ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಕನ್ನಡ ಸಂಘಟನೆಗಳ ಪಾತ್ರ, Kannada Bhashe Mattu Samskruthi Kannada Sangathan Patra in Kannada Kannada Bhashe Mattu Samskruthi Abhivruddiyalli Kannada Sanghatanegala Patra in Kannada, Kannada Bhashe Mattu Samskruthi Kannada Sangathan Patra information in Kannada
ಕನ್ನಡ ಭಾಷೆ ಮತ್ತು ಸಂಸ್ಕೃತಿ
ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಕರುನಾಡು ಸ್ವರ್ಗದ ಸೀಮೆ-ಕಾವೇರಿ ಹುಟ್ಟಿನ ನಾಡು. ಕಲ್ಲಲ್ಲಿ ಕಲೆಯನು ಕಂಡ-ಬೇಲೂರ ಶಿಲ್ಪದ ಬೀಡು. ಬಸವೇಶ್ವರ, ರನ್ನ-ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು. ಚಾಮುಂಡಿ ರಕ್ಷೆಯು ನಮಗೆ- ಗೊಮ್ಮಟೇಶ್ವರ ಕಾವಲು ಇಲ್ಲಿ. ಶೃಂಗೇರಿ ಶಾರದೆ ವೀಣೆ- ರಸತುಂಗೆ ಆಗಿದೆ ಇಲ್ಲಿ.
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು. ಇದೆ ನಾಡು- ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಂಬ ಎಸ್.ಪಿ.ಬಿ ಅವರ ಗಾಯನದಂತೆ ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ಉಸಿರಲ್ಲಿ ಕನ್ನಡ ಸದಾ ಅಚ್ಚ ಹಸಿರಾಗಿರಲಿ ಎಂಬುದು ನಮ್ಮ ಆಶಯ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದ್ದಲ್ಲೇ ಉಜ್ವಲವಾದ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ.
ಈ ನಾಡು ಕಾವೇರಿಯಿಂದ ಗೋದಾವರಿಯವರೆಗೂ ವ್ಯಾಪಿಸಿತ್ತು ಎಂದು ಇತಿಹಾಸ ಹೇಳುತ್ತದೆ.
ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿರುವ ಬಗೆಗೆ ವಿದ್ವಾಂಸರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವನ್ನು ಮೊದಲಿಗೆ ‘ಕರಿಯ ಮಣ್ಣಿನ ನಾಡು’ ಎಂದೂ, ‘ಕರುನಾಡು‘ ಎಂದರೆ ಎತ್ತರದ ಪ್ರದೇಶದಲ್ಲಿರುವ ನಾಡು ಎಂದೂ, ‘ಕಮ್ಮಿತ್ತು ನಾಡು’ ಎಂದರೆ ಶ್ರೀಗಂಧದ ಕಂಪನ್ನುಳ್ಳ ನಾಡು ಎಂದೂ ಕರೆಯುತ್ತಿದ್ದರು. ಇದು ಕ್ರಮೇಣ ಆಡು ಭಾಷೆಯಲ್ಲಿ ಕರ್ನಾಟಕವಾಗಿದೆ ಎಂದು ವಿಶ್ಲೇಷಣೆ ನೀಡಿದ್ದಾರೆ.
ಕನ್ನಡ ಭಾಷೆ ಮತ್ತು ಸಂಸ್ಕೃತಿ ಉತ್ಕೃಷ್ಟವಾದದ್ದು, ಶ್ರೀಮಂತವಾದದ್ದು. ವಿಪುಲವಾಗಿ ದೊರಕುವ ಸಾಹಿತ್ಯ ಕೃತಿಗಳು, ಐತಿಹಾಸಿಕ ದಾಖಲೆಗಳು ಈ ಅಂಶವನ್ನು ದೃಢೀಕರಿಸುತ್ತವೆ. ಕನ್ನಡದ ಕೆಲವು ಪದಗಳು ವೇದದಲ್ಲಿಯೂ, ಕ್ರಿ.ಶ.ಎರಡನೆಯ ಶತಮಾನದ ಗ್ರೀಕ್ ನಾಟಕವೊಂದರಲ್ಲಿಯೂ ದೊರಕಿದೆ.
ಬೇಲೂರು, ಹಳೇಬೀಡು, ಬಾದಾಮಿ, ಐಹೊಳೆ, ಪಟ್ಟದ ಕಲ್ಲು ಮುಂತಾದ ಕಡೆಗಳಲ್ಲಿ ಶಿಲ್ಪ ಕಲೆಯು ಕಾವ್ಯವಾಗಿ ಮೈದಳೆದಿದೆ. ಪಂಪ, ರನ್ನ, ಜನ್ನರ ಕಾವ್ಯದ ಸೊಗಸು ಕಾಲವನ್ನೂ ಮೆಟ್ಟಿ ತಮ್ಮ ಚಿರಂತನತೆಯನ್ನು ಮೆರೆಯುತ್ತಿದೆ. ಇಂತಾ ಅದ್ಭುತವಾದ ಭಾಷೆ ಮತ್ತು ಸಂಸ್ಕೃತಿಯ ಮುಂದಿನ ದಿನಗಳನ್ನು ಕುರಿತು ಚಿಂತಿಸುವಾಗ ಆತಂಕದ ಕಾರ್ಮೋಡಗಳು ಮುಸುಕುತ್ತವೆ, ಕೆಲವು ತಲ್ಲಣಗಳನ್ನು ಸೃಷ್ತಿಸುತ್ತವೆ. ಆದಿಯಿಂದಲೂ ಕನ್ನಡಿಗರು ಹೃದಯವಂತರು, ಮೃದುಭಾಷಿಗಳು, ಪರಮತ, ಪರಭಾಷಾ ಸಹಿಷ್ಣುಗಳು. ಇತಿಹಾಸದುದ್ದಕ್ಕೂ ಮತ್ತು ಈಗಲೂ ಸಹ ಈ ಅಂಶಗಳು ಸ್ಪಷ್ಟವಾಗಿ ಎದ್ದು ಕಾಣುತ್ತವೆ.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಕನ್ನಡ ಸಂಘಟನೆಗಳ ಪಾತ್ರ
ಇಂತಾ ಅದ್ಭುತವಾದ ಪ್ರಾಚೀನವಾದ ಭಾಷೆ ಮತ್ತು ಸಂಸ್ಕೃತಿಯ ಮುಂದಿನ ದಿನಗಳು ಹೇಗಿರಬಹುದು ಎಂದು ಚಿಂತಿಸುವಾಗ ಇಂದಿನ ಪರಿಸ್ಥಿತಿ ಮುಖ್ಯವಾಗುತ್ತದೆ
ನಮ್ಮ ಕನ್ನಡ ಭಾಷೆಯನ್ನು ಯಾವ ರೀತಿಯಾಗಿ ಉಳಿಸಿ ಬೆಳಸಬೇಕು ಎಂಬುದರ ಬಗ್ಗೆ ಚಿಂತಿಸುವ ಅಗತ್ಯವಿದೆ.
ಪ್ರಾರಂಭದಲ್ಲಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತ್ತಾ ಬಂದು ಈಗ ಹಳ್ಳಿಗಳಲ್ಲಿಯೂ ಸಹಾ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಪ್ರಭಾವ ಹೆಚ್ಚಾಗಿರುವುದನ್ನು ಗಮನಿಸಬಹುದು.
ನಮ್ಮ ಕನ್ನಡ ನೆಲದಲ್ಲಿಯೇ ಕನ್ನಡಕ್ಕೆ ನೆಲೆ ಇಲ್ಲದ ಉದಾಹರಣೆಗಳು ಕಂಡುಬರುತ್ತಿವೆ.
ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ ಅದನ್ನು ಉಳಿಸಿಕೊಳ್ಳಬೇಕು ಬದಲಾಗಿ ಯಾವುದೇ ಕಾನೂನು, ನಿಯಮದಿಂದ, ಬಲವಂತದಿಂದ ಭಾಷೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿರುವುದಿಲ್ಲ.
ಮುಖ್ಯವಾಗಿ ಭಾಷೆಯ ಪ್ರಭಾವಶಾಲಿ ಚಲನೆ ಇರುವುದು ವಿವಿಧ ಮಾಧ್ಯಮ ಮತ್ತು ಶಾಲೆಯಲ್ಲಿ ಆಗಿರುವುದು. ಆದ್ದರಿಂದ ಮಾಧ್ಯಮ ಮತ್ತು ಶಾಲೆಯಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸುವಂತಹ ಕಾರ್ಯವನ್ನು ಕನ್ನಡ ಸಂಘಟನೆಗಳ ಮಾಡಬೇಕಾಗಿದೆ
ಕನ್ನಡ ಭಾಷೆಯ ಏಳ್ಗೆಗಾಗಿ ಸರ್ಕಾರ, ಹತ್ತು ಹಲವಾರು ಸಂಘಟನೆಗಳು. ರಾಜಕೀಯ ಪಕ್ಷಗಳು, ಸಾಹಿತಿಗಳು ಹೀಗೆ ಅನೇಕರು ಅವರದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುವರು.
ಕನ್ನಡ ಭಾಷೆಯ ಬಗ್ಗೆ ನಾವು ಜಾಗ್ರತವಾಗುವುದು ಒಂದು ಕಾವೇರಿ ನೀರು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೆಳನ, ಉಳಿದಂತೆ ಸಭೆ ಸಮಾರಂಭಗಳಲ್ಲಿ ಮಾತ್ರವಾಗಿದೆ.
ನಮ್ಮಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಿರಂತರ ಕಟ್ಟುವ ಕಾರ್ಯ ನಡೆದಿಲ್ಲ ಎಂಬುದು ಅಕ್ಷರಶಃ ಸತ್ಯವಾಗಿದೆ.
FAQ :
ಕರುನಾಡು, ಕಮ್ಮಿತ್ತುನಾಡು ಕರಿಯ ಮಣ್ಣಿನ ನಾಡು ಎಂದು ಕರೆಯುತ್ತಾರೆ
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ.
ಇತರ ವಿಷಯಗಳು:
ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ ಕನ್ನಡದಲ್ಲಿ
Kannada Rajyotsava Information In Kannada
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಕನ್ನಡ ಸಂಘಟನೆಗಳ ಪಾತ್ರ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಕನ್ನಡ ಸಂಘಟನೆಗಳ ಪಾತ್ರ ಮಾಹಿತಿ ಬಗ್ಗೆ ಕನ್ನಡದಲ್ಲಿ ಪ್ರಬಂಧ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
Raichur
7th mail