5ನೇ ತರಗತಿ ಕನ್ನಡ ನನ್ನ ರೆಟ್ಟೆಯ ಬಲ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 5th Standard Nanna Retteya Bala Kannada Notes Question Answer Summary Mcq Pdf Download in Kannada Medium Karnataka 2024, Kseeb Solutions For Class 5 Kannada Puraka Pata Nanna Retteya Bala Notes
ತರಗತಿ : 5
ಪಾಠದ ಹೆಸರು : ನನ್ನ ರೆಟ್ಟೆಯ ಬಲ
ಕೃತಿಕಾರರ ಹೆಸರು : ಡಾ, ಬುದ್ದಣ್ಣ ಹಿಂಗೆಮಿರೆ
ಕೃತಿಕಾರರ ಪರಿಚಯ
ಡಾ . ಬುದ್ದಣ್ಣ ಹಿಂಗಮಿರೆ : ಬುದ್ದಣ್ಣ ಹಿಂಗೆಮಿರೆ ಅವರು ಕ್ರಿ.ಶ. 1933 ರಲ್ಲಿ ಬೆಳಗಾವಿ ಜಿಲ್ಲೆಯ ರಾಜಾಪೂರದ ಅರಗದಲ್ಲಿ ಜನಿಸಿದರು . ಇವರು ಅಧ್ಯಾಪಕರಾಗಿ , ರಷ್ಯನ್ ಭಾಷೆಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಇವರು ಉದಯರಾಗ , ಗುಬ್ಬಿಯ ಹಾಡು , ಶಬ್ದ ರಕ್ತ ಮತ್ತು ಮಾಂಸ , ಹದ್ದುಗಳ ಹಾಡು , ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಇವರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ , ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು ಲಭಿಸಿವೆ .
ಅಭ್ಯಾಸ
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ರೈತನ ಹಂಬಲ ಯಾವುದು ?
ಸತತವಾಗಿ ( ಯಾವಾಗಲೂ ) ದುಡಿಯುತ್ತಿರುವುದೇ ರೃತನ ಹಂಬಲ .
2. ರೈತನ ನಿರಂತರ ಛಲ ಯಾವುದು ?
ರೈತನ ನಿರಂತರ ಛಲ ದುಡಿಮೆ . ದುಡಿವುದೊಂದೇ ಅವನು ತನ್ನ ಛಲವನ್ನಾಗಿ ಮಾಡಿಕೊಂಡಿದ್ದಾನೆ .
3. ರೈತನು ಯಾವುದಕ್ಕೆ ತಕ್ಕ ಫಲ ಆಶಿಸುತ್ತಾನೆ ?
ರೈತನು ತನ್ನ ದುಡಿಮೆಗೆ , ಪ್ರಾಮಾಣಿಕತೆಗೆ ತಕ್ಕ ಫಲ ನೀಡಲೆಂದು (ಬೇಕೆಂದು) ಆಶಿಸುತ್ತಾನೆ .
4. ನಾಡನೆಲ ಏನಾಗಲೆಂದು ರೈತ ಹಂಬಲಿಸುತ್ತಾನೆ ?
ರೈತನು ನಾಡ ನೆಲವು ಹಿರಿದಾಗಲಿ ( ದೊಡ್ಡದಾಗಲಿ ) ಎಂದು ಹಂಬಲಿಸುತ್ತಾನೆ .
5. ರೈತನು ಯಾವುದು ಸಿರಿಯಾಗಲಿ ಎನ್ನುತ್ತಾನೆ ?
ರೈತನು ಮಣ್ಣ ಕಣ ಕಣವೂ ಸಿರಿಯಾಗಲಿ ಎನ್ನುತ್ತಾನೆ .
Nanna Retteya Bala Summary in Kannada
ಮುಖ್ಯಾಂಶಗಳು
ಪ್ರಸ್ತುತ ಕವಿತೆಯು ಒಬ್ಬ ಕೃಷಿಕ ( ರೈತ ) ನ ಹಾಡು . ಕವಿಯು ತುಂಬಾ ಸರಳವಾದ ಭಾಷೆಯಲ್ಲಿ ರೈತನ ಧ್ಯೇಯ ಮತ್ತು ಮನಸ್ಸನ್ನು ತೆರೆದಿಟ್ಟ ಪುಸ್ತಕದಂತೆ ವರ್ಣಿಸಿದ್ದಾರೆ . ಕವಿಯೇ ರೈತನಾಗಿ ತನ್ನ ಭಾವನೆಯನ್ನು ಹೇಳಿಕೊಳ್ಳುತ್ತಿದ್ದಾನೆ . ನನ್ನ ಹಂಬಲ , ಧ್ಯೇಯ , ಬಯಕೆ ಒಂದೇ , ಅದು ನಾನು ಸದಾ ದುಡಿಯುತ್ತಿರಬೇಕು . ಏನೇ ದುಃಖ ಬರಲಿ , ದುಡಿಮೆಯೊಂದೇ ನನ್ನ ಕಾಯಕ , ದುಡಿಯಲು ನನ್ನ ಎಲುಬು ಕಬ್ಬಿಣದಂತೆ ಗಟ್ಟಿಗೊಳ್ಳಲಿ . ಹಗಲು ( ದಿನದ ವೇಳೆ ) ದೀರ್ಘವಾಗಲಿ , ನಾನು ಗದ್ದೆಯೇ ಆಗಲಿ , ಗಡ್ಡೆಯೇ ಆಗಲಿ , ದುಡಿದು , ‘ ದುಡಿದು ಬೆವರ ಹೊಳೆ ಹರಿಸುತ್ತೇನೆ . ನಾನು ದುಡಿದರೂ ನೆಲ ದೊಡ್ಡದಾಗಲಿ ,
ನನ್ನ ಹೆಮ್ಮೆಗೆ ಸದಾ ಗರಿ ಮೂಡುತಿರಲಿ . ನನ್ನ ಕರ್ತವ್ಯ ಅಥವಾ ಕೆಲಸ ಈ ಮಣ್ಣಿನಲ್ಲಿ ದುಡಿಯುವುದು . ನನ್ನದು ಅಖಂಡ ಕಾಯಕ . ತಪಸ್ಸಿನಂತೆ ಕೆಲಸ ಮಾಡುವೆನು . ಈ ಮಣ್ಣಿನ ಕಣ ಕಣವೂ ಎಂದರೆ ಪ್ರತಿಕ್ಷಣವೂ ಸಿರಿಯಾಗಲಿ , ನಾನು ಛಲದಿಂದ ನಿರಂತರವಾಗಿ ದುಡಿಯುತ್ತೇನೆ . ನನ್ನ ಪ್ರಾಮಾಣಿಕತೆಗೆ ತಕ್ಕಂತೆ ಈ ಪುಕೃತಿಯ ನೆಲ , ಜಲ , ಆಕಾಶಗಳು ಸರಿಯಾದ ಫಲ ನೀಡಲಿ ಮತ್ತು ನನ್ನ ರಟ್ಟೆಗೆ ( ತೋಳಿಗೆ ) ಬಲವು ಹೆಚ್ಚು ಹೆಚ್ಚಾಗಿ ಬರಲಿ ಎಂಬುದು ಕವಿಯ ( ರೈತನ ) ಆಶಯ . ಎಲ್ಲರಿಗೂ ತಮ್ಮ ಕರ್ತವ್ಯದಲ್ಲಿ ಶ್ರದ್ಧೆಯಿರಬೇಕು .
ಇತರೆ ವಿಷಯಗಳು :
5th Standard All Subject Notes
5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.