ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ । Ativrushti Anavrushti Prabandha in Kannada

Ativrushti Anavrushti Prabandha in Kannada, ಕನ್ನಡದಲ್ಲಿ ativrushti ಮತ್ತು anavrushti ಮೇಲೆ ಪ್ರಬಂಧ

ಈ ಲೇಖನದಲ್ಲಿ ನೀವು, ಅತಿವೃಷ್ಟಿ ಹಾಗೂ ಅನಾವೃಷ್ಟಿ ಹೇಗೆ ಉಂಟಾಗುತ್ತದೆ, ಅತಿವೃಷ್ಟಿ ಅನಾವೃಷ್ಟಿಗೆ ಕಾರಣಗಳೆನು, ಇದರಲ್ಲಿ ಮಾನವನ ದುರಾಸೆ ಆಸೆಗಳು ಹೇಗೆ ಕಾರಣವಾಗುತ್ತದೆ, ಪ್ರಕೃತಿ ವಿನಾಶದಲ್ಲಿ ಮಾನವನ ಪಾತ್ರಗಳೇನು ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯುವಿರಿ.

ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ

ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ । Ativrushti Anavrushti Prabandha

ಪೀಠಿಕೆ

ಅತಿವೃಷ್ಟಿಎಂದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವುದು. ಇದರಿಂದ ಅನೇಕ ಹಾನಿಗಳಾಗುತ್ತವೆ. ಜನಜೀವನ ಅಸ್ತವ್ಯಸ್ತವಾಗುತ್ತದೆ.

ಅತಿವೃಷ್ಟಿಯಿಂದ ಆಗುವ ದೊಡ್ಡ ಅನಾಹುತವೆಂದರೆ ಎಲ್ಲ ನದಿಗಳೂ ತುಂಬಿ ಹರಿಯುತ್ತವೆ . ಎಲ್ಲ ಬೆಳೆಗಳೂ ನಾಶವಾಗುತ್ತವೆ . ಅನೇಕ ಮನೆಗಳು ಸಂಚಾರಕ್ಕೂ ವ್ಯತ್ಯಯ ಉಂಟಾಗುತ್ತದೆ. ಜನರಿಗೆ ಅಡ್ಡಾಡಲು ತೊಂದರೆ ಆಗುತ್ತದೆ.

ನೀರು ಧರೆಯ ಜೀವ ದ್ರವ ಜೀವ ದ್ರವ್ಯ ಭೂಮಿಯ ಮೇಲ್ಮೈನ ಶೇಖಡ ಎಪ್ಪತ್ತೋಂದು ಭಾಗವನ್ನು ಆವರಿಸಿ ಇಡೀ ಭೂಮಿಗೆ ಸುಂದರ ನೀಲವರ್ಣ ನೀಡಿರುವ ಈ ದ್ರವ್ಯವು ಭೂಮಿಯನ್ನು ಜೀವಲೋಕವಾಗಿಸುವಲ್ಲಿ

ಅತ್ಯಂತ ಮಹತ್ವದ ಪಾತ್ರವನ್ನು ಪಡೆದಿವೆ. ನೀರಿಲ್ಲದೆ ಜೀವಿಗಳ ಬದುಕು ಅಸಾದ್ಯ.

ಸಸ್ಯಗಳು ಉಸಿರಾಡಲು,ದ್ಯುತಿಸಂಶ್ಲೇಷಣೆ ನಡೆಸಸಲು, ನೆಲದಿಂದ ಪೋಷಕಾಂಶಗಳನ್ನು ಬೇರುಗಳ ಮೂಲಕ ಹೀರಿಕೊಳ್ಳಲು ನೀರು ಬೇಕೇ ಬೇಕು. ಹಾಗೆ ಪ್ರಾಣಿಗಳಲ್ಲಿ ಚಯಾಪಚಯ ಕ್ರಿಯೆ ನಡೆಸಲು, ಆಹಾರ ಜೀರ್ಣವಾಗಲು , ವ್ಯರ್ಥವಸ್ತುಗಳು ವಿಸರ್ಜನೆಗೊಳ್ಳಲು,

ರಕ್ತ ಪರಿಚಲನೆಗೊಳ್ಳಲು ಇತ್ಯಾದಿಗಳಿಗೆ ಸಕಲ ಜೀವಿಗಳ ಮೂಲಭೂತ ಅವಷ್ಯಕವಾಗಿರುವ ನೀರು ಸದಾ ಭೂಮಿ ಮೇಲೆ ಇರಬೇಕೆಂದರೆ ಕಾಲಕ್ಕೆ ಸರಿಯಾಗಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಬೇಕು.

ಆದರೆ ಈ ಯಾವುದರ ಬಗ್ಗೆಯೂ ಯೋಚಿಸದ ಮಾನವ ಸ್ವಾರ್ಥಕ್ಕಾಗಿ ತನ್ನ ಅನುಕೂಲಕ್ಕಾಗಿ ಪರಿಸರದ ದುರ್ಭಳಕೆ ಮಾಡಿಕೊಳ್ಳುತ್ತಿದ್ದಾನೆ. ನಿಸರ್ಗವನ್ನು ಹಾಳು ಮಾಡುತ್ತಿದ್ದಾನೆ.

ಇದರ ಪರಿಣಾಮದಿಂದಾಗಿ ಅತಿವೃಷ್ಟಿ ಅನಾವೃಷ್ಟಿಎಂಬ ಸಮಸ್ಯೆ ಎದುರಾಗುತ್ತದೆ.

ವಿಷಯ ಬೆಳವಣಿಗೆ

ಅತಿವೃಷ್ಟಿ ಎಂದರೆ ಹವಮಾನದ ಎರುಪೇರಿನಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಲೆ ಬರುವುದು. ಇದರಿಂದ ಪ್ರಕೃತಿಯಲ್ಲಿ ಅನೇಕ ಹಾನಿಯಾಗುತ್ತದೆ. ಜನಜೀವನ ಅಸ್ತವ್ಯಸ್ತವಾಗುತ್ತದೆ.

ಸುನಾಮಿ, ಪ್ರವಾಹ, ಚಂಡಾಮಾರುತ ,ಭೂಕಂಪ ಮುಂತಾದ ಪ್ರಕೃತಿ ವಿಕೋಪಗಳಿಂದ ನದಿಗಳು ತುಂಬಿ ಹರಿಯುತ್ತವೆ. ಎಲ್ಲಾ ಬೆಳೆಗಳು, ಮನೆಗಳು ನಾಶವಾಗುತ್ತವೆ. ಸಂಚಾರಕ್ಕು ವ್ಯತ್ಯಯ ಉಂಟಾಗುತ್ತದೆ. ಜನರಿಗೆ ತಿರುಗಾಡಲು ತೊಂದರೆ ಆಗುತ್ತದೆ.

ಸಮುದ್ರದಲ್ಲೆಲ್ಲ ಕೊರೆತ ಉಂಟಾಗುತ್ತದೆ. ನದಿಗಳಿಗೆ ಮಹಾಪೂರ ಹರಿದು ಬರುತ್ತದೆ. ಜನರು ಜಾನುವಾರುಗಳು ವಸತಿ ಸಮಸ್ಯೆ ಎಲ್ಲವನ್ನು ಎದುರಿಸಿ ಒಂದು ಹೊತ್ತಿನ ಊಟಕ್ಕು ಪರದಾಟ ಉಂಟಾಗುತ್ತದೆ.

ಅಷ್ತೇ ಅಲ್ಲದೆ ಎಷ್ಟೋ ಜನರನ್ನು ಪ್ರಾಣಿಗಳನ್ನು ನೀರಿನ ರಬಸವು ಕೊಚ್ಚಿಕೊಂಡು ಹೋಗಿವೆ. ಇದಕ್ಕೆ ಕಳೆದ ವರ್ಷ ದೇಷದ ವಿವಿಧ ರಾಜ್ಯಗಳಲ್ಲಿ ಬಂದ ಅತಿವೃಷ್ಟಿಯೇ ಸಾಕ್ಷಿಯಾಗಿದೆ. ಆದರೆ ಈ ಅತಿವೃಷ್ಟಿಯನ್ನು ತಡೆಗಟ್ಟುವುದು ಕಷ್ಟಸಾದ್ಯವಾಗುತ್ತದೆ.

ಅನಾವೃಷ್ಟಿ ಎಂದರೆ ಬೀಳಬೇಕಾದಷ್ಟು ಮಳೆ ಬಿಳದೇ ಇರುವುದು ಇದಕ್ಕೆ ಪ್ರಮುಖ ಕಾರಣ ಮಾನವ. ರೈತರ ಬರಡು ಭೂಮಿ ರಿಯಲ್‌ ಎಸ್ಟೇಟ್‌ ಉದ್ಯಮದವರ ಕಣ್ಣು ಕುಕ್ಕುತ್ತಿದೆ. ರೈತರ ಹೊಲವೋ ಬತ್ತಿದ ಕೆರೆಯೋ ಅವರ ಕೈ ಸೇರುತ್ತಿದೆ.

ಫ್ಲಾಟುಗಳು ತಲೆ ಎತ್ತುತ್ತಿವೆ. ಹೈಟೆಕ್‌ ಹೆಸರಿನಲ್ಲಿ ಎಲ್ಲವನ್ನು ಕಾಂಕ್ರೀಟ್ ಮಯವಾಗಿಸುತ್ತಿದ್ದಾನೆ. ಇದರಿಂದ ಒಂದು ಹನಿ ನೀರಿಗಾಗಿಯೂ ಸಹ ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಪರಿಣಾಮವಾಗಿ ಇದರ ಮಾಲಿಕರು ಜೇಬು ತುಂಬದಂತೆಲ್ಲಾ ಭೂಮಿ ಬರಿದಾಗುತ್ತದೆ. ರೈತ ಬರನಾಗುತ್ತಾನೆ. ಹಿಂದೆಲ್ಲಾ ಅರಣ್ಯ ಪರಿಸರ ನಾಶಕ್ಕೆಲ್ಲಾ ಕಾರ್ಖನೆ ಕೈಗಾರಿಕೆಗಳಿಗೆ ಕೈ ತೋರಿಸುತ್ತಿದ್ದರು ಆದರೆ ಇಂದು ಅನಾವೃಷ್ಟಿ ಉಂಟಾಗಲು ರಿಯಲ್‌ ಎಸ್ಟೇಟ್‌ ಉದ್ಯಮದತ್ತಲೂ ಬೆಟ್ಟು ತೋರಿಸುವಂತಾಗಿದೆ.

ಈ ಅನಾವೃಷ್ಟಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಹೆಚ್ಚುತ್ತಿರುವ ಜನಸಂಖ್ಯೆ ಅತಿಯಾದ ಜನಸಂಖ್ಯೆಯಿಂದ ವಸತಿ ವ್ಯವಸ್ಥೆ ಪೂರೈಕೆಗಾಗಿ ಕಾಡು ಕಡಿಯಲ್ಪಟ್ಟು ನಾಡಾಗಿ ಪರಿವರ್ಥನೆಯಾಗುತ್ತದೆ. ಮನೆ, ಕಟ್ಟಡ, ರಸ್ತೆ ಅಗಲಿಕರಣಕ್ಕಾಗಿ ಅರಣ್ಯನಾಶವಾಗುತ್ತದೆ.

ಕಾಡಿದ್ದ ಜಾಗದಲ್ಲಿ ಕಾಂಕ್ರೀಟ್ ಕಾಡು ನಿರ್ಮಾಣವಾಗುತ್ತಿದೆ. ಹಳ್ಳಿ ಜನರು ನಗರದತ್ತ ಮುಖಮಾಡುತ್ತಿರುವುದರ ಪರಿಣಾಮವಾಗಿ ನಗರವೂ ವಿಸ್ತಾರಗೊಂಡು ಹಳ್ಳಿಯತ್ತ ಮುಖ ಚಾಚುತ್ತಿದೆ.

ನಗರೀಕರಣ ರಸ್ತೆ ಅಗಲೀಕರಣ, ಕೈಗಾರಿಕರಣದಿಂದಾಗಿ ಪ್ಲಾನ್‌ ಸಂಸ್ಕೃತಿ ತಲೆ ಎತ್ತುತ್ತಿದೆ.

ಈ ಎಲ್ಲದರ ಪರಿಣಾಮವಾಗಿ ಹವಮಾನದಲ್ಲಿ ಏರುಪೇರು ಉಂಟಾಗಿ ಪರಿಸರದ ಮೇಲೆ ಸವಾರಿ ಮಾಡಿದ ಮಾನವನ ಮೇಲೆ ಪ್ರಕೃತಿ ಪ್ರವಾಹಕ್ಕೆ ಮುಂದಾಗಿದೆ.

ಎಂದೋ ಸುರಿಯಬೇಕಾದ ಮಳೆ ಇನ್ನೆಂದೋ ಸುರಿದು ಎಲ್ಲೋ ಸುರಿಯಬೇಕಾದ ಮಳೆ ಇನ್ನೆಲ್ಲೋ ಸುರಿಯುತ್ತಿದೆ. ಇದು ಪ್ರಕೃತಿ ವಿಕೋಪದ ಫಲಶೃತಿ.

ಉಪ ಸಂಹಾರ

ಹವಮಾನ ವೈಪರಿತ್ಯ ಜಲಕ್ಷಾಮಗಳಿಗೆ ಅರಣ್ಯನಾಶವೇ ಕಾರಣ, ವಿವಿಧ ಕಾರಣಗಳಿಂದಾಗಿ ಬಹುಪ್ರಮಾಣದಲ್ಲಿ ಅರಣ್ಯನಾಶವಾದಾಗ ವಾತಾವರಣದಲ್ಲಿ ಇಂಗಗಾಲದ ಡೈ ಆಕ್ಸೈಡ್‌ ಪ್ರಮಾಣ ಹೆಚ್ಚುತ್ತದೆ. ತಾಪಮಾನದಲ್ಲಿ ಏರಿಕೆಯಾಗುತ್ತದೆ.

ಮಳೆ ಮಾರುತದಾಲ್ಲಿ ವ್ಯತಯಯವಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಎದುರಿಸುತ್ತಿರುವ ನರೆ ಹಾವಳಿಗಳು, ನೀರಿನ ಹಾಹಾಕಾರವಿರಲಿ ಎಲ್ಲವು ಇದರ ಪರಿಣಾಮವೇ, ಇದಕ್ಕೆ ಸೂಕ್ತ ಪರಿಹಾರ ಅರಣೀರಣ.

ಅದ್ದರಿಣದ ನಾವೆಲ್ಲರು, ಅರಣೀಕರಣದತ್ತ ಮುಖ ಮಾಡೋಣ, ವನ ಮಹೋತ್ಸವ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡೋಣ. ಈ ಕಾರ್ಯಕ್ರಮ ಕೇವಲ ವೇದಿಕೆ ಗೆ ಅಷ್ಟೆ ಸೀಮಿತವಾಗದೆ ನಮ್ಮ ಜೀವನದಲ್ಲಿಯು ರೂಡಿಸಿಕೊಳ್ಳೋಣ.

ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ, Ativrushti Anavrushti Prabandha pdf

FAQ

1̤ ಭಾರತದ ಯಾವ ಸ್ಥಳದಲ್ಲಿ ಗರಿಷ್ಠ ಮಳೆಯಾಗುತ್ತದೆ?

ಮೌಸಿನ್ರಾಮ್

2̤ ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಸ್ಥಳ ಯಾವುದು?

ಜೈಸಲ್ಮೇರ್ ಜಿಲ್ಲೆ

3. ಮಳೆಯು ಕೃಷಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮಳೆಯು ಬೆಳೆಗಳನ್ನು ಭೌತಿಕವಾಗಿ ಹಾನಿಗೊಳಿಸಬಹುದು, ನೆಟ್ಟ ಮತ್ತು ಕೊಯ್ಲು ವಿಳಂಬವಾಗಬಹುದು, ಬೇರಿನ ಬೆಳವಣಿಗೆಯನ್ನು ನಿರ್ಬಂಧಿಸಬಹುದು ಮತ್ತು ಆಮ್ಲಜನಕದ ಕೊರತೆ ಮತ್ತು ಪೋಷಕಾಂಶಗಳ ನಷ್ಟವನ್ನು ಉಂಟುಮಾಡುತ್ತವೆ.

ಇತರ ವಿಷಯಗಳು


ಪರಿಸರ ಸಂರಕ್ಷಣೆ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪ್ರಬಂಧ

ಪರಿಸರ ಮಹತ್ವ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಅತಿವೃಷ್ಟಿ ಅನಾವೃಷ್ಟಿ ಬಗ್ಗೆ  ಕನ್ನಡದಲ್ಲಿ ಪ್ರಬಂಧ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

1 thoughts on “ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ । Ativrushti Anavrushti Prabandha in Kannada

Leave a Reply

Your email address will not be published. Required fields are marked *