ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-6 ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್, 2nd Puc Sociology Chapter 6 Notes Question Answer Pdf kseeb chapter 6 2nd puc sociology Kseeb Solution For Class 12 Sociology Chapter 6 Notes Economic, Political and Communication Systems in Kannada Notes artika rajakiya mattu samvahana vyavasthegalu in kannada Sociology Notes

Contents
2nd Puc Sociology 6st Chapter Notes Kannada Medium
I. ಒಂದು ಅಂಕದ ಪ್ರಶ್ನೆಗಳು :
1. ವೆಲ್ತ್ಆಫ್ ನೇಷನ್ಸ್ ಕೃತಿಯ ಲೇಖಕ ಯಾರು ?
‘ ದ ವೆಲ್ತ್ ಆಫ್ ನೇಷನ್ಸ್ ‘ ಕೃತಿಯ ಲೇಖಕ ಆಡಮ್ ಸ್ಮಿತ್ . ಈ ಕೃತಿಯಲ್ಲಿ ಅಂದಿನ ಕಾಲದ ಮಾರುಕಟ್ಟೆಯ ಆರ್ಥಿಕ ವ್ಯವಸ್ಥೆಯ ಸಂರಚನೆಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದರು .
2. ತಟಸ್ಥನೀತಿಯ ಮತ್ತೊಂದು ಹೆಸರೇನು ?
ತಟಸ್ಥನೀತಿಯ ಮತ್ತೊಂದು ಹೆಸರು ‘ ನಿಶ್ಚಿಯಾತ್ಮಕ ಕ್ರಿಯೆ ‘ , Affirmative Action . ಈ ಪದವನ್ನು ಮೊದಲ ಬಾರಿಗೆ ಅಮೇರಿಕೆಯ ಅಧ್ಯಕ್ಷರಾಗಿದ್ದ ಜಾನ್ . ಎಫ್ . ಕೆನಡಿ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡಲು ಹೊರಡಿಸಿದ್ದ ಆಜ್ಞೆಯಲ್ಲಿ ಬಳಸಲಾಗಿತ್ತು . ತಾರತಮ್ಯ ಅಥವಾ ಅನ್ಯಾಯ ಅಥವಾ ಶೋಷಣೆಗೊಳಗಾದವರಿಗೆ ಪರಿಹಾರ ಒದಗಿಸುವುದೇ ನಿಶ್ಚಯಾತ್ಮಕ ಕ್ರಿಯೆಯ ರೂಪವಾಗಿದೆ .
3. WWW . ಏನನ್ನು ಸೂಚಿಸುತ್ತದೆ .
WWW . ಎಂಬುದು ವರ್ಲ್ಡ್ ವೈಡ್ ವೆಬ್‌ನ್ನು ಸೂಚಿಸುತ್ತದೆ .
4. World Wide Web ಕಂಡುಹಿಡಿದವರು ಯಾರು ?
World Wide Web ನ್ನು ಎಂದರೆ ವರ್ಲ್ಡ್ ವೈಡ್ ವೆಬ್ ಸರ್ವರ್ ಮತ್ತು ಬೋಸರ್‌ನ್ನು ಟೀಮ್ ಬೆನ್ನರ್ ಲೀ Tim Berne’s Lee 1990 ರಲ್ಲಿ ಸೃಷ್ಟಿಸಿದರು . 1991 ರಲ್ಲಿ ಇದನ್ನು ವಾಣಿಜ್ಯ ಉಪಯೋಗಕ್ಕೆ ಬಳಸಲಾಯಿತು .
5. ಯಾವ ವರ್ಷ ಕರಾಚಿ ನಿರ್ಣಯ ಮಾಡಲಾಯಿತು ?
ಕರಾಚಿ ನಿರ್ಣಯವನ್ನು 1931 ರಲ್ಲಿ ಘೋಷಿಸಲಾಯಿತು .
6. ಭಾರತ ಪ್ರಜಾಪ್ರಭುತ್ವ ಯಾವುದಾದರು ಎರಡು ಪ್ರಧಾನ ಮೌಲ್ಯಗಳನ್ನು ತಿಳಿಸಿರಿ ?
ಭಾರತದ ಪ್ರಜಾಪ್ರಭುತ್ವದ ಎರಡು ಪ್ರಧಾನ ಮೌಲ್ಯಗಳು ಸಮಾನತೆ ಮತ್ತು ಸ್ವಾತಂತ್ರ್ಯ
7. TRP ಯನ್ನು ವಿಸ್ತರಿಸಿ ?
TRP ಎಂದರೆ Television Rating Point ಯಾವ ಕಾರ್ಯ ಕ್ರಮಗಳನ್ನು ಹೆಚ್ಚು ವೀಕ್ಷಣೆ ಮಾಡುತ್ತಾರೆ ಎಂದು ಅಳತೆ ಮಾಡುವ ವಿಧಾನವನ್ನು ದೂರದರ್ಶನ ಅಳತೆಯ ಬಿಂದು ಎಂದು ಕರೆಯುತ್ತಾರೆ .
8 . ಭಾರತದ ಎರಡು ವ್ಯಾಪಾರಿ ಸಮುದಾಯಗಳನ್ನು ತಿಳಿಸಿ ?
ಎರಡು ವ್ಯಾಪಾರಿ ಸಮುದಾಯಗಳು ನಗರ್ತಕರು ಮತ್ತು ಉತ್ತರ ಭಾರತದ ಭಾರತದ ತಮಿಳುನಾಡಿನ ಬನಿಯ ಎಂಬ ವೈಶ್ಯರ ಸಮೂಹ .
9. ಪ್ರಜಾಪ್ರಭುತ್ವ ಎಂದರೇನು ?
ಪ್ರಜಾಪ್ರಭುತ್ವ ಎಂದರೆ ಜನರಿಂದ , ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ಸರ್ಕಾರದ ವ್ಯವಸ್ಥೆಯಾಗಿರುತ್ತದೆ.
10. ಏಷ್ಯನ್ ಡ್ರಾಮಾ ಗ್ರಂಥದ ಕತೃ ಯಾರು ?
ಏಷ್ಯನ್ ಡ್ರಾಮಾ Asian Drama ಗ್ರಂಥವನ್ನು ಗುನ್ನರ್ ಮಿರ್ಡಲ್ ‘ ಎಂಬ ಸ್ವೀಡನ್ನಿನ ಅರ್ಥಶಾಸ್ತ್ರಜ್ಞ ಮತ್ತು ಸಮಾಜ ಶಾಸ್ತ್ರಜ್ಞನು ರಚಿಸಿದ ಕೃತಿ .
II . ಎರಡು ಅಂಕದ ಪ್ರಶ್ನೆಗಳು
11. ಮಾರುಕಟ್ಟೆ ಎಂದರೇನು ?
ಮಾರುಕಟ್ಟೆ ಎಂಬುದು ಒಂದು ವ್ಯವಸ್ಥೆಯಾಗಿ ಸರಕು ಮತ್ತು ಸೇವೆಗಳ ವಿನಿಮಯವಾಗಿದೆ . ವಿವಿಧ ವ್ಯವಸ್ಥೆಗಳು , ಸಂಸ್ಥೆಗಳು , ನಿಯಮ ಮತ್ತು ಸಂಬಂಧಗಳು ಮತ್ತು ಮೂಲಭೂತ ಪರಿಕರಗಳು ಮಾರುಕಟ್ಟೆಯಲ್ಲಿ ಸೇರಿರುತ್ತವೆ . ಸಮಾಜಶಾಸ್ತ್ರದಲ್ಲಿ ಮಾರುಕಟ್ಟೆ ಎಂಬ ಪರಿಕಲ್ಪನೆಯು ಗ್ರಾಹಕರು ಮತ್ತು ಮಾರಾಟಗಾರರು ಯಾವುದೇ ಪ್ರಕಾರದ ವಸ್ತುಗಳು , ಸೇವೆಗಳು ಮತ್ತು ಮಾಹಿತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂರಚನೆಯಾಗಿದೆ .
12. ಮಾರುಕಟ್ಟೆಯ ಎರಡು ಲಕ್ಷಣಗಳನ್ನು ತಿಳಿಸಿ ?
ಮಾರುಕಟ್ಟೆಯ ಲಕ್ಷಣಗಳು
i ) ಮಾರುಕಟ್ಟೆಯು ಒಂದು ಸ್ಥಳವಾಗಿದ್ದು ಸರಕು ಮತ್ತು ಸೇವೆಗಳ ವಿನಿಮಯವಾಗಿರುತ್ತದೆ . ಉದಾ : ಹಣ್ಣಿನ ಮತ್ತು ದಿನಸಿ ಮಾರುಕಟ್ಟೆಗಳು .
ii ) ಮಾರುಕಟ್ಟೆಯು ಕೇವಲ ಭೌತಿಕ ಸ್ಥಳವಲ್ಲ . ಕೊಳ್ಳುವವರು ಮತ್ತು ಮಾರುವವರು ಸೇರುವ ಕೂಟ . ಉದಾ : ಸಂತೆ
iii ) ಮಾರುಕಟ್ಟೆಯು ವ್ಯಾಪಾರ ಅಥವಾ ವ್ಯವಹಾರವಾಗಿದೆ ಉದಾ : ಕಾರು , ಸಿದ್ದಉಡುಪುಗಳು- ಹೀಗೆ ಅಸಂಖ್ಯಾತ ವಸ್ತುಗಳಿರುತ್ತದೆ .
iv ) ಆರ್ಥಿಕ ಮತ್ತು ಸಾಂಸ್ಥಿಕ ಚಟುವಟಿಕೆಗಳೂ ಮಾರುಕಟ್ಟೆಯ ಕೇಂದ್ರ ಬಿಂದುವಾಗಿರುತ್ತದೆ . ಮಾರುಕಟ್ಟೆಯು ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿದೆ .
13. ಅಗೋಚರ ಮಾರುಕಟ್ಟೆ ಎಂದರೇನು ?
ಅಗೋಚರ ಮಾರುಕಟ್ಟೆ , ಇದನ್ನು ವರ್ಚುಯಲ್ ಮಾರುಕಟ್ಟೆ ಎಂದೂ ಸಹ ಕರೆಯುತ್ತಾರೆ . ಇದು ದೃಷ್ಟಿಗೆ ಗೋಚರವಾಗುವುದಿಲ್ಲ . ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಆಧಾರದಿಂದ ಮಾರುಕಟ್ಟೆ ಪ್ರಕ್ರಿಯೆಗಳು ಆನ್ ಲೈನ್‌ನಲ್ಲಿ ಏರ್ಪಡುವ ಕ್ರಿಯೆ , ಇ – ಕಾಮರ್ಸ್ , ಆನ್‌ಲೈನ್ ಪರ್ಚೆಸ್ , ಶೇರು ಮಾರುಕಟ್ಟೆಯಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಇತ್ಯಾದಿಗಳು ಅಂತರ್ಜಾಲದ ಮೂಲಕ ಮಾರುಕಟ್ಟೆಯ ಕಾರ್ಯಾಚರಣೆ ಪರಿವರ್ತನೆಗೊಂಡಿದೆ . ಇಲ್ಲಿ ಮಾರಾಟಗಾರನಿಗಿಂತ ಗ್ರಾಹಕರೇ ಸಾರ್ವಭೌಮರು ,
14. ಯಾವುದಾದರೂ ಎರಡು ಆನ್ – ಲೈನ್ ಶಾಪಿಂಗ್ ತಾಣಗಳನ್ನು ತಿಳಿಸಿ ?
ಪ್ರಸಕ್ತ ಭಾರತವು ಜಾಗತಿಕ ಮಾರುಕಟ್ಟೆಯಿಂದಾಗಿ ಜಾಗತಿಕ ಗ್ರಾಮವಾಗಿದೆ . ಮಾಹಿತಿ ತಂತ್ರಜ್ಞಾನದ ಪ್ರಗತಿಯಿಂದಾಗಿ ಇಂಟರ್ ನೆಟ್ ಸೌಲಭ್ಯಗಳನ್ನು ವ್ಯಾಪಕವಾಗಿ ಆನ್ – ಲೈನ್ ಮೂಲಕ ವಸ್ತುಗಳ ಮಾರಾಟ ವಾಗುತ್ತಿವೆ . ಭಾರತದಲ್ಲಿ ನೂರಾರು ಆನ್ – ಲೈನ್ ಶಾಪಿಂಗ್ ತಾಣಗಳಿವೆ . ಅವುಗಳಲ್ಲಿ ಪ್ರಮುಖವಾದುದು ಸ್ಲಿಪ್ ಡಾಟ್ e Bay . in ಕಾಮ್ ಇ.ಬೇ.ಇನ್ ಮತ್ತು ಮೈನ್ ತ್ರಾ , ಕಾಮ್ . ಇತ್ಯಾದಿಗಳು .
15. ಸಾಮಾಜಿಕ ಸಂಪರ್ಕ ತಾಣ ಎಂದರೇನು ?
ಸಾಮಾಜಿಕ ಸಂಪರ್ಕ ತಾಣಗಳು ಎಂದರೆ Social Networking Sites ಈ ಸಾಮಾಜಿಕ ಸಂಪರ್ಕ ತಾಣಗಳು ಎಸ್.ಎನ್.ಎಸ್ . ಆನ್‌ಲೈನ್ ಅಥವಾ ಅಗೋಚರ ವೇದಿಕೆಗಳಾಗಿ , ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳುವ ಅಂತರ್ಜಾಲ ತಾಣಗಳಾಗಿವೆ . ಇವುಗಳು ಒಂದು ರೀತಿಯ ಅಗೋಚರ ಸಮುದಾಯಗಳಾಗಿ Virtual Community ಅತ್ಯಂತ ಜನಪ್ರಿಯ ಸಂಪರ್ಕ ವೇದಿಕೆಗಳಾಗಿವೆ . ಸಾಮಾಜಿಕ ಸಂಪರ್ಕ ತಾಣಗಳು ಸಂಪರ್ಕ , ಮನರಂಜನೆ , ಮಾಹಿತಿಯ ತಾಣ , ಫೇಸ್‌ಬುಕ್ , ಆರ್‌ಕೂಟ್ , ಗೂಗಲ್‌ಪ್ಲಸ್ ಇತ್ಯಾದಿ ಗಳ ಸಂಪರ್ಕ ತಾಣವಾಗಿದೆ .
16. ಮ್ಯಾಕ್‌ಡೋನಾಲೀಕರಣ ಎಂದರೇನು ?
ಮ್ಯಾಕ್‌ಡೋನಾಲೀಕರಣ ಎಂದರೆ ಅಮೇರಿಕಾ ಸಮಾಜಶಾಸ್ತ್ರಜ್ಞ ಜಾರ್ಜ್ ರಿಟ್‌ರ್ಜ ಕೈಗಾರಿಕಾ ದೇಶದಲ್ಲಿ ನಡೆಯುವ ಆರ್ಥಿಕ ಚಟುವಟಿಕೆಗಳು ಎಂದು ವಿವರಿಸಿದ್ದಾರೆ ಈ ಪ್ರಕ್ರಿಯೆಗೆ ಮ್ಯಾಕ್‌ಡೋನಾಲ್ಡ್ ಎಂಬ ಅಲಂಕಾರಿಕ ಪದವನ್ನು ಬಳಸುತ್ತಾರೆ ಎಂದರೆ ಸಮಾಜ ಮ್ಯಾಕ್‌ಡೋನಾಲೀಕರಣವಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ . ಅಮೇರಿಕ ಮತ್ತು ಇತರೇ ರಾಷ್ಟ್ರಗಳಲ್ಲಿ ಶೀಘ್ರ ಆಹಾರ Fast food ವಿತರಿಸುವ ಹೋಟೆಲ್‌ಗಳ ತಂತ್ರಗಾರಿಕೆಗಳು ಬೇರೆ ಬೇರೆ ವಲಯಗಳಿಗೆ ವಿಸ್ತರಿಸಿ ಪ್ರಾಬಲ್ಯವನ್ನು ಸಾಧಿಸುತ್ತಿದೆ .
17. ಜಾರ್ಜ್‌ರಿಟೈರ್ ಬಳಸಿದ ಮ್ಯಾಕ್‌ಡೋನಾಲ್ಡ್ ಕಂಪನಿಯ ನಿಯಮಗಳನ್ನು ತಿಳಿಸಿ ?
ಅಮೇರಿಕಾದ ಸಮಾಜಶಾಸ್ತ್ರಜ್ಞ ಜಾರ್ಜ್ ರಿಟ್ಟರ್ George Ritzer ಮೆಕಾಡೋನಾಲ್ಡ್ ಕೈಗಾರಿಕಾ ಸಮಾಜಗಳಲ್ಲಿ ವೈವಿಧ್ಯಮಯ ರೀತಿಯಲ್ಲಿ ಮಾರ್ಪಾಡುಗಳನ್ನು ಪ್ರಕ್ರಿಯೆಗಳು ನಿರ್ಮಾಣ ಮಾಡುತ್ತಿವೆ . ಎಂದು ವಾದಿಸುತ್ತಾರೆ . ಇವರ ಪ್ರಕಾರ ನಾಲ್ಕು ಮಾರ್ಗದರ್ಶಕ ತತ್ವಗಳು ಅಥವಾ ಕಂಪನಿಯ ನಿಯಮಗಳು ಹೀಗಿವೆ .
i ) ದಕ್ಷತೆ – Officiency
ii ) ಲೆಕ್ಕಾಚಾರ – Calculability
iii) ಸಮರೂಪತೆ – Uniformity
iv ) ಸ್ವಯಂ ಚಾಲನೆ ಮೂಲಕ ನಿಯಂತ್ರಣ – Control through automation
18. ಅಂತರ್‌ಜಾಲ ಎಂದರೇನು ?
ಅಂತರ್‌ಜಾಲ ಎಂದರೆ Internet ಅಂತರ್ಜಾಲವು ಗಣಕಯಂತ್ರದ ಮೂಲಕ ಲಕ್ಷಾಂತರ ಖಾಸಗಿ , ಸಾರ್ವಜನಿಕ ಶೈಕ್ಷಣಿಕ , ವ್ಯವಹಾರಿಕ ಮುಂತಾದ ಸಂಗತಿಗಳನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಜಾಗತಿಕ ಮಟ್ಟದಲ್ಲಿ ಸಂಪರ್ಕ ಬೆಸೆಯುವ ವ್ಯವಸ್ಥೆಗೆ ಅಂತರ್ಜಾಲ ಎನ್ನುವರು . ಸರಳವಾಗಿ ಹೇಳುವುದಾದರೆ ಅಂತರ್ಜಾಲ ಎಂದರೆ ಸಂಪರ್ಕಗಳ OF Netwrok in a Network of Net Works .
19. ರಾಜಕೀಯ ಸಂಸ್ಥೆಗಳನ್ನು ವ್ಯಾಖ್ಯಾನಿಸಿ
ರಾಜಕೀಯ ಸಂಸ್ಥೆ ಒಂದು ಸಂಘಟನೆಯಾಗಿ ನಿರ್ದಿಷ್ಟ ವಿಧಾನಗಳ ಮೂಲಕ ಅಧಿಕಾರವನ್ನು ಚಲಾಯಿಸುವ ವ್ಯವಸ್ಥೆಯಾಗಿದೆ . ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಲ್ಲಿ ನೆಲೆಸಿರುವ ಜನಸಮೂಹದ ಮೇಲೆ ಆಳ್ವಿಕೆ ನಡೆಸುವ ಸಾಮರ್ಥ್ಯ ಹೊಂದಿರುವ ವ್ಯವಸ್ಥೆಯಾಗಿದೆ .
20. ಸಮೂಹ ಮಾದ್ಯಮ ಎಂದರೇನು ?
ಸಮೂಹ ಮಾಧ್ಯಮ ಎಂದರೆ ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಮಾಹಿತಿ ತಲುಪಿಸುವ ಸಂವಹನ ವ್ಯವಸ್ಥೆ ಎನ್ನಬಹುದು . ಸಮೂಹ ಮಾಧ್ಯಮದ ಪ್ರಕಾರಗಳು ಎರಡು . ಅವು
i ) ಮುದ್ರಣ ಮಾಧ್ಯಮ : ದಿನಪತ್ರಿಕೆಗಳು , ವಾರಪತ್ರಿಕೆಗಳು , ಮ್ಯಾಗ್‌ಜೈನ್‌ಗಳು ಇತ್ಯಾದಿ .
ii ) ವಿದ್ಯುನ್ಮಾನ ಮಾಧ್ಯಮ : ರೇಡಿಯೋ , ಟಿ.ವಿ. ಅಂತರ್ಜಾಲಗಳು , ಸಾಮಾಜಿಕ ಸುರಕ್ಷತಾಗಳು .
2nd Puc Sociology Chapter 6 Question Answer in Kannada
III . ಐದು ಅಂಕದ ಪ್ರಶ್ನೆಗಳು
21. ಕನ್ನಡದ ಐದು ವಾರ್ತಾವಾಹಿನಿಗಳನ್ನು ಬರೆಯಿರಿ .
ರಾಜ್ಯಗಳಲ್ಲಿ ಕರ್ನಾಟಕವೂ ಒಂದು . ಉದಯ ವಾರ್ತೆಗಳು ಕನ್ನಡದ ಮೊದಲ ಖಾಸಗಿ ವಾರ್ತಾವಾಹಿನಿ ಪ್ರಸ್ತುತ ಕನ್ನಡದಲ್ಲಿ ಉದಯ , ಈಟಿವಿ , ರಾಜ್ ನ್ಯೂಸ್ ಟಿ.ವಿ ವಾರ್ತೆಗಳನ್ನು ಬಿತ್ತರಿಸುತ್ತಿವೆ .
i ) ಟಿ.ವಿ-9
ii) ಸುವರ್ಣ ವಾರ್ತೆಗಳು
iii ) ಕಸ್ತೂರಿ ವಾರ್ತೆಗಳು
iv ) ಸಮಯ ವಾರ್ತೆಗಳು
v ) ಜನಶ್ರೀ ವಾರ್ತೆಗಳು
ಕನ್ನಡ ಭಾಷೆಯ ಚಾನೆಲ್‌ಗಳು ಹಲವಾರು . ಮೊಟ್ಟಮೊದಲು ದೂರದರ್ಶನವು 1959 ರ ಸೆಪ್ಟೆಂಬರ್‌ನಲ್ಲಿ ಕೃಷಿ ದರ್ಶನ ಕಾರ್ಯಕ್ರಮವನ್ನು ಪ್ರಸಾರ ಮಾಡಿತು . ಈ ರೀತಿ ದೂರದರ್ಶನವು ಸಾರ್ವಜನಿಕ ವಾಹಿನಿಯಾಯಿತು . ಡಿ.ಡಿ. ಚಂದನ ಕನ್ನಡ ಭಾಷೆಗೆ ಸೀಮಿತವಾಗಿರುವ ವಾಹಿನಿ , ಬಹುತೇಕ ವಾರ್ತಾವಾಹಿನಿಗಳು ವಾರದ 24 ಗಂಟೆ ಎಂದರೆ 24×7 ವಾರ್ತೆಗಳನ್ನು ಪ್ರಸಾರ ಮಾಡುತ್ತಲೇ ಇರುತ್ತಾರೆ .
ವಾರ್ತೆಗಳು ನೇರ ಮತ್ತು ಅನೌಪಚಾರಿಕವಾಗಿರುತ್ತದೆ ವಾರ್ತೆಗಳು ಸಾರ್ವಜನಿಕ ಚರ್ಚೆಯ ಮೂಲಕ ಹೆಚ್ಚು ಜನರನ್ನು ತಲುಪುತ್ತದೆ . ಕನ್ನಡ ಭಾಷೆಯಲ್ಲಿ ಹಲವು ಚಾನೆಲ್‌ಗಳು ನಿರಂತರ ಸುದ್ದಿಯನ್ನು ಭಿತ್ತರಿಸುತ್ತಿರುತ್ತದೆ . ಪ್ರಪಂಚದಾದ್ಯಂತ ನಡೆಯುವ ವಿಷಯಗಳ ಕೇಳಲು , ತಿಳಿದುಕೊಳ್ಳಲು ಮತ್ತು ನೋಡುವ ಅವಕಾಶಗಳು ಈ ವಾರ್ತಾವಾಹಿನಿಗಳಿಂದ ಲಭ್ಯವಾಗುತ್ತದೆ . 1998 ರ ನಂತರ ಖಾಸಗಿ ಉಪಗ್ರಹ ಆಧಾರಿತ ಚಾನೆಲ್‌ಗಳ ಸಂಖ್ಯೆ ದ್ವಿಗುಣಗೊಂಡಿದೆ . 1991 ರಲ್ಲಿ ಸರ್ಕಾರಿ ಪ್ರಾಯೋಜಿತ ಏಕೈಕ ದೂರದರ್ಶನ ವಾಹಿನಿ ಭಾರತದಲ್ಲಿತ್ತು .
ವಾರ್ತಾ ಚಾನೆಲ್‌ಗಳು ಪ್ರಾದೇಶಿಕ ಸುದ್ದಿಯಿಂದ ರಾಜ್ಯ , ರಾಷ್ಟ್ರ ಹಾಗೂ ಜಗತ್ತುಗಳ ಸುದ್ದಿಯನ್ನು ಪ್ರಸಾರಮಾಡುತ್ತವೆ . ವಾರ್ತಾ ವಾಹಿನಿಗಳಿಂದ ನಾವು ಎಲ್ಲಾ ರೀತಿಯ ವಿಷಯಗಳ ಜ್ಞಾನವನ್ನು ಪಡೆದುಕೊಳ್ಳಬಹುದು . ವಿದ್ಯುನ್ಮಾನ ವಾಹಿನಿಗಳಲ್ಲಿ ವಾರ್ತಾ ವಾಹಿನಿಗಳು ಸುಲಭ ಮತ್ತು ಕಡಿಮೆ ಖರ್ಚಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತವೆ . ಈ ವಾಹಿನಿಗಳು ದೈನಂದಿನ ಜೀವನವನ್ನು ಸಾಮಾಜೀಕರಣಗೊಳಿಸಿ , ಜೀವನಶೈಲಿ , ಸಂಬಂಧಗಳು ಮುಂತಾದವುಗಳಲ್ಲಿ ಆಸಕ್ತಿಯನ್ನು ಹುಟ್ಟು ಹಾಕುತ್ತವೆ .
22. ವಾರದ ಸಂತೆ ( ಮಾರುಕಟ್ಟೆ)ಯನ್ನು ಸಾಮಾಜಿಕ ಸಂಸ್ಥೆಯಾಗಿ ವ್ಯಾಖ್ಯಾನಿಸಿ .
ವಾರದ ಸಂತೆಯ ಒಂದು ಸಾಮಾಜಿಕ ಸಂಸ್ಥೆ Weakly Market as a Social Institution ಪ್ರಪಂಚದ ಎಲ್ಲಾ ಕಡೆ ಕೃಷಿ ಅಥವಾ ರೈತ ಸಮುದಾಯಕ್ಕೆ ನಿಗದಿತ ವಾರದ ಸಂತೆಯು ಸಾಮಾಜಿಕ ಮತ್ತು ಆರ್ಥಿಕ ಸಂಘಟನೆಯ ಕೇಂದ್ರ ಬಿಂದುವಾಗಿದೆ . ಈ ವಾರದ ಸಂತೆಯು ಆಕರ್ಷಕವಾಗಿದ್ದು ಸುತ್ತಮುತ್ತಲಿನ ಜನರನ್ನು , ನೆರೆಹೊರೆ ಗ್ರಾಮಸ್ಥರನ್ನೂ ಒಟ್ಟಿಗೆ ಸೇರಿಸುವ ವ್ಯವಸ್ಥೆಯಾಗಿದೆ . ವಾರದ ಸಂತೆಯಲ್ಲಿ ಗ್ರಾಮಸ್ಥರು ತಾವು ಬೆಳೆದಿರುವ ವಸ್ತುಗಳನ್ನು ಮಾರಲೋಸುಗ ಹಾಗೆಯೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲೋಸುಗ ಬರುತ್ತಾರೆ . ಸಂತೆಯಲ್ಲಿ ಅವರಿಗೆ ಅವಶ್ಯಕವಾದ ವಸ್ತುಗಳೆಲ್ಲಾ ದೊರೆಯುತ್ತದೆ .
ಅಷ್ಟೇ ಅಲ್ಲ ಸಂತೆಗೆ ಲೇವಾದೇವಿದ ಮನೋರಂಜನೆಯ ಕಲಾವಿದರು , ಆಟಿಗೆ ಮತ್ತು ಪ್ರದರ್ಶನಕಾರರು , ಜ್ಯೋತಿಷಿಗಳು ಹಾಗೂ ವಿವಿಧ ಕುಶಲ ಕರ್ಮಿಗಳು ತಮ್ಮ ಸರಕು ಮತ್ತು ಸೇವೆಗಳನ್ನು ಮಾರಾಟ ಆಟದಮಾಡಲು ಬರುತ್ತಾರೆ . ವಾರದ ಸಂತೆಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿಯೂ ಸರ್ವೇ ಸಾಮಾನ್ಯವಾಗಿದೆ . ವಾರದ ಸಂತೆಗಳಿಂದ ಅನೇಕ ಪ್ರಯೋಜನಗಳುಂಟು . ಅರಣ್ಯ ಪ್ರದೇಶದ ನಿವಾಸಿಗಳಿಗೆ ಇಂತಹ ಸಂತೆಗಳಲ್ಲೇ ಅವರಿಗೆ ಅವಶ್ಯಕವಾದ ವಸ್ತುಗಳನ್ನು ಕೊಳ್ಳುವುದು ಸಾಧ್ಯವಾಗುತ್ತದೆ .
ಇವರಿಗೆ ಸಾಮಾಜಿಕ ಸಂಪರ್ಕ ಬೆಳೆಸಿಕೊಳ್ಳುವ ಸಾಧನ ಈ ವಾರದ ಸಂತೆಗಳು , ಸ್ಥಳೀಯರು ತಾವೇ ತಯಾರಿಸಿದ ವಸ್ತುಗಳನ್ನು , ಅರಣ್ಯ ಉತ್ಪನ್ನಗಳನ್ನು ಮಾರುತ್ತಾರೆ . ರೈತರು ಮತ್ತು ಆದಿವಾಸಿಗಳು ಕೃಷಿ ಸಲಕರಣೆ , ಗೃಹಬಳಕೆ ವಸ್ತುಗಳು , ಉಪ್ಪು , ಮಡಿಕೆ ಇತ್ಯಾದಿಗಳನ್ನು ಕೊಳ್ಳುತ್ತಾರೆ . ಸಾಕಷ್ಟು ಜನರು ಸಂತೆಗೆ ಬರುವುದು ತಮಗೆ ಬೇಕಾದ ಬಂಧು – ಬಳಗದವರು , ಪರಿಚಿತರು , ಸ್ನೇಹಿತರನ್ನು ಭೇಟಿ ಯಾಗಲು , ವಿವಾಹ ಸಂಬಂಧಗಳನ್ನು ಕುದುರಿಸಲು , ಸ್ನೇಹ ಪೂರಕ ಮಾತುಕತೆಗಾಗಿ ಹರಟೆಗಾಗಿ ಸಹ ಬರುವರು . ಆದಿವಾಸಿ ಪ್ರದೇಶಗಳಲ್ಲಿ ವಾರದ ಸಂತೆ ಬಹಳ ಪ್ರಾಚೀನ ಸಂಸ್ಥೆಯಾಗಿದೆ . ಈ ಆದಿವಾಸಿಗಳಿಗೆ ಬಾಹ್ಯ ಪ್ರಪಂಚದೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಸಹಾಯಕವಾಗಿದೆ . ವಾರದ ಸಂತೆಗಳು ಜನರಿಗೆ ಮನರಂಜನೆ , ತೃಪ್ತಿ ಮತ್ತು ಸಮಾಧಾನಗಳನ್ನು ಕೊಡುತ್ತವೆ . ಒಂದು ಸಲ ಅಭ್ಯಾಸವಾದ ಈ ಸಂತೆಯ ಭೇಟಿ ಇಲ್ಲದಿದ್ದರೆ ಚಡಪಡಿಸುವ ಮನಸ್ಥಿತಿ ಉಂಟಾಗುವಷ್ಟು ಇದರ ಮೇಲೆ ಅವಲಂಬಿತ ರಾಗಿದ್ದಾರೆ ಗ್ರಾಮೀಣ ಜನರು .
23 , ಬಸ್ತರ್ ಬುಡಕಟ್ಟು ಮಾರುಕಟ್ಟೆಯ ಬಗ್ಗೆ ಟಿಪ್ಪಣಿ ಬರೆಯಿರಿ .
ಬಸ್ತರ್ ಬುಡಕಟ್ಟು ಮಾರುಕಟ್ಟೆಯು ಚತ್ತೀಸ್‌ಘಡದ ಬಸ್ತಾರ್ ಆದಿವಾಸಿಗಳ ಮಾರುಕಟ್ಟೆಯಾಗಿದೆ . ಆಲ್‌ರ್ಫಡ್ ಗೆಲ್ Alfred Gell ಎಂಬ ಮಾನವಶಾಸ್ತ್ರಜ್ಞರು ದೊರಾಯಿ ಸಂತೆಯನ್ನು 1982 ರಲ್ಲಿ ಅಧ್ಯಯನ ಮಾಡಿದ್ದರು . ಈ ಸಂತೆಯು ಆರ್ಥಿಕ ಕಾರ್ಯಕ್ಕಿಂತ ಹೆಚ್ಚು ಮಹತ್ವ ಪಡೆದು ಕೊಂಡಿದೆ . ಮಾರುಕಟ್ಟೆಯ ಭೌತಿಕ ವಿನ್ಯಾಸವೂ ಸಮೂಹದ ಸಾಮಾಜಿಕ ಏಣಿಶ್ರೇಣಿಯ ಸಂಕೇತವಾಗಿದೆ . ಸಂತೆಯಲ್ಲಿ ಜಾತಿ ಆಧಾರವಾಗಿ ಸ್ಥಳವನ್ನು ನಿಗದಿ ಗೊಳಿಸುವುದರಿಂದ ಮಾರುಕಟ್ಟೆಯಲ್ಲೂ ಜಾತಿಯ ಏಣಿ ಶ್ರೇಣಿಗಳು ಕಂಡು ಬರುತ್ತವೆ . ಅವು ಹೀಗಿವೆ .
1. ಸಂಪದ್ಭರಿತ ಮತ್ತು ಉನ್ನತ ಶ್ರೇಣಿಯ ರಜಪೂತರು ಆಭರಣದ ವ್ಯಾಪಾರಿಗಳು ಮತ್ತು ಮಧ್ಯಶ್ರೇಣಿಯ ಸ್ಥಳೀಯ ವ್ಯಾಪಾರಿಗಳು ಮದ್ಯವಲಯದಲ್ಲಿ ವ್ಯಾಪಾರ ಮಾಡುತ್ತಾರೆ .
2. ಆದಿವಾಸಿ ಸಮೂಹದ ತರಕಾರಿ ಮಾರಾಟಗಾರರು ಮತ್ತು ಸ್ಥಳೀಯ ಪಾತ್ರೆ ಮತ್ತು ಮಡಕೆ ಮಾರಾಟಗಾರರು ಹೊರವಲಯ ( Outer Circle ) ದಲ್ಲಿ ವ್ಯಾಪಾರ ಮಾಡುತ್ತಾರೆ .
3. ಸಾಮಾಜಿಕ ಸಂಬಂಧಗಳ ವ್ಯಕ್ತಿ ಮಾರಾಟ ಮಾಡುವ ವಸ್ತುಗಳ ಗುಣಮಟ್ಟದ ಮೇಲೆ ಅವಲಂಬಿಸಿದೆ . ಉದಾ : ಆದಿವಾಸಿಗಳು ಮತ್ತು ಆದಿವಾಸಿಯೇತರ ಹಿಂದೂ ವರ್ತಕರ ನಡುವೆ ಸಾಮಾಜಿಕ ಏಣಿಶ್ರೇಣಿ ಮತ್ತು ಸಾಮಾಜಿಕ ಅಂತರಗಳು ಅಸ್ತಿತ್ವದಲ್ಲಿದ್ದು ಸಾಮಾಜಿಕ ಸಮಾನತೆ ನಗಣ್ಯವಾಗಿದೆ . ಬಸ್ಸಾರನ ಆದಿವಾಸಿ ಗ್ರಾಮಗಳ ಮಾರುಕಟ್ಟೆ ‘ ದೋರಯಿ ‘ ಛತ್ತೀಸ್‌ಘಡದ ಉತ್ತರ ಬಸ್ತಾರ್‌ನ ದಟ್ಟ ಅರಣ್ಯ ಪ್ರದೇಶದಲ್ಲಿದೆ .
ಸಂತೆಯಿಲ್ಲದ ದಿನಗಳಲ್ಲಿ ದೋರಯಿ ಪ್ರದೇಶ ಜನರಹಿತವಾಗಿರುತ್ತದೆ . ‘ ದೋರಯಿ ‘ ಶುಕ್ರವಾರ ದಿನದಂದು ಹೊರತು ಪಡಿಸಿ ಮಿಕ್ಕುಳಿದ ದಿನಗಳಲ್ಲಿ ಜನರಹಿತವಾಗಿರುತ್ತದೆ . ಸಂತೆಯ ದಿನ ವಿಶಿಷ್ಟ ರೂಪದಿಂದ ಕಂಗೋಳಿಸುತ್ತಿರುತ್ತದೆ . ರಸ್ತೆಯ ಬದಿಯಲ್ಲಿ ವಾಹನಗಳ ದಟ್ಟಣೆಯಿರುತ್ತದೆ . ಅರಣ್ಯಾಧಿಕಾರಿ ಗಳು ವಿಶ್ರಾಂತಿ ಗೃಹದ ವರಾಂಡದಲ್ಲಿ ಕುಳಿತು ಎಲ್ಲರನ್ನೂ ಗಮನಿಸುತ್ತಿರುತ್ತಾರೆ . ಈ ಸಂತೆಗೆ ತರಕಾರಿ ಮಾರುವವರು , ವಿಶೇಷ ಪರಿಣಿತಿಯ ಕುಶಲ ಕರ್ಮಿಗಳು , ಕುಂಬಾರರು , ನೇಕಾರರು , ಕಮ್ಮಾರರು ಬರುತ್ತಾರೆ .
ಮಾರುಕಟ್ಟೆಯು ಚತುರ್ಭುಜಾಕೃತಿ ಆಕಾರದ 100 ಗಜ ವಿಸ್ತೀರ್ಣವಿರುತ್ತದೆ . ಮಧ್ಯದಲ್ಲಿ ಬೃಹದ್ದಾಕಾರದ ಆಲದ ಮರ ಕೇಂದ್ರ ಬಿಂದುವಾಗಿದೆ . ಅಂಗಡಿಗಳು , ಗುಡಿಸಲು ಮತ್ತು ಡೇರೆಯಿಂದ ನಿರ್ಮಿಸಿದ ಇಕ್ಕಟ್ಟಾದ ಜಾಗಗಳಲ್ಲಿ ಗ್ರಾಹಕರು ಜಾಗರೂಕತೆಯಿಂದ ಸಾಗಬೇಕು . ಸ್ಥಳಾಭಾವ ದಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ .
24. ಬ್ರಿಟಿಷರ ಆಳ್ವಿಕೆಯಲ್ಲಿ ಉಗಮಗೊಂಡ ವ್ಯಾಪಾರಿ ಸಮುದಾಯಗಳನ್ನು ತಿಳಿಸಿ .
ಬ್ರಿಟಿಷರ ಆಳ್ವಿಕೆಯಲ್ಲಿ ಉಗಮಗೊಂಡ ವ್ಯಾಪಾರಿ ಸಮುದಾಯಗಳು ಭಾರತಕ್ಕೆ ವಸಾಹತುಶಾಹಿ ರಾಷ್ಟ್ರಗಳ ವ್ಯವಸ್ಥೆ ಪ್ರವೇಶಿಸಿದ್ದಂತೆ ಆರ್ಥಿಕ ಕ್ಷೇತ್ರಗಳಲ್ಲಿ ಏರುಪೇರುಗಳಾದವು . ವ್ಯಾಪಾರ ಮತ್ತು ಗೃಹ ಕೈಗಾರಿಕೆ ಉತ್ಪಾದನೆಯಲ್ಲಿ ವಿಘಟನೆ ಗೊಂಡಿತ್ತು . ಇಂಗ್ಲೆಂಡ್‌ನಲ್ಲಿ ತಯಾರಿಸಿದ ವಸ್ತುಗಳ ಮುಂದೆ ಭಾರತದ ಕೈಗಾರಿಕಾ ವಸ್ತುಗಳ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗದೆ , ಅನೇಕ ಕೈಗಾರಿಕೆಗಳು ನಾಶವಾದವು . ಬ್ರಿಟಿಷರ ಆಳ್ವಿಕೆಯಲ್ಲಿ ಭಾರತವು ಕಚ್ಚಾವಸ್ತುವನ್ನು ಮಾತ್ರ ರಫ್ತು ಮಾಡುತ್ತಿತ್ತು , ಇಂಗ್ಲೆಂಡಿನ ಕೈಗಾರಿಕೆಗೆ ಇದು ಅನುಕೂಲ ಕರವಾಗಿತ್ತು . ಪಾಶ್ಚಿಮಾತ್ಯ ದೇಶದ ವಸ್ತುಗಳ ಮಾರಾಟ ಮತ್ತು ವಿಸ್ತರಣೆಯಿಂದಾಗಿ ವ್ಯಾಪಾರಿ ಸಮುದಾಯಗಳಿಗೆ ಹೊಸ ಅವಕಾಶ ದೊರೆಯಿತು . ಹಲವಾರು ವ್ಯಾಪಾರಿ ಸಮುದಾಯಗಳು ಈ ಅವಕಾಶಗಳನ್ನು ಉಪಯೋಗಿಸಿ ಕೊಂಡು ಅಸ್ತಿತ್ವಕ್ಕೆ ಬಂದರು . ಅವರಲ್ಲಿ ಮುಖ್ಯರಾದವರು ಮಾರ್ವಾಡಿಗಳು , ಭಾರತದಲ್ಲಿ ಬಿರ್ಲಾ , ಅಂಬಾನಿ , ಲಕ್ಷ್ಮಿವಿತ್ತಲ್ ಮುಂತಾದವರು ಈ ಸಮುದಾಯಕ್ಕೆ ಸೇರಿದವರು .
ಮಾರ್ವಾಡಿಗಳು ದೇಶ , ನಗರ , ಪಟ್ಟಣದ ಬಜಾರ್ ಅಥವಾ ಅ೦ಗಡಿ ಮಳಿಗೆಗಳಲ್ಲಿ ಯಶಸ್ವಿ ವ್ಯಾಪಾರಿ ಸಮುದಾಯವಾಗಿದೆ . ಕಲ್ಕತ್ತಾ , ಬಾಂಬೆ ಮತ್ತು ಇನ್ನಿತರ ನಗರಗಳಲ್ಲಿ ಮತ್ತು ದೇಶಾದ್ಯಂತ ತಮ್ಮ ಆರ್ಥಿಕ ಅಂತರ ಜಾಲವನ್ನು ಸ್ಥಾಪಿಸಿಕೊಂಡಿದ್ದಾರೆ . ವ್ಯಾಪಾರ ಕ್ಷೇತ್ರಗಳಲ್ಲಿ ಏಕಸ್ವಾಮ್ಯತೆ ಸಾಧಿಸಿ , ಭಾರತದ ಎಲ್ಲಾ ಕಡೆ ಅತಿ ಶ್ರೀಮಂತ ವರ್ಗವಾಗಿ ಮಾರ್ಪಾಡುಗೊಂಡಿದ್ದಾರೆ . ಮಾರ್ವಾಡಿಗಳು ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಿಕೊಳ್ಳಲು ಬೇಕಾದ ಗುಣ – ಸ್ವಭಾವಗಳನ್ನು ಕಲಿತಿದ್ದಾರೆ .
ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯ ವಿಸ್ತಾರವಾದಂತೆ ಮಾರ್ವಾಡಿಗಳು ದೇಶದ ಆರ್ಥಿಕ ಕ್ಷೇತ್ರದಲ್ಲಿ ವಿಸ್ತಾರವಾಗಿ ಬೆಳೆದಿದ್ದಾರೆ . ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಮಾರ್ವಾಡಿಗಳ ಉಗಮವಾಗಿ , ಕಾಲಕ್ರಮೇಣ ದೇಶದ ಅತಿ ದೊಡ್ಡ ಕೈಗಾರಿಕೋದ್ಯಮಿಗಳಾಗಿ ಮಾರ್ಪಾಡುಗೊಂಡಿದ್ದಾರೆ . ಈ ರೀತಿಯ ಬೆಳವಣಿಗೆಯು ಸಾಮಾಜಿಕ ಸಂರಚನೆಯಲ್ಲಿ ಆರ್ಥಿಕ ಪ್ರಕ್ರಿಯೆಗಳ ಪ್ರಭಾವ ಮತ್ತು ಪ್ರಾಮುಖ್ಯತೆಗೆ ಉತ್ತಮ ನಿದರ್ಶನವಾಗಿದೆ . ಇಂದಿಗೂ ಸಹ ಮಾರವಾಡಿಗಳೇ ಭಾರತೀಯ ಉದ್ಯೋಗಗಳ ಮೇಲೆ ಹೆಚ್ಚು ಹಿಡಿತವನ್ನು ಸಾಧಿಸಿದ್ದಾರೆ . ಅವರ ಸಾಧನೆಯು ಆರ್ಥಿಕ ಸಂಪರ್ಕ ಸಂಬಂಧ ಜಾಲಗಳು ವ್ಯಾಪಾರದಲ್ಲಿ ಹೇಗೆ ಮಹತ್ವ ವೆಂಬುದನ್ನು ಮನಗಾಣಬಹುದು .
25. ಪುಷ್ಕರ್ ಜಾತ್ರೆಯ ಬಗ್ಗೆ ಟಿಪ್ಪಣಿ ಬರೆಯಿರಿ .
ಪುಷ್ಕರ್ ಜಾತ್ರೆಯು ವಾರ್ಷಿಕವಾಗಿ ನಡೆಯುವ ಒಂಟೆ ಮತ್ತು ಜಾನುವಾರುಗಳ ಜಾತ್ರೆಯಾಗಿದೆ . ರಾಜಾಸ್ಥಾನದಲ್ಲಿ ಮರುಭೂಮಿ ಮತ್ತು ಅಲ್ಲಿನ ಹವಾಮಾನಕ್ಕೆ ಒಗ್ಗುವಂತಹ ಪ್ರಾಣಿ ಒಂಟೆ , ರಾಜಾಸ್ಥಾನದ ಮುಷ್ಕರ್ ಪಟ್ಟದಲ್ಲಿ ನಡೆಯುವ ಈ ಒಂಟೆಯ ಜಾತ್ರೆ ವಿಶ್ವದ ಅತ್ಯಂತ ದೊಡ್ಡ ಒಂಟೆಯ ಜಾತ್ರೆಯಾಗಿದೆ . ಐದು ದಿನಗಳ ಕಾಲ ನಡೆಯುತ್ತದೆ . ಈ ಜಾತ್ರೆಯು ಒಂಟೆಯನ್ನು ಮಾರುವ ಹಾಗೂ ಕೊಳ್ಳುವುದರ ಜೊತೆಗೆ ಪ್ರವಾಸಿಗರನ್ನು ಆಕರ್ಷಿಸುವ ಜಾತ್ರೆಯಾಗಿದೆ . ಈ ಜಾತ್ರೆಗೆ ಸಾವಿರಾರು ಪ್ರವಾಸಿಗಳು ಆಗಮಿಸುತ್ತಾರೆ . ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಪುಷ್ಕರ್ ಕ್ರೀಡಾತಂಡ ವಿದೇಶಿಯ ಟೀಂನೊಂದಿಗೆ ಕ್ರಿಕೆಟ್ ಪಂದ್ಯವನ್ನು ಏರ್ಪಡಿಸಿದ್ದರು . ಮುಷ್ಕರ್ ಸರೋವರದ ಬಳಿ ಸಾವಿರಾರು ಜನ ಸೇರುತ್ತಾರೆ . ಒಂಟೆ , ದನ , ಮೇಕೆ ಮುಂತಾದ ಪ್ರಾಣಿಗಳ ವ್ಯಾಪಾರ ನಡೆಯುತ್ತದೆ . ಹೆಂಗಸರು ಬಳೆ , ಆಟಿಕೆ , ಬಟ್ಟೆ , ಆಭರಣಗಳನ್ನು ಕೊಳ್ಳಲು ಮುಗಿ ಬೀಳುತ್ತಾರೆ .
ಒಂಟೆಯ ಓಟದ ಸ್ಪರ್ಧೆ , ಸಂಗೀತ ಹಾಡು , ಪ್ರದರ್ಶನ ಕಲೆಗಳು , ಮೀಸೆ ಪ್ರದರ್ಶನ ಈ ಜಾತ್ರೆಯ ಆಕರ್ಷಣೆ ಈ ಜಾತ್ರೆಯು ಕಾರ್ತಿಕ ಮಾಸದ ಏಕಾದಶಿಯಿಂದ ಪೌರ್ಣಿಮೆಯ ನಡುವಿನ ಐದು ದಿನಗಳ ಕಾಲ ನಡೆಯುತ್ತದೆ . ಪೂರ್ಣಿಮೆಯ ದಿನ ಅತ್ಯಂತ ಮುಖ್ಯವಾದ ದಿನ ಪುಷ್ಕರ್ ಸರೋವರದಲ್ಲಿ ಬ್ರಹ್ಮನು ಸ್ನಾನ ಮಾಡಿದನೆಂಬ ನಂಬಿಕೆಯಿಂದ ಅಪಾರ ಸಂಖ್ಯೆಯ ಭಕ್ತರು ಆ ದಿನ ಪವಿತ್ರ ಸ್ನಾನವನ್ನು ಮಾಡುತ್ತಾರೆ . ಹೀಗಾಗಿ ಪುಷ್ಕರ್ ವಾರ್ಷಿಕ ಜಾತ್ರೆಯು ಧಾರ್ಮಿಕ , ಆರ್ಥಿಕ , ಸಾಂಸ್ಕೃತಿಕ ಹಾಗೂ ಮನೋರಂಜನೆಯನ್ನು ಒದಗಿಸುವ ಜನಪ್ರಿಯ ಜಾತ್ರೆಯಾಗಿದೆ .
26. ತಳಮಟ್ಟದ ರಾಜಕಾರಣದ ಬಗ್ಗೆ ಟಿಪ್ಪಣಿ ಬರೆಯಿರಿ .
ತಳಮಟ್ಟದ ರಾಜಕಾರಣ
ವಿವಿಧ ರಾಜ್ಯಗಳಲ್ಲಿ ತಳಮಟ್ಟದಲ್ಲಿ ನಡೆದ ರಾಜಕೀಯ ಚಟುವಟಿಕೆಗಳ ಅಧ್ಯಯನವನ್ನು ಮಾಡಲಾಗಿದೆ . 1960 ರಲ್ಲಿ ರಾಜ್ಯಮಟ್ಟದಲ್ಲಿ ತಳಮಟ್ಟದ ರಾಜಕೀಯ ಚಟುವಟಿಕೆಗಳ ಸಮಗ್ರ ಅಧ್ಯಯನ ಮೊದಲಬಾರಿಗೆ ಬ್ರಾಸ್ ಸೀತೂ ಪ್ರದೇಶದಲ್ಲಿ ನಡೆಸಿದರು . ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಜಿಲ್ಲಾ ಮಟ್ಟದಲ್ಲಿ ಭದ್ರ ನೆಲೆ ಕಂಡುಕೊಂಡಿವೆ . ಆಂತರಿಕವಾಗಿ ಹೊಂದಾಣಿಕೆ ಮಾಡಿಕೊಂಡು ಸಮಂಜನಗೊಂಡಿದೆ . ಭಾರತದಲ್ಲಿ ಸ್ವಾತಂತ್ರ್ಯ ನಂತರ ತಳಮಟ್ಟದ ರಾಜಕೀಯ ವ್ಯವಸ್ಥೆಯಲ್ಲಿ ಏನು ಸಂಭವಿಸಿದೆ ಎಂಬುದನ್ನು ರುಡಾಲ್ಫ್ ಕೆಳಕಂಡ ಅಂಶಗಳ ಮೂಲಕ ತಿಳಿಸಿದ್ದಾರೆ .
1. ರಾಜಕೀಯ – ಆರ್ಥಿಕ ಅಭಿವೃದ್ಧಿ ಮತ್ತು ಅವಕಾಶಗಳಲ್ಲಿ ರಾಜಕೀಕರಣದ Politicization ಹೆಚ್ಚಳವಾಗಿದೆ .
2. ಶೈಕ್ಷಣಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ನಿಯಂತ್ರಣದಿಂದ ರಾಜಕಾರಣದ ಮಾರ್ಗಕ್ಕೆ ಸಾಗಿದೆ .
3. ಯೋಜನೆ ಮತ್ತು ಅಭಿವೃದ್ಧಿಗಳ ನಿಯಂತ್ರಣ ಮತ್ತು ವ್ಯವಸ್ಥಾಪಕದಲ್ಲಿ ಜಾತಿ ಮತ್ತು ವರ್ಗಗಳು ಸ್ಪರ್ಧೆಗಿಳಿದಿವೆ.
4. ರಾಜಕೀಯ ಪಕ್ಷಗಳು ಜಾತಿ , ವರ್ಗ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಪ್ರವೇಶಿಸಿದೆ ಮತ್ತು ಇಡೀ ಸಂಸ್ಥೆಯನ್ನು ರಾಜಕೀಕರಣಗೊಳಿಸಿದೆ . ಇದಕ್ಕೆ ಉತ್ತಮ ನಿದರ್ಶನ ಪಂಚಾಯತ್ ರಾಜ್ – ಇವೆಲ್ಲಾ ರಾಜಕೀಯ ಪಕ್ಷಗಳ ಬೆಳವಣಿಗೆಯನ್ನು ತಳಮಟ್ಟದಲ್ಲಿ ನೆಲೆಸಲು ಅವಕಾಶ ಮಾಡಿದೆ .
ಸ್ಥಳೀಯ ರಾಜಕೀಯದ ವೈಜ್ಞಾನಿಕ ಅಧ್ಯಯನದ ಮೂಲಗಳು ಗ್ರಾಮಾಧ್ಯಯನದಲ್ಲಿ ಕಂಡು ಬರುತ್ತವೆ . 1950 ರ ದಶಕದಲ್ಲಿ ಭಾರತ ಸರ್ಕಾರ ಮತ್ತು ಫೋರ್ಡ್ ಫೌಂಡೇಶನ್ ಮತ್ತು ರಾಕ್‌ಫೆಲರ್ ಫೌಂಡೇಶನ್ ಮುಂತಾದ ನಿಯೋಗಿಗಳ ಮಾರ್ಗದರ್ಶನದಲ್ಲಿ ನಡೆಯಿತು . ಎಫ್.ಜಿ. ಬೈಲಿರವರು ಒರಿಸ್ಸಾ ಗ್ರಾಮದ ಬಿಸಿಪರ ಅಧ್ಯಯನವು ಕೆಳಜಾತಿಗಳು ಹೊಸ ಆರ್ಥಿಕ ಮತ್ತು ರಾಜಕೀಯ ಅವಕಾಶಗಳನ್ನು ಬಳಸಿಕೊಂಡು ಅಧಿಕಾರದಲ್ಲಿತಮ್ಮ ಸಂಬಂಧಗಳನ್ನು ಹೇಗೆ ಮಾರ್ಪಡಿಸಿಕೊಂಡಿವೆ ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ . ಜಾತಿಗಳು ವರ್ಗವಾಗಿ ಮಾರ್ಪಡುವುದು ಭಾರತದಾದ್ಯಂತ ಸಂಭವಿಸಿವೆ . ಹೊಸ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬಳಸಿಕೊಂಡ ಜಾತಿಗಳು ಬಲಿಷ್ಠ ವರ್ಗಗಳಾಗಿ ರೂಪುಗೊಂಡಿ
27. ಸಾಮಾಜಿಕ ಸಂಪರ್ಕ ತಾಣಗಳ ಬಗ್ಗೆ ಟಿಪ್ಪಣಿ ಬರೆಯಿರಿ ,
ಸಾಮಾಜಿಕ ಸಂಪರ್ಕ ತಾಣಗಳು ಸಾಮಾಜಿಕ ಸಂಪರ್ಕ ತಾಣಗಳು ಎಂದರೆ Social Networking Sites ಈ ಸಾಮಾಜಿಕ ಸಂಪರ್ಕ ತಾಣಗಳು ಎಸ್.ಎನ್.ಎಸ್ . ಆನ್‌ಲೈನ್ ಅಥವಾ ಅಗೋಚರ ವೇದಿಕೆಗಳಾಗಿ , ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳುವ ಅಂತರ್ಜಾಲ ತಾಣಗಳಾಗಿವೆ . ಇವುಗಳು ಒಂದು ರೀತಿಯ ಅಗೋಚರ ಸಮುದಾಯಗಳಾಗಿ Virtual Community ಅತ್ಯಂತ ಜನಪ್ರಿಯ ಸಂಪರ್ಕ ವೇದಿಕೆಗಳಾಗಿವೆ . ಸಾಮಾಜಿಕ ಸಂಪರ್ಕ ತಾಣಗಳು ಸಂಪರ್ಕ , ಮನರಂಜನೆ , ಮಾಹಿತಿಯ ತಾಣ , ಫೇಸ್‌ಬುಕ್ , ಆರ್‌ಕೂಟ್ , ಗೂಗಲ್‌ಪ್ಲಸ್ ಇತ್ಯಾದಿ ಗಳ ಸಂಪರ್ಕ ತಾಣವಾಗಿದೆ . ಸಾಮಾಜಿಕ ಸಂಪರ್ಕ ತಾಣಗಳು ಅತ್ಯಂತ ಜನಪ್ರಿಯ ಸಂಪರ್ಕ ವೇದಿಕೆಗಳಾಗಿವೆ . ಸಾಮಾಜಿಕ ಸಂಪರ್ಕ ತಾಣಗಳ ಮೂಲಕ ಆನ್‌ಲೈನ್ ಗೆಳೆತನ , ಒಂದು ಸಮೂಹಕ್ಕೆ ಸೇರ್ಪಡೆ , ಮತ್ತು ಹೊಸ ಗೆಳೆಯ ಅಥವಾ ಹೊಸ ಗೆಳೆಯ ಸಮೂಹದ ಸಂಪರ್ಕ ಅಥವಾ ಹಳೆ ಗೆಳೆತನದ ಮುಂದುವರಿಕೆ ಮತ್ತು ಸಮಾನ ಆಸಕ್ತಿಯ ಆಧಾರದ ಮೇಲೆ ಗೆಳೆತನ ಮುಂದುವರಿಕೆ ಇತ್ಯಾದಿ ಸಾಧ್ಯವಾಗುತ್ತದೆ . ಇದರ ಜೊತೆಗೆ ಸಮಾನ ಆಸಕ್ತಿಗೆ ಅನುಗುಣವಾಗಿ ವಿಷಯಗಳನ್ನು ಹಂಚಿಕೊಳ್ಳಬಹುದು . ಚರ್ಚೆಯಲ್ಲಿ ಭಾಗವಹಿಸಬಹುದು .
ಗೆಳೆತನದ ಪಟ್ಟಿಯನ್ನು ಹೆಚ್ಚಿಸಿಕೊಳ್ಳಬಹುದು . ಭಾರತವು ಸಾಮಾಜಿಕ ಸಂಪರ್ಕ ತಾಣಗಳ ಬಳಕೆಯಲ್ಲಿ ಅಮೇರಿಕ ಮತ್ತು ಚೈನಾದ ನಂತರ ಮೂರನೆಯ ಸ್ಥಾನದಲ್ಲಿದೆ . ಇತ್ತೀಚೆಗೆ ಪ್ರಾಂತೀಯ ಭಾಷೆಗಳಲ್ಲಿಯೂ ಇದರ ಸೇವೆಯನ್ನು ಪ್ರಾರಂಭಿಸಲಾಗಿದೆ . ಆಸ್ಟ್ರೇಲಿಯಾ ಮೂಲದ ರೂಪರ್ಟ್ ಮುರ್ಡೋಕ್ ಪ್ರಪಂಚದ ಅತ್ಯಂತ ಶ್ರೀಮಂತ ಮಾಧ್ಯಮ ಉದ್ದಿಮೆದಾರ . ಇವರ ನ್ಯೂಸ್ ಕಾರ್ಪೊರೇಷನ್ ಮಾಲೀಕತ್ವದ ಮಾಧ್ಯಮಗಳು ಆರು ಖಂಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ . 1970 ರಲ್ಲಿ ಅಮೇರಿಕಾದ ನ್ಯೂಯಾರ್ಕ್ ಒಂದರಲ್ಲೇ 130 ಕ್ಕೂ ಹೆಚ್ಚು ಪತ್ರಿಕೆಗಳ ಮಾಲೀಕತ್ವವನ್ನು ಹೊಂದಿದ್ದರು . ಇವರ ‘ ದಿಸನ್ ‘ ಪತ್ರಿಕೆಯು ಪ್ರಪ ೦ ಚದಲ್ಲಿ ಅತಿ ಹೆಚ್ಚು ಪ್ರಸರಣವಾಗುವ ಪತ್ರಿಕೆ ಎಂಬ ಪ್ರಸಿದ್ಧಿ ಪಡೆಯಿತು . ಇಂದು ಸಾಮಾಜಿಕ ಸಂಪರ್ಕ ತಾಣಗಳು ಅತ್ಯಂತ ಅವಶ್ಯಕವೆನಿಸಿದೆ .
28. ಆಂಗ್ಲ ಭಾಷೆಯ ಐದು ದಿನ ಪತ್ರಿಕೆಗಳನ್ನು ತಿಳಿಸಿ .
ಆಂಗ್ಲ ಭಾಷೆಯ ದಿನ ಪತ್ರಿಕೆಗಳು ಆಂಗ್ಲ ವಾರ್ತಾ ಪತ್ರಿಕೆಗಳನ್ನು ‘ ರಾಷ್ಟ್ರೀಯ ದೈನಿಕ ‘ ಗಳೆಂದು ಕರೆಯುತ್ತಾರೆ . ಉದಾಹರಣೆಗೆ . 1.ದಿ ಡೈಮ್ಸ್ ಆಫ್ ಇಂಡಿಯಾ , 2 , ದಿ ಹಿಂದೂ 3. ದಿ ಇಂಡಿಯನ್ ಎಕ್ಸ್‌ಪ್ರೆಸ್ 4. ದಿ ಎಕಾನಿಮಿಕ್ ಟೈಮ್ಸ್ 5. ಹಿಂದೂಸ್ತಾನ ಟೈಮ್ಸ್ 6. ಡೆಕ್ಕನ್ ಹೆರಾಲ್ಡ್ ಇತ್ಯಾದಿ , ಇಂಗ್ಲೀಷ್ ಭಾಷೆಯ ಪತ್ರಿಕೆಗಳು ಉಳಿದ ಭಾಷೆಯ ಪತ್ರಿಕೆಗಳಂತೆಯೇ ಸ್ಪರ್ಧಾತ್ಮಕವಾಗಿ ಪೈಪೋಟಿ ನಡೆಸುತ್ತಿದೆ . ವಿದ್ಯುನ್ಮಾನ ಮಾಧ್ಯಮದ ಜೊತೆ ಸ್ಪರ್ಧಿಸಿ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ . ಅದಕ್ಕಾಗಿ ಪತ್ರಿಕೆಯ ಬೆಲೆ ಇಳಿಕೆ , ವಿವಿಧ ಕೇಂದ್ರಗಳಿಂದ ಮುದ್ರಣ ಆರಂಭಿಸುವುದು ಮತ್ತು ಪ್ರಾಯೋಜಕತ್ವಕ್ಕಾಗಿ ಜಾಹೀರಾತು ದಾರರ ಮೇಲೆ ಹೆಚ್ಚಿನ ಅವಲಂಬನೆಯಾಗಿದೆ . ವಿದ್ಯುನ್ಮಾನ ಮಾಧ್ಯಮದ ಮುಂದೆ ಮುದ್ರಣಮಾಧ್ಯಮ ಕ್ಷೀಣಿಸುತ್ತಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದರೂ ಪತ್ರಿಕೆಗಳ ಪ್ರಸರಣ ಮಾತ್ರ ದಿನೇ ದಿನೇ ಹೆಚ್ಚಳವಾಗುತ್ತಿದೆ . ಜಾಗತೀಕರಣದ ವ್ಯವಹಾರಗಳು ಇಂಗ್ಲೀಷ್ ಭಾಷೆಯ ಹಿನ್ನೆಲೆಯಲ್ಲಿಯೇ ಹೆಚ್ಚಾಗಿ ನಡೆಯುತ್ತಿರುವುದರಿಂದ ಅದು ಎಲ್ಲೆಡೆ ಇಂಗ್ಲೀಷ್ ಭಾಷೆಯ ಬೆಳವಣಿಗೆ ಪ್ರೋತ್ಸಾಹ ನೀಡುತ್ತಿದೆ . ಆ ನಿಟ್ಟಿನಲ್ಲಿ ಇಂಗ್ಲೀಷ್ ಭಾಷೆಯ ದಿನಪತ್ರಿಕೆಗಳ ಪ್ರಸಾರ ಹೆಚ್ಚಲು ಉತ್ತಮ ಸನ್ನಿವೇಶ ಸೃಷ್ಟಿಯಾಯಿತು . ಎಂದು ಹೇಳಬಹುದು .
29 , ರೇಡಿಯೋ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ .
ರೇಡಿಯೋ : ಇದು ಒಂದು ವಿದ್ಯುನ್ಮಾನ ಮಾಧ್ಯಮ ವಾಗಿದೆ . 1920 ರಲ್ಲಿ ರೇಡಿಯೋ ಚೆನ್ನೈ ಮತ್ತು ಕಲ್ಕತ್ತದಿಂದ ‘ ಹ್ಯಾಂ ಬ್ರಾಡ್‌ಕಾಸ್ಟಿಂಗ್ ಕ್ಲಬ್ ‘ ಮೂಲಕ ಹವ್ಯಾಸಿ ಪ್ರಸಾರ ಕೇಂದ್ರಗಳಾಗಿ ಕಾರ್ಯಾರಂಭ ಮಾಡಿದವು 1940 ರ ಹೊತ್ತಿಗೆ ಸರ್ಕಾರದ ಪ್ರಸಾರ ಕೇಂದ್ರಗಳಾಗಿ ದ್ವಿತೀಯ ಮಹಾ ಯುದ್ಧದ ಕಾಲದಲ್ಲಿ ಮಿತ್ರಪಡೆಗಳ ಪರವಾಗಿ ವರದಿ ಪ್ರಸಾರ ಮಾಡುವಲ್ಲಿ ನಿರತವಾಗಿತ್ತು . ಪ್ರಾರಂಭದಲ್ಲಿ ಆರು ಪ್ರಸಾರ ಕೇಂದ್ರಗಳು , ಚರ್ಚೆ , ವಾರ್ತೆ , ಪ್ರಚಲಿತ ಘಟನೆಗಳನ್ನು ಶೋತೃಗಳಿಗೆ ಪ್ರಸಾರ ಮಾಡುತ್ತಿತ್ತು . ಕರ್ನಾಟಕದ ಮೈಸೂರಿನಲ್ಲಿ ಈ ರೇಡಿಯೋ ಕಾರ್ಯಕ್ರಮಗಳಿಗೆ ‘ ಆಕಾಶವಾಣಿ ‘ ಎಂಬ ಹೆಸರನ್ನು ಕೊಟ್ಟಿತು . ಸ್ವತಂತ್ರ ಭಾರತದಲ್ಲಿ ಅಭಿವೃದ್ಧಿಯ ವಿಭಿನ್ನತೆಗಳು ಹಾಗೂ ಅಭಿವೃದ್ಧಿಯ ಕುರಿತಾದ ಚರ್ಚೆಗಳನ್ನು ಪ್ರಸಾರ ಮಾಡುತ್ತಿತ್ತು . ಮನರಂಜನೆಗಾಗಿ ವಿವಿಧ ಭಾರತಿ ‘ ಎಂಬ ಬಾನುಲಿಯು ಚಲನಚಿತ್ರ ಗೀತೆಗಳನ್ನು ಪ್ರಸಾರ ಮಾಡುತ್ತಿತ್ತು . 1
957 ರ ಹೊತ್ತಿಗೆ ಇದು ಜನಪ್ರಿಯ ಮಾಧ್ಯಮವಾಗಿತ್ತು . ವಿವಿಧ ಭಾರತಿ ಯು ಪ್ರಾಯೋಜಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರಿಂದ ಆದಾಯವೂ ಹೆಚ್ಚಿತ್ತು . ಬೆಂಗಳೂರು ಆಕಾಶವಾಣಿಯ ಜೊತೆಗೆ ಮೈಸೂರು , ಭದ್ರಾವತಿ , ಧಾರವಾಡ , ಮಂಗಳೂರು ಮತ್ತು ಗುಲ್ಬರ್ಗಾ ಉಪಕೇಂದ್ರಗಳಿಂದ ಮನರಂಜನೆ , ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಮತ್ತು ವಾಣಿಜ್ಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು ‘ ಜಿ.ಆರ್ . ಗುಂಡಣ್ಣ ‘ ಮತ್ತು ` ಎಂ.ಟಿ. ಜಯಣ್ಣ ‘ ನವರು ನಡೆಸಿಕೊಡುತ್ತಿದ್ದ ಕೃಷಿರಂಗ ‘ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿ ಜನಮನ್ನಣೆಗಳಿಸಿತ್ತು . ಭಾರತ ಸರ್ಕಾರವು ಆಕಾಶವಾಣಿ ಕೇಂದ್ರಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಿತು . ಇಂದು 24 ಭಾಷೆಗಳು ಮತ್ತು 146 ಉಪಭಾಷೆಗಳ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ . ಆಕಾಶವಾಣಿಯು ರಾಷ್ಟ್ರೀಯ , ಪ್ರಾಂತೀಯ ಮತ್ತು ಸ್ಥಳೀಯ ಕಾರ್ಯಕ್ರಮ ಗಳನ್ನು ಪ್ರಸಾರ ಮಾಡುತ್ತಿದೆ . ಪ್ರಸಾರದಲ್ಲಿ ವೈವಿಧ್ಯತೆಯಿರುವುದರಿಂದ ಇಂದಿಗೂ ರೇಡಿಯೋ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ .
30. ಕನ್ನಡದ ಐದು ದಿನಪತ್ರಿಕೆಗಳನ್ನು ತಿಳಿಸಿ ,
ಕನ್ನಡದ ಐದು ದಿನಪತ್ರಿಕೆಗಳು ಕರ್ನಾಟಕದಲ್ಲಿ ಕನ್ನಡ ಭಾಷೆಯ ಹಲವಾರು ಪತ್ರಿಕೆಗಳಿವೆ . ಅವುಗಳಲ್ಲಿ ಪ್ರಮುಖವಾದುವು 1. – ಪ್ರಜಾವಾಣಿ 2 . ವಿಜಯ ಕರ್ನಾಟಕ 3 . ಉದಯವಾಣಿ 4.ಕನ್ನಡ ಪ್ರಭ 5.ಸಂಯುಕ್ತ ಕರ್ನಾಟಕ ಇತ್ಯಾದಿ .
ಭಾರತೀಯ ಪತ್ರಿಕೆಗಳ ಪ್ರಸರಣದಲ್ಲಿ ಪ್ರಗತಿಗೆ ಹಲವಾರು ಕಾರಣಗಳಿವೆ . ಮೊದಲನೆಯದಾಗಿ ನಗರ ಪ್ರದೇಶದಲ್ಲಿ ಸುಶಿಕ್ಷಿತರ ವಲಸೆಯ ಹೆಚ್ಚಳ , ಇಂದಿನ ಶಿಕ್ಷಣ ಪದ್ಧತಿಯಿಂದಾಗಿ ಪತ್ರಿಕೆಗಳನ್ನು ಓದುವವರ ಸಂಖ್ಯೆ ಹೆಚ್ಚುತ್ತಿದೆ . ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ವಿಷಯಗಳನ್ನು ತಿಳಿಯಲು ಪತ್ರಿಕೆಯೊಂದೇ ಸಮೂಹ ಮಾಧ್ಯಮವಾಗಿತ್ತು . ಬಹಳಷ್ಟು ಮಂದಿ ಇಂದಿಗೂ ಬೆಳಿಗ್ಗೆಯ ಉಪಹಾರದಂತೆ ಪತ್ರಿಕೆಗಳನ್ನು ಅಷ್ಟೇ ಕಡ್ಡಾಯವಾಗಿ ಓದುತ್ತಾರೆ . 1843 ರಲ್ಲಿ ಹೆರಮೆನ್ ಮೋಗ್ಲಿಂಗ್ ಎಂಬ ಭಾಷೆಲ್ ಕ್ರೈಸ್ತ ಧರ್ಮ ಪ್ರಚಾರದಿಂದ ‘ ಮಂಗಳೂರು ಸಮಾಚಾರ ‘ ಎಂಬ ಕನ್ನಡದ ಪ್ರಪ್ರಥಮ ಪತ್ರಿಕೆ ಪ್ರಾರಂಭವಾಯಿತು . ನಂತರ ಈ ಪತ್ರಿಕೆಯನ್ನು ‘ ಕನ್ನಡ ಸಮಾಚಾರ ‘ ಎಂದು ಮರುನಾಮಕರಣ ಮಾಡಿದರು .
ಹಲವಾರು ಕನ್ನಡ ವಾರ್ತಾಪತ್ರಿಕೆಗಳು ಪತ್ರಿಕಾ ಮಾಧ್ಯಮದಲ್ಲಿ ಗಣನೀಯ ಕೊಡುಗೆಯನ್ನು ಇಂದಿಗೂ ನೀಡುತ್ತಿದೆ . ಪತ್ರಿಕೆಗಳ ಸುದ್ದಿಗಳು ಮಾರುಕಟ್ಟೆ , ಕೋರ್ಟು -ಕಚೇರಿ , ಉಪಾಹಾರ ಗೃಹ ( ಹೋಟೆಲ್ ) ಗಳು ಮುಂತಾದ ಕಡೆಗಳಲ್ಲಿ ಜನರ ಬಾಯಿಂದ ಬಾಯಿಗೆ ವಿಷಯಗಳು ಚಲಿಸುತ್ತಿರುತ್ತವೆ . ಸ್ವತಂತ್ರ ಹೋರಾಟದಲ್ಲಿ ಪತ್ರಿಕೆಗಳು ಜನಾಭಿಪ್ರಾಯ ರೂಪಿಸಲು ಸಹಕಾರಿಯಾಗಿದ್ದವು . ಭಾರತೀಯ ಸುದ್ದಿಮಾಧ್ಯಮಗಳು ಆಧುನಿಕ ಮುದ್ರಣ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ . ಹೆಚ್ಚುವರಿ ಪಟಗಳು , ಪುರವಣಿಗೆ , ಸಾಹಿತ್ಯಕಗಳ ವಿಷಯಗಳನ್ನು ಪ್ರಸಾರ ಮಾಡುತ್ತವೆ . ದೈನಿಕ ಭಾಸ್ಕರ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳು ಗ್ರಾಹಕರನ್ನು ಭೇಟಿ ಮಾಡಿ ಸಂದರ್ಶನವನ್ನು ಪ್ರಸಾರ ಮಾಡುತ್ತಿವೆ . ಮನೆ – ಮನೆ ಸರ್ವೇಕ್ಷಣೆ ಮತ್ತು ಸಂಶೋಧನೆಯ ಮೂಲಕ ಹೊಸ ಮಾರುಕಟ್ಟೆ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿವೆ . ಇದರ ಜೊತೆಗೆ ಮುದ್ರಣ ಮಾಧ್ಯಮದವರು ವಿದ್ಯುನ್ಮಾನ ಮಾಧ್ಯಮದ ಮಾಲಿಕತ್ವದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ .
2nd Puc Sociology Chapter 6 Notes in Kannada
IV . ಹತ್ತು ಅಂಕದ ಪ್ರಶ್ನೆಗಳು ,
31. ಸಮೂಹ ಮಾಧ್ಯಮಗಳ ಪ್ರಕಾರಗಳನ್ನು ವಿವರಿಸಿ .
ಸಮೂಹ ಮಾದ್ಯಮಗಳ ಪ್ರಕಾರಗಳು ಸೀಮಿತ ಸಮಯದಲ್ಲಿ ಬಹಳಷ್ಟು ಜನರಿಗೆ ಮಾಹಿತಿಯನ್ನು ತಲುಪಿಸುವ ಸಂವಹನ ವ್ಯವಸ್ಥೆಗೆ ಸಮೂಹ ಮಾಧ್ಯಮಗಳು ಎನ್ನುತ್ತೇವೆ . ದಿನಪತ್ರಿಕೆಗಳು , ವಾರಪತ್ರಿಕೆಗಳು ,ರೇಡಿಯೋ , ದೂರದರ್ಶನ ಮತ್ತು ಸಮಾಜ ಸಂಪರ್ಕ ಜಾಲಗಳು ಇತ್ಯಾದಿಗಳು ಸಮೂಹ ಮಾಧ್ಯಮಗಳಾಗಿವೆ . ಇವುಗಳು ಏಕಕಾಲಕ್ಕೆ ವೈವಿಧ್ಯ ಜನಸಮೂಹಕ್ಕೆ ಮಾಹಿತಿಯನ್ನು ತಲುಪಿಸುವುದರಿಂದ ಇದನ್ನು ಸಮೂಹ ಸಂವಹನ ಎಂದೂ ಕರೆಯುತ್ತೇವೆ .
ಇತ್ತೀಚಿನ ದಿನಗಳಲ್ಲಿ ಸಮೂಹ ಮಾಧ್ಯಮಗಳು ಅಗಾಧವಾಗಿ ಬೆಳವಣಿಗೆಯಾಗಿದೆ . ಸಮೂಹ ಮಾಧ್ಯಮಗಳ ಪ್ರಸ್ತುತತೆ ಮತ್ತು ಪ್ರಪಂಚದಲ್ಲಿ ಸಮೂಹ ಮಾಧ್ಯಮಗಳ ಬೆಳವಣಿಗೆ ವಿಶೇಷವಾಗಿ ಭಾರತದಲ್ಲಿನ ಸಮೂಹ ಮಾಧ್ಯಮಗಳ ರಚನೆ , ವಸ್ತು ವಿಷಯ , ಆರ್ಥಿಕ , ರಾಜಕೀಯ , ಸಾಮಾಜಿಕ , ಸಾಂಸ್ಕೃತಿಕ ಹಿನ್ನೆಲೆಯಲ್ಲಿ ತಿಳಿದುಕೊಳ್ಳಬೇಕು . ಸಮಾಜ ಮಾಧ್ಯಮಗಳ ವ್ಯಾಪ್ತಿ ಮತ್ತು ಪಾತ್ರ ಆಯಾ ಸಮಾಜದ ಸ್ಥಿತಿಗತಿಗೆ ಅನುಗುಣವಾಗಿ ರೂಪುಗೊಳ್ಳುತ್ತದೆ . ಹಾಗೆಯೇ ಸಮೂಹ ಮಾಧ್ಯಮಗಳೂ ಸಹ ಸಮಾಜದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರುತ್ತವೆ . ಸಮೂಹ ಮಾಧ್ಯಮಗಳು ಇತರ ಸಂಪರ್ಕ ಸಾಧನಗಳಿಗಿಂತ ವಿಭಿನ್ನವಾಗಿದೆ . ಏಕ ಕಾಲದಲ್ಲಿ ವಿಭಿನ್ನ ಜನರಿಗೆ ತಲುಪಲು ಔಪಚಾರಿಕ ಸಂಘಟನೆ ಬಂಡವಾಳ , ಉತ್ಪಾದಕತೆ ಮತ್ತು ವ್ಯವಸ್ಥಾಪಕ ಮಂಡಲಿಯ ಅವಶ್ಯಕತೆ ಇದೆ . ಸಮೂಹ ಮಾಧ್ಯಮಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು . ಅವುಗಳು
1. ಮುದ್ರಣ ಮಾಧ್ಯಮ
2. ವಿದ್ಯುನ್ಮಾನ ಮಾಧ್ಯಮ
1. ಮುದ್ರಣ ಮಾದ್ಯಮದಲ್ಲಿ ವಾರ್ತಾ ಪತ್ರಿಕೆಗಳು ಮತ್ತು ಮ್ಯಾಗ್‌ಜೀನ್ ಎಂದರೆ ನಿಯತಕಾಲಿಕಗಳು , ದೇಶದಾದ್ಯಂತ ಎಲ್ಲಾ ಭಾಷೆಯಲ್ಲಿಯ ವಾರ್ತಾಪತ್ರಿಕೆಗಳು ಪ್ರಸಾರವಾಗುತ್ತಿವೆ . ಅದೇ ರೀತಿ ಅನೇಕ ರೀತಿಯ ನಿಯತ ಕಾಲಿಕಗಳೂ ಇವೆ .
2. ವಿದ್ಯುನ್ಮಾನ ಮಾಧ್ಯಮ : ಇವುಗಳು ರೇಡಿಯೋ , ದೂರದರ್ಶನ , ಅಂತರಜಾಲ ಮತ್ತು ಸಮಾಜ ಸಂಪರ್ಕಜಾಲಗಳು ,
32. ಸಮೂಹ ಮಾಧ್ಯಮಗಳ ಕಾರ್ಯಗಳನ್ನು ವಿವರಿಸಿ .
ಸಮೂಹ ಮಾದ್ಯಮವು ಬಹುದೊಡ್ಡ ಸಂಖ್ಯೆಯ ಓದುಗರನ್ನು ಹಾಗೂ ಶೋತೃಗಳನ್ನು ಹೊಂದಿರುತ್ತದೆ . ಸಮೂಹ ಮಾಧ್ಯಮಗಳಿಂದ ಸಂವಹನವು ಸಾಧ್ಯವಾಗುತ್ತದೆ .ಜಗತ್ತಿನ ಎಲ್ಲಾ ದೇಶಗಳಲ್ಲೂ ಇಂದು ಸಮೂಹ ಮಾಧ್ಯಮಗಳು ಉಪಯುಕ್ತವಾಗಿ ಕಾರ್ಯವನ್ನು ನಿರ್ವಹಿಸುತ್ತಿವೆ . ಸಾಕ್ಷರತೆಯ ವ್ಯಾಪಕತೆ , ವಿರಾಮದ ಹೆಚ್ಚಳ ಮತ್ತು ಸಂವಹನದ ಸಾರ್ವಜನಿಕ ಬಳಕೆಯ ಮೇಲೆ ಸಮೂಹ ಮಾಧ್ಯಮವು ಬಹಳಷ್ಟು ಅವಲಂಬಿಸಿದೆ . ಸಮೂಹ ಮಾದ್ಯಮಗಳ ಉದ್ದೇಶಕ್ಕನುಗುಣವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ . ಆ ಕಾರ್ಯಗಳನ್ನು ಈ ರೀತಿ ವರ್ಗೀಕರಿಸಿ ಬಹುದು .
1. ಮಾಹಿತಿ- Information : ಸಮೂಹ ಮಾಧ್ಯಮಗಳು ನಾನಾ ಕಡೆಗಳಿಂದ , ನಾನಾ ರೀತಿಗಳಲ್ಲಿ ಸುದ್ದಿಯನ್ನು ಸಂಗ್ರಹಿಸಿ ಪ್ರಸಾರ ಮಾಡುತ್ತವೆ . ಆ ಮಾಹಿತಿಯನ್ನು ವರ್ಗೀಕರಿಸಿ ರಾಷ್ಟ್ರ , ರಾಜ್ಯ ಮತ್ತು ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯವೆಂದು ವಿಂಗಡಿಸಿ , ಪ್ರಪಂಚದ ಮೂಲೆ ಮೂಲೆಗಳಿಗೆ ತಲುಪಿಸುತ್ತವೆ . ಈ ಎಲ್ಲಾ ಮಾಹಿತಿಯನ್ನು ವಾರ್ತಾಪ ರೇಡಿಯೋ , ದೂರದರ್ಶನಗಳ ಮೂಲಕ ಬಿತ್ತರಿಸಲ್ಪಡುತ್ತದೆ . ಇವುಗಳಲ್ಲಿ ರಾಜಕೀಯ , ಕ್ರೀಡೆ , ಮನರಂಜನೆ , ಹವಾಮಾನ ವರದಿ , ಶೇರು ಮಾರುಕಟ್ಟೆ ಮತ್ತು ಸಾಹಿತಿಗಳ ಸಾಹಿತ್ಯದ ವರದಿಯೂ ಇರುತ್ತದೆ . ಮಾಹಿತಿಯನ್ನು ಎಲ್ಲಾ ಮೂಲಗಳಿಂದಲೂ ಸಂಗ್ರಹಿಸುತ್ತಾರೆ .
2. ಸಮನ್ವಯತೆ : Correlation : ಮಾದ್ಯಮಗಳು ಮಾಹಿತಿಯ ಅರ್ಥವನ್ನು ಗ್ರಹಿಸಿ , ಸಾಮಾಜಿಕ ನಿಯಮಗಳನ್ನು ರೂಪಿಸಲು ಮತ್ತು ಮಕ್ಕಳ ಸಾಮಾಜೀಕರಣದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ .
3. ನಿರಂತರತೆ : Continuity : ಮಾದ್ಯಮಗಳು ಸಂಸ್ಕೃತಿಯ ನಿರಂತರತೆಯನ್ನು ಒಳಗೊಂಡು ಸಾಮಾನ್ಯ ಮೌಲ್ಯಗಳು ಮತ್ತು ಪ್ರಗತಿಗೆ ಸಹಾಯಕವಾಗಿವೆ . ಸುದ್ದಿ ಸಮಾಚಾರಗಳು ಯಾವಾಗಲೂ ಎಂದರೆ ನಿರಂತರವಾಗಿ ಹರಿಯುತ್ತಲೇ ಇರುತ್ತವೆ .
4. ಮನರಂಜನೆ : Entertainment : ಮುದ್ರಣ ಮಾಧ್ಯಮಕ್ಕಿಂತ ವಿದ್ಯುನ್ಮಾನ ಮಾಧ್ಯಮಗಳಾದ ರೇಡಿಯೋ ಹಾಗೂ ದೂರದರ್ಶನಗಳಲ್ಲಿ ಬಿತ್ತರವಾಗುವ ಹಲವಾರು ಕಾರ್ಯಕ್ರಮಗಳು ಮನೋರಂಜನೆಯ ಉದ್ದೇಶವನ್ನೇ ಹೊಂದಿರುತ್ತದೆ . ಇಂದು ವಿವಿಧ ಚಾನೆಲ್‌ಗಳು ಸ್ಪರ್ಧಾತ್ಮಕವಾಗಿ ಜನರನ್ನು ಮನರಂಜಿಸುತ್ತಿದ್ದಾರೆ . ಮಕ್ಕಳಿಂದ ಮುದುಕರವರೆಗೂ ಇದರ ಮೇಲಿನ ಅವಲಂಬನೆಯನ್ನುನೋಡಬಹುದಾಗಿದೆ .
5. ಕ್ರೋಢೀಕರಣ: Mobilization : ವಾದ್ಯಮಗಳು ಸಮಾಜದ ಉದ್ದೇಶಗಳ ಕ್ರೋಢೀಕರಣಕ್ಕೆ ಸಹಕರಿಸಲು , ಆರ್ಥಿಕ ಪ್ರಗತಿ , ದುಡಿಮೆ ಅಥವಾ ಧಾರ್ಮಿಕ ವಿಚಾರ ವಿನಿಮಯ ಮತ್ತು ಯುದ್ಧ ಕಾಲದಲ್ಲಿ ವಾರ್ತೆಗಳನ್ನು ಬಿತ್ತರಿಸಲು ಸಹಾಯಕವಾಗಿವೆ .
6. ರಾಜಕೀಯ ಸ೦ವಹನ : Political Communication : ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ . ಸರ್ಕಾರದ ನಿಯಮಾವಳಿಗಳು , ಕಾರ್ಯಕ್ರಮಗಳು , ಯೋಜನೆಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗಿದೆ .
7. ವ್ಯಾಪಾರ : Trade : ಮಾರುಕಟ್ಟೆ ವ್ಯವಸ್ಥೆ , ಪ್ರಚಾರ , ಸಾರ್ವಜನಿಕ ಸಂಪರ್ಕ ಇತ್ಯಾದಿಗಳು ಸುಲಭವಾಗುತ್ತವೆ . ಉತ್ಪಾದಕರು ಜಾಹೀರಾತುಗಳ ಮೂಲಕ ತಮ್ಮ ವಸ್ತುಗಳನ್ನು ಗ್ರಾಹಕರಿಗೆ ಪರಿಚಯಿಸಲು ಮತ್ತು ಗ್ರಾಹಕರಿಗೆ ಯಾವ ಯಾವ ವಸ್ತುಗಳ ಲಭ್ಯತೆಯಿದೆ ಎಂಬುದರ ಅರಿವು ಉಂಟಾಗುತ್ತದೆ .
8. ದೇಶದ ಸಂಸ್ಕೃತಿ ಮತ್ತು ಕಲೆಗಳ ಪರಿಚಯ ಮತ್ತು ಮಹತ್ವ : Importance of Culture and Art of the Country : ಮನರಂಜನೆಗಾಗಿ ಪ್ರಸಾರ ಮಾಡುವ ಸಂಗೀತ , ನಾಟಕ , ಸಾಹಿತ್ಯ , ಕಲೆ , ನೃತ್ಯ ಇವುಗಳಿಂದ ಜನರಿಗೆ ಇವುಗಳ ಪರಿಚಯ ಮತ್ತು ಮಹತ್ವದ ಅರಿವಾಗುತ್ತದೆ . ಇದರ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಲೂ ಸಹ ಸಹಕಾರಿಯಾಗುತ್ತದೆ . ಸಮೂಹ ಮಾಧ್ಯಮಗಳು ಅನೇಕ ಕಾರ್ಯಗಳನ್ನು ಮಾಡುತ್ತದೆ . ಇದರಿಂದ ಶಿಕ್ಷಣ , ಜಾಗೃತಿ ಉಂಟಾಗುತ್ತದೆ . ಇಂದು ಸಮೂಹ ಮಾದ್ಯಮಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ . ಇದನ್ನು ಬೇರ್ಪಡಿಸುವ ಮಾತೇ ಇಲ್ಲ . ಮೂಲಭೂತ ಅವಶ್ಯಕತೆಗಳಲ್ಲಿ ಇದೂ ಸಹ ಸೇರಿ ಹೋಗಿದೆ ಎಂದರೆ ತಪ್ಪಾಗಲಾರದು .
33. ಅಗೋಚರ ಮಾರುಕಟ್ಟೆಯ ಬಗ್ಗೆ ವಿವರಿಸಿ .
ಅಗೋಚರ ಮಾರುಕಟ್ಟೆ , ಇದನ್ನು ವರ್ಚುಯಲ್ ಮಾರುಕಟ್ಟೆ ಎಂದೂ ಸಹ ಕರೆಯುತ್ತಾರೆ . ಇದು ದೃಷ್ಟಿಗೆ ಗೋಚರವಾಗುವುದಿಲ್ಲ . ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಆಧಾರದಿಂದ ಮಾರುಕಟ್ಟೆ ಪ್ರಕ್ರಿಯೆಗಳು ಆನ್ಲೈನ್‌ನಲ್ಲಿ ಏರ್ಪಡುವ ಕ್ರಿಯೆ . ಇ – ಕಾಮರ್ ಆನ್‌ಲೈನ್ ಪರ್ಚೆಸ್ , ಶೇರು ಮಾರುಕಟ್ಟೆಯಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಇತ್ಯಾದಿಗಳು ಅಂತರ್ಜಾಲದ ಮೂಲಕ ಮಾರುಕಟ್ಟೆಯ ಕಾರ್ಯಾಚರಣೆ ಪರಿವರ್ತನೆಗೊಂಡಿದೆ . ಇಲ್ಲಿ ಮಾರಾಟಗಾರನಿಗಿಂತ ಗ್ರಾಹಕರೇ ಸಾರ್ವಭೌಮರು . ಮಾರುಕಟ್ಟೆಯ ವಹಿವಾಟು ಆನ್ – ಲೈನ್‌ಗಳ ಮೂಲಕ ಮಾಹಿತಿ ಸಾಧನೆ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿಕೊಂಡ ಹೊಸ ಶೈಲಿಯನ್ನು ಅಗೋಚರ ಮಾರುಕಟ್ಟೆ ಅಥವಾ ವರ್ಚುಯಲ್ ಮಾರುಕಟ್ಟೆ ಎಂದು ಕರೆಯುತ್ತೇವೆ ಇತ್ತೀಚೆಗೆ ಇ – ಕಾಮರ್ಸ್ , ಆನ್‌ಲೈನ್ ಪರ್‌ಚೇಸ್ , ಆನ್ ಲೈನ್ ಟ್ರೇಡಿಂಗ್ ಮೂಲಕ ಶೇರ್ ಮತ್ತು ಸ್ಟಾಕ್‌ಗಳನ್ನು ಮಾರುಕಟ್ಟೆಯಲ್ಲಿ ವ್ಯವಹರಿಸಲಾಗುತ್ತದೆ . ಇಂತಹ ಮಾರುಕಟ್ಟೆ ಯಲ್ಲಿ ನಡೆಯುವ ವಹಿವಾಟುಗಳು ಮತ್ತು ವಾಣಿಜ್ಯ ಕ್ರಿಯೆಯನ್ನು ಅಗೋಚರ ಮಾರುಕಟ್ಟೆ ಎಂದು ಕರೆಯಲಾಗಿದೆ .
ಭಾರತದಲ್ಲಿ 21 ನೇ ಶತಮಾನದಲ್ಲಿ ಆನ್ – ಲೈನ್ ಮಾರುಕಟ್ಟೆಗಳು ವಿಪರೀತವಾಗಿ ಹೆಚ್ಚುತ್ತಿದೆ . ಪಾಶ್ಚಾತ್ಯ ದೇಶದಲ್ಲಿ ಆನ್ – ಲೈನ್ ಮಾರುಕಟ್ಟೆಗಳು ಸಾಮಾನ್ಯ . ಆದರೆ ಭಾರತದಲ್ಲಿ ಮಾಹಿತಿ ತಂತ್ರಜ್ಞಾನದಿಂದಾಗಿ ಇಲ್ಲಿಯೂ ವ್ಯಾಪಕವಾಗಿ ಬೆಳೆಯುತ್ತಿದೆ . ಅಗೋಚರ ಮಾರುಕಟ್ಟೆಗಳು ವಿದ್ಯುನ್ಮಾನ ಅಥವಾ ಇ – ಕಾಮರ್ಸ್ ಪ್ರಕಾರವಾಗಿದ್ದು , ಇವುಗಳ ಮೂಲಕ ಗ್ರಾಹಕರು ತಮಗೆ ಬೇಕಾದ ವಸ್ತುಗಳು ಮತ್ತು ಸೇವೆಗಳನ್ನು ಮಾರಾಟಗಾರರಿಂದ ವೆಬ್ ಬೋಸರ್ ಮೂಲಕ ನೇರವಾಗಿ ಕೊಂಡುಕೊಳ್ಳುವ ಪ್ರಕ್ರಿಯೆಯಾಗಿದೆ . ಅಗೋಚರ ಮಾರುಕಟ್ಟೆಯನ್ನು ಇ – ಶಾಪ್ , ಇಂಟರ್‌ನೆಟ್ ಶಾಪ್ , ಆನ್ – ಲೈನ್ ಸ್ಟೋರ್ ಎಂಬ ವಿವಿಧ ಹೆಸರಿನಲ್ಲಿ ಕರೆಯುತ್ತಾರೆ .
ಇಂದಿನ ದಿನಗಳಲ್ಲಿ ಆಧುನಿಕ ಮಾರುಕಟ್ಟೆಯ ಸ್ಥಿತಿಗತಿಯಲ್ಲಿ ಗ್ರಾಹಕರು ಮತ್ತು ಮಾರಾಟಗಾರರು ಸೀಮಿತ ಪ್ರದೇಶವಾದ ಮಾರುಕಟ್ಟೆಗೆ ಭೇಟಿ ನೀಡಬೇಕಾಗಿಲ್ಲ . ಗ್ರಾಹಕರು ಮತ್ತು ಮಾರಾಟಗಾರರು ಪರಸ್ಪರ ಭೇಟಿಯಾಗದೆ ವಸ್ತು ಮತ್ತು ಹಣ ವಿನಿಮಯವಾಗುತ್ತದೆ . ಅಗೋಚರ ಮಾರುಕಟ್ಟೆಯಲ್ಲಿ ಪ್ರತಿಯೊಂದು ಘಟನೆಗಳು ದೃಢೀಕೃತ ದಾಖಲೆಯಾಗುತ್ತದೆ . ಎಲ್ಲಾ ರೀತಿಯ ಭೌಗೋಳಿಕ ಮತ್ತು ಸಾಮಾಜಿಕ ಅಡೆತಡೆಗಳನ್ನು ಮೀರಿದ ಜಾಗತಿಕ ಹಂತದಲ್ಲಿ ಅಗೋಚರ ಮಾರುಕಟ್ಟೆ ಅಥವಾ ಆನ್ – ಲೈನ್ ಮಾರುಕಟ್ಟೆಯ ಉಗಮವು ಒಂದು ಹೊಸ ಆಯಾಮವಾಗಿದೆ . 1960 ರಲ್ಲಿ ಈ ಅಗೋಚರ ಮಾರುಕಟ್ಟೆಯ ಪರಿಕಲ್ಪನೆ ಪ್ರಾರಂಭವಾಯಿತು .
1990 ರ ದಶಕದಲ್ಲಿ ವಾಸ್ತವಿಕವಾಗಿ ಅನುಷ್ಠಾನಗೊಂಡಿತು . ಮೈಕಲ್ ಆಲ್‌ಡಿರಿಜ್ 1979 ರಲ್ಲಿ ಮೊಟ್ಟ ಮೊದಲ “ ಟೆಲಿಶಾಪಿಂಗ್ ‘ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು . ಇದೇ ವರ್ಷದಲ್ಲಿ ‘ ವಿಡಿಯೋ ಟೆಕ್ಸ್ ‘ ಎಂಬುದರ ಬಗ್ಗೆ ಸಂಶೋಧನೆ ಕೈಗೊಂಡರು . 1982 ರಲ್ಲಿ ಶೇರು ಮಾರುಕಟ್ಟೆಯ ವಹಿವಾಟು ಪ್ರಾರಂಭವಾಯಿತು . 1995 ರಲ್ಲಿ ಅಮೆಜ್ಜಾನ್ . ಕಾಮ್ ಎಂಬುದು ಅಗೋಚರ ಮಾರ್ಕೆಟಿಂಗ್ ಸೈಟನ್ನು ಅನುಷ್ಠಾನಗೊಳಿಸಿತ್ತು ಮತ್ತು ಅದೇ ಇಸವಿಯಲ್ಲಿ ಇ – ಬೇ ಎಂಬ ಆನ್ – ಲೈನ್ ಶಾಪಿಂಗ್ ವೆಬ್ ಸೈಟ್ ಪ್ರಾರಂಭಿಸಿತು .
34. ಸಾಂಪ್ರದಾಯಿಕ ವ್ಯಾಪಾರಿ ಸಮುದಾಯಗಳ ಸಾಮಾಜಿಕ ಸಂಘಟನೆಯನ್ನು ವಿವರಿಸಿ .
ಭಾರತದ ಆರ್ಥಿಕ ಮತ್ತು ಸಮಾಜ ವ್ಯವಸ್ಥೆ ತಟಸ್ಥವಾದುದು ಮತ್ತು ಆರ್ಥಿಕ ಮಾರ್ಪಾಡುಗಳು ವಸಾಹತುಶಾಹಿ ಆಗಮನದಿಂದ ಆರಂಭವಾಯಿತು . ಭಾರತದ ಗ್ರಾಮಗಳ ಆರ್ಥಿಕ ವ್ಯವಸ್ಥೆ ಪ್ರಾಥಮಿಕವಾಗಿ ಮಾರುಕಟ್ಟೆ ರಹಿತವಾಗಿತ್ತು . ವಸಾಹತುಶಾಹಿಯ ಪೂರ್ವ ದಲ್ಲಿಯೇ ಭಾರತದ ಆರ್ಥಿಕ ವ್ಯವಸ್ಥೆ ವ್ಯಾಪಕವಾಗಿ ಹಣ ನಾಣ್ಯ ಚಲಾವಣೆ ಇತ್ತು . ಭಾರತದಲ್ಲಿ ಸಂಕೀರ್ಣವಾದ ವ್ಯಾಪಾರಿ ಜಾಲಗಳು ಅಸ್ತಿತ್ವದಲ್ಲಿದ್ದವು . ಸಾಂಪ್ರದಾಯಿಕ ವಾಣಿಜ್ಯ ಸಮುದಾಯಗಳು ಅಥವಾ ಜಾತಿಗಳು ತಮ್ಮದೇ ಆದ ಬ್ಯಾಂಕ್ ಮತ್ತು ಲೇವಾದೇವಿ ವ್ಯವಸ್ಥೆ ಹೊಂದಿದ್ದವು . ಉದಾ : ಹುಂಡಿ ಅಥವಾ ವಸ್ತು ವಿನಿಮಯ ಚೀಟಿಯು ( Bill of exchange ) ವಸ್ತುಗಳ ವಿನಿಮಯದ ಪ್ರಮುಖ ಸಾಧನವಾಗಿತ್ತು . ಆಗ ವ್ಯಾಪಾರದ ವಹಿವಾಟುಗಳು ಜಾತಿಯೊಳಗೆ ನಡೆಯುತ್ತಿತ್ತು . ದೇಶದ ಒಂದು ಭಾಗದ ವರ್ತಕನು ನೀಡುವ ಹುಂಡಿ ಇನ್ನೊಂದು ಭಾಗದಲ್ಲಿರುವ ಮತ್ತೊಬ್ಬ ವರ್ತಕನು ಸ್ವೀಕರಿಸಬಹುದಾಗಿತ್ತು .
ತಮಿಳುನಾಡಿನ ನಗರ್ತಕರ ಜಾತಿ ಆಧಾರಿತ ವ್ಯಾಪಾರ ವ್ಯವಸ್ಥೆ : ಜಾತಿ ಆಧಾರಿತ ಆಂತರಿಕ ವಹಿವಾಟು ವ್ಯವಸ್ಥೆಗೆ ತಮಿಳುನಾಡಿನ ನಗರ್ತಕರು ಒಂದು ಉದಾಹರಣೆ . ಇವರು ತಮ್ಮೊಳಗೆ ಹಣದ ವಹಿವಾಟುಗಳಾದ ಸಾಲ ಮತ್ತು ಉಳಿತಾಯದ ಠೇವಣಿ ಮಾಡುತ್ತಾ ಆಂತರಿಕವಾಗಿ ಸಾಮಾಜಿಕ ಸಂಬಂಧಗಳನ್ನು ಭದ್ರಪಡಿಸಿಕೊಂಡಿದ್ದಾರೆ . ಹಲವಾರು ಸಾ ೦ ಪ್ರದಾಯಿಕ ವ್ಯಾಪಾರಿ ಸಮುದಾಯಗಳಂತೆ ನಗರ್ತಕರ ಬ್ಯಾಂಕ್ ವ್ಯವಸ್ಥೆಯು ಅವಿಭಕ್ತ ಕುಟುಂಬಗಳ ವ್ಯಾಪಾರಿ ಮಳಿಗೆಯಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ . ಇದರಿಂದ ವ್ಯಾಪಾರ ಮತ್ತು ಬ್ಯಾಂಕಿಂಗ್ ಸಂಘಟಿತವಾಗಿದೆ . ಸಾಂಪ್ರದಾಯಿಕ ವಾಣಿಜ್ಯ ಅಥವಾ ವ್ಯಾಪಾರ ಸಮುದಾಯಗಳು ಭಾರತದಲ್ಲಿ ಜಾತಿ ಮತ್ತು ಆರ್ಥಿಕ ವ್ಯವಸ್ಥೆಯು ನಿಕಟ ಸಂಬಂಧವನ್ನು ಹೊಂದಿವೆ . ಈ ರೀತಿಯ ಸಂಬಂಧವನ್ನು ಭೂಮಿಯ ಒಡೆತನ , ವೃತ್ತಿಯ ವೈವಿದ್ಯತೆ ಮತ್ತು ಇನ್ನಿತರ ಅಂಶಗಳಲ್ಲಿ ಗಮನಿಸಬಹುದಾಗಿದೆ .
ವಾಸ್ತವಿಕವಾಗಿ ವೈಶ್ಯ ಎಂಬುದು ಚತುವರ್ಣದಲ್ಲಿ ಒಂದು ವರ್ಗವಾಗಿದೆ . ಈ ರೀತಿ ವ್ಯಾಪಾರಿಗಳನ್ನು ಪ್ರಾಚೀನ ಭಾರತದ ವರ್ಣಾಶ್ರಮ ವ್ಯವಸ್ಥೆಯಲ್ಲಿ ಗುರ್ತಿಸಿಕೊಳ್ಳುವ ಮೂಲಕ ವ್ಯಾಪಾರೋದ್ಯಮಿ ಮತ್ತು ವಾಣಿಜ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿತ್ತು . ಉತ್ತರ ಭಾರತದ ‘ ಬನಿಯ ‘ ಎಂಬ ವೈಶ್ಯರ ಸಮೂಹ ಅನಾದಿಕಾಲದಿಂದಲೂ ವಾಣಿಜ್ಯ ಅಥವಾ ವ್ಯಾಪಾರವು ಸಾಂಪ್ರದಾಯಿಕ ವೃತ್ತಿಯಾಗಿತ್ತು . ಕೆಲವು ನಿರ್ದಿಷ್ಟ ಜಾತಿ ಸಮೂಹಗಳು ಕೂಡ ವ್ಯಾಪಾರೋದ್ಯಮಗಳಿಗೆ ಪ್ರವೇಶಿಸಿ ಏಣಿಶ್ರೇಣಿಯಲ್ಲಿ ಉನ್ನತ ಅಂತಸ್ತನ್ನು ಪಡೆದುಕೊಂಡಿದ್ದಾರೆ .
ಸಾಂಪ್ರದಾಯಿಕ ವ್ಯಾಪಾರಿ ಸಮುದಾಯಗಳ ಉಗಮ
ಭಾರತದ ವ್ಯಾಪಾರಿ ಚಟುವಟಿಕೆ ಕೇವಲ ‘ ವೈಶ್ಯ ‘ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ ಇದರಲ್ಲಿ ಇನ್ನಿತರ ಧಾರ್ಮಿಕ ಹಾಗೂ ಜಾತಿ ಸಮೂಹಗಳಿವೆ . ಉದಾ : ಪಾರ್ಸಿಗಳು , ಸಿಂಧಿಗಳು , ಭೋಹರಾಸ್ , ಜೈನರು ಮತ್ತು ಮಾರ್ವಾಡಿಗಳು , ವಸಾಹತುಶಾಹಿ ಅವಧಿಯಲ್ಲಿ ಹಿಂದುಳಿದ ಆದಿವಾಸಿ ಸಮೂಹವಾದ ಬಂಜಾರ ಸಮೂಹ ನಿಯಂತ್ರಿಸುತ್ತಿತ್ತು . ಈ ಸಮುದಾಯಗಳು ವಿವಿಧ ಸಂಘಟನೆ ಯಾಗಿ ಮಾರ್ಪಾಡಾಗಿ ವಾಣಿಜ್ಯ ಅಥವಾ ವ್ಯಾಪಾರ ಸಮೂಹವಾಗಿದೆ . ಈ ರೀತಿ ವಿವಿಧ ಸಾಂಪ್ರದಾಯಿಕ ವ್ಯಾಪಾರಿ ಸಮುದಾಯಗಳು ಸಾಮಾಜಿಕವಾಗಿ ಸಂಘಟನೆಯಾಯಿತು .
35. ಪ್ರಸ್ತುತ ಜಗತ್ತಿನಲ್ಲಿ ಮಾದ್ಯಮಗಳ ಬಗ್ಗೆ ವಿವರಣೆ ನೀಡಿರಿ .
21 ನೇ ಶತಮಾನದಲ್ಲಿ ಸಂವಹನ ತಂತ್ರಜ್ಞಾನವು ಮಿಲಿಯನ್‌ಗಟ್ಟಲೆ ಜನ ಕ್ಷಣಾರ್ಧದಲ್ಲಿ ಮಾಹಿತಿಯನ್ನು ಒಂದೇ ಕಾಲದಲ್ಲಿ ವಿಶ್ವದ ಮೂಲೆ ಮೂಲೆಯಲ್ಲಿ ಹಂಚಿಕೊಳ್ಳಬಹುದು . ಮಾಹಿತಿಯನ್ನು ವ್ಯಕ್ತಿಯಿಂದ ವ್ಯಕ್ತಿ ಅಥವಾ ಸಮೂಹಕ್ಕೆ ಮಾತಿನ ಮೂಲಕ ಅಥವಾ ಸಮೂಹ ಮಾಧ್ಯಮಗಳ ಮೂಲಕ ವರ್ಗಾಯಿಸುವ ಸಂವಹನ ಕ್ರಿಯೆಯು ಹೆಚ್ಚಿನ ಮಹತ್ವ ಪಡೆದಿದೆ . ಮಾಧ್ಯಮ ನೀಡುವ ಮಾಹಿತಿಗಿಂತ ಮಾಧ್ಯಮದ ಪ್ರಕಾರದಿಂದ ಸಮಾಜವು ಪ್ರಭಾವಿತವಾಗುತ್ತದೆ . ವಿದ್ಯುನ್ಮಾನ ಮಾಧ್ಯಮವು ಜಾಗತಿಕ ಗ್ರಾಮವನ್ನು ಸೃಷ್ಟಿಸಿದೆ . ದಿನದ 24 ಗಂಟೆಯೂ ವಾರ್ತಾವಾಹಿನಿಗಳು ವಾರ್ತೆಯನ್ನು ಪ್ರಸಾರ ಮಾಡುತ್ತಲೇ ಇರುತ್ತದೆ . ಅಂತರ್ಜಾಲವು ಸಂವಹನದ ಕೇಂದ್ರ ಬಿಂದುವಾಗಿದೆ . ಧ್ವನಿ ಗುರ್ತಿಸುವಿಕೆ , ಬ್ರಾಡ್ ಬ್ಯಾಂಡ್ ಟ್ರಾನ್ಸಿಷನ್ , ವೆಬ್ ಕಾಸ್ಟಿಂಗ್ ಮತ್ತು ಕೇಬಲ್ ಸಂಪರ್ಕಗಳ ತಂತ್ರಜ್ಞಾನ ಪ್ರಗತಿಯಿಂದ ಅಂತರ್ಜಾಲದ ಮೂಲಕ ಮಾಹಿತಿ , ಮನರಂಜನೆ , ಜಾಹಿರಾತು ಮತ್ತು ವಾಣಿಜ್ಯ ಮಾಹಿತಿಗಳು ಸಮೂಹ ಪ್ರೇಕ್ಷಕರಿಗೆ ಕ್ಷಣಾರ್ಧದಲ್ಲಿ ತಲುಪುತ್ತದೆ .
ಷೋಸ್ಟ್‌ಮ್ಯಾನ್ ಪ್ರಕಾರ ಮುದ್ರಣ ಮಾಧ್ಯಮವು ಜನರ ತಾರ್ಕಿಕ ಆಲೋಚನೆಯನ್ನು ಬೆಳೆಸಿದರೆ , ವಿದ್ಯುನ್ಮಾನ ಮನರಂಜನೆಯನ್ನು ಸೃಷ್ಟಿಸುತ್ತದೆ . ರಾಬರ್ಟ್ ಪುಟ್ನಂರವರು ಮಾಧ್ಯಮವನ್ನು ಸಾಮಾಜಿಕ ಬಂಡವಾಳ ಎಂದು ಹೋಲಿಕೆ ಮಾಡಿದ್ದಾರೆ . ದೂರದರ್ಶನ ವೀಕ್ಷಣೆಯು ಸಾಮಾಜಿಕ ನಂಬಿಕೆ ಮತ್ತು ಸಾಮೂಹಿಕ ಸದಸ್ಯತ್ವಕ್ಕೆ ಮಾರಕವಾಗಿದೆ . ಇದೇ ಮಾನದಂಡವನ್ನು ಬಳಸಿ , ದಿನಪತ್ರಿಕೆಗಳನ್ನು ಓದುವುದರಿಂದ ಸಾಮಾಜಿಕ ನಂಬಿಕೆ ಮತ್ತು ಸಾಮೂಹಿಕ ಸದಸ್ಯತ್ವಕ್ಕೆ ಪೂರಕವಾಗುತ್ತದೆ . ಮಾಧ್ಯಮವು ಖಾಸಗಿ ಬಂಡವಾಳ ಶಾಹಿಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ ಮತ್ತು ಬಡವರ ಹಿತಾಸಕ್ತಿಗಳು ಕ್ಷೀಣಿಸುತ್ತವೆ .
ಸಂಸ್ಕೃತಿಯ ಪ್ರಕಾರಗಳಿಂದ ಮನರಂಜನೆ ನೀಡಲೋಸುಗ ಇದನ್ನು ಲಾಭಕೋರತನಕ್ಕೆ ಬಳಸುತ್ತಾರೆ . ಇದರಿಂದ ಕಲೆಯು ಕ್ಷೀಣಿಸಿ , ವಾಣಿಜ್ಯಕರಣಗೊಂಡರೆ , ಸಂಸ್ಕೃತಿಯು ಮನರಂಜನೆಯಾಗಿ ಮಾರ್ಪಡುತ್ತದೆ . ಸಾರ್ವಜನಿಕ ವಲಯವು ಸಮಾನ ಮನಸ್ಕರ ಮುಕ್ತ ಚರ್ಚೆಯ ಕೇಂದ್ರಗಳಾಗಿರುತ್ತವೆ . ಸಮೂಹ ಮಾಧ್ಯಮಗಳ ಮನರಂಜನೆಯ ಬೆಳವಣಿಗೆಯಿಂದ ಸಾರ್ವಜನಿಕ ವಲಯಗಳು ಕ್ಷೀಣಿಸಿದೆ . ಜನಾಭಿಪ್ರಾಯವು ಮುಕ್ತ ಮತ್ತು ತಾರ್ಕಿಕ ಚರ್ಚೆಯಿಲ್ಲದೆ ಕೈಚಳಕ ಮತ್ತು ನಿಯಂತ್ರಣದಿಂದ ರೂಪುಗೊಳ್ಳುತ್ತದೆ . ಉದಾ : ಜಾಹಿರಾತುಗಳು ಜೀನ್ ಬುಡ್ರಿಲಾರ್ಡ್ ರವರು ಸಮೂಹ ಮಾದ್ಯಮಗಳ ಪ್ರಭಾವವನ್ನು ‘ ಕೃತಕ ನೈಜತೆ ‘ ಎಂದಿದ್ದಾರೆ . ಜೀವನವು ದೂರದರ್ಶನದಿಂದ ತುಂಬಾ ಪ್ರಭಾವಿತವಾಗಿದೆ . ದೂರದರ್ಶನವು ನಮ್ಮ ಜೀವನವನ್ನು ಪ್ರತಿನಿಧಿಸುವ ಬದಲು ನಾವು ಹೇಗಿರಬೇಕು ಎಂದು ನಿರ್ದೇಶಿಸುತ್ತದೆ .
1994-95 ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಓ.ಜೆ. ಸಿಂಸನ್‌ನ ಕೋರ್ಟ್ ವಿಚಾರಣೆಯ ಪ್ರಕರಣ ಇದನ್ನು ‘ ಈ ಶತಮಾನದ ವಿಚಾರಣೆ ‘ ಎನ್ನಬಹುದು . ಸಮೂಹ ಮಾಧ್ಯಮಗಳು ಹೊಸ ಸತ್ಯ ಎಂದರೆ ಕೃತಕ ಸತ್ಯವನ್ನು ಮಾದ್ಯಮ ಚಿತ್ರಣದ ಮೂಲಕ ಸೃಷ್ಟಿಸುತ್ತಾರೆ ಎಂಬ ಅಭಿಪ್ರಾಯವಿದೆ .
36. ಸಮೂಹ ಮಾಧ್ಯಮಗಳ ಮೇಲೆ ಜಾಗತೀಕರಣದ ಪ್ರಭಾವವನ್ನು ವಿವರಿಸಿ .
ಸಮೂಹ ಮಾಧ್ಯಮಗಳ ಮೇಲೆ ಜಾಗತೀಕರಣದ ಪ್ರಭಾವ ಜಾಗತಿಕ ಪ್ರಪಂಚದಲ್ಲಿ ಮಾದ್ಯಮಗಳು ಅತ್ಯಂತ ಪ್ರಭಾವಶಾಲಿ ಪಾತ್ರ ವಹಿಸುತ್ತವೆ . 1970 ರ ತನಕ ಸ್ಥಳೀಯ ಸರ್ಕಾರದ ನೀತಿ – ನಿಯಮಗಳ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು . ಕಳೆದ ನಾಲ್ಕು ದಶಕಗಳಲ್ಲಿ ಮಾದ್ಯಮ ಉದ್ದಿಮೆಯು ಗಣನೀಯವಾಗಿ ಬದಲಾಗಿದೆ . ರಾಷ್ಟ್ರೀಯ ಮಾರುಕಟ್ಟೆಗಳು ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಜಾಗತಿಕ ಮಾರುಕಟ್ಟೆಯಾಗಿ ರೂಪಾಂತರವಾಗಿದೆ . ಪ್ರಾಂತೀಯ ಮುದ್ರಣ ಮಾದ್ಯಮದ ಮೇಲೆ ಜಾಗತೀಕರಣದ ಪ್ರಭಾವ ಭಾರತೀಯ ಪತ್ರಿಕೆಗಳ ಪ್ರಸರಣದಲ್ಲಿ ಪ್ರಗತಿಗೆ ಹಲವಾರು ಕಾರಣಗಳಿವೆ . ಮೊದಲನೆಯದಾಗಿ ನಗರ ಪ್ರದೇಶಗಳಿಗೆ ಶಿಕ್ಷಿತರ ವಲಸೆಯ ಹೆಚ್ಚಳ , ಹಿಂದೂಸ್ಥಾನ್ ಹಿಂದಿ ದಿನಪತ್ರಿಕೆಯ 64,000 ಪ್ರತಿಗಳನ್ನು ಮುದ್ರಿಸುತ್ತಿದ್ದರು .
2005 ರ ಹೊತ್ತಿಗೆ 4,25,000 ಪ್ರತಿಗಳು ಪ್ರಸರಣ ವಾಗುತ್ತಿದ್ದವು . ಇದಕ್ಕೆ ಕಾರಣ ದೆಹಲಿಯ ಒಟ್ಟು ಜನಸಂಖ್ಯೆ ಒಂದು ಕೋಟಿ 47 ಲಕ್ಷವಾಗಿತ್ತು . ಈ ರೀತಿ ಮುದ್ರಣ ಪ್ರಸರಣದಲ್ಲಿ ಕ್ರಾಂತಿಯುಂಟಾಗಿ ಪ್ರತಿಗಳ ಸಂಖ್ಯೆ ಏರತೊಡಗಿತು . ವಿವಿಧ ಹೆಸರಿನ ಪತ್ರಿಕೆಗಳು ಹೊಸದಾಗಿ ಪ್ರಾರಂಭಿಸಲ್ಪಟ್ಟವು . ಅನೇಕ ರೀತಿಯ ತಾಂತ್ರಿಕತೆ ಬಳಸಿಕೊಂಡು ಮುದ್ರಣ ಮಾದ್ಯಮದವರು ವಿದ್ಯುನ್ಮಾನ ಮಾದ್ಯಮದ ಮಾಲಿಕತ್ವದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ . ವಿದ್ಯುನ್ಮಾನ ಮಾದ್ಯಮದ ಮುಂದೆ ಮುದ್ರಣ ಮಾಧ್ಯಮ ಕ್ಷೀಣಿಸುತ್ತದೆ ಎಂಬ ಆತಂಕವಿದ್ದರೂ ಪತ್ರಿಕೆಗಳ ಪ್ರಸರಣ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ . ಇದು ಜಾಗತೀಕರಣದ ಪ್ರತ್ಯಕ್ಷ ಪ್ರಭಾವ .
ವಿದ್ಯುನ್ಮಾನ ಮಾದ್ಯಮವಾದ ದೂರದರ್ಶನದ ಮೇಲೆ ಜಾಗತೀಕರಣದ ಪ್ರಭಾವ
1991 ರಲ್ಲಿ ಸರ್ಕಾರಿ ಪ್ರಾಯೋಜಿತ ಏಕೈಕ ದೂರ ದರ್ಶನ ವಾಹಿನಿ ಭಾರತದಲ್ಲಿತ್ತು . 1998 ರ ಹೊತ್ತಿಗೆ ಜಾಗತೀಕರಣದ ನೇರ ಪ್ರಭಾವದಿಂದಾಗಿ ಖಾಸಗಿ ಉಪಗ್ರಹ ಆಧಾರಿತ ಚಾನೆಲ್‌ಗಳ ಸಂಖ್ಯೆ ಹೆಚ್ಚಳವಾಗತೊಡಗಿತು . 70 ಚಾನೆಲ್‌ಗಳು ಪ್ರಾರಂಭಗೊಂಡವು . ಈ ರೀತಿ ಉಪಗ್ರಹ ಆಧಾರಿತ ಚಾನೆಲಗಗಳ ಹೆಚ್ಚಳವು ಭಾರತದ ಪ್ರಗತಿಯ ಮಾನದಂಡವಾಗಿದೆ . ಕೌಟುಂಬಿಕ ಕಾರ್ಯಕ್ರಮಗಳು ಭಾರತೀಯ ವೀಕ್ಷಕರನ್ನು ಆಕರ್ಷಿಸುತ್ತವೆ . ಆದ್ದರಿಂದ ಈ ಕಂಪನಿಗಳೂ ಕೂಡ ಪ್ರಾದೇಶಿಕ ವಾಹಿನಿಗಳನ್ನು ಆರಂಭಿಸಿದ್ದಾರೆ . ಜಾಗತೀಕರಣದ ಪ್ರಭಾವದಿಂದ ಸಮೂಹ ಮಾದ್ಯಮಗಳು ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಂಡಿದೆ . ಜಗತ್ತು ಚಿಕ್ಕದಾಗುತ್ತಿದೆ . ವೈವಿದ್ಯಮಯಾದ ವಿಷಯಗಳನ್ನು ಬೆರಳ ತುದಿಯಿಂದ ಪಡೆಯಬಹುದು . ಒಟ್ಟಿನಲ್ಲಿ ಹೇಳುವುದಾದರೆ ಸಮೂಹ ಮಾಧ್ಯಮದಲ್ಲಿ ಶೀಘ್ರ ಪ್ರಗತಿಯನ್ನು ಕಂಡಿದ್ದೇವೆ .
FAQ
ಪ್ರಜಾಪ್ರಭುತ್ವ ಎಂದರೆ ಜನರಿಂದ , ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ಸರ್ಕಾರದ ವ್ಯವಸ್ಥೆಯಾಗಿರುತ್ತದೆ.
WWW . ಎಂಬುದು ವರ್ಲ್ಡ್ ವೈಡ್ ವೆಬ್‌ನ್ನು ಸೂಚಿಸುತ್ತದೆ .
TRP ಎಂದರೆ Television Rating Point
ಇತರೆ ವಿಷಯಗಳು :
ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್
ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf