3ನೇ ತರಗತಿ ಮುಳುಗದ ಸೂರ್ಯ ಕನ್ನಡ ನೋಟ್ಸ್‌ | 3rd Standard Mulugada Surya Kannada Notes

3ನೇ ತರಗತಿ ಮುಳುಗದ ಸೂರ್ಯ ಪದ್ಯ ಕನ್ನಡ ನೋಟ್ಸ್‌, 3rd Std Mulugada Surya Poem Notes Question Answer Summery Mulugada Surya Kannada Padya Notes Pdf Kseeb Solution For Class 3 Chapter 16 Mulugada Surya Kannada Padya Notes 2024

Mulugada Surya Poem Notes

3rd Std Mulugada Surya Poem Notes

ಅ ) ಒಂದೊಂದು ವಾಕ್ಯದಲ್ಲಿ ಉತ್ತರಿಸು .

1. ಗದುಗಿನ ಗವಾಯಿಯವರು ಯಾರ ಬಾಳಿನ ಚಂದಿರ ?

ಉತ್ತರ : ಗದುಗಿನ ಗವಾಯಿಯವರು ಅಂಧರ ಬಾಳಿನ ಚಂದಿರರಾಗಿದ್ದಾರೆ .

2. ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು?

ಉತ್ತರ : ಗವಾಯಿಯವರು ಸ್ವರ ಲೋಕವನ್ನು ಕಟ್ಟಿ ಬೆಳೆಸಿದರು

3. ಕವಿ ಮುಳುಗದ ಸೂರ್ಯ ಎಂದು ಯಾರನ್ನು ಕರೆದಿದ್ದಾರೆ ?

ಉತ್ತರ : ಪಂಡಿತ ಪುಟ್ಟರಾಜ ಗವಾಯಿಗಳವರನ್ನು ‘ ಮುಳುಗದ ಸೂರ್ಯ ‘ ಎಂದು ಕವಿ ಕರೆದಿದ್ದಾರೆ .

Mulugada Surya Poem Notes Question Answer

ಆ ) ಎರಡು ಮೂರು ವಾಕ್ಯದಲ್ಲಿ ಉತ್ತರಿಸು .

1. ಗವಾಯಿಯವರು ಮಾಡಿದ ಸಾಧನೆಗಳಾವುವು?

ಉತ್ತರ : ಗವಾಯಿಯವರು ಸ್ವರಲೋಕ ಹುಟ್ಟು ಹಾಕಿದ್ದಾರೆ . ಸಾವಿರ ಸಾವಿರ ಅಂಧ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಇವರು ಕಣ್ಣುಗಳಿಲ್ಲದಿದ್ದರೂ ಹಲವು ನಾಟಕ ಪುರಾಣ ಚರಿತ್ರೆಗಳನ್ನು ಬರೆದಿದ್ದಾರೆ ಹೆಸರಾಂತ ಸಂಗೀತ ಗಾಯಕರನ್ನು ತಯಾರಿ ಮಾಡಿ ನಾಡಿಗೆ ನೀಡಿದ್ದಾರೆ.

2. ಭೂಲೋಕ ಸ್ವರ್ಗ ಲೋಕವಾದುದು ಹೇಗೆ ಎಂದು ಕವಿ ಹೇಳಿದ್ದಾರೆ?

ಈ ನಾಡಿಗೆ ಸಂಗೀತ ಸುಧೆಯನ್ನು ಉಣಬಡಿಸಿದ ಗದಿಗಿನ ಹೆಮ್ಮೆಯ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಹುಟ್ಟುಹಾಕಿದ ಸ್ವರಲೋಕದಲ್ಲಿ ಸಾವಿರ ಸಾವಿರ ಅಂಧ ಮಕ್ಕಳು ಸಂಗೀತ ಶಿಕ್ಷಣ ಕಲಿಯುವುದರೊಂದಿಗೆ ಭೂಲೋಕ ಈ ಸ್ವರಲೋಕದಿಂದ ಸ್ವರ್ಗಲೋಕವಾದುದು ಎಂದು ಕವಿ ಹೇಳಿದ್ದಾರೆ.

3. ಪುಟ್ಟರಾಜರು ಸೇವೆ ಸಲ್ಲಿಸಿದ ಕ್ಷೇತ್ರಗಳಾವವು ?

ಉತ್ತರ : ಪುಟ್ಟರಾಜರು ಸಂಗೀತದ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಗಣನೀಯ ಸೇ ಸಲ್ಲಿಸಿದ್ದಾರೆ

ಭಾಷಾಭ್ಯಾಸ ಚಟುವಟಿಕೆ

ಅ ) ಮಾದರಿಯಂತೆ ಬರೆ :

ಮಾದರಿ : ನುಡಿ – ನುಡಿದರು

ಬರೆ – ಬರೆದರು .

ನಡೆ – ನಡೆದರು

ನಲಿ – ನಲಿದರು .

ಭಾಷಾ ಚಟುವಟಿಕೆ

ಅ ) ಈ ಪದಗಳಿಗೆ ಎರಡು ಸಮಾನಾರ್ಥಕ ಪದಗಳನ್ನು ಬರೆ

ಉತ್ತರ : 1. ಚಂದಿರ : ಶಶಿ , ಚಂದ್ರ

2. ಸೂರ್ಯ : ಪುಭಾಕರ , ಭಾಸ್ಕರ

3.ಧರೆ : ಭೂಮಿ , ಇಳೆ , ಪೃಥ್ವಿ ,

ಆ ) ಅರ್ಥದ ಆಧಾರದಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ ಬರೆ .

1. ನಾಟಕ , ಚರಿತ್ರೆ , ಚಿತ್ರ , ಪುರಾಣ

ಉತ್ತರ : ಚಿತ್ರ

2. ಬೆಟ್ಟ , ನದಿ , ಪರ್ವತ , ಗಿರಿ

ಉತ್ತರ : ನದಿ

3. ಮಂತ್ರಿ , ರಾಜ , ದೊರೆ , ಉತ್ತರ : ಮಂತ್ರಿ

4. ಗಾಯಕ , ಶಿಲ್ಪಿ , ಹಾಡುಗಾರ , ಗವಾಯಿ

ಉತ್ತರ : ಶಿಲ್ಪಿ .

ಈ ) ಕೊಟ್ಟಿರುವ ವಾಕ್ಯಗಳಲ್ಲಿಯ ದ್ವಿರುಕ್ತಿ ಪದಗಳನ್ನು ಅಡಿಗೆರೆ ಎಳೆದು ಗುರುತಿಸು

1. ಗವಾಯಿಗಳು ಸಾವಿರ ಸಾವಿರ ಅಂಧ ಮಕ್ಕಳಿಗೆ ಆಧಾರವಾದರು .

ಉತ್ತರ : ಗವಾಯಿಗಳು ಸಾವಿರ ಸಾವಿರ ಅಂಧ ಮಕ್ಕಳಿಗೆ ಆಧಾರವಾದರು .

2. ರಾಜರಾಜ ಕವಿ ಮಹಾರಾಜರೆಂದು ಪುಟ್ಟರಾಜರನ್ನು ಕವಿ ಕರೆದಿರುವರು .

ಉತ್ತರ : ರಾಜರಾಜ ಕವಿ ಮಹಾರಾಜರೆಂದು ಪುಟ್ಟರಾಜರನ್ನು ಕವಿ ಕರೆದಿರುವರು .

3. ಈ ಮಣ್ಣಿನ ಕಣಕಣದಲ್ಲೂ ಶೌರ್ಯ ಅಡಗಿದೆ ,

ಉತ್ತರ : ಈ ಮಣ್ಣಿನ ಕಣಕಣದಲ್ಲೂ ಶೌರ್ಯ ಅಡಗಿದೆ .

ಸಾರಾಂಶ :

ಕವಿ ಫ . ಗು . ಸಿದ್ದಾಪುರ ಅವರು ಸಾಧಕರ ರಚಿಸಿದ್ದಾರೆ . ಆ ಸಾಧಕರ ಕುರಿತು ಮತ್ತು ಸಾಧನೆಯನ್ನು ಇಲ್ಲಿ ಪದ್ಯದ ಮೂ ಹಂಚಿಕೊಂಡಿದ್ದಾರೆ . ಬಗ್ಗೆ ಅವರ ಗದುಗಿನ ಪುಟ್ಟರಾಜರು ಅಂಧರ ಚಂದ್ರನಂತೆ ಬೆಳಕಾಗಿದ್ದಾರೆ . ಬಾಳಿನ ಸುಂದರ ಅವರು ಸಾಧನೆಗೈಯುತ್ತ ಗಿರಿಶಿಖರದ ಮೇರೆ ಮೀರಿ ಕವಿಸೂರ್ಯನಂತೆ ಬೆಳೆದು Bogliono.com ಈ ನಾಡಿನಲ್ಲಿ ಕಣ್ಣುಗಳಿದ್ದು ಇಲ್ಲದ ಹಾಗೆ ಹಲವು ಜನರು ಬದುಕುತ್ತಿದ್ದಾರೆ . ಆದರೆ ಕಣ್ಣುಗಳಿರದೇ ಇದಂತೆ ಸಾಧಕರು ಇಲ್ಲಿ ಇದ್ದಾರೆ …. ಕಣಾಶ್ರಮವನ್ನು ಕಟ್ಟಿ ಬೆಳೆಸಿ , ಗಾನಯೋಗಿಯು ಸ್ವರಲೋಕದಲ್ಲಿ ಸಾವಿರ ಸಾವಿರ ಅಂಧ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ . ಈ ಭೂಲೋಕವನ್ನು ಸ್ವರ್ಗಲೋಕವನ್ನಾಗಿ ಮಾಡಿದ್ದಾರೆ ಎನ್ನುತ್ತಾರೆ .

ಪುಟ್ಟರಾಜರು ಕಣ್ಣುಗಳಿಲ್ಲದಿದ್ದರೂ ನಾಟಕ , ಪುರಾಣ , ಹಲವು ಚರಿತ್ರೆಗಳನ್ನು ಬರೆದಿದ್ದಾರೆ . ಅವರ ಪಾಂಡಿತ್ಯವನ್ನು ಅಳೆಯಲಿಕ್ಕಾಗದ ಹೊತ್ತಿಗೆಯೆನಿಸಿದೆ . ಅಲ್ಲದೆ ಪುಟ್ಟರಾಜರದೇ ಆದ ಸಾಹಿತ್ಯವು ನಾಡಿನ ಎಲ್ಲಕಡೆಗೆ ವ್ಯಾಪಿಸಿ ಸಾಹಿತ್ಯದ ಪರಿಮಳವನ್ನು ಸೂಸುತ್ತಿದೆ . om ಪುಟ್ಟರಾಜರು ಕಿನ್ನರಿಯನ್ನು ನುಡಿಸಲು ಹಕ್ಕಿಗಳೆಲ್ಲವೂ ಉಲಿದು ನಲಿಯುವವು . ಪುಟ್ಟರಾಜರು ಭೂಮಿಯಲ್ಲಿ ಮುಕ್ತಿಯ ಜೀವನ ತನ್ನ ಹೊಂದಿದರೂ ಅವರು ಗೈದ ಸಾಧನೆಯ ಕಾರ್ಯಗಳಿಗೆ ಅವರು ರಾಜರಾಜಕವಿ ಮಹಾರಾಜರೆನಿಸಿದ್ದಾರೆ , ಪುಟ್ಟರಾಜರು ಈ ಮುಳುಗದ ಸೂರ್ಯನಂತೆ ಇಂದಿಗೂ ಜನಮನದಲ್ಲಿ ನೆಲೆಸಿದ್ದಾರೆ ಎಂದು ಸ್ಮರಿಸುತ್ತಾರೆ .

FAQ

1. ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು?

ಉತ್ತರ : ಗವಾಯಿಯವರು ಸ್ವರ ಲೋಕವನ್ನು ಕಟ್ಟಿ ಬೆಳೆಸಿದರು

3. ಕವಿ ಮುಳುಗದ ಸೂರ್ಯ ಎಂದು ಯಾರನ್ನು ಕರೆದಿದ್ದಾರೆ ?

ಉತ್ತರ : ಪಂಡಿತ ಪುಟ್ಟರಾಜ ಗವಾಯಿಗಳವರನ್ನು ‘ ಮುಳುಗದ ಸೂರ್ಯ ‘ ಎಂದು ಕವಿ ಕರೆದಿದ್ದಾರೆ .

ಇತರೆ ವಿಷಯಗಳು:

3ನೇ ತರಗತಿ ಪಠ್ಯಪುಸ್ತಕ PDF

3ನೇ ತರಗತಿ ಕನ್ನಡ ನೋಟ್ಸ್

1 ರಿಂದ 10ನೇ ತರಗತಿ ಕನ್ನಡ ನೋಟ್ಸ್‌ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

All Notes App

Leave a Reply

Your email address will not be published. Required fields are marked *

rtgh