5th Class Panjara Shale Kannada Notes | 5ನೇ ತರಗತಿ ಪಂಜರ ಶಾಲೆ ಕನ್ನಡ ನೋಟ್ಸ್ 

5ನೇ ತರಗತಿ ಪಂಜರ ಶಾಲೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 5th Standard Panjara Shale Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Chapter 5 Notes 5th Class Kannada 5th Lesson Notes Pdf Panjara Shale Question Answer Panjara Shale Story in Kannada

5th Standard Kannada 5th Chapter Notes

ಕೃತಿಕಾರರ ಪರಿಚಯ 

ಬಿ.ವಿ ಕಾರಂತ : ಬಾಬುಕೋಡಿ ವೆಂಕಟರಮಣ ಕಾರಂತ ಅವರು ಕ್ರಿ.ಶ. 1928 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದಲ್ಲಿ ಜನಿಸಿದರು . ತಂದೆ ಬಾಬುಕೊಡಿ ನಾರಾಯಣಪ್ಪಯ್ಯ , ತಾಯಿ ಲಕ್ಷ್ಮಮ್ಮ. ಬಾಲ್ಯದಲ್ಲಿ ನಾಟಕದ ಬಗೆಗೆ ಬಹಳ ಆಸಕ್ತಿಯುಂಟಾಗಿ ಗುಬ್ಬಿ ನಾಟಕ ಕಂಪನಿಗೆ ಸೇರಿದರು . ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ . ಇವರು ಈಡಿಪಸ್ , ಪಂಜರಶಾಲೆ , ಗೋಕುಲ ನಿರ್ಗಮನ, ಸತ್ತವರ ನೆರಳು , ಜೋಕುಮಾರಸ್ವಾಮಿ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ . ಇವರಿಗೆ ಪದ್ಮಶ್ರೀ ಪ್ರಶಸ್ತಿ, ಕಾಳಿದಾಸ ಸಮ್ಮಾನ , ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ , ಗುಬ್ಬಿ ವೀರಣ್ಣ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ . ರವೀಂದ್ರನಾಥ್ ಟ್ಯಾಗೋರ್ ಅವರ ಈ ಬಂಗಾಳಿ ನಾಟಕವನ್ನು ಪಂಜರಶಾಲೆ ಎಂದು ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ್ದಾರೆ . 

ಪದಗಳ ಅರ್ಥ  

ಖಗ = ಪಕ್ಷಿ ತರ್ಕ = ಆರು ದರ್ಶನಗಳಲ್ಲಿ ಒಂದು = ಪುರಾಣ , = ಹಿಂದಿನ ಕಾಲದಲ್ಲಿ ನಡೆದುಹೋದ ಕಥೆ ಪುಜ್ಞಾವಧಾನಿ = ತಿಳಿವಳಿಕೆ ಹಾಗೂ ಸ್ಮರಣೆ ಶಕ್ತಿಯುಳ್ಳವನು ಮಧುಫಲ = ಸಿಹಿಯಾದ ಹಣ್ಣು ಮೃಗ = ಪ್ರಾಣಿ ರಕ್ಷಕರು = ಕಾಪಾಡುವವರು ವಿದ್ಯಾವತಂಸ = ವಿದ್ಯಾವಂತ oludons.com ವಂದಿಮಾಗಧರು = ಸ್ತುತಿ ಪಾಠಕರು , ಹೊಗಳುಭಟ್ಟರು ಶುಕ = ಗಿಳಿ ಪರಾಕು = ಜಯಘೋಷ ಸಭ್ಯ = ಮರ್ಯಾದಸ್ಯ , ಒಳ್ಳೆಯ ಮಹಾವಾಚಾಳ = ಜಾಸ್ತಿಯಾಗಿ ಮಾತನಾಡು ನಿರಕ್ಷರ ಕುಕ್ಷಿ = ವಿದ್ಯೆ ಕಲಿಯದ , ಒಂದಕ್ಷರವೂ ಬರದ . ಮನೋಜ್ಞ = ಮನಸ್ಸಿಗೆ ಮುಟ್ಟುವಂತೆ ಸ್ವಚದ = ಯಾವ ನಿರ್ಬಂಧವಿಲ್ಲದೆ ನೇಪದ = ಪರದೆಯ ಹಿಂದೆ ( ವೀಕ್ಷಕರಿಗೆ ಕಾಣದಿರುವು ಗಿಳಿವಿಂಡು = ಗಿಳಿಗಳ ಸಮೂಹ

 ಅಭ್ಯಾಸ

1. ಗಿಳಿಮರಿಯು ಏನನ್ನು ತಿನ್ನಲು ತನ್ನ ಬಳಗವನ್ನು ಕರೆಯಿತು ? 

ಗಿಳಿಮರಿಯು ಮಧುಫಲ ಹಣ್ಣನ್ನು ತಿನ್ನಲು ತನ್ನ ಬಳಗವನ್ನು ಕೂಗಿ ಕರೆಯಿತು . 

2. ಮಂತ್ರಿಯ ಪ್ರಕಾರ ಗಿಳಿಮರಿಗೆ ಏನೇನು ಬರುವುದಿಲ್ಲ ಎಂದು ಹೇಳಿದನು ?

ಮಂತ್ರಿಯ ಪುಕಾರ ಗಿಳಿಮರಿಗೆ ಮಾತಾಡಲು , ಹಾಡು ಹೇಳಲೂ … ಏನೂ ಬರುವುದಿಲ್ಲ . ರಾಜನಿಗೆ ಹೇಳಿದನು . 

3. ರಾಜನು ಗಿಳಿಮರಿಯನ್ನು ಇಟ್ಟು ಅವನು ಯಾವ ಶಾಲೆಗೆ ಸೇರಿಸಲು ಆದೇಶ ಮಾಡಿದನು ? 

ರಾಜನು ಗಿಳಿಮರಿಯನ್ನು ರಾಜಶಾಲೆಗೆ ಸೇರಿಸಲು ಆದೇಶ ಮಾಡಿದನು . 

4 .ರಾಜನು ಯಾರನ್ನು ಶುಕಶಿಕ್ಷಣ ಮಂತ್ರಿಯನ್ನಾಗಿ ನೇಮಿಸಿದನು ?

 ರಾಜನು ತನ್ನ ಅಳಿಯನನ್ನು ಶುಕಶಿಕ್ಷಣ ಮಂತ್ರಿಯ ನ್ನಾಗಿ ನೇಮಿಸಿದನು . 

5. ರಾಜನು ಗಿಳಿಮರಿಗೆ ಏನನ್ನು ಕಲಿಸಬೇಕು ಎಂದು ಹೇಳಿದನು ? 

ರಾಜನು ಗಿಳಿಮರಿಗೆ ಸಭ್ಯತೆ , ಶಾಸ್ತ್ರ ವ್ಯಾಕರಣವನ್ನು ಕಲಿಸಿ ಸುಸಂಸ್ಕೃತವನ್ನಾಗಿ ಮಾಡಬೇಕೆಂದು ತಿಳಿಸಿದನು .

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ . 

1. ಗಿಳಿಮರಿಯ ಬಗೆಗೆ ಮಂತ್ರಿಯು ರಾಜನಿಗೆ ಏನು ಹೇಳಿದನು ? 

ಗಿಳಿಮರಿಯು ಅರಣ್ಯವಾಸಿ , ನಿರಕ್ಷರ ಕುಕ್ಷಿ  , ತೀರ ಅಸಂಸ್ಕೃತ , ಸಂಗೀತವಿಲ್ಲ , ನೃತ್ಯವಿಲ್ಲ , ಗದ್ಯ ಬೇಧ ಗೊತ್ತಿಲ್ಲ . ಒಂದು ಎರಡರ ಮಗಿ ಕೂಡಾ ಬರೋದಿಲ್ಲ . ಇದಕ್ಕೆ ಬರೋದು ಒಂದೋ ಗಿಡಮರ ಹತ್ತಿ  ಕೊಂಬೆ ಮುರಿದು ಹಣ್ಣು ತಿನ್ನೋದು ಉದುರಿಸೋದು  , ಎಂದು ಮಂತ್ರಿಯು ರಾಜನಿಗೆ ಹೇಳಿದನು 

2. ರಾಜನು ಗಿಳಿಮರಿಗೆ ಏನು ಮಾಡುವಂತೆ ಮಂತ್ರಿಗೆ ಹೇಳಿದನು ? 

ರಾಜನು ಮಂತ್ರಿಗೆ ಈ ಗಿಳಿಮರಿಯನ್ನು ರಾಜಶಾಲೆಗೆ  ಸೇರಿಸತಕ್ಕದ್ದು ಶುಕಪಕ್ಷಿಯ ಆದಿಮಪವೃತ್ತಿಗಳನ್ನು ಸುಧಾರಿಸಿ ಆಧುನಿಕ ಮಾಡತಕ್ಕದ್ದು  ಎಂದು ಅಪ್ಪಣೆ ಮಾಡುತ್ತಾನೆ . 

3. ಗಿಳಿಮರಿಯು ಏನೇನು ಕಲಿಯಬೇಕು ಎಂದು ರಾಜನು ಹೇಳುತ್ತಾನೆ ?

ಗಿಳಿಮರಿಯು ಸಭ್ಯತೆ ಕಲಿಯಲಿ ಕಾಡುತನ ಮರೆಯಲಿ ಶತ್ರವ್ಯಾಕರಣ ಕಲಿತು ಸುಶೀತವಾಗಲಿ 

ಸುಸಂಸ್ಕೃತವಾಗಿ ಕಾಡಿನ ಉಳಿದ ಶುಕ ಪಕ್ಷಿಗಳನ್ನು ಸಭ್ಯವನ್ನಾಗಿ ಮಾಡಲಿ ಎಂದು ರಾಜನು ಹೇಳುತ್ತಾನೆ .

4. ರಾಜನ ಅಳಿಯನು ಏನೆಂದು ನಿವೇದನೆ ಮಾಡಿದನು ? 

ರಾಜನ ಅಳಿಯನು ತನ್ನ ಮಾವನಾದ ರಾಜನ ಮೊದಲು ಈ ಗಿಳಿಯ ಬಗ್ಗೆ ತಥ ( ಸತ್ಯ ) ವನ್ನು ಕಂಡುಹಿಡಿಯಬೇಕು . ಇದರ ಅಸಭ್ಯತೆಗೆ , ಅವಿದ್ಯೆಗ ಮೂಲಕಾರಣ ಹಾಗೂ ಇದು ಏನು ತಿನ್ನುವುದು , ಹತ್ತಿರ ಕುಡಿಯುವುದು , ಆವರಣ ಎಂತದು , ಹಾರೋದು , ರೆಕ್ಕೆ ಪುಕ್ಕ , ಕೊಕ್ಕು ಇತ್ಯಾದಿ ಅಂಶಗಳ ಬಗ್ಗೆ ದೀರ್ಘ ಸಂಶೋಧನೆ ನಡೆಯಬೇಕು ಎಂದು ವಿನಮ್ರವಾಗಿ ನಿವೇದನೆ ಮಾಡಿದನು . 

5. ಮಂತ್ರಿಯು ರಾಜನ ಅಳಿಯನ ಬಗ್ಗೆ ಹೇಳಿದ ಮಾತುಗಳಾವುವು ? 

ಮಂತ್ರಿಯು ರಾಜನ ಅಳಿಯನ ಬಗ್ಗೆ , ” ಅಳಿಯದೇವರು ಮಹಾಪ್ರತಿ ತು , ದೇಶಕೋಶ ಸುತ್ತಿ ಬಂದವರು , ವಿದೇಶಗಳಿಂದ ಪದವಿಗಳನ್ನು ಹೊತ್ತು ತಂದವರು , ಕಾಂಭೋಜ ದೇಶದಲ್ಲಿ ಪ್ರಾಣಿಶಾಸ್ತ್ರ , ಪಕ್ಷಿಶಾಸ್ತ್ರ ಪಾರಂಗತರಾದವರು , ಅವರಿಗೆ ಶುಕ ಶಿಕ್ಷಣದ ಜವಾಬ್ದಾರಿಯನ್ನು ವಹಿಸಬಹುದೆಂಬ ಸಲಹೆಯನ್ನು ಕೊಟ್ಟನು .

ಇ ) ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತಪದಗಳಿಂದ ತುಂಬಿರಿ . 

  1. ಬನ್ನಿ ಬನ್ನಿ , ಮಧುಫಲ ತಿನ್ನಿ , ಬೇಗ , ಹಾರಿಬನ್ನಿ , 
  2. ಈ ಅಸಭ್ಯ ಪಕ್ಷಿಯನ್ನು ರಾಜಶಾಲೆಗೆ ಸೇರಿಸತಕ್ಕದ್ದು . 
  3. ತಾನು ಸುಸಂಸ್ಕೃತವಾಗಿ ಕಾಡಿನ ಉಳಿದ ಶುಕಪಕ್ಷಿ ಗಳನ್ನು ಸಭ್ಯಮಾಡಲಿ . 
  4. ಅಳಿಯ ರಾಜ , ಇಂದಿನಿಂದ ನೀನು ಶುಕಶಿಕ್ಷಣದ ಮಂತ್ರಿ 
  5. ಒಂದು ಪಕ್ಷಿಯ ಶಿಕ್ಷಣ ದಲ್ಲೂ ರಾ ಜನ ಆಸಕ್ತಿ ಎಷ್ಟಿದೆ ಎನ್ನುವುದು . ವ್ಯಾಕರಣ ಮಾಹಿತಿ 

ಅ ) ಪ್ರತ್ಯಯಗಳ ಪರಿಚಯ 

ಪ್ರತ್ಯಯಗಳು ನಾಮಪ್ರಕೃತಿಗೆ ( ಮೂಲ ಪದಕ್ಕೆ ನಿರ್ದಿಷ್ಟ ಅರ್ಥ ಬರುವಂತೆ ಮಾಡುತ್ತವೆ . ಪ್ರತ್ಯಯಗಳನ್ನು ಸ್ವತಂತ್ರವಾಗಿ ಬಳಸಲು ಬರುವುದಿಲ್ಲ . ಹಾಗೆ ಬಳಸಿದರೆ ಅರ್ಥವೂ ಬರುವುದಿಲ್ಲ.ವಾಕ್ಯ ರಚನೆಯ ಸಂದರ್ಭದಲ್ಲಿ ನಾಮಪಕೃತಿಗಳು ಪಡೆಯಬೇಕಾದ ಅರ್ಥ ವಿಶೇಷಗಳನ್ನು ತಂದುಕೊಡಲು ಸಹಾಯ ಮಾಡುವ ಕಾರಕಗಳೇ ಪ್ರತ್ಯಯಗಳು . ಇವುಗಳನ್ನು ವಿಭಕ್ತಿ ಪ್ರತ್ಯಯವೆಂದೂ ಕರೆಯುತ್ತಾರೆ . ‘ ಮನೆ ‘ ಎಂಬುದು ನಾಮಪದದ ಮೂಲರೂಪ . ಇದನ್ನು ನಾಮಪಕೃತಿ ಎನ್ನುವರು .

ಈ ನಾಮಪುಕೃತಿಗೆ ಪ್ರತ್ಯಯಗಳು ಸೇರಿದಾಗ ‘ ಪದ ‘ ಆಗುತ್ತದೆ: 

ಉದಾ : ಮನೆ + ಉ = ಮನೆಯು , ಮನೆ + ಅಲ್ಲಿ = ಮನೆಯಲ್ಲಿ 

ಆ ) ವಿಭಕ್ತಿ ಪ್ರತ್ಯಯ 

    ವಿಭಕ್ತಿ                 ವಿಭಕ್ತಿ ಪ್ರತ್ಯಯ 

  1. ಪ್ರಥಮಾ             ಉ
  2. ದ್ವಿತೀಯಾ          ಅನ್ನು                         
  3. ತೃತೀಯಾ          ಇಂದ
  4. ಚತುರ್ಥಿ             ಗೆ ಇಗೆ ಕೈ 
  5. ಪಂಚಮೀ         ದೆಸೆಯಿಂದ
  6. ಷಷ್ಠಿ                    ಅ
  7. ಸಪ್ತಮೀ            ಅಲ್ಲಿ 

 ನಾಮಪುಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಏನಾಗುವುದು ಎಂಬುದನ್ನು ಗಮನಿಸೋಣ .

ನಾಮಪುಕೃತಿ          ವಿಭಕ್ತಿ ಪ್ರತ್ಯಯ           ಪದ

ರಾಜ                       ಉ                                ರಾಜನು 

ರಾಜ                      ಅನ್ನು                         ರಾಜನನ್ನು 

ರಾಜ ,                      ಇಂದ                        ರಾಜನಿಂದ

 ರಾಜ                   ಗೆ ಇಗೆ ಕೈ                        ರಾಜನಿಗೆ

 ರಾಜ                   ದೆಸೆಯಿಂದ                   ರಾಜನ ದೆಸೆಯಿಂದ 

 ರಾಜ                           ಅ                              ರಾಜನ 

ರಾಜ                            ಅಲ್ಲಿ                        ರಾಜನಲ್ಲಿ

ಭಾಷಾಭ್ಯಾಸ 

ಅ ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ . 

1. ಪ್ರತ್ಯಯಗಳು ಎಂದರೇನು ?

 ವಾಕ್ಯರಚನೆಯ ಸಂದರ್ಭದಲ್ಲಿ ನಾಮಪುಕೃತಿ , ಪಡೆಯಬೇಕಾದ ಅರ್ಥ ವಿಶೇಷಗಳನ್ನು ತಂದುಕೊಡಲು ಸಹಾಯ ಮಾಡುವ ಕಾರಕಗಳೇ ಪ್ರತ್ಯಯಗಳು . ಇವುಗಳನ್ನು ವಿಭಕ್ತಿ ಪ್ರತ್ಯಯವೆಂದೂ ಕರೆಯುತ್ತಾರೆ . 

2. ಇಂದು , ನಾನು , ಅಲ್ಲಿ , ಬೇಗ ಗೆ –  ಇವುಗಳಲ್ಲಿ , ಪ್ರತ್ಯಯಗಳನ್ನು ರಚಿಸಿ ಬರೆಯಿರಿ

ಇಂದ , ಅಲ್ಲಿಗೆ – ಇವು ಪ್ರತ್ಯಗಳು 

3. ಮನೆ , ಕಲ್ಲನ್ನು ನೆಲ , ಹೊಲ , ಶಾಲೆಯಲ್ಲಿ – ಇವುಗಳಲ್ಲಿ ನಾಮ ಪುಕೃತಿಗಳನ್ನು ಆರಿಸಿ ಬರೆಯಿರಿ .

ಮನೆ , ನೆಲ , ಹೊಲ ಇವು ನಾಮ ಪುಕೃತಿಗಳು . 

4. ಉ , ಅನ್ನು , ಇಂದ , ಅಲ್ಲಿ – ಈ ಪ್ರತ್ಯಯಗಳನ್ನು ಕೆಳಗಿನ ನಾಮಪ್ರಕೃತಿಗಳಿಗೆ ಮಾದರಿಯಂತೆ ಹಚ್ಚಿರಿ.

 ಮಾದರಿ : ಮನೆ + ಉ = ಮನೆಯು

 ಮನೆ + ಅನ್ನು = ಮನೆಯನ್ನು 

ಮನೆ + ಇಂದ = ಮನೆಯಿಂದ 

ಮನೆ + ಅಲ್ಲಿ = ಮನೆಯಲ್ಲಿ 

ಶಾಲೆ + ಉ = ಶಾಲೆಯು 

ಶಾಲೆ + ಅನ್ನು = ಶಾಲೆಯನ್ನು 

ಶಾಲೆ + ಇಂದ = ಶಾಲೆಯಿಂದ 

ಶಾಲೆ + ಅಲ್ಲಿ = ಶಾಲೆಯಲ್ಲಿ 

 ಪುಸ್ತಕ + ಉ = ಪುಸ್ತಕವು 

ಪುಸ್ತಕ + ಅನ್ನು = ಪುಸ್ತಕವನ್ನು

 ಪುಸ್ತಕ + ಇಂದು = 

 ಹೂವು + ಉ = ಹೂವು 

ಹೂವು + ಅನ್ನು = ಹೂವನ್ನು

 ಹೂವ + ಇಂದ = ಹೂವಿನಿಂದ

 ಹೂವು + ಅಲ್ಲಿ = ಹೂವಲ್ಲಿ 3 

ಬಳೆ + ಅನ್ನು = ಬಳೆಯನ್ನು 

ಬಳೆ + ಅಲ್ಲಿ = ಬಳಯಲ್ಲಿ 

ಬಳೆ + ಆಗ ಇಂದು = ಬಳೆಯಿಂದ

 ಹುಡುಗ+ ಉ = ಹುಡುಗನು 

ಹುಡುಗ + ಅನ್ನು = ಹುಡುಗನನ್ನು 

ಹುಡುಗ + ಇಂದ = ಹುಡುಗನಿಂದ +

 ಹುಡುಗ + ಅಲ್ಲಿ = ಹುಡುಗನಲ್ಲಿ 

ರೈತ + ಉ = ರೈತನು ರೈತ + ಅನ್ನು = ರೈತನನ್ನು

ರೈತ + ಇಂದ = ರೈತನಿಂದ 

ರೈತ + ಅಲ್ಲಿ = ರೈತನಲ್ಲಿ 

ಈ ) ಶುಭನುಡಿ .

  1. ಕಲಿಯಲು ಸ್ವತಂತ್ರ ಇರಬೇಕು . ಒತ್ತಡ ಇರಬಾರದು .
  2. ಆಡಿ ಕಲಿ , ಹಾಡಿ ಕಲಿ , ನೋಡಿ ಕಲಿ , ಮಾಡಿ ಕಲಿ .

FAQ :

ರಾಜನು ಗಿಳಿಮರಿಗೆ ಏನನ್ನು ಕಲಿಸಬೇಕು ಎಂದು ಹೇಳಿದನು ? 

ರಾಜನು ಗಿಳಿಮರಿಗೆ ಸಭ್ಯತೆ , ಶಾಸ್ತ್ರ ವ್ಯಾಕರಣವನ್ನು ಕಲಿಸಿ ಸುಸಂಸ್ಕೃತವನ್ನಾಗಿ ಮಾಡಬೇಕೆಂದು ತಿಳಿಸಿದನು

ಗಿಳಿಮರಿಯು ಏನನ್ನು ತಿನ್ನಲು ತನ್ನ ಬಳಗವನ್ನು ಕರೆಯಿತು ? 

ಗಿಳಿಮರಿಯು ಮಧುಫಲ ಹಣ್ಣನ್ನು ತಿನ್ನಲು ತನ್ನ ಬಳಗವನ್ನು ಕೂಗಿ ಕರೆಯಿತು . 

ಇತರೆ ವಿಷಯಗಳು:

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh