rtgh

9ನೇ ತರಗತಿ ಪರಮಾಣುವಿನ ರಚನೆ ವಿಜ್ಞಾನ ನೋಟ್ಸ್‌ | 9th Standard Science Chapter 4 Notes in Kannada Medium

9ನೇ ತರಗತಿ ಪರಮಾಣುವಿನ ರಚನೆ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 9th Standard Science Chapter 4 Notes Question Answer Mcq Pdf in Kannada Medium 2023 Kseeb Solutions For Class 9 Science Chapter 4 Notes in Kannada 9th Class Paramanuvina Rachane Science Notes Pdf class 9 chapter 4 science notes in kannada

 

9th Standard Science Chapter 4 Notes in Kannada

9th Standard Science Chapter 4 Notes in Kannada

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

1. ಐಸೋಬಾರ್‌ಗಳು ಎಂದರೇನು?

ಈ ಬೇರೆ ಬೇರೆ ಪರಮಾಣು ಸಂಖ್ಯೆಗಳು, ಒಂದೇ ಪರಮಾಣು ರಾಶಿ ಸಂಖ್ಯೆಯನ್ನು ಹೊಂದಿರುವ ಬೇರೆ ಬೇರೆ ಧಾತುಗಳ ಪರಮಾಣುಗಳನ್ನು ಐಸೋಬಾರ್‌ಗಳು ಎನ್ನುವರು.

ಉದಾಹರಣೆಗೆ, ಎರಡು ಧಾತುಗಳನ್ನು ಗಣನೆಗೆ ತೆಗೆದುಕೊಳ್ಳೋಣ ಕ್ಯಾಲ್ಸಿಯಂ, ಪರಮಾಣು ಸಂಖ್ಯೆ 20 ಮತ್ತು ಆರ್ಗಾನ್ ಪರಮಾಣು ಸಂಖ್ಯೆ 18. ಈ ಪರಮಾಣುಗಳ ಇಲೆಕ್ಟ್ರಾನ್ ಸಂಖ್ಯೆ ಬೇರೆಯಾಗಿರುತ್ತದೆ. ಆದರೆ ಈ ಎರಡು ಧಾತುಗಳ ರಾಶಿ ಸಂಖ್ಯೆಯು 40. ಈ ಜೋಡಿ ಧಾತುಗಳ ಆಣುಗಳಲ್ಲಿರುವ ನ್ಯೂಕ್ಲಿಯಾನ್‌ಗಳ ಸಂಖ್ಯೆಯು ಒಂದೇ ಆಗಿರುವುದು,

ಪಠ್ಯ ಚಿತ್ರಗಳು :

2. H, D ಮತ್ತು T ಎಂಬ ಸಂಕೇತಗಳಿಗೆ ಪ್ರತಿಯೊಂದರಲ್ಲಿರುವ ಮೂರು ಉಪಪರಮಾಣೀಯ ಕಣಗಳನ್ನು ಪಟ್ಟಿಮಾಡಿ,

3. ಯಾವುದೇ ಒಂದು ಜೊತೆ ಸಮಸ್ಥಾನಿಗಳು ಮತ್ತು ಐಸೋಬಾರ್‌ಗಳ ಇಲೆಕ್ಟ್ರಾನಿಕ್ ವಿನ್ಯಾಸ ಬರೆಯಿರಿ.

4. ಇಲೆಕ್ಟ್ರಾನ್, ಪ್ರೋಟಾನ್, ಮತ್ತು ನ್ಯೂಟ್ರಾನ್‌ಗಳ ಗುಣಲಕ್ಷಣಗಳನ್ನು ಹೋಲಿಕೆ ಮಾಡಿ,

5. ಜೆ.ಜೆ. ಥಾಮ್ಸನ್ ರವರ ಪರಮಾಣು ಮಾದರಿಯ ನ್ಯೂನತೆಗಳು ಯಾವುವು?

ಥಾಮ್ಸನ್ ರವರು ಪ್ರತಿಪಾದಿಸಿದ್ದೇನೆಂದರೆ, ಒಂದು ಪರಮಾಣುವು ಧನಾತ್ಮಕ ಆಂಶವಿರುವ ಗೋಳವನ್ನು ಒಳಗೊಂಡಿದೆ ಮತ್ತು ಅದರಲ್ಲಿ ಇಲೆಕ್ಟ್ರಾನ್‌ಗಳು ಹುದುಗಿರುತ್ತವೆ. ಆದರೆ ನಂತರದ ಪ್ರಯೋಗಗಳಲ್ಲಿ ಧನ ವಿದ್ಯುದಾವೇಶ ಕಣಗಳು ಅಂದರೆ ಪ್ರೋಟಾನ್‌ಗಳು ಪರಮಾಣುವಿನ ಬೀಜಕೇಂದ್ರದಲ್ಲಿ ಮತ್ತು ಇಲೆಕ್ಟ್ರಾನ್‌ಗಳು ಬೀಜಕೇಂದ್ರದ ಸುತ್ತ ಕಕ್ಷಕಗಳಲ್ಲಿ ಕಂಡು ಬಂದವು.

6. ರುದರ್ ಫೋರ್ಡ್‌ರವರ ಪರಮಾಣು ಮಾದರಿಯ ನ್ಯೂನತೆಗಳು ಯಾವುವು?

ವೃತ್ತಾಕಾರದ ಕಕ್ಷೆಯಲ್ಲಿ ಇಲೆಕ್ಟ್ರಾನ್‌ಗಳ ತಿರುಗುವಿಕೆ ಸ್ಥಿರವಾಗಿರುವುದು ಊಹಿಸಲು ಸಾಧ್ಯವಿಲ್ಲ. ಯಾವುದೇ ಕಣವು ವೃತ್ತಾಕಾರದ ಕಕ್ಷೆಯಲ್ಲಿ ಚಲಿಸುವಾಗ ವೇಗೋತ್ಕರ್ಷಕ್ಕೆ ಒಳಪಡುತ್ತದೆ. ವೇಗೋತ್ಕರ್ಷದ ಸಂದರ್ಭದಲ್ಲಿ ಆವೇಶಯುಕ್ತ ಕಣಗಳು ಶಕ್ತಿಯನ್ನು ಹೊರಸೂಸುತ್ತವೆ. ಹೀಗೆ, ತಿರುಗುವ ಇಲೆಕ್ಟ್ರಾನ್ ತನ್ನ ಶಕ್ತಿಯನ್ನು ಕಳೆದುಕೊಂಡು ಅಂತಿಮವಾಗಿ ನ್ಯೂಕ್ಲಿಯಸ್‌ನಲ್ಲಿ ಬೀಳುತ್ತದೆ. ಒಂದು ವೇಳೆ ಹೀಗಾದರೆ ಪರಮಾಣುವು ಆತ್ಯಂತ ಅಸ್ಥಿರವಾಗುವುದು

7.ಬೋರ್‌ರವರ ಪರಮಾಣು ಮಾದರಿಯನ್ನು ವಿವರಿಸಿ.

ನೀಲ್ಸ್ ಬೋರ್‌ರವರ ಪರಮಾಣು ಮಾದರಿ

ರುಧರ್‌ ಪೋರ್ಡ್‌ರವರ ಪರಮಾಣು ಮಾದರಿ ವಿರುದ್ಧ ಬಂದಂತಹ ಆಕ್ಷೇಪಣೆಗಳಿಂದ ಹೊರಬರಲು,ನೀಲ್ಸ್ ಬೋರ್‌ರವರು ಪರಮಾಣು ಮಾದರಿಯ ಕುರಿತು ಈ ಕೆಳಗಿನ ಸಮರ್ಥನೆಗಳನ್ನು ಮುಂದಿಟ್ಟರು:

(i) ಪರಮಾಣುವಿನಲ್ಲಿ ವಿವಕ್ತ ಕಕ್ಷೆ(discrete orbit) ಗಳೆಂಬ ವಿಶೇಷ ಕಕ್ಷೆಗಳಲ್ಲಷ್ಟೆ ಇಲೆಕ್ಟ್ರಾನುಗಳು ಇರಲು ಅವಕಾಶವಿದೆ.

(ii) ವಿವಕ್ತ ಕಕ್ಷೆಗಳಲ್ಲಿ ಇಲೆಕ್ಟ್ರಾನುಗಳು ಸುತ್ತುತ್ತಿರುವಾಗ ಶಕ್ತಿಯನ್ನು ಹೊರಸೂಸುವುದಿಲ್ಲ.

8. ಈ ಅಧ್ಯಾಯದಲ್ಲಿ ಪ್ರಸ್ತಾಪಿಸಲಾದ ಎಲ್ಲಾ ಪರಮಾಣು ಮಾದರಿಗಳನ್ನು ಹೋಲಿಸಿ.

9th Standard Science Chapter 4 Notes in Kannada


9.ವಿವಿಧ ಕವಚಗಳಲ್ಲಿ ಮೊದಲ ಹದಿನೆಂಟು ಧಾತುಗಳ ಇಲೆಕ್ಟ್ರಾನ್‌ಗಳ ಹಂಚಿಕೆಯನ್ನು ಬರೆಯುವ ನಿಯಮಗಳ ಸಾರಾಂಶವನ್ನು ಬರೆಯಿರಿ.

10. ಸಿಲಿಕಾನ್ ಮತ್ತು ಆಮ್ಲಜನಕವನ್ನು ಉದಾಹರಣೆ ತೆಗೆದುಕೊಳ್ಳವ ಮೂಲಕ ಧಾತುವಿನ ವೇಲೆನ್ಸಿಯನ್ನು ವ್ಯಾಖ್ಯಾನಿಸಿ,

  • ಈ ಪರಮಾಣುವಿನ ಅತ್ಯಂತ ಹೊರಕವಚದಲ್ಲಿರುವ ಇಲೆಕ್ಟ್ರಾನುಗಳನ್ನು ವೇಲೆನ್ಸ್ ಇಲೆಕ್ಟ್ರಾನುಗಳು ಎನ್ನುತ್ತಾರೆ.
  • ಒಂದು ಪರಮಾಣುವಿನ ಸಂಯೋಗ ಸಾಮರ್ಥ್ಯವೇ ವೇಲೆನ್ಸಿ.
  • ಪರಮಾಣುವಿನ ಅತ್ಯಂತ ಹೊರಕವಚದಲ್ಲಿರುವ ಇಲೆಕ್ಟ್ರಾನ್‌ಗಳ ಸಂಖ್ಯೆಯು 4 ಆಥವಾ 4ಕ್ಕಿಂತ ಕಡಿಮೆ ಇದ್ದರೆ, ಆಗ ವೇಲೆನ್ಸಿಯು ಪರಮಾಣುವಿನ ಅತ್ಯಂತ ಹೊರಕವಚದಲ್ಲಿರುವ ಇಲೆಕ್ಟ್ರಾನ್‌ಗಳ ಸಂಖ್ಯೆಗೆ ಸಮವಾಗಿರುತ್ತದೆ.
  • ಪರಮಾಣುವಿನ ಅತ್ಯಂತ ಹೊರಕವಚದಲ್ಲಿರುವ ಇಲೆಕ್ಟ್ರಾನ್‌ಗಳ ಸಂಖ್ಯೆಯು 4 ಅಥವಾ 4ಕ್ಕಿಂತ ಜಾಸ್ತಿ ಇದ್ದರೆ, ಆಗ ವೇಲೆನ್ಸಿಯನ್ನು ಅಷ್ಟಕದಿಂದ ಪರಮಾಣುವಿನ ಅತ್ಯಂತ ಹೊರಕವಚದಲ್ಲಿರುವ ಇಲೆಕ್ಟ್ರಾನ್‌ಗಳನ್ನು ಕಳೆಯುವುದರ ಮೂಲಕ ನಿರ್ಧರಿಸಬಹುದು.
  • ಉದಾಹರಣೆಗೆ, ಆಕ್ಸಿಜನ್ ಪರಮಾಣುಗಳು ತಮ್ಮ ಅತ್ಯಂತ ಹೊರಕವಚದಲ್ಲಿ ಆರು ಇಲೆಕ್ಟ್ರಾನ್ ಹೊಂದಿವೆ. ಆದ್ದರಿಂದ ಅವುಗಳ ವೇಲೆನ್ಸಿ (8 – 6 – 2) ಎರಡು ಎಂದು ಹೇಳಲಾಗುತ್ತದೆ.

11. ಉದಾಹರಣೆಗಳೊಂದಿಗೆ ವಿವರಿಸಿ,

(i) ಪರಮಾಣು ಸಂಖ್ಯೆ (ii) ರಾಶಿ ಸಂಖ್ಯೆ (iii) ಸಮಸ್ಥಾನಿಗಳು ಮತ್ತು (iv) ಐಸೋಬಾರ್‌ಗಳು ಸಮಸ್ಥಾನಿಗಳ ಯಾವುದಾದರೂ ಎರಡು ಉಪಯೋಗಗಳನ್ನು ತಿಳಿಸಿ.

ಪರಮಾಣು ಸಂಖ್ಯೆ:

  • ಪರಮಾಣುವಿನ ಬೀಜಕೇಂದ್ರದಲ್ಲಿರುವ ಪ್ರೋಟಾನ್‌ಗಳ ಒಟ್ಟು ಸಂಖ್ಯೆಯನ್ನು ಪರಮಾಣು ಸಂಖ್ಯೆ ಎನ್ನುವರು.
  • ಪರಮಾಣು ಸಂಖ್ಯೆಯನ್ನು `Z’ ಎಂಬ ಸಂಕೇತದಿಂದ ಸೂಚಿಸುತ್ತಾರೆ.
  • ಉದಾಹರಣೆಗೆ,ಕಾರ್ಬನ್‌ನಲ್ಲಿರುವ ಒಟ್ಟು ಪ್ರೋಟಾನ್‌ಗಳು 6, ಆದುದರಿಂದ ಕಾರ್ಬನ್ ಪರಮಾಣು ಸಂಖ್ಯೆ 6,

ಪರಮಾಣು ರಾಶಿ ಸಂಖ್ಯೆ :

ಪರಮಾಣುವಿನ ಬೀಜಕೇಂದ್ರದಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳ ಒಟ್ಟು ಮೊತ್ತವನ್ನು ರಾಶಿ ಸಂಖ್ಯೆ ಎನ್ನುವರು.

  • ಪರಮಾಣು ರಾಶಿ ಸಂಖ್ಯೆಯನ್ನು ‘A’ ಎಂಬ ಸಂಕೇತದಿಂದ ಸೂಚಿಸುತ್ತಾರೆ.
  • ಉದಾಹರಣೆಗೆ, ಕಾರ್ಬನ್‌ನ ರಾಶಿಯು 121, ಏಕೆಂದರೆ ಅದು 6 ಪ್ರೋಟಾನ್ ಮತ್ತು 6 ನ್ಯೂಟ್ರಾನ್‌ಗಳನ್ನು ಹೊಂದಿದೆ.

ಸಮಸ್ಥಾನಿಗಳು ಅಥವಾ ಐಸೋಟೋಪಗಳು :

  • ಒಂದೇ ಪರಮಾಣು ಸಂಖ್ಯೆಯನ್ನು ಆದರೆ ಬೇರೆ ಬೇರೆ ರಾಶಿ ಸಂಖ್ಯೆಯನ್ನು ಹೊಂದಿರುವ ಒಂದೇ ಧಾತುವಿನ ಪರಮಾಣುಗಳನ್ನು ಸಮಸ್ಥಾನಿಗಳು ಎನ್ನುವರು.
  • ಉದಾಹರಣೆಗೆ, ಹೈಡೋಜನ್ ಸಮಸ್ಥಾನಿಗಳು

ಐಸೋಬಾರ್‌ಗಳು :

  • ಬೇರೆ ಬೇರೆ ಪರಮಾಣು ಸಂಖ್ಯೆಗಳು, ಒಂದೇ ಪರಮಾಣು ರಾಶಿ ಸಂಖ್ಯೆಯನ್ನು ಹೊಂದಿರುವ ಬೇರೆ ಬೇರೆ ಧಾತುಗಳ ಪರಮಾಣುಗಳನ್ನು ಐಸೋಬಾರ್‌ಗಳು ಎನ್ನುವರು.
  • ಉದಾಹರಣೆಗೆ, ಎರಡು ಧಾತುಗಳನ್ನು ಗಣನೆಗೆ ತೆಗೆದುಕೊಳ್ಳೋಣ ಕ್ಯಾಲ್ಸಿಯಂ, ಪರಮಾಣು ಸಂಖ್ಯೆ 20 ಮತ್ತು ಆರ್ಗಾನ್ ಪರಮಾಣು ಸಂಖ್ಯೆ 18.
  • ಈ ಪರಮಾಣುಗಳ ಇಲೆಕ್ಟ್ರಾನ್ ಸಂಖ್ಯೆ ಬೇರೆಯಾಗಿರುತ್ತದೆ. ಆದರೆ ಈ ಎರಡು ಧಾತುಗಳ ರಾಶಿ ಸಂಖ್ಯೆಯು 40. ಈ ಜೋಡಿ ಧಾತುಗಳ ಆಣುಗಳಲ್ಲಿರುವ ನ್ಯೂಕ್ಲಿಯಾನ್‌ಗಳ ಸಂಖ್ಯೆಯು ಒಂದೇ ಆಗಿರುವುದು.

12. ಸಮಸ್ಥಾನಿಗಳ ಉಪಯೋಗಗಳು ಯಾವುವು?

  • ಕೆಲವು ಸಮಸ್ಥಾನಿಗಳು ಹೊಂದಿರುವ ವಿಶೇಷ ಗುಣಗಳಿಂದ ವಿವಿಧ ಕ್ಷೇತ್ರಗಳಲ್ಲಿ ಉಪಯುಕ್ತತೆಯನ್ನು ಹೊಂದಿವೆ. ಅವುಗಳೆಂದರೆ
  • ಯುರೇನಿಯಂನ ಸಮಸ್ಥಾನಿಯೊಂದನ್ನು ನ್ಯೂಕ್ಲೀಯ ಕ್ರಿಯಾಕಾರಿಯಲ್ಲಿ ಇಂಧನವಾಗಿ ಬಳಸುತ್ತಾರೆ.
  • ಕೋಬಾಲ್ಟ್‌ ನ ಸಮಸ್ಥಾನಿಯೊಂದನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸುತ್ತಾರೆ.
  • ಆಯೋಡಿನ್‌ನ ಸಮಸ್ಥಾನಿಯೊಂದನ್ನು ಗಾಯಿಟರ್ ಕಾಯಿಲೆಯ ಚಿಕಿತ್ಸೆಗೆ ಬಳಸುತ್ತಾರೆ.

11) ಒಂದು X ಧಾತುವಿನ ಮಾದರಿಯ ಸರಾಸರಿ ಪರಮಾಣು ರಾಶಿಯು 16,2u, ಆ ಮಾದರಿಯಲ್ಲಿರುವ ‘X’ ಮತ್ತು ‘X ಸಮಸ್ಥಾನಿಗಳ ಸರಾಸರಿ ಶೇಕಡಾ ಪ್ರಮಾಣ ಎಷ್ಟು?

FAQ

1. ಐಸೋಬಾರ್‌ಗಳು ಎಂದರೇನು?

ಈ ಬೇರೆ ಬೇರೆ ಪರಮಾಣು ಸಂಖ್ಯೆಗಳು, ಒಂದೇ ಪರಮಾಣು ರಾಶಿ ಸಂಖ್ಯೆಯನ್ನು ಹೊಂದಿರುವ ಬೇರೆ ಬೇರೆ ಧಾತುಗಳ ಪರಮಾಣುಗಳನ್ನು ಐಸೋಬಾರ್‌ಗಳು ಎನ್ನುವರು.

2. ಪರಮಾಣು ಸಂಖ್ಯೆ ಎಂದರೇನು?

ಪರಮಾಣುವಿನ ಬೀಜಕೇಂದ್ರದಲ್ಲಿರುವ ಪ್ರೋಟಾನ್‌ಗಳ ಒಟ್ಟು ಸಂಖ್ಯೆಯನ್ನು ಪರಮಾಣು ಸಂಖ್ಯೆ ಎನ್ನುವರು.

ಇತರೆ ವಿಷಯಗಳು:

9ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *