮಗೆ ತೋಚಿದ ಉತ್ತರವನ್ನೇ ನೀಡುತ್ತಾರೆ. ಆದರೆ ದೀಪಾವಳಿ ಹಬ್ಬ ಆಚರಣೆಯು ಮುಖ್ಯವಾದ ಅಂಶವನ್ನು ಒಳಗೊಂಡಿದೆ. ಹಿಂದೂಗಳು ತಮ್ಮ ಧಾರ್ಮಿಕ ನಂಬಿಕೆ ಮತ್ತು ತತ್ವಗಳಿಗೆ ಅನುಸಾರವಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ಈ ದಿನದಂದು ಪೂಜೆ ಪುನಸ್ಕಾರಗಳನ್ನು ಜನರು ಮಾಡುತ್ತಾರೆ ಮತ್ತು ನಿಯಮಗಳನ್ನು ಪಾಲಿಸುತ್ತಾರೆ.
Deepavali History in Kannada
ಇಂದಿನ ಲೇಖನದಲ್ಲಿ ಜನರು ತಮ್ಮ ನಂಬಿಕೆಗಳಿಗೆ ಅನುಸಾರವಾಗಿ ದೀಪಾವಳಿ ಹಬ್ಬದ ಆಚರಣೆಯನ್ನು ಹೇಗೆ ಮಾಡುತ್ತಾರೆ ಮತ್ತು ಅವರು ಯಾವ ಅಂಶಗಳನ್ನು ನಂಬಿಕೊಂಡು ಬಂದಿದ್ದಾರೆ ಎಂಬುದನ್ನು ಕಂಡುಕೊಳ್ಳೋಣ….ಅಯೋಧ್ಯೆಗೆ ರಾಮನು ಮರಳಿ ಬಂದಿದ್ದು ಭಾರತದ ಉತ್ತರಭಾಗಗಳಲ್ಲಿ, ರಾಮನು ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿ ಬಂದಿರುವ ಸೂಚನೆಯಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ದೀಪಗಳನ್ನು ಹಚ್ಚಿ ರಾಮನನ್ನು ಅಯೋಧ್ಯಾವಾಸಿಗಳು ಬರಮಾಡಿಕೊಂಡರು ಎಂಬುದಾಗಿ ಕಥೆ ಸಾರುತ್ತದೆ.
ಲಕ್ಷ್ಮೀ ಪೂಜೆ
ದೀಪಾವಳಿಯಂದು ಅತಿಮುಖ್ಯವಾಗಿರುವಂತಹದ್ದು ಗಣಪತಿ ಮತ್ತು ಲಕ್ಷ್ಮೀ ಪೂಜೆಯಾಗಿದೆ. ವರ್ಷದ ಗಾಢಾಂಧಕಾರದ ದಿನ ಪೂಜೆಯನ್ನು ನಡೆಸಲಾಗುತ್ತದೆ. ಅಶ್ವಿನ್ ಮಾಸದ ಪೂರ್ಣ ಚಂದ್ರ ದಿನ ಇದಾಗಿದೆ. ಮೇಣದ ಬತ್ತಿಗಳನ್ನು ಹಚ್ಚಿ ಹಣತೆಯನ್ನು ಹಚ್ಚಿ,ರಂಗೋಲಿಯನ್ನು ಮನೆಮನೆಗಳಲ್ಲಿ ಬಿಡಿಸಿ ಶೃಂಗರಿಸುತ್ತಾರೆ. ಲಕ್ಷ್ಮೀ ಪೂಜೆಯನ್ನು ರಾತ್ರಿ ನಡೆಸುತ್ತಾರೆ.
ಹೊಸ ವರ್ಷ
ಭಾರತೀಯ ವ್ಯವಹಾರಸ್ಥರಿಗೆ ದೀಪಾವಳಿ ಎಂಬುದು ಹೊಸ ವರ್ಷದ ಆಗಮನವಾಗಿದೆ. ಹಳೆಯ ಪುಸ್ತಕಗಳಿಗೆ ವಿದಾಯ ಹೇಳಿ ಹೊಸ ಪುಸ್ತಕದಿಂದ ತಮ್ಮ ಲೆಕ್ಕಾಚಾರವನ್ನು ಮಾಡುತ್ತಾರೆ. ಹಿಂದೂ ಹೊಸ ವರ್ಷದ ಆಗಮನ ಎಂಬುದರ ದ್ಯೋತಕವಾಗಿ ಕೆಲವರು ಮನೆಗೆ ಪೇಂಟಿಂಗ್ ಅನ್ನು ಮಾಡಿಸುತ್ತಾರೆ.
ಕಾಳಿ ಪೂಜೆ
ಒಡಿಶಾ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ದೀಪಾವಳಿಯ ರಾತ್ರಿಯಂದು ಮಹಾಕಾಳಿ ಅಥವಾ ನಿಶಿ ಪೂಜೆಯನ್ನು ನಡೆಸಲಾಗುತ್ತದೆ. ಪಾರ್ವತಿ ದೇವಿಯು ಕಾಳಿ ಅವತಾರವನ್ನು ತಾಳಿ ಅಸುರರ ತಲೆಯನ್ನು ಕತ್ತರಿಸಿ ಚಂಡಾಡಿದ ದಿನ ಎಂಬುದಾಗಿ ಕೂಡ ಕಾಣಲಾಗುತ್ತದೆ. ತಡರಾತ್ರಿಯಲ್ಲಿ ಕಾಳಿ ಪೂಜೆಯನ್ನು ಆರಂಭಿಸುತ್ತಾರೆ ಮತ್ತು ಮುಂಜಾನೆ ಆದಷ್ಟು ಬೇಗನೇ ಪೂಜೆಯನ್ನು ಮುಗಿಸುತ್ತಾರೆ.
ಗುರು ನಾನಕ್
ಹಿಂದೂಗಳು ಮಾತ್ರವಲ್ಲದೆ ಸಿಖ್ಖರು ಕೂಡ ದೀಪಾವಳಿಯನ್ನು ಆಚರಿಸುತ್ತಾರೆ. ಏಕೆಂದರೆ ಗುರು ಹರ್ ಗೋಬಿಂದ್ ಜಿ, ಸಿಖ್ಖರ ಆರನೆಯ ಗುರು ಖಾರಾಗೃಹದಿಂದ 62 ಹಿಂದೂ ರಾಜರುಗಳನ್ನು ಬಿಡಿಸುತ್ತಾರೆ. ಅವರುಗಳನ್ನು ಬಿಡುಗಡೆ ಮಾಡಿ ಅವರು ಗೋಲ್ಡನ್ ಟೆಂಪಲ್ಗೆ ಭೇಟಿ ನೀಡುತ್ತಾರೆ. ಅಮೃತಸರದ ಎಲ್ಲಾ ಜನರು ಅವರನ್ನು ಮೇಣದ ಬತ್ತಿ ಮತ್ತು ದೀಪಗಳನ್ನು ಹಚ್ಚಿ ಸ್ವಾಗತಿಸುತ್ತಾರೆ. ಗುರುನಾನಕ್ ಜಯಂತಿ ಮಹತ್ವ, ಐತಿಹಾಸಿಕ ಹಿನ್ನೆಲೆ
ಭರವಸೆಯ ಬೆಳಕು
ವರ್ಷದ ಗಾಡಾಂಧಕಾರದ ಸಂದರ್ಭದಲ್ಲೇ ದೀಪಗಳ ಹಬ್ಬ ದೀಪಾವಳಿಯ ಆಗಮನವಾಗುತ್ತದೆ ಎಂಬುದಾಗಿ ನಂಬಲಾಗಿದೆ. ಕತ್ತಲೆಯು ನಮ್ಮಲ್ಲಿ ಅಧೈರ್ಯವನ್ನು ತುಂಬುತ್ತದೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದ ಜನರು ಭರವಸೆಯ ಬೆಳಕನ್ನು ಹಣತೆಗಳನ್ನು ಹಚ್ಚಿ ಸ್ವಾಗತಿಸುತ್ತಾರೆ. ಕೆಟ್ಟ ಶಕ್ತಿಗಳನ್ನು ದೂರಮಾಡಲು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.
ದೀಪಾವಳಿ ಹಬ್ಬದ ಕುರಿತಾದ ಮಹತ್ವದ ಅಂಶಗಳು
ನರಕಾಸುರನ ದಂತಕಥೆ
ಈ ಕಥೆಯ ಪ್ರಕಾರ ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನ. ನರಕಾಸುರನು ವಿಷ್ಣುವಿನಿಂದ ದೀರ್ಘಾಯುಷ್ಯದ ವರವನ್ನು ಪಡೆದುಕೊಂಡಿದ್ದನು. ತ್ರಿಲೋಕದಲ್ಲಿ ಇರುವ ಮಹಿಳೆಯರು ಹಾಗೂ ರಾಣಿಯರ ಮೇಲೆ ಹಲ್ಲೆ ಮಾಡುತ್ತಿದ್ದನು. ಅಲ್ಲದೆ ಅವರನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದನು. ಈ ದುಷ್ಟನನ್ನು ಶ್ರೀಕೃಷ್ಣನು ಕೊಂದು, ಮಹಿಳೆಯರನ್ನು ಬಿಡುಗಡೆಮಾಡಿದನು. ಹಾಗಾಗಿಯೇ ಆ ದಿನವನ್ನು ನರಕಚತುರ್ದಶಿ ಎಂದು ಕರೆಯಲಾಯಿತು.
ಬಲಿ ರಾಜನ ಕಥೆ
ದೀಪಾವಳಿಯ ಹಬ್ಬಕ್ಕೆ ಬಲಿರಾಜನ ಕತೆಯೂ ಸೇರಿಕೊಂಡಿದೆ. ವಾಮನ ಅವತಾರದಲ್ಲಿ ಬಂದ ವಿಷ್ಣುವು ಬಲಿರಾಜನನ್ನು ಮೂರು ಅಡಿ ಜಾಗ ಬೇಕೆಂದು ಕೇಳಿದನು. ಆಗ ಬಲಿರಾಜ ಅಹಂಕಾರ ಹಾಗೂ ಕ್ಷುಲಕ ಎನ್ನುವ ಭಾವದಿಂದ ಸಮ್ಮತಿ ವ್ಯಕ್ತ ಪಡಿಸಿದನು. ಆಗ ವಾಮನನು ಒಂದು ಹೆಜ್ಜೆಯನ್ನು ಭೂಮಿಯಲ್ಲಿ, ಇನ್ನೊಂದು ಹೆಜ್ಜೆಯನ್ನು ಸ್ವರ್ಗದಲ್ಲಿ ಇಟ್ಟನು. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಬಲಿ ರಾಜನನ್ನು ಕೇಳಿದನು. ಆಗ ಬಲಿ ರಾಜನು ತನ್ನ ತಲೆಯ ಮೇಲೆ ಇಡು ಎಂದು ಹೇಳಿದನು. ಆಗ ಬಲಿರಾಜನು ಮಣ್ಣಲ್ಲಿ ಮಣ್ಣಾದನು. ಈ ಸಂದರ್ಭವೂ ದೀಪಾವಳಿ ಹಬ್ಬದಂದೇ ನಡೆಯಿತು ಎನ್ನಲಾಗುತ್ತದೆ.
ವಿಕ್ರಮಾದಿತ್ಯನ ಪಟ್ಟಾಭಿಷೇಕ
ರಾಜ ವಿಕ್ರಮಾದಿತ್ಯನ ರಾಜ್ಯ ಪಟ್ಟಾಭಿಷೇಕವು ದೀಪಾವಳಿಯ ದಿನದಂದೆ ನೆರವೇರಿತು ಎನ್ನಲಾಗುತ್ತದೆ. ಆ ದಿನದಂದು ಅಲ್ಲಿಯ ಜನರು ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸಿದರು ಎನ್ನಲಾಗುತ್ತದೆ.
ದೀಪಾವಳಿಯು ಸುಗ್ಗಿಯ ಸಂದರ್ಭದ ಹಬ್ಬ
ಪುರಾತನ ಕಾಲದಲ್ಲಿ ದೀಪಾವಳಿಯನ್ನು ಪೈರನ್ನು ಕೊಯ್ಯುವ ಸಂದರ್ಭದಲ್ಲಿ ಆಚರಿಸಲಾಗುತ್ತಿತ್ತು. ಭಾರತದ ರೈತರು ತಾವು ಬೆಳೆದ ಬೆಳೆಯ ಮೊದಲ ಕೊಯ್ಲನ್ನು ತಂದು ದೇವಿ ಲಕ್ಷ್ಮಿಗೆ ನೀಡುವ ಮೂಲಕ ಪೂಜೆ ಮಾಡುತ್ತಿದ್ದರು ಎನ್ನಲಾಗುತ್ತದೆ. ದೇವಿಯು ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಿದ್ದಳು ಎನ್ನುವ ನಂಬಿಕೆಯಿದೆ.
ಜೈನ್ ಧರ್ಮದಲ್ಲಿ ದೀಪಾವಳಿ ಮಹತ್ವ
ಈ ದಿನದಂದು ಮಹಾರಾಜ (ಕೊನೆಯ ಜೈನ ತೀರ್ಥಂಕರ)ನಿರ್ವಾಣವನ್ನು ತಲುಪಿದ ಕಾರಣ ದೀಪಾವಳಿ ಉತ್ಸವ ಜೈನರಿಗೆ ಹೆಚ್ಚು ಪ್ರಾಮುಖ್ಯವಾಗಿದೆ. ಮಹಾವೀರ ಮಹಾವೀರನನ್ನು ಜ್ಞಾನೋದಯಗೊಳಿಸಿದ ಅನೇಕ ದೇವರುಗಳ ಉಪಸ್ಥಿತಿಯಲ್ಲಿ ನಿರ್ವಾಣವನ್ನು ಪಡೆದುಕೊಂಡನು ಮತ್ತು ಅವನ ಜೀವನದಿಂದ ಕತ್ತಲನ್ನು ತೆಗೆದುಹಾಕಿದ್ದನೆಂದು ಹೇಳಲಾಗುತ್ತದೆ. ಅಲ್ಲದೆ, ಗಣಧರ ಗೌತಮ್ ಸ್ವಾಮಿ (ಮಹಾವೀರನ ಮುಖ್ಯ ಶಿಷ್ಯ) ಈ ದಿನ ಸಂಪೂರ್ಣ ಜ್ಞಾನ ಪಡೆದುಕೊಂಡನು.
ಬೌದ್ಧರಲ್ಲಿ ದೀಪಾವಳಿಯ ಪ್ರಾಮುಖ್ಯತೆ
ಈ ದಿನದಂದೇ ಚಕ್ರವರ್ತಿ ಅಶೋಕನು ಬೌದ್ಧ ಧರ್ಮಕ್ಕೆ ಪರಿವರ್ತನೆಗೊಂಡನು. ಈ ಹಿನ್ನೆಲೆಯಲ್ಲಿಯೇ ಬೌದ್ಧರು ಈ ಹಬ್ಬವನ್ನು ಅಶೋಕ ವಿಜಯದಶಮಿ ಎಂದು ಕರೆಯುತ್ತಾರೆ. ಈ ದಿನವನ್ನು ಮಠವನ್ನು ಅಲಂಕರಿಸುವುದು ಹಾಗೂ ಪ್ರಾರ್ಥನೆ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಆಚರಿಸುತ್ತಾರೆ.
FAQ :
ಪಾರ್ವತಿ ದೇವಿಯು ಕಾಳಿ ಅವತಾರವನ್ನು ತಾಳಿ ಅಸುರರ ತಲೆಯನ್ನು ಕತ್ತರಿಸಿ ಚಂಡಾಡಿದ ದಿನ ಎಂಬುದಾಗಿ ದೀಪಾವಳಿಯಂದು ಕಾಳಿ ಪೂಜೆಯನ್ನು ಆಚರಿಸುತ್ತಾರೆ.
ನರಕಾಸುರನು ವಿಷ್ಣುವಿನಿಂದ ದೀರ್ಘಾಯುಷ್ಯದ ವರವನ್ನು ಪಡೆದುಕೊಂಡಿದ್ದನು. ತ್ರಿಲೋಕದಲ್ಲಿ ಇರುವ ಮಹಿಳೆಯರು ಹಾಗೂ ರಾಣಿಯರ ಮೇಲೆ ಹಲ್ಲೆ ಮಾಡುತ್ತಿದ್ದನು. ಅಲ್ಲದೆ ಅವರನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದನು. ಈ ದುಷ್ಟನನ್ನು ಶ್ರೀಕೃಷ್ಣನು ಕೊಂದು, ಮಹಿಳೆಯರನ್ನು ಬಿಡುಗಡೆಮಾಡಿದನು. ಹಾಗಾಗಿಯೇ ಆ ದಿನವನ್ನು ನರಕಚತುರ್ದಶಿ ಎಂದು ಕರೆಯಲಾಯಿತು.
ಇತರ ವಿಷಯಗಳು
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ದೀಪಾವಳಿ ಹಬ್ಬದ ಬಗ್ಗೆ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ದೀಪಾವಳಿ ಹಬ್ಬದ ಬಗ್ಗೆ ಮಾಹಿತಿ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ