5th Standard Namma Matu Keli Kannada Notes | 5ನೇ ತರಗತಿ ನಮ್ಮ ಮಾತು ಕೇಳಿ ಕನ್ನಡ ನೋಟ್ಸ್ 

5th Namma Matu Keli Standard Kannada Notes | 5ನೇ ನಮ್ಮ ಮಾತು ಕೇಳಿ ತರಗತಿ ಕನ್ನಡ ನೋಟ್ಸ್ 

5th Namma Matu Keli Standard Kannada Notes | 5ನೇ ನಮ್ಮ ಮಾತು ಕೇಳಿ ತರಗತಿ ಕನ್ನಡ ನೋಟ್ಸ್  , ಪ್ರಶ್ನೆ ಉತ್ತರ question answer, text book pdf download Kannada deevige

ಪದಗಳ ಅರ್ಥ 

ಅಂಚು – ಪಕ್ಕ , ಮೇಲೆ ಅಧಿಪತಿ = ಒಡೆಯ , ನಾಯಕ

ಅವಕಾಶ = ಸಂದರ್‌ಭ ಆಕ್ರೋಶ = ಗರ್ಜನೆ , ಕೋಪಿಸುವಿಕೆ

ಉಪೇಕ್ಷೆ = ಅಲಕ್ಷ ಕಡೆಗಣಿಸುವಿಕೆ ಕಾಡು = ಅರಣ್ಯ ಅಡವಿ

ಕೇಮಸಮಾಚಾರ = ಕುಶಲ , ಆರೋಗ್ಯ ವಿಪಯ ಖಾರ = ತೀಕ್ಷ್ಯ ,

ಕಟು , ಗಳಿಸು = ಸಂಪಾದಿಸು , ಪಡೆ ಚರ್ಚೆ = ವಾಗ್ವಾದ , ತರ್ಕ

ತಾಣ = ಸ್ನಾನ , ಸ್ಥಳ ದೂರು = ನಿಂದಿಸು , ಆಪಾದನೆ

ನಾಯಕತ್ವ ಗುಣ = ಆಲೋಚಿಸಿ ಜವಾಬ್ದಾರಿ ಯನ್ನು

ನಿರ್ವಹಿಸುವ ಮನೋಭಾವ ಪಟಾಕಿ = ಉತ್ಸವಾದಿಗಳಲ್ಲಿ

ಹಾರಿಸುವ ಸಣ್ಣ ಸಿಡಿಮದ್ದು ಪರಿಶೀಲಿಸಲು = ಸೂಕ್ಷ್ಮವಾಗಿ ವಿಚಾರಿಸಿ

ನೋಡುವುದು . ಪ್ರದರ್ಶಿಸು = ಕಾಣುವಂತೆ ಮಾಡು ,ಗಮನಿಸುವಂತೆ

ತೋರಿಸು . ಫಲಕ . = ವಿವರ ಬರೆದು ಹಾಕುವ ಹಲಗೆ .

ಫಲವತ್ತತೆ = ಫಲವುಳ್ಳ ಸಾರವತ್ತಾದ

ಮದ್ದು = ಬಂದೂಕು , ಕೋವಿಗಳಲ್ಲಿ ತುಂಬುವ ಸ್ಫೋಟಕ

ಪುಡಿ . ಮುದ್ದಿಸು = ಪ್ರೀತಿಸು , ಮುದ್ದಾಡು ಮುನ್ನಡೆ = ಏಳಿಗೆ ,

ಪ್ರಗತಿ ಮೆಚ್ಚುಗೆ = ತೃಪ್ತಿ , ಪ್ರಶಂಸೆ = ರಾಕ್ಷಸ = ದಾನವ , ದುಷ್ಕೃಶಕ್ತಿ ,

ವಿಪದ ಗೊಬ್ಬರ ರಾಸಾಯನಿಕ ಗೊಬ್ಬರ

ಸಿಡಿದುಹೋಗು = ಚಿಮ್ಮು , ಕ ವಸ್ತುಗಳನ್ನೊಳ

 ಅಭ್ಯಾಸ

 ಅ ) ಕೆಳಗಿನ ಪ್ರಶ್ನೆಗಳಿಗೆ ಬರೆಯಿರಿ

 1. ಕಾಡಿನ ಅಧಿಪತಿ ಯಾರು ? 

ಆನೆ ಕಾಡಿನ ಅಧಿಪತಿ  . 

 1. ಆನೆಯು ಯಾವುದರಲ್ಲಿ ವಿವರ ಬರೆದು ತರಲು ಸೂಚನೆ ನೀಡಿತು ? 

ಫಲಕದಲ್ಲಿ ವಿವರ ಬರೆದು ತರಲು ಆನೆಯು ಸೂಚನೆ ನೀಡಿತು.  

3 .ಕಡಿಮೆ ಆಹಾರ ನೀಡುತ್ತಾರೆ ‘ಎಂದು ದೂರು ಬರೆದವರು ಯಾರು ?

 ಕಡಿಮೆ ಆಹಾರ ನೀಡುತ್ತಾರೆ ‘ ಎಂದು ‘ ಮನುಷ್ಯರು ದೂರು ಬರೆದವರು ಎತ್ತು .

 1. ಕಾಡು ನಿಮಗೂ ಬೇಕು ‘ ಎಂದು ಎಚ್ಚರಿಸಿದವರು ಯಾರು ? 

‘ ಕಾಡು ನಿಮಗೂ ಬೇಕು ‘ ಎಂದು ಎಚ್ಚರಿಸಿದವರು ಜಿಂಕೆ .

 1. ‘ ಮದ್ದುಗುಂಡುಗಳನ್ನು ಸಿಡಿಸಬೇಡಿ ‘ ಹೇಳಿದವರು ಯಾರು ?

 ‘ ಮದ್ದುಗುಂಡುಗಳನ್ನು ಸಿಡಿಸಬೇಡಿ ‘ ಎಂದು ಹೇಳಿದರದವರು ಮಂಗ . 

ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ .

 1. ಎತ್ತು ಹಿಡಿದ ಫಲಕದಲ್ಲಿ ದು ಬರೆದಿತ್ತು ? 

ಎತ್ತು ಹಿಡಿದ ಫಲಕದಲ್ಲಿ ” ನಮ್ಮನ್ನು ಹೆಚ್ಚು ಹೆಚ್ಚು ಚ ದುಡಿಸಿಕೊಳ್ಳುತ್ತೀರಿ . ಕಡಿಮೆ ಆಹಾರ ನೀಡುತ್ತೀರಿ . ನಮ್ಮ ಸೇವೆ ಬೇಕು ; ನಾವು ಮಾತ್ರ ಬೇಡ ಅಲ್ಲವೇ ? ನಮ್ಮ ಸೇವೆಯನ್ನು ಮರೆಯದಿರಿ ” , ದಯೆಯಿರಲಿ ಸಕಲ ಪ್ರಾಣಿಗಳಲ್ಲಿ ‘ ಎಂದು ಬರೆದಿತ್ತು . 

 1. ಜಿಂಕೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು ? 

ಜಿಂಕೆ ಹಿಡಿದ ಫಲಕದಲ್ಲಿ “ ನಮ್ಮ ಬದುಕಿನ ಆಧಾರತಾಣ ಕಾಡು , ಅದನ್ನು ನಾಶ ಮಾಡುತ್ತಿದ್ದೀರಿ . ನಮಗೆ ತಿನ್ನಲು ಹುಲ್ಲಿಲ್ಲ . ಮಲಗಲು ಮರದ ನೆರಳಿಲ್ಲ . ಕಾಡು ನಿಮಗೂ ಬೇಕು , ನಮಗೂ ಬೇಕು ” . ” ನಮ್ಮನ್ನು ಉಳಿಸಿರಿ , ನೀವೂ ಉಳಿಯಿರಿ ” ಎಂದು ಬರೆದಿತ್ತು .

 1. ಆಮೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು ? 

ಆಮೆ ಹಿಡಿದ ಫಲಕದಲ್ಲಿ ” ನೀರು ಅಮೂಲ್ಯ ಸಂಪತ್ತು . ಅದನ್ನು ಹಾಳು ಮಾಡುತ್ತಿದ್ದೀರಿ , ಕಸಕಡ್ಡಿ ಹಾಕಿ ಕಲಿಷಿತಗೊಳಿಸುತ್ತಿದ್ದೀರಿ . ನಮಗೆ ನೀರಿನಲ್ಲಿರಲು ಕಷ್ಟವಾಗುತ್ತಿದೆ . ನೀರು ನಮ್ಮೆಲ್ಲರ ಜೀವ ” , ” ನೀರನ್ನು ದುರ್ಬಳಕೆ ಮಾಡಬೇಡಿ , ಕಲುಷಿತಗೊ ಎಂದು ಬರೆದಿತ್ತು . 

 1. ಕರಡಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು ?

 ಕರಡಿ ಹಿಡಿದ ಫಲಕದಲ್ಲಿ ಎಲ್ಲವನ್ನೂ ಎರದಿತ್ತು ? ತಿನ್ನುತ್ತೀರಿ . ತಿಂದು ಹೆಚ್ಚಾಗಿ ಹಾಳು ಹೊಟ್ಟೆ ಹಸಿವಿನ ಬಗ್ಗೆ ನೀವು ಗಮನಿಸಲು ನಿಮ್ಮ ನಮಗೇನೂ ಉಳಿಸುವುದಿಲ್ಲ . ನೀವೂ ತಿನ್ನಿ , ನಮಗೂ ತಿನ್ನಲು ಬಿಡಿ ಎಂದು ಬರೆದಿತ್ತು . 

 1. ನಾಯಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?

 ನಾಯಿ ಹಿಡಿದ ಫಲಕದಲ್ಲಿ “ ನಾವೂ ನಡೆದಾಡಬೇಕು . ಓಡಾಡಬೇಕು . ನಮಗೂ ದಾರಿ ಬಿಡಿ . ಹಾದಿ ಬೀದಿಗಳಲ್ಲಿ ನೀವು ಮತ್ತು ನಿಮ್ಮ ವಾಹನಗಳೇ ತುಂಬಿವೆ . ಮೈಮೇಲೆ ಎಚ್ಚರವಿಲ್ಲದಂತೆ ಸಾಗುತ್ತೀರಿ . ಇತರರಿಗೂ ತೊಂದರೆ ಕೊಡುತ್ತೀರಿ ” , ” ಸರಿಯಾಗಿ ಚಲಿಸಿರಿ , ಚಲಿಸಲು ಬಿಡಿ ” ಎಂದು ಬರೆದಿತ್ತು .

 ಇ ) ಬಿಟ್ಟಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿ ಮಾಡಿರಿ .

 1. ಆನೆಯು ಎಲ್ಲ ಪ್ರಾಣಿಗಳಿಂದಲೂ ಮೆಚ್ಚುಗೆ ಯನ್ನು ಗಳಿಸಿತ್ತು . 
 2. ಪ್ರಾಣಿಗಳು ಈ ದಿನದ ಸಭೆಗೆ ಸಿದ್ಧವಾಗಿ ಬಂದಿದ್ದವು . 
 3. ಎಲ್ಲರ ಕುರಿತಾಗಿಯೂ ಈ ರೀತಿಯ ಆಕ್ರೋಶ ಸಲ್ಲದು . 
 4. ಇವುಗಳನ್ನು ಇನ್ನೊಮ್ಮೆ ಪರಿಶೀಲಿಸಿ ಚರ್ಚಿಸೋಣ.
 5. ನಮ್ಮನ್ನು ಹೆಚ್ಚು ಹೆಚ್ಚುದುಡಿಸಿಕೊಳ್ಳುತ್ತಿರಿ ಎಂದು  ಎತ್ತು ಹೇಳಿತು . 

ವ್ಯಾಕರಣ ಮಾಹಿತಿ 

ಅ ) ವಚನಗಳು

 ಆನೆಯು ಎಲ್ಲರ ರೀತಿಯ ಮೆಚ್ಚುಗೆಯನ್ನು ಗಳಿಸಿತ್ತು . ಕಾಡಿನಲ್ಲಿ ವಿವಿಧ

ರೀತಿಯ ಪ್ರಾಣಿಗಳು ವಾಸವಾಗಿದ್ದವು.  

 ಮೇಲಿನ ವಾಕ್ಯಗಳನ್ನು ಓದಿ ಆಲಾಗಿದ್ದವು . ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ . 

‘ ಆನೆ ‘ ಎಂಬುದು ಒಂದು ಆನೆ  ಎಂಬುದನ್ನು ಸೂಚಿಸುತ್ತದೆ  ಪ್ರಾಣಿಗಳು ಎಂಬುದನ್ನು ಒಂದಕ್ಕಿಂತ ಹೆಚ್ಚು ಎಂಬುದನ್ನು ಸೂಚಿಸುತ್ತದೆ ಜಿಂಕೆಯು ಈ ದಿನದ ಸಭೆಗೆ ಸಿದ್ಧವಾಗಿ ಬಂದಿತ್ತು ಬೆಕ್ಕುಗಳು ಸಭೆಯಲ್ಲಿ ಭಾಗವಹಿಸಿದ್ದವು . 

ಮೇಲಿನ ವಾಕ್ಯಗಳನ್ನು  ಓದಿ ‘ ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ .

‘ ಜಿಂಕೆ ‘ ಎಂಬುದು ‘ ಒಂದು ‘ ಎಂಬುದನ್ನು ಸೂಚಿಸುತ್ತದೆ  . ಇದು ಏಕವಚನ . ” ಬೆಕ್ಕುಗಳು ‘ ಎಂಬುದು ಒಂದಕ್ಕಿಂತ ಹೆಚ್ಚು ‘ ಎಂಬುದನ್ನು ಸೂಚಿಸುತ್ತದೆ . ಇದು ಬಹುವಚನ . ಏಕವಚನ ಮತ್ತು ಬಹುವಚನಗಳಿಗೆ ಇನ್ನೂ ಕೆಲವು

ಉದಾಹರಣೆಗಳು : ಏಕವಚನ ಪತ್ರ ನಾಯಕ ತಮ್ಮ ರೈತ

 ಬಹುವಚನ ಪತ್ರಗಳು ನಾಯಕರು ತಮಂದಿರು ರೈತರು 

ಭಾಷಾಭ್ಯಾಸ 

 ಅ ) ವಚನ ಬದಲಿಸಿ ಬರೆಯಿರಿ . – 

 1. ಎತ್ತು( ಎತ್ತುಗಳು )
 2. ನಾಯಕ ( ನಾಯಕರು ) 
 3. ಅಣಂದಿರು( ಅಣ್ಣ )

        ಪತ್ರಿಕೆಗಳು    ( ಪತ್ರಿಕೆ )

 1. ಪತ್ರಗಳು( ಪತ್ರ ) 
 2. ಮಿತ್ರರು( ಮಿತ್ರ )
 3. ಅದು ( ಅವು)
 4. ನೀವು ( ನೀನು )

 ಈ ) ಶುಭನುಡಿ

ಇತರರ ಮಾತುಗಳಿಗೂ ಮುನ್ನಣೆ ಕೊಡಿರಿ . 

ಸಂಪನ್ಮೂಲಗಳನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಿರಿ 

ವಚನಗಳನ್ನು ಬೆಳೆಸಿರಿ ವನ್ಯ ಜೀವಿಗಳನ್ನು ಉಳಿಸಿರಿ . 

ಪ್ರವೇಶ

 ಎಲ್ಲ ಜೀವಿಗಳಿಗೂ ಬದುಕಲು ಸಮಾನ ಹಕ್ಕಿದೆ . ಮನುಷ್ಯ ತನ್ನ ಸ್ವಾರ್ಥ ನಿಮಿತ್ತನಾಗಿ ಅದಕ್ಕೆ ಅವಕಾಶ ನೀಡುತ್ತಿಲ್ಲ . ಕೆಲವೊಮ್ಮೆ ಆತ ತನ್ನ ಶಾಂತಿ ನೆಮ್ಮದಿಗಳಿಗೆ ತಾನೇ ಅಡ್ಡಿಯಾಗುತ್ತಾನೆ . ಮನುಪಲ್ಲಿರುವ ಪ್ರಾಣಿಗಳ : ಸಾಧುವಲ್ಲದ ಕಾರ್ಯಗಳನ್ನು ಹೇಳಿಸಿ , ಆ ಮೂಲಕ ಆತನನ್ನು ಯೋಚನೆಗೆ ಹಚ್ಚುವುದು ಇಲ್ಲಿ ಆಶಯವಾಗಿದೆ . ಒಂದಾನೊಂದು ಕಾಡು .. ಅಲ್ಲಿ ಬಗೆಬಗೆಯ ಪ್ರಾಣಿಗಳು ವಾಸವಾಗಿದ್ದವು . ಆನೆಯು ಆ ಕಾಡಿನ ಅಧಿಪತಿಯಾಗಿತ್ತು . ಅದು ಆಗಾಗ ಸಭೆ ಕರೆದು ಅವುಗಳ ಕೇಮ ಸಮಾಚಾರವನ್ನು ವಿಚಾರಿಸುತ್ತಿತ್ತು . ಊರಿನಲ್ಲಿರುವ ಪ್ರಾಣಿಗಳೊಂದಿಗೂ ಸ್ನೇಹವನ್ನು ಬೆಳೆಸಿತ್ತು . ಅವುಗಳಿಗೂ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿತ್ತು . ಉತ್ತಮ ನಾಯಕತ್ವ ಗುಣಹೊಂದಿರುವ ಆನೆಯು ಎಲ್ಲಿ ಪ್ರಾಣಿಗಳಿಂದಲೂ ಮೆಚ್ಚುಗೆಯನ್ನು ಗಳಿಸಿತ್ತು . ಹೀಗೆಯೇ ಒಂದು ದಿನ ಸಭೆ ಕರೆದಿತ್ತು . ಎಲ್ಲ ಪ್ರಾಣಿಗಳು ಅಂದು ಮನುಷ್ಯರ ಮೇಲೆ ಬಹಳವಾಗಿ ದೂರುಹೇಳುತ್ತಿದ್ದವು . ಮಾನವನಿಂದ ಆಗುತ್ತಿರುವ ತೊಂದರೆ ಹಾಗೂ ಪರಿಹಾರ ಕುರಿತು ಚರ್ಚಿಸಿದ್ದವು . ಮನುಷ್ಯನಿಗೆತಿಳಿಹೇಳಲು ಫಲಕದಲ್ಲಿ ವಿವರ ಬರೆದು ತರಲು ಆನೆಯು ಪ್ರಾಣಿಗಳಿಗೆ ಸೂಚನೆ ನೀಡಿತ್ತು . ಅದರಂತೆ ಪ್ರಾಣಿಗಳು ಈ ದಿನದ ಸಭೆಗೆ ಸಿದ್ಧವಾಗಿ ಬಂದಿದ್ದವು . ನಾಯಕನ ಸೂಚನೆಯಂತೆ ಅವುಗಳು ತಮ್ಮ ಫಲಕಗಳನ್ನು ಹಿಡಿದುಕೊಂಡು ಸಾಲಾಗಿ ನಿಂತಿದ್ದವು . ನೆಯು ಅವುಗಳನ್ನು ಒಂದೊಂದಾಗಿ ಓದುತ್ತಾ ಮುನ್ನಡೆಯಿತು . 

ಮುಖ್ಯಾಂಶಗಳು 

ಊರಿನ ಅಂಚಿನಲ್ಲಿದ್ದ ( ಪಕ್ಕದಲ್ಲಿದ್ದ ) ಕಾಡಿನಲ್ಲಿ ಹಲವಾರು ಬಗೆಯ ಪ್ರಾಣಿಗಳು ವಾಸವಾಗಿದ್ದವ ಪ್ರಾಣಿಗಳ ನಾಯಕ ಆನೆ . ಅದು ಆಗಾಗ ಕಾಡಿನ ಪ್ರಾಣಿಗಳನ್ನು ಹಾಗೂ ಊರಿನಲ್ಲಿನ ಒಟ್ಟಾಗಿ . ಸೇರಿಸಿ ಅವರ ಯೋಗಕೇ ಕೊರತೆಗಳನ್ನು ವಿಚಾರಿಸುತ್ತಿತ್ತು . ಒಮ್ಮೆ ಒಂದು ಸಭೆಯಲ್ಲಿ ಮನುಷ್ಯರು ಪ್ರಾಣಿಗಳ ಮೇಲೆ ದೌರ್ಜನ್ಯದ ಬಗ್ಗೆ ದೂರು ಹೇಳಿದವು .ನಡೆಸುತ್ತಿರುವ ಆಗ ಆನೆಯು ಮನುಷ್ಯನಿಗೆ ಮೊದಲು ತಿಳಿ ಹೇಳುವ ಪ್ರಯತ್ನ ಮಾಡೋಣ . ಆದ್ದರಿಂದಎಲ್ಲರೂ ಮನುಷ್ಯನಿಗೆ ತಿಳಿಯುವಂತೆ ಒಂದು ಸೂಚನಾ ಫಲಕವನ್ನು ಸಿದ್ಧಪಡಿಸಲು ಸೂಚಿಸಿತು . ಅದರಂತೆ ಮುಂದಿನ ಸಭೆಯಲ್ಲಿ ಪ್ರಾಣಿಗಳು ತಾವು ಬರೆದ ಫಲಕವನ್ನು ಹಿಡಿದು ನಿಂತವು . ಆನೆ ಎಲ್ಲರ ಫಲಕಗಳನ್ನು ಓದುತ್ತಾ ಬಂದಿತು .

ಮೊದಲಿಗೆ ಎತ್ತು : ನಮ್ಮನ್ನು ಹೆಚ್ಚು ದುಡಿಸಿಕೊಂಡು ಆಹಾರ ಮಾತ್ರ ಸ್ವಲ್ಪ ಕೊಡುವಿರಿ ನಮ್ಮ ಸೇವೆ ಬೇಕು  ನಾವು ಮಾತ್ರ ಬೇಡವೇ ? ಮರೆಯದಿರಿ .” ದಯವಿರಲಿ ಸಕಲ ಪ್ರಾಣಿಗಳೆಲ್ಲರಲಿ ‘ ಎಂಬ ನೀತಿಯ ಫಲಕವನ್ನು ಹಿಡಿದಿತ್ತು .

ಜಿಂಕೆ : ನಮಗೆ ಆಶ್ರಯ ಕಾಡು . ಆದರೆ ನೀವು ಅದನೇ ನಾಶ ಮಾಡಿ , ನಮಗೆ ತಿನ್ನಲು ಹುಲ್ಲಿಲ್ಲ . ಮಲಗಲು ಮರದ ನೆರಳಿಲ್ಲ . ಕಾಡು ನಮಗೂ ಬೇಕು , ನಿಮಗೂ ಬೇಕು . ‘ ನಮ್ಮನ್ನು ಉಳಿಸಿರಿ , ನೀವೂ ಉಳಿಯಿರಿ . ಮೊದಲಿಗೆ ಎತ್ತು : ನಮ್ಮನ್ನು ಹೆಚ್ಚು ದುಡಿಸಿಕೊಂಡು ನಮ್ಮ ಸೇವೆ ಬೇಕು , 

ಆಮೆ : ನೀರು ಎಲ್ಲರಿಗೂ ಬೇಕಾದ ಅಮೂಲ್ಯ ಸಂಪತ್ತು , ಅದನ್ನು ಕಲುಷಿತಗೊಳಿಸುತ್ತಿದ್ದೀರಿ . ನೀರು ನಮ್ಮೆಲ್ಲರ ಜೀವ , ನೀರನ್ನು ದುರ್ಬಳಕೆ ಮಾಡಬೇಡಿ , ಕಲುಷಿತಗೊಳಿಸಬೇಡಿ ‘ .

ಕರಡಿ : ಎಲ್ಲವನ್ನೂ ನೀವೇ ತಿನ್ನುತ್ತೀರಿ . ಹೆಚ್ಚಾಗಿ ಹಾಳು ಮಾಡುತ್ತೀರಿ . ನಮ್ಮ ಹೊಟ್ಟೆ ಹಸಿವಿನ ಬಗ್ಗೆ ನೀವು ಗಮನಿಸುವುದಿಲ್ಲ . ನಮಗೇನೂ ಉಳಿಸುವುದಿಲ್ಲ . “ ನೀವೂ ತಿನ್ನಿ , ನಮಗೂ ತಿನ್ನಲು ಬಿಡಿ ‘ . 

ನಾಯಿ : ಹಾದಿ – ಬೀದಿಯಲ್ಲೆಲ್ಲಾ ನೀವು , ವಾಹನಗಳ ತುಂಬಿವೆ . ಮೈಮೇಲೆ ಎಚ್ಚರವಿಲ್ಲದಂತೆ ಸಾಗುತ್ತೀರಿ . ಇತರರಿಗೂ ತೊಂದರೆ ಕೊಡುತ್ತೀರಿ . ” ಸರಿಯಾಗಿ ಚಲಿಸಿ , ನಮಗೂ ಚಲಿಸಲು ಬಿಡಿ .

 ಮಂಗ : ನಮಗೂ ಶಾಂತಿ ಬೇಕು , ನೆಮ್ಮದಿ ಬೇಕು . ನೋವಿನಲ್ಲೂ , ನಲಿವಿನಲ್ಲೂ ಹಿಂಸಿಸುತ್ತೀರಿ . ‘ ಮದ್ದು ಗುಂಡುಪಟಾಕಿ ಸಿಡಿಸಿ ನಮ್ಮನ್ನು ಸಿಡಿಸಬೇಡಿ ,  ಶಾಂತಿಯನ್ನು ಕೆಡಿಸಬೇಡಿ . 

ಬೆಕ್ಕು : ನಿಮ್ಮ ಪಕ್ಕದಲ್ಲೇ  ,ಇರುವ ನಮ್ಮನು ಕಣ್ಣೆತ್ತಿ ನೋಡುವುದಿಲ್ಲ ಸದಾ ಟಿವಿ ಮೊಬೈಲ್ ಜೊತೆ ಕಾಲ ಕಳೆಯುತ್ತೀರಿ ನಾವು ನಿಮ್ಮೊಂದಿಗಿದ್ದೇವೆ ನಮ್ಮನ್ನೂ ಮಾತನಾಡಿಸಿ .

ಎರೆಹುಳ : ನಾವು ರೈತನ ಮಿತ್ರರು . ಆದರೂ ಭೂಮಿಯನ್ನು ಫಲವತ್ತು ಮಾಡುವ ನಮಗೆ ಥರಥರದ ಔಷಧ ಚಿಮುಕಿಸಿ ಮಣ್ಣಿನ ಫಲವತ್ತತೆಯ ಜೊತೆಗೆ ನಮ್ಮನ್ನೂ ಸಾಯಿಸುತ್ತೀರಿ . ‘ ರಕ್ಷಕರಾಗಿ , ರಾಕ್ಷಸರಾಗದಿರಿ ‘ಎಂಬ ಫಲಕಗಳನ್ನು ಓದಿದ ಆನೆ ” ಶಹಬ್ಬಾಸ್ ” ಎಂದು ಪ್ರಾಣಿಗಳನ್ನು ಹುರಿದುಂಬಿಸುತ್ತಾ ” ಚೆನ್ನಾಗಿ ಬರೆದಿದ್ದೀರಿ .ಆದರೆ ಎಲ್ಲಾ ಮನುಷ್ಯರು ಕೆಟ್ಟವರಲ್ಲ . ಎಲ್ಲಾ ಮನುಷ್ಯರ ಬಗ್ಗೆ ನಾವು ಕೋಪಗೊಳ್ಳಲಾಗದು . ಇದನ್ನು ಅಂಚಿನ ಬದಿಯಲ್ಲಿ ನೆಟ್ಟು ಪ್ರದರ್ಶಿಸೋಣ . ಮುಂದೆ ಏನಾಗುವುದೋ ಕಾದು ನೋಡೋಣ . ಈಗ ಎಲ್ಲರೂ ಒಟ್ಟಾಗಿ ಊಟ ಮಾಡೋಣ ಬನ್ನಿ ಎಂದು ಆನೆ ಎಲ್ಲರನ್ನೂ ಭೋಜನ ಶಾಲೆಗೆ ಕರೆದೊಯ್ದಿತು . 

ನಮ್ಮ ಮಾತು ಕೇಳಿ pdf

5th Standard Namma Matu Keli Kannada Note Lesson question answer pdf textbook summary Kannada Deevige 5th Class Namma Matu Keli Kannada Notes question answer text book pdf download 5ನೇ ತರಗತಿ ನಮ್ಮ ಮಾತು ಕೇಳಿ ಕನ್ನಡ ನೋಟ್ಸ್  ಪ್ರಶ್ನೆ

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

kannadadeevige.in ಜಾಲತಾಣದಲ್ಲಿ  5 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh