10ನೇ ತರಗತಿ ವಿಜ್ಞಾನ ಅಧ್ಯಾಯ-6 ಜೀವಕ್ರಿಯೆಗಳು ನೋಟ್ಸ್‌ | 10th Standard Science Chapter 6 Notes in Kannada

10ನೇ ತರಗತಿ ವಿಜ್ಞಾನ ಅಧ್ಯಾಯ-6 ಜೀವಕ್ರಿಯೆಗಳು ನೋಟ್ಸ್‌ ಪ್ರಶ್ನೋತ್ತರ, Class 10 Science Chapter 6 Notes 10th Standard Science Chapter 6 Question Answer 10th Class jeeva kriyegalu question answer in kannada Kseeb Solution For Class 10 Science Chapter 6 Notes Life Processes Class 10th Notes class 10th science life process Jeeva Kriyegalu Questions and Answers Notes Pdf 2024

 

Sslc Science Chapter 6 Question Answer 2024

 Jeeva Kriyegalu Questions and Answers, Notes Pdf

ಅಭ್ಯಾಸ ಪ್ರಶ್ನೆಗಳು

1. ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ

c ) ವಿಸರ್ಜನೆ .

2. ಸಸ್ಯಗಳಲ್ಲಿ ಕ್ಸೈಲಂ ಹೊಣೆಗಾರಿಕೆ

a ) ನೀರಿನ ಸಾಗಾಣಿಕೆ

3. ಸ್ವಪೋಷಕ ಪೋಷಣಾ ವಿಧಾನದ ಅವಶ್ಯಕತೆಗಳೆಂದರೆ

( d ) ಈ ಮೇಲಿನ ಎಲ್ಲವೂ

4. ಪೈರುವೇಟ್‌ನ ವಿಭಜನೆಯಿಂದ ಕಾರ್ಬನ್ ಡೈಆಕ್ಸೆಡ್ , ನೀರು ಮತ್ತು ಶಕ್ತಿಯು ಬಿಡುಗಡೆಯಾಗುವ ಸ್ಥಳ

( b ) ಮೈಟೋಕಾಂಡಿಯಾ

5. ನಮ್ಮ ದೇಹದಲ್ಲಿ ಕೊಬ್ಬು ಹೇಗೆ ಜೀರ್ಣಿಸಲಡುತ್ತದೆ ? ಈ ಪ್ರಕ್ರಿಯೆ ನಡೆಯುವ ಸ್ಥಳ ಯಾವುದು ?

ಸಣ್ಣಕರುಳಿನಲ್ಲಿ ಕಂಡುಬರುವ ಕೊಬ್ಬುಗಳು ದೊಡ್ಡ ದೊಡ್ಡ ದುಂಡುಕಣಗಳ ರೂಪದಲ್ಲಿದ್ದು ಕಿಣ್ವಗಳಿಗೆ ಅದರ ಮೇಲೆ ವರ್ತಿಸಲು ಕಷ್ಟವಾಗುತ್ತದೆ.ಪಿತ್ತರಸದ ಲವಣಗಳು ಅವುಗಳನ್ನು ಚಿಕ್ಕ ಚಿಕ್ಕ ದುಂಡುಕಣಗಳಾಗಿ ವಿಭಜಿಸಿ ಕಿಣ್ವಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ . ಮೇದೋಜೀರಕ ರಸದಲ್ಲಿರುವ ಲೈಪೇಸ್ ಎಂಬ ಕಿಣ್ವವು ವಿಭಿನ್ನ ಸಾಂದ್ರತೆ ಹೊಂದಿರುವ ಕೊಬ್ಬುಗಳ ಮಿಶ್ರಣವನ್ನು ಎಮಲೀಕರಣಗೊಳಿಸುತ್ತದೆ . ಕರುಳಿನ ರಸವು ಕೊಬ್ಬುಗಳನ್ನು ಕೊಬ್ಬಿನ ಆಮ್ಲ ಮತ್ತು ಗ್ಲಿಸರಾಲ್ ಆಗಿ ಪರಿವರ್ತಿಸುತ್ತದೆ .

ಕೊಬ್ಬು ಜೀರ್ಣಿಸಲ್ಪಡುವ ಸ್ಥಳ ಸಣ್ಣ ಕರುಳು .

6. ಆಹಾರದದ ಜೀರ್ಣಕ್ರಿಯೆಯಲ್ಲಿ ಲಾಲಾರಸದ ಪಾತ್ರವೇನು ?

ಲಾಲಾರಸವು ಲಾಲಾರಸದ ಅಮೈಲೇಸ್ ಎಂಬ ಕಿಣ್ವವನ್ನು ಹೊಂದಿದ್ದು ಅದು ಪಿಷ್ಟ ಎಂಬ ಸಂಕೀರ್ಣ ಅಣುವನ್ನು ವಿಭಜಿಸಿ ಸಕ್ಕರೆಯನ್ನು ಬಿಡುಗಡೆ ಮಾಡುತ್ತದೆ . ಆಹಾರವು ಲಾಲಾರಸದೊಂದಿಗೆ ಚೆನ್ನಾಗಿ ಮಿಶ್ರಣಗೊಂಡು ಸ್ನಾಯುವಿನಿಂದಾದ ನಾಲಿಗೆಯ ಸಹಾಯದಿಂದ ಜಗಿಯುವಾಗ ಬಾಯಿಯ ತುಂಬಾ ಚಲಿಸುತ್ತದೆ

7. ಸ್ವಪೋಷಕ ಪೋಷಣೆಗೆ ಅಗತ್ಯವಾದ ಪರಿಸ್ಥಿತಿಗಳು ಯಾವುವು ? ಮತ್ತು ಅದರ ಉಪ ಉತ್ಪನ್ನಗಳು ಯಾವುವು ?

ಸ್ವಪೋಷಕ ಪೋಷಣೆಯು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ನಡೆಯುತ್ತದೆ . ಇದು ನಡೆಯಲು ಇಂಗಾಲದ ಡೈ ಆಕ್ಸೆಡ್ , ನೀರು , ಪತ್ರಹರಿತ್ತು ಮತ್ತು ಸೂರ್ಯನ ಬೆಳಕಿನ ಅವಶ್ಯಕತೆ ಇದೆ.ಕಾರ್ಬೋಹೈಡ್ರೆಟ್ ಮತ್ತು ಆಮ್ಲಜನಕ ಈ ಕ್ರಿಯೆಯ ಉಪ ಉತ್ಪನ್ನಗಳು .

8. ವಾಯುವಿಕ ಮತ್ತು ಅವಾಯುವಿಕ ಉಸಿರಾಟಗಳ ನಡುವಿನ ವ್ಯತ್ಯಾಸಗಳೇನು ? ಅವಾಯುವಿಕ ಉಸಿರಾಟ ನಡೆಸುವ ಕೆಲವು ಜೀವಿಗಳನ್ನು ಹೆಸರಿಸಿ .

1. ವಾಯುವಿಕ ಉಸಿರಾಟ

  • ಆಮ್ಲಜನಕದ ಸಹಾಯದಿಂದ ನಡೆಯುತ್ತದೆ .
  • ಇದು ವಾತಾವರಣ ಮತ್ತು ಜೀವಿಯ ನಡುವೆ ಅನಿಲಗಳವಿನಿಮಯವನ್ನು ಒಳಗೊಂಡಿದೆ .
  • ಇದು ಜೀವಕೋಶದ ಕೋಶರಸ ಇದು ಕೇವಲ ಕೋಶರಸ
  • ಮತ್ತು ಮೈಟೋಕಾಂಡ್ರಿಯಾದಲ್ಲಿ ನಡೆಯುತ್ತದೆ .
  • ಯಾವಾಗಲೂ ಇಂಗಾಲದ ಡೈ ಆಕ್ಸೆಡ್ ಮತ್ತು ನೀರು ಬಿಡುಗಡೆಯಾಗುತ್ತದೆ .
  • 36 ATP ಅಣುಗಳನ್ನು ಉತ್ಪತ್ತಿಮಾಡುತ್ತದೆ .

2. ಅವಾಯುವಿಕ ಉಸಿರಾಟ

  • ಆಮ್ಲಜನಕದ ಸಹಾಯವಿಲ್ಲದೆ ನಡೆಯುತ್ತದೆ .
  • ಅನಿಲಗಳ ವಿನಿಮಯ ಇರುವುದಿಲ್ಲ .
  • ಇದು ಕೇವಲ ಕೋಶರಸದಲ್ಲಿ ನಡೆಯುತ್ತದೆ
  • ಉತ್ಪನ್ನಗಳು ಬದಲಾಗುತ್ತವೆ .
  • ಕೇವಲ 2 ATP ಅಣುಗಳನ್ನು ಉತ್ಪತ್ತಿ ಮಾಡುತ್ತದೆ .

9. ಅನಿಲಗಳ ವಿನಿಮಯವನ್ನು ಗರಿಷ್ಠಗೊಳಿಸಲು ಗಾಳಿಗೂಡುಗಳು ಹೇಗೆ ವಿನ್ಯಾಸಗೊಳಿಸಲ್ಪಟ್ಟಿವೆ ?

ಗಾಳಿಗೂಡುಗಳು ಶ್ವಾಸಕೋಶದಲ್ಲಿರುವ ಬಲೂನಿನಂತಹ ರಚನೆಗಳು.ಗಾಳಿಗೂಡುಗಳ ಗೋಡೆಯು ಒಂದು ವಿಶಾಲ ವ್ಯಾಪ್ತಿಯ ರಕ್ತನಾಳಗಳ ಜಾಲವನ್ನು ಹೊಂದಿವೆ.ಪ್ರತಿಯೊಂದು ಶ್ವಾಸಕೋಶವು 300 350 ಮಿಲಿಯನ್ ಗಾಳಿಗೂಡುಗಳನ್ನು ಹೊಂದಿರುತ್ತವೆ . ಗಾಳಿಗೂಡುಗಳ ಮೇಲೆ ವಿಸ್ತರಿಸಿದಾಗ ಸುಮಾರು 80m ನಷ್ಟು ವಿಸ್ತೀರ್ಣವನ್ನು ಹೊಂದಿರುತ್ತದೆ.ಇಷ್ಟು ದೊಡ್ಡ ಪ್ರಮಾಣದ ಮೇಲೆ ವಿಸ್ತೀರ್ಣವು ಅನಿಲಗಳ ವಿನಿಮಯ ಕ್ರಿಯೆ ಗರಿಷ್ಟವಾಗಲು ಸಹಕಾರಿಯಾಗಿದೆ .

10. ನಮ್ಮ ದೇಹದಲ್ಲಿ ಹೀಮೋಗ್ಲೋಬಿನ್ ಕೊರತೆಯಿಂದ ಉಂಟಾಗಬಹುದಾದ ಸಮಸ್ಯೆಗಳೇನು ?

ಹಿಮೋಗ್ಲೋಬಿನ್ ಕೊರತೆಯಿಂದ ರಕ್ತದ ಮೂಲಕ ಆಮ್ಲಜನಕದ ಸಾಗಾಣಿಕೆ ಕುಂಠಿತವಾಗುತ್ತದೆ.ಜೀವಕೋಶಗಳಿಗೆ ಆಮ್ಲಜನಕದ ಕೊರೆಯುಂಟಾಗಿ ಶಕ್ತಿಉತ್ಪಾದನ ಕ್ರಿಯೆ ನಿಧಾನವಾಗುತ್ತದೆ.ಇದರಿಂದ ರಕ್ತ ಹೀನತೆ ಉಂಟಾಗುತ್ತದೆ .

11. ಮನುಷ್ಯರಲ್ಲಿ ಇಮ್ಮಡಿ ಪರಿಚಲನೆಯನ್ನು ವಿವರಿಸಿ , ಇದು ಏಕೆ ಅಗತ್ಯವಾಗಿದೆ ?

ಮಾನವನ ಹೃದಯವು ಬಲ ಹೃತ್ಕರ್ಣ , ಬಲ ಹೃತ್ಕೃಕ್ಷಿ.ಎಡ ಹೃತ್ಕರ್ಣ ಮತ್ತು ಎಡಹೃತ್ಕೃಕ್ಷಿ ಎಂಬ ನಾಲ್ಕು ಕೋಣೆಗಳಿಂದ ಮಾಡಲ್ಪಟ್ಟಿದೆ.ಮಾನವನ ಹೃದಯದಲ್ಲಿ ಈ ಕೆಳಗಿನಂತೆ ರಕ್ತಪರಿಚಲನೆ ನಡೆಯುತ್ತದೆ . ಆಕ್ಸಿಜನ್ ಸಮೃದ್ಧ ರಕ್ತವು ಶ್ವಾಸಕೋಶಗಳಿಂದ ತೆಳುವಾದ ಭಿತ್ತಿಯಿರುವ ಹೃದಯದ ಕೋಣೆ , ಎಡ ಹೃತ್ಕರ್ಣಕ್ಕೆ ಬರುತ್ತದೆ.ಈ ರಕ್ತವನ್ನು ಪಡೆದಾಗ ಎಡ ಹೃತ್ಕರ್ಣವು ಸಡಿಲಗೊಳ್ಳುತ್ತದೆ ನಂತರ ಇದು ಸಂಕುಚಿಸುತ್ತದೆ.ಆಗ ಪಕ್ಕದ ಕೋಣೆ , ಎಡ ಹೃತ್ಯುಕ್ಷಿ ಹಿಗ್ಗುತ್ತದೆ . ಇದರಿಂದಾಗಿ ರಕ್ತವು ಇದಕ್ಕೆ ವರ್ಗಾವಣೆಗೊಳ್ಳುತ್ತದೆ . ಯಾವಾಗ ಸ್ನಾಯುವಿನಿಂದಾದ ಎಡ ಹೃತ್ಕುಕ್ಷಿಯು ಸಂಕುಚಿಸುತ್ತದೆಯೋ ರಕ್ತವು ದೇಹದೊಳಗೆ ಪಂಪ್ ಮಾಡಲ್ಪಡುತ್ತದೆ .

ಬಲಭಾಗದ ಮೇಲಿನ ಕೋಣೆ , ಬಲ ಹೃತ್ಕರ್ಣವು ಹಿಗ್ಗಿದಾಗ ಆಮ್ಲಜನಕರಹಿತ ರಕ್ತವು ದೇಹದಿಂದ ಅದಕ್ಕೆ ಬರುತ್ತದೆ.ಬಲ ಹೃತ್ಕರ್ಣವು ಸಂಕುಚಿಸಿದಾಗ ಅದಕ್ಕನುಗುಣವಾಗಿ ಕೆಳಗಿನ ಕೋಣೆ , ಬಲ ಹೃತ್ಯುಕ್ಷಿಯು ಹಿಗ್ಗುತ್ತದೆ . ಇದು ಬಲ ಹೃತ್ಕುಕ್ಷಿಗೆ ರಕ್ತವನ್ನು ವರ್ಗಾಯಿಸುತ್ತದೆ.ಅದು ಆ ರಕ್ತವನ್ನು ಆಮ್ಲಜನಕಸಹಿತಗೊಳಿಸಲು ಶ್ವಾಸಕೋಶಗಳಿಗೆ ಪಂಪ್ ಮಾಡುತ್ತದೆ . ಈ ರೀತಿ ಹೃದಯಕ್ಕೆ ಒಮ್ಮೆ ದೇಹದಿಂದ ಆಮ್ಲಜನಕರಹಿತ ರಕ್ತ ಮತ್ತು ಮತ್ತೊಮ್ಮೆ ಶ್ವಾಸಕೋಶದಿಂದ ಆಮ್ಲಜನಕಸಹಿತ ರಕ್ತ ಬರುವುದರಿಂದ ಇದನ್ನು ಇಮ್ಮಡಿ ಪರಿಚಲನೆ ಎನ್ನುವರು . ಇಮ್ಮಡಿ ಪರಿಚಲನೆಯು ಆಮ್ಲಜನಕಸಹಿತ ರಕ್ತ ಮತ್ತು ಆಮ್ಲಜನಕರಹಿತ ರಕ್ತವನ್ನು ಪ್ರತ್ಯೇಕಗೊಳಿಸಿ ದೇಹದ ಜೀವಕೋಶಗಳಿಗೆ ಸಾಕಷ್ಟು ಆಮ್ಲಜನಕ ಸಿಗುವಂತೆ ಮಾಡುತ್ತದೆ . ಬಿಸಿರಕ್ತ ಪ್ರಾಣಿಗಳಲ್ಲಿ ದೇಹದ ತಾಪಮಾನ ಕಾಪಾಡುವಲ್ಲಿ ಇದು ಸಹಕಾರಿಯಾಗಿದೆ .

12. ಕೈಲಂ ಮತ್ತು ಫ್ಲೋಯಂಗಳಲ್ಲಿನ ವಸ್ತುಗಳ ಸಾಗಾಣಿಕೆಯ ನಡುವಿನ ವ್ಯತ್ಯಾಸಗಳು ಯಾವುವು ?

ಕ್ಸೈಲಂ ವಸ್ತುಗಳ ಸಾಗಾಣಿಕೆಫ್ಲೋಯಂನಲ್ಲಿ ವಸ್ತುಗಳ ಸಾಗಾಣಿಕೆ
ಇದು ನೀರು ಮತ್ತು ಲವಣಗಳನ್ನು ಸಾಗಿಸುತ್ತದೆ .ಇದು ಆಹಾರವನ್ನು ಸಾಗಿಸುತ್ತದೆ .
ನೀರು ಬೇರಿನಿಂದ ಸಸ್ಯದ ಇತರೆ ಎಲ್ಲಾ ಭಾಗಗಳಿಗೆ ಸಾಗಿಸಲ್ಪಡುತ್ತದೆ.ಆಹಾರವು ಮೇಲ್ಮುಖವಾಗಿ ಮತ್ತು ಕೆಳಮುಖವಾಗಿ ಸಾಗಿಸಲ್ಪಡುತ್ತದೆ .
ಬಾಷ್ಪವಿಸರ್ಜನೆಯ ಸೆಳೆತದಂತಹ ಭೌತಿಕ ಬಲಗಳಿಂದ ಸಾಗಾಣಿಕೆ ನಡೆಯುತ್ತದೆ.ಆಹಾರ ಸಾಗಾಣಿಕೆಗೆ ATP ರೂಪದಲ್ಲಿ ಶಕ್ತಿಯ ಅವಶ್ಯಕತೆ ಇದೆ .

13. ರಚನೆ ಮತ್ತು ಕಾರ್ಯನಿರ್ವಹಣೆಯ ಆಧಾರದ ಮೇಲೆ ಶ್ವಾಸಕೋಶಗಳಲ್ಲಿರುವ ಗಾಳಿಗೂಡುಗಳನ್ನು ಮತ್ತು ಮೂತ್ರಪಿಂಡಗಳಲ್ಲಿರುವ ನೆಫ್ರಾನ್ಗಳನ್ನು ಹೋಲಿಕೆ ಮಾಡಿ ,

ಗಾಳಿಗೂಡುನೆಫ್ರಾನ್
ಶ್ವಾಸಕೋಶದಲ್ಲಿನ ಬಲೂನಿನಂತಹ ರಚನೆಗಳುಮೂತ್ರಪಿಂಡದಲ್ಲಿನ ಕೊಳವೆಯಾಕಾರದ ರಚನೆಗಳು
ಇವುಗಳ ಗೋಡೆಯು ವಿಶಾಲವ್ಯಾಪ್ತಿಯ ರಕ್ತನಾಳಗಳ ಜಾಲವನ್ನು ಹೊಂದಿವೆ .ಇವು ಅತ್ಯಂತ ತೆಳುವಾದ ಭಿತ್ತಿಯಿರುವ ಲೋಮನಾಳಗಳನ್ನು ಹೊಂದಿವೆ

ಕಾರ್ಯ ನಿರ್ವಹಣೆಯ ಆಧಾರದಲ್ಲಿ ಹೋಲಿಕೆ .

ಗಾಳಿಗೂಡುನೆಫ್ರಾನ್
ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೆಡ್ ಅನಿಲಗಳ ವಿನಿಮಯವು ಶ್ವಾಸಕೋಶವನ್ನು ಆವರಿಸಿರುವ ರಕ್ತನಾಳಗಳಿಂದ ನಡೆಯುತ್ತದೆ .ರಕ್ತವು ರೀನಲ್ ಅಪಧಮನಿಯ ಮೂಲಕ ಬೌಮನ್ನನ ಕೋಶಕ್ಕೆ ಬಂದು ಸೋಸಲ್ಪಡುತ್ತದೆ .
ಇವು ಅನಿಲಗಳ ವಿನಿಮಯದ ಕೇಂದ್ರ .ಇವು ಮೂತ್ರದ ಉತ್ಪಾದನೆಯ ಕೇಂದ್ರ .

FAQ

ಸಸ್ಯಗಳಲ್ಲಿ ಕ್ಸೈಲಂನ ಹೊಣೆಗಾರಿಕೆ ಏನು?

ನೀರಿನ ಸಾಗಾಣಿಕೆ

ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ ಏನು?

ವಿಸರ್ಜನೆ .

ಇತರೆ ವಿಷಯಗಳು:

10th Standard Science 1st Lesson Notes

10th Standard Science Chapter 2 Notes

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

10ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh