9ನೇ ತರಗತಿ ವಿಜ್ಞಾನ ನಮ್ಮ ಸುತ್ತಮುತ್ತಲಿನ ದ್ರವ್ಯಗಳು ನೋಟ್ಸ್ ಪ್ರಶ್ನೋತ್ತರಗಳು, 9th Standard Science Chapter 1 Notes Question Answer in Kannada Medium Kseeb Solutions For Class 9 Science Chapter 1 Notes namma suttamuttalina dravyagalu kannada question answer in Kannada
9th Class Science Question Answer in Kannada Chapter 1
ನಮ್ಮ ಸುತ್ತಮುತ್ತಲಿನ ದ್ರವ್ಯಗಳು ನೋಟ್ಸ್
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
01.ದ್ರವ್ಯ ಎಂದರೇನು?
ಸ್ಥಳವನ್ನು ಆಕ್ರಮಿಸುವ ಮತ್ತು ದ್ರವ್ಯರಾಶಿಯನ್ನು ಹೊಂದಿರುವ ವಸ್ತುಗಳಿಗೆ ದ್ರವ್ಯ ಎನ್ನುವರು.
ದ್ರವ್ಯಗಳು ದ್ರವ್ಯರಾಶಿ ಮತ್ತು ಗಾತ್ತವನ್ನು ಹೊಂದಿವೆ
02.ದ್ರವ್ಯಗಳ ಸ್ವರೂಪ ನಿರಂತರವಾಗಿದೆಯೋ ಅಥವಾ ಕಣಗಳ ರೀಪಿಯಲ್ಲಿ ಇದೆಯೋ?
ದ್ರವ್ಯವು ಕಣಗಳಿಂದ ಮಾಡಲ್ಪಟ್ಟಿದೆ.
ದ್ರವ್ಯದ ಕಣಗಳು ಅತ್ಯಂತ ಸಣ್ಣಕಣಗಳು ಅವುಗಳು ವಿಭಜನೆ ಹೊಂದುತ್ತಾ ಅತ್ಯಂತ ಸಣ್ಣ ಸಣ್ಣ ಕಣಗಳಾಗಿ ಮಾರ್ಪಟ್ಟಿವೆ.
03.ದ್ರವ್ಯದ ಕಣಗಳ ಗುಣಲಕ್ಷಣಗಳನ್ನು ಪಟ್ಟಿ ಮಾಡಿ
- ದ್ರವ್ಯದ ಕಣಗಳ ಗುಣಲಕ್ಷಣಗಳು:
- ದ್ರವ್ಯದ ಕಣಗಳ ಮಧ್ಯೆ ಖಾಲಿ ಸ್ಥಳಾವಕಾಶಗಳು ಕಂಡು ಬರುತ್ತವೆ.
- ದ್ರವ್ಯದ ಕಣಗಳು ನಿರಂತರವಾಗಿ ಚಲನೆಯಲ್ಲಿರುತ್ತವೆ.
- ಈ ತಾಪ ಹೆಚ್ಚಾದಂತೆ ದ್ರವ್ಯದ ಕಣಗಳ ಚಲನ ಶಕ್ತಿಯೂ ಹೆಚ್ಚಾಗುತ್ತದೆ.
- ದವ್ಯದ ಕಣಗಳು ಪರಸ್ಪರ ಆಕರ್ಷಿಸುತ್ತವೆ.
ಪಠ್ಯ ಪ್ರಶ್ನೆಗಳು :
01.ಈ ಕೆಳಗಿನ ಯಾವುವು ದ್ರವ್ಯಗಳಾಗಿವೆ?
ಕುರ್ಚಿ, ಗಾಳಿ, ಪೀಹಿ, ವಾಸನೆ, ದ್ವೇಷ, ಬಾದಾಮಿಗಳು, ಆಲೋಚನೆ, ತಂಪು, ತಂಪುಪಾನೀಯ, ಸೌಂದರ್ಯ ವರ್ಧಕದ ವಾಸನೆ
ದ್ರವ್ಯಗಳು : ಕುರ್ಚಿ, ಗಾಳಿ, ವಾಸನೆ, ಬಾದಾಮಿಗಳು, ತಂಪುಪಾನೀಯ, ಸೌಂದರ್ಯ ವರ್ಧಕದ ವಾಸನೆ,
02.ಈ ಕೆಳಗಿನ ವಿಕ್ಷಣೆಗೆ ಕಾರಣ ಕೊಡಿ.
1. ನಿಮಗೆ ಬಹಳ ದೂರದಿಂದಲೇ ಬಿಸಿ ಆಹಾರದ ವಾಸನೆ ತಿಳಿಯುತ್ತದೆ.ಆದರೆ,ತಂಪಾದ ಆಹಾರದ ವಾಸನೆಯನ್ನು ತಿಳಿಯಲು ನೀವು ಆಹಾರದ ಹತ್ತಿರ ಹೋಗಬೇಕು?
ದ್ರವ್ಯದ ಕಣಗಳು ನಿರಂತರವಾಗಿ ಚಲನೆಯಲ್ಲಿರುತ್ತವೆ.ತಾಪ ಹೆಚ್ಚಾದಂತೆ ದ್ರವ್ಯದ ಕಣಗಳ ಚಲನ ಶಕ್ತಿಯೂ ಹೆಚ್ಚಾಗುತ್ತದೆ.ಆದ್ದರಿಂದ ಬಿಸಿ ಆಹಾರದ ವಾಸನೆಯ ಕಣಗಳು ಗಾಳಿಯ ಕಣಗಳೊಂದಿಗೆ ಸೇರಿ ಆಹಾರದ ವಾಸನೆಯು ದೂರದಿಂದಲೇ ತಿಳಿಯುತ್ತದೆ.
03.ಈಜುಗಾರನು ಈಜುಕೊಳದಲ್ಲಿ ನೀರನ್ನು ಸೀಳಿಕೊಂಡು ಧುಮುಕುತ್ತಾನೆ.ಈ ವೀಕ್ಷಣೆಯು ಧವ್ಯದ ಯಾವ ಲಕ್ಷಣವನ್ನು ತೋರಿಸುತ್ತದೆ?
ದ್ರವ್ಯದ ಕಣಗಳು ಪರಸ್ಪರ ಆಕರ್ಷಿಸಿತ್ತದೆ.
04.ದವ್ಯದ ಕಣಗಳ ಗುಣಲಕ್ಷಣಗಳು ಯಾವುವು?
- ದ್ರವ್ಯದ ಕಣಗಳ ಗುಣಲಕ್ಷಣಗಳು:
- ದ್ರವ್ಯದ ಕಣಗಳ ಮಧ್ಯೆ ಖಾಲಿ ಸ್ಥಳಾವಕಾಶಗಳು ಕಂಡು ಬರುತ್ತವೆ.
- ದ್ರವ್ಯದ ಕಣಗಳು ನಿರಂತರವಾಗಿ ಚಲನೆಯಲ್ಲಿರುತ್ತವೆ. ತಾಪ ಹೆಚ್ಚಾದಂತೆ ದ್ರವ್ಯದ ಕಣಗಳ ಚಲನ ಶಕ್ತಿಯೂ ಹೆಚ್ಚಾಗುತ್ತದೆ.
- ದ್ರವ್ಯದ ಕಣಗಳು ಪರಸ್ಪರ ಆಕರ್ಷಿಸುತ್ತವೆ.
05.ದ್ರವ್ಯದ ಮೂರು ಸ್ಥಿತಿಗಳು ಯಾವುವು?
- ದವ್ಯದ ಮೂರು ಸ್ಥಿತಿಗಳು – ಘನ, ದ್ರವ, ಅನಿಲ
- ಘನ ವಸ್ತುಗಳು ನಿರ್ದಿಷ್ಟವಾದ ಆಕಾರ, ವಿಶಿಷ್ಟವಾದ ಸುತ್ತಳತೆ ಮತ್ತು ಸ್ಥಿರವಾದ ಗಾತ್ರವನ್ನು ಹೊಂದಿವೆ.ಆದುದರಿಂದಲೇ ಘನ ವಸ್ತುಗಳ ಸಂಪೀಡನೆಯು ನಗಣ್ಯವಾಗಿದೆ.
- ಘನ ವಸ್ತುಗಳನ್ನು ಬಾಹ್ಯ ಬಲಕ್ಕೊಳಪಡಿಸಿದಾಗ ಅವುಗಳು ತಮ್ಮ ಆಕಾರವನ್ನು ಕಾಪಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ಬಾಹ್ಯ ಬಲ ಪ್ರಯೋಗಿಸಿದಾಗ ಘನ ವಸ್ತುಗಳು ಒಡೆಯಬಹುದು ಆದರೆ ಅವು ತಮ್ಮ ಆಕಾರವನ್ನು ಬದಲಿಸುವುದು ಕಷ್ಟ ಸಾಧ್ಯ.ಏಕೆಂದರೆ ಆವು ಕಠಿಣವಾಗಿವೆ.
- ಘನ ವಸ್ತುಗಳಲ್ಲಿ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ತುಂಬಾ ಕನಿಷ್ಟವಾಗಿರುತ್ತದೆ.
- ಘನ ವಸ್ತುಗಳಲ್ಲಿ ಕಣಗಳ ನಡುವಿನ ಆಕರ್ಷಣ ಬಲ ಗರಿಷ್ಠವಾಗಿರುತ್ತದೆ.
- ಘನ ವಸ್ತುಗಳಲ್ಲಿ ಕಣಗಳ ಜೋಡಣೆ ಅತ್ಯಂತ ಕ್ರಮಬದ್ಧವಾಗಿರುತ್ತದೆ.
06.ದ್ರವ ಸ್ಥಿತಿಯ ಲಕ್ಷಣಗಳನ್ನು ತಿಳಿಸಿ?
- ದ್ರವ ವಸ್ತುಗಳಿಗೆ ನಿರ್ದಿಷ್ಟವಾದ ಆಕಾರವಿಲ್ಲ ಆದರೆ ನಿರ್ದಿಷ್ಟವಾದ ಗಾತ್ರವನ್ನು ಹೊಂದಿವೆ.
- ದ್ರವಗಳು ಹರಿಯುತ್ತವೆ ಮತ್ತು ಆಕಾರವನ್ನು ಬದಲಿಸಿಕೊಳ್ಳುತ್ತವೆ.ದ್ರವಗಳನ್ನು ಸಂಗ್ರಾಹಕದಲ್ಲಿ ತುಂಬಿದಾಗ ಸಂಗ್ರಾಹಕದ
- ಆಕಾರವನ್ನು ಪಡೆದುಕೊಳ್ಳುತ್ತವೆ. ದ್ರವ ವಸ್ತುಗಳ ವಿಸರಣಾದರವು ಘನ ವಸ್ತುಗಳಿಗಿಂತ ಹೆಚ್ಚು,
- ದ್ರವ ವಸ್ತುಗಳಲ್ಲಿ ಕಣಗಳು ಸ್ವತಂತ್ರವಾಗಿ ಚಲಿಸುತ್ತವೆ ಮತ್ತು ಕಣಗಳ ನಡುವೆ ಹೆಚ್ಚಿನ ಅವಕಾಶಗಳು ಕಂಡು ಬರುತ್ತದೆ.
- ದ್ರವ ವಸ್ತುಗಳಲ್ಲಿ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಮಧ್ಯಂತರವಾಗಿರುತ್ತದೆ.
- ದವ ವಸ್ತುಗಳಲ್ಲಿ ಕಣಗಳ ನಡುವಿನ ಆಕರ್ಷಣಾ ಬಲ ಮಧ್ಯಂತರವಾಗಿರುತ್ತದೆ.
- ದ್ರವಗಳಲ್ಲಿ ಕಣಗಳ ಪದರಗಳು ಜಾರುವಂತಿರುತ್ತವೆ ಮತ್ತು ಪರಸ್ಪರ ನುಣಿಚಿಕೊಳ್ಳುತ್ತವೆ.
07.ಅನಿಲ ಸ್ಥಿತಿಯ ಲಕ್ಷಣಗಳನ್ನು ತಿಳಿಸಿ?
- ಅನಿಲ ವಸ್ತುಗಳಿಗೆ ನಿರ್ದಿಷ್ಟವಾದ ಆಕಾರವೂ ಇಲ್ಲ ಮತ್ತು ಗಾತ್ರವೂ ಇಲ್ಲ.
- ಅನಿಲಗಳು ಹೆಚ್ಚು ಸಂಪೀಡನೆ ಹೊಂದುತ್ತವೆ.
- ಆನಿಲ ವಸ್ತುಗಳಲ್ಲಿ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಗರಿಷ್ಠವಾಗಿರುತ್ತದೆ.
- ಅನಿಲ ಕಣಗಳ ನಡುವಿನ ಆಕರ್ಷಕ ಬಲ ಕನಿಷ್ಠವಾಗಿರುತ್ತದೆ. ಅನಿಲಗಳಲ್ಲಿ ಕಣಗಳು ಯಾವುದೇ ಕ್ರಮವಿಲ್ಲದೆ ಯಾದೃಚ್ಛಿಕವಾಗಿ (ಅಡ್ಡಾದಿಡ್ಡಿ) ಚಲಿಸುತ್ತಿರುತ್ತವೆ.
ನಮ್ಮ ಸುತ್ತಮುತ್ತಲಿನ ದ್ರವ್ಯಗಳು 9ನೇ ತರಗತಿ ನೋಟ್ಸ್
ಪಠ್ಯ ಪ್ರಶ್ನೆಗಳು
1. ಸಾಂದ್ರತೆ ಎಂದರೇನು? ಈ ಕೆಳಗಿನವುಗಳನ್ನು ಅವುಗಳ ಸಾಂದ್ರತೆಯ ಏರಿಕೆ ಕ್ರಮದಲ್ಲಿ ಜೋಡಿಸಿ.
ವಸ್ತುವಿನ ಏಕಮಾನ ಗಾತ್ರ ಮತ್ತು ರಾಶಿಗಳ ಅನುಪಾತಕ್ಕೆ ಸಾಂದ್ರತೆ ಎನ್ನುತ್ತಾರೆ.
(ಗಾಳಿ, ಚಿಮಿಣಿಯ ನಿಷ್ಕಾಸ, ಜೇನು, ನೀರು, ಸೀಮೆಸುಣ್ಣ, ಹತ್ತಿ, ಕಬ್ಬಿಣ)
ಗಾಳಿ, ಚಿಮಿಣಿಯ ನಿಷ್ಠಾಸ, ಹತ್ತಿ, ನೀರು, ಜೇನು, ಸೀಮೆಸುಣ್ಣ, ಕಬ್ಬಿಣ.
2.(ಎ) ಧವ್ಯದ ಸ್ಥಿತಿಗಳಲ್ಲಿನ ಗುಣಗಳ ವ್ಯತ್ಯಾಸಗಳನ್ನು ಬರೆಯಿರಿ.
ಘನ, ದ್ನರ ಮತ್ತು ಅನಿಲಗಳಿಗೆ ಇರುವ ವ್ಯತ್ಯಾಸಗಳು:
1. ಘನ ವಸ್ತುಗಳು
- ಘನ ವಸ್ತುಗಳು ನಿರ್ದಿಷ್ಟವಾದ ಆಕಾರ, ವಿಶಿಷ್ಟವಾದ ಸುತ್ತಳತೆ ಮತ್ತು ಸ್ಥಿರವಾದ ಗಾತ್ರವನ್ನು ಹೊಂದಿವೆ.
- ಘನ ವಸ್ತುಗಳಲ್ಲಿ ಕಣಗಳ ನಡುವಿನ ಆಂತರ ಅತ್ಯಂತ ಕಡಿಮೆ
- ಘನ ವಸ್ತುಗಳಲ್ಲಿ ಕಣಗಳ ನಡುವಿನ ಆಕರ್ಷಣಾ ಬಲ ಪ್ರಬಲವಾಗಿರುತ್ತದೆ.
- ಘನ ವಸ್ತುಗಳಲ್ಲಿ ಕಣಗಳ ಚಲನ ಶಕ್ತಿಯು ಕನಿಷ್ಟವಾಗಿರುತ್ತದೆ.
- ಸಾಂದ್ರತೆ ಹೆಚ್ಚು.
2. ದ್ರವ ವಸ್ತು
- ದ್ರವ ವಸ್ತುಗಳಿಗೆ ನಿರ್ದಿಷ್ಟವಾದ ಆಕಾರವಿಲ್ಲ. ಆದರೆ ನಿರ್ದಿಷ್ಟವಾದ ಗಾತ್ರವನ್ನು ಹೊಂದಿವೆ.
- ದ್ರವ ವಸ್ತುಗಳಲ್ಲಿ ಕಣಗಳ ನಡುವಿನ ಅಂತರ ಹೆಚ್ಚು.
- ದ್ರವ ವಸ್ತುಗಳಲ್ಲಿ ಕಣಗಳ ನಡುವಿನ ಆಕರ್ಷಣ ಬಲ ಕಡಿಮೆಯಾಗಿರುತ್ತದೆ.
- ದ್ರವ ವಸ್ತುಗಳಲ್ಲಿ ಕಣಗಳ ಚಲನ
- ಶಕ್ತಿಯು ಮಧ್ಯಂತರವಾಗಿರುತ್ತದೆ.
- ಸಾಂದ್ರತೆ ಕಡಿಮೆ;
3. ಅನಿಲ ವಸ್ತು
- ಅನಿಲ ವಸ್ತುಗಳಿಗೆ ನಿರ್ದಿಷ್ಟವಾದ ಆಕಾರವೂ ಇಲ್ಲ ಮತ್ತು ಗಾತ್ರವೂ
- ಅನಿಲ ವಸ್ತುಗಳಲ್ಲಿ ಕಣಗಳ ನಡುವಿನ ಅಂತರ ತುಂಬಾ ಹೆಚ್ಚು.
- ಅನಿಲ ವಸ್ತುಗಳಲ್ಲಿ ಕಣಗಳ ನಡುವಿನ ಆಕರ್ಷಣ ಬಲ ತುಂಬಾ ಕಡಿಮೆಯಾಗಿರುತ್ತದೆ.
- ಅನಿಲ ವಸ್ತುಗಳಲ್ಲಿ ಕಣಗಳ ಚಲನಶಕ್ತಿಯು ಅಧಿಕವಾಗಿರುತ್ತದೆ.
- ಸಾಂದ್ರತೆ ತುಂಬಾ ಕಡಿಮೆ,
(ಬಿ) ಈ ಕೆಳಗಿನವುಗಳನ್ನು ವ್ಯಾಖ್ಯಾನಿಸಿ.
ಕಠಿಣತೆ : ಆಕಾರದಲ್ಲಿ ಬದಲಾವಣೆಯನ್ನು ವಿರೋಧಿಸುವ ವಿದ್ಯಮಾನವನ್ನು ಕಠಿಣತೆ ಎನ್ನವರು.
ಸಂಕೋಚ್ಯತೆ: ಬಾಹ್ಯ ಬಲಕ್ಕೊಳಪಡಿಸಿದಾಗ ಹೆಚ್ಚಿನ ಗಾತ್ರದ ದವ್ಯವು ಕಡಿಮೆ ಗಾತ್ರ ಹೊಂದುವ ಕ್ರಿಯೆಯನ್ನು ಸಂಕೋಚ್ಯತೆ ಎನ್ನುವರು.
ಹರಿಯುವಿಕೆ : ವಸ್ತುಗಳು ಹರಿಯುವ ಪ್ರಕ್ರಿಯೆಗೆ ಹರಿಯುವಿಕೆ ಎನ್ನುವರು.
ಅನಿಲ ಜಾಡಿಗಳನ್ನು ತುಂಬುವಿಕೆ : ಸಂಗ್ರಾಹಕಗಳಲ್ಲಿ ಅನಿಲಗಳನ್ನು ಸಂಗ್ರಹಿಸುವ ಪಕ್ತಿಯೆಗೆ ಅನಿಲ ಜಾಡಿಗಳನ್ನು ತುಂಬುವಿಕೆ ಎನ್ನುವರು.
ಆಕಾರ: ದ್ರವ್ಯಗಳ ನಿರ್ದಿಷ್ಟವಾದ ಗಡಿ ಅಥವಾ ಸುತ್ತಳತೆಯನ್ನು ಆಕಾರ ಎನ್ನುವರು.
ಚಲನಶಕ್ತಿ: ಕಾಯ ಅಥವಾ ವಸ್ತುವು ಚಲನೆಯಿಂದ ಪಡೆದಕೊಂಡ ಶಕ್ತಿಯನ್ನು ಚಲನಶಕ್ತಿ ಎನ್ನುವರು.
ಸಾಂದ್ರತೆ: ವಸ್ತುವಿನ ಏಕಮಾನ ಗಾತ್ರ ಮತ್ತು ರಾಶಿಗಳ ಅನುಪಾತಕ್ಕೆ ಸಾಂದ್ರತೆ ಎನ್ನುತ್ತಾರೆ.
ಕಾರಣ ಕೊಡಿ :
(ಎ).ಇಟ್ಟಿರುವ ಪಾತ್ರಗಳಲ್ಲಿ ಅನಿಲವು ಸಂಪೂರ್ಣವಾಗಿ ತುಂಬಿರುತ್ತದೆ.
ಅನಿಲಗಳ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಗರಿಷ್ಠವಾಗಿರುತ್ತದೆ.ಕಣಗಳ ನಡುವಿನ ಆಕರ್ಷಣ ಬಲ ಅತ್ಯಂತ ಕಡಿಮೆ ಇರುತ್ತದೆ.ಆದುದರಿಂದ ಅನಿಲಗಳಲ್ಲಿ ಕಣಗಳು ಯಾವುದೇ ಕ್ರಮವಿಲ್ಲದೆ ಯಾದೃಚ್ಛಿಕವಾಗಿ (ಅಡ್ಡಾದಿಡ್ಡಿ) ಚಲಿಸುತ್ತಿರುತ್ತವೆ.ಹಾಗಾಗಿ, ಇಟ್ಟಿರುವ ಪಾತ್ರಗಳಲ್ಲಿ ಅನಿಲವು ಸಂಪೂರ್ಣವಾಗಿ ತುಂಬಿರುತ್ತದೆ.
(ಬಿ),ಸಂಗ್ರಾಹಕದ ಗೋಡೆಗಳ ಮೇಲೆ ಅನಿಲಗಳು ಒತ್ತಡ ಏರ್ಪಡಿಸುತ್ತವೆ
ಆನಿಲ ಸ್ಥಿತಿಯಲ್ಲಿ, ಕಣಗಳು ಯಾದೃಚ್ಛಿಕವಾಗಿ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುತ್ತವೆ. ಈ ರೀತಿಯ ಯಾದೃಚ್ಛಿಕ ಚಲನೆ ಯಿಂದಾಗಿ, ಕಣಗಳು ಪರಸ್ಪರ ಬಡಿದುಕೊಳ್ಳುತ್ತವೆ ಮತ್ತು ಸಂಗ್ರಾಹಕದ ಗೋಡೆಗೆ ತಾಗುತ್ತವೆ.ಅನಿಲದ ಕಣಗಳು ಸಂಗ್ರಾಹಕದ ಗೋಡೆಯ ಏಕಮಾನ ವಿಸ್ತೀರ್ಣದ ಮೇಲೆ ಏರ್ಪಡುವ ಬಲದಿಂದಾಗಿ ಅನಿಲಗಳು ಒತ್ತಡವನ್ನು ಹೊಂದಿರುತ್ತವೆ.
(ಸಿ).ಮರದ ಮೇಜನ್ನು ಘನವಸ್ತು ಎಂದು ಕರೆಯುತ್ತಾರೆ.
ಮರದ ಮೇಜು ನಿರ್ದಿಷ್ಟವಾದ ಆಕಾರ ಮತ್ತು ಸ್ಥಿರವಾದ ಗಾತ್ರವನ್ನು ಹೊಂದಿವೆ. ಮರದ ಮೇಜು ಕಠಿಣ ವಸ್ತು ಮತ್ತು ಕಣಗಳು ಒತ್ತೊತ್ತಾಗಿ ಜೋಡಣೆಯಾಗಿದ್ದು ಸಂಪೀಡನೆಗೊಳಿಸಲು ಕಷ್ಟಸಾಧ್ಯ ಬಾಹ್ಯ ಬಲಕ್ಕೊಳಪಡಿಸಿದಾಗ ಮೇಜು ತಮ್ಮ ಆಕಾರವನ್ನು ಕಾಪಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ.ಆದುದರಿಂದ, ಮರದ ಮೇಜನ್ನು ಘನವಸ್ತು ಎಂದು ಕರೆಯುತ್ತಾರೆ.
(ಡಿ). ನಾವು ನಮ್ಮ ಕೈಗಳನ್ನು ಗಾಳಿಯಲ್ಲಿ ಸುಲಭವಾಗಿ ಚಲಿಸಬಹುದು. ಆದರೆ, ಘನವಸ್ತುವಾದ ಮರದ ತುಂಡಿನಲ್ಲಿ ಅದೇ ರೀತಿ ಮಾಡಲು ನಮಗೆ ಕರಾಟೆ ಪ್ರವೀಣರ ಅವಶ್ಯಕತೆ ಇದೆ.
ಅನಿಲ ಕಣಗಳ ನಡುವೆ ಅತ್ಯಂತ ಹೆಚ್ಚಿನ ಖಾಲಿ ಸ್ಥಳಾವಕಾಶಗಳು ಕಂಡು ಬರುತ್ತದೆ. ಆನಿಲ ವಸ್ತುಗಳಲ್ಲಿ ಕಣಗಳ ನಡುವಿನ ಆಂತರ, ಮತ್ತು ಕಣಗಳ ಚಲನಶಕ್ತಿ ಗರಿಷ್ಠವಾಗಿರುತ್ತದೆ.ಆನಿಲ ಕಣಗಳ ನಡುವಿನ ಆಕರ್ಷಣಾ ಬಲ ಕನಿಷ್ಠವಾಗಿರುತ್ತದೆ. ಗಾಳಿಯು ವಿಸ್ತಾರವಾದ ಸ್ಥಳವನ್ನು ಹೊಂದಿರುವುದರಿಂದ ನಾವು ನಮ್ಮ ಕೈಗಳನ್ನು ಗಾಳಿಯಲ್ಲಿ ಸುಲಭವಾಗಿ ಚಲಿಸಬಹುದು.
ಆದರೆ, ಮರದ ತುಂಡು ಕಠಿಣವಾದ ಘನ ವಸ್ತು ಘನ ವಸ್ತುಗಳಲ್ಲಿ ಕಣಗಳ ಜೋಡಣೆ ಅತ್ಯಂತ ಕ್ರಮಬದ್ಧವಾಗಿರುತ್ತದೆ ಮತ್ತು ಕಣಗಳ ನಡುವಿನ ಅಂತರ ಹಾಗೂ ಕಣಗಳ ಚಲನಶಕ್ತಿ ತುಂಬಾ ಕನಿಷ್ಟವಾಗಿರುತ್ತದೆ. ಘನ ವಸ್ತುಗಳಲ್ಲಿ ಕಣಗಳ ನಡುವಿನ ಆಕರ್ಷಣಾ ಬಲ ಗರಿಷ್ಠವಾಗಿರುತ್ತದೆ. ಬಾಹ್ಯ ಬಲಕ್ಕೊಳಪಡಿಸಿದಾಗ ಘನ ವಸ್ತುಗಳು ತಮ್ಮ ಆಕಾರವನ್ನು ಕಾಪಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ಆದುದರಿಂದ ಘನವಸ್ತುವಾದ ಮರದ ತುಂಡಿನಲ್ಲಿ ಅದೇ ರೀತಿ ಮಾಡಲು ನಮಗೆ ಕರಾಟೆ ಪ್ರವೀಣರ ಅವಶ್ಯಕತೆ ಇದೆ.
4.ಘನಗಳಿಗೆ ಹೋಲಿ ಸಿದರೆ ಸಾಮಾನ್ಯವಾಗಿ ದ್ರವಗಳು ಕಡಿಮೆ ಸಾಂದ್ರತೆ ಹೊಂದಿವೆ. ಆದರೆ ಮಂಜುಗಡ್ಡೆಯು ನೀರಿನ ಮೇಲೆ ತೇಲುವುದನ್ನು ಗಮನಿಸಿದ್ದೀರಿ. ಏಕೆ ಎಂಬುದನ್ನು ಕಂಡುಹಿಡಿಯಿರಿ?
ವಸ್ತುವಿನ ಏಕಮಾನ ಗಾತ್ರ ಮತ್ತು ರಾಶಿಗಳ ಅನುಪಾತಕ್ಕೆ ಸಾಂದ್ರತೆ ಎನ್ನುತ್ತಾರೆ. ವಸ್ತುವಿನ ಗಾತ್ರ ಹೆಚ್ಚಿದಂತೆ, ಸಾಂದ್ರತೆಯು ಕಡಿಮೆಯಾಗುತ್ತದೆ.
ಮಂಜುಗಡ್ಡೆ ಘನವಸ್ತುವಾದರೂ, ಮಂಜುಗಡ್ಡೆಯ ಕಣಗಳ ನಡುವೆ ಅತ್ಯಂತ ಹೆಚ್ಚಿನ ಖಾಲಿ ಸ್ಥಳಾವಕಾಶಗಳು ಕಂಡು ಬರುತ್ತವೆ.
ನೀರಿನ ಕಣಗಳ ನಡುವೆ ಇರುವ ಖಾಲಿ ಸ್ಥಳಾವಕಾಶಗಳಿಗಿಂತ ಮಂಜುಗಡ್ಡೆಯ ಕಣಗಳ ನಡುವೆ ಇರುವ ಖಾಲಿ ಸ್ಥಳಾವಕಾಶಗಳು ಹೆಚ್ಚು. ಆದುದರಿಂದ ಮಂಜುಗಡ್ಡೆ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆಯಾಗಿರುತ್ತದೆ. ಹಾಗಾಗಿ, ಮಂಜುಗಡ್ಡೆಯು ನೀರಿನ ಮೇಲೆ ತೇಲುತ್ತದೆ.
5. ದ್ರವ್ಯಗಳು ಸ್ಥಿತಿಯನ್ನು ಬದಲಾಯಿಸುತ್ತವೆಯೇ ?
ನಮಗೆಲ್ಲಾ ತಿಳಿದಿರುವ ಹಾಗೆ ನೀರು ದ್ರವ್ಯದ ಮೂರು ಸ್ಥಿತಿಗಳಲ್ಲಿಯೂ ದೊರೆಯುತ್ತದೆ. ಘನರೂಪದಲ್ಲಿ ಮಂಜುಗಡ್ಡೆ ದ್ರವರೂಪದಲ್ಲಿ ನಮಗೆ ಪರಿಚಿತವಿರುವ ನೀರು ಮತ್ತು ಅನಿಲ ರೂಪದಲ್ಲಿ ನೀರಾವಿ
6. ದ್ರವ್ಯಗಳ ಸ್ಥಿತಿ ಬದಲಾವಣೆಯಾಗುವ ದ್ರವ್ಯಗಳ ಒಳಗೆ ಏನಾಗಬಹುದು?
ಸ್ಥಿತಿ ಬದಲಾವಣೆಯಾಗುವ ಧವ್ಯದ ಕಣಗಳಿಗೆ ಏನಾಗಬಹುದು?
ದ್ರವ್ಯದ ಸ್ಥಿತಿಗಳ ಬದಲಾವಣೆ ಹೇಗೆ ನಡೆಯುತ್ತದೆ?
ಧನಗಳ ಉಷ್ಣತೆಯನ್ನು ಹೆಚ್ಚಿಸಿದಾಗ, ಕಣಗಳ ಚಲನಶಕ್ತಿಯು ಹೆಚ್ಚುತ್ತದೆ. ಚಲನಶಕ್ತಿಯ ಹೆಚ್ಚಳದಿಂದಾಗಿ, ಕಣಗಳು ಹೆಚ್ಚಿನ ವೇಗದಿಂದ ಕಂಪಿಸಲಾರಂಭಿಸುತ್ತವೆ.
ಒದಗಿಸಿದ ಶಾಖಶಕ್ತಿಯು ಕಣಗಳ ನಡುವೆ ಆಕರ್ಷಣಾ ಬಲಕ್ಕೆ ಮೀರಿದ್ದಾಗಿರುತ್ತದೆ. ಕಣಗಳು ತಮ್ಮ ನಿರ್ದಿಷ್ಟ ಸ್ಥಳವನ್ನು ತೊರೆಯುತ್ತವೆ ಮತ್ತು ಹೆಚ್ಚು ಸ್ವತಂತ್ರವಾಗಿ ಚಲಿಸಲು ಪ್ರಾರಂಭಿಸುತ್ತವೆ. ಯಾವಾಗ ಘನವಸ್ತುಗಳು ಈ ಸ್ಥಿತಿಯನ್ನು ತಲುಪುತ್ತವೆಯೋ ಆಗ ದ್ರವಿಸುತ್ತವೆ ಮತ್ತು ದ್ರವವಾಗಿ ಪರಿವರ್ತನೆಯಾಗುತ್ತವೆ.
ನಿರ್ದಿಷ್ಟ ತಾಪದಲ್ಲಿ ಘನವಸ್ತುಗಳು ದ್ರವಿಸಿ, ವಾತಾವರಣದ ಒತ್ತಡದಲ್ಲಿ ಧವಸ್ಥಿತಿಗೆ ಪರಿವರ್ತನೆಯಾಗುವ ತಾಪವನ್ನು ದ್ರವನಬಿಂದು ಎಂದು ಕರೆಯುತ್ತಾರೆ.
ಘನದ ಧವನ ಬಿಂದುವು ಅವುಗಳ ಕಣಗಳ ನಡುವಿನ ಆಕರ್ಷಣಾ ಬಲದ ಸಾಮರ್ಥ್ಯದ ಸೂಚಕವಾಗಿದೆ.
7. ತಾಪ ಬದಲಾವಣೆಯ ಪರಿಣಾಮ:
(ಎ) ಮಂಜುಗಡ್ಡೆಯನ್ನು ನೀರಾಗಿಸುವಿಕೆ (ಬಿ) ನೀರನ್ನು ನೀರಾವಿಯಾಗಿಸುವಿಕೆ
ಪ್ರಯೋಗ: ಒಂದು ಬೀಕರ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಂಜುಗಡ್ಡೆಯ ಚೂರುಗಳನ್ನು ತೆಗೆದು ಕೊಂಡು ತಾಪಮಾಪಕವನ್ನು ಮಂಜುಗಡ್ಡೆಗೆ ತಾಗುವಂತೆ ಚಿತ್ರದಲ್ಲಿ ತೋರಿಸಿರುವಂತೆ ಜೋಡಿಸಬೇಕು, ನಂತರ ಜ್ವಾಲೆಯ ಸಹಾಯದಿಂದ ಕಾಸಬೇಕು.
ವೀಕ್ಷಣೆ: `ಬೀಕರ್‌ನಲ್ಲಿರುವ ಮಂಜುಗಡ್ಡೆ ಸಂಪೂರ್ಣವಾಗಿ ದ್ರವರೂಪಕ್ಕೆ ಬರುವವರೆಗೂ ತಾಪಮಾಪಕದಲ್ಲಿ ಯಾವುದೇ ಏರಿಕೆ ಉಂಟಾಗುವುದಿಲ್ಲ, ನಾವು ಕೊಟ್ಟ ಶಾಖವು ಸ್ಥಿತಿ ಬದಲಾವಣೆಗೆ ಉಪಯೋಗಿಸಲ್ಪಟ್ಟಿತು. -ಮಂಜುಗಡ್ಡೆ ಶಾಖವನ್ನು ಹೀರಿಕೊಂಡು, ಅದರ ತಾಪದಲ್ಲಿ ಯಾವುದೇ ಬದಲಾವಣೆ ಹೊಂದದೆ, ಉಷ್ಣವನ್ನು ಗುಪ್ತವಾಗಿರಿಸಿಕೊಂಡಿರುತ್ತದೆ. ಈ ಉಷ್ಣವನ್ನು ಗುಪ್ತೋಷ್ಣ ಎನ್ನುವರು.
ದ್ರವವಾಗಿ ಪರಿವರ್ತನೆಯಾದ ನಂತರ ತಾಪಮಾಪಕದಲ್ಲಿ ಏರಿಕೆ ಕಂಡುಬರುತ್ತದೆ. ನಿರ್ದಿಷ್ಟ ಪ್ರಮಾಣದ ತಾಪ ಏರಿಕೆಯಾದ ನಂತರ ದ್ರವವು ಕುದಿಯಲಾರಂಭಿಸುತ್ತದೆ. ಈ ಹಂತದಲ್ಲಿ ದ್ರವವು ಅನಿಲವಾಗಿ ಪರಿವರ್ತನೆಯಾಗಲು ಪ್ರಾರಂಭಿಸುತ್ತದೆ. ಈಗ ತಾಪಮಾಪಕದಲ್ಲಿ ಯಾವುದೇ ಏರಿಕೆ ಕಂಡುಬರುವುದಿಲ್ಲ.
ತೀರ್ಮಾನ: ತಾಪ ಬದಲಾವಣೆಯಿಂದ ದ್ರವ್ಯಗಳು ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಬದಲಾಗುತ್ತವೆ.
8. ದ್ರವನಬಿಂದು ಎಂದರೇನು?
ನಿರ್ದಿಷ್ಟ ತಾಪದಲ್ಲಿ ಘನವಸ್ತುಗಳು ದ್ರವಿಸಿ ವಾತಾವರಣದ ಒತ್ತಡದಲ್ಲಿ ದ್ರವಸ್ಥಿತಿಗೆ ಪರಿವರ್ತನೆಯಾಗುವ ಶಾಪವನ್ನು ದ್ರವನಬಿಂದು ಎಂದು ಕರೆಯುತ್ತಾರೆ.
ಉದಾ:ಮಂಜುಗಡ್ಡೆಯ ದ್ರವನಬಿಂದು 273.16 K (0°C)
ಘನದ ದ್ರವನಬಿಂದುವು ಅವುಗಳ ಕಣಗಳ ನಡುವಿನ ಆಕರ್ಷಣಾ ಬಲದ ಸಾಮರ್ಥ್ಯದ ಸೂಚಕವಾಗಿದೆ.
9. ದ್ರವನ ಎಂದರೇನು?
ಘನಸ್ಥಿತಿಯಿಂದ ಧವಸ್ಥಿತಿಗೆ ಬದಲಾವಣೆ ಹೊಂದುವುದನ್ನು ದ್ರವನ ಎನ್ನುವರು.
10. ದ್ರವನ ಗುಪ್ತೋಷ್ಣ ಎಂದರೇನು?
ಒಂದು kg ಘನವನ್ನು ಅದರ ದ್ರವನ ಬಿಂದುವಿನಲ್ಲಿ ವಾತಾವರಣದ ಒತ್ತಡದಲ್ಲಿ ದ್ರವವಾಗಿ ಪರಿವರ್ತಿಸಲು ಬೇಕಾಗುವ ಉಷ್ಣಶಕ್ತಿಯ ಪರಿಮಾಣವನ್ನು ದ್ರವನ ಗುಪ್ತೋಷ್ಣ ಎನ್ನುವರು.
11.ಕುದಿಯುವಿಕೆ ಎಂದರೇನು?
ಬೃಹತ್ ಗಾತ್ರದ ದ್ರವನ ಕಣಗಳನ್ನು ದವಸ್ಥಿತಿಯಿಂದ ಆವಿಸ್ಥಿತಿಗೆ ಬದಲಾಯಿಸುವ ಕ್ರಿಯೆಗೆ ಕುದಿಯುವಿಕೆ ಎನ್ನುವರು.
12.ಕುದಿಯುವ ಬಿಂದು ಎಂದರೇನು?
ನಿರ್ದಿಷ್ಟ ವಾತಾವರಣದ ಒತ್ತಡದಲ್ಲಿ ಬೃಹತ್ ಗಾತ್ರದ ದ್ರವದ ಕಣಗಳನ್ನು ದ್ರವಸ್ಥಿತಿಯಿಂದ ಆರಿಸ್ಥಿತಿಗೆ ಬದಲಾಯಿಸುವ ಶಾಪವನ್ನು ದ್ರವನಬಿಂದು ಎಂದು ಕರೆಯುತ್ತಾರೆ.
13.ಆವೀಕರಣ ಗುಪ್ತೋಷ್ಣ ಎಂದರೇನು?
ಒಂದು kg ದ್ರವವನ್ನು ವಾತಾವರಣದ ಒತ್ತಡದಲ್ಲಿ ಅದರ ಕುದಿಬಿಂದುವಿನಲ್ಲಿ ದ್ರವಸ್ಥಿತಿಯಿಂದ ಅನಿಲರೂಪಕ್ಕೆ ಪರಿವರ್ತಿಸಲು ಬೇಕಾದ ಉಷ್ಣ ಶಕ್ತಿಯನ್ನು ಆವೀಕರಣ ಗುಪ್ತೋಷ್ಣ ಎನ್ನುವರು. ಉದಾ : ಹಬೆಯಲ್ಲಿನ ಕಣಗಳು ಅಂದರೆ 373K (100°C) ನಲ್ಲಿರುವ ನೀರಾವಿಯಲ್ಲಿನ ಕಣಗಳು ಅಷ್ಟೇ ತಾಪದಲ್ಲಿರುವ ನೀರಿನ ಕಣಗಳಿಗಿಂತಲೂ ಅಧಿಕ ಶಕ್ತಿ ಹೊಂದಿರುತ್ತವೆ. ಇದಕ್ಕೆ ಕಾರಣವೇನೆಂದರೆ ಹಬೆಯಲ್ಲಿನ ಕಣಗಳು ಆಧಿಕ ಶಾಖಶಕ್ತಿಯನ್ನು ಆವೀಕರಣ ಗುಪ್ತೋಷ್ಣ ರೂಪದಲ್ಲಿ ಪಡೆದುಕೊಂಡಿರುತ್ತವೆ.
14.ಉತ್ಪನನ ಎಂದರೇನು?
- ಒಂದು ಬದಲಾವಣೆಯಲ್ಲಿ ಘನವಸ್ತುವು ದ್ರವಸ್ಥಿತಿಗೆ ಬರದೆ ನೇರವಾಗಿ ಅನಿಲ ಸ್ಥಿತಿಗೆ ಬದಲಾಗುವುದನ್ನು ಉತ್ಪತನ ಎಂದು ಕರೆಯುವರು.
- ಉದಾ:ಕರ್ಪೂರ ಆಥವಾ ಆಮೋನಿಯಂ ಕ್ಲೋರೈಡ್
- ಈ ಉತ್ತತನ ಒಂದು ರೀತಿಯ ಬದಲಾವಣೆಯಾಗಿದ್ದು,ಅನಿಲ ಸ್ಥಿತಿಯಲ್ಲಿ ಇರುವ ವಸ್ತು ದ್ರವರೂಪಕ್ಕೆ ಬರದ ನೇರವಾಗಿ ಘನಸ್ಥಿತಿಗೆ ಬದಲಾಗುತ್ತದೆ, ಹಾಗೆಯೇ ಪ್ರತಿಕ್ರಮವಾಗಿ (Viceversa) ಘನರೂಪದಿಂದ ಅನಿಲರೂಪಕ್ಕೆ ಬದಲಾಯಿಸುವ ವಿದ್ಯಮಾನವಾಗಿದೆ.
15.ಒತ್ತಡದ ಬದಲಾವಣೆಯ ಪರಿಣಾಮ :
ಆನಿಲಗಳಲ್ಲಿನ ತಾಪವನ್ನು ಕಡಿಮೆ ಮಾಡಿ ಮತ್ತು ಒತ್ತಡ ಹಾಕಿ ಅವುಗಳನ್ನು ದ್ರವಸ್ಥಿತಿಗೆ ತರಬಹುದು.
ಉದಾ: ವಾತಾವರಣದ ಒತ್ತಡವನ್ನು 1 ಅಟ್ಯಾಸ್ಟಿಯರ್‌ಗೆ ಇಳಿಸಿದಾಗ ಘನ ಕಾರ್ಬನ್ ಡೈ ಆಕ್ಷನ್ ದ್ರವಸ್ಥಿತಿಗೆ ಬದಲಾಗದೆ ನೇರವಾಗಿ ಅನಿಲಸ್ಥಿತಿಗೆ ಪರಿವರ್ತನೆಗೊಳ್ಳುತ್ತದೆ. ಈ ಕಾರಣದಿಂದಾಗಿ ಘನ ಕಾರ್ಬನ್ ಡೈ ಆಕ್ಸೆನ್ನು ಶುಷ್ಕ ಮಂಜುಗಡ್ಡೆ (dry ice) ಎನ್ನುವರು.
16. ಯಾವುದೇ ವಸ್ತುವಿನ ಸ್ಥಿತಿ ಬದಲಾಗುವಾಗ ತಾಪವು ಸ್ಥಿರವಾಗಿರುತ್ತದೆ. ಏಕೆ?
ದ್ರವ್ಯಗಳ ಸ್ಥಿತಿ ಬದಲಾಗುವಾಗ ತಾಪವು ಸ್ಥಿರವಾಗಿರುತ್ತದೆ.ದ್ರವ್ಯಗಳ ತಾಪ ಹೆಚ್ಚಿಸಲು ನೀಡಿದ ಶಾಖವು ಕಣಗಳ ನಡುವಿನ ಆಕರ್ಷಣ ಬಲ ಮೀರಿ ದ್ರವ್ಯಗಳ ಸ್ಥಿತಿ ಬದಲಾವಣೆಗೆ ಬಳಕೆಯಾಗುತ್ತದೆ.ಆದುದರಿಂದ ಯಾವುದೇ ವಸ್ತುವಿನ ಸ್ಥಿತಿ ಬದಲಾಗುವಾಗ ತಾಪವು ಸ್ಥಿರವಾಗಿರುತ್ತದೆ. 4.
17. ವಾತಾವರಣದ ಅನಿಲಗಳನ್ನು ದ್ರವಿತಗೊಳಿಸುವ ವಿಧಾನಗಳಿದ್ದರೆ ಸಲಹೆ ನೀಡಿ.
ಅನಿಲಗಳಲ್ಲಿನ ಶಾಪವನ್ನು ಕಡಿಮೆ ಮಾಡಿ ಮತ್ತು ಒತ್ತಡ ಹಾಕಿ ಅನಿಲಗಳನ್ನು ದ್ರವಸ್ಥಿತಿಗೆ ತರಬಹುದು.ದ್ರವವು ಯಾವುದೇ ತಾಪದಲ್ಲಿ ಆದರ ಕುದಿಬಿಂದುವನ್ನು ತಲುಪುವ ಮೊದಲೇ ಆವಿಯಾಗುವ ವಿದ್ಯಮಾನವನ್ನು ಬಾಷ್ಪೀಕರಣ ಎಂದು ಕರೆಯುವರು.
ಬಾಷ್ಪೀಕರಣ ಮೇಲೆ ಪ್ರಭಾವ ಬೀರುವ ಅಂಶಗಳು:
1.ಬಾಷ್ಪೀಕರಣವು ಮೇಲ್ಮ ಮೇಲೆ ನಡೆಯುವ ವಿದ್ಯಮಾನವಾಗಿದೆ. ಮೇಲೆ ವಿಸ್ತೀರ್ಣ ಹೆಚ್ಚಾದಂತೆ ಬಾಷ್ಪೀಕರಣದ ದರವು ಹೆಚ್ಚಾಗುತ್ತದೆ.
2.ತಾಪ ಹೆಚ್ಚಾದಂತೆ ಬಾಷ್ಪೀಕರಣದ ದರವು ಹೆಚ್ಚಾಗುತ್ತದೆ.
3.ಆದ್ರತೆ ಪ್ರಮಾಣ ಗಾಳಿಯಲ್ಲಿ ಹೆಚ್ಚಿದ್ದರೆ ಬಾಷ್ಪೀಕರಣದ ದರವು ಕಡಿಮೆಯಾಗುತ್ತದೆ.
4.ಗಾಳಿಯ ವೇಗ ಹೆಚ್ಚಾಗಿದ್ದಾಗ ಬಾಷ್ಪೀಕರಣದ ದರವು ಹೆಚ್ಚಾಗಿರುತ್ತದೆ.
18.ಬಾಷ್ಪೀಕರಣವು ತಂಪಾಗುವಿಕೆಗೆ ಹೇಗೆ ಕಾರಣವಾಗಿದೆ?
ತೆರೆದಿಟ್ಟ ಪಾತ್ರೆಯಲ್ಲಿ ದ್ರವವು ನಿರಂತರವಾಗಿ ಆವಿಯಾಗುತ್ತಿರುತ್ತದೆ. ದ್ರವಗಳಲ್ಲಿನ ಕಣಗಳು ಬಾಷಿಕರಣವಾಗುವಾಗ ಕಳೆದುಕೊಂಡ ಶಕ್ತಿಯನ್ನು ಸುತ್ತಮುತ್ತಲಿನ ವಾತಾವರಣದಿಂದ ಮರಳಿ ಪಡೆದುಕೊಳ್ಳುತ್ತವೆ. ಸುತ್ತಮುತ್ತಲಿನಿಂದ ಹೀರಿಕೆಯಾದ ಈ ಶಕ್ತಿಯಿಂದ ವಾತಾವರಣವು ತಂಪಾಗುತ್ತದೆ.
19. ನಮ್ಮ ಅಂಗೈ ಮೇಲೆ ಸ್ವಲ್ಪ ಅಸಿಟೋನ್ (nail polish remover) ಅನ್ನು ಸುರಿದಾಗ ಏನಾಗುವುದು?
ಅಂಗೈ ತಂಪಾಗುತ್ತದೆ. ಕಾರಣ ಆಸಿಟೋನ್ ಕಣಗಳು ಅಂಗೈ ಮೇಲಿನ ಶಕ್ತಿಯನ್ನು ಅಥವಾ ಸುತ್ತಲಿನ ಶಕ್ತಿಯನ್ನು ಬಳಸಿಕೊಳ್ಳುವುದು ಮತ್ತು ಆವಿಯಾಗುವುದು.
20.ಬೇಸಗೆಯಲ್ಲಿ ಮಡಕೆಯಲ್ಲಿನ ನೀರು ತಂಪಾಗಿರುತ್ತದೆ.
ನೀರು ಬಾಷ್ಪೀಕರಣವಾಗುವಾಗ ತಾಪ ಶಕ್ತಿಯನ್ನು ಹೀರಿಕೊಳ್ಳುವುದರಿಂದ ಮಡಕೆಯಲ್ಲಿನ ನೀರು ತಂಪಾಗಿರುತ್ತದೆ. ಬೇಸಿಗೆಯ ದಿನದಲ್ಲಿ ತಮ್ಮ ಮನೆಯ ಮೇಲ್ಲಾವಣಿ ಅಥವಾ ತೆರೆದ ಮೈದಾನದಲ್ಲಿ ನೀರನ್ನು ಚಿಮುಕಿಸಲು ಕಾರಣ ನೀರಿನ ದೊಡ್ಡ ಆವೀಕರಣ ಗುಪ್ತೋಷ್ಣವು ಬಿಸಿಯಾದ ಮೇಲ್ಮೈಯನ್ನು ತಂಪಾಗಿಸಲು ಸಹಾಯಕವಾಗಿರುತ್ತದೆ
21.ಬೇಸಿಗೆ ಕಾಲದಲ್ಲಿ ನಾವು ಹತ್ತಿ ಬಟ್ಟೆಗಳನ್ನೇ ಏಕೆ ಧರಿಸಬೇಕು?
ಬೇಸಿಗೆಯಲ್ಲಿ, ನಮ್ಮ ದೇಹದ ಯಾಂತ್ರಿಕ ವ್ಯವಸ್ಥೆಯ ಕಾರಣದಿಂದಾಗಿ ನಾವು ಹೆಚ್ಚು ಬೆವರು ಸುರಿಸುವುದರಿಂದ ನಮ್ಮನ್ನು ತಂಪಾಗಿಡುತ್ತದೆ. ಬಾಸ್ಪೀಕರಣವಾಗುವಾಗ ದ್ರವದ ಮೇಲ್ಮನಲ್ಲಿನ ಕಣಗಳು ಸುತ್ತಲಿನ ಶಕ್ತಿ ಅಥವಾ ದೇಹದ ಮೇಲ್ಮೈನ ಶಕ್ತಿಯನ್ನು ಬಳಸಿಕೊಂಡು ಆವಿಯಾಗುತ್ತವೆ. ದೇಹದಿಂದ ಬಿಡುಗಡೆಯಾದ ಶಾಖ ಶಕ್ತಿಯು ಆವೀಕರಣ ಗುಪ್ತೋಷ್ಣ ಕಾರಣವಾದ ಶಾಖ ಶಕ್ತಿಗೆ ಸಮವಾಗಿರುತ್ತದೆ. ಹತ್ತಿಯು ನೀರನ್ನು ಹೀರಿಕೊಳ್ಳುವ ಒಂದು ಉತ್ತಮ ವಸ್ತು ಮತ್ತು ಇದು ಬೆವರನ್ನು ಹೀರಿಕೊಂಡು ವಾತಾವರಣದಲ್ಲಿ ಸುಲಭವಾಗಿ ಆವಿಯಾಗಲು ಸಹಾಯಕವಾಗಿದೆ.
22.ಮಂಜುಗಡ್ಡೆಯಂತಹ ಕಂಪಿತ ನೀರಿರುವ ಗಾಜಿನ ಪಾತ್ರೆಯ ಹೊರ ಮೇಲೆ ಮೇಲೆ ನಾವು ನೀರಿನ ಹನಿಗಳನ್ನು ನೋಡುತ್ತೇವೆ. ಏಕೆ?
ಮಂಜುಗಡ್ಡೆಯಂತಹ ತಂಪಿತ ನೀರು ಇರುವ ಒಂದು ಪಾತ್ರೆಯಲ್ಲಿ ಶೀಘ್ರವಾಗಿ ಪಾತ್ರೆಯ ಹೊರ ಮೇಲ್ಮೈ, ಮೇಲೆ ನೀರಿನ ಸಣ್ಣ ಹನಿಗಳು ಕಂಡು ಬರುತ್ತವೆ, ವಾತಾವರಣದಲ್ಲಿನ ನೀರಾವಿಯ ಕಣಗಳು ತಂಪಾದ ಲೋಟದ ಹತ್ತಿರ ಬಂದಾಗ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಮತ್ತು ಧವಸ್ಥಿತಿಗೆ ಬರುತ್ತವೆ, ಆದುದರಿಂದ ನಾವು ನೀರಿನ ಹನಿಗಳಾಗಿ ನೋಡುತ್ತೇವೆ.
23. ತಂಪುಕಾರಿಯು (desert cooler), ಬಿಸಿಯಾದ ಶುಷ್ಕ ದಿನದಲ್ಲಿ ಹೆಚ್ಚು ತಂಪಾಗಿಸುತ್ತದೆ ಏಕೆ?
ದ್ರವಗಳಲ್ಲಿನ ಕಣಗಳು ಬಾಸ್ಪೀಕರಣವಾಗುವಾಗ ಕಳೆದುಕೊಂಡ ಶಕ್ತಿಯನ್ನು ಸುತ್ತಮುತ್ತಲಿನ ವಾತಾವರಣದಿಂದ ಮರಳಿ ಪಡೆದುಕೊಳ್ಳುತ್ತವೆ. ಆದುದರಿಂದ ತಂಪುಕಾರಿಯು (desert cooler), ಬಿಸಿಯಾದ ಶುಷ್ಕ ದಿನದಲ್ಲಿ ಹೆಚ್ಚು ತಂಪಾಗಿಸುತ್ತದೆ.
24. ನಾವು ಬಿಸಿಯಾದ ಚಹಾ ಮತ್ತು ಹಾಲನ್ನು ವೇಗವಾಗಿ ಹೀರಲು ತಟ್ಟೆಯಿಂದ ಸಾಧ್ಯವಾಗುತ್ತದೆ,ಆದರೆ ಲೋಟದಿಂದ ಸಾಧ್ಯವಾಗುವುದಿಲ್ಲ ಏಕೆ?
ತಟ್ಟೆಯ ಮೇಲ್ಮೈ ವಿಸ್ತೀರ್ಣ ಚಹಾ ಲೋಟಕ್ಕಿಂತ ತುಂಬಾ ಹೆಚ್ಚು. ಆದ್ದರಿಂದ ಬಾಷ್ಟ್ರೀಕರಣ ಹೆಚ್ಚು ವೇಗವಾಗಿ ಆಗುತ್ತದೆ.ಆದುದರಿಂದನಾವು ಬಿಸಿಯಾದ ಚಹಾ ಮತ್ತು ಹಾಲನ್ನು ವೇಗವಾಗಿ ಹೀರಲು ಪಟ್ಟೆಯಿಂದ ಸಾಧ್ಯವಾಗುತ್ತದೆ.
25. ಬೇಸಿಗೆಯಲ್ಲಿ ನಾವು ಯಾವ ತರಹದ ಬಟ್ಟೆಗಳನ್ನು ಧರಿಸಬೇಕು?
ಬೇಸಿಗೆಯಲ್ಲಿ ನಾವು ಹತ್ತಿ ತರಹದ ಬಟ್ಟೆಗಳನ್ನು ಧರಿಸಬೇಕು.
26. ಕುದಿಯುವ ನೀರು ಅಥವಾ ಹದೆ, ಇವುಗಳಲ್ಲಿ ಯಾವುದು ತೀವ್ರವಾದ ಸುಟ್ಟಗಾಯಗಳನ್ನು ಉಂಟುಮಾಡುತ್ತದೆ?
ಹಬೆ ಕುದಿಯುವ ನೀರಿಗಿಂತ ಹೆಚ್ಚು ಶಕ್ತಿ ಹೊಂದಿದೆ.ಹಬೆಯಲ್ಲಿ ಗುಪ್ತಷವು ಹೆಚ್ಚಿರುತ್ತದೆ.ಆದುದರಿಂದ ಹದೆ ತೀವ್ರವಾದ ಸುಟ್ಟಗಾಯಗಳನ್ನು ಉಂಟುಮಾಡುತ್ತದೆ.
FAQ
ಸ್ಥಳವನ್ನು ಆಕ್ರಮಿಸುವ ಮತ್ತು ದ್ರವ್ಯರಾಶಿಯನ್ನು ಹೊಂದಿರುವ ವಸ್ತುಗಳಿಗೆ ದ್ರವ್ಯ ಎನ್ನುವರು.
ನಿರ್ದಿಷ್ಟ ತಾಪದಲ್ಲಿ ಘನವಸ್ತುಗಳು ದ್ರವಿಸಿ ವಾತಾವರಣದ ಒತ್ತಡದಲ್ಲಿ ದ್ರವಸ್ಥಿತಿಗೆ ಪರಿವರ್ತನೆಯಾಗುವ ಶಾಪವನ್ನು ದ್ರವನಬಿಂದು ಎಂದು ಕರೆಯುತ್ತಾರೆ.
ನೀರು ಬಾಷ್ಪೀಕರಣವಾಗುವಾಗ ತಾಪ ಶಕ್ತಿಯನ್ನು ಹೀರಿಕೊಳ್ಳುವುದರಿಂದ ಮಡಕೆಯಲ್ಲಿನ ನೀರು ತಂಪಾಗಿರುತ್ತದೆ. ಬೇಸಿಗೆಯ ದಿನದಲ್ಲಿ ತಮ್ಮ ಮನೆಯ ಮೇಲ್ಲಾವಣಿ ಅಥವಾ ತೆರೆದ ಮೈದಾನದಲ್ಲಿ ನೀರನ್ನು ಚಿಮುಕಿಸಲು ಕಾರಣ ನೀರಿನ ದೊಡ್ಡ ಆವೀಕರಣ ಗುಪ್ತೋಷ್ಣವು ಬಿಸಿಯಾದ ಮೇಲ್ಮೈಯನ್ನು ತಂಪಾಗಿಸಲು ಸಹಾಯಕವಾಗಿರುತ್ತದೆ
ಇತರೆ ವಿಷಯಗಳು:
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf