8th Standard Kannada Talakadina Vaibhava | ತಲಕಾಡಿನ ವೈಭವ ಪಾಠ ನೋಟ್ಸ್

8th Standard Kannada Talakadina Vaibhava | ತಲಕಾಡಿನ ವೈಭವ ಪಾಠ ನೋಟ್ಸ್

8th Standard Kannada Talakadina Vaibhava, ತಲಕಾಡಿನ ವೈಭವ ಪಾಠ ನೋಟ್ಸ್, 8th class kannada talakadina vaibhava question answers notes, lesson pdf Kannada Deevige

ತಲಕಾಡಿನ ವೈಭವ (ಗದ್ಯ-3)

೩. ತಲಕಾಡಿನ ವೈಭವ –                    ಹೋರೇಮಲ್ಲೂರು  ಈಶ್ವರನ್

Talakadina Vaibhava Kavi Parichay Kannada Deevige

ಕೃತಿಕಾರರ ಪರಿಚಯ

ಹಿರೇಮಲ್ಲೂರು ಈಶ್ವರನ್ (11 .01.1922 -22.06.1998) ಅವರ
ಊರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು.
ಸಮಾಜಶಾಸ್ತ್ರಜ್ಞ  ದ ಇವರು ಅಂತಾರಾಷ್ಟ್ರೀಯ ಪುರಸ್ಕೃತ ಸಾಹಿತಿ. ಕವಿ
ಕಂಡ ನಾಡು (ಪ್ರವಾಸ ಕಥನ), ವಿಷನಿಮಿಷಗಳು, ಭಾರತದ ಹಳ್ಳಿಗಳು, ವಲಸೆ
ಹೋದ ಕನ್ನಡಿಗನ ಕತೆ, ಹಾಲಾಹಲ, ರಾಜಾರಾಣಿ ದೇಖೋ, ಶಿವನ ಬುಟ್ಟಿ,
ತಾಯಿನೋಟ ಮೊದಲಾದವು ಇವರ ಕೃತಿಗಳು. ಶ್ರೀಯುತರ ಹರಿಹರನ
ಕೃತಿಗಳು ಒಂದು ಸಂಖ್ಯಾನಿರ್ಣಯ ಮಹಾಪ್ರಬಂಧಕ್ಕೆ ಡಾಕ್ಟರೇಟ್
ದೊರಕಿದೆ.
ಹಿರೇಮಲ್ಲೂರು ಈಶ್ವರನ್ ಅವರ ಕವಿಕಂಡ ನಾಡು ಪ್ರವಾಸ ಕಥನ
(ಪುಟ-01- 20) ದಿಂದ ಪ್ರಕೃತ ಭಾಗವನ್ನು ಆರಿಸಿ ಸಂಪಾದಿಸಿ
ನಿಗದಿಪಡಿಸಿದೆ.

ಆಶಯ ಭಾವ

ಕರ್ನಾಟಕ, ಶ್ರೀಗಂಧ ಮತ್ತು ಚಂದನಗಳ ನಾಡು; ಚಿನ್ನದ ಖನಿ ಎಂಬ ಪ್ರತೀತಿ ಇದೆ. ಚಾಲುಕ್ಯ, ಹೊಯ್ಸಳ
ಮುಂತಾದ ಶೈಲಿಗಳ ದೇವಾಲಯಗಳು ಹೇರಳವಾಗಿರುವುದರಿಂದ ಕರ್ನಾಟಕ ದೇವಾಲಯಗಳ ನಾಡೂ ಹೌದು.
ಕರ್ನಾಟಕದ ತಲಕಾಡು ಪ್ರಕೃತಿ ಸೌಂದರ್ಯದಿಂದ  ಕೂಡಿರುವುದರ ಜತಗೆ ರಾಜಮನೆತನಗಳ ವೈಭವಗಳನ್ನೂ
ದೇವಾಲಯಗಳ ಸೌಂದರ್ಯವನ್ನೂ ಹೊಂದಿರುವುದು ವಿಶೇಷ. ಅದರಲ್ಲೂ ಪಂಚ ಶಿವಾಲಯಗಳು ಆಸ್ತಿಕರ
ಚಿತ್ತವನ್ನು ಗಮನಸೆಳೆಯುವಲ್ಲಿ ಮಹತ್ವದ ಪಾತ್ರವಹಿಸಿವೆ. ಪ್ರವಾಸಿಗರ, ಯಾತ್ರಾರ್ಥಿಗಳ, ವಾಸ್ತುತಜ್ಞರ ಕೇಂದ್ರಬಿAದು
ತಲಕಾಡಿನ ಚಿತ್ರಣವನ್ನು ಈ ಗದ್ಯಭಾಗ ಒಳಗೊಂಡಿದೆ.

ಪಾಠದ ಸಾರಾಂಶ.

Talakadina Vaibhava Summary in Kannada Kannada Deevige

ಲೇಖಕರು ೧೯೫೦ನೆಯ ಇಸವಿ ಅಕ್ಟೋಬರ್ ತಿಂಗಳು ಮಂಗಳವಾರ 20 ನೆಯ ತಾರೀಖು, ಶಿವನ ಸಮುದ್ರದ
ಪ್ರವಾಸಿಗರ ನಿಲ್‌ಮನೆಯಲ್ಲಿ ಕುಳಿತುಕೊಂಡು ಈ ದಿನದ ಪಯಣದ ವಿವರ ಬರೆಯುತ್ತಿದ್ದಾರೆ. ಈಗ ರಾತ್ರಿ ಹನ್ನೆರಡು
ಹೊಡೆದು ಹದಿನೈದು ನಿಮಿಷವಾಗಿದೆ. ಸುತ್ತಣ ಲೋಕವೆಲ್ಲ ಮಲಗಿಕೊಂಡಿದೆ. ಕನ್ನಡದ ಯಾತ್ರಿಕರು
ಮಲಗಿಕೊಂಡಿದ್ದಾರೆ. ಇಂದು ದಿನವೆಲ್ಲ ಅಲೆದು ಅಲೆದು ಅವರು ದಣಿದು ನಿದ್ರೆ ಹೋಗಿದ್ದಾರೆ.
ಶಿವನಸಮುದ್ರವನ್ನು ಒಳಸೇರುವ ಮುನ್ನವೇ ಬಾಗಿಲ ಬಳಿ ನಿಂತ ಸುಬ್ರಹ್ಮಣ್ಯಮ್ ಲೇಖಕರನ್ನು ವಿಶ್ವಾಸದಿಂದ
ಸ್ವಾಗತಿಸಿದರು. ನಿಲ್ಮನೆಯನ್ನು ಕೂಡಲೆ ಖಾಲಿ ಮಾಡಿಸಿದರು. ಹಾಸಿಗೆ ಹಾಸಿಕೊಟ್ಟರು. ಊಟ ಉಪಚಾರದ ಬಗ್ಗೆ
ಕೇಳಿ ‘ಗುಡ್‌ನಾಯಿಟ್’ ಹೇಳಿ ಹೋದನು. ಸುಬ್ರಹ್ಮಣ್ಯಮ್ ನೌಕರನೇನೋ ಅಹುದು. ಆದರೆ ಅವರಿತ್ತ ಸ್ವಾಗತ,

ವಿಶ್ವಾಸದ ನುಡಿ ನೆನೆದರೆ ಲೇಖಕರು ಸುಬ್ರಹ್ಮಣ್ಯನಿಗಿಂತ ನಾವು ಸಣ್ಣವರು ಎಂಬುದರಲ್ಲಿ ಸಂದೇಹವಿಲ್ಲ ಎಂದು
ಭಾವಿಸಿದರು.
ತಲಕಾಡಿನ ಇತಿಹಾಸದಲ್ಲಿ ಗಂಗರ ಇತಿಹಾಸ, ಜೈನಧರ್ಮದ ವಿವರಣೆ, ಕನ್ನಡ ಸಾಹಿತ್ಯದ ಕಥನ,
ಹೊಯ್ಸಳ ವಾಸ್ತುಶಿಲ್ಪದ ವಿವರಣೆ ಇದೆ. ಎಲ್ಲಕ್ಕೂ ಮಿಗಿಲಾಗಿ ಕನ್ನಡವೇ ಧರ್ಮ, ಕನ್ನಡವೇ ಬಾಳಿನ
ಪರಿಪೂರ್ಣತೆಯೆಂದು ಬಗೆದು ಅದಕ್ಕಾಗಿ ಹೋರಾಡಿ ಮಡಿದ ವೀರರ ಉಜ್ವಲ ಚರಿತ್ರೆ ಇದೆ. ಗಂಗರ ರಾಜ್ಯ
ಗಂಗವಾಡಿ ಎಂದು ಹೆಸರಾಗಿದೆ. ಅವರ ಮೊದಲ ರಾಜಧಾನಿ ಕೋಲಾರ. ಸುಮಾರು ಕ್ರಿ.ಶ. 500 ರ ಹೊತ್ತಿಗೆ
ಕೋಲಾರದಿಂದ ಹರಿವರ್ಮ ರಾಜಧಾನಿಯನ್ನು ತಲಕಾಡಿಗೆ ತಂದನು. ಹತ್ತನೆಯ ಶತಮಾನದವರೆಗೂ ಗಂಗರು ಆಳ್ವಿಕೆ
ನಡೆಸಿದರು.
ಮಾರಸಿಂಹ, ರಾಚಮಲ್ಲ, ರಕ್ಕಸಗಂಗರ ತಲಕಾಡು ಪುಣ್ಯಭೂಮಿ. ಅವರೊಂದಿಗೆ ಕೊನೆಯವರೆಗೂ ಒಂದು
ಹಿರಿಯ ಜೀವ ಚಾವುಂಡರಾಯ ಇದ್ದನು. ಆತ ಮಾರಸಿಂಹ, ರಾಚಮಲ್ಲ, ರಕ್ಕಸಗಂಗರ ಮಂತ್ರಿ. ಈ
ಚಾವುಂಡರಾಯನನ್ನು ಜನ ಹೆಸರು ಹಿಡಿದು ಕರೆಯುತ್ತಿರಲಿಲ್ಲ. ‘ರಾಯ’, ‘ಅಣ್ಣ’ ಎಂದು ಸಂಬೋಧಿಸುತ್ತಿದ್ದರು. ¸ಸ್ವತಃ 
ಕವಿಯಾಗಿದ್ದ ‘ಚಾವುಂಡರಾಯ ಪುರಾಣ’ ಎಂಬ ಪುಣ್ಯಪುರುಷರ ಚರಿತ್ರೆಇರುವ ಕೃತಿಯನ್ನು ಬರೆದಿದ್ದಾನೆ. ಇದು
ಅವನು ಕನ್ನಡಕ್ಕೆ ಕೊಟ್ಟ ಕಾಣಿಕೆ.
ಹತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಮುದುವೊಳಲಿನಿಂದ ತಂದೆತಾಯಿಯರಿಗೆ ಹೇಳದೆ
ಬಳೆಮಾರುವ ಉದ್ಯಮವನ್ನು ಕೃಷ್ಣಾ ತೀರದ ಮಳಲಿನಲ್ಲಿ ಮುಚ್ಚಿಟ್ಟು ತಲಕಾಡಿಗೆ ರನ್ನ ಓಡಿ ಬಂದನು. ಏನು ನಂಬಿ
ಬಂದ? ತಲಕಾಡಿನ ಮಣ್ಣನ್ನು! ಇಲ್ಲಿ ರಾಯನಿದ್ದಾನೆ. ಅತ್ತಿಮಬ್ಬೆ ಇದ್ದಾಳೆ. ಅಜಿತಸೇನ ಗುರುಗಳ ಶಿಷ್ಯವೃಂದವಿದೆ.
ಅದು ಕಲಾಶ್ರೀ ವಿಹರಿಸುವ ನಂದನವನ.
ಗಂಗವಾಡಿಯು ಹಬ್ಬಿ ಪ್ರಸಿದ್ಧಿಯಾಯಿತು. ಚೋಳ ದೇಶದ ಕಡೆಯಿಂದ ಬಿರುಗಾಳಿ ಬೀಸಿತು. ಚೋಳರು
ಬಂದರು. ಗುಡಿಗೋಪುರಗಳನ್ನು ಕಟ್ಟಿಸಿದರು . ರಾಜೇಶ್ವರ, ವೈಕುಂಠನಾರಾಯಣ, ಮರಳೇಶ್ವರ, ಪಾತಾಳೇಶ್ವರ ,
ವೈದ್ಯೇಶ್ವರ ಗುಡಿಗಳನ್ನು ಕಟ್ಟಿಸಿದರು. 1116, ವಿಷ್ಣುವರ್ಧನ ದೊರೆಯ ಆಳ್ವಿಕೆ ಪ್ರಾರಂಭವಾಯಿತು. ವಿಷ್ಣುವರ್ಧನನು
ವಿಕ್ರಮ ಚೋಳನ ಸೇನಾನಿ ಆದಿಯಮನನ್ನು ಯುದ್ಧದಲ್ಲಿ ಸೋಲಿಸಿ, ಹೊಯ್ಸಳರ ಕನ್ನಡ ಬಾವುಟವನ್ನು ಹಾರಿಸಿ,
ಗೆಲುವಿನ ಸ್ಮಾರಕವಾಗಿ ತಲಕಾಡಿನ ನೆಲದ ಮೇಲೆ ವಿಜಯನಾರಾಯಣನ ಗುಡಿಕಟ್ಟಿ ಮನೆಗೆ ಬಂದು ಗೆಲುವಿನ
ಕಥನವನ್ನು ಬಣ್ಣಿಸಿಯೇ ಬಣ್ಣಿಸಿದರು. ಹೊಯ್ಸಳರು ಹೋದ ನಂತರ ವಿಜಯನಗರದ ರಾಯರು ಬಂದರು.
ಮೈಸೂರಿನ ಒಡೆಯರು ಬಂದರು. ಆದರೆ ಯಾರು ಬಂದರೇನು? ಯಾರು ಹೋದರೇನು? ತಿರುಗುವ
ಕಾಲಚಕ್ರವನ್ನು ನಿಲ್ಲಿಸುವುದಕ್ಕೆ ಯಾರಿಗೆ ಸಾಧ್ಯ? ತಲಕಾಡಿಗೆ ಕೆಟ್ಟ ಹೊತ್ತು ಕಾಯ್ದುಕೊಂಡು ಕುಳಿತಿದೆ. ತಪ್ಪಿಸಲು ಏನು
ತಪಸ್ಸು ಮಾಡಿದರೂ ಸಾಧ್ಯವೇ ಇಲ್ಲವಾಗಿದೆ …..!
ಪ್ರತಿನಿತ್ಯ ತಲಕಾಡನ್ನು ನೋಡಲು ನೂರಾರು ಪ್ರವಾಸಿಗರು ಬರುತ್ತಾರೆ. ಅದರಂತೆ ಲೇಖಕರು ಸಹ
ಪ್ರವಾಸಿಗರಂತೆ ತಲಕಾಡು ನೋಡಲು ಹೋಗಿದ್ದರು. ತಲಕಾಡಿನಲ್ಲಿರುವ ಪಂಚಲಿಂಗಗಳನ್ನು ನೋಡಬೇಕು ಎಂಬ
ಹಂಬಲವಿತ್ತು . ಪಾತಾಳೇಶ್ವರನ ಗುಡಿಯಿಂದ ಮರಳೇಶ್ವರ ದೇಗುಲದೆಡೆಗೆ, ಮರಳೇಶ್ವರನಿಂದ ಗೋಕರ್ಣೇಶ್ವರನನ್ನು
ನೋಡಿ, ವಿಜಯಪುರದ ಅರ್ಕೇಶ್ವರನ ದರ್ಶನವೊಂದು ಮುಗಿದರೆ ತಲಕಾಡಿನ ಪಂಚಲಿಂಗಗಳ ದರ್ಶನ
ಪರ‍್ತಿಯಾಗುವುದೆಂದು ನಂಬಿದ್ದರು. ಆದರೆ ಈ ಲಿಂಗವು ಮೂರು ಮೈಲಿಗಳ ದೂರದಲ್ಲಿ ಇತ್ತು. ಜೊತೆಗೆ
ಮರಳಿನಲ್ಲಿ ಮೋಟಾರು ಓಡುತ್ತಿರಲಿಲ್ಲ . ಆದರೂ ಗಾಡಿಯನ್ನು ಓಡಿಸಲು ಪ್ರಾರಂಭಿಸಿದನು. ಮುಂದೆ ಹಳ್ಳದಲ್ಲಿ
ಮೋಟಾರು ನಿಂತೇ ಬಿಟ್ಟಿತು. ಸಾರಥಿಗೆ ಹೇಳಿದೆ! ಅರ್ಕೇಶ್ವರ ದೇವಾಲಯ ಕಾಣದೆ ಹೋದರೆ ಮನಸ್ಸಿನಲ್ಲಿ
ಕೊನೆಯವರೆಗೂ ಅತೃಪ್ತಿ  ಉಳಿಯುತ್ತದೆ. ಏನು ಮಾಡಲಿ? ಸಾರಥಿ “ಬನ್ನಿ, ನಾವಿಬ್ಬರೂ ಮುಂದಕ್ಕೆ ಹೋಗಿ
ನೋಡಿಕೊಂಡು ಬರೋಣ, ಸಿಕ್ಕರೆ ತಿರುಗಿ ಬಂದು ಇವರನ್ನು ಕರೆದುಕೊಂಡು ಹೋಗೋಣ” ಎಂದು ಹೇಳಿ ನಡೆದು

ಮುಂದೆ ಸಾಗಿದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಗಿಡ ಮರಗಳ ಮಧ್ಯೆ ಎನೋ ಕಂಡಿತು. ಎದೆ ಜೋರಿನಿಂದ
ಹಾರತೊಡಗಿತು. ಹತ್ತಿರ ಬಂದು ನೋಡಿದಾಗ ಅದು ಅರ್ಕೆಶ್ವರಲಿಂಗ  ಅದರಿಂದ ಯುರೇಕಾ! ಯುರೇಕಾ! ಎಂದು
ಕೂಗಿದರು. ಗೋಕರ್ಣ ತೀರ್ಥದಲ್ಲಿ ಮಿಂದೂ ಐದೂ ಲಿಂಗಗಳನ್ನು ಒಂದೊಂದು  ಸಾರಿ ಸಂದರ್ಶಿಸಿ ವೈದ್ಯೇಶ್ವರ
ಲಿಂಗಕ್ಕೆ ವರದಿಯನ್ನೊಪ್ಪಿಸಿ ಸಂಜೆ ಮುಗಿಯುವುದರೊಳಗೆ ಪಂಚಲಿಂಗಗಳ ದರ್ಶನವನ್ನು ಪೂರೈಸಿದರೆ
ಶ್ರದ್ಧಾವಂತನಾದ ಭಕ್ತನಿಗೆ ಮುಕ್ತಿ ದೊರಕುವುದೇ ನಿಜ!
ಹೊಯ್ಸಳ ಬಲ್ಲಾಳರು ಕನ್ನಡದ ಕುಲದೀಪಕರು. ಈ ವಂಶದ ಮೂಲಪುರುಷನ ಹೆಸರು ಸಳ. ಮೂಡಿಗೆರೆ
ತಾಲೂಕಿನಲ್ಲಿರುವ ಸೊಸೆವೂರು ಇವನ ಜನ್ಮಸ್ಥಳ . ಆಗಿನ ಸೊಸೆವೂರಿಗೆ ಈಗ ಅಂಗಡಿ ಎಂದು
ಮರುನಾಮಕರಣವಾಗಿದೆ. ಒಂದು ದಿನ ವಾಸಂತಿಕಾ ದೇವಾಲಯದ ಪೂಜೆಗೆಂದು ಹೋದ ಸಳ, ಸುದತ್ತ ಗುರುವಿನ
ಬಳಿ ಉಪದೇಶ ಕೇಳುತ್ತಾ ಕುಳಿತ್ತಿದ್ದರು. ಹುಲಿಯೊಂದು ಅವನಡೆಗೆ ಜಿಗಿದು ಬಂದಿತು. ಆಗ ಸುದತ್ತಮುನಿ ತನ್ನ
ಕೈಯೊಳಗಿನ ಬೆತ್ತವನ್ನು ಸಳನೆಡೆಗೆ ಚಾಚಿ ಹೊಯ್‌ಸಳ ಎಂದು ಆದೇಶವಿತ್ತನೆಂದೂ ಸಳ ಕೂಡಲೆ ಹುಲಿಯನ್ನು
ಎದುರಿಸಿ ಅದರ ಗಂಟಲಲ್ಲಿ ಖಡ್ಗವನ್ನು ತುರುಕಿ ಹುಲಿಯನ್ನು ಹೊಯ್ದನೆಂದೂ ತಿಳಿಯುವುದು. ಅಂದಿನಿಂದ  ಸಳನ
ಮನೆತನಕ್ಕೆ ಹೊಯ್ಸಳ ಎಂಬ ಹೆಸರು ಬಂದಿತು.
ನಮ್ಮ ದೇಗುಲಗಳೇ ನಮ್ಮ ರಾಷ್ಟದ ಚರಿತ್ರೆಯ ಹೆಗ್ಗುರುತು. ಇಂತಹ ದೇಗುಲಗಳ ಅಭ್ಯಾಸದಿಂದ ನಮ್ಮ
ಬದುಕು ನಯವಾಗುತ್ತದೆ, ನಿರ್ಮಲವಾಗುತ್ತದೆ. ಕವಿಕಂಡ ಸತ್ಯ, ಶಿಲ್ಪಿ ಕಂಡ ಸೌಂದರ್ಯಗಳೇ ನಮ್ಮ ಬಾಳಿನ
ಅಲಂಕಾರ.

ಪದಗಳ ಅರ್ಥ

ಅನರ್ಘ್ಯ  –  ಶ್ರೇಷ್ಠ;           ಉಜ್ವಲ  –  ಶ್ರೇಷ್ಠ;

ಉದ್ರೇಕ         –  ಅತಿಶಯ,      ನಂದನವನ   –  ದೇವೇಂದ್ರನ ಉಪವನ, ಸಂತಸ ನೀಡುವ

ಪ್ರದೇಶ; ನಿಲ್‌ಮನೆ   –   ಪ್ರವಾಸಿಗರು ಉಳಿದುಕೊಳ್ಳುವ ಮನೆ,   ಅತಿಥಿಗೃಹ ;

ನೇಸರು   –    ಸರ‍್ಯ ;            ಪಡುವಣ  –  ಪಶ್ಚಿಮ ;

ಪಾತರಗಿತ್ತಿ  –  ಚಿಟ್ಟೆ, ಪತಂಗ;        ಬಣ್ಣಿಸು – ವರ್ಣಿಸು ;

ಬಿತ್ತರ  –  ವಿಸ್ತಾರ ;                   ಬಿರುಗಾಳಿ – ಜೋರಾಗಿ ಬೀಸುವ ಗಾಳಿ;

ಮಸುಕು  –  ಅಸ್ಪಷ್ಟ ;           ಮೃಗಜಲ   –   ಬಿಸಿಲ್ಗುದುರೆ, ಮರೀಚಿಕೆ;

ವಾಸ್ತುಶಿಲ್ಪ  –   ಕಟ್ಟಡ ರಚನೆಯ     ಕಲೆ;ಸಂಪದ   –   ಸಂಪತ್ತು, ಐಶ್ರ‍್ಯ ;

ಸಂಬೋಧಿಸು   –   ಕುರಿತು ಹೇಳು  ;     ಸಾರಥಿ  –     ರಥವನ್ನು ಓಡಿಸುವವ, ವಾಹನ ಚಾಲಕ;

ಸ್ಮಾರಕ   –   ನೆನಪಿಗಾಗಿ ಕಟ್ಟಿದ್ದು.

ಅಭ್ಯಾಸ

8th Class Kannada Talakadina Vaibhava Question Answers Kannada Deevige

8th Standard Kannada Talakadina Vaibhava Notes Kannada Deevige, 8 th ತಲಕಾಡಿನ ವೈಭವ ಪಾಠ ನೋಟ್ಸ್ ಕನ್ನಡ ದೀವಿಗೆ , 8th class kannada talakadina vaibhava question answers notes pdf

8th standard Kannada talakadina vaibhava lesson pdf
8th class talakadina vaibhava text book
8th standard KSEEB Solutions talakadina vaibhava notes

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

 

1. ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಎಲ್ಲಿ?
   ಉತ್ತರ : ಲೇಖಕರು ಪ್ರವಾಸದ ವಿವರವನ್ನು ಶಿವನ ಸಮುದ್ರದ ಪ್ರವಾಸಿಗರ ನಿಲ್‌ಮನೆಯಲ್ಲಿ ಕುಳಿತುಕೊಂಡು
ಬರಯಲು ಆರಂಭಿಸಿದರು.

2. ಗಂಗರ ಮೊದಲ ರಾಜಧಾನಿ ಯಾವುದು?
  ಉತ್ತರ : ಗಂಗರ ಮೊದಲ ರಾಜಧಾನಿ ಕೋಲಾರ.

3. ರಾಯ’, ‘ಅಣ್ಣ’ ಎಂದು ಯಾರನ್ನು ಕರೆಯುತ್ತಿದ್ದರು?
   ಉತ್ತರ : ‘ರಾಯ’, ‘ಅಣ್ಣ’ ಎಂದು ಚಾವುಂಡರಾಯನನ್ನು ಕರೆಯುತ್ತಿದ್ದರು.

4. ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ ಏನು?
   ಉತ್ತರ : ‘ಚಾವುಂಡರಾಯ ಪುರಾಣ’ ಎಂಬ ಹೆಸರಿನ ಅರವತ್ತಮೂರು ಪುಣ್ಯಪುರುಷರ ಚರಿತ್ರೆ,
ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ.

5. ವಿಷ್ಣುವರ್ಧನ ವೀರನಾರಾಯಣ ದೇಗುಲವನ್ನು ಕಟ್ಟಿಸಲು ಕಾರಣವೇನು?

 ಉತ್ತರ : ವಿಕ್ರಮ ಚೋಳನ ಸೇನಾನಿ ಆದಿಯಮನನ್ನು ಸೋಲಿಸಿ, ಹೊಯ್ಸಳರ ಕನ್ನಡ ಬಾವುಟವನ್ನು
ಹಾರಿಸಿ, ಗೆಲುವಿನ ಸ್ಮಾರಕವಾಗಿ ತಲಕಾಡಿನ ನೆಲದ ಮೇಲೆ ವಿಜಯನಾರಾಯಣನ ಗುಡಿಕಟ್ಟಿಸಿದನು.

6. ರಾಷ್ಟ್ರದ ಚಾರಿತ್ಯದ  ಹೆಗ್ಗುರುತು  ಯಾವುದು?

 ಉತ್ತರ : ನಮ್ಮ ದೇಗುಲಗಳೇ ನಮ್ಮ ರಾಷ್ಟ್ರದ ಚರಿತ್ರೆಯ  ಹೆಗ್ಗುರುತು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ  ಉತ್ತರಿಸಿ.

1.. ಶಿವನಸಮುದ್ರದಲ್ಲಿ ಸುಬ್ರಹ್ಮಣ್ಯಮ್ ಮಾಡಿದ ವ್ಯವಸ್ಥೆಗಳಾವುವು?

  ಉತ್ತರ : ಶಿವನಸಮುದ್ರವನ್ನು ಒಳಸೇರುವ ಮುನ್ನ ಬಾಗಿಲ ಬಳಿ ನಿಂತ ಸುಬ್ರಹ್ಮಣ್ಯಮ್ ನಮ್ಮನ್ನು
ವಿಶ್ವಾಸದಿಂದ ಸ್ವಾಗತಿಸಿದರು. ನಿಲ್ಮನೆಯನ್ನು ಕೂಡಲೆ ಖಾಲಿ ಮಾಡಿಸಿದರು. ಹಾಸಿಗೆ ಹಾಸಿಕೊಟ್ಟನು. ಊಟ
ಉಪಚಾರದ ಬಗೆಗೆ ಕೇಳಿದರು. ಕೊನೆಗೆ ಹೋಗುವಾಗ  ‘ಗುಡ್‌ನಾಯಿಟ್’ ಅಂದರು.

2. ಚಾವುಂಡರಾಯ ಯಾರು? ಆತನ ವಿಶೇಷತೆಯೇನು?

ಉತ್ತರ : ಚಾವುಂಡರಾಯನು ಮಾರಸಿಂಹ, ರಾಚಮಲ್ಲ, ರಕ್ಕಸಗಂಗರ ಮಂತ್ರಿ. ಇವನನ್ನು ಜನ ಹೆಸರು
ಹಿಡಿದು ಕರೆಯುತ್ತಿರಲಿಲ್ಲ. ‘ರಾಯ’, ‘ಅಣ್ಣ’ ಎಂದು ಸಂಬೋಧಿಸುತ್ತಿದ್ದರು. ಇವನಿಗೆ ಕನ್ನಡದ ಏಳ್ಗೆಯ
ಹಂಬಲವೇ ಹಂಬಲ. ಸ್ವತಃ ,ಕವಿಯಾಗಿದ್ದು ‘ಚಾವುಂಡರಾಯ ಪುರಾಣ’ ಎಂಬ ಹೆಸರಿನ ಅರವತ್ತಮೂರು
ಪುಣ್ಯಪುರುಷರ ಚರಿತ್ರೆ, ಅವನು ಕನ್ನಡಕ್ಕೆ ಕೊಟ್ಟ ಕಾಣಿಕೆಯಾಗಿದೆ.

3. ಚೋಳರ ಸಾಧನೆಯೇನು?

ಉತ್ತರ : ಚೋಳ ದೇಶದ ಕಡೆಯಿಂದ ಬಿರುಗಾಳಿ ಬೀಸಿತು. ಚೋಳರು ಬಂದರು. ಗುಡಿಗೋಪುರಗಳನ್ನು
ಕಟ್ಟಿಸಿದರು. ರಾಜೇಶ್ವರ, ವೈಕುಂಠನಾರಾಯಣ, ಮರಳೇಶ್ವರ, ಪಾತಾಳೇಶ್ವರ, ವೈದ್ಯೇಶ್ವರ ಗುಡಿಗಳನ್ನು
ಕಟ್ಟಿಸಿದರು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ.

1. ಗಂಗರ ಇತಿಹಾಸದ ವಿಶೇಷತೆಯೇನು?

ಉತ್ತರ : ತಲಕಾಡಿನ ಇತಿಹಾಸದಲ್ಲಿ ಗಂಗರ ಇತಿಹಾಸ, ಜೈನಧರ್ಮದ ವಿವರಣೆ ಇದೆ. ಕನ್ನಡ ಸಾಹಿತ್ಯದ
ಕಥನವಿದೆ. ಹೊಯ್ಸಳ ವಾಸ್ತುಶಿಲ್ಪದ ವಿವರಣೆ ಇದೆ. ಎಲ್ಲದಕ್ಕೂ ಮಿಗಿಲಾಗಿ ಕನ್ನಡವೇ ಧರ್ಮ, ಕನ್ನಡವೇ
ಬಾಳಿನ ಪರಿಪೂರ್ಣತೆಯೆಂದು ಬಗೆದು ಅದಕ್ಕಾಗಿ ಹೋರಾಡಿ ಮಡಿದ ವೀರರ ಉಜ್ವಲ ಚರಿತ್ರೆ ಇದೆ.
ಗಂಗರ ರಾಜ್ಯ ಗಂಗವಾಡಿ ಎಂದು ಹೆಸರಾಗಿದೆ. ಅವರ ಮೊದಲ ರಾಜಧಾನಿ ಕೋಲಾರ. ಸುಮಾರು ಕ್ರಿ.ಶ.
500 ರ ಹೊತ್ತಿಗೆ ಕೋಲಾರದಿಂದ ಹರಿವರ್ಮ ರಾಜಧಾನಿಯನ್ನು ತಲಕಾಡಿಗೆ ತಂದನು. ಅಲ್ಲಿಂದ ಮುಂದಕ್ಕೆ
ಐದು ಶತಮಾನಗಳವರೆಗು ಅಂದರೆ ಹತ್ತನೆಯಶ ತಮಾನದವರೆಗೂ ಗಂಗರು ಆಳ್ವಿಕೆ ನಡೆಸಿದರು.

2. ವೈದ್ಯೇಶ್ವರ ದೇವಾಲಯದ ನಿರ್ಮಾಣದ ಕಾಲನಿರ್ಣಯಕ್ಕೆ ಸಹಕಾರಿಯಾಗುವ ಅಂಶಗಳಾವುವು? ವಿವರಿಸಿ.

ಉತ್ತರ : ಕೀರ್ತಿನಾರಾಯಣ ದೇವಾಲಯದ ಆಚೆಗೆ 150 ಗಜದ ಅಂತರದಲ್ಲಿ ವೈದ್ಯೇಶ್ವರ ದೇವಾಲಯವಿದೆ.
ಈ ದೇವಾಲಯದ ರಚನೆಯ ಕಾಲ ನಿಶ್ಚಿತವಾಗಿ ತಿಳಿದು ಬಂದಿಲ್ಲದ್ದಿದ್ದರು. ಈಗ ಸಿಕ್ಕಿರುವ ಆಧಾರಗಳ
ಅನ್ವಯ ಇದರ ಕಾಲವನ್ನು ಹದಿಮೂರನೆಯ ಶತಮಾನದ ಪೂರ್ವಕ್ಕೆ ತಂದಿರುವರು. ದೇವಾಲಯದಹೊರವಲಯದಲ್ಲಿ ಇರುವ ಕಲಶಗಳೂ ಗರ್ಭಗುಡಿಯ ಗೋಪುರವೂ ಶಿಲ್ಪದ ನಿರ್ಮಾಣದಲ್ಲಿ ತೋರಿರುವ
ಕೆಲವು ವಿಶಿಷ್ಟ ರೂಪಗಳೂ ಕಟ್ಟಡಕ್ಕೆ ಉಪಯೋಗಿಸಿರುವ ಸಾಮಗ್ರಿಯೂ ಈ ಕಾಲವನ್ನು ನಿರ್ದೇಶಿಸುವುವು.
ಇವು ಶೃಂಗೇರಿಯ ವಿದ್ಯಾಶಂಕರ ದೇಗುಲ, ಹಂಪೆಯ ಹಜಾರರಾಮರ ಗುಡಿ, ತಾಡಪತ್ರಿಯ ಲೇಪಾಕ್ಷಿ ಮಂದಿರ,
ತಲಕಾಡಿನ ವೈದ್ಯೇಶ್ವರ ದೇವಾಲಯಕ್ಕೆ ಸರಿ ಹೊಂದುವ ಕಟ್ಟಡಗಳಾಗಿವೆ.

3. ಲೇಖಕರು ‘ಯುರೇಕಾ’ ಎಂದು ಕೂಗಿದ ಸಂದರ್ಭವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

ಉತ್ತರ : ಲೇಖಕರಿಗೆ ವಿಜಯಪುರದ ಅರ್ಕೇಶ್ವರನ ದರ್ಶನವೊಂದು ಮುಗಿದರೆ ತಲಕಾಡಿನ ಪಂಚಲಿಂಗಗಳ
ದರ್ಶನ ಪರ‍್ತಿಯಾಗುವುದೆಂದು ನಂಬಿ, ಮುಂದೆ ನಡೆದರು ದಾರಿ ಕೊರಕಲು ಮೋಟಾರು ಓಡುವುದಿಲ್ಲ
ಎಂದು ಸಾರಥಿ ಹೇಳಿದನು. ಆದರೂ ಗಾಡಿಯನ್ನು ಓಡಿಸಲು ಪ್ರಾರಂಭಿಸಿದನು. ಮುಂದೆ ಹಳ್ಳದಲ್ಲಿ
ಮೋಟಾರು ನಿಂತೇ ಬಿಟ್ಟಿತು. ಸಾರಥಿಗೆ ಹೇಳಿದೆ! ಅರ್ಕೇಶ್ವರ ದೇವಾಲಯ ಕಾಣದೆ ಹೋದರೆ ಮನಸ್ಸಿನಲ್ಲಿ
ಕೊನೆಯವರೆಗೂ ಅತೃಪ್ತಿ ಉಳಿಯುತ್ತದೆ. ಏನು ಮಾಡಲಿ? ಸಾರಥಿ “ಬನ್ನಿ, ನಾವಿಬ್ಬರೂ ಮುಂದಕ್ಕೆ ಹೋಗಿ
ನೋಡಿಕೊಂಡು ಬರೋಣ, ಸಿಕ್ಕರೆ ತಿರುಗಿ ಬಂದು ಇವರನ್ನು ಕರೆದುಕೊಂಡು ಹೋಗೋಣ” ಎಂದು ಹೇಳಿ
ನಡೆದು ಮುಂದೆ ಸಾಗಿದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಗಿಡ ಮರಗಳ ಮಧ್ಯೆ ಎನೋ ಕಂಡಿತು. ಎದೆ
ಜೋರಿನಿಂದ ಹಾರತೊಡಗಿತು. ಹತ್ತಿರ ಬಂದು ನೋಡಿದಾಗ ಅದು ಅರ್ಕೇಶ್ವರಲಿಂಗ ಅದರಿಂದ ಯುರೇಕಾ!
ಯುರೇಕಾ! ಎಂದು ಕೂಗಿದರು.

4. ಸಳನ ವಂಶಕ್ಕೆ ‘ಹೊಯ್ಸಳ’ ಹೆಸರು  ಬರಲು ಕಾರಣವೇನು?

ಉತ್ತರ : ಒಂದು ದಿನ ವಾಸಂತಿಕಾ ದೇವಾಲಯದ ಪೂಜೆಗೆಂದು ಹೋದ ಸಳ, ಸುದತ್ತ ಗುರುವಿನ ಬಳಿ
ಉಪದೇಶ ಕೇಳುತ್ತಾ ಕುಳಿತ್ತಿದ್ದರು. ಹುಲಿಯೊಂದು ಅವನಡೆಗೆ ಜಿಗಿದು ಬಂದಿತು. ಆಗ ಸುದತ್ತಮುನಿ ತನ್ನ
ಕೈಯೊಳಗಿನ ಬೆತ್ತವನ್ನು ಸಳನೆಡೆಗೆ ಚಾಚಿ ಹೊಯ್‌ಸಳ ಎಂದು ಆದೇಶವಿತ್ತನೆಂದೂ ಸಳ ಕೂಡಲೆ
ಹುಲಿಯನ್ನು ಎದುರಿಸಿ ಅದರ ಗಂಟಲಲ್ಲಿ ಖಡ್ಗವನ್ನು ತುರುಕಿ ಹುಲಿಯನ್ನು ಹೊಯ್ದನೆಂದೂ
ತಿಳಿಯುವುದು. ಅಂದಿನಿAದ ಸಳನ ಮನೆತನಕ್ಕೆ ಹೊಯ್ಸಳ ಎಂಬ ಹೆಸರು ಬಂದಿತು.

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಸುತ್ತಣ ಲೋಕವೆಲ್ಲ ಮಲಗಿಕೊಂಡಿದೆ”
ಆಯ್ಕೆ : ಈ ವಾಕ್ಯವನ್ನು ಹಿರೇಮಲ್ಲೂರು ಈಶ್ವರನ್ ಅವರ ‘ಕವಿಕಂಡ ನಾಡು’ ಪ್ರವಾಸ ಕಥನದಿಂದ ಆಯ್ದ
ತಲಕಾಡಿನ ವೈಭವ’ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರು ತಲಕಾಡಿಗೆ ಪ್ರವಾಸ ಹೋದ ವಿವರವನ್ನು ಶಿವನ ಸಮುದ್ರದ ಪ್ರವಾಸಿಗರ
ನಿಲ್‌ಮನೆಯಲ್ಲಿ ಕುಳಿತುಕೊಂಡು ಬರೆಯುತ್ತಿದ್ದಾರೆ. ಈಗ ರಾತ್ರಿ ಹನ್ನೆರಡು ಹೊಡೆದು ಹದಿನೈದು
ನಿಮಿಷವಾಗಿದೆ. ಸುತ್ತಣ ಲೋಕವೆಲ್ಲ ಮಲಗಿಕೊಂಡಿದೆ. ಎಂದು ಹೇಳುವ ಸಂದರ್ಭವಾಗಿದೆ.
ಸ್ವಾರಸ್ಯ : ಪ್ರವಾಸದ ದಣಿವುಗಳಿಂದ ಪ್ರವಾಸಿಗರೆಲ್ಲ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಲೇಖಕರು
ಅಂದಿನ ಪ್ರವಾಸದ ವಿವರಣೆ ಬರೆಯುತ್ತಿರುವುದು ಅವರ ಬದ್ಧತೆಯು, ಎಲ್ಲಾರೂ ಮಲಗಿದ್ದರಿಂದ ನೀರವ
ನಿಶ್ಯಬ್ಧದ ನಡುವೆ ಸುತ್ತಲ ಲೋಕವೇ ಮಲಗಿರುವಂತೆ ಭಾಸವಾಗಿರುವುದು. ಸ್ವಾರಸ್ಯಕರವಾಗಿದೆ.

2. “ಅದು ಕಲಾಶ್ರೀ ವಿಹರಿಸುವ ನಂದನವನ”
ಆಯ್ಕೆ : ಈ ವಾಕ್ಯವನ್ನು ಹಿರೇಮಲ್ಲೂರು ಈಶ್ವರನ್ ಅವರ ‘ಕವಿಕಂಡ ನಾಡು’ ಪ್ರವಾಸ ಕಥನದಿಂದ ಆಯ್ದ
‘ತಲಕಾಡಿನ ವೈಭವ’ ಗದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಮುದುವೊಳಲಿನಿಂದ ರನ್ನ ಓಡಿ ಬಂದನು. ಏನು ನಂಬಿ ಬಂದ? ತಲಕಾಡಿನ ಮಣ್ಣನ್ನು! ಇಲ್ಲಿ
ರಾಯನಿದ್ದಾನೆ. ಅತ್ತಿಮಬ್ಬೆ ಇದ್ದಾಳೆ. ಅಜಿತಸೇನ ಗುರುಗಳ ಶಿಷ್ಯವೃಂದವಿದೆ. ಅದು ಕಲಾಶ್ರೀ ವಿಹರಿಸುವ
ನಂದನವನ. ಎಂದು ವರ್ಣಿಸಿದ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.

ಸ್ವಾರಸ್ಯ : ತಲಕಾಡಿನಲ್ಲಿ ಅತ್ತಿಮಬ್ಬೆ, ಅಜಿತಸೇನ ಗುರುಗಳು, ಚಾವುಂಡರಾಯನಂತ  ಕವಿ ಇರುವ ಮಣ್ಣು
ಆಗಿರುವುದರಿಂದ, ತಲಕಾಡಿನಲ್ಲಿ ಗುಡಿಗೋಪುರಗಳಿರುವುದರಿಂದ ಕವಿ ಸಹಜವಾಗಿ ಹೇಳಿರುವ ಮಾತು
ಸ್ವಾರಸ್ಯಕರವಾಗಿದೆ .

3. “ಮೋಟರು ಓಡಲೊಲ್ಲದು, ಸಾರಥಿ ನಿಲ್ಲಿಸಲಾರನು”

ಆಯ್ಕೆ : ಈ ವಾಕ್ಯವನ್ನು ಹಿರೇಮಲ್ಲೂರು ಈಶ್ವರನ್ ಅವರ ‘ಕವಿಕಂಡ ನಾಡು’ ಪ್ರವಾಸ ಕಥನದಿಂದ ಆಯ್ದ
‘ತಲಕಾಡಿನ ವೈಭವ’ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರಿಗೆ ವಿಜಯಪುರದ ಅರ್ಕೇಶ್ವರನ ದರ್ಶನವೊಂದು ಮುಗಿದರೆ ತಲಕಾಡಿನ
ಪಂಚಲಿಂಗಗಳ ದರ್ಶನ ಪರ‍್ತಿಯಾಗುವುದೆಂದು ನಂಬಿ, ಮುಂದೆ ನಡೆದರು ದಾರಿ ಕೊರಕಲು ಮೋಟಾರು
ಓಡುವುದಿಲ್ಲ ಎಂದು ಸಾರಥಿ ಹೇಳಿದನು. ಆದರೂ ಗಾಡಿಯನ್ನು ಓಡಿಸಲು ಪ್ರಾರಂಭಿಸಿದನು. ಆ
ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಲೇಖಕರು ಅರ್ಕೇಶ್ವರ ಲಿಂಗವನ್ನು ನೋಡಲೇಬೇಕು ಎಂಬ ಹಂಬಲವನ್ನು ಸಾರಥಿ ಚನ್ನಾಗಿ
ಅರಿತಿರುವುದನ್ನು ಬಹು ಸ್ವಾರಸ್ಯಕರವಾಗಿ ಮೂಡಿ ಬಂದಿದೆ.

4. “ರ‍್ರೋ ಗುಡಿ ಸಿಕ್ಕಿತು ರ‍್ರೋ ದೇವಾಲಯ ದೊರಕಿತು”

ಆಯ್ಕೆ : ಈ ವಾಕ್ಯವನ್ನು ಹಿರೇಮಲ್ಲೂರು ಈಶ್ವರನ್ ಅವರ ‘ಕವಿಕಂಡ ನಾಡು’ ಪ್ರವಾಸ ಕಥನದಿಂದ ಆಯ್ದ
‘ತಲಕಾಡಿನ ವೈಭವ’ ಗದ್ಯಭಾಗದಿಂದ ಆರಿಸಲಾಗಿದೆ.ಸಂದರ್ಭ : ಲೇಖಕರಿಗೆ ಅರ್ಕೇಶ್ವರ ದೇವಾಲಯ ಕಾಣದೆ ಹೋದರೆ ಮನಸ್ಸಿನಲ್ಲಿ ಕೊನೆಯವರೆಗೂ ಅತೃಪ್ತಿ
ಉಳಿಯುತ್ತದೆ. ಏನು ಮಾಡಲಿ? ಸಾರಥಿ “ಬನ್ನಿ, ನಾವಿಬ್ಬರೂ ಮುಂದಕ್ಕೆ ಹೋಗಿ ನೋಡಿಕೊಂಡು
ಬರೋಣ, ಸಿಕ್ಕರೆ ತಿರುಗಿ ಬಂದು ಇವರನ್ನು ಕರೆದುಕೊಂಡು ಹೋಗೋಣ ” ಎಂದು ಹೇಳಿ ನಡೆದು ಮುಂದೆ
ಸಾಗಿದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಗಿಡ ಮರಗಳ ಮಧ್ಯೆ ಎನೋ ಕಂಡಿತು. ಎದೆ ಜೋರಿನಿಂದ
ಹಾರತೊಡಗಿತು. ಹತ್ತಿರ ಬಂದು ನೋಡಿದಾಗ ಅದು ಅರಕೆಶ್ವರ  ಅದರಿಂದ ಯುರೇಕಾ! ಯುರೇಕಾ!
ಎಂದು ಕೂಗಿದರು.
ಸ್ವಾರಸ್ಯ : ಲೇಖಕರು ತಲಕಾಡಿನ ಪಂಚಲಿಂಗಗಳ ದರ್ಶನ ಮಾಡಲೇಬೇಕು ಎಂಬ ಅವರ ಆಸೆಯು
ಪೂರ್ತಿಯಾದ ಉತ್ಸಾಹ, ಆನಂದ, ಸಂತೋಷವು ಸ್ವಾರಸ್ಯಕರವಾಗಿದೆ.

ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.

1. ಸಾಹಿತ್ಯಾವಲೋಕನ,     ಭಕ್ತಿಭಂಡಾರಿಬಸವಣ್ಣ,     ಹಿರೇಮಲ್ಲೂರು,   ವಚನಧರ್ಮಸಾರ.
ಉತ್ತರ :   ಭಕ್ತಿಭಂಡಾರಿಬಸವಣ್ಣ,

4. ಮಾರಸಿಂಹ,  ಚಾವುಂಡರಾಯ,  ರಾಚಮಲ್ಲ, ರಕ್ಕಸಗಂಗ.
ಉತ್ತರ :    ಚಾವುಂಡರಾಯ,

3. ರಾಜೇಶ್ವರ,   ಮರಳೇಶ್ವರ,   ಮಹಾಲಿಂಗೇಶ್ವರ,   ಪಾತಾಳೇಶ್ವರ.
ಉತ್ತರ  :   ಮಹಾಲಿಂಗೇಶ್ವರ,

4.ಮುಚ್ಚಿಟ್ಟು, ಹಾಡುತ್ತಿರುವ, ಉದ್ಯಮವನ್ನು, ಬಾನಿನೆಡೆ.
ಉತ್ತರ :    ಉದ್ಯಮವನ್ನು,

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

2. ಸಂಧಿ ಎಂದರೇನು? ಅದರ ವಿಧಗಳನ್ನು ಹೇಳಿ.

ಉತ್ತರ : ಎರಡು ವರ್ಣಗಳು ಕಾಲವಿಳಂಬವಿಲ್ಲದಂತೆ  ಸೇರುವುದೇ ಸಂಧಿಯೆನಿಸುವುದು.
ಹೀಗೆ ಪದ ರಚನೆ ಮಾಡುವಾಗ ಮೂಲ ಪದಗಳ ಅರ್ಥಕ್ಕೆ ಯಾವ ಲೋಪವೂ ಬರದಂತೆ ಎರಡುಅಕ್ಷರಗಳು ಕಾಲವಿಳಂಬವಿಲ್ಲದಂತೆ ಒಟ್ಟುಗೆ ಸೇರುವುದೆ ಸಂಧಿ.
✓ ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ – ಸ್ವರಸಂಧಿ.
✓ ಸ್ವರದ ಮುಂದೆ ವ್ಯಂಜನ, ವ್ಯಂಜನದ ಮುಂದೆ ಸ್ವರ, ಅಥವಾ ವ್ಯಂಜನದ ಮುಂದೆ ವ್ಯಂಜನವೇ ಬಂದು
ಸAಧಿಯಾದರೆ – ವ್ಯಂಜನಸಂದಿ

2. ಸಂಧಿಕ್ರಿಯೆ ಎಂದರೇನು? ಅದರ ವಿಧಗಳನ್ನು ವಿವರಿಸಿ.

ಉತ್ತರ : ಸಂಧಿಸುಗುವಾಗ ಕೆಲವು ವ್ಯತ್ಯಾಸಗಳಾಗುತ್ತವೆ ವೆ. ಈ ವ್ಯತ್ಯಾಸವೇ ಸಂಧಿಕ್ರಿಯೆ. ಈ ವ್ಯತ್ಯಾಸ
ಪೂರ್ವಪದದ ಅಂತ್ಯದಲ್ಲಿ ಅಥವಾ ಪರಪದದ (ಉತ್ತರಪದ) ಆದಿಯಲ್ಲಿ ಇಲ್ಲವೇ ಎರಡೂ ಪದಗಳ
ಮಧ್ಯದಲ್ಲಿ ನಡೆಯುತ್ತದೆ.
ಈ ವರ್ಣ ವ್ಯತ್ಯಾಸಕ್ಕನುಗುಣವಾಗಿ ಲೋಪ, ಆಗಮ, ಆದೇಶ ಎಂಬ ಮೂರು ವಿಧದ ಸಂಧಿಕ್ರಿಯೆಗಳು
ನಡೆಯುತ್ತವೆ.

1. ಪ್ರಕೃತಿಭಾವ ಎಂದರೇನು? ಉದಾಹರಣೆ ಕೊಡಿ.

ಉತ್ತರ : ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇದ್ದ ಹಾಗೆಯೇ ಇರುವುದು ಪ್ರಕೃತಿಭಾವ.
ಉದಾ : ಆ + ಆಡು         ಅಯ್ಯೋ + ಇದೇನು       ಓಹೋ + ಅಜ್ಜಿ ಬಂದರೇ

ಆ. ಕೊಟ್ಟಿರುವ  ಪದಗಳನ್ನು ವಿಂಗಡಿಸಿ ಸಂಧಿ ಹೆಸರಿಸಿ.

ನಿಮಿಷವಾಗಿದೆ     ದಿನವೆಲ್ಲ         ನಿಲ್ಮನೆಯನ್ನು     ಸಂದೇಹವಿಲ್ಲ     ಕಥನವಿದೆ

ಮಿಗಿಲಾಗಿ            ಚರಿತ್ರೆಯಿದೆ       ಹೆಸರಾಗಿದೆ                 ತಲೆಯೆತ್ತಿ

ಮುಚ್ಚಿಟ್ಟು            ಬಾನಿನೆಡೆ        ಪೂರ್ತಿಯಾಗು         ಹಳ್ಳವೊಂದು      ತಾಸಾಗಿದೆ

ಊರಿಂದ

 

ಸಂಧಿಪದಗಳು ಬಿಡಿಸಿದ ರೂಪ   ಬಿಡಿಸಿದರೂಪ  ಸಂಧಿಯ ಹೆಸರು
ನಿಮಿಷವಾಗಿದೆ ನಿಮಿಷ ಆಗಿದೆ ಲೋಪಸಂಧಿ
ದಿನವೆಲ್ಲ ದಿನ  ಎಲ್ಲ ಆಗಮಸಂಧಿ
ನಿಲ್ಮನೆಯನ್ನು ನಿಲ್ಮನೆ ಅನ್ನು ಯಾಕಾರಾಗಮಸಂಧಿ
ಸಂದೇಹವಿಲ್ಲ ಸಂದೇಹ ಇಲ್ಲ ಆಗಮಸಂಧಿ
ಕಥನವಿದೆ ಕಥನ ಇದೆ ಆಗಮಸಂಧಿ
ಮಿಗಿಲಾಗಿ  ಮಿಗಿಲು ಆಗಿ  ಆಗಮಸಂದಿ
ಚರಿತ್ರೆಯಿದೆ  ಚರಿತ್ರೆ  ಇದೆ ಆಗಮಸಂಧಿ
ಹೆಸರಾಗಿದೆ ಹೆಸರು  ಆಗಿದೆ ಲೋಪಸಂಧಿ
ತಲೆಯೆತ್ತಿ  ತಲೆ ಎತ್ತಿ   ಆಗಮಸಂಧಿ
ಮುಚ್ಚಿಟ್ಟು ಮುಚ್ಚು ಇಟ್ಟು  ಲೋಪಸಂಧಿ
ಬಾನಿನೆಡೆ ಬಾನು ಎಡೆ   ಲೋಪಸಂಧಿ
ಪೂರ್ತಿಯಾಗು ಪೂರ್ತಿ ಆಗು ಆಗಮಸಂಧಿ
ಹಳ್ಳವೊಂದು  ಹಳ್ಳ ಒಂದು ಆಗಮಸಂಧಿ
ತಾಸಾಗಿದೆ ತಾಸು ಆಗಿದೆ ಲೋಪಸಂಧಿ
ಊರಿಂದ ಊರು ಇಂದ ಲೋಪಸಂದಿ

8 ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ ಡೌನ್ಲೋಡ್ ಮಾಡಲು ಇಲ್ಲಿ ನೋಡಿ

8th Standard Kannada Talakadina Vaibhava Notes, ತಲಕಾಡಿನ ವೈಭವ ಪಾಠ ನೋಟ್ಸ್, 8th class kannada deevige 8th question answers notes pdf

ಇತರ ವಿಷಯಗಳು

ಹಿಂದಕ್ಕೆ

2 thoughts on “8th Standard Kannada Talakadina Vaibhava | ತಲಕಾಡಿನ ವೈಭವ ಪಾಠ ನೋಟ್ಸ್

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh