9th Standard Kannada Paarivaala Poem Notes | 9ನೇ ತರಗತಿ ಪಾರಿವಾಳ ಪ್ರಶ್ನೆ ಉತ್ತರ ನೋಟ್ಸ್

9ನೇ ತರಗತಿ ಕನ್ನಡ ಪಾರಿವಾಳ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Parivala Poem Notes Question Answer Mcq Pdf Download in Kannada Medium Karnataka State Syllabus 2023, Kseeb Solutions For Class 9 Kannada Poem 2 Notes Parivala Questions and Answers Summary Notes Pdf 9th Standard Kannada 2nd Poem Notes Parivala Kannada Poem 9th Standard Notes 9th Standard Kannada Parivala Question Answer

 

ಪದ್ಯಭಾಗ – 2.   ಪಾರಿವಾಳ

ಕೃತಿಕಾರರರು : ಸು . ರಂ . ಎಕ್ಕುಂಡಿ

ಕೃತಿಕಾರರ ಪರಿಚಯ

ಸು . ರಂ . ಎಕ್ಕುಂಡಿ ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ . ಇವರು ಹುಟ್ಟಿದ್ದು 1923 ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಇವರ ಕೃತಿಗಳು ಕವನ ಸಂಕಲನ : ಶ್ರೀ ಆನಂದ ತೀರ್ಥರು , ಸಂತಾನ , ಹಾವಾಡಿಗರ ಹುಡುಗ , ಮತ್ತೆ ಗಂಧಿ ,ಬಕುಳದ ಹೂಗಳು , ಕಥಾಸಂಕಲನ : ನೆರಳು , ಕಾದಂಬರಿ : ಪ್ರತಿಬಿಂಬಗಳು , ಸೋವಿಯತ್ ಲ್ಯಾಂಡ್‌ನ ನೆಹರು ಪುರಸ್ಕಾರ , ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ , ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿವೆ .ಪ್ರಸ್ತತ ‘ ಪಾರಿವಾಳ ‘ ಪದ್ಯವನ್ನು ಸು . ರಂ . ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ಆರಿಸಲಾಗಿದೆ .

ಆಶಯ ಭಾವ

ಪಾರಿವಾಳ ‘ ಎಂಬ ಕವನವು ಒಂದು ಕಥನ ಕವನವಾಗಿದೆ . ದಟ್ಟ ಕಾಡಿನ ಹೆಮ್ಮರದಲ್ಲಿ ಇದ್ದ ಪಾರಿವಾಳಗಳ ಜೋಡಿಯು ಪರಸ್ಪರ ಆಗಲಿ ಇರಲಾರದೆ ತಮ್ಮ ಮರಿಗಳೊಡನೆ ಅವುಗಳ ಧ್ವನಿ ಕೇಳುತ್ತಾ ಆನಂದದಿಂದ ಬಾಳುತ್ತಿದ್ದವು .

ಬೇಡನು ಹಾಕಿದ ಬಲೆಗೆ ಸಿಲಿಕಿದ ಪುಟ್ಟ ಮರಿಗಳನ್ನು ಕಂಡ ತಂದೆ – ತಾಯಿ ಪಾರಿವಾಳಗಳು ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು .

‘ ಮೋಹ ‘ ಎಂಬುದು ಸರ್ವನಾಶಕ್ಕೆ ಕಾರಣ , ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು ಎಂಬುದೇ ಈ ಕಥನ ಕವನದ ಆಶಯವಾಗಿದೆ .

ಪದಗಳ ಅರ್ಥ

ಮುಸುಕು       – ಆವರಿಸು, ಸುತ್ತುವರಿ

ವ್ಯಾಮೋಹ   – ಅತಿಯಾದ ಪ್ರೀತಿ

ಹೊದರು .     – ಪೊದೆ, ಪೊಟರೆ

ವಾತ್ಸಲ್ಯ       –  ಅಕ್ಕರೆ , ಮಮತೆ

ಸಿದ್ಧಿ            –  ಫಲಕಾರಿ , ಪ್ರಾಪ್ತವಾಗು

ಪದ್ಯದ ಸರಳಾನುವಾದ ಮತ್ತು ಸಾರಾಂಶ 

‘ಪಾರಿವಾಳ ‘ ಎಂಬ ಕವನವು ಒಂದು ಕಥನ ಕವನವಾಗಿದೆ . ಒಂದು ದಟ್ಟವಾದ ಕಾಡಿನ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳ ಜೋಡಿ ಸಂಸಾರ ಹೂಡಿ ಸುಃಖದಿಂದ ಬಾಳುತ್ತಿದ್ದವು .

ಈ ಪಾರಿವಾಳಗಳ ಜೋಡಿ ಹಗಲಿರುಳು ಒಂದನೊಂದು ಬಿಟ್ಟಿರದ ಜೊತೆಯಾಗಿ ಬಾಳುತ್ತಿದ್ದವು .

ಈ ಪುಟ್ಟ ಸಂಸಾರದಲ್ಲಿ ಸುಃಖ , ಸಂತೋಷ , ಆನಂದ ಮನೆ ಮಾಡಿತ್ತು . ಈ ಗೂಡಿನಲ್ಲಿ ಮೊಟ್ಟೆಯೊಡೆದು ತನ್ನ ಮರಿ ಪಾರಿವಾಳಗಳನ್ನು ನೋಡಿ ಅವುಗಳ ಸಂತೋಷ ಇಮ್ಮಡಿಯಾಯಿತು .

ಕಾಲಗತಿಸಿದಂತೆ ಮೊಟ್ಟೆಯೊಡೆದು ಮರಿಗಳಾಗಿ ಆ ಮರಿಗಳ ಮಧುರ ಸದ್ದು ಕೇಳಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದವು ಆನಂದದಿಂದ ಬಾಳು ಸಾಗಿಸುತ್ತಿದ್ದವು . ಹೀಗಿರುವಾಗ ಒಂದು ಈ ಪುಟ್ಟ ಪಾರಿವಾಳ ಕುಟುಂಬದ ಮೇಲೆ ಬೇಡನೊಬ್ಬನ ಕಣ್ಣು ಬೀಳುತ್ತದೆ .

ಈ ಬೇಡನು ಬಂದು ಬಲೆಯನ್ನು ಹಾಕಿದಾಗ ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬಿದ್ದು ಸಿಲುಕಿದವು , ಬಲೆಯಿಂದ ಹೊರ ಬರಲು ಚೀತ್ಕರಿಸತೊಡಗಿದವು ,

9th standard kannada poem parivala summary

ಬಲೆಯಲ್ಲಿ ಬಿದ್ದು ಕಷ್ಟ ಪಡುವುದನ್ನು ನೋಡಿದ ತಾಯಿ ಪಾರಿವಾಳ ಸ್ವಲ್ಪವೂ ಯೋಚಿಸದೆ , ತಡಮಾಡದೆ ಬಲೆಯಲ್ಲಿ ಬಿದ್ದಿತು . ತನ್ನ ಮರಿ ಪಾರಿವಾಳಗಳು , ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಹಿಂದೆ – ಮುಂದ ನೋಡದೆ ಹೆಂಡತಿ , ಮಕ್ಕಳನ್ನು ಕಾಪಾಡಲು ತಾನು ಬಲೆಗೆ ಬಿದ್ದಿತು .

ಮರಿ ಪಾರಿವಾಳಗಳ ಮೇಲಿನ ವ್ಯಾಮೋಹ ತಾಯಿ ಪಾರಿವಾಳ ಬಲೆಯಲ್ಲಿ ಬೀಳುವಂತೆ ಮಾಡಿತು . ಹೆಂಡತಿ , ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದುಕೊಂಡು ಗಂಡು ಪಾರಿವಾಳ ಸಹ ಬಲೆಯಲ್ಲಿ ಬಿದ್ದಿತು .

ಬೇಡನಿಗೆ ಲಾಭವೆ ಆಯಿತು . ಈ ಸಂಸಾರವನ್ನು ಬೇಡನು ಹೊತ್ತುಕೊಂಡು ನಡೆದನು . “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನ್ನು ತೊರೆದು ಬಾಳಬೇಕು ಏನು ಬಂದರು ಕೂಡ ತಾಳಬೇಕು ” ಎಂಬ ಕವಿಯ ಈ ಸಾಲುಗಳು ಪಾಠವಾಗಿ ನಿಲ್ಲುತ್ತವೆ .

ಮಕ್ಕಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳ ವ್ಯಾಮೋಹ ಬಿಟ್ಟು ಸ್ವಲ್ಪ ವಿವೇಕದಿಂದ ಯೋಚನೆ ಮಾಡಬೇಕಿತ್ತು . ಇದರಿಂದ ತನ್ನ ಪಾಣ ಉಳಿಯುತ್ತಿತ್ತು .

ಬೇಡನ ಬಲೆಯಲ್ಲಿ ಬಿದ್ದು ಮರಿ ಪಾರಿವಾಳಗಳ ಜೀವ ಹೋಗಬೇಕು ಎಂದು ಆ ವಿಧಿ ಬರೆದಿದ್ದರೆ ಯಾರು ತಾನೇ ತಪ್ಪಿಸಲು ಸಾಧ್ಯ ? ಎಂದು ತಾಯಿ ಪಾರಿವಾಳ ವಿವೇಕದಿಂದ ಯೋಚನೆ ಮಾಡಬೇಕಿತ್ತು .

ಇದೇ ರೀತಿ ಮರಿ ಪಾರಿವಾಳ , ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಾಗ ಗಂಡು ಪಾರಿವಾಳ ಯೋಚನೆ ಮಾಡಿದ್ದರೆ ಪಾರಿವಾಳಗಳ ಕುಟುಂಬ ಸರ್ವನಾಶವಾಗುತ್ತಿರಲಿಲ್ಲ .

ಜೀವನ ಎಂದ ಮೇಲೆ ಕಷ್ಟ ನಷ್ಟ , ಸಮಸ್ಯೆಗಳು ಬರುತ್ತವೆ , ಸವಾಲುಗಳಿಗೆ ಹೆದರದೆ , ಬಾವುಕರಾಗಿ ಅನಾಹುತಗಳನ್ನು ಮಾಡಿಕೊಳ್ಳದೇ ವಿವೇಕದಿಂದ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು .

ಎನೇ ಬಂದರು ಕಲ್ಲುಬಂಡೆಯಂತೆ ತಾಳಬೇಕು ಎಂದು ಕವಿ ಹೇಳಿದ್ದಾರೆ .

ಆ ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು ?

ಉತ್ತರ : ದಟ್ಟಕಾಡಿನಲ್ಲಿದ್ದ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ಸಂಸಾರ ಹೂಡಿದ್ದವು

2. ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು ?

ಉತ್ತರ  : ಹಗಲಿರುಳು ಒಂದನ್ನೊಂದು ಬಿಟ್ಟಿರದೆ ಜೊತೆಗೂಡಿ ಬಾಳುತ್ತಿದ್ದವು

3 , ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಏನು ಮಾಡಿದವು ?

ಉತ್ತರ : ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಚೀತ್ಕರಿಸತೊಡಗಿದವು .

4. ಏನನ್ನು ತೊರೆದು ಬಾಳಬೇಕು ?

ಉತ್ತರ : ವ್ಯಾಮೋಹವನ್ನು ತೊರೆದು ಬಾಳಬೇಕು .

ಆ ) ಈ ಪ್ರಶ್ನೆಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಪಾರಿವಾಳಗಳ ಆನಂದಕ್ಕೆ ಕಾಣವೇನು ?

ಉತ್ತರ : ಒಂದು ದಟ್ಟಕಾಡಿನಲ್ಲಿದ್ದ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ವಾಸವಾಗಿದ್ದವು ಜೋಡಿ ಪಾರಿವಾಳಗಳು ಎಂದಿಗೂ ಒಂದನ್ನೊಂದು ಹಗಲಿರುಳು ಬಿಟ್ಟಿರದೆ ಜೊತೆಗೂಡಿ ಬಾಳಿದವು .

ಕಾಲಾಂತರದಲ್ಲಿ ಹೊದರಿನಲ್ಲಿ ಪುಟ್ಟ ಮರಿಗಳ ಮಧುರ ಸದ್ದು ಕೇಳಿತು . ಆ ಪುಟ್ಟ ಪಾರಿವಾಳಗಳ ಮಧುರವಾದ ಮಾತುಗಳನ್ನು ಕೇಳಿದ ಜೋಡಿ ಪಾರಿವಾಳಗಳಿಗೆ ಮತ್ತಷ್ಟು ಸಂತೋಷವಾಗಿತು .

2 , ಬೇಡ ಏನು ಮಾಡಿದನು ?

ಉತ್ತರ : ಕಾಡಿನ ಹೆಮ್ಮರ ಹೊದರಿನಲ್ಲಿ ಜೋಡಿ ಪಾರಿವಾಳಗಳ ಜೋಡಿ ತನ್ನ ಪುಟ್ಟ ಮರಿಗಳ ಜೊತೆಗೆ ಆನಂದದಿಂದ , ಸಂತೋಷದಿಂದ ಬಾಳುತ್ತಿದ್ದವು . ಇದನ್ನು ನೋಡಿ ಬೇಡನೊಬ್ಬನು ಬಲೆಯ ಹರಡಿದನು .

ಈ ಬಲೆಯಲ್ಲಿ ಮೊದಲು ಪುಟ್ಟ ಮರಿಗಳು ಹಾರಿ ಸಿಲುಕಿ ಹೊರಗೆ ಚೀತ್ಕರಿಸತೊಡಗಿದವು . ಮರಿ ಪಾರಿವಾಳಗಳ ಸ್ಥಿತಿಯನ್ನು ಕಂಡು ತಾಯಿ ಪಾರಿವಾಳ ಬಲೆಗೆ ಧುಮುಕಿತು .

ಹೆಂಡತಿಯನ್ನು ಬಿಟ್ಟಿರಲಾರದ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬಿದ್ದಿತು . ಹಸಿದ ಬೇಡನು ಹೊತ್ತುಕೊಂಡು ಹೋದನು .

ಇ ) ಈ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ 

1. ಜೋಡಿ ಪಾರಿವಾಳಗಳ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಉತ್ತರ : ಕಾಡಿನಲ್ಲಿ ಒಂದು ಪಾರಿವಾಳಗಳ ಕುಟುಂಬ ವಾಸ ಮಾಡುತ್ತಿರುತ್ತದೆ . ಇವುಗಳು ಆನಂದದಿಂದ ತನ್ನ ಮರಿ ಪಾರಿವಾಳಗಳೊಂದಿಗೆ ಬಾಳುತ್ತಿರುವ ಸಂದರ್ಭದಲ್ಲಿ ಬೇಡನೊಬ್ಬನು ಬಂದು ಬಲೆಯನ್ನು ಹಾಕುತ್ತಾನೆ .

ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬೀಳುತ್ತವೆ . ತನ್ನ ಮಕ್ಕಳು ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ತಾಯಿ ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ .

ಹೆಂಡತಿ ಪಾರಿವಾಳ , ಮಕ್ಕಳು ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ . ಈ ರೀತಿ ಎಲ್ಲಾ ಪಾರಿವಾಳಗಳು ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಲೆಯಲ್ಲಿ ಬೀಳಬಾರದಿತ್ತು .

ಮರಿ ಪಾರವಾಳಗಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳವು ಏವೇಕದಿಂದ ಯೋಚಿಸಿ ‘ ನಾನು ಬಲೆಯಲ್ಲಿ ಬಿದ್ದರೆ ಮರಿ ಪಾರಿವಾಳಗಳನ್ನು ಕಾಪಾಡಲು ಸಾಧ್ಯವೇ ? ‘ ಎಂದು ಯೋಚಿಸಿದ್ದರೆ ತಾನು ಬದುಕುಳಿಯಬಹುದಿತ್ತು.

ಅದರಂತೆ ಮರಿ ಪಾರಿವಾಳಗಳು , ಹೆಂಡತಿ ಪಾರಿವಾಳ ಬೇಡನ ಬಲೆಯಲ್ಲಿ ಬಿದ್ದಾಗ ಹೆಂಡತಿಯನ್ನು ಬಿಟ್ಟಿರಲಾರದೆ ಗಂಡು ಪಾರಿವಾಳ ಬಿಕ್ಕಿ ಬಿಕ್ಕಿ ಅಳುತ್ತಾ ಒಳಗೆ ಹಾರಿತು . ಅದಕ್ಕಾಗಿ ಕಾಯುತ್ತಿದ್ದ ಬೇಡ ಪಾರಿವಾಳಗಳನ್ನು ಹೊತ್ತು ನಡೆದನು .

ವ್ಯಾಮೋಹವನ್ನು ತೊರೆದು ಬಾಳಬೇಕು ಏನೇ ಬಂದರು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು . ಎಂಬುದೇ ನಮ್ಮ ಅಭಿಪ್ರಾಯವಾಗಿದೆ .

2. ‘ ಪಾರಿವಾಳ ‘ ಪದ್ಯದ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ‘ ಪಾರಿವಾಳ ‘ ಎಂಬ ಕವನವು ಒಂದು ಕಥನ ಕವನವಾಗಿದೆ . ಒಂದು ದಟ್ಟವಾದ ಕಾಡಿನ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳ ಜೋಡಿ ಸಂಸಾರ ಹೂಡಿ ಸುಃಖದಿಂದ ಬಾಳುತ್ತಿದ್ದವು .

ಈ ಪಾರಿವಾಳಗಳ ಜೋಡಿ ಹಗಲಿರುಳು ಒಂದನೊಂದು ಬಿಟ್ಟಿರದೆ ಜೊತೆಯಾಗಿ ಬಾಳುತ್ತಿದ್ದವು . ಈ ಪುಟ್ಟ ಸಂಸಾರದಲ್ಲಿ ಸುಃಖ , ಸಂತೋಷ , ಆನಂದ ಮನೆ ಮಾಡಿತ್ತು .

ಈ ಗೂಡಿನಲ್ಲಿ ಮೊಟ್ಟೆಯೊಡೆದು ತನ್ನ ಮರಿ ಪಾರಿವಾಳಗಳನ್ನು ನೋಡಿ ಅವುಗಳ ಸಂತೋಷ ಇಮ್ಮಡಿಯಾಯಿತು ಕಾಲಗತಿಸಿದಂತೆ ಮೊಟ್ಟೆಯೊಡೆದು ಮರಿಗಳಾಗಿ ಆ ಮರಿಗಳ ಮಧುರ ಸದ್ದು ಕೇಳಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದವು , ಆನಂದದಿಂದ ಬಾಳು ಸಾಗಿಸುತ್ತಿದ್ದವು .

ಹೀಗಿರುವಾಗ ಒಂದು ಈ ಪುಟ್ಟ ಪಾರಿವಾಳ ಕುಟುಂಬದ ಮೇಲೆ ಬೇಡನೊಬ್ಬನ ಕಣ್ಣು ಬೀಳುತ್ತದೆ . ಈ ಬೇಡನು ಬಂದು ಬಲೆಯನ್ನು ಹಾಕಿದಾಗ ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬಿದ್ದು ಸಿಲುಕಿದವು . ಬಲೆಯಿಂದ ಹೊರ ಬರಲು ಚೀತ್ಕರಿಸ ತೊಡಗಿದವು .

ಬಲೆಯಲ್ಲಿ ಬಿದ್ದು ಕಷ್ಟ ಪಡುವುದನ್ನು ನೋಡಿದ ತಾಯಿ ಪಾರಿವಾಳ ಸ್ವಲ್ಪವೂ ಯೋಚಿಸದೆ , ತಡಮಾಡದೆ ಬಲೆಯಲ್ಲಿ ಬಿದ್ದಿತು . ತನ್ನ ಮರಿ ಪಾರಿವಾಳಗಳು ,

ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಹಿಂದೆ ಮುಂದೆ ನೋಡದೆ ಹೆಂಡತಿ , ಮಕ್ಕಳನ್ನು ಕಾಪಾಡಲು ತಾನು ಬಲೆಗೆ ಬಿದ್ದಿತು .

ಮರಿ ಪಾರಿವಾಳಗಳ ಮೇಲಿನ ವ್ಯಾಮೋಹ ತಾಯಿ ಪಾರಿವಾಳ ಬಲೆಯಲ್ಲಿ ಬೀಳುವಂತೆ ಮಾಡಿತು . ಹೆಂಡತಿ , ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದುಕೊಂಡು ಗಂಡು ಪಾರಿವಾಳ ಸಹ ಬಲೆಯಲ್ಲಿ ಬಿದ್ದಿತು , ಬೇಡನಿಗೆ ಲಾಭವೆ ಆಯಿತು .

ಈ ಸಂಸಾತವನ್ನು ಬೆಡನು ಹೊತ್ತುಕೊಂಡು ನಡೆದನು . “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನು ತೊರೆದು ಬಾಳಬೇಕು ಏನು ಬಂದರು ಕೂಡ ತಾಳಬೇಕು ” ಎಂಬ ಕವಿಯ ಈ ಸಾಲುಗಳು ಪಾಠವಾಗಿ ನಿಲ್ಲುತ್ತವೆ .

ಮಕ್ಕಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳ ವ್ಯಾಮೋಹ ಬಿಟ್ಟು ಸ್ವಲ್ಪ ವಿವೇಕದಿಂದ ಯೋಚನೆ ಮಾಡಬೇಕಿತ್ತು . ಇದರಿಂದ ತನ್ನ ಪ್ರಾಣ ಉಳಿಯುತ್ತಿತ್ತು .

ಬೇಡನ ಬಲೆಯಲ್ಲಿ ಬಿದ್ದು ಮರಿ ಪಾರಿವಾಳಗಳ ಜೀವ ಹೋಗಬೇಕು ಎಂದು ಆ ವಿಧಿ ಬರೆದಿದ್ದರೆ ಯಾರು ತಾನೇ ತಪ್ಪಿಸಲು ಸಾಧ್ಯ ? ಎಂದು ತಾಯಿ ಪಾರಿವಾಳ ವಿವೇಕದಿಂದ ಯೋಚನೆ ಮಾಡಬೇಕಿತ್ತು .

ಇದೇ ರೀತಿ ಮರಿ ಪಾರಿವಾಳ , ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಾಗ ಗಂಡು ಪಾರಿವಾಳ ಯೋಚನೆ ಮಾಡಿದ್ದರೆ ಪಾರಿವಾಳಗಳ ಕುಟುಂಬ ಸರ್ವನಾಶವಾಗುತ್ತಿರಲಿಲ್ಲ . ಜೀವನ ಎಂದ ಮೇಲೆ ಕಷ್ಟ ನಷ್ಟ ಸಮಸ್ಯೆಗಳು ಬರುತ್ತವೆ .

ಸವಾಲುಗಳಿಗೆ ಹೆದರದೆ , ಬಾವುಕರಾಗಿ ಅನಾಹುತಗಳನ್ನು ಮಾಡಿಕೊಳ್ಳದೇ ವಿವೇಕದಿಂದ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು . ಎನೇ ಬಂದರು ಕಲ್ಲುಬಂಡೆಯಂತೆ ತಾಳಬೇಕು ಎಂದು ಕವಿ ಹೇಳಿದ್ದಾರೆ .

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ

1. “ ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ

ಆಯ್ಕೆ : ಈ ವಾಕ್ಯವನ್ನು. ಸು . ರಂ . ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ಆಯ್ದ ‘ ಪಾರಿವಾಳ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ಬೇಡನು ಹಾಕಿದ ಬಲೆಗೆ ಮೊದಲು ಮರಿ ಪಾರಿವಾಳಗಳು ಬೀಳುತ್ತವೆ . ಇದನ್ನು ನೋಡಿದ ತಾಯಿ ಪಾರಿವಾಳವು ಮಮತೆ , ವಾತ್ಸಲ್ಯದಿಂದ ಬಲೆಗೆ ಬೀಳುತ್ತದೆ .

ಹೆಂಡತಿ , ಮಕ್ಕಳು ಬಲೆಯಲ್ಲಿ ಬಿದ್ದ ದುಃಖವನ್ನು ನೋಡಿ ಸಹಿಸದ ಗಂಡು ಪಾರಿವಾಳವು ಬಲೆಯಲ್ಲಿ ಬಿದ್ದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಮರಿಗಳ ಮೇಲಿನ ಕುರುಡು ವಾತ್ಸಲ್ಯ , ಮಮತೆಯಿಂದ ತಾಯಿ ಪಾರಿವಾಳ , ಹೆಂಡತಿ , ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದುಕೊಂಡು ಪಾರಿವಾಳ ಕುಟುಂಬ ನಾಶವಾಗಿರುವುದನ್ನು ಕವಿ ಸ್ವಾರಸ್ಯ ಪೂರ್ಣವಾಗಿ ಹೇಳಿದ್ದಾರೆ .

2. “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ

” ಆಯ್ಕೆ : ಈ ವಾಕ್ಯವನ್ನು ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಬೇಡನು ಹಾಕಿದ ಬಲೆಗೆ ಸಿಲುಕಿದ ಪುಟ್ಟ ಮರಿಗಳನ್ನು ಕಂಡ ತಂದೆ – ತಾಯಿ ಪಾರಿವಾಳಗಳು ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು .

ಮೋಹ ಎಂಬುದು ಸರ್ವನಾಶಕ್ಕೆ ಕಾರಣ ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯ ಸಾಧನೆ ಮಾಡಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಮಕ್ಕಳು ಮರಿ , ಹೆಂಡತಿ , ನನ್ನ ಕುಟುಂಬ ಎಂಬ ವ್ಯಾಮೋಹದಿಂದ ಬದುಕಿದರೆ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ . ಎಂಬುದನ್ನು ಕವಿ ಸ್ವಾರಸ್ಯ ಪೂರ್ಣವಾಗಿ ವಿವರಿಸಿದ್ದಾರೆ .

ಭಾಷಾ ಚಟುವಟಿಕೆ

1 .ರೂಪಕಾಲಂಕಾರವನ್ನು ನಿದರ್ಶನದ ಮೂಲಕ ವಿವರಿಸಿ

ಲಕ್ಷಣ : ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ

ಉದಾ : ಸೀತೆಯ ಮುಖ ಕಮಲ ಅರಳಿತು

ಉಪಮೇಯ :  ಸೀತೆಯ ಮುಖ

ಉಪಮಾನ : ಕಮಲ

ಅಲಂಕಾರ : ರೂಪಕಾಲಂಕಾರ

ಸಮನ್ವಯ : ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ರೂಪಿಸಿದೆ ಹಾಗಾಗಿ ಸಮನ್ವಯ ಇದು ರೂಪಕಾಲಂಕಾರ

2 , “ಸಾವಿತ್ರಿಯ ಮುಖಕಮಲ ಅರಳಿತು” ಇಲ್ಲಿರುವ ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿರಿ

ಲಕ್ಷಣ : ಉಪಮೇಯ, ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ ,

ಉಪಮೇಯ : ಸಾವಿತ್ರಿಯ ಮುಖ

ಉಪಮಾನ : ಕಮಲ

ಅಲಂಕಾರ : ರೂಪಕಾಲಂಕಾರ

ಸಮನ್ವಯ : ಉಪಮೇಯವಾದ ಸಾವಿತ್ರಿಯ ಮುಖವನ್ನು ಉಪಮಾನವಾದ ಕಮಲ ಕೈ ಅಭೇದವಾಗಿ ರೂಪಿಸಿದೆ . ಹಾಗಾಗಿ ಇದು ರೂಪಕಾಲಂಕಾರ

3,  “ಶಾಲೆಗೆ ಈ ವಿದ್ಯಾರ್ಥಿಯೊಂದು ರತ್ನ” 

ಲಕ್ಷಣ : ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ

ಉಪಮೇಯ : ವಿದ್ಯಾರ್ಥಿ

ಉಪಮಾನ   :  ರತ್ನ

ಅಲಂಕಾರ    : ರೂಪಕಾಲಂಕಾರ

ಸಮನ್ವಯ    : ಉಪಮೇಯವಾದ ವಿದ್ಯಾರ್ಥಿಯನ್ನು ಉಪಮಾನವಾದ ರತ್ನ ಕೈ ಅಭೇದವಾಗಿ ರೂಪಿಸಿದೆ . ಹಾಗಾಗಿ ಇದು ರೂಪಕಾಲಂಕಾರ ,,

4, ” ಮನೆಯೇ ಧರ್ಮಾಶ್ರಮ “

ಲಕ್ಷಣ            :          ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ

ಉಪಮೇಯ   :          ಮನೆ

ಉಪಮಾನ     :          ಧರ್ಮಾಶ್ರಮ

ಅಲಂಕಾರ     :          ರೂಪಕಾಲಂಕಾರ

ಸಮನ್ವಯ     :          ಉಪಮೇಯವಾದ ಮನೆಯನ್ನು ಉಪಮಾನವಾದ ಧರ್ಮಾಶ್ರಮಕ್ಕೆ ಅಭೇದವಾಗಿ ರೂಪಿಸಿದೆ ಹಾಗಾಗಿ ಇದು                                                     ರೂಪಕಾಲಂಕಾರ

5. ‘ ಪಾರಿವಾಳ ‘ ಪದ್ಯದಲ್ಲಿರುವ ಅಂತ್ಯಪ್ರಾಸ ಪದಗಳನ್ನು ಪಟ್ಟಿಮಾಡಿ .

ಹೂಡಿ   –   ಜೋಡಿ

ಒಂದನೊಂದು  –  ಬಂದು

ಕೇಳಿ                  –   ಬಾಳಿ

ಸೆರೆಗೆ                  –   ಹೊರಗೆ

ಹಕ್ಕಿ                    –  ಬಿಕ್ಕಿ

ಹಿಂಡು                –   ಕೊಂಡು

ಬಾಳಬೇಕು           –   ತಾಳಬೇಕು

ಆ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.

1. ದಟ್ಟ ಕಾಡಿನಲೊಂದು…………….ಪಾರಿವಾಳಗಳ ಜೋಡಿ

2. ಹಗಲಿರುಳು…………… ಹೊದರಿನಲ್ಲಿ ಬಂದು .

ದಟ್ಟ ಕಾಡಿನಲೊಂದು ಹೆಮ್ಮರದ ಹೊದರಿನಲಿ

ಇರುತಿತ್ತು ಪುಟ್ಟ ಸಂಸಾರ ಹೂಡಿ

ಮುದ್ದು ಬಿಳಿ ಪಾರಿವಾಳಗಳ ಜೋಡಿ ……

ಹಗಲಿರುಳು ಜೊತೆಗೂಡಿ ಬಾಳಿದವು ಈ ಜೋಡಿ

ಎಂದಿಗೂ ಅಗಲಿರವು ಒಂದನೊಂದು

ಹಿಗ್ಗು ತುಂಬಿತು ಹೊದರಿನಲ್ಲಿ ಬಂದು

FAQ :

1. ಏನನ್ನು ತೊರೆದು ಬಾಳಬೇಕು ?

ಉತ್ತರ : ವ್ಯಾಮೋಹವನ್ನು ತೊರೆದು ಬಾಳಬೇಕು .

2. ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು ?

ಉತ್ತರ  : ಹಗಲಿರುಳು ಒಂದನ್ನೊಂದು ಬಿಟ್ಟಿರದೆ ಜೊತೆಗೂಡಿ ಬಾಳುತ್ತಿದ್ದವು

ಇತರೆ ವಿಷಯಗಳು:

9th Standard All Subject Notes

9th Standard Kannada Textbook karnataka Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh