8ನೇ ತರಗತಿ ಘರ್ಷಣೆ ವಿಜ್ಞಾನ ನೋಟ್ಸ್‌ | 8th Standard Science Chapter 8 Notes

8ನೇ ತರಗತಿ ವಿಜ್ಞಾನ ಘರ್ಷಣೆ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, 8th Standard Science Chapter 8 Notes Question Answe Mcq Pdf Download in Kannada Medium Kseeb Solutions For Class 8 Science Chapter 8 Notes 8th Standard Science Gharshane Question Answer Pdf 8th Class Science 8th Lesson Notes in Kannada Medium 2022

8th Standard Science Chapter 8 Notes

1.ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ,

(a) ಸಂಪರ್ಕದಲ್ಲಿರುವ ಮೇಳ್ಳೆಗಳ ನಡುವಿನ ಚಲನೆಯನ್ನು ಘರ್ಷಣೆಯು ವಿರೋಧಿಸುತ್ತದೆ.

(b) ಘರ್ಷಣೆಯ ಮೇಲ್ಮೈಗಳ ಸ್ವಭಾವವನ್ನು ಅವಲಂಬಿಸಿರುತ್ತದೆ.

(c) ಘರ್ಷಣೆಯ ಉಷ್ಣವನ್ನು ಉಂಟುಮಾಡುತ್ತದೆ.

(d) ಕೇರಂ ಬೋರ್ಡಿನ ಮೇಲೆ ಪೌಡರ್‌ ಉದುರಿಸುವುದರಿಂದ ಘರ್ಷಣೆಯನ್ನು ಕಡಿಮೆಗೊಳಿಸುತ್ತದೆ.

(e) ಕಾರು ಘರ್ಷಣೆಯು ಸ್ಥಾಯಿ ಘರ್ಷಣೆಗಿಂತ ಕಡಿಮೆಯಾಗಿರುತ್ತದೆ

2. ಉರುಳು, ಸ್ಥಾಯಿ, ಮತ್ತು ಚಾರು ಘರ್ಷಣೆಗಳನ್ನು ಅವುಗಳ ಬಲದ ಇಳಿಕೆಯ ಕ್ರಮದಲ್ಲಿ ಜೋಡಿಸಲು ನಾಲ್ಕು ಮಕ್ಕಳಿಗೆ ತಿಳಿಸಲಾಯಿತು, ಅವರು ಜೋಡಿಸಿದ ಜೋಷಣೆಗಳನ್ನು ಈ ಕೆಳಗೆ ನೀಡಲಾಗಿದೆ. ಸರಿಯಾದ ಜೋಡಣೆಯನ್ನು ಆರಿಸಿ,

(a) ಉರುಳು, ಸ್ಥಾಯಿ, ಜಾರು (b) ಉರುಳು, ಜಾರು, ಸ್ಥಾಯಿ (c)ಸ್ಥಾಯಿ, ಜಾರು, ಉರುಳು (d) ಜಾರು, ಸ್ಥಾಯಿ, ಉರುಳು

ಉತ್ತರ: (c) ಸ್ಥಾಯಿ, ಜಾರು, ಉರುಳು

3. ಆಲಿಡಾಳು ತನ್ನ ಆಟಿಕೆಯ ಕಾರನ್ನು ಒಣ ಅಮೃತಶಿಲೆಯ ನೆಲ, ಒದ್ದೆಯಾದ ಅಮೃತಶಿಲೆಯ ನೆಲ, ವೃತ್ತ ಪತ್ರಿಕೆ ಮತ್ತು ನೆಲದಲ್ಲಿ ಹರಡಿದ ಟವಲ್ಲಿನ ಮೇಲೆ ಓಡಿಸುತ್ತಾಳೆ, ವಿವಿಧ ಮೇಲ್ಮೈಗಳ ಮೇಲೆ ಆ ಕಾರಿನ ಮೇಲೆ ವರ್ತಿಸುತ್ತಿರುವ ಘರ್ಷಣಾ ಬಲದ ಏರಿಕೆಯ ಕ್ರಮವು :

ಉತ್ತರ: a) ಒದ್ದೆಯಾದ ಅಮೃತಶಿಲೆ ನೆಲ, ಒಣ ಅಮೃತಶಿಲೆಯ ನೆಲ, ವೃತ್ತ ಪತ್ರಿಕೆ, ಮತ್ತು ಟವಲ್

4. ನೀವು ಬರೆಯುವ ಡೆಸ್ಕ್ ಸ್ವಲ್ಪ ಓರೆಯಾಗಿದೆ, ಅದರ ಮೇಲಿರಿಸಿರುವ ಪುಸ್ತಕವು ಜಾರಲು ಆರಂಭಿಸುತ್ತದೆ. ಅದರ ಮೇಲೆ ವರ್ತಿಸುವ ಘರ್ಷಣಾ ಬಲದ ದಿಕ್ಕನ್ನು ತೋರಿಸಿ,

ಉತ್ತರ: ಓರೆಯಾದ ಡೆಸ್ಕ್‌ನ ಮೇಲಿರುವ ಪುಸ್ತಕವು ಜಾರಲು ಪ್ರಾರಂಭಿಸಿದಾಗ, ಅವುಗಳ ನಡುವೆ ಘರ್ಷಣಬಲವು ವರ್ತಿಸುತ್ತದೆ. ಘರ್ಷಣಾಬಲವು ಪುಸ್ತಕದ ಚಲನೆಯ ವಿರುದ್ಧ ದಿಕ್ಕಿನಲ್ಲಿ ವರ್ತಿಸುತ್ತದೆ.

5. ನೀವು ಬಕೆಟ್ಟಿನಲ್ಲಿರುವ ಸೋಪಿನ ನೀರನ್ನು ಅಮೃತಶಿಲೆಯ ನೆಲದ ಮೇಲೆ ಆಕಸ್ಮಿಕವಾಗಿ ಚೆಲ್ಲಿದ್ದೀರಿ, ಆಗ ಅದರ ಮೇಲೆ ನಡೆಯಲು ನಿಮಗೆ ಸುಲಭವಾಗುತ್ತದೆಯೇ ಅಥವಾ ಕಷ್ಟವಾಗುತ್ತದೆಯೇ? ಏಕೆ?

ಉತ್ತರ: ನಮ್ಮ ಪಾದಗಳು ಮತ್ತು ನೆಲದ ನಡುವಿನ ಘರ್ಷಣಾ ಬಲದಿಂದ ನಾವು ನಡೆಯುವಾಗ ಮುಂದೆ ಸಾಗಲು ಸಾಧ್ಯವಾಗುತ್ತದೆ. ಅಮೃತಶಿಲೆಯ ನೆಲದ ಮೇಲೆ ಸೋಪಿನ ನೀರನ್ನು ಚೆಲ್ಲಿರುವುದರಿಂದ ನಮ್ಮ ಪಾದಗಳು ಮತ್ತು ನೆಲದ ನಡುವಿನ ಘರ್ಷಣೆಯು ಅತ್ಯಂತ ಕಡಿಮೆ ಇರುತ್ತದೆ. ಆದ್ದರಿಂದ ಆ ಸಂದರ್ಭದಲ್ಲಿ ನಾವು ನಡೆಯಲು ಕಷ್ಟವಾಗುತ್ತದೆ.

6. ಆಟಗಾರರು ಸ್ಪೈಕ್ ಇರುವ ಬೂಟುಗಳನ್ನು ಏಕೆ ಧರಿಸುತ್ತಾರೆ ಎಂದು ವಿವರಿಸಿ,

ಉತ್ತರ: ಆಟಗಾರರು ಸ್ಪೈಕ್ ಇರುವ ಬೂಟುಗಳನ್ನು ಧರಿಸುತ್ತಾರೆ, ಏಕೆಂದರೆ ಸ್ಪೈಕ್ಗಳು ಬೂಟುಗಳು ಮತ್ತು ನೆಲದ ನಡುವಿನ ಘರ್ಷಣೆಯನ್ನು ಹೆಚ್ಚಿಸುವುದರ‌ ಮೂಲಕ ಓಡುವಾಗ ಹೆಚ್ಚು ಹಿಡಿತವನ್ನು ನೀಡುತ್ತದೆ.

7. ಇಕ್ಬಾಲ್ ಹಗುರವಾದ ಪೆಟ್ಟಿಗೆಯನ್ನು ತಳ್ಳಬೇಕಿದೆ ಮತ್ತು ಸೀಮಾ ಇಂತಹುದೇ ಭಾರವಾಗಿರುವ ಪೆಟ್ಟಿಗೆಯನ್ನು ಅದೇ ನೆಲದ ಮೇಲೆ ತಳ್ಳಬೇಕಿದೆ, ಯಾರು ಹೆಚ್ಚು ಬಲವನ್ನು ಪ್ರಯೋಗಿಸಬೇಕು ಮತ್ತು ಏಕೆ? \

ಉತ್ತರ: ಎರಡು ಮೇಲ್ಮೈಗಳಲ್ಲಿರುವ ಅನಿಯತಗಳ ಪರಸ್ಪರ ಬಂಧನದಿಂದ ಘರ್ಷಣೆ ಉಂಟಾಗುತ್ತದೆ. ಎರಡು ಮೇಲ್ಮೈಗಳನ್ನು ಬಲವಾಗಿ ಒತ್ತಿದಾಗ ಘರ್ಷಣಾ ಬಲ ಹೆಚ್ಚುತ್ತದೆ ಭಾರವಾಗಿರುವ ಪೆಟ್ಟಿಗೆಯು ನೆಲವನ್ನು ಹೆಚ್ಚು ಒತ್ತುವುದರಿಂದ, ಅವುಗಳ ನಡುವಿನ ಘರ್ಷಣೆಯು ಹೆಚ್ಚಿರುತ್ತದೆ ಮತ್ತು ಹಗುರವಾದ ಪೆಟ್ಟಿಗೆಯ ನೆಲವನ್ನು ಕಡಿಮೆ ಒತ್ತುವುದರಿಂದ, ಅವುಗಳ ನಡುವಿನ ಘರ್ಷಣೆಯು ಕಡಿಮೆ ಇರುತ್ತದೆ. ಆದ್ದರಿಂದ, ಸೀಮಾಳು ಇಕ್ಬಾಲ್ ಗಿಂತ ಹೆಚ್ಚು ಬಲವನ್ನು ಪ್ರಯೋಗಿಸಬೇಕು,

8. ಜಾರು ಘರ್ಷಣೆಯ ಸ್ಥಾಯಿ ಘರ್ಷಣೆಗಿಂತ ಏಕೆ ಕಡಿಮೆ ಎಂದು ವಿವರಿಸಿ,

ಉತ್ತರ: ಎರಡು ಮೇಲ್ಮಗಳಲ್ಲಿರುವ ಅನಿಯತಗಳ ಪರಸ್ಪರ ಬಂಧನದಿಂದ ಘರ್ಷಣೆ ಉಂಟಾಗುತ್ತದೆ, ಜಾರು ಘರ್ಷಣೆಯಲ್ಲಿ, ವಸ್ತುವ ಜಾರಲು ಆರಂಭಿಸಿದಾಗ ಅದರ ತಳದ ಮೇಲೆಯಲ್ಲಿರುವ ಸಂಪರ್ಕ ಬಿಂದುಗಳು ಮತ್ತು ನೆಲದ ಮೇಲ್ಮೈಯಲ್ಲಿರುವ ಸಂಪರ್ಕ ಬಿಂದುಗಳೊಂದಿಗೆ ಬಂಧಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ದೊರೆಯುವುದಿಲ್ಲ. ಆದ್ದರಿಂದ, ಜಾರು ಘರ್ಷಣೆಯು ಸ್ಥಾಯಿ ಘರ್ಷಣೆಗಿಂತ ಸ್ವಲ್ಪ ಕಡಿಮೆ ಇರುತ್ತದೆ.

9. ಘರ್ಷಣೆಯು ಮಿತ್ರ ಮತ್ತು ಶತ್ರು ಎರಡೂ ಹೌದು ಎಂಬುದಕ್ಕೆ ಉದಾಹರಣೆಗಳನ್ನು ನೀಡಿರಿ.

ಉತ್ತರ: ಘರ್ಷಣೆಯು ಮಿತ್ರ ಎಂಬುದಕ್ಕೆ ಉದಾಹರಣೆಗಳು:

1.ನಾವು ಕೆಲಸಗಳನ್ನು ಮಾಡಲು, ವಸ್ತುಗಳನ್ನು ಕೈಯಲ್ಲಿ ಹಿಡಿಯಲು ಘರ್ಷಣೆಯು ಸಹಾಯಮಾಡುತ್ತದೆ.

2. ನಾವುಗಳು ನಡೆದಾಡಲು, ನೆಲದ ಮೇಲೆ ಸ್ಥಿರವಾಗಿ ನಿಲ್ಲಲು ನಮ್ಮ ಪಾದಗಳು ಮತ್ತು ನೆಲದ ನಡುವಿನ ಘರ್ಷಣೆಯು ಸಹಾಯ ಮಾಡುತ್ತದೆ.

3. ನಾವು ಪೆನ್ ಅಥವಾ ಪೆನ್ಸಿಲ್ ಬಳಸಿ ಬರೆಯಲು ಅವುಗಳ ತುದಿ ಮತ್ತು ಹಾಳೆಗಳ ನಡುವಿನ ಘರ್ಷಣೆಯು ಕಾರಣವಾಗಿದೆ.

4. ಚಾಕ್ಪೀಸ್ ಬಳಸಿ ಕಪ್ಪುಹಲಗೆ ಮೇಲೆ ಬರೆಯುವಾಗ ಅದರ ಒರಟು ಮೇಲೆ, ಚಾಕ್ ಪೀಸ್ ಅನ್ನು ಸವೆಸಿದಾಗ ಅವುಗಳ ಕಣಗಳು ಕಪ್ಪುಹಲಗೆಗೆ ಅಂಟಿಕೊಳ್ಳುತ್ತದೆ. ಆದರಿಂದಾಗಿ ಅಕ್ಷರಗಳು ಮೂಡುತ್ತದೆ.

5. ಬೆಂಕಿಕಡ್ಡಿಯನ್ನು ಬೆಂಕಿಪೆಟ್ಟಿಗೆಯ ಒರಟು ಮೇಲ್ಮೈ ಮೇಲೆ ಗೀಚಿದಾಗ ಘರ್ಷಣೆಯಿಂದ ಬೆಂಕಿ ಹೊತ್ತಿಕೊಳ್ಳುತ್ತದೆ,

ಘರ್ಷಣೆಯು ಶತೃ ಎಂಬುದಕ್ಕೆ ಉದಾಹರಣೆಗಳು:

1. ಘರ್ಷಣೆಯು ಸ್ಕ್ರೂ, ಬಾಲ್ ಬೇರಿಂಗ್ ಅಥವಾ ಬೂಟಿನ ತಳದ ಅಟ್ಟೆಗಳಂತಹ ವಸ್ತುಗಳನ್ನು ಸವೆದು ಹೋಗುದಂತೆ ಮಾಡುತ್ತದೆ.

2. ಒಂದು ಯಂತ್ರವನ್ನು ಚಾಲನೆ ಮಾಡಿದಾಗ, ಉತ್ಪತ್ತಿಯಾಗುವ ಉಷ್ಣವು ಹೆಚ್ಚಿನ ಶಕ್ತಿಯ ನಷ್ಟಕ್ಕೆ ಕಾರಣವಾಗುತ್ತದೆ.

3. ಘರ್ಷಣೆಯು ಉಷ್ಣವನ್ನೂ ಸಹ ಉತ್ಪಾದಿಸಬಲ್ಲದು. ಇದರಿಂದಾಗಿ ಯಂತ್ರಗಳು ಹಾಳಾಗುತ್ತದೆ.

10. ತರಲಗಳಲ್ಲಿ ಚಲಿಸುವ ವಸ್ತುಗಳು ವಿಶಿಷ್ಟ ಆಕಾರವನ್ನು ಏಕೆ ಹೊಂದಿರಬೇಕು ಎಂದು ವಿವರಿಸಿ

ಉತ್ತರ: ವಸ್ತುಗಳು ತರಲದ ಮೂಲಕ ಹಾದು ಹೋಗುವಾಗ ಅವುಗಳ ಮೇಲೆ ವರ್ತಿಸುವ ಘರ್ಷಣೆಯನ್ನು ಮೀರಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅವು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆ ಘರ್ಷಣೆಯನ್ನು ಕಡಿಮೆಗೊಳಿಸಲು ವಸ್ತುಗಳಿಗೆ ವಿಶೇಷ ಆಕಾರಗಳನ್ನು ನೀಡಲಾಗುತ್ತದೆ. ಆದ್ದರಿಂದ, ತರಲಗಳಲ್ಲಿ ಚಲಿಸುವ ವಸ್ತುಗಳು ವಿಶಿಷ್ಟ ಆಕರವನ್ನು ಹೊಂದಿರಬೇಕು.

11. ಸ್ಥಾಯಿ ಘರ್ಷಣೆ ಎಂದರೇನು?

ಉತ್ತರ: ನಿಶ್ಚಲ ಸ್ಥಿತಿಯಲ್ಲಿರುವ ಕಾಯವೊಂದು ಆ ಕ್ಷಣದಲ್ಲಿ ಚಲಿಸಲಾರಂಭಿಸಲು ವಿರೋಧಿಸುವ ಬಲವನ್ನು ಸ್ಥಾಯಿ ಘರ್ಷಣೆ ಎನ್ನುವರು

12. ಒಂದು ಜೊತೆ ಮೇಲ್ಕೆಗಳ ನಡುವಿನ ಘರ್ಷಣೆಯು ಆ ಮೇಲ್ಮೈಗಳ ನುಣುಪನ್ನು ಅವಲಂಬಿಸಿರುತ್ತದೆ ಎಂಬುದನ್ನು ಒಂದು ಸರಳ ಚಟುವಟಿಕೆಯಿಂದ ವಿವರಿಸಿ.

ಉತ್ತರ: ಒಂದು ಇಟ್ಟಿಗೆಯ ಸುತ್ತಲೂ ದಾರವನ್ನು ಕಟ್ಟಿ ಇಟ್ಟಿಗೆಯನ್ನು ಒಂದು ಸ್ಪಿಂಗ್‌ ಬ್ಯಾಲೆನ್ಸ್‌ನಿಂದ ಎಳೆಯಿರಿ, ಇದಕ್ಕೆ ನೀವು ಒಂದಿಷ್ಟು ಬಲ ಪ್ರಯೋಗ ಮಾಡಬೇಕಾಗುತ್ತದೆ. ಇಟ್ಟಿಗೆಯು ಚಲಿಸಲು ಆರಂಭಿಸಿದ ಕೂಡಲೆ ಸ್ಪ್ರಿಂಗ್ ಬ್ಯಾಲೆನ್ಸ್‌ನ ಸೂಚ್ಯಾಂಕವನ್ನು ಗುರುತಿಸಿಕೊಳ್ಳಿರಿ. ಅದು ಇಟ್ಟಿಗೆಯ ಮೇಲೆ ಮತ್ತು ನೆಲದ ನಡುವಿನ ಘರ್ಷಣಾ ಬಲವನ್ನು ಸೂಚಿಸುತ್ತದೆ, ಈಗ ಒಂದು ಪಾಲಿಥಿನ್ ಹಾಳೆಯಿಂದ ಇಟ್ಟಿಗೆಯನ್ನು ಸುತ್ತಿ ಚಟುವಟಿಕೆಯನ್ನು ಪುನರಾವರ್ತಿಸಿ, ಮೇಲಿನ ಎರಡು ಸಂದರ್ಭಗಳಲ್ಲಿ ಸ್ಪ್ರಿಂಗ್ ಬ್ಯಾಲೆನ್ಸ್‌ನ ಸೂಚ್ಯಾಂಕಗಳಲ್ಲಿ ವ್ಯತ್ಯಾಸವನ್ನು ನಾವು ಕಾಣುತ್ತೇವೆ. ಕಾರಣ, ಇಟ್ಟಿಗೆಯ ಮೇಲೆ ಒರಟಾಗಿದ್ದು ಹೆಚ್ಚು ಘರ್ಷಣೆಯನ್ನು ಒಂಟುಮಾಡುತ್ತದೆ. ಆದರೆ, ಪಾಲಿಥಿನ್‌ ಹಾಳೆಯ ಮೇಲ್ಮೈ ನುಣುಪಾಗಿದ್ದು ಘರ್ಷಣೆಯನ್ನು ಕಡಿಮೆ ಮಾಡುತ್ತದೆ.

13. ನಮ್ಮ ಅನುಕೂಲಕ್ಕಾಗಿ ಘರ್ಷಣೆಯನ್ನು ಏರಿಕೆ ಮಾಡುವ ಕೆಲವು ಸನ್ನಿವೇಶಗಳನ್ನು ಪಟ್ಟಿಮಾಡಿ,

ಉತ್ತರ: 1) ನಾವು ಸುರಕ್ಷಿತವಾಗಿ ನಡೆದಾಡಲು ಪಾದರಕ್ಷೆಗೆ ಮೇಲೆ ಉತ್ತಮ ಹಿಡಿತ ಸಿಗಲೆಂದು ನಮ್ಮ ಪಾದರಕ್ಷೆಯ ಆಟ್ಟೆಯನ್ನು ಕೊರೆದು ವಿನ್ಯಾಸಗೊಳಿಸಿರುತ್ತಾರೆ.

2) ಕಾರುಗಳು, ಟ್ರಕ್‌ಗಳು ಮತ್ತು ಬುಟರ್‌ಗಳ ಟೈರುಗಳ ಹೊರಮೈನ ವಿನ್ಯಾಸಗಳು (ಟ್ರೇಡ್‌ಗಳು) ನೆಲದೊಂದಿಗೆ ಉತ್ತಮ ಹಿಡಿತವನ್ನು ಸಾಧಿಸುತ್ತದೆ.

3) ಬೈಸಿಕಲ್‌ಗಳು ಮತ್ತು ವಾಹನಗಳ ಬ್ರೇಕ್ ವ್ಯವಸ್ಥೆಯಲ್ಲಿ, ಬ್ರೇಕ್ ಪ್ಯಾಡುಗಳನ್ನು ಬಳಸುವುದರ ಮೂಲಕ ನಾವು ಉದ್ದೇಶಪೂರ್ವಕವಾಗಿ ಘರ್ಷಣೆಯನ್ನು ಹೆಚ್ಚಿಸುತ್ತೇವೆ.

4) ಕಬಡ್ಡಿ ಆಟಗಾರರು ಎದುರಾಳಿಗಳನ್ನು ಹಿಡಿಯುವಲ್ಲಿ ಉತ್ತಮ ಹಿಡಿತ ಸಾಧಿಸಲು ತಮ್ಮ ಕೈಗಳನ್ನು ಮಣ್ಣಿನಿಂದ ಉಜ್ಜಿಕೊಳ್ಳುತ್ತಾರೆ.

5) ತಮ್ಮ ಕೈಗಳ ಘರ್ಷಣೆಯನ್ನು ಹೆಚ್ಚಿಸಿಕೊಂಡು ಉತ್ತಮ ಹಿಡಿತ ಸಾಧಿಸಲು ಪೈಲ್ವಾನರು ಒರಟಾದ ಪದಾರ್ಥವೊಂದನ್ನು ಕೈಗಳಿಗೆ ಬಳಿದುಕೊಳ್ಳುತ್ತಾರೆ.

14. ನಮ್ಮ ಅನುಕೂಲಕ್ಕಾಗಿ ಘರ್ಷಣೆಯನ್ನು ಇಳಿಕೆ ಮಾಡುವ ಕೆಲವು ಸನ್ನಿವೇಶಗಳನ್ನು ಪಟ್ಟಿಮಾಡಿ,

ಉತ್ತರ: 1) ಬಾಗಿಲಿನ ಕೀಲುಗಳಿಗೆ ಒಂದೆರಡು ಹನಿ ಎಣ್ಣೆಯನ್ನು ಹಾಕುವುದರಿಂದ ಬಾಗಿಲುಗಳು ಸುಗಮವಾಗಿ ಚಲಿಸುತ್ತವೆ.

2) ಕೇರಂ ಬೋರ್ಡ್‌ನ ಮೇಲೆ ನಾವು ನುಣುಪಾದ ಪುಡಿಯನ್ನು ಉದುರಿಸುವುದರಿಂದ, ಕೇರಂ ಪಾನ್‌ಗಳು ಸುಲಭವಾಗಿ ಜಾರುವಂತೆ ಮಾಡಬಹುದು,

3) ಬೈಸಿಕಲ್ ಮತ್ತು ಮೋಟಾರು ಯಂತ್ರಗಳ ಚಲಿಸುವ ಭಾಗಗಳ ನಡುವ ಎಣ್ಣೆ, ಗ್ರೀಸ್ ಅಥವಾ ಗ್ರಾಫೈಟನ್ನು ಹಾಕುವುದರಿಂದ, ಯಂತ್ರಗಳ ಸವೆತ ಮತ್ತು ಶಬ್ಧವನ್ನು ಕಡಿಮೆ ಮಾಡುವುದರೊಂದಿಗೆ ಯಂತ್ರಗಳ ಸಾಮರ್ಥವನ್ನು ಹೆಚ್ಚಿಸಬಹುದು.

4) ಲಗೇಜ್‌ನ ಜೋಡಣೆಗಳು ಮತ್ತು ಇತರ ಭಾಗಗಳಿಗೆ ಪುಟ್ಟ ಚಕ್ರಗಳನ್ನು ಜೋಡಿಸುವುದರಿಂದ, ನಾವು ಲಗೇಜ್ ಅನ್ನು ಸುಲಭವಾಗಿ ಎಳೆದೊಯ್ಯಬಹುದು, ಏಕೆಂದರೆ, ಉರುಳುವಿಕೆಯು ಘರ್ಷಣೆಯನ್ನು ಕಡಿಮೆಗೊಳಿಸುತ್ತದೆ.

15. ಮೇಲ್ಮೈಗಳನ್ನು ನುಣವುಗೊಳಿಸುವುದರಿಂದ ಅಥವಾ ಹೆಚ್ಚು ಮಾರ್ದಕ ಬಳಸುವುದರಿಂದ ಘರ್ಷಣೆಯನ್ನು ಶೂನ್ಯಗೊಳಿಸಲು ಸಾಧ್ಯವೆ?

ಉತ್ತರ: ಇಲ್ಲ. ಮೇಲ್ಮೈಗಳನ್ನು ನುಣಪುಗೊಳಿಸುವುದರಿಂದ ಅಥವಾ ಹೆಚ್ಚು ಮಾರ್ದಕ ಬಳಸುವುದರಿಂದ ಘರ್ಷಣೆಯನ್ನು ಶೂನ್ಯಗೊಳಿಸಲು ಸಾಧ್ಯವಿಲ್ಲ, ಏಕೆಂದರೆ, ಪರಸ್ಪರ ಸಂಪರ್ಕದಲ್ಲಿರುವ ಯಾವುದೇ ಎರಡು ಮೇಲ್ಮೈಗಳ ನಡುವೆ ಕನಿಷ್ಟ ಘರ್ಷಣೆಯು ಇದ್ದೇಯಿರುತ್ತದೆ.

16. ಉರುಳು ಘರ್ಷಣೆ ಎಂದರೇನು?

ಉತ್ತರ; ಒಂದು ಕಾಯ ಮತ್ತೊಂದರ ಮೇಲೆ ಮೇಲೆ ಉರುಳುವಾಗ, ಅದರ ಚಲನೆಗೆ ಉಂಟಾಗುವ ಪ್ರತಿರೋಧವನ್ನು ಉರುಳು ಘರ್ಷಣೆ ಎಂದು ಕರೆಯುತ್ತಾರೆ.

FAQ

1. ಉರುಳು ಘರ್ಷಣೆ ಎಂದರೇನು?

ಉತ್ತರ; ಒಂದು ಕಾಯ ಮತ್ತೊಂದರ ಮೇಲೆ ಮೇಲೆ ಉರುಳುವಾಗ, ಅದರ ಚಲನೆಗೆ ಉಂಟಾಗುವ ಪ್ರತಿರೋಧವನ್ನು ಉರುಳು ಘರ್ಷಣೆ ಎಂದು ಕರೆಯುತ್ತಾರೆ.

2. ಸ್ಥಾಯಿ ಘರ್ಷಣೆ ಎಂದರೇನು?

ಉತ್ತರ: ನಿಶ್ಚಲ ಸ್ಥಿತಿಯಲ್ಲಿರುವ ಕಾಯವೊಂದು ಆ ಕ್ಷಣದಲ್ಲಿ ಚಲಿಸಲಾರಂಭಿಸಲು ವಿರೋಧಿಸುವ ಬಲವನ್ನು ಸ್ಥಾಯಿ ಘರ್ಷಣೆ ಎನ್ನುವರು

ಇತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

8th Standard Kannada Text Book Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh