5ನೇ ತರಗತಿ ತರಗತಿ ಮೆಚ್ಚಿನ ಗೊಂಬೆ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 5th Standard Kannada Mechina Gombe Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Puraka Pata Mechina Gombe Notes Mechina Gombe Kannada Notes Pdf Free Download
ಅಭ್ಯಾಸ
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
ಗೊಂಬೆಗಳನ್ನು ಮರ , ಮಣ್ಣು , ಪ್ಲಾಸ್ಟಿಕ್ , ರಬ್ಬರ್ , ಪಿಂಗಾಣಿ , ಬಟ್ಟೆ , ಹತ್ತಿ ಬಿದಿರು , ಕಾಗದ ಮೊದಲಾದವು ಗಳಿಂದ ತಯಾರಿಸುತ್ತಾರೆ .
ಗೊಂಬೆಗೆ ನೋವಾದರೆ ಅದನ್ನು ಎತ್ತಿಕೊಂಡು ಮುದ್ದಾಡಿ ಸಮಾಧಾನ ಮಾಡುತ್ತಾರೆ, ಗೊಂಬೆ ಕೆಳಗೆ ಬಿದ್ದರಂತೂ ಅತ್ತೇ ಬಿಡುತ್ತಾರೆ. ಅದನ್ನು ಎತ್ತಿಕೊಂಡು ಹಾಡು ಹೇಳಿ ಸಮಾಧಾನ ಮಾಡುತ್ತಾರೆ.
ಅಳಬೇಡ , ಅಳಬೇಡ ಗೊಂಬವ್ವ ನೀನು , ಜರತಾರಿ ಲಂಗ ಕೊಡಿಸುವೆ ನಾನು ‘ ಎಂಬುದಾಗಿ ಹಾಡುತ್ತಾ ಅಳುವ ಗೊಂಬೆಯನ್ನು ಸಮಾಧಾನ ಮಾಡುತ್ತಾರೆ .
ನಮ್ಮ ನಾಡಹಬ್ಬ ದಸರಾ ಹಬ್ಬದಂದು ಗೊಂಬೆಗಳನ್ನು ಅಲಂಕರಿಸುತ್ತಾರೆ .
ಸ್ಟಿಂಗ್ ಗೊಂಬೆಗಳಾಗಿ , ಕೀ ಗೊಂಬೆಗಳಾಗಿ , ಕೀಲು ಗೊಂಬೆಗಳಾಗಿ , ಯಂತ್ರದ ಗೊಂಬೆಗಳಾಗಿ ಜನ್ಮ ತಾಳಿವೆ .
Mechina Gombe Summary in Kannada
5ನೇ ತರಗತಿ ಪದ್ಯದ ಸಾರಾಂಶ
ಮುಖ್ಯಾಂಶಗಳು
ಗೊಂಬೆಯನ್ನು ಎಲ್ಲರೂ ಮೆಚ್ಚುತ್ತಾರೆ . ಸುಂದರವಾದ ಗೊಂಬೆಗಳು ತನ್ನ ಸೌಂದರ್ಯದಿಂದ , ಮನಮೋಹಕ ಬಣ್ಣಗಳಿಂದ , ವಿವಿಧ ರೀತಿಯ ಚಟುವಟಿಕೆಗಳಿಂದ ಎಲ್ಲರನ್ನೂ ಆಕರ್ಷಿಸುತ್ತದೆ . ಗೊಂಬೆಗಳು ಎಂದರೆ ಮಕ್ಕಳಿಗೆ ಪ್ರೀತಿ ಮತ್ತು ಅವುಗಳು ಅವರ ಪ್ರಮುಖ ಆಸ್ತಿ, ಮಕ್ಕಳು ಗೊಂಬೆಗಳ ಜೊತೆ ಚೆನ್ನಾಗಿ ಆಟವಾಡುತ್ತಾರೆ . ಅದನ್ನು ಎತ್ತಿ , ಬಿಸಾಡಿ , ನೂಕಿ , ಎಳೆದು , ನಲಿಯುತ್ತಾರೆ . ಸ್ವಲ್ಪ ದೊಡ್ಡ ಮಕ್ಕಳು ಮನೆಯಾಟವಾಡಲು ಗೊಂಬೆಗಳನ್ನು ಬಳಸುತ್ತಾರೆ , ತಾವು ಅಮ್ಮ ಅಪ್ಪನಾಗಿ ಗೊಂಬೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ . ಅವುಗಳಿಗೆ ಸ್ನಾನ ಮಾಡಿಸುವುದು , ಮಲಗಿಸಿ ಲಾಲಿ ಹಾಡುವುದು , ಬಟ್ಟೆ ತೊಡಿಸುವುದು , ಶೃಂಗಾರ ಮಾಡುವುದು ಹೀಗೆ ಪ್ರೀತಿಸಿ ಮುದ್ದಿಸುತ್ತಾರೆ . ಮಕ್ಕಳ ಕೈಯಲ್ಲಿ ಗೊಂಬೆಗಳಿಗೆ ಜೀವ ಇರುತ್ತದೆ . ಯಾರಾದರೂ ಅವರ ಗೊಂಬೆಗಳ ಬಗ್ಗೆ ಕೀಟಲೆ ಮಾಡಿದರೆ ಸುಮ್ಮನಿರುವುದಿಲ್ಲ . ನೋವಾಯಿತೆಂದು ಎತ್ತಿ ಮುದ್ದಾಡಿ , ಸಮಾಧಾನ ಮಾಡುತ್ತಾರೆ . ತಮ್ಮ ತಾಯಿತಂದೆಯರು ಹೇಳುವಂತೆ ಮಕ್ಕಳು ತಮ್ಮ ಗೊಂಬೆಗೆ ಹೇಳಿ ಸೂಸಿ ಹೊಡೆಯುತ್ತಾರೆ.
ಗೊಂಬೆಗಳನ್ನು ಮರ , ಮಣ್ಣು , ಪ್ಲಾಸ್ಟಿಕ್ , ಪಿಂಗಾಣಿ , ಬಟ್ಟೆ , ಹತ್ತಿ , ಬಿದಿರು ,ಕಾಗದಗಳಿಂದ ತಯಾರಿಸುತ್ತಾರೆ . ಗೊಂಬೆಗಳು ಮನುಷ್ಯ , ಪ್ರಾಣಿ , ಪಕ್ಷಿ , ಕೀಟ ಎಲ್ಲಾ ರೂಪಗಳಲ್ಲೂ ಜನ್ಮತಾಳಿವೆ, ಗೊಂಬೆಯ ಪೆನ್ನು , ಪೆನ್ಸಿಲ್ ಮತ್ತು ತಿಂಡಿತಿನಿಸುಗಳಲ್ಲೂ ಈ ರೂಪವನ್ನು ನೋಡಬಹುದು . ಜಾತ್ರೆ , ಉತ್ಸವಗಳಲ್ಲಿ ಸಹ ಗೊಂಬೆಗಳದೇ ಆಕರ್ಷಣೆ , ಕುಣಿಯುವ ಗೊಂಬೆಗಳು ಆನಂದವನ್ನು ತರುತ್ತದೆ . ಜೋಕರ್ ಗೊಂಬೆಗಳು ತಾವೂ ನಗುತ್ತಾ ಎಲ್ಲರನ್ನೂ ನಗಿಸುತ್ತವೆ . ನಮ್ಮ ನಾಡಹಬ್ಬ ದಸರಾದಲ್ಲಿ ಮನೆ – ಮನೆಗಳಲ್ಲಿ ಗೊಂಬೆಗಳನ್ನು ಅಲಂಕರಿಸುವ ಸಂಪ್ರದಾಯವಿದೆ . ನೂರಾರು ಗೊಂಬೆಗಳನ್ನು ಒಂದೇ ಕಡೆ ನೋಡುವುದೇ ಒಂದು ಹಬ್ಬ . ಸ್ಟಿಂಗ್ ಗೊಂಬೆಗಳು , ಕೀ ಗೊಂಬೆಗಳು , ಕೀಲುಗೊಂಬೆಗಳು , ಮಂತ್ರದ ಗೊಂಬೆಗಳು , ವಿವಿಧ ರಂಗಿನ ಗೊಂಬೆಗಳು ಹಾಗೂ ಇವುಗಳು ಆಟಗಳ ಮೂಲಕ ಎಲ್ಲರನ್ನೂ ಸೆಳೆಯುತ್ತವೆ . ಆಗ ಅವು ನಿಜವಾಗಿ ಜೀವವಿದ್ದವುಗಳಂತೆ ವರ್ತಿಸುತ್ತವೆ . ಗೊಂಬೆಗಳು ಮಾನವನಿಗೆ ಅನೇಕ ಜೀವನ ಪಾಠಗಳನ್ನು ತಿಳಿಸುತ್ತವೆ . ಯಾರ ಹೊಗಳಿಕೆಗೂ , ತೆಗಳಿಕೆಗೂ ಜಗ್ಗುವುದಿಲ್ಲ . ಈ ಕೆಳಗಿನ ಸಾಲುಗಳನ್ನು ಯಾರಾದರೂ ಮರೆಯಲು ಸಾಧ್ಯವೇ ? ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು || ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು || ಗೊಂಬೆಗಳು ಸುಂದರ , , ಮನಮೋಹಕವಾದರೂ, ಸ್ತುತಿನಿಂದೆಗಳಿಗೆ ಮನಸ್ಸು ಕೊಡಬಾರದು ಎಂಬ ನೀತಿಪಾಠವನ್ನು ಕಲಿಸುತ್ತದೆ.
ಇತರೆ ವಿಷಯಗಳು:
5th Standard All Subject Notes
5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.