Kannada Deevige 9th Class Haralile Kannada Notes | ಹರಲೀಲೆ ಪಾಠದ ನೋಟ್ಸ್

9ನೇ ತರಗತಿ ಹರಲೀಲೆ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 9th Class Haralile Kannada Notes Question Answer Mcq Pdf Download in Kannada Medium 2023 Karnataka State Syllabus Kseeb Solutions For Class 9 Kannada Chapter 8 Notes haraleele 9th Notes Haraleele Kannada Deevige 9th Standard Kannada Notes Haraleele, Haraleele 9th Kannada Lesson 9th Standard Kannada 8th Chapter Notes 9th Standard Kannada Haralile Question Answer

 

ಗದ್ಯ ಭಾಗ – 8   ಹರಲೀಲೆ

ಕೃತಿಕಾರರು – ಹರಿಹರ

ಕೃತಿಕಾರರ ಪರಿಚಯ

Contents hide

‘ ರಗಳೆ ‘ ಎಂದೇ ಪ್ರಸಿದ್ಧನಾಗಿರುವ ಹರಿಹರನ ಕಾಲ ಸುಮಾರು ಕ್ರಿಸ್ತ ಶಕ 1200. ಈತನ ಸ್ಥಳ ಹಂಪೆ . ಹಂಪೆಯ ವಿರೂಪಾಕ್ಷ ಈತನ ಆರಾಧ್ಯದೈವ , ಕನ್ನಡ ಸಾಹಿತ್ಯದಲ್ಲಿ ರಗಳೆ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ . ಹರಿಹರನು ‘ ಪಂಪಾಶತಕ ‘ , ‘ ರಕ್ಷಾಶತಕ ‘ ಮತ್ತು ‘ ಮುಡಿಗೆಯ ಅಷ್ಟಕ’ಗಳನ್ನು ವೃತ್ತ ಛಂದಸ್ಸಿನಲ್ಲಿ ರಚಿಸಿದ್ದಾನೆ . ಗಿರಿಜಾಕಲ್ಯಾಣ ಪ್ರೌಢಚಂಪೂ ಪರಂಪರೆಯಲ್ಲಿ ರಚಿತವಾಗಿರುವ ಕಾವ್ಯ .

ಅರಸು – ಮಡುಕು ಆದುಹು – ಸಂಶಯ ಪಡು ಹರಿಹರನ ನಂಬಿಯಣ್ಣನರಗಳೆಯಿಂದ ಹರಲೀಲೆ ಪಾಠವನ್ನು ಆಯ್ದುಕೊಂಡಿದೆ . ಈ ಕೃತಿಯನ್ನು ತೀ.ನಂ. ಶ್ರೀಕಂಠಯ್ಯನವರು ಸಂಪಾದಿಸಿದ್ದು ಮೈಸೂರಿನ ಕಾವ್ಯಾಲಯ ಪ್ರಕಾಶನವು ಹೊರತಂದಿದೆ .

ಆಶಯ ಭಾವ

ವೃದ್ಧಮಾಹೇಶ್ವರ ಸ್ಥಲದ ವೃದ್ಧನ ವರ್ಣನೆ , ನಡೆನುಡಿ , ಹಾವಭಾವಗಳು ಸಹೃದಯನ ಮನಸ್ಸಿಗೆ ಮುದ ನೀಡುತ್ತವೆ . ತನ್ನ ಅಭಿನಯಚಾತುರ್ಯ ಹಾಗೂ ನಟನಾ ಸಾಮರ್ಥ್ಯವನ್ನು ನೋಡಲು ಜಗನ್ಮಾತೆಯಾದ ಗಿರಿಜೆ ಊರ ಮುಂದಿನ ಮಂದಿರದಲ್ಲಿ ನೆಲೆಸಿರುವುದನ್ನರಿತ ನಟವರ ಗಂಗಾಧರ , ಭಕ್ತ ಉದ್ಧಾರಕ ಸೊಗಸಾದ ನಟನೆಯನ್ನು ಮಾಡುತ್ತಾನೆ .

ಹರಿಹರನ ಕೈಯಲ್ಲಿ ಪದಗಳು ಅದೆಷ್ಟು ಚೆನ್ನಾಗಿ ನರ್ತಿಸುತ್ತವೆ ಎಂಬುದನ್ನರಿಯಲು ಇಡೀ ಕಾವ್ಯವನ್ನು ಮೆಲುಕು ಹಾಕಬೇಕು , ಶಿವನೃತ್ಯವನ್ನು ನೋಡಿದ ಶರಣರು ಮತ್ತೊಮ್ಮೆ ಕಾಣಲು ಕಾತರಿಸುವಂತೆ ಇಡೀ ಕಾವ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಬೇಕೆನಿಸುತ್ತದೆ . ನಂಬಿಯಣ್ಣನ ರಗಳೆಯಲ್ಲಿನ ವೃದ್ಧಮಾಹೇಶ್ವರನ ಅಭಿನಯ ಸಹೃದಯರಲ್ಲಿ ಹಾಸ್ಯದ ಹೊನಲನ್ನು ಹರಿಸುತ್ತದೆ .

ಪದಗಳ ಅರ್ಥ

ಅರಸು- ಹುಡುಕು

ಅದುಹು-ಸಂಶಯ ಪಡು

ಅವು-ನಾವು

ಅಪಾರ ಪುಸ್ತಕ ಪರ್ಯಂತರ-ಪಾದದಿಂದ ತಲೆವರೆಗೆ

ಅನುವಾಗು-ಸಿದ್ದನಾಗು

ಅಪರಿಮಿತ- ಪರಿಮಿತವಿಲ್ಲದ,ಮಿತಿಯಿಲ್ಲದ

ಖಟ್ವಾಂಗ – ತುದಿಯಲ್ಲಿ ತಲೆಬುರುಡೆಯುಳ್ಳ ಶಿವನ ಗದೆ

ನರೆ – ಮುಪ್ಪಿನಿಂದ ಬರುವ ಬಿಳಿಕೂದಲು

ನಿಕರ – ಸಮೂಹ

ನೆರವಿ – ಸೇರಿದ ಜನ

ನೆಗಪಿ – ಎತ್ತಿ ನೇಲ್ವ – ನೇತಾಡುವ

ಪರಿವಾರ – ಸುತ್ತುಮುತ್ತಲ ಜನ

ಪುರ್ಪು – ಹುಬ್ಬು

ಬನ ( ದ್ಧ ) – ವನ ( ತೃ )

ಬಿನ್ನಪ ( ದ ) – ವಿಜ್ಞಾಪನೆ ( 1 )

ಬಿನ್ನಿಸು – ನಿವೇದಿಸು , ವಿಜ್ಞಾಪಿಸು ,

ಯಷ್ಟಿ – ಊರುಗೋಲು

ವೇಷ್ಟಿ – ಪಂಚೆ

ಶತವೃದ್ಧಿ – ನೂರುವರ್ಷ ತುಂಬಿದ ಮುದುಕ

ಶುಕ -ಗಿಳಿ

ಹಮ್ಮಿಸು – ಮೈಮರೆ , ಮೂರ್ಛಹೋಗು ,

ಹರಲೀಲೆ ಪಾಠದ ಸಾರಾಂಶ

ಕೈಲಾಸದಲ್ಲಿರುವ ಉದ್ಯಾನವನದಲ್ಲಿ ಇಬ್ಬರು ರುದ್ರಕನ್ನಿಕೆಯರು ಹೂ ಬಡಿಸುತ್ತಿದ್ದರು . ಇದನ್ನು ರುದಗಣದ ಸದಸ್ಯರಲ್ಲೊಬ್ಬರಾದ ಮುಷ್ಪದತ್ತ ಗಮನಿಸಿ ಅವರನ್ನು ಅನುರಾಗ ಭಾವದಿಂದ ನೋಡಿದನು .

ಪುಷ್ಪದತ್ತನನ್ನು ಕಂಡ ರುದ್ರಕನ್ನಿಕೆಯರೂ ಅವನನ್ನು ಅದೇ ಭಾವದಿಂದ ನೋಡುತ್ತಿರುವುದನ್ನು ಶಿವ ಗಮನಿಸಿದ ಮತ್ತು ಅಸಮಾಧಾನ ಹೊಂದಿದ , ಕೈಲಾಸದಲ್ಲಿ ಗಣಗಳು ಇಂತಹ ವಿಕಾರಭಾವನೆಗಳನ್ನು ಹೊಂದಿರುವುದು

ಅಪರಾಧ . ಹಾಗಾಗಿ ಶಿವನು ಈ ಮೂವರಿಗೂ ಇಹಲೋಕದಲ್ಲಿ ಮನುಜರಾಗಿ ಹುಟ್ಟಿ ಎಂದು ಶಪಿಸಿದನು . ಇದರಿಂದ ನೊಂದ ಮಷದತ್ತ “ ನಿಮ್ಮನ್ನಗಲಿ ನಾನಿರಲಾರೆ , ದಯವಿಟ್ಟು ನನ್ನ ಮನ್ನಿಸಿ ” ಎಂದು ಪ್ರಾರ್ಥಿಸಲು ,

ನೀನು ಈಗ ಭೂಲೋಕದಲ್ಲಿ ಮಾನವನಾಗಿ ಹುಟ್ಟು , ಆದಷ್ಟು ಬೇಗನೆ ನಿಮ್ಮನ್ನು ಕೈಲಾಸಕ್ಕೆ ಕರೆ ತರುತ್ತೇನೆ ಎಂಬ ಆಶ್ವಾಸನೆ ನೀಡಿದನು . ಇತ್ತ ಸೌಂದರ್ಯ ಪೆರುಮಾಳ್ ಮದುವಣಿಗಾಗಿ ಅಲಂಕೃತನಾಗಿ ಸಡಗರ , ಸಂಭ್ರಮ ಉತ್ಸಕತೆಯಿಂದ ಮಣಮಂದ ಮತ್ತೂರಿಗೆ ಹೋಗುತ್ತಿರುವಾಗ ಒಬ್ಬನು ಬಂದು “ ನಿಮ್ಮಲ್ಲಿ ಒಂದು ವಿಜ್ಞಾಪನೆ , ದೇವಾ ಲಗ್ನದ ಮುಹೂರ್ತ ಬರುವವರೆಗೂ ನೀವು ಈ ಊರಿನ ವನದೊಳಗೆ ಸುಖವಾಗಿ ಕಾಲ ಕಳೆಯಿರಿ ” ಎಂದು ಹೇಳಿದಾಗ ನಂಬಿಯಣ್ಣನು ವನದತ್ತ ನಡೆದು ತನ್ನೊಳಗೆ ತಾನೇ ಆನಂದ ಪಡುತ್ತಾ ಬಂದು ವನವನ್ನು ಹೊಕ್ಕು ಬಹಳ ಸಂತೋಷಗೊಂಡನು .

9th Standard Haralile Summary in Kannada

ನಂತರ ಭೂಮಿಗೆ ಒಪ್ಪುವಂತೆ ಸುಂದರವಾತದ್ದ ಭೂಮಂಡಲವೆಂಬ ವಿವಾಹ ಮಂಟಪದಲ್ಲಿ ಸುಕುಮಾರನಾದ ಸೌಂದರ ಪೆರುಮಾಳನು ತನಗೆ ಇರಿಸಿದ ಸಿಂಹಾಸನದಲ್ಲಿ ವಿಲಾಸದಿಂದ ಕಾಣುವಂತೆ ಕುಳಿತನು .

ಮುದುಡಿಕೊಂಡಿದ್ದ ನೈದಿಲೆಗಳಿಂದ ಕೂಡಿದ ಕೊಳೆಗಳನ್ನು ನೋಡುತ್ತ ಸಂಗಾತಿಯ ವಿರಹ ವೇದನೆಯನ್ನ ಅನುಭವಿಸುತ್ತದೆ . ಸಂಗಾತಿಯ ಎರಹ ವೇದನೆಯಿಂದ ತುಂಬಾ ಬಳಲುವ ಚಕೋರಗಳು , ರುಚಿಯಾದ ಹಣ್ಣುಗಳು ಅರಸುತ್ತಿರುವ ಗಿಳಿಗಳ ಸಮೂಹ ,

ಮಕರಂದ ಹೀರಲು ಹೊಸ ಹೂವುಗಳನ್ನು ಸುತ್ತುವರಿದಿರುವ ದುಂಬಿಗಳ ಸಮೂಹವನ್ನು ನೋಡುತ್ತಾ ಕಾಡಿನ ಪ್ರಕೃತಿ ಸೌಚಿದರ್ಯವನ್ನು ಹೊಗಳುತ್ತಾ ಅರಸನ ಮಗನಾದ ನಂಬಿಯಣ್ಣನು ಆಡುತ್ತಾ ಹಾಡುತ್ತಾ ಆನಂದದಿಂದ ನಲಿದಾಡಿದನು .

ನಂಬಿಯಣ್ಣನು ವಿವಾಹ ಕಾರ್ಯದಲ್ಲಿ ಮಗ್ನನಾಗಿ ವನದಲ್ಲಿ ಸಮಯದಲ್ಲಿ ಇತ್ತ ಕೈಲಾಸದಲ್ಲಿ ದೊಡ್ಡ ಶಿವಗಣ ಪರಿವಾರದೊಂದಿಗೆ ನೆಲೆಸಿದ್ದ ವಿರೂಪಾಕ್ಷನು ಗಿರಿಜೆಯನ್ನು ಕುರಿತು ಹೀಗೆಂದನು “ ದೇವಿ , ಕೇಳು ನಮ್ಮ ಪುತ್ರನಾದ ಪುಷದತ್ತನು ನರಲೋಕದಲ್ಲಿ ಹುಟ್ಟಿ ನಂಬಿ ಎಂಬ ಹೆಸರನ್ನು ಪಡೆದು ಸಂಸಾರದಿಂದ ಕೆಟ್ಟು ಹೋಗುವುದಕ್ಕೆ ಸಿದ್ಧನಾಗುತ್ತಿದ್ದಾನೆ . ಆತನಿಗೆ ಮುಂಚೆ ನೀಡಿದ ನಂಬಿಕೆಯ ಮಾತನ್ನು ಅನುಸರಿಸಿಕೊಂಡು ನಾವು ಕಳುಹಿಸಿದ ರುದ್ರ

ಕನ್ನಿಕೆಯರಿಬ್ಬರೂ ಚೋಳದೇಶದ ತಿರುವಾರೂರು ಮತ್ತು ತಿರುವತ್ತಿಯೂರಿನಲ್ಲಿ ಪರವೆ ಮತ್ತು ಸಂಕಿಲೆ ಎಂಬ ಹೆಸರಿನಿಂದ ಹುಟ್ಟಿದ್ದಾರೆ . ಅವರನ್ನು ಆತನೊಡನೆ ಸೇರಿಸಿ , ಸಕಲಸುಖವನ್ನು ಪೂಜೆಯಾಗಿ ಸ್ವೀಕರಿಸಿ ಬರುವೆನು ”

Kannada Deevige 9th Kannada Chapter  ಹರಲೀಲೆ

ಎಂದಾಗ ಗಿರಿಜೆ ‘ ನಾನು ನಿಮ್ಮೊಡನೆ ಬರುತ್ತೇನೆ ‘ ಎಂದರು ಅದಕ್ಕೆ ಶಿವನು ಗಿರಿಜೆಗೆ “ ನೀನು ಬಹಳ ಕರುಣೆ ಹೊಂದಿದವಳು ” ಆದರೆ ನಾನು ಅಲ್ಲಿ ಮಾಡುವುದು ಅತೀ ನಿಷ್ಟುರದ ಕೆಲಸ . ನೀನು ಊರಿನ ದೇವಾಲದಲ್ಲಿ ಇರಬೇಕು ಎಂದು ಹೇಳಿದನು .

ದೇವಿಯರು ನೋಡನೋಡುತ್ತಿದ್ದಂತೆಯೇ ಶಿವನು ಒಬ್ಬ ಶತವೃದ್ಧನಾಗಿ ನಿಂತನು . ಪಾದದಿಂದ ತಲೆಯವರೆಗೂ ಲೇಪಿಸಿದಕೊಂಡ ವಿಭೂತಿ , ನರೆತ ತಲೆ , ಸುಕ್ಕುಗಟ್ಟಿದ ದೇಹ ಹೊಂದಿದನು . ಆತನ ಜಟೆಯಲ್ಲಿದ ಚಂದ್ರಕಳೆಯೇ ಕೊಡೆಯಾಯಿತು ಹಿಡಿದಿದ್ದ ತ್ರಿಶೂಲ ಕೊಡೆಯ ಹಿಡಿಕೆಯಾಯಿತು .

ನರಕಪಾಲ ಹೊಂದಿದದಂಡ ಊರುಗೋಲಾಯಿತು . ಸರ್ಪವು ಪ್ರಮಾಣವಚನವಾಯಿತು . ಬ್ರಹ್ಮನ ಶಿರವೇ ಕಮಂಡಲವಾಯಿತು . ಹುಲಿ ಮತ್ತು ಜಿಂಕೆಯ ಚರ್ಮಗಳು ಉಡುವ ಮತ್ತು ಹೊದೆಯುವ ವಸ್ತ್ರವಾದವು .

ಶಿವನು ಕಾಲಿನಿಂದ ಮೆಟ್ಟಿಕೊಂಡಿರುವ ನಾಗಾಸುರರು ಪಾದರಕ್ಷೆಗಳಾಗಿ , ಕೊರಳಿನಲ್ಲಿ ಕಟ್ಟಿಕೊಂಡಿರುವ ಶಿರೋಮಾಲೆ ಜಪಮಾಲೆಯಾಗಿ ಮಹಾವೃದ್ಧನಾಗಿ ರೂಪಧರಿಸಿ ಕೈಲಾಸದಿಂದ ಹೊರಟು ಚೋಳದೇಶದ ಮಣಮಂದ ಪುತ್ತೂರಿನ ಮುಂದೆ ಇಳಿದನು . ಕೈಯಲ್ಲಿರುವ ಕೊಡೆ ,

ಮೈಯ ಸುಕ್ಕು , ಜೋತಾಡುವ ಹುಬ್ಬು , ನೇತಾಡುವ ತೋಳಿನ ಚರ್ಮ , ಇಟ್ಟಿರುವ ವಿಭೂತಿ , ನೆಲಕ್ಕೆ ಊರಿದ ಊರುಗೋಲು , ಹಿಡಿದ ಕಮಂಡಲ , ಇಳಿಬಿಟ್ಟ ಬಿಳಿಯಗಡ್ಡ ನಡುಗುವ ನರೆತ ತಲೆ , ನರೆತು ಹೋಗಿ ಸಡಿಲವಾಗಿರುವ ಸರ್ವಾಂಗದಿಂದ ಶಿಥಿಲವಾಗಿದ್ದ ವೃದ್ಧನು ಪುಣ್ಯವೇ ಹಣ್ಣಾದಂತೆ ಒಮೊಮ್ಮೆ ಕಮ್ಮುತ್ತ ,

ಒಮ್ಮೊಮ್ಮೆ ಗೊರ್ ಗೊರ್ ಎಂದು ಶಬ್ದ ಮಾಡುತ್ತಾ ತೊದಲುವ ಮಾತುಗಳಿಂದ ನಮಃಶಿವಾಯ ಎನ್ನುತ್ತಾ ನಡುಗುತ್ತಾ ಹೊರಗೆ ನೆರೆದಿದ್ದ ಜನರೆಲ್ಲಾ ನೋಡುತ್ತಿರಲು ಚಪ್ಪರದ ಬಾಗಿಲಿಗೆ ಬಂದಾಗ ಬಾಗಿಲಿನಲ್ಲಿ ನಿಂತಿದ್ದ ಕಾವಲುಗಾರರು ಒಳಗೆ ಹೋಗಲು ತಡೆದರೂ ಅವರಿಗೆ ತಿಳಿಯದಂತೆ ಮದುವೆ ಮಂಟಪದೊಳಗೆ ನುಗ್ಗಿ ಹೋಗುತ್ತಿರುವಾಗ ,

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

Kannada Deevige 9th Standard Haralile Question Answer

1. ನಂಬಿಯಣ್ಣನ ಪೂರ್ವಜನ್ಮದ ಹೆಸರೇನು ?

ಉತ್ತರ : ನಂಬಿಯಣ್ಣನ ಪೂರ್ವಜನ್ಮದ ಹೆಸರು ‘ ಪುಷ್ಪದತ್ತ ‘

2. ಹರಲೀಲೆ ಪಾಠದ ಮೂಲ ಕೃತಿ ಯಾವುದು ?

ಉತ್ತರ : ಹರಲೀಲೆ ಪಾಠದ ಮೂಲ ಕೃತಿ ‘ ನಂಬಿಯಣ್ಣನ ರಗಳೆ ‘

3 , ಹರಲೀಲೆ ಪಾಠದ ಕವಿಯ ಹೆಸರೇನು ?

ಹರಲೀಲೆ ಪಾಠದ ಕವಿಯ ಹೆಸರು ಹರಿಹರ

4. ಗಿರಿಜೆಯು ಎಲ್ಲಿ ಇರಬೇಕೆಂದು ಶಿವನು ತಿಳಿಸಿದನು ?

ಉತ್ತರ : ಗಿರಿಜೆಯು ಊರಲ್ಲಿರುವ ದೇವಾಲಯದಲ್ಲಿ ಇಂಬೇಕೆಂದು ಶಿವನು ತಿಳಿಸಿದನು .

5. ಹರಿಹರ ಬರೆದಿರುವ ಎರಡು ಕೃತಿಗಳನ್ನು ಹೆಸರಿಸಿ .

ಉತ್ತರ : ಗಿರಿಜಾಕಲ್ಯಾಣ , ‘ ಪಂಪಾಶತಕ ‘ , ‘ ರಕ್ಷಾಶತಕ ‘ ಹರಿಹರ ಅವರು ಬರೆದ ಕೃತಿಗಳು .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ ,

1. ವಿರೂಪಾಕ್ಷನು ಗಿಂಜೆಗೆ ಏನೆಂದು ಹೇಳಿದನು ?

ಉತ್ತರ : ವಿರೂಪಾಕ್ಷನು ಗಿರಿಜೆಗೆ ” ದೇವಿ , ಕೇಳು ನಮ್ಮ ಮತ್ರನಾದ ಪುಷ್ಪದತ್ತನು ಭೂಲೋಕದಲ್ಲಿ ನಂಬಿಯಣ್ಣನಾಗಿ ಜನಿಸಿದ್ದಾನೆ . ಈಗ ಅವನು ಸಂಸಾರದಿಂದ ಕೆಟ್ಟು ಹೋಗಲು ಹವಣಿಸುತ್ತಿದ್ದಾನೆ .

ಆತನಿಗೆ ಮುಂಚೆ ನೀಡಿದ ಆಭಯದಂತೆ ಈ ನಾನು ಭೂಲೋಕಕ್ಕೆ ಹೋಗಿ , ಇಲ್ಲಿದ್ದ ರುದಕನ್ನಿಕೆಯರು ಚೋಳದೇಶದ ತಿರವಾರೂರು ಮತ್ತು ತಿರುವತ್ತಿಯೂರಿನಲ್ಲಿ ಪರಿವೆ ಮತ್ತು ಸಂಕಿಲಿಯರಾಗಿ ಜನಿಸಿದ್ದಾರೆ .

ನಾನು ಹೋಗಿ ಅವರಿಂದ ಸಕಲಸುಖವನ್ನು ಪೂಜೆಯನ್ನು ಕೈಗೊಂಡು ಬರುತ್ತೇನೆ ” ಎಂದು ಪರಮೇಶ್ವರನು ಗಿರಿಜೆಗೆ ಹೇಳಿದನು .

2. ಚೋಳದೇಶದಲ್ಲಿದ್ದ ಮೂರು ಗ್ರಾಮಗಳನ್ನು ಹೆಸರಿಸಿ

ಉತ್ತರ : ಚೋಳದೇಶದಲ್ಲಿದ್ದ ಮೂರು ಗ್ರಾಮಗಳೆಂದರೆ ಮಣಮಂದ ಮತ್ತೂರು , ತಿರುವಾರೂರು , ಮತ್ತು ತಿರುವತ್ತಿಯೂರು

3.  ವೃದ್ಧಮಾಹೇಶ್ವರನು ಶಿವಮಂತ್ರವನ್ನು ಹೇಳುತ್ತಿದ್ದ ರೀತಿಯನ್ನು ತಿಳಿಸಿ . 

ಉತ್ತರ : ವೃದ್ಧಮಾಹೇಶ್ವರನು ಪುಣ್ಯವೇ ಹಣ್ಣಾದಂತೆ ಮದುವೆ ಮಂಟಪದಲ್ಲಿ ಕಲಿಯುತ್ತಾ ಇದ್ದನು ಒಮ್ಮೊಮ್ಮೆ ಗೊರ್ ಗೊರ್ ಎಂದು ಶಬ್ದ ಮಾಡುತ್ತಾ ಕೊರಗುತ್ತಿದ್ದನು . ತೊದಲು ನುಡಿಗಳಿಂದ ನಮಃ ಶಿವಾಯ ನಮಃ ಶಿವಾಯ ಎಂದು ಶಿವಮಂತ್ರವನ್ನು ಹೇಳುತ್ತಿದ್ದನು .

4. ಕೆಳಗೆ ಬಿದ್ದ ವೃದ್ಧನನ್ನು ನೋಡಿ ನೆರೆದಿದ್ದ ಜನ ಏನೆಂದು ಮಾತನಾಡಿಕೊಂಡರು ?

ಉತ್ತರ : ವೃದ್ಧ ಮಾದೇಶ್ವರನು ಕೆಳಗೆ ಬಿದ್ದಾಗ ಅಲ್ಲಿ ಸೇರಿದ್ದರ ಜನರೆಲ್ಲರೂ ಶೈತ್ಯೋಪಚಾರ ಮಾಡಿ ಎಬ್ಬಿಸಿದರು . ಜನರು ಕೋಪದಿಂದ “ ಈ ವೃದ್ಧ ವಾಹಣನನ್ನು , ಮುಪ್ಪಿನ ಮೂರ್ಖನನ್ನು , ಗೌತಮನ ಗೋವನ್ನು ,

ಬ್ರಾಹ್ಮಣನ್ನು ಕೊಂದ ಬ್ರಹ್ಮಹತ್ಯಾದೋಷಿಯನ್ನು ಮದುವೆ ಮಂಟಪದೊಳಗೆ ಬಿಟ್ಟವರು ಯಾರು ? ಕರೆ ತಂದವರು ಯಾರು ? ಇನ್ನೂ ಈ ಮದುವೆ ನಡೆಯದು . ಒಂದು ಪಕ್ಷ ನಡೆದರೆ ಅಪ ಶಕುನ ” ಎಂದು ನೆರೆದಿದ್ದ ಜನ ಮಾತನಾಡಿಕೊಂಡರು .

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ .

1. ಶಿವನು ವೃದ್ಧಮಾಹೇಶ್ವರನಾಗಿ ವೇಷಧರಿಸಲು ಕಾರಣವೇನು ?

ಉತ್ತರ : ಕೈಲಾಸದಲ್ಲಿರುವ ಉದ್ಯಾನವನದಲ್ಲಿ ಇಬ್ಬರು ರುದ್ರಕನ್ನಿಕೆಯರು ಹೂ ಬಿಡಿಸುತ್ತಿದ್ದರು . ಇದನ್ನು ರುದ್ರಗಣದ ಸದಸ್ಯರಲ್ಲೊಬ್ಬನಾದ ಪುಷ್ಪದತ್ತ ಗಮನಿಸಿ ಅವರನ್ನು ಅನುರಾಗ ಭಾವದಿಂದ ನೋಡಿದನು .

ಪುಷ್ಪದತ್ತನನ್ನು ಕಂಡ ರುದ್ರಕನ್ನಿಕೆಯರೂ ಅವನನ್ನು ಅದೇ ಭಾವದಿಂದ ನೋಡುತ್ತಿರುವುದನ್ನು ಶಿವ ಗಮನಿಸಿದ ಮತ್ತು ಅಸಮಾಧಾನ ಹೊಂದಿದ ಕೈಲಾಸದಲ್ಲಿ ಗಣಗಳು ಇಂತಹ

ವಿಕಾರಭಾವನೆಗಳನ್ನು ಹೊಂದಿರುವುದು ಅಪರಾಧ ಹಾಗಾಗಿ ಶಿವನು ಈ ಮೂವರಿಗೂ ಇಹಲೋಕದಲ್ಲಿ ಮನುಜರಾಗಿ ಹುಟ್ಟಿ ಎಂದು ಶಪಿಸಿದನು .

ಈ ಶಾಪದಿಂದ ಮುಷದತ್ತನು ನರಲೋಕದಲ್ಲಿ ಹುಟ್ಟಿ ನಂಬಿ ಎಂಬ ಹೆಸರನ್ನು ಪಡೆದು ಸಂಸಾರದಿಂದ ಕೆಟ್ಟು ಹೋಗುವುದಕ್ಕೆ ಸಿದ್ಧನಾಗುತ್ತಿದ್ದಾನೆ .

ಆತನಿಗೆ ಮುಂಚೆ ನೀಡಿದ ನಂಬಿಕೆಯ ಮಾತನ್ನು ಅನುಸರಿಸಿಕೊಂಡು ನಾವು ಕಳುಹಿಸಿದ ರುದ್ರ ಕನ್ನಿಕೆಯರಿಬ್ಬರೂ ಚೋಳದೇಶದ ತಿರುವಾರೂರು ಮತ್ತು ತಿರುವತ್ತಿಯೂರಿನಲ್ಲಿ ಪರವೆ ಮತ್ತು ಸಂಕಿಲೆ ಎಂಬ ಹೆಸರಿನಿಂದ ಹುಟ್ಟಿದ್ದಾರೆ .

ಅವರನ್ನು ಆತನೊಡನೆ ಸೇರಿಸಿ , ಸಕಲಸುಖವನ್ನು ಪೂಜೆಯಾಗಿ ಸ್ವೀಕರಿಸಿ ಬರುವೆನು ಎಂದು ಶಿವನು ವೃದ್ಧಮಾಹೇಶ್ವರ ವೇಷಧರಿಸಿದನು .

2 , ವೃದ್ಧಮಾಹೇಶ್ವರನನ್ನು ಕವಿ ಹೇಗೆ ವರ್ಣಿಸಿದ್ದಾನೆ ?

ಉತ್ತರ : ವೃದ್ಧಮಾಹೇಶ್ವರನನ್ನು ಕವಿ ಪಾದದಿಂದ ತಲೆಯವರೆಗೂ ಲೇಪಿಸಿದಕೊಂಡ ವಿಭೂತಿ , ನರೆತ ತಲೆ , ಸುಕ್ಕುಗಟ್ಟಿದ ದೇಹ ಹೊಂದಿದನು , ಆತನ ಜಟೆಯಲ್ಲಿದ ಚಂದ್ರಕಳೆಯೇ ಕೊಡೆಯಾಯಿತು .

ಹಿಡಿದಿದ್ದ ತ್ರಿಶೂಲ ಕೊಡೆಯ ಹಿಡಿಕೆಯಾಯಿತು . ನರಕಪಾಲ ಹೊಂದಿದದಂಡ ಊರುಗೋಲಾಯಿತು . ಸರ್ಪವು ಪ್ರಮಾಣವಚನವಾಯಿತು . ಬ್ರಹ್ಮನ ಶಿರವೇ ಕಮಂಡಲವಾಯಿತು . ಹುಲಿ ಮತ್ತು ಜಿಂಕೆಯ ಚರ್ಮಗಳು ಉಡುವ ಮತ್ತು ಹೊದೆಯುವ ವಸ್ತ್ರವಾದವು .

ಶಿವನು ಕಾಲಿನಿಂದ ಮೆಟ್ಟಿಕೊಂಡಿರುವ ನಾಗಾಸುರರು ಪಾದರಕ್ಷೆಗಳಾಗಿ , ಕೊರಳಿನಲ್ಲಿ ಕಟ್ಟಿಕೊಂಡಿರುವ ಶಿರೋಮಾಲೆ ಜಪಮಾಲೆಯಾಗಿ ಮಹಾವೃದ್ಧನಾಗಿ ರೂಪಧರಿಸಿದನು . ಎಂದು ವರ್ಣಿಸಿದ್ದಾರೆ .

3. ಮದುವೆ ಮಂಟಪದಲ್ಲಿ ವೃದ್ಧನು ಮಾಡಿದ ಅವಾಂತರಗಳಾವುವು ?

ಉತ್ತರ : ವೃದ್ಧ ಮಾಹೇಶ್ವರನು ಮದುವೆ ಮಂಟಪದೊಳಗೆ ಪ್ರವೇಶ ಮಾಡಲು ಮೆಲ್ಲಮೆಲ್ಲನೆ ನಡೆಯುತ್ತಾ , ಕೆಮ್ಮುತ್ತ ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದು ಮನಸಿನ್ನಲಿಯೇ ನಸುನಕ್ಕು

ವಿವಾಹ ಮಂಟಪದ ಬಳಿ ಸಾಲಾಗಿ ಜೋಡಿಸಿದ್ದ ತುಪ್ಪದ ಕೊಡಗಳನ್ನು ಉರುಳಿಸಿ ತಾನೂ ಬಿದ್ದು ತುಪ್ಪವೂ ಎಲ್ಲರ ಮುಖಕ್ಕೆ , ಕಣ್ಣುಗಳಿಗೆ , ಮೈಯ ಮೇಲೆ ಸಿಡಿಯುವಂತೆ ಮಾಡಿದನು . ಮದುವೆ ಮಂಟಪದ ಬಳಿ ಸೇರಿದ್ದ ಜನರೆಲ್ಲಾ ಈ ವೃದ್ಧ ಮಾಹೇಶ್ವರನ್ನು ಹಿಡಿದು ನಿಲ್ಲಸಿದರು

. ಒಂದೆರಡು ಹೆಜ್ಜೆ ಇಟ್ಟ ತಕ್ಷಣವೇ ಘಳಿಗೆ ಬಟ್ಟಲ ಮೇಲೆಬಿದ್ದು ಹೊಡೆದು ಹಾಕಿದನು . ಕಳಶ ಒಡೆದುಹೋಗಿ , ಅಕ್ಕಿಯೆಲ್ಲ ಚೆಲ್ಲಿಹೋಯಿತು . ಜೋಯಿಸರು ಚದುರಿ ಓಡಿಹೋದರು . ಎಲ್ಲರು ಇದನ್ನು ಅಪಶಕುನವೆಂಬಂತೆ ಭಾವಿಸುವಂತೆ ಮಾಡಿದನು .

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. “ ಸಕಲಸುಖಮಂ ಪೂಜೆಯಾಗಿ ಕೈಕೊಂಡುಬರ್ಪೆನ್

ಆಯ್ಕೆ : ಈ ವಾಕ್ಯವನ್ನು ತಿ.ನಂ. ಶ್ರೀಕಂಠಯ್ಯನವರು ಸಂಪಾದಿಸಿರುವ ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ಆಯ್ದ ` ಹರಲೀಲೆ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಕೈಲಾಸಲದಲ್ಲಿ ಶಿವನು ಈ ಮಾತನ್ನ ಗಿರಿಜೆಗೆ ಹೇಳುತ್ತಾನೆ . ನಮ್ಮ ಪರಿವಾರದ ಪುಷ್ಪದತ್ತನು ಭೂಲೋಕದಲ್ಲಿ ನಂಬಿಯಣ್ಣನಾಗಿ ಹುಟ್ಟಿ ಈಗ ವಿವಾಹದಿಂದ ಕೊಟ್ಟು ಹೋಗಲು ಸಿದ್ಧನಾಗುತ್ತಿದ್ದಾನೆ .

ನಾನು ಈಗಲೇ ಭೂಲೋಕಕ್ಕೆ ಹೋಗುತ್ತೇನೆ . ಎಂದು ಹೇಳುವ ಸಂದರ್ಭವಾಗಿದೆ .

ಸ್ವಾರಸ್ಯ : ಶಿವನು ಪುಷ್ಪದತ್ತನಿಗೆ ಆದಷ್ಟು ಬೇಗನೆ ನಿಮ್ಮನ್ನು ಕೈಲಾಸಕ್ಕೆ ಕರೆ ತರುತ್ತೇನೆ ಎಂಬ ಆಶ್ವಾಸನೆ ನೀಡಿರುತ್ತಾನೆ . ಅದರಂತೆ ಶಿವನು ಭೂಲೋಕಕ್ಕೆ ಹೋಗಿ ಸಕಲಸುಖವನ್ನು ಪೂಜೆಯಾಗಿ ಪಡೆದು ಬರುತ್ತೇನೆ ಎಂಬ ಮಾತು ಸ್ವಾರಸ್ಯ ಪೂರ್ಣವಾಗಿ ವರ್ಣಿತವಾಗಿದೆ

2. “ ನೀನತ್ಯಂತ ಕರುಣಿ ”

ಆಯ್ಕೆ : ಈ ವಾಕ್ಯವನ್ನು ತಿ.ನಂ. ಶ್ರೀಕಂಠಯ್ಯನವರು ಸಂಪಾದಿಸಿರುವ ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ಆಯ್ದ ‘ ಹರಲೀಲೆ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಶಿವನು ಭೂಲೋಕಕ್ಕೆ ಹೋಗಿ , ನಂಬಿಯಣ್ಣನನ್ನು ಮದುವೆ ಸಂಭ್ರಮದ ಮಂಟಪದಿಂದ ಮತ್ತೆ ಕೈಲಾಸಕ್ಕೆ ಕರೆತರುವೇನು . ಎಂದಾಗ ತಾನು ಬರುವುದಾಗಿ ಗಿರಿಜೆಯು ಹೇಳಿದಾಗ ಶಿವನು ಬೇಡವೆನ್ನುತ್ತಾನೆ .

ಏಕೆಂದರೆ ತಾನು ಅಲ್ಲಿ ಕೆಲವು ಕಠೋರವಾದ ನಿಷ್ಠುರವಾದ ಕೆಲಸವನ್ನು ಮಾಡಬೇಕಾಗಿದೆ . ನೀನು ಅದನ್ನು ಸಹಿಸುವುದಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಶಿವನು ಹೇಳುತ್ತಾನೆ .

ಸ್ವಾರಸ್ಯ : ಶಿವನು ಭೂಲೋಕಕ್ಕೆ ಬಂದು ನಿಷ್ಠುರವಾದ ಕೆಲಸಗಳನ್ನು ಮಾಡಬೇಕಾಗಿದೆ . ಇದನ್ನು ಕರುಣಾಮಯಿಯಾದ ಗಿರಿಜೆಯು ನೋಡಿದರೆ ನನ್ನ ಕೆಲಸಗಳಿಗೆ ಅಡ್ಡಿಪಡಿಸಬಹುದು ಎಂಬುದು ಸ್ವಾರಸ್ಯಕರವಾಗಿದೆ .

3. “ ಪುಣ್ಯಂ ಪಣ್ಣಾದಂತೆ ”

ಆಯ್ಕೆ : ಈ ವಾಕ್ಯವನ್ನು ತಿ.ನಂ. ಶ್ರೀಕಂಠಯ್ಯನವರು ಸಂಪಾದಿಸಿರುವ ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ಆಯ್ದ ‘ ಹರಲೀಲೆ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಕವಿ ಹರಿಹರ ಹೇಳಿದ್ದಾರೆ . ಶಿವನು ವೃದ್ಧಮಾಹೇಶ್ವರನಾಗಿ ವೇಷವನ್ನು ಮರೆಸಿಕೊಂಡು ಭೂಲೋಕಕ್ಕೆ ಹೊರಟ ಸಂದರ್ಭವಾಗಿದೆ . ಬಿಳಿಕೂದಲು ಸುಕ್ಕು ಗಟ್ಟಿದ ಚರ್ಮದಿಂದ ಪುಣ್ಯವೆಲ್ಲಾ ಹಣ್ಣಾದಂತೆ ಶಿವನು ಕಂಡು ಬರುತ್ತಾನೆಂದು ಕವಿ ಹರಿಹರ ವರ್ಣಿಸಿದ್ದಾರೆ .

ಸ್ವಾರಸ್ಯ : ಶಿವನು ನೂರು ವರ್ಷದ ಮುದುಕನ ವೇಷ ಧರಿಸಿರುವುದು ಪುಣ್ಯವೇ ಹಣ್ಣಾದಂತೆ ಎಂದು ಕವಿ ವರ್ಣಿಸಿರುವ ಸಾಲು ಸ್ವಾರಸ್ಯಕರವಾಗಿದೆ .

4. “ ಈ ವೃದ್ಧಂ ಕಿಟುಕುಳನಲ್ಲ “

ಆಯ್ಕೆ : ಈ ವಾಕ್ಯವನ್ನು ತಿ.ನಂ. ಶ್ರೀಕಂಠಯ್ಯನವರು ಸಂಪಾದಿಸಿರುವ ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ಆಯ್ದ ‘ ಹರಲೀಲೆ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಶಿವನು ಮದುವೆ ಮಂಟಪದಲ್ಲಿ ಮಾಡಿದ ಅವಾಂತರಗಳನ್ನು ನೋಡಿದ ಜನರು ಶಿವನನ್ನು ಕರೆದುಕೊಂಡು ಬಂದು ಮದುವೆ ಚಪ್ಪರದ ಹೊರಗೆ ಬಿಟ್ಟು ,

ಮದುವೆ ಮಂಟಪದ ಬಳಿ ಹೋಗುವ ಮೊದಲೇ ಶಿವನು ಮಂಟಪ ತೋರಣಗಳನ್ನು ಕೀಳುವುದನ್ನು ನೋಡಿದ ಜನರು ಆಶ್ಚರ್ಯದಿಂದ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಶಿವನು ಮಾಡಿದ ಪವಾಡವನ್ನು ಅರ್ಥಮಾಡಿಕೊಂಡ ಜನರು ಈ ವೃದ್ಧ ನಮಗೆ ತೊಂದರೆ ಕೊಡಲು ಬಂದಿಲ್ಲ ಎಂದು ಯೋಚನೆ ಮಾಡುವದು ಸ್ವಾರಸ್ಯಕರವಾಗಿದೆ .

ಉ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .

1 . ಹರಿಹರನ ಕಾಲ,,,,,,,,,,,,( 1160 1360 1200 1460 )

2. ವೃದ್ಧಮಾಹೇಶ್ವರ,,,,,,,,,,,,,ಕೊಡದ ಮೇಲೆ ಬಿದ್ದನು( ಎಣ್ಣೆಯ ಹಾಲಿನ ತುಪ್ಪದ ಮಜ್ಜಿಗೆ)

3 , ಹರಲೀಲೆ ಪಾಠವನ್ನು,,,,,,,,,  ರಗಳೆಯಿಂದ ಆಯ್ದುಕೊಳ್ಳಲಾಗಿದೆ .

( ಬಸವರಾಜ ದೇವರ ರಗಳೆ ನಂಬಿಯಣ್ಣನರಗಳ ಗುಂಡಯ್ಯನರಗಳೆ ಮಹಾದೇವಿಯಕ್ಕನ ರಗಳೆ )

4. ವೃದ್ಧಮಾಹೇಶ್ವರನು ಕೈಲಾಸದಿಂದ,,,,,,,,,,,,,,,, ಗೆ ಬಂದನು . ( ಮಣಮಂದಪುತ್ತೂರು ತಿರುವಾರೂರು ತಿರುವತ್ತಿಯೂರ್‌,  ಕೈಲಾಸಪುರ

೧, 1200

೨, ತುಪ್ಪದ

೩. ನಂಬಿಯಣ್ಣನರಗಳೆ

೪ , ಮಣಮಂದಪುತ್ತೂರು

ಹೊಂದಿಸಿ ಬರೆಯಿರಿ

“ಅ” ಪಟ್ಟಿ                                                ‘ ಆ ‘ ಪಟ್ಟಿ

1. ಪುಷ್ಪದತ್ತ                                            ಹಂಪಿ

2 , ರುದ್ರಕನ್ನಿಕೆಯರು                                ಬಾಗಿಲು

3. ಚೋಳದೇಶ                                           ನಂಬಿಯಣ್ಣ

4. ಕದ                                                       ಪರವೆ-ಸಂಕಿಲೆ

5 , ಗಿರಿಜೆ                                                    ಮಣಮಂದಪುತ್ತೂರು

ಶಿವ

ಪಾರ್ವತಿ

ಸರಿ ಉತ್ತರಗಳು.

1. ನಂಬಿಯಣ್ಣ

2. ಪರವೆ – ಸಂಕಿಲೆ

3. ಮಣಮಂದಪುತ್ತೂರು

4. ಬಾಗಿಲು

5  ಪಾರ್ವತಿ

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .

1. ಕರ್ತರಿ ಪ್ರಯೋಗ ವಾಕ್ಯದ ವಿಶೇಷತೆಯನ್ನು ತಿಳಿಸಿ ,

ಉತ್ತರ : ಕರ್ತರಿ ಪ್ರಯೋಗದ ವಾಕ್ಯದ ಕ್ರಿಯಾಪದಕ್ಕೆ ಕರ್ತೃವಿನ ಲಿಂಗ , ವಚನ ಬಂದರೆ ಅದು ಕರ್ತರಿ ಪ್ರಯೋಗ , ಉದಾ : ಅಣ್ಣ ಅನ್ನವನ್ನು ಉಂಡನು . ಇದು ಕರ್ತರಿ ಪ್ರಯೋಗದ ವಾಕ್ಯ ಇಲ್ಲಿ ಕರ್ತೃ ಪದ ಮಲ್ಲಿಂಗ ಇದೆ ಕ್ರಿಯಾಪದ ಉಂಡನು ಪುಲ್ಲಿಂಗ ಇದೆ . ಅಣ್

2. ವಿಧ್ಯರ್ಥಕ ಕ್ರಿಯಾಪದ ಎಂದರೇನು ? ಎರಡು ಉದಾಹರಣೆ ಕೊಡಿ ,

ಉತ್ತರ : ಆಶೀರ್ವಾದ , ಅಪ್ಪಣೆ , ಆಜ್ಞೆ , ಹಾರೈಕೆ ಸಮ್ಮತಿ ಇತ್ಯಾದಿ ವಿಧಿಗಳನ್ನು ಹೊಂದಿರುವ ಕ್ರಿಯಾಪದಗಳ ವಿಧ್ಯರ್ಥಕ ಕ್ರಿಯಾಪದಗಳು . ಉದಾ : ಓದಲಿ , ಆಗಲಿ , ಬರೆಯಲಿ ಇತ್ಯಾದಿ ,

3. ಸಂಭಾವನಾರ್ಥಕ ಕ್ರಿಯಾಪದವನ್ನು ಸೂತ್ರ ಸಹಿತ ವಿವರಿಸಿ ,

ಉತ್ತರ : ಕ್ರಿಯೆ ನಡೆಯುವ ಬಗ್ಗೆ ಸಂಶಯ ಅಥವಾ ಊಹೆಯನ್ನು ವ್ಯಕ್ತಪಡಿಸುವಂತಹ ಪದಗಳೇ ಸಂಭಾವನಾರ್ಥಕ ಕ್ರಿಯಾಪದಗಳು , ಉದಾ : ಅವರು ನಾಳೆ ಬಂದಾರು , – ಚೆಂಡು ಮೇಲಕ್ಕೆ ಹೋದೀತು .

ಈ ವಾಕ್ಯಗಳಲ್ಲಿರುವ ಬಂದಾರು . ಹೋದೀತು ಎಂಬ ಕ್ರಿಯಾಪದಗಳು ಸಂಶಯ ಅಥವಾ ಊಹೆಯನ್ನು ಸೂಚಿಸುತ್ತವೆ .

ಆ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .

1. ‘ ದೇವರು ಎಲ್ಲರಿಗೂ ಒಳ್ಳೆಯದನ್ನೇ ಉಂಟುಮಾಡಲಿ – ಈ ವಾಕ್ಯದಲ್ಲಿರುವ ಕ್ರಿಯಾಪದ

ಆ ) ದೇವರು ಆ ) ಎಲ್ಲರಿಗೂ ಇ ) ಒಳ್ಳೆಯದನ್ನೆ ಈ ) ಉಂಟುಮಾಡಲಿ

ಉತ್ತರ  ಈ) ಉಂಟುಮಾಡಲಿ

2. ಈ ಪದವು ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ,,,,,,,,,,

ಆ ) ತಿನ್ನನು ಆ ) ತಿನ್ನಲಿ 3 .ತಂದಾನು, 4, ತಿನ್ನುತಾನೆ

ಉತ್ತರ : ಅ ) ತಿನ್ನನು

3. ಇದು ಈ ಗುಂಪಿಗೆ ಸೇರದ ಪದವಾಗಿದೆ,,,,,,,,,,,,,,

ಅ ) ಉತ್ಸಾಹ  ಆ) ಉಪಮಾ  ಇ ) ಮಂದಾನಿಲ ಈ ) ಲಲಿತ

ಉತ್ತರ :ಆ ) ಉಪಮಾ

4. ‘ ಎಳಸಿರ್ಪ ‘ ಈ ಪದದ ಅರ್ಥ,,,,,,,,,,,

ಅ) ಎಳೆಯದಾಗಿರುವ ಆ ) ಮಿತಿಯಿಲ್ಲದ ಇ ) ರುಚಿಯಾದ ಈ ) ಸುತ್ತುವರಿದಿರುವ

ಈ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ , ಗಣ ವಿಭಾಗಮಾಡಿ , ಛಂದಸ್ಸಿನ ಹೆಸರು ಬರೆದು , ಲಕ್ಷಣ ಬರೆಯಿರಿ . ರಸಫಳಂಗಳನ ಸುತಿರ್ಪ ಶುಕನಿಕರಮಂ

ಪೊಸ ಪೂವನೆಳಸಿಪರ್ಪಿ ಮಧುಕರ ಪ್ರಕರಮಂ

ಈ ) ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ಬರೆಯಿರಿ .

Kannada Deevige 9th prabandha

1) ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ

ಪೀಠಿಕೆ : ಒಂದು ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ ಭಾರತದಂತಹ ವೈವಿಧ್ಯತೆಯುಳ್ಳ ರಾಷ್ಟ್ರಗಳಲ್ಲಿ ಏಕತೆಯನ್ನು ತರುವುದು ಇಂತಹ ರಾಷ್ಟ್ರೀಯ ಹಬ್ಬಗಳ ಮೂಲಕ ಸಾಧ್ಯವಿದೆ .

ಇಡಿ ರಾಷ್ಟ್ರದ ಜನರೆಲ್ಲರೂ ಯಾವುದೇ ಭೇದಭಾವವಿಲ್ಲದೆ , ಜಾತಿ , ಧರ್ಮ , ಪ್ರಾದೇಶಿಕ ಭಿನ್ನತೆಯನ್ನು ತೊರೆದು ಒಟ್ಟಾಗಿ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳು ಎಂದು ಕರೆಯಬಹುದು .

ನಮ್ಮದೇಶದಲ್ಲಿ ಮೂರು ರಾಷ್ಟ್ರೀಯ ಹಬ್ಬಗಳೆಂದು ಘೋಷಿಸಲಾಗಿದೆ ಅವುಗಳೆಂದರೆ ಸ್ವಾತಂತ್ರ್ಯ ದಿನಾಚರಣೆ ಗಣರಾಜ್ಯೋತ್ಸವ ಗಾಂಧಿ ಜಯಂತಿ

ವಿಷಯ ವಿವರಣೆ : 1 ) ಸ್ವಾತಂತ್ರ್ಯ ದಿನಾಚರಣೆ : ಭಾರತ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು ವ್ಯಾಪಾರದ ಉದ್ದೇಶದಿಂದ ಬಂದ ಬ್ರಿಟೀಷರು ಭಾರತೀಯ ಅರಸರುಗಳು ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಭಾರತ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು .

ಭಾರತಿಯರಿಗೆ ಸ್ವಾತಂತ್ರ ಎನ್ನವುದೇ ಇರಲಿಲ್ಲ . ಹಾಗಾಗಿ ಭಾರತೀಯರೆಲ್ಲರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ರಣಕಹಳೆಯನ್ನು ಊದಿ ಕೊನೆಗೆ 1947 ನೇ ಆಗಸ್ಟ್ 15 ರಂದು ಸ್ವಾತಂತ್ರವನ್ನು ಪಡೆದರು

ಆ ಸುದಿನವನ್ನೇ ಪ್ರತಿವರ್ಷ ಭಾರತೀಯರೆಲ್ಲರೂ ಒಟ್ಟಾಗಿ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ ರಾಷ್ಟ್ರೀಯ ಐಕ್ಯತೆಯನ್ನು ಮೆರೆಯುತ್ತಾರೆ .

ಅಂದು ಶಾಲಾ – ಕಾಲೇಜು – ಕಛೇರಿಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ ದೇಶಭಕ್ತಿ ಸಾರುವ ಕಾರ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ .

ಗಣರಾಜ್ಯೋತ್ಸವ : ಭಾರತದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ ಆಡಳಿತದ ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತದೆ . ಆ ರೂಪುರೇಷಗಳನ್ನು ಒಳಗೊಂಡಿರುವುದೇ

ನಮ್ಮ ಸಂವಿಧಾನ ಎಲ್ಲ ರಾಜ್ಯಗಳನ್ನು ಗಣಗಳನ್ನಾಗಿ ಮಾಡಿ ( ಒಟ್ಟುಗೂಡಿಸಿ ) ಉತ್ತಮವಾದ ಆಡಳಿತ ನಡೆಸಲು ಕಾನೂನುರೂಪ ಪಡೆದ ಸಂವಿಧಾನವನ್ನು ಜಾರಿಗೆ ತಂದ ದಿನವೇ ಗಣರಾಜ್ಯ ದಿನ .

ಇದನ್ನು ಕೂಡ ನಮ್ಮ ದೇಶದ ಪ್ರಜೆಗಳೆಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಾರೆ.ಈ ದಿನದಲ್ಲಿ ರಾಷ್ಟ್ರಧ್ವಜವನ್ನು ಆರಿಸಿ ಸಂವಿಧಾನದ ನಿರ್ಮಾತೃಗಳು ಹಾಗೂ ತತ್ವಗಳನ್ನು ಸ್ಮರಿಸಿಕೊಳ್ಳತ್ತಾರೆ .

ಪ್ರತಿಯೊಬ್ಬರು ಸಂವಿಧಾನ ಪಾಲಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳುವ ಆಶಯನ್ನು ಪಡೆಯುತ್ತಾರೆ . ಹಾಗೆಯೇ ದೇಶಭಕ್ತಿ ಸಾರುವ ಕಾರಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ . ಗಾಂಧಿ ಜಯಂತಿ :

ಯಾವುದೇ ಒಂದು ದೇಶದ ಜನರೆಲ್ಲರೂ ಒಟ್ಟಾಗಿ ಸೇರಲು ನಾಯಕತ್ವ ಬೇಕು , “ ನಾಯಕರಿಲ್ಲದ ನಾವೆ ದಡಸೇರಲಾರದು ” ಅಂತೆಯೇ ನಮ್ಮ ದೇಶದ ಸ್ವಾತಂತ್ರ್ಯ ಪಡೆಯಲು ಬಹುಮುಖ್ಯ ನಾಯಕತ್ವವಹಿಕೊಂಡವರು ನಮ್ಮ ದೇಶದ ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧಿಜಿಯವರು .

ಅವರ ಹುಟ್ಟಿದ ದಿನವೇ ಅಕ್ಟೋಬರ್ 2 , ಆ ದಿನವನ್ನು ಗಾಂಧಿಜಯಂತಿಯೆಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ .

ಏಕೆಂದರೆ ಗಾಂಧೀಜಿವರು ಸ್ವಾತಂತ್ರ್ಯ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡು ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡರು .

ಆದ್ದರಿಂದ ಅವರ ಆದರ್ಶಗಳನ್ನು ನೆನೆಯುತ್ತ ಅವರನ್ನು ಸ್ಮರಿಸುತ್ತಾ ಸ್ವಾತಂತ್ರ್ಯದ ಮಹತ್ವದಬಗ್ಗೆ ಕೊಂಡಾಡುವ ದಿನವಾಗಿದೆ 

ಉಪಸಂಹಾರ : ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಿಂದ ಪ್ರತಿಯೊಬ್ಬ ನಾಗರಿಕರಲ್ಲಿ ಏಕತೆ , ದೇಶಭಕ್ತಿ , ಸಂವಿಧಾನದ ಮಹತ್ವ , ನಾಯಕತ್ವದ ಮಹತ್ವ ಮುಂತಾದ ವಿಚಾರಗಳನ್ನು ತಿಳಿಯಲು ಮತ್ತು ನಾವು ಅದೇ ರೀತಿ ನಡೆದುಕೊಳ್ಳಲು ನೆರವಾಗುತ್ತದೆ ಎಂಬ ಆಶಯವನ್ನು ಇಟ್ಟುಕೊಳ್ಳೋಣ .

2) ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

ಪೀಠಿಕೆ : ಜನರು ವಾಸಮಾಡುತ್ತಿರುವ ಒಂದು ನಿರ್ಧಿಷ್ಟವಾದ ಭೌಗೋಳಿಕ ಪ್ರದೇಶವನ್ನು ದೇಶ ಎಂದು ಕರೆಯಬಹುದು . ಎಲ್ಲ ಜನರು ತಾವೆಲ್ಲ ಒಂದೇ ಎಂಬ ಭಾವನೆಗಳನ್ನು ಹೊಂದುವುದು ಐಕ್ಯತೆ .

ಅದೇ ರೀತಿ ದೇಶದಲ್ಲಿ ವಾಸಿಸುತ್ತಿರುವ ಜನರೆಲ್ಲರು ತಮ್ಮ ಧರ್ಮ ಜಾತಿ , ಕುಲ , ಭಾಷೆಗಳನ್ನು ಬದಿಗೊತ್ತಿ ಒಂದೇ ಕುಟುಂಬದ ಸದಸ್ಯರಂತೆ ವಾಸಮಾಡುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎಂದು ಕರೆಯಬಹುದು .

ಭಾರತದಂತಹ ವೈವಿಧ್ಯತೆಗಳಿಂದ ಕೂಡಿರುವ ರಾಷ್ಟ್ರದಲ್ಲಿ ಏಕತೆಯನ್ನು ಸಾಧಿಸುವುದು ಬಹಳ ಮುಖ್ಯವೆನಿಸುತ್ತದೆ .

ವಿಷಯ ವಿವರಣೆ : “ ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ” ಎಂಬ ಮಾತಿನಂತೆ ಹೆತ್ತತಾಯಿ ಹೊತ್ತಭೂಮಿಯು ಸ್ವರ್ಗವಿದ್ದಂತೆ.

ಇಂತಹ ಹೊತ್ತ ಭೂಮಿಯಲ್ಲಿ ವಾಸಿಸುವ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ . ರಾಷ್ಟ್ರದ ಐಕ್ಯತೆಗೆ ರಾಷ್ಟ್ರೀಯ ಭಾವನೆಯೂ ಅಗತ್ಯವಾದದು . ಭಾರತ ಸರ್ವಧರ್ಮಗಳ ನೆಲೆಬೀಡು , ಇಲ್ಲಿ ವಿವಿಧ ಜಾತಿ , ಮತ , ಪಂಥ , ಭಾಷೆ ಸಂಸ್ಕೃತಿಯ ಜನರು ಇದ್ದಾರೆ .

ಇಂತಹ ವೈವಿಧ್ಯತೆಯಿಂದ ಕೂಡಿರುವ ಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ರಾಷ್ಟ್ರೀಯ ಹಬ್ಬಗಳು , ರಾಷ್ಟ್ರಧ್ವಜ , ರಾಷ್ಟ್ರಲಾಂಛನ , ರಾಷ್ಟ್ರಗೀತೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ .

ಭಾರತದ ಪ್ರತಿಯೊಬ್ಬ ಪ್ರಜೆಯು ತನ್ನ ಸಂಕೀರ್ಣತೆಯನ್ನು ತೊರೆದು ಆಚರಿಸುವ ಸ್ವಾತಂತ್ರ್ಯ ದಿನಾಚರಣೆ , ಗಣರಾಜ್ಯೋತ್ಸವ , ಗಾಂಧಿಜಯಂತಿಗಳನ್ನು ಸಾಮೂಹಿಕವಾಗಿ ಆಚರಿಸಿದಾಗ ಐಕ್ಯತೆಯನ್ನು ಸಾಧಿಸಬಹುದು .

ರಾಷ್ಟ್ರಗೀತೆ , ರಾಷ್ಟ್ರಧ್ವಜಕ್ಕೆ ಗೌರವವನ್ನು ನೀಡುವುದು , ರಾಷ್ಟ್ರನಾಯಕರ ಉತ್ತಮ ಆದರ್ಶಗಳನ್ನು ಬೆಳೆಸಿಕೊಳ್ಳುವುದು ರಾಷ್ಟ್ರಕ್ಕೆ ಧಕ್ಕೆಯುಂಟಾದಾಗ ದೇಶದ ಎಲ್ಲ ಪಜೆಗಳು ಪರಸ್ಪರ ಸಹಾಯ ಸಹಕಾರದಿಂದ ನಡೆದುಕೊಂಡರೆ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರಬಹುದಾಗಿದೆ .

ಅಲ್ಲದೆ ರಾಷ್ಟ್ರಮಟ್ಟದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರಕ್ರಮಗಳು ಕೂಡ ರಾಷ್ಟ್ರೀಯ ಭಾವೈಕ್ಯತೆಯನ್ನು ತರಬಲ್ಲವು .

ಉಪಸಂಹಾರ ::ಎಲ್ಲರೂ ಎಲ್ಲರಿಗಾಗಿ ಎಂಬ ಮಂತ್ರದಿಂದ ಕಣ್ಣು ಬೇರೆಯಾದರೂ ನೋಟ ಒಂದೇ

ಭಾಷೆ ಬೇರೆಯಾದರೂ ಬಾವ ಒಂದೇ ಜಾತಿ , ಕುಲ , ಮತ , ಧರ್ಮ ಬೇರೆ ಬೇರೆಯಾದರೂ ಬಾಳುವ ದೇಶ ಒಂದೆಯಾಗಿದೆ ಎಂದ ಮೇಲೆ ನಾವೆಲ್ಲಾ ಒಂದೆ ತೊಟ್ಟಿಲಲ್ಲಿ ಬೆಳೆವ ಜನರು ನಾವು ಭಾರತೀಯರು ಐಕ್ಯತೆಯಮಂತ್ರ ಪಠಿಸುವವರಾಗಬೇಂಬುದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕಿದೆ .

FAQ :

1. ನಂಬಿಯಣ್ಣನ ಪೂರ್ವಜನ್ಮದ ಹೆಸರೇನು ?

ಉತ್ತರ : ನಂಬಿಯಣ್ಣನ ಪೂರ್ವಜನ್ಮದ ಹೆಸರು ‘ ಪುಷ್ಪದತ್ತ ‘

2. ಗಿರಿಜೆಯು ಎಲ್ಲಿ ಇರಬೇಕೆಂದು ಶಿವನು ತಿಳಿಸಿದನು ?

ಉತ್ತರ : ಗಿರಿಜೆಯು ಊರಲ್ಲಿರುವ ದೇವಾಲಯದಲ್ಲಿ ಇಂಬೇಕೆಂದು ಶಿವನು ತಿಳಿಸಿದನು .

3 , ಹರಲೀಲೆ ಪಾಠದ ಕವಿಯ ಹೆಸರೇನು ?

ಹರಲೀಲೆ ಪಾಠದ ಕವಿಯ ಹೆಸರು ಹರಿಹರ

ಇತರೆ ವಿಷಯಗಳು:

9th Standard All Subject Notes

9th Standard Kannada Textbook karnataka Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh