9ನೇ ತರಗತಿ ವಿಜ್ಞಾನ ಅಂಗಾಂಶಗಳು ನೋಟ್ಸ್ ಪ್ರಶ್ನೆ ಉತ್ತರಗಳು Pdf, 9th Standard Science Chapter 6 Notes Question Answer Mcq Pdf in Kannada Medium 2023 Kseeb Solutions For Class 9 Science Chapter 6 Notes in Kannada 9th science angamshagalu notes Class 9 Science 6th Lesson Notes Pdf
9th Standard Science Chapter 6 Notes
1. ಅಂಗಾಶ ಎಂದರೇನು?
ಒಂದೇ ರೀತಿಯ ರಚನೆ ಮತ್ತು ಒಂದು ನಿರ್ದಿಷ್ಟ ಕಾರ್ಯವನ್ನು ಪೂರೈಸಲು ಒಟ್ಟಿಗೇ ಕೆಲಸ ಮಾಡುವ ಒಂದು ಗುಂಪು ಜೀವಕೋಶಗಳ ಗುಂಪನ್ನು ಅಂಗಾಂಶ ಎನ್ನುವರು.
2. ಬಹುಕೋಶೀಯ ಜೀವಿಗಳಲ್ಲಿ ಅಂಗಾಂಶಗಳ ಉಪಯುಕ್ತತೆ ಏನು?
ಮೂಲಭೂತ ಕ್ರಿಯೆಗಳಾದ ಚಲನೆ, ಆಹಾರ ಮತ್ತು ಉಸಿರಾಟದ ಅನಿಲಗಳ ಸೇವನೆ, ಉಸಿರಾಟ ಮತ್ತು ವಿಸರ್ಜನೆ ಕ್ರಿಯೆಗಳನ್ನು ನಿರ್ವಹಿಸಲು ಬಹುಕೋಶೀಯ ಜೀವಿಗಳಲ್ಲಿ ಲಕ್ಷಾಂತರ ಜೀವಕೋಶಗಳಿವೆ. ಇವುಗಳಲ್ಲಿ ಬಹುತೇಕ ಜೀವಕೋಶಗಳು ಕೆಲವು ಕ್ರಿಯೆಗಳನ್ನು ನಿರ್ವಹಿಸಲು ವೈಶಿಷ್ಟ್ಯತೆಯನ್ನು ಪಡೆದಿವೆ. ವಿಶಿಷ್ಟ ಕ್ರಿಯೆಗಳನ್ನು ವಿಭಿನ್ನ ಜೀವಕೋಶಗಳ ಗುಂಪು ನಿರ್ವಹಿಸುತ್ತದೆ. ಜೀವಕೋಶಗಳು ಒಂದು ನಿರ್ದಿಷ್ಟ ಕ್ರಿಯೆಯನ್ನು ಮಾತ್ರ ನಿರ್ವಹಿಸಬಲ್ಲವಾದ್ದರಿಂದ ಕಾರ್ಯವನ್ನು ಬಹು ಸಮರ್ಥವಾಗಿ ಮಾಡುತ್ತವೆ.
ಉದಾಹರಣೆಗೆ, ಮನುಷ್ಯರಲ್ಲಿ ಸ್ನಾಯುಕೋಶಗಳ ಸಂಕುಚನ ಮತ್ತು ವಿಕಸನ ಚಲನೆಗೆ ಕಾರಣವಾಗುತ್ತದೆ, ನರಕೋಶಗಳು ಸಂದೇಶವನ್ನು ಒಯ್ಯುತ್ತವೆ, ಆಕ್ಸಿಜನ್, ಆಹಾರ, ಹಾರ್ಮೋನ್‌ಗಳು ಮತ್ತು ವ್ಯರ್ಥ ಪದಾರ್ಥಗಳನ್ನು ಸಾಗಿಸಲು ರಕ್ತವು ಹರಿಯುತ್ತದೆ. ಹೀಗೆ ಅನೇಕ ಕ್ರಿಯೆಗಳು ನಡೆಯುತ್ತವೆ ಸಸ್ಯಗಳಲ್ಲಿ ವಾಹಕ ಅಂಗಾಂಶಗಳು ಆಹಾರ ಮತ್ತು ನೀರನ್ನು ಸಸ್ಯದ ಒಂದು ಭಾಗದಿಂದ ಇತರ ಭಾಗಗಳಿಗೆ ಸಾಗಿಸುತ್ತವೆ. ಹೀಗೆ ಬಹುಕೋಶೀಯ ಜೀವಿಗಳಲ್ಲಿ ಕಾರ್ಯದ ಹಂಚಿಕೆ ಕಂಡು ಬರುತ್ತದೆ.
3. ಅನುಲೇಪಕ ಅಂಗಾಂಶ ಎಂದರೇನು?
ಪ್ರಾಣಿಗಳ ದೇಹವನ್ನು ಆವರಿಸಿರುವ ಅಥವಾ ರಕ್ಷಣಾತ್ಮಕ ಅಂಗಾಂಶಗಳನ್ನು ಆನುಲೇಪಕ ಅಂಗಾಂಶಗಳು (Epithelial tissue) ಎನ್ನುವರು.
4. ಅನುಲೇಪಕ ಅಂಗಾಂಶದ ಕಾರ್ಯಗಳು ಏನು?
- ಅನುಲೇಪಕವು ದೇಹದೊಳಗಿನ ಬಹುತೇಕ ಅಂಗಗಳು ಮತ್ತು ಕುಹರಗಳನ್ನು ಹೊದಿಕೆಯಾಗಿ ಆವರಿಸಿದೆ.
- ಅನುಲೇಪಕ ಅಂಗಾಂಶವು ದೇಹದ ವಿವಿಧ ಅಂಗವ್ಯೂಹಗಳನ್ನು ಪ್ರತ್ಯೇಕವಾಗಿಡಲು ತಡೆಗೋಡೆಗಳನ್ನೂ ನಿರ್ಮಿಸುತ್ತದೆ.
- ಚರ್ಮ, ಬಾಯಿಯ ಪದರ, ರಕ್ತನಾಳಗಳನ್ನು ಆವರಿಸಿದ ಪದರ, ಶ್ವಾಸಕೋಶದಗಾಳಿಗೂಡುಗಳು ಮತ್ತು ಮೂತ್ರಪಿಂಡದ ನಾಳಗಳೆಲ್ಲವೂ ಅನುಲೇಪಕ ಅಂಗಾಂಶದಿಂದ ಮಾಡಲ್ಪಟ್ಟಿವೆ.
- ಅನುಲೇಪಕ ಅಂಗಾಂಶದ ಜೀವಕೋಶಗಳು ಒತ್ತಾಗಿ ಜೋಡಣೆಗೊಂಡು, ನಿರಂತರವಾದ ಪದರವನ್ನು ನಿರ್ಮಿಸಿವೆ. ಅವುಗಳು ತಮ್ಮ ನಡುವೆ ಕೇವಲ ಅಲ್ಪ ಪ್ರಮಾಣದ ಬಂಧಕ ವಸ್ತುವನ್ನು ಹೊಂದಿದ್ದು ಅಂತರಕೋಶೀಯ ಅವಕಾಶಗಳು ಬಹುತೇಕ ಇರುವುದಿಲ್ಲ.
- ಯಾವುದೇ ವಸ್ತು ಶರೀರವನ್ನು ಪ್ರವೇಶಿಸಲಿ ಆಥವಾ ಶರೀರದಿಂದ ಹೊರಹೋಗಲಿ ಅನುಲೇಪಕ ಅಂಗಾಂಶದಪದರವನ್ನು ಹಾದುಹೋಗಲೇಬೇಕಾಗುತ್ತದೆ.
- •ಅನುಲೇಪಕ ಅಂಗಾಂಶವು ದೇಹದ ವಿವಿಧ ಭಾಗಗಳ ನಡುವೆ ವಸ್ತುಗಳ ವಿನಿಮಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
5. ಅನುಲೇಪಕ ಅಂಗಾಂಶದ ವಿಧಗಳು ಯಾವುವು?
1. ಸರಳ ಚಪ್ಪಟೆ ಅನುಲೇಪಕ ಅಂಗಾಂಶ (simple sugamous epithelium)
2. ಸ್ತರೀಕೃತ ಚಪ್ಪಟೆ ಅನುಲೇಪಕ ಅಂಗಾಂಶ (tratified squamous epithelium)
3. ಕಶಾಂಗ ಸಹಿತ ಸಂಭಾಕೃತಿ ಅನುಲೇಪಕ ಅಂಗಾಂಶ (ciliated columnar epithelium)
4. ಗ್ರಂಥಿ ಅನುಲೇಪಕ ಅಂಗಾಂಶ (glandular epithelium)
6. ಸರಳ ಅಂಗಾಂಶದ ವಿಧಗಳನ್ನು ಹೆಸರಿಸಿ.
ಸರಳ ಅಂಗಾಂಶದ ವಿಧಗಳು- ಪೇರಂಕೈಮ ಅಂಗಾಂಶ, ಕೋಲಂಕೈಮ ಅಂಗಾಂಶ, ಸ್ಕ್ಲೀರಂಕೈಮ ಅಂಗಾಂಶ
7. ತುದಿ ವರ್ಧನ ಅಂಗಾಂಶ ಎಲ್ಲಿ ಕಂಡು ಬರುತ್ತದೆ?
ತುದಿ ವರ್ಧನ ಅಂಗಾಂಶವು ಬೆಳೆಯುತ್ತಿರುವ ಕಾಂಡ ಮತ್ತು ಬೇರುಗಳ ತುದಿಗಳಲ್ಲಿ ಕಂಡು ಬರುತ್ತದೆ. ತುದಿ ವರ್ಧನ ಕಾಂಡ ಹಾಗೂ ಬೇರುಗಳ ಉದ್ದವನ್ನು ಹೆಚ್ಚಿಸುತ್ತದೆ.
8. ತೆಂಗಿನಕಾಯಿಯ ಸಿಪ್ಪೆಯು ಯಾವ ಅಂಗಾಂಶದಿಂದ ಉಂಟಾಗಿದೆ?
ತೆಂಗಿನಕಾಯಿಯ ಸಿಪ್ಪೆಯು ಸ್ಕ್ಲೀರಂಕೈಮ ಅಂಗಾಂಶದಿಂದ ಉಂಟಾಗಿದೆ.
9. ಫ್ಲೋಯಂನ ಘಟಕಗಳು ಯಾವುವು?
ಫ್ಲೋಯಂ ನಾಲ್ಕು ವಿಧದ ಘಟಕಗಳಾದ
1.ಜರಡಿನಾಳಗಳು,
2.ಸಂಗಾತಿ ಕೋಶಗಳು,
3.ಫ್ಲೋಯಂ ನಾರುಗಳು ಮತ್ತು
4.ಫ್ಲೋಯಂ ಪೇರಂಕೈಮ ಕೋಶಗಳಿಂದ ಆಗಿದೆ.
10. ‘ಆಂಗಾಂಶ’ ಪದಕ್ಕೆ ನಿರೂಪಣೆ ಕೊಡಿ.
ಒಂದೇ ರೀತಿಯ ರಚನೆಯುಳ್ಳ ಮತ್ತು ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುವ ಜೀವಕೋಶಗಳ ಗುಂಪಿಗೆ ಅಂಗಾಂಶ ಎನ್ನುವರು.
11. ಎಷ್ಟು ವಿಧದ ಘಟಕಗಳು ಕೂಡಿ ಶೈಲಂ ಅಂಗಾಂಶವನ್ನು ರೂಪಿಸುತ್ತವೆ? ಅವುಗಳನ್ನು ಹೆಸರಿಸಿ,
ನಾಲ್ಕು ವಿಧದ ಘಟಕಗಳು ಕೂಡಿ ಶೈಲಂ ಅಂಗಾಂಶವನ್ನು ರೂಪಿಸುತ್ತವೆ.
ಅವುಗಳೆಂದರೆ – ಟ್ರೇಕಿಡ್‌ಗಳು, ನಾಳಗಳು, ಶೈಲಂ ಪೇರಂಕೈಮ ಮತ್ತು ಶೈಲಂ ನಾರುಗಳು
12. ಸಸ್ಯಗಳಲ್ಲಿನ ಸರಳ ಶಾಶ್ವತ ಅಂಗಾಂಶಗಳು ಸಂಕಿರ್ಣ ಶಾಶ್ವತ ಅಂಗಾಂಶಗಳಿಗಿಂತ ಹೇಗೆ ಭಿನ್ನವಾಗಿವೆ?
ಸರಳ ಶಾಶ್ವತ ಅಂಗಾಂಶಗಳೆಲ್ಲ ಪರಸ್ಪರ ಒಂದೇ ರೀತಿ ಕಾಣುವ ಒಂದು ವಿಧದ ಜೀವಕೋಶಗಳಿಂದ ಮಾಡಲ್ಪಟ್ಟಿವೆ.
ಸಂಕೀರ್ಣ ಶಾಶ್ವತ ಅಂಗಾಂಶಗಳು ಒಂದಕ್ಕಿಂತ ಹೆಚ್ಚು ವಿಧದ ಜೀವಕೋಶಗಳಿಂದಾಗಿವೆ.ಈ ಎಲ್ಲಾ ಜೀವಕೋಶಗಳು
ಸಮನ್ವಯ ಸಾಧಿಸಿ ಒಂದು ಸಾಮಾನ್ಯ ಕಾರ್ಯವನ್ನು ನಿರ್ವಹಿಸುತ್ತವೆ.
13. ಪೇರಂಕೈಮ ಅಂಗಾಂಶ, ಕೋಲಂಕೈಮ ಅಂಗಾಂಶ, ಸ್ಕ್ಲೀರಂಕೈಮ ಅಂಗಾಂಶಗಳ ನಡುವಿನ ವ್ಯತ್ಯಾಸಗಳನ್ನು ಅವುಗಳ ಕೋಶಭಿತ್ತಿಯ ಆಧಾರದ ಮೇಲೆ ಪಟ್ಟಿ ಮಾಡಿ,
14. ಪತ್ರ ರಂಧ್ರಗಳ ಕಾರ್ಯಗಳೇನು?
ವಾತಾವರಣದಿಂದ ಅನಿಲಗಳ ವಿನಿಮಯ ಪ್ರಕ್ರಿಯೆಗೆ ಪತ್ರರಂಧ್ರಗಳ ಆಗತ್ಯವಿದೆ. ಬಾಷ್ಪ ವಿಸರ್ಜನೆ (transpiration) (ನೀರಾವಿಯ ರೂಪದಲ್ಲಿ ಸಸ್ಯದೇಹದಿಂದ ನೀರಿನ ನಷ್ಟವಾಗುವಿಕೆ) ಕೂಡಾ ಪತ್ರರಂಧ್ರಗಳ ಮೂಲಕವೇ ಜರುಗುತ್ತದೆ.
15. ಮೂರು ವಿಧದ ಸ್ನಾಯುತಂತುಗಳ ನಡುವಿನ ವ್ಯತ್ಯಾಸಗಳನ್ನು ಚಿತ್ರದ ಮೂಲಕ ತೋರಿಸಿ,
16. ಹೃದಯ ಸ್ನಾಯುಗಳ ನಿರ್ದಿಷ್ಟ ಕಾರ್ಯವೇನು?
ಹೃದಯ ಸ್ನಾಯುಗಳು ಅತ್ಯಂತ ಲಯಬದ್ಧವಾದ ಸಂಕುಚನ ಮತ್ತು ವಿಕಸನಗಳನ್ನು ಜೀವಮಾನವಿಡೀ ತೋರುತ್ತವೆ.
17. ಪಟ್ಟೆ ಸಹಿತ ಸ್ನಾಯುಗಳು, ಪಟ್ಟೆ ರಹಿತ ಸ್ನಾಯುಗಳು ಮತ್ತು ಹೃದಯ ಸ್ನಾಯುಗಳ ನಡುವಿನ ವ್ಯತ್ಯಾಸಗಳನ್ನು ಅವುಗಳ ರಚನೆ ಮತ್ತು ನಮ್ಮ ದೇಹದಲ್ಲಿ ಅವುಗಳ ಸ್ಥಾನವನ್ನು ಆಧರಿಸಿ ಬರೆಯಿರಿ.
18. ಒಂದು ನರಕೋಶದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.
19. ಈ ಕೆಳಗಿನವುಗಳನ್ನು ಹೆಸರಿಸಿ.
(a) ನಮ್ಮ ಬಾಯಿಯ ಒಳಗೋಡೆಯನ್ನು ಆವರಿಸಿದ ಅಂಗಾಂಶ – ಅನುಲೇಪಕ ಅಂಗಾಂಶ
(b) ಮನುಷ್ಯರಲ್ಲಿ ಸ್ನಾಯುಗಳನ್ನು ಮೂಳೆಗಳಿಗೆ ಬಂಧಿಸುವ ಅಂಗಾಂತ * ಸ್ನಾಯುರಜ್ಜು
(C) ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ → ಫ್ಲೋಯಂ
(d) ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಿಸುವ ಅಂಗಾಂಶ ಆಡಿಪೋಸ್ ಅಂಗಾಂಶ
(e) ದ್ರವ ಮಾತೃಕೆ ಹೊಂದಿರುವ ಸಂಯೋಜಕ ಅಂಗಾಂಶ -ರಕ್ತ
(f) ಮಿದುಳಿನಲ್ಲಿ ಕಂಡುಬರುವ ಅಂಗಾಂಶ → ನರ ಅಂಗಾಂಶ
20. ಈ ಕೆಳಗಿನವುಗಳಲ್ಲಿರುವ ಅಂಗಾಂಶದ ವಿಧವನ್ನು ಗುರುತಿಸಿ
1) ಚರ್ಮ- ಅನುಲೇಪಕ ಅಂಗಾಂಶ
2) ಮರದ ತೊಗಟೆ – ಎಪಿಡರ್ಮಿಸ್ ಅಂಗಾಂಶ
3) ಮೂಳೆ – ಸಂಯೋಜಕ ಅಂಗಾಂಶ
4) ಮೂತ್ರನಾಳದ ಒಳಸ್ತತಿ ಆವರಿಸಿದ ಅಂಗಾಂಶ – ಘನಾಕೃತಿ ಅನುಲೇಪಕ ಅಂಗಾಂಶ
5) ನಾಳೆ ಕೂರ್ಚಗಳು – ಸ್ತ್ರೀರಂಕೈಮ
21. ಪೇರಂಕೈಮ ಅಂಗಾಂಶ ಕಂಡುಬರುವ ಭಾಗಗಳನ್ನು ಹೆಸರಿಸಿ,
ಸಸ್ಯದ ಬೆಳವಣಿಗೆ ಹೊಂದುವ ಮೃದು ಭಾಗಗಳಾದ ಕಾಂಡದ ತುದಿ,ಬೇರಿನ ತುದಿ,ಮೊಗ್ಗು ಮುಂತಾದವುಗಳಲ್ಲಿ ಕಂಡು ಬರುತ್ತದೆ.
22. ಸಸ್ಯಗಳಲ್ಲಿ ಎಪಿಡರ್ಮಿಸ್‌ನ ಪಾತ್ರವೇನು?
- ಸಸ್ಯದ ಅತ್ಯಂತ ಹೊರಪದರದ ಜೀವಕೋಶಗಳನ್ನು ಎಪಿಡರ್ಮಿಸ್ ಎನ್ನುವರು
- ಎಪಿಡರ್ಮಿಸ್ ಸಾಮಾನ್ಯವಾಗಿ ಒಂದೇ ಪದರದ ಜೀವಕೋಶಗಳಿಂದ ಮಾಡಲ್ಪಟ್ಟಿದೆ.
- ಒಂದು ಸಸ್ಯದ ಸಂಪೂರ್ಣ ಹೊರಮ್ಮ ಎಪಿಡರ್ಮಿಸ್ ಎಂಬ ಈ ಹೊರ ಹೊದಿಕೆಯನ್ನು ಹೊಂದಿದೆ. ಇದು ಸಸ್ಯದ ಎಲ್ಲಾ ಭಾಗಗಳನ್ನು ರಕ್ಷಿಸುತ್ತದೆ.
- ಸಸ್ಯದ ಹೊರಭಾಗದಲ್ಲಿ ಕಂಡುಬರುವ ಎಪಿಡರ್ಮಲ್ ಜೀವಕೋಶಗಳು ನೀರನ್ನು ಪ್ರತಿರೋಧಿಸುವ ಮೇಣದಂತಹ ಪದಾರ್ಥವನ್ನು ತಮ್ಮ ಹೊರಪದರದಲ್ಲಿ ಸ್ರವಿಸುತ್ತವೆ. ಇದು ನೀರಿನ ನಷ್ಟದ ವಿರುದ್ಧಯಾಂತ್ರಿಕ ಆಘಾತಗಳಿಂದ ಮತ್ತು ಪರೋಪಜೀವಿ ಶಿಲೀಂಧ್ರಗಳ ಆಕ್ರಮಣದಿಂದ ರಕ್ಷಣೆಯನ್ನು ಒದಗಿಸುತ್ತದೆ.
- ರಕ್ಷಣಾತ್ಮಕ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಎಪಿಡರ್ಮಲ್ ಆಂಗಾಂಶವು ಯಾವುದೇ ಅಂತರಕೋಶೀಯ ಅವಕಾಶಗಳಿಲ್ಲದ ಉದ್ದನೆಯ ಪದರವನ್ನು ಸಸ್ಯದ ಹೊರಮೈನಲ್ಲಿ ಉಂಟುಮಾಡುತ್ತದೆ.
- ನೀರನ್ನು ಹೀರಿಕೊಳ್ಳುವ ಕಾರ್ಯವೇ ಪ್ರಧಾನವಾಗಿರುವ ಬೇರಿನ ಎಪಿಡರ್ಮಲ್ ಜೀವಕೋಶಗಳು ಸಾಮಾನ್ಯವಾಗಿ ಉದ್ದನೆಯ ಕೂದಲಿನಂತಹ ರಚನೆಗಳನ್ನು ಹೊಂದಿರುತ್ತವೆ. ಇವು ನೀರನ್ನು ಹೀರುವ ಮೇಲ್ಮ ಪ್ರದೇಶವನ್ನು ಬಹಳಷ್ಟು ಹೆಚ್ಚಿಸುತ್ತವೆ.
- ಕೆಲವು ಮರುಭೂಮಿ ಸಸ್ಯಗಳಲ್ಲಿ ಎಪಿಡರ್ಮಿಸ್‌ನ ಹೊರಪದರವು ಕ್ಯೂಟಿನ್‌ನಿಂದಾದ ದಪ್ಪ ಮೇಣದಂತಹ ಪದರವನ್ನು ಹೊಂದಿದೆ.
23. ತೊಗಟೆಯು ರಕ್ಷಣಾತ್ಮಕ ಅಂಗಾಂಶವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಸಸ್ಯಗಳು ಬೆಳೆದು ಪ್ರೌಢವಾಗುತ್ತಿದ್ದಂತೆಯೇ ಹೊರಗಿನ ರಕ್ಷಣಾತ್ಮಕ ಅಂಗಾಂಶವು ಕೆಲವು ಬದಲಾವಣೆಗಳಿಗೆ ಒಳಪಡುತ್ತದೆ. ದ್ವಿತೀಯಕ ವರ್ಧನ ಅಂಗಾಂಶದ ಒಂದು ಪಟ್ಟಿಯು ಕಾಂಡದ ಎಪಿಡರ್ಮಿಸ್ ಅಂಗಾಂಶವನ್ನು ಬದಲಿಸುತ್ತದೆ. ಸಸ್ಯದ ಹೊರಭಾಗದ ಜೀವಕೋಶಗಳು ಈ ಪದರದಿಂದ ಉಂಟಾಗುತ್ತವೆ.ಇದು ಹಲವಾರು ಪದರಗಳುಳ್ಳ ದಪ್ಪವಾದ ಮರದ ತೊಗಟೆಯನ್ನು ಉಂಟುಮಾಡುತ್ತದೆ.
ತೊಗಟೆಯ ಜೀವಕೋಶಗಳು ನಿರ್ಜೀವವಾಗಿದ್ದು, ಯಾವುದೇ ಆಂತರಕೋಶೀಯ ಅವಕಾಶಗಳಿಲ್ಲದಂತೆ ಒತ್ತಾಗಿ ಜೋಡಣೆಗೊಂಡಿರುತ್ತವೆ. ತೊಗಟೆಯ ಪದರಗಳಲ್ಲಿ ಸೂಬರಿನ್ (Suberin) ಎಂಬ ರಾಸಾಯನಿಕ ಕೂಡಾ ಇದ್ದು, ಇದು ಕಾಂಡದೊಳಗೆ ಗಾಳಿ ಮತ್ತು ನೀರು ಏವೇಶಿಸದಂತೆ ತಡೆಯುತ್ತದೆ.
24. ಈ ಕೆಳಗಿನ ಕೋಷ್ಟಕವನ್ನು ಪೂರ್ಣಗೊಳಿಸಿ,
FAQ
ಪ್ರಾಣಿಗಳ ದೇಹವನ್ನು ಆವರಿಸಿರುವ ಅಥವಾ ರಕ್ಷಣಾತ್ಮಕ ಅಂಗಾಂಶಗಳನ್ನು ಆನುಲೇಪಕ ಅಂಗಾಂಶಗಳು (Epithelial tissue) ಎನ್ನುವರು.
ಒಂದೇ ರೀತಿಯ ರಚನೆ ಮತ್ತು ಒಂದು ನಿರ್ದಿಷ್ಟ ಕಾರ್ಯವನ್ನು ಪೂರೈಸಲು ಒಟ್ಟಿಗೇ ಕೆಲಸ ಮಾಡುವ ಒಂದು ಗುಂಪು ಜೀವಕೋಶಗಳ ಗುಂಪನ್ನು ಅಂಗಾಂಶ ಎನ್ನುವರು.
ಇತರೆ ವಿಷಯಗಳು:
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf