5ನೇ ತರಗತಿ ವಚನಗಳು ಪದ್ಯದ ನೋಟ್ಸ್‌ | 5th Standard Vachanagalu Poem Notes

5ನೇ ತರಗತಿ ಕನ್ನಡ ವಚನಗಳು ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು, 5th Standard Kannada Vachanagalu Notes Question Answer Summary Mcq Pdf Download Kannada in Kannada Medium Karnataka State Syllabus 2024, Kseeb Solutions For Class 5 Kannada 3rd Poem Notes Pdf 5th Standard Kannada Poem Vachanagalu

5th Standard Kannada Vachanagalu Notes

5th Standard Kannada Vachanagalu Notes
5th Standard Kannada Vachanagalu Notes

ಕೃತಿಕಾರರ ಪರಿಚಯ:

ಬಸವಣ್ಣ :

5th Standard Kannada Vachanagalu Notes

ಶಿವಶರಣ ಬಸವಣ್ಣ ಅವರು ಕ್ರಿ.ಶ. ಸುಮಾರು 12 ನೆಯ ಶತಮಾನದ ಪ್ರಸಿದ್ಧ ವಚನಕಾರರು ಮತ್ತು ಸಮಾಜ ಸುಧಾರಕರು . ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದರು . ಇವರು ಕಳಚುರಿ ವಂಶದ ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿ ರಾಜ್ಯದ ಮಹಾ ದಂಡನಾಯಕನಾಗಿ ಸೇವೆಯನ್ನು ಸಲ್ಲಿಸಿದ್ದಾರೆ . ‘ ಕೂಡಲ ಸಂಗಮದೇವಾ ‘ಅಂಕಿತದಿಂದ ರಚಿಸಿರುವ ಇವರ ಸಾವಿರಾರು ವಚನಗಳು ದೊರೆತಿವೆ.

ಅಂಬಿಗರ ಚೌಡಯ್ಯ :

5th Standard Kannada Vachanagalu Notes

ಶಿವಶರಣ ಅಂಬಿಗರ ಚೌಡಯ್ಯ ಅವರು ಕ್ರಿ.ಶ. ಸುಮಾರು 12 ನೆಯ ಶತಮಾನದ ಪ್ರಸಿದ್ಧ ವಚನಕಾರರು · ಮತ್ತು ಸಮಾಜ ಸುಧಾರಕರು . ಇವರು ಗುತ್ತಲರ ಅರಸರ ಆಳ್ವಿಕೆ ಕಾಲದಲ್ಲಿ ಚೌಡದಾನಪುರದ ತುಂಗಭದ್ರಾ ನದಿ ತೀರದಲ್ಲಿ ತನ್ನ ದೋಣಿಯ ಮೂಲಕ ಜನರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದರು . ಸಮಾಜ ಚಿಂತನೆಯ ಮೂಲಕ ಜನತೆಯ ಒಳಿತನ್ನು ಬಯಸಿದ ವಚನಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವರಲ್ಲಿ ಒಬ್ಬನಾಗಿದ್ದಾರೆ . ನಮಗೆ ಸದ್ಯಕ್ಕೆ ಸಿಕ್ಕಿರುವ ಅಂಬಿಗರ ಚೌಡಯ್ಯ ಅವರ ರಗಳು 278 , ಅವುಗಳಲ್ಲಿ ಚೌಡಯ್ಯ ಅವರ ಅಂತರಾಳದ ಅನುಭವ ಸಮಾಜದಲ್ಲಿ ತಾವು ಕಂಡು ಉಂಡ ಅನುಭವಗಳನ್ನು ತಮ್ಮ ವಚನಗಳಲ್ಲಿ ವಕಪಡಿಸಿದ್ದಾರೆ . ಇವರ ಅಂಕಿತ ‘ ನಾಮ ಅಂಬಿಗರ ಚೌಡಯ್ಯ ‘ ಎಂಬುದಾಗಿದೆ .


ಅಕ್ಕ ಮಹಾದೇವಿ :

5th Standard Kannada Vachanagalu Notes

ಶಿವಶರಣೆ ಅಕ್ಕಮಹಾದೇವಿ ಅವರು ಕ್ರಿ.ಶ. ಸುಮಾರು 12 ನೆಯ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ ಗ್ರಾಮದಲ್ಲಿ ಜನಿಸಿದರು . ಇವರು ಒಬ್ಬ ಶೇಷ್ಠ ವಚನಕಾರ್ತಿ ಹಾಗೂ ಕವಯಿತ್ರಿ , ಇವರ 434 ವಚನಗಳು ಲಭ್ಯವಾಗಿವೆ .

ಆಯ್ದಕ್ಕಿ ಲಕ್ಕಮ್ಮ :

5th Standard Kannada Vachanagalu Notes

ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅವರು ಕ್ರಿ.ಶ. ಸುಮಾರು 12 ನೆಯ ಶತಮಾನದ ವಚನಕಾರ್ತಿ ಹಾಗೂ ಕಾಯಕಯೋಗಿ , ಬಸವಣ್ಣ ಅವರ ಸಮಕಾಲೀನರು . ಕಾಯಕಯೋಗಿ ಆಯ್ದಕ್ಕಿ ಮಾರಯ್ಯ ಅವರ ಧರ್ಮಪತ್ನಿ . ಇವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮದವರು . ಬಸವಣ್ಣ ಅವರ ಕೀರ್ತಿಯನ್ನು ಕೇಳಿದ ಇವರು ಕಲ್ಯಾಣಕ್ಕೆ ಬಂದು ನೆಲೆಸುತ್ತಾರೆ . ಮಹಾಮನೆಯ ಅಂಗಳದಲ್ಲಿ ಶುದ್ಧ ಅಕ್ಕಿಯನ್ನು ಜಂಗಮ ದಾಸೋಹವನ್ನು ನಡೆಸುತ್ತಿದ್ದರು . ‘ ಮಾರಯ್ಯ ಪ್ರಿಯ ಅಮರೇಶ್ವರಲಿಂಗ ‘ ಎಂಬುದು ಇವರ ವಚನಗಳ ಅಂಕಿತವಾಗಿದೆ.

೫ನೇ ತರಗತಿ ವಚನಗಳು ಪದ್ಯದ ನೋಟ್ಸ್‌

ಪದಗಳ ಅರ್ಥ

ಅರಿವು = ತಿಳುವಳಿಕೆ, ಜ್ಞಾನ.

ಒಲಿಸು = ಮನವೊಪ್ಪಿಸು,

ಗರ್ವ = ಅಂಹಂಕಾರ, ಸೊಕ್ಕು.

ದ್ರವ್ಯ = ಸಂಪತ್ತು, ಐಶ್ವರ್ಯ.

ಪರಿ = ರೀತಿ, ಕ್ರಮ.

ಹಳಿ = ನಿಂದಿಸು, ದೂಷಿಸು.

ಹಾನಿ = ಕೇಡು, ನಾಶ, ನಷ್ಟ.

ಹುಸಿ = ಸುಳ್ಳು. ಅಸತ್ಯ.

ಅಭ್ಯಾಸ

5th Vachanagalu Kannada Notes Question Answer

ಅ)ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

೧. ಯಾರನ್ನು ಹಳಿಯಬಾರದು?

ಯಾರನ್ನೇ ಆಗಲಿ ಅವರ ಸಮ್ಮುಖದಲ್ಲಿ ಎದುರೆದುರೇ ಹಳಿಯ (ನಿಂದಿಸ)ಬಾರದು.

೨. ಬಡತನಕ್ಕೆ ಯಾವ ಚಿಂತೆ?

ಬಡತನಕ್ಕೆ ಉಂಬುವ (ಉಣುವ,ತಿನ್ನುವ) ಚಿಂತೆ.

೩. ಲೋಕದಲ್ಲಿ ಸುತ್ತಿನಿಂದೆಗಳು ಬಂದರೆ ಹೇಗಿರಬೇಕು?

ಲೋಕದಲ್ಲಿ ಸುತ್ತಿನಿಂದೆಗಳು ಬಂದಾಗ ಮನಸ್ಸಿನಲ್ಲಿ ಕೋಪ ಮಾಡಿಕೊಳ್ಳದೆ ಸಮಾಧಾನಿಯಾಗಿರಬೇಕು.

೪. ಎಂತಹ ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆ?

ಗರ್ವ (ಸೊಕ್ಕು,ಜಂಬ)ದಿಂದ ಮಾಡುವ ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆ.

೫. ಅಕ್ಕಮಹಾದೇವಿಯವರ ಅಂಕಿತ ಏನು?

ಅಕ್ಕಮಹಾದೇವಿಯವರ ಅಂಕಿತ ʼಚೆನ್ನಮಲ್ಲಿಕಾರ್ಜುನʼ

ಆ) ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.

೧. ಕಲಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ,

ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,

ಇದೇ ಅಂತರಣಗ ಶುಧ್ಧಿ, ಇದೇ ಬಹಿರಂಗ ಶುದ್ಧಿ;

ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ.

೨. ಗರ್ವದಿಂದ, ಮಾಡುವ ಭಕ್ತಿ ದ್ರವ್ಯದ ಕೇಡು;

ನಡೆದಿಲ್ಲದ ನುಡಿ ಅರಿವಿಂಗೆ ಹಾನಿ;

ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ

ದೃಢವಿಲ್ಲದ ಭಕ್ತಿ ಒಡೆದ ಕುಂಭದಲ್ಲಿ

ಸುಜಲವ ತುಂಬಿದಂತೆ ಮಾರಯ್ಯ ಪ್ರಿಯ

ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ.

ವ್ಯಾಕರಣ ಮಾಹಿತಿ

ಅ) ಗುಣ ವಿಶೇಷಣ

ನಾಮ ಪದದ ವಿಶೇಷ ಗುಣವನ್ನು ತಿಳಿಸುವ ಅಥವಾ ಸೂಚಿಸುವ ಪದವೇ ಗುಣ ವಿಶೇಷಣ.

ಉದಾ : ರಿತೇಷನ ಬಳಿ ಕರಿಯ ಮೊಲವಿದೆ.

ಇಲ್ಲಿ ʼಕರಿಯʼ ಎಂಬುದು ಮೊದಲ ಬಣ್ಣವನ್ನುತಿಳಿಸುತ್ತದೆ.

೧. ಕಾಂಚನಾ ಸುಂದರ ಹುಡುಗಿ.

೨. ದರ್ಶಿನಿ ಕೆಂಪು ಲಂಗವನ್ನು ತೊಟ್ಟಿದ್ದಾಳೆ

೩. ರಾಘುವಿನ ಹತ್ತಿರ ದೊಡ್ಡ ವಿಮಾನವಿದೆ.

ಇಲ್ಲಿ ಅಡಿಗೆರೆ ಎಳೆಯಲಾದ ʼಸುಂದರʼ, ʼಕೆಂಪುʼ, ʼದೊಡ್ಡʼ, ಈ ಪದಗಳನ್ನು ಗಮನಿಸಿರಿ. ಬಣ್ಣ , ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳಾಗಿವೆ.

ಇವುಗಳನ್ನು “ಗುಣ ವಿಶೇಷಣಗಳೆನ್ನುವರು”.

ಭಾಷಾಭ್ಯಾಸ

ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

ಅ) ಗುಣ ವಿಶೇಷಣ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿರಿ.

ನಾಮಪದದ ಬಣ್ಣ , ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ಪದಗಳನ್ನು ಗುಣ ವಿಶೇಷಣಗಳೆನ್ನುವರು.

ಉದಾ : ೧. ಇದು ದೊಡ್ಡದಾದ ಬಸ್‌ ನಿಲ್ದಾಣ

೨. ಬಿಳಿಯ ಮೊಲ ಓಡುತ್ತಿದೆ.

ದೊಡ್ಡ ಮತ್ತು ಬಿಳಿಯ – ಇವು ಗುಣವಿಶೇಷಣಗಳು.

ಆ) ಕೊಟ್ಟಿರುವ ವಾಕ್ಯಗಳಲ್ಲಿ ಗುಣವಿಶೇಷಣವನ್ನು ಗುರುತಿಸಿ ಅಡಿ ಗೆರೆ ಹಾಕಿರಿ.

೧. ಕನ್ವೇಯರ್‌ ಬೆಲ್ಟ್‌ ತುಂಬಾ ಲಗೇಜನ್ನು ಹೊರಬಲ್ಲುದು.

೨. ವಿಮಾನ ನಿಲ್ದಾಣದಲ್ಲಿ ವಿಶೇಷ ಅತಿಥಿಗಳ ಕೊಠಡಿಗಳಿರುತ್ತವೆ.

೩. ವಿಮಾನ ನಿಲ್ದಾಣ ತುಂಬಾ ಸುಂದರವಾಗಿದೆ.

೪. ಹಡಗು ಬಹಳ ದೊಡ್ಡದಾಗಿದೆ.

೫. ಪ್ರಿಯಾಳ ಲಂಗ ಹಚ್ಚ ಹಸಿರಾಗಿದೆ.

ಇ) ಶುಭನುಡಿ

೧. ಬಹಿರಂಗಶುದ್ಧಿಗಿಂತ ಅಂತರಂಗಶುದ್ಧಿ ಬಹಳ ಮುಖ್ಯ.

೨. ದೈವ ಚಿಂತನೆಯಿಂದ ಮನಸ್ಸಿಗೆ ಆನಂದ ದೊರೆಯುತ್ತದೆ.

೩. ಹೊಗಳಿಕೆ ಹಿಗ್ಗಬಾರದು; ತೆಗಳಿಕೆ ಕುಗ್ಗಬಾರದು.

೪. ನಡೆನುಡಿಗಳು ಒಂದಾಗಿರಬೇಕು.

ವಚನಗಳು ಪದ್ಯದ ಸಾರಾಂಶ | 5th Standard Poem Vachanagalu Summary in Kannada.

ಪ್ರವೇಶ

ಜೀವನದಲ್ಲಿ ದೇವರನ್ನು ಕಾಣಲು ಅಂತರಂಗಶುದ್ದಿ ಬಹಳ ಮುಖ್ಯ . ಅನ್ಯ ಚಿಂತೆಗಿಂತ ದೇವರನ್ನು ಕಾಣಬೇಕು ಎಂಬ ಚಿಂತೆ ಮುಖ್ಯ ಜೀವನದಲ್ಲಿ ಸ್ತುತಿ – ನಿಂದೆಗಳು ಬಂದಾಗ ಮನದಲ್ಲಿ ಕೋಪ ಮಾಡಿಕೊಳ್ಳದೆ ಸಮಾಧಾನಿಯಾಗಿರುವುದು ಮುಖ್ಯ. ಮಾನವನು ನಿರಹಂಕಾರಿಯಾಗಿ ನುಡಿಗೆ ತಕ್ಕ ನಡೆಯುಳ್ಳವರಾಗಿ, ದಾನಿಗಳಾಗಿ ಇರುವುದು ಆಶಯವಾಗಿದೆ.

ಮುಖ್ಯಾಂಶಗಳು

‘ ವಚನಗಳು ‘ ಕನ್ನಡ ಸಾಹಿತ್ಯದ ಒಂದು ಪ್ರಕಾರ, . ಮೊಟ್ಟ ಮೊದಲಿಗೆ 12ನೇ ಶತಮಾನದಲ್ಲಿ ಉಂಟಾದ ಸಾಹಿತ್ಯಕ್ರಾಂತಿ ವಚನಗಳಿಂದ ಉಂಟಾಯಿತು . ಇವು ತುಂಬಾ ಸರಳ ವಾಗಿ ಪಂಡಿತ ಪಾಮರರೆಲ್ಲರಿಗೂ ಅರ್ಥವಾಗುವಂತಹುದು . ಜೀವನದ ಸಾರ ಮತ್ತು ನೀತಿಯನ್ನು ಗೆ ತಿಳಿಸುತ್ತವೆ .

ಬಸವಣ್ಣನವರು ಕ್ರಾಂತಿಪುರುಷರು , ಜನಸಾಮಾನ್ಯರಿಗೆ ಅರ್ಥವಾಗುವಂತೆ ಜೀವನದಲ್ಲಿ ಹೇಗಿರಬೇಕು ಮತ್ತು ಕೈವಲ್ಯವನ್ನು ಪಡೆಯುವ , ದೇವರನ್ನು ಒಲಿಸುವ ಪರಿ ( ರೀತಿಯನ್ನು ) ಯನ್ನು ಬೋಧಿಸಿದ್ದಾರೆ . ಕಳ್ಳತನ ಮತ್ತು ಕೊಲೆ ಮಾಡಬಾರದು , ಸುಳ್ಳು ಹೇಳಬಾರದು , ಕೋಪಮಾಡಿಕೊಳ್ಳಬಾರದು , ಬೇರೆಯವರನ್ನು ನೋಡಿ ಅಸಹ್ಯ ಪಡಬಾರದು , ನಮ್ಮನ್ನು ನಾವೇ ಹೊಗಳಿಕೊಳ್ಳ ಬಾರದು , ಮುಖಕ್ಕೆ ಹೊಡೆದಂತೆ ಎದುರುದುರೇ ಬೈಯಬಾರದು , ಈ ರೀತಿ ಇದ್ದರೆ ಇದು ಅಂತರಂಗ ಮತ್ತು ಬಹಿರಂಗವಾದ ಶುದ್ಧಿ . ಹೀಗಿದ್ದು ಕೂಡಲಸಂಗಮ ವನ್ನು ಒಲಿಸಬೇಕು . ಇದೇ ನಮ್ಮ ಕೂಡಲ ಸಂಗಮನನ್ನು ಒಲಿಸುವ ರೀತಿ ಎಂದು ಹೇಳಿದ್ದಾರೆ .

ಅಂಬಿಗರ ಚೌಡಯ್ಯ ಮನುಷ್ಯರ ಸ್ವಭಾವವನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆ . ಬಡತನವಿದ್ದಾಗ ಊಟ 3 ಸಿಕ್ಕರೆ ಸಾಕು ಎಂಬ ಚಿಂತೆ , ಊಟ ಸಿಕ್ಕರೆ ಬಟ್ಟೆಯ ಚಿಂತೆ , ಬಟ್ಟೆ ಸಿಕ್ಕರೆ ಉಳಿಸಿಡುವ ಚಿಂತೆ , ಉಳಿಸಿಟ್ಟ ಮೇಲೆ ಹೆಂಡತಿಯ ಚಿಂತೆ , ಹೆಂಡತಿ ಸಿಕ್ಕ ಮೇಲೆ ಮಕ್ಕಳ ಚಿಂತೆ , ಮಕ್ಕಳ ನಂತರ ಬದುಕಿನ ಚಿಂತೆ , ಬದುಕಿದ ನಂತರ ಕೇಡು ಮಾಡುವ ಚಿಂತೆ , ಕೇಡಿನ ನಂತರ ಮರಣದ ಚಿಂತೆ. ಈ ರೀತಿ ಹತ್ತು ಹಲವಾರು ಚಿಂತೆಗಳಲ್ಲಿದ್ದವರನ್ನು ನೋಡಿದ್ದೇನೆ . ಆದರೆ ಶಿವನ ಚಿಂತೆ ಮಾಡುವ ಒಬ್ಬರನ್ನೂ ನೋಡಲಿಲ್ಲ . ಇದೇನು ಶಿವ ? ನಿನ್ನ ಲೀಲೆ ಎಂದು ನಿಜಶರಣರಾದ ಚೌಡಯ್ಯ ಕೇಳುತ್ತಿದ್ದಾರೆ .

ಅಕ್ಕ ಮಹಾದೇವಿಯು ಶೇಷ್ಠಳಾದ ಶಿವಶರಣೆ , ಮನುಷ್ಯರು ತಾವು ವಾಸಿಸುವ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಂಡು ಬಾಳಬೇಕು ಎಂಬುದನ್ನು ಬಹಳ ಸೊಗಸಾದ ಉಪಮೆಗಳೊಂದಿಗೆ ವಿವರಿಸಿದ್ದಾಳೆ . ಬೆಟ್ಟದ ಮೇಲೆ ಮನೆಯನ್ನು ಮಾಡಿಕೊಂಡು ಮೃಗಗಳು ಬರುತ್ತದೆ ಎಂದು ಹೆದರಿಕೊಳ್ಳುವುದು ತರವೇ ? ಸಮುದ್ರದ ದಂಡೆಯ ಹತ್ತಿರ ಮನೆಯನ್ನು ಮಾಡಿಕೊಂಡು ನೆರೆ ( ಪ್ರವಾಹ ) ತೊರೆಗಳು ಬರುತ್ತವೆ ಎಂದು ಅಂಜುವುದು ಏತಕ್ಕೆ ಮನೆ ಸಂತೆಯಲ್ಲಿದ್ದಾಗ ಶಬ್ದವಾಗುತ್ತಿದೆ ಎಂದು ನಾಚಿಕೆಪಟ್ಟುಕೊಳ್ಳುವುದು ಸರಿಯೇ ಅಂತೆಯೇ ಈ ಭೂಲೋಕದಲ್ಲಿ ಹುಟ್ಟಿದ ಮೇಲೆ ನಿಂದೆ ( ಬೈಗಳು ) ಮತ್ತು ಸ್ತುತಿ ( ಹೊಗಳಿಕೆ ) ಗಳಿಗೆ ಮನಸ್ಸಿನಲ್ಲಿ ಕೋಪ ಮಾಡಿಕೊಳ್ಳದೆ ಸಮಾಧಾನಿಯಾಗಿರಬೇಕು ಎಂದು ವ್ಯಕ್ತಪಡಿಸುತ್ತಿದ್ದಾರೆ .

ಆಯ್ದಕ್ಕಿ ಲಕ್ಕಮ್ಮ ತಮ್ಮ ಈ ವಚನದಲ್ಲಿ ಯಾವುದು ನಿಜವಾದ ಭಕ್ತಿ , ಭಕ್ತರು ಹೇಗಿರಬೇಕೆಂಬುದರ ಬಗ್ಗೆ ಹೇಳಿದ್ದಾರೆ . ಗರ್ವದಿಂದ ಎಂದರೆ ಜಂಬ ಅಥವಾ ಸೊಕ್ಕಿನಿಂದ ( ಅಹಂಕಾರ ) ಮಾಡುವ ಭಕ್ತಿ ದ್ರವ್ಯದ ಹಾನಿಯನ್ನುಂಟು ಮಾಡುತ್ತದೆ . ಒಳ್ಳೆಯ ನಡತೆಯಿಲ್ಲದ ಮಾತು ತಿಳುವಳಿಕೆಗೆ ಹಾನಿಯನ್ನು ತರುತ್ತದೆ . ದಾನಮಾಡದೆ ತ್ಯಾಗಿ ಎನಿಸಿಕೊಳ್ಳುವುದು , ಕೂದಲು ( ಮುಡಿ ) ಇಲ್ಲದ ಶೃಂಗಾರದಂತೆ , ಚಾಂಚಲ್ಯದ ಅಥವಾ ದೃಢತೆಯಿಲ್ಲದ ಭಕ್ತಿ ಒಡೆದ ಮಡಿಕೆಯಲ್ಲಿ ತುಂಬಿದ ನೀರಿನಂತೆ , ಅಮರೇಶ್ವರ ಲಿಂಗವನ್ನು ತಲುಪದ ಭಕ್ತಿ , ಭಕ್ತಿಯೇ ಅಲ್ಲ ಎಂದು ವಿವರಿಸಿದ್ದಾರೆ .

FAQ

ಬಡತನಕ್ಕೆ ಯಾವ ಚಿಂತೆ?

ಬಡತನಕ್ಕೆ ಉಂಬುವ (ಉಣುವ,ತಿನ್ನುವ) ಚಿಂತೆ.

ಅಕ್ಕಮಹಾದೇವಿಯವರ ಅಂಕಿತ ಏನು?

ಅಕ್ಕಮಹಾದೇವಿಯವರ ಅಂಕಿತ ʼಚೆನ್ನಮಲ್ಲಿಕಾರ್ಜುನʼ

ಎಂತಹ ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆ?

ಗರ್ವ (ಸೊಕ್ಕು,ಜಂಬ)ದಿಂದ ಮಾಡುವ ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆ.

ಇತರೆ ವಿಷಯಗಳು :

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh