8ನೇ ತರಗತಿ ಜೀವಕೋಶ – ರಚನೆ ಮತ್ತು ಕಾರ್ಯಗಳು ವಿಜ್ಞಾನ ನೋಟ್ಸ್ ಪ್ರಶ್ನೋತ್ತರ, 8th Standard Science Chapter 11 Notes Question Answer in Kannada Medium 2023 Kseeb Solutions For Class 8 Science Chapter 11 Notes 8th Class Science Jeevakosha Rachane Mattu Karyagalu Notes in Kannada 8th Standard Science 11 Lesson Notes Pdf
8th Standard Science Chapter 11 Notes in Kannada
1.ಈ ಕೆಳಗಿನ ಹೇಳಿಕೆಗಳು ಸರಿಯೇ (ಸ) ಅಥವಾ ತಪ್ಪೇ (ತ) ಎಂದು ಸೂಚಿಸಿ,
(೧) ಏಕಕೋಶೀಯ ಜೀವಿಗಳು ಒಂದೇ ಜೀವಕೋಶದಿಂದಾದ ದೇಹವನ್ನು ಹೊಂದಿದೆ. ಉತ್ತರ: ಸರಿ
(b) ಸ್ನಾಯು ಜೀವಕೋಶಗಳು ಕವಲೊಡೆದಿದೆ. ಉತ್ತರ: ತಪ್ಪು
(C) ಅಂಗವು ಒಂದು ಜೀವಿಯ ಮೂಲಘಟಕವಾಗಿದೆ. ಉತ್ತರ ತಪ್ಪು
(d) ಅಮೀಬಾವು ಅನಿಯಮಿತ ಆಕಾರ ಹೊಂದಿದೆ, ಉತ್ತರ: ಸರಿ
2.ಮನುಷ್ಯನ ನರಕೋಶದ ರೇಖಾಚಿತ್ರ ಬರೆಯಿರಿ, ನರಕೋಶಗಳು ಯಾವ ಕಾರ್ಯವನ್ನು ನಿರ್ವಹಿಸುತ್ತದೆ?
ನರಕೋಶವು ಸಂದೇಶಗಳನ್ನು ಸ್ವೀಕರಿಸುವ ಮತ್ತು ವರ್ಗಾಯಿಸುವ ಮೂಲಕ ದೇಹದ ವಿಭಿನ್ನ ಕಾರ್ಯಗಳ ಸಹಭಾಗಿತ್ವ ಮತ್ತು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
(a) ಕೋಶದ್ರವ್ಯ
(b) ಒಂದು ಜೀವಕೋಶದ ಕೋಶಕೇಂದ್ರ
ಉತ್ತರ: (a) ಕೋಶದ್ರವ್ಯ: ಇದು ಕೋಶಕೇಂದ್ರ ಮತ್ತು ಕೋಶಪೊರೆಯ ನಡುವೆ ಕಂಡುಬರುವ ಲೋಳೆಯಂತಹ ಪದಾರ್ಥ. ಜೀವಕೋಶದ ಇತರ ಅನೇಕ ಘಟಕಗಳು ಅಥವಾ ಕಣದಂಗಗಳು ಕೋಶದ್ರವ್ಯದೊಳಗೆ ಕಂಡುಬರುತ್ತದೆ. ಅವುಗಳೆಂದರೆ, ಮೈಟೋಕಾಂಡ್ರಿಯ, ಗಾಲ್ಗಿ ಸಂಕೀರ್ಣ, ರೈಬೋಸೋಮ್ ಗಳು ಇತ್ಯಾದಿ, ಜೀವಕೋಶಗಳ ಅಂಗಗಳ ನಡುವೆ ವಸ್ತುಗಳ ವಿನಿಮಯಕ್ಕೆ ಇದು ಸಹಾಯ ಮಾಡುತ್ತದೆ.
(b) ಒಂದು ಜೀವಕೊಶದ ಕೋಶಕೇಂದ್ರ : ಇದು ಜೀವಕೋಶದ ಬಹು ಮುಖ್ಯವಾದ ಘಟಕ, ಇದು ಸಾಮಾನ್ಯವಾಗಿ ಗೋಳಾಕಾರದಲ್ಲಿದ್ದು ಜೀವಕೋಶದ ಮಧ್ಯಭಾಗದಲ್ಲಿರುತ್ತದೆ. ಇದು ಜೀವಕೋಶದ ಚಟುವಟಿಕೆಗಳ ನಿಯಂತ್ರಕ ಕೇಂದ್ರವಾಗಿ ವರ್ತಿಸುತ್ತದೆ. ಅದರಲ್ಲಿನ ಪ್ರಮುಖವಾದ ಮೂರು ಭಾಗಗಳು 11 ಕೋಡಕೇಂದ್ರಪೊರೆ 2) ವರ್ಣತಂತುಗಳು 3] ಕಿರುಕೋಶಕೇಂದ್ರ
1] ಕೋಶಕೇಂದ್ರಪೊರೆ: ಕೋಶಕೇಂದ್ರಪೊರೆಯು ಕೋಶಕೇಂದ್ರವನ್ನು ಕೋಶದ್ರವ್ಯದಿಂದ ಪ್ರತ್ಯೇಕಿಸುತ್ತದೆ, ಈ ಪೊರೆ ಕೂಡಾ ಸೂಕ್ಷ್ಮರಂಧ್ರಗಳಿಂದ ಕೂಡಿದ್ದು ಕೋಶದ್ರವ್ಯ ಮತ್ತು ಕೋಶಕೇಂದ್ರದ ಒಳಭಾಗದ ನಡುವೆ ವಸ್ತುಗಳ ಚಲನೆಗೆ ಅನುವು ಮಾಡಿಕೊಡುತ್ತದೆ.
2] ವರ್ಣತಂತುಗಳು: ಕೋಶಕೇಂದ್ರವು ದಾರದಂತಹ ರಚನೆಗಳನ್ನು ಒಳಗೊಂಡಿದೆ ಅದನ್ನು ವರ್ಣತಂತುಗಳು ಎನ್ನುವರು. ಇವುಗಳು ವಂಶವಾಹಿಗಳನ್ನು ಹೊಂದಿದ್ದು, ಇದು ತಂದೆ ತಾಯಿಗಳಿಂದ ಮರಿಗಳಿಗೆ ಗುಣಗಳ ಆನುವಂಶೀಯತೆಗೆ ಅಥವಾ ವರ್ಗವಣೆಗೆ ಸಹಾಯ ಮಾಡುತ್ತದೆ. ಜೀವಕೋಶಗಳು ವಿಭಜನೆಗೊಳ್ಳುವಾಗ ಮಾತ್ರ ವರ್ಣತಂತುಗಳನ್ನು ನೋಡಬಹುದು.
3] ಕಿರುಕೋಶಕೇಂದ್ರ: ಉನ್ನತ ವರ್ಧನ ಸಾಮರ್ಥ್ಯವುಳ್ಳ ಸೂಕ್ಷ್ಮದರ್ಶಕದಿಂದ ನಾವು ಕೋಶಕೇಂದ್ರದ ಒಳಗೆ ಗೋಳಾಕಾರದ ರಚನೆಯೊಂದನ್ನು ನೋಡಬಹುದು. ಇದನ್ನು ಕಿರುಕೋಶಕೇಂದ್ರ ಎನ್ನುವರು,
4. ಜೀವಕೋಶದ ಯಾವ ಭಾಗವು ಕಣದಂಗಗಳನ್ನು ಒಳಗೊಂಡಿದೆ?
ಉತ್ತರ: ಜೀವಕೋಶದ ಕಣದಂಗಗಳು ಕೋಶದ್ರವ್ಯದೊಳಗೆ ಕಂಡುಬರುತ್ತದೆ.
5. ಪ್ರಾಣಿ ಮತ್ತು ಸಸ್ಯ ಜೀವಕೋಶದ ರೇಖಾಚಿತ್ರಗಳನ್ನು ಬರೆಯಿರಿ, ಅವುಗಳ ನಡುವಿನ ಮೂರು ವ್ಯತ್ಯಾಸಗಳನ್ನು ಪಟ್ಟಿ ಮಾಡಿ,
ಪ್ರಾಣಿ ಜೀವಕೋಶ | ಸಸ್ಯ ಜೀವಕೋಶ |
---|---|
ಸಾಮಾನ್ಯವಾಗಿ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. | ಸಾಮಾನ್ಯವಾಗಿ ಗಾತ್ರದಲ್ಲಿ ಪ್ರಾಣಿ ಜೀವಕೋಶಗಳಿಗಿಂತ ದೊಡ್ಡದಾಗಿರುತ್ತದೆ. |
ಕೋಶಭಿತ್ತಿ, ಸೆಂಟ್ರೋಸೊಮ್ ಮತ್ತು ಪ್ಲಾಸ್ಟಿಡ್ ಗಳು ಇರುವುದಿಲ್ಲ. | ಕೋಶಭಿತ್ತಿ, ಸೆಂಟ್ರೋಸೊಮ್ ಮತ್ತು ಪ್ಲಾಸ್ಟಿಡ್ ಗಳು ಇರುತ್ತದೆ |
ರಸದಾನಿಗಳ ಗಾತ್ರ ಚಿಕ್ಕದಾಗಿರುತ್ತದೆ. | ರಸದಾನಿಗಳ ಗಾತ್ರ ದೊಡ್ಡದಾಗಿರುತ್ತದೆ. |
6. ಯುಕ್ಯಾರಿಯೋಟ್ ಮತ್ತು ಪ್ರೋಕ್ಯಾರಿಯೋಟ್ ನಡುವಿನ ವ್ಯತ್ಯಾಸಗಳನ್ನು ಪಟ್ಟಿಮಾಡಿ
ಯುಕ್ಯಾರಿಯೋಟ್ | ಪ್ರೋಕ್ಯಾರಿಯೋಟ್ |
---|---|
ಸಾಮಾನ್ಯವಾಗಿ ಬಹುಕೋಶೀಯ ಜೀವಿಗಳು, | ಸಾಮಾನ್ಯವಾಗಿ ಏಕಕೋಶೀಯ ಜೀವಿಗಳು |
ಕೋಶಕೇಂದ್ರಗಳು ಕೋಶಪೊರೆಯಿಂದ ಆವೃತವಾಗಿರುವ ಕಾರಣದಿಂದ ನಿರ್ದಿಷ್ಟವಾಗಿರುತ್ತದೆ. | ಕೋಶಕೇಂದ್ರಗಳು ಕೋಶಪೊರೆಯಿಂದ ಆವೃತವಾಗಿರುವ ಕಾರಣದಿಂದ ನಿರ್ದಿಷ್ಟವಾಗಿರುವುದಿಲ್ಲ |
ಕಿರುಕೋಶಕೇಂದ್ರ ಇರುತ್ತದೆ, | ಕಿರುಕೋಶಕೇಂದ್ರಿರುವುದಿಲ್ಲ |
ಪ್ಲಾಸ್ಟಿಡ್ಗಳು ಮೈಟೋಕಾಂಡ್ರಿಯ ಗಾಲ್ಗಿ ಸಂಕೀರ್ಣ ಮುಂತಾದ ಕಣದಂಗಗಳು ಇರುತ್ತವೆ | ಪ್ಲಾಸ್ಟಿಡ್ಗಳು ಮೈಟೋಕಾಂಡ್ರಿಯ ಗಾಲ್ಗಿ ಸಂಕೀರ್ಣ ಮುಂತಾದ ಕಣದಂಗಗಳು ಇರುವುದಿಲ್ಲ |
ಉದಾಹರಣೆ: ತಿಲೀಂದ್ರಗಳು, ಸಸ್ಯಗಳು ಮತ್ತು ಪ್ರಾಣಿ ಜೀವಕೋಶಗಳು | ಉದಾಹರಣೆ: ಬ್ಯಾಕ್ಟಿರಿಯ ಮತ್ತು ನೀಲಿಹಸಿರು ಶೈವಲಗಳು. |
7. ವರ್ಣತಂತುಗಳು ಜೀವಕೋಶದ ಯಾವ ಭಾಗದಲ್ಲಿ ಕಂಡುಬರುತ್ತದೆ ಅವುಗಳ ಕಾರ್ಯವನ್ನು ಬರೆಯಿರಿ
ಉತ್ತರ: ವರ್ಣತಂತುಗಳು ಜೀವಕೋಶದ ಕೋಶಕೇಂದ್ರದಲ್ಲಿ ಕಂಡುಬರುತ್ತದೆ. ಇವುಗಳು ವಂಶವಾಹಿಗಳನ್ನು ಹೊಂದಿದ್ದು, ಇದು ತಂದೆ ತಾಯಿಗಳಿಂದ ಮರಿಗಳಿಗೆ ಗುಣಗಳ ಆನುವಂಶೀಯತೆಗೆ ಅಥವಾ ರ್ವಾವಣೆಗೆ ಸಹಾಯ ಮಾಡುತ್ತದೆ.
8. ‘ಜೀವಕೋಶಗಳು ಜೀವಿಗಳ ರಚನೆಯ ಮೂಲಘಟಕಗಳಾಗಿವೆ’ ವಿವರಿಸಿ,
ಉತ್ತರ: ಜೀವಕೋಶಗಳು ಸಸ್ಯ ಮತ್ತು ಪ್ರಾಣಿಗಳ ಹಲವು ಘಟಕಗಳನ್ನು ಸಂಯೋಜಿಸುತ್ತವೆ, ಬೀಜಕೋಶಗಳು ಜೀವಿಗಳ ಅತ್ಯಂತ ಚಿಕ್ಕ ಘಟಕಗಳಾಗಿದ್ದು, ಜೈವಿಕ ಕ್ರಿಯೆಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅವುಗಳು ಜೀವಿಗಳ ರಚನಾತ್ಮಕ ಘಟಕಗಳಾಗಿದೆ. ಆದ್ದರಿಂದ, ಜೀವಕೋಶಗಳು ಜೀವಿಗಳ ರಚನೆಯ ಮೂಲಘಟಕಗಳಾಗಿದೆ.
9. ಕ್ಲೋರೋಪ್ಲಾಸ್ಟ್‌ಗಳು ಸಸ್ಯಜೀವಕೋಶಗಳಲ್ಲಿ ಮಾತ್ರ ಏಕೆ ಕಂಡುಬರುತ್ತದೆ ಎಂದು ವಿವರಿಸಿ,
ಉತ್ತರ: ಕ್ಲೋರೋಪ್ಲಾಸ್ಟ್‌ಗಳು ಸಸ್ಯದ ಜೀವಕೋಶಗಳಲ್ಲಿ ಮಾತ್ರ ಕಂಡುಬರುತ್ತವೆ, ಅವು ಹಸಿರು ವರ್ಣಕಗಳಾದ ಪತ್ರಹರಿತ್ತುಗಳನ್ನು ಹೊಂದಿರುತ್ತದೆ. ಪತ್ರಹರಿತ್ತುಗಳು ಹಸಿರು ಸಸ್ಯಗಳಲ್ಲಿ ದುತಿಸಂಶ್ಲೇಷಣ ಕ್ರಿಯೆ ನಡೆಯಲು ಅತ್ಯಾವಶ್ಯಕವಾಗಿದೆ. ಇವುಗಳು ಸೂರ್ಯನ ಬೆಳಕನ್ನು ಹೀರಿಕೊಂಡು, ಆಹಾರ ತಯಾರಿಸಲು ಬಳಸಿಕೊಳ್ಳುತ್ತದೆ.
10. ಪ್ರೋಕ್ಯಾರಿಯೋಟಿಕ್ ಜೀವಕೋಶಗಳು ಎಂದರೇನು?
ಉತ್ತರ: ಕೋಶಕೇಂದ್ರಪೊರೆ ಇಲ್ಲದ ಕೋಶಕೇಂದ್ರವನ್ನು ಹೊಂದಿರುದ ಜೀವಕೋಶಗಳನ್ನು ಪ್ರೋಕ್ಯಾರಿಯೋಟಿಕ್ ಜೀವಕೋಶಗಳು ಎನ್ನುವರು. ಉದಾಹರಣೆ: ಬ್ಯಾಕ್ಟಿರಿಯ ಮತ್ತು ನೀಲಿಹಸಿರು ಶೈವಲಗಳು,
11. ಅಮೀಬಾದ, ಆಕಾರದ ಬಗ್ಗೆ ವಿವರಣೆ ಕೊಡಿ.
ಉತ್ತರ: ಇತರ ಜೀವಿಗಳಂತೆ ಅಮೀಬಾವು ನಿರ್ದಿಷ್ಟವಾದ ಆಕಾರ ಹೊಂದಿಲ್ಲ. ಅದು ತನ್ನ ಆಕಾರವನ್ನು ಬದಲಿಸುತ್ತಲೇ ಇರುತ್ತದೆ. ಅದರ ದೇಹದಿಂದ ಹೊರಚಾಚಿರುವ ವಿವಿಧ ಉದ್ದಗಳ ಚಟಿಕೆಗಳನ್ನು ಮಧ್ಯಪಾದಗಳು ಎನ್ನುವರು, ಆಮೀಬಾವು ಚಲಿಸಿದಂತೆ ಅಥವಾ ಆಹಾರ ಸೇವಿಸಿದಂತೆ ಈ ಚಾಚಿಕೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಕಣ್ಮರೆಯಾಗುತ್ತದೆ.
12. ತನ್ನ ಆಕಾರವನ್ನು ಬದಲಿಸಿಕೊಳ್ಳುವ ಮೂಲಕ ಅಮೀಬಾ ಪಡೆಯುವ ಪ್ರಯೋಜನವೇನು?
ಉತ್ತರ: ಆಕಾರದಲ್ಲಿನ ಬದಲಾವಣೆಯು ಮಿಥ್ಯಪಾದಗಳು ಉಂಟಾಗುವುದರ ಫಲವಾಗಿದೆ. ಇವು ಚಲನೆಗೆ ಅನುಕೂಲವಾಗಿದೆ ಮತ್ತು ಆಹಾರವನ್ನು ಪಡೆಯಲು ಸಹಾಯಕವಾಗಿದೆ.
13. ಜೀವಕೋಶಗಳ ಆಕಾರಗಳ ಬಗ್ಗೆ ತಿಳಿಸಿ,
ಉತ್ತರ: ಸಾಮಾನ್ಯವಾಗಿ ಜೀವಕೋಶಗಳು ದುಂಡಾಗಿ, ಗೋಳಾಕಾರವಾಗಿ ಅಥವಾ ಉದ್ದವಾಗಿರುತ್ತದೆ, ಕೆಲವು ಜೀವಕೋಶಗಳು ಉದ್ದವಾಗಿರುತ್ತದೆ ಮತ್ತು ಎರಡೂ ತುದಿಗಳಲ್ಲಿ ಚೂಪಾಗಿರುತ್ತದೆ ಅವು ಕದಿರಿನಾಕಾರದಲ್ಲಿರುತ್ತದೆ. ಕೆಲವು ವೇಳೆ ಜೀವಕೋಶಗಳು ಸಾಕಷ್ಟು ಉದ್ದವಾಗಿರುತ್ತದೆ. ಕೆಲವು ನರಕೋಶ ಅಥವಾ ನ್ಯೂರಾನ್ ನಂತೆ ಕವಲೊಡೆದಿರುತ್ತದೆ.
14. ಅತ್ಯಂತ ಚಿಕ್ಕ ಮತ್ತು ಅತ್ಯಂತ ದೊಡ್ಡ ಜೀವಕೋಶಗಳಾವುವು, ಅವುಗಳ ಗಾತ್ರಗಳನ್ನು ತಿಳಿಸಿ
ಉತ್ತರ: ಅತ್ಯಂತ ಚಿಕ್ಕ ಜೀವಕೋಶ ಬ್ಯಾಕ್ಟಿರಿಯಾದ್ದಾಗಿದ್ದು 0.1 ರಿಂದ 0.5 ಮೈಕ್ರೋಮೀಟರ್ ಅಳತೆ ಹೊಂದಿದೆ ಮತ್ತು ಅತ್ಯಂತ ದೊಡ್ಡ ಜೀವಕೋಶ ಉಷ್ಟ್ರ ಪಕ್ಷಿಯ ಮೊಟ್ಟೆಯಾಗಿದ್ದು 170mm x 130mm ಅಳತೆ ಹೊಂದಿದೆ.
15. ಒಂದು ಆನೆಯಲ್ಲಿನ ಜೀವಕೋಶಗಳು ಒಂದು ಇಲಿಯಲ್ಲಿನ ಜೀವಕೋಶಗಳಿಗಿಂತ ದೊಡ್ಡದಾಗಿರುತ್ತದೆಯೆ? ನಿಮ್ಮ ಉತ್ತರವನ್ನು ಸಮರ್ಥಿಸಿ
ಉತ್ತರ: ಇಲ್ಲ, ಒಂದು ಆನೆಯಲ್ಲಿನ ಜೀವಕೋಶಗಳು ಒಂದು ಇಲಿಯಲ್ಲಿನ ಜೀವಕೋಶಗಳಿಗಿಂತ ದೊಡ್ಡದಾಗಿರುವುದಿಲ್ಲ ಏಕೆಂದರೆ, ಜೀವಕೋಶಗಳ ಗಾತ್ರವು ಪ್ರಾಣಿ ಅಥವಾ ಸಸ್ಯದ ದೇಹದ ಗಾತ್ರದ ಮೇಲೆ ಅವಲಂಬಿತವಾಗಿಲ್ಲ. ಆನೆಯ ಜೀವಕೋಶಗಳು ಇಲಿಯ ಜೀವಕೋಶಗಳಿಗಿಂತ ಸಾಕಷ್ಟು ದೊಡ್ಡದಾಗಿರಬೇಕಾದ ಅಗತ್ಯವಿಲ್ಲ. ಜೀವಕೋಶದ ಗಾತ್ರವು ಅದರ ಕಾರ್ಯಕ್ಕೆ ಸಂಬಂಧಿಸಿದೆ. ಉದಾಹರಣೆಗೆ, ಆನೆ,ಮತ್ತು ಇಲಿ. ಎರಡೂ ಜೀವಿಗಳ ನರಕೋಶಗಳು ಉದ್ದವಾಗಿರುತ್ತದೆ ಮತ್ತು ಕವಲೊಡೆದಿದೆ.ಅವು ಸಂದೇಶಗಳನ್ನು ರವಾನಿಸದ ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತದೆ.
16. ಅಂಗಾಂಶ ಎಂದರೇನು?
ಉತ್ತರ: ಒಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುವ ಒಂದೇ ರೀತಿಯ ಜೀವಕೋಶಗಳ ಗುಂಪನ್ನು ಅಂಗಾಂಶ ಎನ್ನುವರು.
17. ಜೀವಕೋಶಗಳ ಹೊರೆಯ ಬಗ್ಗೆ ಟಿಪ್ಪಣಿ ಬರೆಯಿರಿ.
ಉತ್ತರ: ಕೋಶದ್ರವ್ಯ ಮತ್ತು ಕೋಶಕೇಂದ್ರಗಳು ಪ್ಲಾಸ್ಮಾಮೆಂಬ್ರೇನ್ ಎಂದೂ ಕರೆಯಲ್ಪಡುವ ಕೋಶಪೊರೆಯಿಂದ ಆವೃತವಾಗಿದೆ. ಕೋಶಪೊರೆಯು ಜೀವಕೋಶಗಳನ್ನು ಪರಸ್ಪರ ಪ್ರತ್ಯೇಕಿಸುತ್ತದೆ ಮತ್ತು ಅದರ ಸುತ್ತಲಿನ ಮಾಧ್ಯಮದಿಂದಲೂ ಪ್ರತ್ಯೇಕಿಸುತ್ತದೆ. ಕೋಶಪೊರೆಯು ಸೂಕ್ಷ್ಮ ರಂಧ್ರಗಳಿಂದಾಗಿದೆ ಮತ್ತು ಒಳಬರುವ ಹಾಗೂ ಹೊರಹೋಗುವ ವಸ್ತುಗಳ ಚಲನೆಗೆ ಅನುವು ಮಾಡಿಕೊಡುತ್ತದೆ. ಕೋಪೊರೆಯು ಜೀವಕೋಶಕ್ಕೆ ಆಕಾರ ಕೊಡುತ್ತದೆ, ಸಸ್ಯಗಳ ಬೀಜಕೋಶಗಳಲ್ಲಿ ಕೋಶಪೊರೆಯ ಜೊತೆಗೆ ಮಂದವಾದ ಹೊರ ಪದರವೊಂದು ಕಂಡುಬರುತ್ತದೆ, ಅದನ್ನು ಕೋಶಭಿತ್ತಿ ಎನ್ನುವರು, ಕೋಶಪೊರೆಯನ್ನು ಆವರಿಸಿದ ಈ ಹೆಚ್ಚುವರಿ ಪದರವು ಸಸ್ಯಗಳಿಗೆ ರಕ್ಷಣೆಗಾಗಿ ಅಗತ್ಯವಾಗಿದೆ. ಏಕೆಂದರೆ, ಉಷ್ಣತೆಯಲ್ಲಿನ ಏರಿಳಿತ, ಗಾಳಿಯ ಅಧಿಕ ವೇಗ, ವಾತಾವರಣದಲ್ಲಿನ ತೇವಾಂಶ ಇತ್ಯಾದಿಗಳಿಂದ ಸಸ್ಯಜೀವಕೋಶಗಳಿಗೆ ರಕ್ಷಣೆಯ ಅಗತ್ಯವಿದೆ. ಸಸ್ಯಗಳು ಚಲಿಸಲಾರವು, ಆದ್ದರಿಂದ, ತನ್ನ ಈ ವ್ಯತ್ಯಾಸಗಳಿಗೆ ತೆರೆದುಕೊಳ್ಳುತ್ತವೆ.
FAQ
ಉತ್ತರ: ಜೀವಕೋಶದ ಕಣದಂಗಗಳು ಕೋಶದ್ರವ್ಯದೊಳಗೆ ಕಂಡುಬರುತ್ತದೆ.
ಉತ್ತರ: ಆಕಾರದಲ್ಲಿನ ಬದಲಾವಣೆಯು ಮಿಥ್ಯಪಾದಗಳು ಉಂಟಾಗುವುದರ ಫಲವಾಗಿದೆ. ಇವು ಚಲನೆಗೆ ಅನುಕೂಲವಾಗಿದೆ ಮತ್ತು ಆಹಾರವನ್ನು ಪಡೆಯಲು ಸಹಾಯಕವಾಗಿದೆ.
ಉತ್ತರ: ಒಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುವ ಒಂದೇ ರೀತಿಯ ಜೀವಕೋಶಗಳ ಗುಂಪನ್ನು ಅಂಗಾಂಶ ಎನ್ನುವರು.
ಇತರೆ ವಿಷಯಗಳು :
8th Standard Kannada Text Book Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.