5ನೇ ತರಗತಿ ಹುತ್ತರಿ ಹಾಡು ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು | 5th Class Huttari Hadu Poem Notes

ಪದ್ಯದ ಹೆಸರು: ಹುತ್ತರಿ ಹಾಡು

ಕೃತಿಕಾರರ ಹೆಸರು: ಪಂಜೆ ಮಂಗೇಶರಾಯ

5ನೇ ತರಗತಿ ಹುತ್ತರಿ ಹಾಡು ಕನ್ನಡ ನೋಟ್ಸ್‌

5 ನೇ ತರಗತಿ ಹುತ್ತರಿ ಹಾಡು ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು Huttari Hadu poem notes
5ನೇ ತರಗತಿ ಹುತ್ತರಿ ಹಾಡು ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು Huttari Hadu poem notes

ಹುತ್ತರಿ ಹಾಡು ಕೃತಿಕಾರರ ಪರಿಚಯ

This image has an empty alt attribute; its file name is ಶ್ರೀ-ಪಂಜೆ-ಮಂಗೇಶರಾವ್‌.jpg

ಶ್ರೀ ಪಂಜೆ ಮಂಗೇಶರಾವ್‌ : “ಕವಿಶಿಪ್ಯ” ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ಪಂಜೆ ಮಂಗೇಶ್‌ ರಾವ್ ಅವರು ಕ್ರಿ.ಶ.೧೮೭೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಜನಿಸಿದರು. ಮಕ್ಕಳ ಕವಿತೆಗಳ ಕಣ್ಮಣಿ ಎಂದು ಪ್ರಸಿದ್ಧರಾದ ಇವರು ಹುತ್ತರಿಯ ಹಾಡು. ನಾಗರಹಾವೇ, ಕೋಟಿ ಚೆನ್ನಯ್ಯ, ಗುಡುಗುಡು ಗುಮ್ಮಟ ದೇವರು, ಮಾತಾಡೋ ಮಾತಾಡೋ ರಾಮಪ್ಪ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ, ಕ್ರಿ,ಶ ೧೯೩೪ ರಲ್ಲಿ ನಡೆದ ೨೦ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ನವೋದಯ ಸಾಹಿತ್ಯದ ಹರಿಕಾರರು. ಅನೇಕ ಮಕ್ಕಳ ಕವಿತೆಗಳನ್ನು ರಚಿಸಿದ್ದಾರೆ. ತುಳು ಸಾಹಿತ್ಯದಲ್ಲಿ ಜನಪ್ರಿಯವಾದ ʼಕೋಟಿ ಚೆನ್ನಯ್ಯʼ ಇವರು ರಚಿಸಿದ ಕೃತಿ, ಇನ್ನೊಂದು ʼತೆಂಕಣ ಗಾಳಿಯಾಟʼ.

ಪದಗಳ ಅರ್ಥ

ಒಡಲ್‌ = ಶರೀರ, ದೇಹ,

ಕಡುಗಲಿ = ಮಹಾಶೂರ,

ಕ್ಷಾತ್ರ = ಕ್ಷತ್ರಿಯನ ತೇಜಸ್ಸು, ಕ್ಷತ್ರಿಯ ಕುಲ,

ಗರಿಯರು = ಹಿರಿಮೆಯುಳ್ಳವರು,

ಜಮ್ಮದು = ಅರಸನು ಇನಾಮಾಗಿ ಕೊಟ್ಟ ಭೂಮಿ,

ದಟ್ಟಿಕುಪ್ಪಸ = ಸೊಂಟಕ್ಕೆ ಕಟ್ಟುವ ವಸ್ತ್ರ,

ಬಗ್ಗ =ವ್ಯಾಘ್ರ, ಹುಲಿ,

ಭೂರಮೆ = ಭೂದೇವಿ

ಹುತ್ತರಿ = ಕೊಡಗರು ಹೊಸ ಅಕ್ಕಿಯನ್ನು ಮನೆಗೆ ತರುವಾಗ ಆಚರಿಸುವ ಹಬ್ಬ,ಕೊಡಗಿನ ಸುಗ್ಗಿ ಹಬ್ಬ,

ಹೊಯ್ದು = ಹೊಡೆತ,

ಅಭ್ಯಾಸ

ಅ] ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

೧, ಕಾವೇರಿಯು ಹೇಗೆ ಹೊಳೆಯುತ್ತಾಳೆ?

ಕಾವೇರಿಯು ಮುಗಿಲಿನ ಮಿಂಚಿನಂತೆ ಹೊಳೆಯುತ್ತಾಳೆ.

೨, ಸೋಲು ಸಾವರಿಯದವರು ಯಾರು?

ಕೊಡಗಿನ ಕಡುಗಲಿ ಹಿರಿಯರು ಸೋಲು ಸಾವರಿಯದವರು.

೩. ಕೊಡಗು ಯಾವ ಗಿರಿಯಿಂದ ಯಾವ ಗಿರಿಯವರೆಗೆ ಪರ್ಯಂತ ಬೆಳೆದಿದೆ?

ಕೊಡಗು ಬೊಮ್ಮಗಿರಿಯಿಂದ ಪುಷ್ಪಗಿರಿಯವರೆಗೂ ಬೆಳೆದಿದೆ.

೪. ಕಾವೇರಿಯ ತವರುಮನೆ ಯಾವುದು?

ಕೊಡಗನಾಡು ಕಾವೇರಿಯ ತವರುಮನೆ ಆಗಿದೆ.

೫. ಯಾವ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು?

ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು.

ಆ] ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ. ಕಂಠಪಾಠ ಮಾಡಿ.

೧. ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಿಮ್ಮನೆ ಬಂದಳೋ?

ಎಲ್ಲಿ ಮೋಹ ಗಿರಿಯ ಬೆರಗಿನ ರೂಪಿನಿಂದಳೋ?

ಎಲ್ಲಿ ಮುಗಿಲಲಿ ಮಿಂಚಿನೋಲ್‌ ಕಾವೇರಿ ಹೊಳೆ ಹೊಳೆ ಹೊಳೆ ಹೊಳೆವಳೋ?

ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ?

೨. ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?

ಸುಮ್ಮನಿತ್ತರೋ ದಟ್ಟಿಕುಪ್ಪಸ ಹಾಡುಹುತ್ತರಿಗೇಳಿರಿ!

ಹಾಡು ಹುತ್ತರಿಗೇಳಿರಿ!

ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊರ ಹೊಮ್ಮಲಿ!

ಅಮ್ಮ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!

ವ್ಯಾಕರಣ ಮಾಹಿತಿ

ಅ} ಗುಣಿತಾಕ್ಷರಗಳು

ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳು ಗುಣಿತಾಕ್ಷರಗಳು.

೧.ಇಲ್ಲಿನ ಅಕ್ಷರ ಸಂರಚನೆಗಳನ್ನು ಗಮನಿಸಿ.

ಕ್‌ +ಅ =ಕ ಕ್‌ + ಆ = ಕಾ

ಕ್‌ + ಇ =ಕಿ ಕ್‌ + ಈ = ಕೀ

ಕ್ + ಉ= ಕು ಕ್‌ + ಊ = ಕೂ

ಕ್‌ +ಋ =ಕೃ ಕ್+ ಎ= ಕೆ

ಕ್+ಏ =ಕೇ ಕ್+ಐ=ಕೈ

ಕ್+ಒ=ಕೊ ಕ್+ಓ=ಕೋ

ಕ್+ಔ=ಕೌ ಕ್+ಅಂ=ಕಂ ಕ್+‌ ಅಃ= ಕಃ

೨. ಈ ಕೆಳಗಿನ ಅಕ್ಷರಗಳನ್ನು ಬಿಡಿಸಿ ಬರೆಯುವ ಕ್ರಮ ತಿಳಿಯಿರಿ.

ರಾಜಧಾನಿ = ರ್+ ಅ = ರಾ

ಜ್‌ + ಅ = ಜ

ಧ್‌ + ಆ =ಧಾ

ನ್ +‌ ಇ = ನಿ

ಸಿಂಹಾಸನ = ಸಿ+ಇಂ= ಸಿಂ

ಹ್+ ಆ= ಹಾ

ಸ್+‌ ಅ = ಸ

ನ್+‌ ಅ = ನ

ಪರಿಚಿತ = ಪ್+‌ ಅ = ಪ

ರ್‌ +ಇ = ರಿ

ಚ್ + ಇ = ಚಿ

ತ್ +‌ ಅ = ತ ‌

ಬಾಯಾರಿಕೆ = ಬ್‌ + ಆ = ಬಾ

ಯ್‌ +ಆ =ಯಾ

ರ್‌ + ಇ = ರಿ

ಕ್‌ +ಎ = ಕೆ

ಭಾಷಾಭ್ಯಾಸ

ಅ} ಮಾದರಿಯಂತೆ ಬಿಡಿಸಿ ಬರೆಯಿರಿ. ಮಾದರಿ :

ಕನಿಕರ =ಕ್‌ + ಅ , ನ್+ ಇ, ಕ್+‌ ಅ , ರ್+‌ ಅ,

೧. ಸಹಕಾರ= ಸ್+ ಅ , ಹ್+‌ ಅ , ಕ್‌+ಆ , ರ್+‌ಅ,

೨. ಪರಿಣತಿ = ಪ್+ಅ, ರ್+ಇ, ಣ್+ಅ, ತ್+ಇ,

೩. ಚೇತನ =ಚ್+ಏ, ತ್+ಅ, ನ್+ಅ,

೪. ಪ್ರವಾಸ= ಪ್+ಈ+ಅ, ವ್+ಆ, ಸ್+ಅ,

೫. ಭಯಾನಕ=ಭ್+ಅ, ಯ್+ಆ, ನ್+ಅ, ಕ್+ಅ,

ಆ} ಕೆಳಗಿನ ಗುಣಿತಾಕ್ಷರಗಳನ್ನು ಕೂಡಿಸಿ ಬರೆಯಿರಿ.

೧. ಸ್+ಅ. ರ್+‌ ಓ. ವ್+ಅ. ರ್+ಅ= ಸರೋವರ

೨. ಚ್+ಅ. ಳ್+ಉ.ವ್+ಅ. ಳ್+ಇ= ಚಳುವಳಿ

೩. ರ್+ಅ. ಹ್+ಅ. ದ್+ಆ. ರ್+ಇ= ರಹದಾರಿ

೪. ಜ್+ಆ. ಗ್+ಋ. ತ್+ಇ. =ಜಾಗೃತಿ

೫. ಹ್+ಇ.ಮ್+ಆ.ಲ್+ಅ.ಯ್+ಅ.=ಹಿಮಾಲಯ

ಈ} ಶುಭನುಡಿ

೧. ದೇಶ ಸೇವೆಯೇ ಈಶ ಸೇವೆ

೨. ದೇಶವೇ ಗುಡಿ:ದೇಶಕ್ಕಾಗಿ ದುಡಿ.

೩. ದೇಶಕ್ಕಾಗಿ ಒಂದಾಗಿರಿ: ದೇಶಕ್ಕಾಗಿ ಮುಂದಾಗಿರಿ.

Huttariya Hadu Summary in Kannada

ಪ್ರವೇಶ

ಕೊಡವರ ಹಾಗೂ ಕೊಡಗಿನ ಜೀವನವನ್ನು ಪ್ರತಿಬಿಂಬಿಸುವ ಹುತ್ತರಿ ಹಾಡು ಒಂದು. ಕೊಡವರು ಸುಗ್ಗಿಯ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು ಇದಾಗಿದೆ.ಇದು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ವೀರಶ್ರೀಯನ್ನು ವರ್ಣಿಸುವುದು. ಕೊಡಗಿನ ಸಂಸ್ಕೃತಿ, ಸಂಪ್ರದಾಯದ ಲೇಪನ ಹಾಗೂ ಜನಪದ ಹಿನ್ನೆಲೆಯನ್ನು ಇದು ಒಳಗೊಂಡಿದೆ.

ಮುಖ್ಯಾಂಶಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದ ಪಂಜೆ ಮಂಗೇಶ್ ರಾವ್‌ ರವರು ಕರ್ನಾಟಕದ ಸುಂದರ ವನಸಿರಿಯ ತವರೂರಾದ ಕೊಡಗನ್ನು ಮತ್ತು ಕೊಡಗರ ಸಂಸ್ಕೃತಿ ಹಾಗೂ ಅವರ ಸುಗ್ಗಿಯ ಹಬ್ಬಹುತ್ತರಿಯನ್ನು ವರ್ಣಿಸುವ ಪದ್ಯವಿದು. ಆದಿ ಮತ್ತು ಅಂತ್ಯ ಮತ್ತು ಅಂತ್ಯಪ್ರಾಸದಿಂದ ಕೂಡಿರುವ ಈ ಪದ್ಯವನ್ನು ಮಕ್ಕಳು ಚಿಕ್ಕಂದಿನಲ್ಲಿ ಕಲಿತರೆ, ಅವರ ಜೀವನದ ರಸಮಯ ಘಳಿಗೆಯೆಲ್ಲಾ ಸ್ತರಣೆಗೆ ಬಂದು ಗುನುಗುತ್ತಲೇ ಇರುವಂತಹ ಅಪರೂಪದ ಪದ್ಯವಿದು.

ಕವಿಗಳು ಮತ್ತು ಪ್ರಕೃತಿಗೆ ಒಂದು ಅವಿನಾಭಾವ ಸಂಬಂಧ, ಎಲ್ಲರೂ ಯಾವಾಗಲೂ ಪ್ರಕೃತಿಯ ಸೊಬಗಿಗೆ ಮರುಳಾಗುತ್ತಾರೆ. ಇನ್ನು ಕೊಡಗಿನ ಸೊಬಗು ಯಾರ ಮನವನ್ನು ತಾನೇ ಅರಳಿಸುವುದಿಲ್ಲ. ಈ ಕೊಡಗಿನ ನಾಡು ಭೂದೇವಿಯ ದೇವ ಸನ್ನಿಧಿಯಲ್ಲಿ ಬಯಸಿ ಬಂದದ್ದಾಗಿದೆ. ಇಲ್ಲಿ ಭೂದೇವಿಯು ಬೆಟ್ಟ ಗುಡ್ಡಗಳ ರೂಪದಲ್ಲಿ ಮೋಹನರೂಪವನ್ನು ತಳೆದು ನಿಂತಿದ್ದಾಳೆ.ಆಕಾಶದಲ್ಲಿರುವ ಮಿಂಚಿನಂತೆ ಕಾವೇರಿಯ ರೂಪದಲ್ಲಿ ಹೊಳೆಯುತ್ತಿದ್ದಾಳೆ. ಈ ಕಾವೇರಿಯ ನೀರು (ಜಲ) ನೆಲವನ್ನು ಹಾಗೂ ಜನಮನವನ್ನು ತಣಿಸಿ ,ಹೊಲಗಳು ಕಳೆಕಳೆಯಾಗುವಂತೆ ಮಾಡಿದ್ದಾಳೆ.

ಆ ಕಡೆ ನೋಡಿ, ಸುಂದರವಾಗಿ ಕಾಣುತ್ತಿರುವ ಕೊಡಗರ ನಾಡು, ಅದು ಅವರ ಬೀಡು.ಈ ಕೊಡವರು ಹುಟ್ಟಿನಿಂದಲೇ ಶೂರರು, ಶೌರ್ಯ ಅವರಿಗೆ ರಕ್ತಗತವಾಗಿ ಬರುವುದು, ಇಲ್ಲಿಯ ಪೂರ್ವಜರು ಹುಲಿಯ ಹಾಲನ್ನು ಕುಡಿದು ಬದುಕಿದವರು, ಹೆಬ್ಬಾವನ್ನು ಹಗ್ಗದಂತೆ ಸೆಳೆಯಬಲ್ಲವರು, ಆನೆಯ ಸೊಂಡಿಲಿನಂತಹ ರಣಕೊಂಬನ್ನು ಮೊಳಗಿಸಿ ಭೋರ್ಗರೆದವರು, ಈ ರೀತಿ ಜೀವಿಸಿ ಸಾಹಸತ್ವವನ್ನು ಮೆರೆದು ಬೇಟೆಯಾಡಿದವರು ಈ ಕೊಡಗರು.

ಅವರಿಗೆ ಸೋಲು ಎಂಬುದೇ ಗೊತ್ತಿಲ್ಲ, ಎಲ್ಲರೂ ಕಡುಗಲಿಗಳು, ಇವರು ಕೊಡಗಿನ ಹಿರಿಯರು. ಇವರು ತಮ್ಮ ನಾಡಿನ ದಾಸ್ಯವನ್ನು ಕಳೆಯಲು ಹುಲಿಯಂತೆ ಹೋರಾಡಿದರು. ಇಲ್ಲಿದ್ದ ಪೂರ್ವಜರು ಶತ್ರೃಗಳನ್ನು ಎದುರಿಸಿ, ಸೋಲಿಸುವಲ್ಲಿ ಹಸಿದ ಹುಲಿಯಂತೆ ಹೋರಾಡಿದವರು. ಬೊಮ್ಮಗಿರಿಯಿಂದ ಪು಼ಷ್ಪಗಿರಿಯ-ವರೆಗೂ ಬೆಳೆದ ಈ ದೇಶವು ದಾನಧರ್ಮಕ್ಕೆ ರೀತಿ ನೀತಿಗೆ ಕೋಶದಂತಿದೆ.

ಇಂತಹ ಕೊದಗು ನಾಡು ನಮ್ಮದು, ಇದನ್ನು ಅರಸರು ನಮಗೆ ಇನಾಮಾಗಿ (ಬಹುಮಾನವಾಗಿ) ಕೊಟ್ಟಂತಹ ನಾಡು, ಇದನ್ನು ನಾವು ಬಿಡುವುದಿಲ್ಲ! ಈ ನಮ್ಮ ನಾಡು ಅಗಸ್ತ್ಯಋಷಿಯ ತಪೋವನವಾಗಿತ್ತು. ಕಾವೇರಿ ತಾಯಿಯ ತವರುಮನೆ, ಇದು ಚಂದ್ರವರ್ಮನ ಅರಮನೆಯಿದ್ದ ಭೂಮಿ. ಚೆಂಗಾಳ್ವ ಅರಸರ ಆಡಂಬರವು ವಿಜೃಂಭಿಸಿದ ಶ್ರೀರಂಗವಿದು. ಇದು ಹಾಲೇರಿಯರ ಬಲಗಿರಿಶೃಂಗವಾಗಿದೆ.

ವಿಧಿಯಾಟದ ಈ ಕೊಡಗು ಮೊದಲೂ ನಮ್ಮದು , ಕಡೆಗೂ ಇದು ನಮ್ಮನ್ನು ಬಿಟ್ಟು ಹೋಗದ ಬೆಡಗು ಭೂಮಿ, ಒಮ್ಮತ (ಒಂದೇ ಮತ ಅಥವಾ ಒಂದೇ ರೀತಿಯ ಮನಸ್ಸು, ಒಪ್ಪಿಗೆ) ಒಗ್ಗಟ್ಟು ಎಲ್ಲಿದೆ? ನಮಗೆ ಇನಾಮಾಗಿ ದಟ್ಟಿಕುಪ್ಪಸವನ್ನು ಸುಮ್ಮನೆ ಕೊಟ್ಟಿದ್ದಾರೋ, ನಾವು ಸಂಭ್ರಮಿಸೋಣ, ಹುತ್ತರಿಯ ಹಾಡು ಹೇಳಿ, ಪಾತುರೆ ಕೋಲಿನ ಹೊಡೆತಕ್ಕೆ ಕುಣಿಯಲಿ ಕುಣಿತದ ಪದ ಹಾಡಲಿ, ಈ ನಾಡನ್ನು ನಮ್ಮ ಅಮ್ಮೆ (ತಾಯಿ) ನಮಗೆ ಆಶೀರ್ವದಿಸಿ ಕೊಟ್ಟಂತಹುದು, ಇದು ಯಾವಾಗಲೂ ನಮ್ಮದೇ ಆಗಿರಲಿ. ಇಲ್ಲಿರುವವರೆಲ್ಲಾ ನೆಮ್ಮದಿಯಿಂದ ಬಾಳಲಿ. ಅಮ್ಮಯ ತೋಳಬಲದಲ್ಲಿ ನಮ್ಮ ಕೊಡಗ ನಾಡು ಬಾಳಲಿ ಎಂದು ಕವಿಯು ಕೊಡಗನಾಡನ್ನು ಬಹುರಮ್ಯವಾಗಿ ವರ್ಣಿಸಿದ್ದಾರೆ. ಇದರ ಓದು ಒಂದು ಸಂದರವಾದ ಅನುಭೂತಿಯನ್ನು ಕೊಡುತ್ತದೆ. ಇಂತಹ ಸುಖಾನುಭವವನ್ನು ಕೊಡುವ ಪದ್ಯಗಳನ್ನು ಓದುವಂತಹ ಮನಸ್ಸು ಮಕ್ಕಳದಾಗಲಿ ಎಂಬುದು ಈ ಪದ್ಯದ ಆಶಯ.(ಸದುದ್ದೇಶ )

5ನೇ ತರಗತಿ ಕನ್ನಡ ಪಾಠಗಳು

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  5 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh