8ನೇ ತರಗತಿ ಕನ್ನಡ ಆಟೋರಿಕ್ಷಾದ ಪ್ರಸಂಗಗಳು ನೋಟ್ಸ್ ಪ್ರಶ್ನೋತ್ತರಗಳು, 8th Standard Autorikshada Rasaprasangagalu Kannada Notes Question Answer Mcq Pdf Download in Kannada Medium Karnataka State Syllabus 2024, Kseeb Solutions For Class 8 Puraka Pata 5 Auto Rikshada Rasaprasangagalu Notes
8th Autorikshada Rasaprasangagalu Kannada Notes
ಪಠ್ಯ ಪೂರಕ ಅಧ್ಯಯನ – 5
ಪಾಠದ ಹೆಸರು : ಆಟೋರಿಕ್ಷಾದ ರಸಪ್ರಸಂಗಗಳು
ಕೃತಿಕಾರರ ಹೆಸರು : ಎಚ್. ನರಸಿಂಹಯ್ಯ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರ ಅಭಿಪ್ರಾಯವೇನು?
ಉತ್ತರ : ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಹೋಗುವುದೇ ಒಂದು ಪ್ರಯಾಸದ ಕೆಲಸ.
ಎಂದು ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.
೨. ದೇಹಕ್ಕೆಲ್ಲ ನಟ್ಟು ಬೋಲ್ಟ್ ಹಾಕಿಸಿಕೊಳ್ಳುವುದಕ್ಕಿಂತ ಯಾವುದು ಲೇಸು?
ಉತ್ತರ : ಕೈಕಾಲು ಮುರಿದುಕೊಂಡು ಮೂಳೆ ವೈದ್ಯರ ಕೈಗೆ ಸಿಕ್ಕಿ ದೇಹದಲ್ಲಿ ನಟ್ಟೂ, ಬೋಲ್ಟೂ
ಹಾಕಿಸಿಕೊಂಡು ಬದುಕುವುದಕ್ಕಿಂತ ಅಲ್ಲಿಯೇ ಭಗವಂತನ ಪಾದಾರವಿಂದವನ್ನು ಸೇರುವುದೇ ಲೇಸು ಎಂದು ನನ್ನ
ಅಭಿಪ್ರಾಯ.
೩. ಸಿಡುಕಿನಿಂದ ಆಟೋ ಸ್ಟಾರ್ಟ್ ಮಾಡಿದ ಆಟೋ ಚಾಲಕ ಏನೆಂದು ಹೇಳಿದ ?
ಉತ್ತರ : “ರೀ ಸ್ವಾಮಿ, ಸುಮ್ಮನೆ ಕುಳಿತುಕೊಳ್ಳಿ. ನಿಮ್ಮಂತವರಿಂದಲೇ ಆಕ್ಸಿಡೆಂಟ್ ಆಗುವುದು.ಹತ್ತುವುದಕ್ಕಿಂತ
ಮುಂಚೇನೆ ಅಪಶಕುನ” ಎಂದು ಸಿಡುಕಿ ಗಾಡಿ ಸ್ಟಾರ್ಟ್ ಮಾಡಿದ ಚಾಲಕ.
೪. ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿಲ್ಲವೇಕೆ?
ಉತ್ತರ : “ಇಲ್ಲಪ್ಪ, ನನಗೇನೂ ಅಲ್ಲಿ ಭಯವಾಗುವುದಿಲ್ಲ. ಯಾಕೆಂದರೆ ವಿಮಾನಕ್ಕೆ ಯಾವಾಗಲೂ ಎಮ್ಮೆ, ಹಸು, ಜನ ಅಡ್ಡ ಬರಲಿಲ್ಲ. ಜೊತೆಗೆ ವಿಮಾನವನ್ನು ಓವರ್‌ಟೇಕ್ ಮಾಡಿದ ಪ್ರಸಂಗವೂ ಇಲ್ಲ” ಅದಕ್ಕಾಗಿ
ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿರಲಿಲ್ಲ.
೫. ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದ್ದವನಾರು?
ಉತ್ತರ : ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದರು ಸಾಯಿಬಾಬಾ.
೬. ಆಟೋ ಚಾಲಕರಲ್ಲಿಯೂ ಮಾನವೀಯತೆಯನ್ನುರಿತ ಪ್ರಸಂಗದ ಬಗ್ಗೆ ತಿಳಿಸಿ.
ಉತ್ತರ : ಒಂದು ಸಂಜೆ ಜಯನಗರದಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಒಂದು ಕಾರ್ಯಕ್ರಮವಿತ್ತು. ಅದು
ಮುಗಿಯುವುದು ರಾತ್ರಿ 10 ಘಂಟೆಯಾಯಿತು. ಆಟೋಗಾಗಿ ಕಾಲೇಜಿನ ಹತ್ತಿರ ಅಲ್ಲಿಯ ಕೆಲವು
ಉಪಾಧ್ಯಾಯರೊಂದಿಗೆ ಕಾದು ನಿಂತಿದ್ದೆ. “ಇಷ್ಟು ಹೊತ್ತಿನಲ್ಲಿ ಹಾಸ್ಟೆಲ್‌ನಲ್ಲಿ ಊಟ ಇರುವುದಿಲ್ಲ; ಆದುದರಿಂದ
ನಮ್ಮ ಮನೆಗೆ ಬಂದು ಊಟಮಾಡಿಕೊಂಡು ಹೋಗಿ” ಎಂದು ಒಬ್ಬಿಬ್ಬ ಉಪಾಧ್ಯಾಯರು
ಒತ್ತಾಯಪಡಿಸುತ್ತಿದ್ದರು. “ಪರವಾಗಿಲ್ಲ, ಒಂದು ಹೊತ್ತು ಊಟ ಇಲ್ಲದೇ ಇದ್ದರೆ ಚಿಂತೆ ಇಲ್ಲ. ತುಂಬಾ
ಹೊತ್ತಾಗಿದೆ” ಎಂದು ಹೇಳಿ ಅಲ್ಲಿಂದ ಹೊರಟೆ. ಆಟೋ ಚಾಲಕರು ಸ್ವಲ್ಪ ವಯಸ್ಸಾದವರು. ಇದೆನ್ನೆಲ್ಲಾ
ಸಾವಧಾನವಾಗಿ ಕೇಳುತ್ತಿದ್ದರು. ‘ಯಾಕೆ ಸಾರ್, ನಿಮಗೆ ಮನೆ ಇಲ್ಲವೇ? ಊಟ ಇಲ್ಲದೇ ಇದ್ದರೂ ಪರವಾಗಿಲ್ಲ
ಅಂತ ಹೇಳುತ್ತಿದ್ದೀರಿ” ಎಂದು ಕೇಳಿದರು. “ಇಲ್ಲಪ್ಪ, ನನಗೆ ಮನೆ-ಗಿನೆ ಇಲ್ಲ, ನ್ಯಾಷನಲ್ ಕಾಲೇಜ್
ಹಾಸ್ಟೆಲಿನಲ್ಲಿದ್ದೇನೆ” ಅಂದೆ. “ಇಷ್ಟು ಹೊತ್ತಿನಲ್ಲಿ ಉಪವಾಸ ಮಲಗಿಕೊಳ್ಳಬಾರದು ಸಾರ್.
ವಿಶ್ವೇಶ್ವರಪುರದಲ್ಲಿರುವ ಸಜ್ಜನರಾವ್ ಸರ್ಕಲ್‌ಗೆ ಹೋಗೋಣ ಬನ್ನಿ. ಅಲ್ಲಿ ಇಡ್ಲಿ ಮಾರುತ್ತಾರೆ.
FAQ :
ಉತ್ತರ : ಕೈಕಾಲು ಮುರಿದುಕೊಂಡು ಮೂಳೆ ವೈದ್ಯರ ಕೈಗೆ ಸಿಕ್ಕಿ ದೇಹದಲ್ಲಿ ನಟ್ಟೂ, ಬೋಲ್ಟೂ
ಹಾಕಿಸಿಕೊಂಡು ಬದುಕುವುದಕ್ಕಿಂತ ಅಲ್ಲಿಯೇ ಭಗವಂತನ ಪಾದಾರವಿಂದವನ್ನು ಸೇರುವುದೇ ಲೇಸು ಎಂದು ನನ್ನ ಅಭಿಪ್ರಾಯ.
ಉತ್ತರ : “ಇಲ್ಲಪ್ಪ, ನನಗೇನೂ ಅಲ್ಲಿ ಭಯವಾಗುವುದಿಲ್ಲ. ಯಾಕೆಂದರೆ ವಿಮಾನಕ್ಕೆ ಯಾವಾಗಲೂ ಎಮ್ಮೆ, ಹಸು, ಜನ ಅಡ್ಡ ಬರಲಿಲ್ಲ. ಜೊತೆಗೆ ವಿಮಾನವನ್ನು ಓವರ್‌ಟೇಕ್ ಮಾಡಿದ ಪ್ರಸಂಗವೂ ಇಲ್ಲ” ಅದಕ್ಕಾಗಿ
ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿರಲಿಲ್ಲ.
ಉತ್ತರ : “ರೀ ಸ್ವಾಮಿ, ಸುಮ್ಮನೆ ಕುಳಿತುಕೊಳ್ಳಿ. ನಿಮ್ಮಂತವರಿಂದಲೇ ಆಕ್ಸಿಡೆಂಟ್ ಆಗುವುದು.ಹತ್ತುವುದಕ್ಕಿಂತ
ಮುಂಚೇನೆ ಅಪಶಕುನ” ಎಂದು ಸಿಡುಕಿ ಗಾಡಿ ಸ್ಟಾರ್ಟ್ ಮಾಡಿದ ಚಾಲಕ.
ಇತರೆ ವಿಷಯಗಳು :
8th Standard All Subject Notes
8th Standard Kannada Textbook Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
This notes is very good I like it