ದ್ವಿತೀಯ ಪಿ.ಯು.ಸಿ ಭಾರತದ ವಿದೇಶಾಂಗ ನೀತಿ ರಾಜ್ಯಶಾಸ್ತ್ರ ನೋಟ್ಸ್‌ | 2nd Puc Political Science Chapter 9 Notes in Kannada

ದ್ವಿತೀಯ ಪಿ.ಯು.ಸಿ ಭಾರತದ ವಿದೇಶಾಂಗ ನೀತಿ ರಾಜ್ಯಶಾಸ್ತ್ರ ನೋಟ್ಸ್‌, 2nd Puc Political Science Chapter 9 Notes Question Answer Pdf in Kannada Medium Kseeb Solution For Class 12 Political Science Chapter 9 Notes Bharatada Videshanga Neeti Notes

2nd Puc Political Science Chapter 9 Notes in Kannada

I. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.

2nd Puc Political Science Chapter 9 Question Answer

1. ಭಾರತದ ವಿದೇಶಾಂಗ ನೀತಿಯ ಪಿತಾಮಹ ಯಾರು ?

ಜವಾಹರಲಾಲ್ ನೆಹರೂ

2. ಭಾರತ ಸಂವಿಧಾನದ ಯಾವ ವಿಧಿಯು ಭಾರತದ ವಿದೇಶಾಂಗ ನೀತಿ ಬಗ್ಗೆ ತಿಳಿಸುತ್ತದೆ.

51 ನೇ ವಿಧಿ.

3. N A M ವಿಸ್ತರಿಸಿ.

Non Alignment (ಅಲಿಪ್ತ ನೀತಿ)

4. ಪ್ರಸ್ತುತ ಅಲಿಪ್ತ ನೀತಿ ಸಂಘಟನೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ?

128 ಸದಸ್ಯ ರಾಷ್ಟ್ರಗಳಿವೆ.

5. ವರ್ಣಬೇಧ ನೀತಿ ಎಂದರೇನು ?

ಬಣ್ಣದ ಆಧಾರದ ಮೇಲೆ ಬಿಳಿಯರು ಕರಿಯರನ್ನು ಶೋಷಣೆ ಮಾಡುವ ನೀತಿಯನ್ನು ವರ್ಣಬೇಧ ನೀತಿ ಎನ್ನುತ್ತಾರೆ.

6. CHOGM ವಿಸ್ತರಿಸಿ.

ಕಾಮನ್‌ವೆಲ್ತ್ ಮುಖ್ಯಸ್ಥರ ಸಭೆಗಳು.

7. CHOGM ನ ಮುಖ್ಯಸ್ಥರು ಯಾರು ?

ಬ್ರಿಟನ್ನಿನ ರಾಣಿ

8. ಭಾರತದ ಪ್ರಥಮ ಅಣು ಪರೀಕ್ಷೆಯನ್ನು ಯಾವಾಗ ನಡೆಸಿದರು?

1974 ರಲ್ಲಿ

9. NPT ವಿಸ್ತರಿಸಿ.

Non Proliferation Treaty. (ಅಣ್ವಸ್ತ್ರ ನಿಷೇಧ ಒಪ್ಪಂದ)

10. CTBT ವಿಸ್ತರಿಸಿ

Comprencive Test Ban Treaty (ಸಮಗ್ರ ಅಣ್ವಸ್ತ್ರ ನಿಷೇದ ಒಪ್ಪಂದ)

11. 2013 ರಲ್ಲಿ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ಪಡೆದವರು ಯಾರು ?

ಜರ್ಮನಿಯ ಛಾನ್ಸಲರ್‌ ಅಂಜಿಲಾ ಮರ್ಕೆಲ್‌ರವರಿಗೆ ಲಭಿಸಿದೆ.

12, OPCW ವಿಸ್ತರಿಸಿ.

Organisation for Prohibition of Chemical Weapons (ರಾಸಾಯನಿಕ ಅಸ್ತ್ರಗಳ ನಿಷೇದ ಸಂಘಟನೆ)

13, NSG ಯನ್ನು ವಿಸ್ತರಿಸಿ.

Nuclear Supplier Group

14. ಬಂಗಬಂದು ಎಂದು ಯಾರನ್ನು ಕರೆಯುತ್ತಾರೆ ?

ಶೇಕ್ ಮುಜಿಬುರ್ ರೆಹಮಾನ್

15. IPKF ವಿಸ್ತರಿಸಿ.

ಭಾರತೀಯ ಶಾಂತಿಪಾಲನಾ ಪಡೆ.

II, ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಭಾರತದ ವಿದೇಶಾಂಗ ನೀತಿಯನ್ನು ವ್ಯಾಖ್ಯಾನಿಸಿ.

ಭಾರತದ ವಿದೇಶಾಂಗ ನೀತಿ ಹೊರಗಿನದಲ್ಲಿ ಇದು ಸಂಪೂರ್ಣವಾಗಿ ಭಾರತದ ವಾಸ್ತವಗಳಲ್ಲಿ ನೆಲೆಗೊಂಡಿದೆ. (ಐ.ಕೆ. ಗುಜ್ರಾಲ್).

2. ಭಾರತದ ವಿದೇಶಾಂಗ ನೀತಿಯ 2 ಮೂಲಗಳನ್ನು ಬರೆಯಿರಿ.

ಬೌದ್ಧ ಸಾಹಿತ್ಯ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿನ ಸಪ್ತಾಂಗದ ಸಿದ್ಧಾಂತದ ಮಿತ್ರ ಅಥವಾ ಸಂಬಂಧ.

3. ಭಾರತದ ವಿದೇಶಾಂಗ ನೀತಿಗೆ ಕೊಡುಗೆ ನೀಡಿದ ಇಬ್ಬರು ನಾಯಕರನ್ನು ಹೆಸರಿಸಿ.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸಿ. ರಾಜಗೋಪಾಲಚಾರಿ, ವಿ.ಕೆ. ಕೃಷ್ಣಮೆನನ್.

4. ಯಾವುದಾದರೂ 2 N A M ಸ್ಥಾಪಕ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ.

ಇಂಡೋನೇಶಿಯಾ, ಯುಗೋಸ್ಲಾನಿಯಾ, ಘಾನ್ಸ್

5. ಯಾವುದಾದರೂ 2 ಪಂಚಶೀಲ ತತ್ವಗಳನ್ನು ತಿಳಿಸಿ.

 • ಪರಿಸರ ದೇಶಗಳ ನಡುವಿನ ಪ್ರಾದೇಶಿಕ ಐಕ್ಯತೆ ಮತ್ತು
 • ಸಾರ್ವಭೌಮತ್ವವನ್ನು ಗೌರವಿಸುವುದು.
 • ಪರಸ್ಪರ ದಾಳಿ ಮಾಡದಿರುವುದು.
 • ಶಾಂತಿಯುತ ಸಹಬಾಳ್ವೆ,

6. ಯಾವುದಾದರೂ 2 ಮಿಲಿಟರಿ ಬಣಗಳನ್ನು ಹೆಸರಿಸಿ.

NATO, SEATO, ANZUS, CENTO

7. N.S.G ಸೇರಿದ 2 ಗುಂಪುಗಳನ್ನು ಹೆಸರಿಸಿ.

ರಷ್ಯಾ, ಜಪಾನ್, ಆಸ್ಟ್ರೇಲಿಯಾ

8. ಪಂಚಶೀಲ ತತ್ವಕ್ಕೆ ಸಹಿ ಹಾಕಿದವರಾರು ?

ಭಾರತದ ಪ್ರಧಾನಿ ನೆಹರೂ, ಚೈನಾದ ಪ್ರಧಾನಿ ಚೌಎನ್‌ಲೈ

9. ತಾಷ್ಕೆಂಟ ಒಪ್ಪಂದದಲ್ಲಿ ಸಹಿ ಹಾಕಿದವರಾರು ?

ಭಾರತದ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅಯೂಬ್ ಖಾನ್

10.‌ ಶಿಮ್ಲಾ ಒಪ್ಪಂದದಲ್ಲಿ ಸಹಿ ಹಾಕಿದವರಾರು ?

ಇಂದಿರಾಗಾಂಧಿ ಮತ್ತು ಝಡ್.ಎ.ಭುಟ್ಟೋ.

11. ಬಾಂಗ್ಲಾದೇಶದ ವಿಮೋಚನೆಗೆ 2 ಕಾರಣಗಳನ್ನು ಬರೆಯಿರಿ.

ಭಾರತ ನೀಡಿದ ಬೆಂಬಲ ಮತ್ತು ಮೆರೆದ ಉದಾರತೆ.

12. ಶ್ರೀಲಂಕಾದ 2 ಉಗ್ರಗಾಮಿ ಸಂಘಟನೆಗಳನ್ನು ಹೆಸರಿಸಿ.

TULF, LITE

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ.

1. ಭಾರತದ ವಿದೇಶಾಂಗ ನೀತಿಯ ಪ್ರಾಮುಖ್ಯತೆಯನ್ನು ವಿವರಿಸಿ.

 • ಭಾರತದ ವಿದೇಶಾಂಗ ನೀತಿಯನ್ನು ರೂಪಿಸಿದವರು ಪಂಡಿತ್ ಜವಾಹರಲಾಲ್ ನೆಹರೂರವರು.
 • ವಿದೇಶಾಂಗ ನೀತಿ ಎಂದರೆ ಒಂದು ರಾಷ್ಟ್ರವು ತನ್ನ ಗಡಿಯಿಂದಾಚೆ ಇರುವ ರಾಷ್ಟ್ರಗಳ ಜೊತೆ ವ್ಯವಹರಿಸುವಾಗ ಅದು ಅನುಸರಿಸುವ ನೀತಿಯ ವಿದೇಶಾಂಗ ನೀತಿ,
 • ಭಾರತವು ತನ್ನದೇ ಆದ ವಿದೇಶಾಂಗ ನೀತಿಯನ್ನು ಹೊಂದಿದ್ದು ಇದರ ಮೂಲ ಉದ್ದೇಶವೆಂದರೆ ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು. ರಾಷ್ಟ್ರಗಳ ಸಹಬಾಳ್ವೆ ಆರ್ಥಿಕ ಬೆಳವಣಿಗೆ, ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಹಾಗೂ ಎಲ್ಲ ದೇಶಗಳಿಗೂ ನ್ಯಾಯ ದೊರಕಿಸಿ ಕೊಡುವ ಮಹತ್ವದ ಗುರಿಗಳನ್ನು ಹೊಂದಿದೆ.
 • ಭಾರತ ತನ್ನ ವಿದೇಶಿ ವ್ಯವಹಾರಗಳಲ್ಲಿ ಅಂತರರಾಷ್ಟ್ರೀಯ ಕಾನೂನನ್ನು ಗೌರವಿಸಿ, ವಿಶ್ವದ ವಿವಾದಗಳನ್ನು ಶಾಂತಿ ಮಾರ್ಗದಲ್ಲಿ ಬಗೆಹರಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುತ್ತದೆ.
 • ಬಾಹ್ಯ ಪರಮಾಧಿಕಾರ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ.
 • ಭಾರತದ ವಿದೇಶಿ ನೀತಿಯು ದೇಶದ ನೈತಿಕ ತತ್ವಗಳು ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಹತ್ವದ ಉದ್ದೇಶವೊಂದಿ ರೂಪಿತವಾಗಿದೆ.
 • ಇದು ಗಾಂಧೀಜಿಯವರ ಪ್ರಮುಖ ಚಿಂತನೆಗಳಾದ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನೊಳಗೊಂಡಿದೆ.
 • ದೇಶದ ಆರ್ಥಿಕ ಬೆಳವಣಿಗೆ ಮತ್ತು ಐಕ್ಯತೆಯನ್ನು ಸಾಧಿಸುವ ರಾಜಕೀಯ ಸ್ಥಿರತೆ ಹಾಗೂ ರಷ್ಯಾದ ಆರ್ಥಿಕ ಅಭಿವೃದ್ಧಿ ಸಾಧಿಸುವ ಗುರಿ ಹೊಂದಿದೆ.
 • ದಕ್ಷಿಣ ಏಷ್ಯಾದಲ್ಲಿ ಸೌಹಾರ್ದಯುತ ಸ್ನೇಹ ಸಂಬಂಧ ಸಹಕಾರ ಬೆಳೆಸಿ ನೆರೆಯ ರಾಷ್ಟ್ರಗಳ ಹಿತಾಸಕ್ತಿ ರಕ್ಷಿಸುವ ಗುರಿ ಹೊಂದಿದೆ.
 • ಪ್ರಪಂಚದ ಯಾವುದೇ ಭಾಗದಲ್ಲಿ ಸಾಮ್ರಾಜ್ಯಶಾಹಿ, ವಸಾಹತುಶಾಹಿ, ಜನಾಂಗೀಯ ತಾರತಮ್ಯ, ಮಿಲಿಟರಿ ಆಡಳಿತಗಳ ದಬ್ಬಾಳಿಕೆಗಳನ್ನು ವಿರೋಧಿಸುವ ಗುರಿ ಹೊಂದಿ ಪ್ರಜಾಪ್ರಭುತ್ವ ಹೋರಾಟಗಳು ಮತ್ತು ರಾಷ್ಟ್ರಗಳ ಸ್ವಾತಂತ್ರ ಹೋರಾಟಗಳಲ್ಲಿ ಪ್ರೋತ್ಸಾಹಿಸುತ್ತದೆ.
 • ಪ್ರಪಂಚದಲ್ಲಿ ಸಮಾನತೆಯ ಆಧಾರದ ಮೇಲೆ ಮಾನವೀಯ ವ್ಯವಸ್ಥೆ ಸಮಾಜ ನಿರ್ಮಿಸಲು ಮತ್ತು ಪ್ರಜಾಸತ್ತಾತ್ಮಕ ಮೂಲ ತತ್ವಗಳಾದ ಮಾನವ ಹಕ್ಕುಗಳು ಹಾಗೂ ಆದರ್ಶಗಳನ್ನು ಜಾರಿಗೊಳಿಸುವ ಗುರಿ ಹೊಂದಿದೆ.
 • ಎಲ್ಲ ದೇಶಗಳು ಸಮಾನ ಅವಕಾಶಗಳನ್ನು ಪಡೆದು ಪ್ರಗತಿ ಸಾಧಿಸಬೇಕೆಂಬ ಆಶಯವನ್ನು ಹೊಂದಿರುವು ದರಿಂದ ಭಾರತದ ವಿದೇಶಾಂಗ ನೌಕೆಯು ಜಗತ್ತಿನ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿದೆ. (ಮಾ-16,17,19)
 • ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳನ್ನು ವಿವರಿಸಿ. ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಎಂದು ಪಂಡಿತ್ ಜವಾಹರಲಾಲ್‌ ನೆಹರೂರವರನ್ನು ಕರೆಯಲಾಗಿದೆ.
 • ಭಾರತದ ವಿದೇಶಾಂಗ ನೀತಿಯನ್ನು ರೂಪಿಸಲು ಗಾಂಧೀಜಿ, ಸಿ. ರಾಜಗೋಪಲಚಾರಿ, ವಿ.ಕೆ. ಕೃಷ್ಣಮೆನನ್, ರಾಮಮನೋಹರ ಲೋಹಿಯಾ ರವರ ನೇತೃತ್ವದಲ್ಲಿ ವಿದೇಶಾಂಗ ವ್ಯವಹಾರಗಳ ವಿಭಾಗವನ್ನು ಸ್ಥಾಪಿಸಲಾಗಿತ್ತು.

ಇವರಿಂದ ರೂಪಿತವಾದ ಭಾರತದ ವಿದೇಶಾಂಗ ನೀತಿಯು ತನ್ನದೇ ಆದ ಮೂಲತತ್ವಗಳನ್ನೊಳಗೊಂಡಿದೆ. ಅವುಗಳೆಂದರೆ,

 1. ಅಲಿಪ್ತ ನೀತಿ
 2. ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿಗೆ ವಿರುದ್ಧ
 3. ವಿಶ್ವ ಸಂಸ್ಥೆಯಲ್ಲಿ ನಂಬಿಕೆ
 4. ಗುರಿ ಮತ್ತು ಮಾರ್ಗ
 5. ವರ್ಣಬೇಧ ಮತ್ತು ಜನಾಂಗೀಯ ತಾರತಮ್ಯ ವಿರೋಧ
 6. ಪಂಚಶೀಲ
 7. ಕಾಮನವೆಲ್ತ್ ದೇಶಗಳೊಂದಿಗೆ ಒಪ್ಪಂದ
 8. ನಿಶಸ್ತ್ರೀಕರಣ
 9. ವಿಭಜಿತ ರಾಷ್ಟ್ರಗಳ ಬಗ್ಗೆ ಸಹಾನುಭೂತಿ
 10. ಚಿಕ್ಕ ರಾಷ್ಟ್ರಗಳ ಬಗ್ಗೆ ಒಲವು

2. ಭಾರತ ಮತ್ತು ಅಮೇರಿಕಾ ಸಂಬಂಧಗಳನ್ನು ವಿವರಿಸಿ.

 • ಭಾರತ ಮತ್ತು ಅಮೇರಿಕಾ ದೇಶಗಳ ಸಂಬಂಧ ಪ್ರಪಂಚದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಶಾಹಿಯಷ್ಟೇ ಹಳೆಯದಾಗಿದೆ. ಭಾರತದ ಸ್ವಾತಂತ್ರ್ಯ ಚಳುವಳಿಯು ಅಮೇರಿಕಾದ ವಸಾಹತು ಇತಿಹಾಸದಿಂದ ಪ್ರಭಾವಿತವಾಗಿದೆ.
 • ಭಾರತದ ಸ್ವಾತಂತ್ರ್ಯಕ್ಕೆ ಸಹಕಾರಿಯಾಗುವಂತೆ 1942 ರ ಕ್ರಿಪ್ಟ್ ಸಮಿತಿಯ ಒಪ್ಪಂದಕ್ಕೆ ಅಮೇರಿಕಾದ ಅಧ್ಯಕ್ಷ ರೂಸ್‌ಬೆಲ್‌ರವರು ನೀಡಿದ ಕೊಡುಗೆ ಸ್ವಾತಂತ್ರ್ಯ ಚಳುವಳಿಯ ನಾಯಕರಲ್ಲಿ ಮಹತ್ವದ ಗೌರವಕ್ಕೆ ಪಾತ್ರವಾದುದಾಗಿದೆ. ಅಲ್ಲದೆ ನೆಹರೂರವರು ಅಮೇರಿಕಾಕ್ಕೆ ನೀಡಿದ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಅಮೇರಿಕಾ ದೇಶಗಳ ಸಂಬಂಧದ ಬೆಳವಣಿಗೆಗೆ ಸಕಾರಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
 • ಈ ಐತಿಹಾಸಿಕ ಹಿನ್ನೆಲೆ ಸಕಾರಾತ್ಮಕ ಸಂಬಂಧಗಳನ್ನು ಸಾಧಿಸಿದೆ.
 • ಆರ್ಥಿಕ ಸಂಬಂಧಗಳು : ಅಮೇರಿಕಾ ದೇಶವು 1950 ರಲ್ಲಿ ಟ್ರಮಟ್‌ರವರ 4 ಅಂಶಗಳ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕ ಸಹಾಯ ನೀಡಿತು. 1951 ರಲ್ಲಿ ಭಾರತದ ಬರ ಪರಿಸ್ಥಿತಿಯನ್ನು ನಿಭಾಯಿಸಲು ಸಹಕಾರಿಯಾಗುವಂತೆ ಗೋದಿಯ ನೆರವನ್ನು ಘೋಷಿಸಿತು.
 • 1956 ರಲ್ಲಿ PAL 480 ಅಡಿಯಲ್ಲಿ ನೀಡಿದ ಸರಕು ರೂಪದ ಸಹಾಯ ನೀಡಿತು. ಇದನ್ನು ಹಣದ ರೂಪದಲ್ಲಿ ಭಾರತ ಮರುಪಾವತಿ ಮಾಡಬೇಕಾಗಿತ್ತು. ಯುನೈಟೆಡ್ ಸ್ಟೇಟ್ಸ್ ಏಜನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್‌ಮೆಂಟ್ ಮೇಲ್ವಿಚಾರಣೆಯಲ್ಲಿ (USAID) ಭಾರತಕ್ಕೆ ಅಭಿವೃದ್ಧಿ ಸಾಲ ನೀಡಿತು.
 • ಇತ್ತೀಚಿನ ವರ್ಷಗಳಲ್ಲಿ ಭಾರತ ಜಾಗತಿಕ ಆರ್ಥಿಕತೆಯೊಂದಿಗೆ ತನ್ನ ಆರ್ಥಿಕ ನೀತಿಯನ್ನು ಉದಾರಗೊಳಿಸಲು ನಿರ್ಧರಿಸಿತು. ಭಾರತದ ಆರ್ಥಿಕ ಅಭಿವೃದ್ಧಿ ದರವು ಅಮೇರಿಕಾ ದೇಶವನ್ನು ತನ್ನ ಆರ್ಥಿಕ ಪಾಲುದಾರನಾಗಿ ಆಕರ್ಷಿಸುವಂತೆ ಮಾಡಿದೆ.

ಮಿಲಿಟರಿ ಸಂಬಂಧಗಳು : ಜಾಗತಿಕ ಮಟ್ಟದಲ್ಲಿ ಸಮತಾವಾದಿ ಸಿದ್ಧಾಂತದ ಪ್ರಭಾವವನ್ನು ಕಡಿಮೆ ಮಾಡುವ ಉದ್ದೇಶದಿಂದ 1962 ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಅಮೇರಿಕಾ ನೆರವು ನೀಡಿತು.

ಭಾರತ ಮತ್ತು ಅಮೇರಿಕಾ ಅಣು ಒಪ್ಪಂದ : ಅಮೇರಿಕಾ ಮತ್ತು ಭಾರತವು 2006 ರ ಅಣು ಪ್ರತ್ಯೇಕತಾ ಒಪ್ಪಂದಕ್ಕೆ ಸಹಿ ಹಾಕಿದವು. ಉದಾ : ನಾಗರೀಕ ಅಣುಸ್ಥಾವರಗಳು ಮತ್ತು ಮಿಲಿಟರಿ ರಕ್ಷಣಾ ಅಣು ಸ್ಥಾವರಗಳ ನಡುವೆ ಪ್ರತ್ಯೇಕತೆ. 2014 ರ ವೇಳೆಗೆ ಸಂಪೂರ್ಣಗೊಳ್ಳಬೇಕು. ಈ ಒಪ್ಪಂದದ ಪ್ರಕಾರ ಅಮೇರಿಕಾ ಭಾರತಕ್ಕೆ ಯುರೇನಿಯಂ ಪೂರೈಸುತ್ತಿದೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು : ಭಾರತ ಮತ್ತು ಅಮೇರಿಕಾ ತುಂಬಾ ನಿಕಟವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ. ಉದಾ: ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೋರ್ಡ ಫೌಂಡೇಷನ್ ತನ್ನ ನೆರವನ್ನು ನೀಡಿದರೆ ಎರಡು ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ವೈಜ್ಞಾನಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಉತ್ತಮ ಸಹಕಾರವಿದೆ.

ಇತ್ತೀಚಿನ ಪರಸ್ಪರ ಭೇಟಿಗಳು : ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿಯವರು ಅಮೇರಿಕಾಕ್ಕೆ ನೀಡಿದ ಭೇಟಿಯಿಂದಾಗಿ ಅಮೇರಿಕಾವು ಭಾರತವನ್ನು ಕೇವಲ ಸ್ಥಿರ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆ ಮಾತ್ರವಲ್ಲ. ಹಾಗೇಯೆ ಜಾಗತಿಕ ಮಟ್ಟದಲ್ಲಿ ಅವಿಭಾವಿಸಕ್ತಿ ರೂಪ ಬೃಹತ್‌ ಆರ್ಥಿಕ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ನಿರ್ಧರಿಸಿದೆ.

3. ಭಾರತ ಮತ್ತು ರಷ್ಯಾದ ಸಂಬಂಧಗಳನ್ನು ವಿವರಿಸಿ.

ಭಾರತ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಡುವಿನ ಸಂಬಂಧಗಳು ಐತಿಹಾಸಿಕವಾದುದ್ದಾಗಿದೆ. ಭಾರತ ಮತ್ತು ಸೋವಿಯತ್ ಸಂಬಂಧವನ್ನು ಸಾಂಪ್ರದಾಯಕವಾದದ್ದು” ಜನತೆ, ಜನತೆಯ ನಡುವಿನ ಸಂಬಂಧ, ವಿದೇಶಾಂಗ ನೀತಿಯ ತಳಹದಿ ಎಂಬುದಾಗಿ ಘೋಷಿಸಿತು. ಇದರಿಂದ ಭಾರತದ ತಂತ್ರಜ್ಞಾನ ಮತ್ತು ಕೈಗಾರಿಕಾಭಿವೃದ್ಧಿಗೆ ರಷ್ಯಾವು ಮಹತ್ತರ ಕೊಡುಗೆ ನೀಡಿದೆ. ಕಾಶ್ಮೀರ ಮತ್ತು ಗೋವಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸೋವಿಯತ್ ಒಕ್ಕೂಟ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ನೀಡಿದ ಬೆಂಬಲ ಗಣನೀಯವಾದುದಾಗಿದೆ.

1971 ರಲ್ಲಿ ಪಾಕಿಸ್ತಾನ ಮತ್ತು ಭಾರತದ ಯುದ್ಧದ ಸಮಯದಲ್ಲಿ ಭದ್ರತಾ ಮಂಡಳಿಯಲ್ಲಿ ತನ್ನ ವೀಟೋ ಅಧಿಕಾರವನ್ನು ಚಲಾಯಿಸಿ ಭಾರತದ ನಿಲುವನ್ನು ಬೆ೦ಬಲಿಸಿದ ಸೋವಿಯತ್ ನಿರ್ಧಾರ ಮಹತ್ತರವಾದುದಾಗಿದೆ. ಈ ಎರಡು ದೇಶಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ 20 ವರ್ಷಗಳ ದೀರ್ಘ ಕಾಲದ ಸ್ನೇಹಯುತ ಒಪ್ಪಂದವನ್ನು ಮಾಡಿಕೊಂಡಿದೆ.

ಒಪ್ಪಂದಕ್ಕೆ ಕಾರಣಗಳು :

 1. ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸುವುದು ಉತ್ತಮವೆಂದು ಈ ಎರಡು ರಾಷ್ಟ್ರಗಳ ನಿರ್ಧಸುವುದು.
 1. ಅಂತರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಯುತ ಕ್ರಮದ ಮೂಲಕವೇ ರಾಷ್ಟ್ರೀಯ ಸ್ವಾತಂತ್ರ ಮತ್ತು ಸಾಮಾಜಿಕ ಸಮಾನತೆ ಸಾಧ್ಯವೆಂಬುದು ಎರಡು ದೇಶಗಳ ನಂಬಿಕೆ.
 2. ಪ್ರಪಂಚದಾದ್ಯಂತ ಸ್ವತಂತ್ರ ಹೋರಾಟಗಳಿಗೆ ಉಭಯ ರಾಷ್ಟ್ರಗಳ ಬೆಂಬಲ.
 3. ವಸಾಹತುಶಾಹಿ, ಸಾಮ್ರಾಜ್ಯಶಾಹಿ, ಜನಾಂಗೀಯ ತಾರತಮ್ಯಗಳನ್ನು ಎರಡೂ ದೇಶಗಳು ವಿರೋಧಿಸಿದವು. ಭಾರತ ಮತ್ತು ರಷ್ಯಾ ಪಾಲುಗಾರಿಕೆ
 4. 20ನೇ ಶತಮಾನದಲ್ಲಿ ಭಾರತ ಮತ್ತು ರಷ್ಯಾ ತಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ರೂಪ ಕೊಡಲು ನಿರ್ಧರಿಸಿದವು. ಉಭಯ ದೇಶಗಳ ಪರಸ್ಪರ ಭೇಟಿಗಳು, ವ್ಯಾಪಾರ, ವ್ಯವಹಾರಗಳು ನಡೆಯುತ್ತವೆ. ಸೋವಿಯತ್ ಒಕ್ಕೂಟ ಛಿದ್ರಗೊಂಡನಂತರ ರಷ್ಯಾ UNO ದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ.

ಭಾರತ ರಷ್ಯಾ ನಡುವಿನ ಒಪ್ಪಂದಗಳು :

 • 1993 ರ ರೂಪಾಯಿ-ರೂ.ಬೆಲ್ ಒಪ್ಪಂದದ ಪ್ರಕಾರ ರಷ್ಯಾ ಭಾರತಕ್ಕೆ ನಿರಂತರವಾಗಿ ಯಾವ ಸಾಮಗ್ರಿಗಳನ್ನು ಪೂರೈಸುವುದು.
 • 1994 ರಲ್ಲಿ 2 ದೇಶಗಳು ವ್ಯಾಪಾರಿ ಒಪ್ಪಂದಕ್ಕೆ ಸಹಿ ಹಾಕಿದವು.
 • ಉಭಯ ರಾಷ್ಟ್ರಗಳು ಭಯೋತ್ಪಾದನೆ, ಸಂಘಟಿತ ಅಪರಾಧ ಮತ್ತು ಕಾನೂನು ಬಾಹಿರ ಶಸ್ತ್ರಾಸ ವ್ಯವಹಾರಗಳಿಗೆ ಮಟ್ಟ ಹಾಕುವಲ್ಲಿ ತೀವ್ರತೆಗೊಳಿಸಿವೆ.
 • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISSC)
 • ಮತ್ತು ರಷ್ಯಾದ ಗ್ಲಾವ್‌ಕಾಸ್ಮಾಸ್‌ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತಕ್ಕೆ ಈ ಯೋಜನೆ ಎಂಜಿನ್ ಪೂರೈಕೆ ಮತ್ತು ತಂತ್ರಜ್ಞಾನ ಪಡೆಯಲಾಯಿತು.
 • ಪರಸ್ಪರ ಹಿತಾಸಕ್ತಿಗಳ ರಕ್ಷಣೆಗಾಗಿ ಎರಡು ದೇಶಗಳು ಜಂಟಿಯಾಗಿ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಲು ಒಪ್ಪಿದವು.
 • ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್‌ರವರ ರಷ್ಯಾ ಭೇಟಿಯ ಸಂದರ್ಭದಲ್ಲಿ ಮುಂದಿನ 20 ವರ್ಷಗಳವರಗೆ 2 ದೇಶಗಳಿಗೆ ಮಾರ್ಗದರ್ಶಿಯಾಗುವುದಕ್ಕೆ ಸ್ನೇಹ ಮತ್ತು ಸಹಕಾರದ ಹೊಸ ಒಪ್ಪಂದವನ್ನು ಸಿದ್ಧಪಡಿಸಲಾಯಿತು.
 • ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವ ಪಡೆಯಲು ಭಾರತದಲ್ಲಿ ರಷ್ಯಾ ನಿರಂತರವಾಗಿ ಬೆಂಬಲಿಸುತ್ತದೆ.
 • 2013 ರಲ್ಲಿ ಮಾಸ್ಕೋದಲ್ಲಿ ನಡೆದ 14ನೇ ಭಾರತ ರಷ್ಯಾ ದ್ವಿಪಕ್ಷೀಯ ಸಂಬಂಧಗಳ ವಾರ್ಷಿಕ ಶೃಂಗ ಸಭೆಯಲ್ಲಿ ಡಾ|| ಮನಮೋಹನಸಿಂಗ್‌ ಭಾಗವಹಿಸಿದ್ದರು. ಇದು 2 ದೇಶಗಳ ನಡುವೆ ಒಪ್ಪಂದಗಳನ್ನು ಬಲಪಡಿಸಲು ಸಹಕಾರಿಯಾಯಿತು. ಪುಟಿನ್ ಮತ್ತು ಪ್ರಧಾನಿ ಸಿಂಗ್ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದರು.
 • ಮುಖ್ಯವಾಗಿ ರಕ್ಷಣಾ ಪಾಲುದಾರಿಕೆಯಲ್ಲಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಇಂಧನ ಘಟಕಗಳ ಪ್ರಾರಂಭಕ್ಕೆ ನಿರ್ಧಾರ ಕೈಗೊಂಡು ತಮಿಳುನಾಡಿನ ಕೂಡನ್‌ಕುಲಂ ಎಂಬಲ್ಲಿ 3-4,
 • 4ನೇ ಅಣು ಇಂಧನ ಘಟಕಗಳ ಪ್ರಾರಂಭಕ್ಕೆ ನಿರ್ಧರಿಸ ಲಾಯಿತು. ಹಾಗೆಯೇ 2 ಗ್ಲೋನಾಡ್ ಗೌಂಡ್ ಕ್ರಂಟ್ರೋಲ್ ಸೆಕ್ಷನ್‌ಗಳನ್ನು ಭಾರತದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಲಾಯಿತು.
 • ಎಲ್ಲಾ ಬೆಳವಣಿಗೆಗಳು ರಷ್ಯಾ ದೇಶವು ಭಾರತದ ಪ್ರಮುಖ ಪಾಲುದಾರನಾಗಿ ಇದರ ಸರ್ವತೋಮುಖ ಬೆಳವಣಿಗೆಗೆ ನಿರಂತರವಾಗಿ ಜೊತೆಗಿರುತ್ತದೆ ಎಂಬ ನಂಬಿಕೆಯನ್ನು ಬಲಪಡಿಸುತ್ತದೆ.

4. ಭಾರತ ಮತ್ತು ಪಾಕಿಸ್ತಾನ ದೇಶಗಳ ಸಂಬಂಧದಲ್ಲಿ ಕಾಶ್ಮೀರದ ಸಮಸ್ಯೆಯನ್ನು ಕುರಿತು ಬರೆಯಿರಿ.

(ಮಾ-2015,17,18,19,) ಭಾರತದ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಹದಗೆಡಲು ಪ್ರಮುಖ ಕಾರಣವೆಂದರೆ ಕಾಶ್ಮೀರದ ಸಮಸ್ಯೆ. ಭಾರತದ ದೃಷ್ಟಿಕೋನದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಆದರೆ ಪಾಕಿಸ್ತಾನದ ಪ್ರಕಾರ ಇದೊಂದು ಸಮಸ್ಯೆಯಿಂದ ಕೂಡಿದ ಪ್ರದೇಶ. ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಗಿರುವುದರಿಂದ ಹಾಗೂ ಮುಸ್ಲಿಂ ಜನಸಂಖ್ಯೆಯೇ ಅತಿ ಹೆಚ್ಚಾಗಿರುವುದರಿಂದ ಕಾಶ್ಮೀರ ಪಾಕಿಸ್ತಾನದ ಭಾಗವೆಂಬುದು ಪಾಕಿಸ್ತಾನದ ವಾದ.

ಮಹತ್ವದ ಒಪ್ಪಂದಗಳು :

 • ಭಾರತ ಮತ್ತು ಪಾಕಿಸ್ತಾನಗಳ ನಡುವೆ 1966 ಮತ್ತು 1971 ರಲ್ಲಿ ಸಂಭವಿಸಿದ ಯುದ್ಧಗಳ ನಂತರ ಎರಡು ದೇಶಗಳು ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 1966 ರಲ್ಲಿ ಭಾರತದ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಹಾಗೂ ಅಯೂಬ್‌ಖಾನ್ ನಡುವೆ ತಾಷ್ಠೆಂಟಾ ಒಪ್ಪಂದವಾಯಿತು.
 • 1972 ರಲ್ಲಿ ಸಿವಾ ಒಪ್ಪಂದದಲ್ಲಿ ಪ್ರಧಾನಿ ಇಂದಿರಾಗಾಂಧಿ ಮತ್ತು ಪಾಕ್‌ ಪ್ರಧಾನಿ ಝಡ್ ಎ ಭುಟೋರವರು ಉಭಯ ದೇಶಗಳ ನಡುವಿನ ಎಲ್ಲ ಸಮಸ್ಯೆಗಳನ್ನು ದ್ವಿಪಕ್ಷೀಯ ಒಪ್ಪಂದದ ಶಾಂತಿಯುತ ಮಾರ್ಗಗಳ ಮೂಲಕ ಪರಿಹರಿಸಿಕೊಳ್ಳಲು ನಿರ್ಧರಿಸಲಾಯಿತು.
 • 1988 ರಲ್ಲಿ 2 ದೇಶಗಳ ಅಣುಶಕ್ತಿ ಘಟಕಗಳು ಹಾಗೂ ಇತರೆ ಸೌಲಭ್ಯಗಳನ್ನು ಗುರಿಯಾಗಿಸಿ ಪರಸ್ಪರರು ದಾಳಿ ಮಾಡದಂತೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.
 • ಆದರೆ ಪಾಕಿಸ್ಥಾನ 1999ರಲ್ಲಿ ಚಾಕ್ಷೆ ಪರ್ವತದಲ್ಲಿ ಅಣುಪರೀಕ್ಷೆ ನಡೆಸಿತು.

FAQ

1. ಭಾರತದ ವಿದೇಶಾಂಗ ನೀತಿಯ ಪಿತಾಮಹ ಯಾರು ?

ಜವಾಹರಲಾಲ್ ನೆಹರೂ

2.‌ ಶಿಮ್ಲಾ ಒಪ್ಪಂದದಲ್ಲಿ ಸಹಿ ಹಾಕಿದವರಾರು ?

ಇಂದಿರಾಗಾಂಧಿ ಮತ್ತು ಝಡ್.ಎ.ಭುಟ್ಟೋ.

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *