9ನೇ ತರಗತಿ ಸಿರಿಯನಿನ್ನೇನ ಬಣ್ಣಿಪೆನು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 9th Standard Siriyaninnena Bannipenu Kannada Poem Notes Question Answe Mcq Pdf Download in Kannada Medium Karnataka State Syllabus 2023, Kseeb Solutions For Class 9 Kannada Poem 3 Notes Siriyaninnena Bannipenu Kannada Poem Question and Answer 9th Class Kannada 3rd Poem Question Answer 9th Standard Kannada Siriyaninnena Bannipenu Summary
ಪದ್ಯ ಭಾಗ – 3 ಸಿರಿಯನಿನ್ನೇನ ಬಣ್ಣಿಪೆನು
ರತ್ನಾಕರವರ್ಣಿ
ಕೃತಿಕಾರರ ಪರಿಚಯ
ರತ್ನಾಕರವರ್ಣಿ ( ಕ್ರಿಸ್ತ 1560 ) ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದರೆಯವನು . ಕನ್ನಡ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯ , ಅಪ್ಪಟ ದೇಸೀ ಛಂದಸ್ಸಾದ ಸಾಂಗತ್ಯದಲ್ಲಿ ಬೃಹತ್ ಕಾವ್ಯವನ್ನು ರಚಿಸಿದ್ದಾನೆ .
ತಾಳ ಪ್ರದೇಶದ ಭೈರರಸ ಒಡೆಯರ ಆಸ್ಥಾನದಲ್ಲಿ ಕೆಲವು ಕಾಲ ಇದ್ದು ಶೃಂಗಾರಕವಿ ಅಭಿದಾನಕ್ಕೆ ಪಾತ್ರರಾಗಿದ್ದನು . ಯೋಗಶಾಸ್ತ್ರ ಮತ್ತು ಕಾವ್ಯಶಾಸ್ತ್ರಗಳೆರಡರಲ್ಲೂ ಪರಿಣತರಾಗಿದ್ದನು .
ಭರತೇಶವೈಭವ ಸಾಂಗತ್ಯ ಕಾವ್ಯವನ್ನು , ಅಪರಾಜಿತೇಶ್ವರ ಶತಕ , ತ್ರಿಲೋಕಶತಕ , ರತ್ನಾಕರಾಧೀಶ್ವರಶತಕ ಜೈನಧಾತ್ಮಿಕ ಕಾವ್ಯಗಳನ್ನು ರಚಿಸಿರುವನು . ಸುಮಾರು ಎರಡುಸಾವಿರ ಸಾಂಪ್ರದಾಯಿಕ ಹಾಡುಗಳನ್ನು ರಚಿಸಿದ್ದು , ಅವು ಅಧ್ಯಾತ್ಮ ಗೀತಗಳೆಂದು ಪ್ರಸಿದ್ಧವಾಗಿವೆ .
ಆಶಯ ಭಾವ
ಭರತೇಶವೈಭವ ಮಹಾಕಾವ್ಯ . ಇದನ್ನು ಸಾಂಗತ್ಯ ಛಂದಸ್ಸಿನಲ್ಲಿ ರಚಿಸಿದ್ದಾನೆ . ಈ ವಿಸ್ತಾರ ಕಾವ್ಯ ಆದಿತೀರ್ಥಂಕರ ವೃಷಭದೇವನ ಮಕ್ಕಳಾದ ಭರತ ಬಾಹುಬಲಿಯರ ಕಥೆಯನ್ನು ಒಳಗೊಂಡಿದೆ .
ಭರತ ಅಯೋಧ್ಯೆಯಲ್ಲೂ ಬಾಹುಬಲಿ ಪೌದನಪುರದಲ್ಲೂ ರಾಜ್ಯಭಾರ ಮಾಡುತ್ತಿದ್ದರು . ಭರತನ ಅರಮನೆಯ ಆಯುಧಾಗಾರದಲ್ಲಿ ಚಕ್ರರತ್ನ ಹುಟ್ಟಿತು . ಅದನ್ನು ಮುಂದಿಟ್ಟುಕೊಂಡು ಭರತ ದಿಗ್ವಿಜಯ ನಡೆಸಿ ಪ್ರಥಮಚ ಎನಿಸಿದ .
ತನ್ನ ಕಾವ್ಯದ ಉದ್ದೇಶ ಮತ್ತು ರಚನೆಯ ಕಾರಣಗಳನ್ನು ವರ್ಣಿಸಿರುವುದು ಈ ಕಾವ್ಯಭಾಗದ ವಿಶೇಷ
ಪದಗಳ ಅರ್ಥ
ಅಳವೇ – ಸಾಧ್ಯವೇ
ಆದಿ – ಮೊದಲು
ಆಂಡ್ – ಆಯಿತು
ಐದಿ – ಬಂದು ಒಪ್ಪು , ಶೋಭಿಸು
ಕಾಂಬ – ಕಾಣುವ
ಚೆನ್ನು – ಒಳ್ಳೆಯದು . ಅಂದವಾದುದು
ಢಾಳಿಸು – ಪ್ರಕಾಶಗೊಳಿಸು , ಹೊಳಪು ಮಾಡು
ನವರತ್ನ – ಒಂಬತ್ತು ರತ್ನ
ನೃಪ – ರಾಜ
ಬಿನ್ನಹ – ಅರಿಕೆ
ಅಂಬುಜ – ತಾವರೆ
ಆಜ್ಞೆ – ಅಪ್ಪಣೆ
ಎಸೆ – ಶೋಭಿಸು
ಓಲಗ – ರಾಜಸಭೆ , ದರ್ಬಾರು
ಚಕ್ರಿ – ಚಕ್ರವರ್ತಿ
ಛವಿ – ಕಾಂತಿ
ದಿವಿಜೇಂದ್ರ – ದೇವೇಂದ್ರ
ನೀಲಾಂಬುಜ – ನೈದಿಲೆ
ಪೊರ್ಲು – ಚಂದ
ಭೂತಳ – ಭೂಮಿ
ಭರತೇಶ ವೈಭವ ಸಂಗ್ರ © – ರತ್ನಾಕರವರ್ಣಿ ಪಡೆಯನ್ನು ,
ಮಂಚದಿ – ಒಳ್ಳೆಯದು ( ತೆಲುಗು )
ಮೂಲೋಕ – ಮೂರುಲೋಕ
ಶಶಿ – ಚಂದ್ರ
ಸಿರಿ – ಸಂಪತ್ತು
ಮಂಚದಿ – ಚಂದವಾದದ್ದು
ಶ್ರೀವಿಲಾಸ – ವೈಭವ , ಬೆಡಗು
ಹಂಬಲ – ಚಿಂತೆ
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಭರತೇಶವೈಭವ ಕಾವ್ಯದ ಕರ್ತೃ ಯಾರು ?
ಉತ್ತರ : ಭರತೇಶವೈಭವ ಕಾವ್ಯದ ಕರ್ತೃ ರತ್ನಾಕರವರ್ಣಿ ,
2. ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಯಾವುವು ?
ಉತ್ತರ : ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಸ್ವರ್ಗಲೋಕ ಮೃತ್ಯುಲೋಕ ಮತ್ತು ಪಾತಾಳ ಲೋಕಗಳು .
3. ಭರತ ಚಕ್ರವರ್ತಿ ಓಲಗಕ್ಕೆ ಹೇಗೆ ಬರುತ್ತಾನೆ ?
ಉತ್ತರ : ಭರತ ಚಕ್ರವರ್ತಿಯು ಸೂರ್ಯೋದಯ ಸಮಯದಲ್ಲಿ ಎದ್ದು ದೇವತಾರ್ಚನೆಯನ್ನು ಮಾಡಿ ಓಲಗಕ್ಕೆ ಬರುತ್ತಾನೆ .
4. ಆಸ್ಥಾನ ಭವನದೊಳಗೆ ರಾಜನು ಹೇಗೆ ಶೋಭಿಸುವನು ?
ಉತ್ತರ : ಆಸ್ಥಾನ ಭವನದೊಳಗೆ ರಾಜನು ದೇವೇಂದ್ರನಂತೆ ಶೋಭಿಸುತ್ತಿದ್ದನು .
5. ತುಂಬಿದ ಸಭೆಯು ಮೈಮರೆತು ಕಾತುರರಾಗಿದ್ದುದಕ್ಕೆ ಕಾರಣವೇನು ?
ಉತ್ತರ : ಭರತ ಚಕ್ರವರ್ತಿಯನ್ನು ನೋಡಲು ತುಂಬಿದ ಸಭೆಯು ಮೈಮರೆತು ಕಾತುರವಾಗಿತ್ತು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಧ್ಯಾನ ಬೇಸರಾದಾಗ ಏನು ಮಾಡುತ್ತೇನೆಂದು ಕವಿ ಹೇಳುತ್ತಾನೆ ?
ಉತ್ತರ : ಕವಿ ರತ್ನಾಕರವರ್ಣಿಯ “ ಗುರುವೇ ಧ್ಯಾನಮಾಡುವುದಕ್ಕೆ ಬೇಸರವಾದಾಗ ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ . ಆ ಕತೆಯ ನಾಯಕ ನೀವೇ , ಅದಕ್ಕೆ ಅಪ್ಪಣೆ ನೀಡಬೇಕು , ಆಶೀರ್ವಾದಿಸಬೇಕು . ಎಂದು ಹೇಳಿದ್ದಾರೆ .
2. ಬೇರೆಬೇರೆ ಭಾಷಿಕರು ತನ್ನ ಕೃತಿಯನ್ನು ಹೇಗೆ ಹೊಗಳಬೇಕೆಂದು ಕವಿ ಬಯಸುವನು ?
ಉತ್ತರ : ಕವಿ ರತ್ನಾಕರವರ್ಣಿಯವರು ಭರತನ ಅಪ್ಪಣೆಯನ್ನು ಬೇಡಿ ಕನ್ನಡದಲ್ಲಿ ಕಥೆಯನ್ನು ಹೇಳಲು ತೊಡಗುತ್ತಾರೆ . ನಾನು ಹೇಳುವ ಕಥೆಯನ್ನು ಎಲ್ಲರೂ ಮೈಯುಬ್ಬಿ ಕೇಳಬೇಕು . ಕನ್ನಡಿಗರು ತುಂಬಾ ಚನ್ನಾಗಿದೆ ‘ ಎಂದು ಹೊಗಳಬೇಕು .
ತೆಲುಗರು ‘ ಮಂಚಿದೆ ‘ ಎಂದು ಹೊಗಳಬೇಕು . ತುಳು ಮಾತನಾಡುವವರು ‘ ಎಂಚಪೊರ್ಲಾಂಡೆ ‘ ಹೊಗಳಬೇಕು ಎಂದು ಕವಿ ನನ್ನ ಕಥೆಯನ್ನು ಬೇರೆ ಬೇರೆ ಭಾಷಿಕರು ಈ ರೀತಿ ಹೊಗಳಬೇಕೆಂದು ಬಯಸುತ್ತಾರೆ .
3. ಭರತ ಚಕ್ರವರ್ತಿ ಓಲಗಮಂಟಪವನ್ನೇರಿದ ಸಂದರ್ಭವನ್ನು ಬಣ್ಣಿಸಿ .
ಉತ್ತರ : ಭರತನು ಇಡೀ ಭೂಮಂಡಲವನ್ನೇ ಗೆದ್ದು ಪ್ರಥಮಚಕ್ರವರ್ತಿ ಎಂದು ಪ್ರಸಿದ್ಧಿಯಾಗುತ್ತಾನೆ . ಇವನು ವೈಭವದಿಂದ ರಾಜ್ಯಭಾರ ಮಾಡುತ್ತಿದ್ದನು .
ಇಂತಹ ಭರತ ಚಕ್ರವರ್ತಿ ಪ್ರತಿದಿನ ಸೂರ್ಯೋದಯದೊಂದಿಗೆ ಎದ್ದು ಸ್ನಾನ ಮಾಡಿ , ದೇವರ ಪೂಜೆಮಾಡಿ , ರಾಜಸಭೆಗೆ ನಡೆದ ಬರುವ ದೃಶ್ಯ ವೈಭವದಿಂದ ಕೂಡಿದೆ .
ನವರತ್ನಗಳಿಂದ ಹಾಗೂ ಬಂಗಾರದಿಂದ ನಿರ್ಮಾಣವಾಗಿದ್ದ ಅಸ್ಥಾನಭವನದಲ್ಲಿ ಭರತ ಚಕ್ರವರ್ತಿ ಸ್ವರ್ಗ ಲೋಕದ ದೇವೇಂದ್ರನಂತೆ ಕಂಗೊಳಿಸುತ್ತಿದ್ದನು .
ಇ ) ಕೊಟ್ಟಿರುವ ಪ್ರಶ್ನೆಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿ .
1. ಭರತ ಚಕ್ರವರ್ತಿಯ ರಾಜದರ್ಬಾರಿನ ವೈಭವವನ್ನು ವಿವರಿಸಿ
ಉತ್ತರ : ಆದಿತೀರ್ಥಕರ ವೃಷಭದೇವನ ಮಕ್ಕಳಾದ ಭರತ ಬಾಹುಬಲಿಯರು ಅವರವರ ರಾಜ್ಯದಲ್ಲಿ ರಾಜ್ಯಭಾರ ಮಾಡುತ್ತಿದ್ದರು . ಭರತ ಅಯೋಧ್ಯೆಯಲ್ಲೂ , ಬಾಹುಬಲಿ ಪೌದನಪುರದಲ್ಲೂ ರಾಜ್ಯಭಾರ ಮಾಡುತ್ತಿದ್ದರು .
ಭರತನ ಆಯುಧಗಾರದಲ್ಲಿ ಚಕ್ರರತ್ನ ‘ ಹುಟ್ಟುತ್ತದೆ . ಇದನ್ನು ಮುಂದಿಟ್ಟುಕೊಂಡು ಭರತ ದಿಗ್ವಿಜಯ ನಡೆಸಿ , ಪ್ರಥಮ ಚಕಿ ಎನಿಸಿದನು . “ ಭರತಭೂತಳಕೆ ಸಿಂಗಾರವಾದಯೋಧ್ಯಾ ಪುರದೊಳು ಮೂಲೋಕ ಸೊಗಳೆ ಭರತಚಕ್ರೇಶ್ವರ ಸುಖಬಾಳುತಿರ್ದನಾ ಸಿರಿಯನಿನ್ನೇನ ಬಣ್ಣಿಪೆನು ” ಎಂದು ಕವಿಯೇ ಹೇಳಿದ್ದಾರೆ .
ಭರತನು ಮುಂಜಾನೆ ಎದ್ದು ದೇವರ ಪೂಜೆ ಅರ್ಚನೆಗಳನ್ನು ಪೂರೈಸಿ ರಾಜಸಭೆಗೆ ಆಗಮಿಸುವ ರೀತಿಯೇ ಅದ್ಭುತವಾದುದು . ನವರತ್ನಗಳು ಹಾಗೂ ಬಂಗಾರದಿಂದ ರಚಿತವಾಗಿದ್ದ ಸಭಾ ಭವನವು ಕಂಗೊಳಿಸುತ್ತಿತ್ತು .
ರಾಜರತ್ನನೆಂಬ ಭರತ ಚಕ್ರವರ್ತಿಯು ಸ್ವರ್ಗದ ದೇವೇಂದ್ರನಂತೆ ಕಾಂತಿಯಿಂದ ಶೋಭಿಸುತ್ತಿದ್ದನು . ಬೆಳ್ಳಿ ಮೋಡಗಳ ಆಗಾಗ ಪ್ರತ್ಯಕ್ಷವಾಗುವ ಸೂರ್ಯನೋ ಚಂದ್ರನೋ ಎಂಬಂತೆ ಶೋಭಿಸುತ್ತಿದ್ದನು
ಸೂರ್ಯನನ್ನೂ ನೋಡುವ ತಾವರೆಗಳಂತೆ , ಚಂದ್ರನನ್ನು ಕಾಣುವ ನೈದಿಲೆಗಳಂತೆ ಸಭಾಸದರು ಭರತ ಚಕ್ರವರ್ತಿಯನ್ನು ನೋಡುತ್ತಿದ್ದರು .
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. ” ಕನ್ನಡದೊಳಗೊಂದು ಕಥೆಯ ಪೇಳುವನು “
ಆಯ್ಕೆ : ಈ ವಾಕ್ಯವನ್ನು ತ.ಸು. ಶಾಮರಾಯರು ಸಂಪಾದಿಸಿದ ‘ ರತ್ನಾಕರವರ್ಣಿ ‘ ವಿರಚಿತ ‘ ಭರತೇಶವೈಭವ ಕಾವ್ಯಭಾಗದಿಂದ ಆಯ್ದ ‘ ಸಿರಿಯನಿನ್ನೇನ ಬಣ್ಣಿಪೆನು ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಕವಿ ರತ್ನಾಕರವರ್ಣಿ ಅವರು “ ಗುರುವೇ ಧ್ಯಾನಕೆ ಬೇಸರವಾದಾಗ ಕನ್ನಡದಲ್ಲಿ ಒಂದು ಕಥೆ ಹೇಳುತ್ತೇನೆ . ಅದಕ್ಕೆ ನೀವು ಅನುಮತಿಯನ್ನು ಕೊಡಬೇಕು ” ಎಂದು ಅಪ್ಪಣೆ ಕೇಳಿದ ಸಂದರ್ಭದಲ್ಲಿ ಕವಿ ಈ ರೀತಿ ಹೇಳಿದ್ದಾರೆ .
ಸ್ವಾರಸ್ಯ : ಕವಿ ರತ್ನಾಕರವರ್ಣಿ ಅವರಿಗೆ ಇರುವ ಕನ್ನಡಾಭಿಮಾನ , ಕನ್ನಡ ಪ್ರೇಮ , ಆಶ್ರಯಕೊಟ್ಟ ರಾಜನ ಮೇಲಿರುವ ಗೌರವ ಭಾವನೆಯು ಸಕರವಾಗಿದೆ .
2. “ ಶ್ರೀ ವಿಲಾಸವನೇನನೆಂಬೆ ? ”
ಆಯ್ಕೆ : ಈ ವಾಕ್ಯವನ್ನು ತ.ಸು. ಶಾಮರಾಯರು ಸಂಪಾದಿಸಿದ ‘ ರತ್ನಾಕರವರ್ಣಿ ‘ ವಿರಚಿತ ‘ ಭರತೇಶವೈಭವ ಕಾವ್ಯಭಾಗದಿಂದ ಆಯ್ದ ‘ ಸಿರಿಯನಿನ್ನೇನ ಬಣ್ಣಿಪೆನು ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭರತ ಚಕ್ರವರ್ತಿಯು ಸೂರ್ಯೋದಯದಲ್ಲಿ ಎದ್ದು ದೇವರ ಅರ್ಚನೆಯನ್ನು ಮಾಡಿ ರಾಜಸಭೆಗೆ ಆಗಮಿಸುವ ರೀತಿಯನ್ನು ವರ್ಣಿಸಿದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಭರತ ಚಕ್ರವರ್ತಿಯು ವೈಭವದಿಂದ ರಾಜ್ಯಭಾರ ಮಾಡುತ್ತಿರುವುದು ಸ್ವಾರಸ್ಯ ಪೂರ್ಣವಾಗಿ ಕವಿ ವರ್ಣಿಸಿದ್ದಾರೆ .
3 , “ ಚಂದಿರನೋ ಭಾಸ್ಕರನೊಯೆಂಬಂತೆ ”
ಆಯ್ಕೆ : ಈ ವಾಕ್ಯವನ್ನು ತ.ಸು. ಶಾಮರಾಯರು ಸಂಪಾದಿಸಿದ ‘ ರತ್ನಾಕರವರ್ಣಿ ‘ ವಿರಚಿತ ‘ ಭರತೇಶವೈಭವ ‘ ಕಾವ್ಯಭಾಗದಿಂದ ಆಯ್ದ ‘ ಸಿರಿಯನಿನ್ನೇನ ಬಣ್ಣಿಪೆನು ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭರತನು ರತ್ನ ಖಚಿತವಾದ ಸಿಂಹಾಸನದ ಮೇಲೆ ಕುಳಿತಿರುವ ದೃಶ್ಯವನ್ನು ವರ್ಣಿಸಿದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ಆಕಾಶದಲ್ಲಿ ಮೋಡದ ಮರೆಯಲ್ಲಿ ಆಗಾಗ ಕಾಣಿಸಿ ಮರೆಯಾಗುವ ಸೂರ್ಯನೋ ಚಂದ್ರನೋ ಎಂದು ಹೇಳಿದ್ದಾರೆ .
ಸ್ವಾರಸ್ಯ : ಬಾನಿನಲ್ಲಿ ಸೂರ್ಯ ಚಂದ್ರರು ಯಾವ ರೀತಿ ಶೋಭಿಸುತ್ತಾರೋ ಅದೇ ರೀತಿ ಆಸ್ಥಾನದಲ್ಲಿ ಭರತ ಚಕ್ರವರ್ತಿ ಕಂಗೊಳಿಸುತ್ತಿರುವುದು ಸ್ವಾರಸ್ಯವಾಗಿ ಕವಿ ವರ್ಣಿಸಿದ್ದಾರೆ .
ಈ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ .
1. ಬಿನ್ನಹ : ಅರಿಕೆ :: ವಿಭು :………..
2 . ಹೊಗಳು : ತೆಗಳು :: ಕಾರ್ಮುಗಿಲ್ :……………….
3. ಭರತ : ಅಯೋಧ್ಯೆ :: ಬಾಹುಬಲಿ :…………..
4. ನೀಲಾಂಬುಜ : ನೀಲ + ಅಂಬುಜ :: ಚಕ್ರೇಶ್ವರ :……………….
ಸರಿ ಉತ್ತರಗಳು
1. ರಾಜ
2. ಬೆಳ್ಳಗಿಲ್
3. ಪೌದನಪುರ
4. ಚಕ್ರ + ಈಶ್ವರ
ಊ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .
ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಮ್ಯಾ ಮಂಚದಿಯೆನೆ ತೆಲುಗ
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು
ಮೈಯುಬ್ಬಿ ಕೇಳಬೇಕಣ್ಣ .
ಅಂಬುಜವೆಲ್ಲವು ರವಿಯ ನೋಳಂತೆ ನೀ
ಲಾಂಬುಜ ನೋಳಂತೆ ಶಶಿಯಾ
ತುಂಬಿದ ಸಭೆಯೆಲ್ಲ ನೃಪನ ನೋಡುವ ಮಿಕ್ಕ
ಕಡ ಹಂಬಲ ಮರೆದುದಲ್ಲಲ್ಲಿ
FAQ :
ಉತ್ತರ : ಭರತ ಚಕ್ರವರ್ತಿಯು ಸೂರ್ಯೋದಯ ಸಮಯದಲ್ಲಿ ಎದ್ದು ದೇವತಾರ್ಚನೆಯನ್ನು ಮಾಡಿ ಓಲಗಕ್ಕೆ ಬರುತ್ತಾನೆ .
ಉತ್ತರ : ಆಸ್ಥಾನ ಭವನದೊಳಗೆ ರಾಜನು ದೇವೇಂದ್ರನಂತೆ ಶೋಭಿಸುತ್ತಿದ್ದನು .
ಉತ್ತರ : ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಸ್ವರ್ಗಲೋಕ ಮೃತ್ಯುಲೋಕ ಮತ್ತು ಪಾತಾಳ ಲೋಕಗಳು .
ಇತರೆ ವಿಷಯಗಳು:
9th Standard All Subject Notes
9th Standard Kannada Textbook karnataka Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Tq so much Your kind information
Tq so much Your kind information
Tq so much Your kind information I have good information in this app so thankfully in this app creater tq
Thanks machaa
Thank you for all questions
Thank you for all questions and answers