10ನೇ ತರಗತಿ ಕನ್ನಡ ವೃಕ್ಷಸಾಕ್ಷಿ ಪಾಠದ ನೋಟ್ಸ್ ಪ್ರಶ್ನೆ ಉತ್ತರಗಳು, 10th Vruksha Sakshi Kannada Notes Question Answer Summery Mcq Pdf Download 2024 Kannada Medium Karnataka State Syllabus Kseeb Solutions For Class 10 Kannada Chapter 8 Notes SSLC Kannada 8th Lesson Notes ವೃಕ್ಷಸಾಕ್ಷಿ Notes Pdf Vruksha Sakshi 10th Kannada Notes Vruksha Sakshi Kannada Lesson Question Answer 10th Class Kannada Vruksha Sakshi Question Answer
10th Vruksha Sakshi Kannada Notes Kannada Deevige
ಗದ್ಯಪಾಠ – 08
ಪಾಠದ ಹೆಸರು : ವೃಕ್ಷಸಾಕ್ಷಿ
ಕವಿ – ಕಾವ್ಯ ಪರಿಚಯ:
ದುರ್ಗಸಿಂಹ
ದುರ್ಗಸಿಂಹ ಕವಿ ಕಿಸುಕಾಡು ನಾಡಿನ ಸಯ್ಯಡಿಯಲ್ಲಿ (ಈಗಿನ ಗದಗ ಜಿಲ್ಲೆಯ ರೋಣ
ತಾಲೂಕಿನ ಸವಡಿ) ಕ್ರಿ.ಶ.೧೦೩೧ ಜನಿಸಿದನು. ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ
ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು. ಮತದರ್ಮ ಸಮನ್ವಯಕಾರನಾದ ಈತ
ಸಯ್ಯಡಿಯಲ್ಲಿ ಹಲವಾರು ಹರಿಹರಭವನಗಳನ್ನು ನರ‍್ಮಿಸಿದನೆಂದು ತಿಳಿದುಬಂದಿದೆ.ಈತನು
‘ಪಂಚತಂತ್ರ ಎಂಬ ಕೃತಿಯನ್ನು ರಚಿಸಿದ್ದಾನನೆ. ಪಂಚತಂತ್ರದಲ್ಲಿ ಭೇದ, ಪರೀಕ್ಷಾ,ವಿಶ್ವಾಸ,
ವಂಚನಾ ಮತ್ತು ಮಿತ್ರಕಾರ್ಯ ಎಂಬ ಐದು ತಂತ್ರಗಳನ್ನಾಧರಿಸಿ ೪೮ ಉಪಕತೆಗಳಿವೆ.
ಬಹು ಆಯ್ಕೆ ಪ್ರಶ್ನೆಗಳು
೧. ‘ಅನೃತ’ ಪದದ ಅರ್ಥ.
ಅ] ನಿಜ ಆ] ಸುಳ್ಳು ಇ] ಮಿತ್ರ ಈ] ಶತ್ರು.
೨. ‘ಅಬ್ಜೋದರ’ ಸಮಾಸಕ್ಕೆ ಉದಾಹರಣೆ .
ಅ] ದ್ವಿಗು ಆ] ಬಹವ್ರೀಹಿ ಇ] ತತ್ಪುರುಷ ಈ] ಕರ್ಮಧಾರಯಾ.
೩. ‘ಬಳಾರಿಯ ಮನೆಯಂ ಪರಕೆಯ ಕುರಿಯಂ ಪುಗಿಸುವಂತೆ’ ಇಲ್ಲಿ ಬಂದಿರುವ ಅಲಂಕಾರ
ಅ] ಶ್ಲೇಷಾ ಆ] ಉಪಮಾ ಇ] ರೂಪಕ ಈ] ಅರ್ಥಾಂತರನ್ಯಾಸ
೪. ‘ತೊಳೆಯದೆ’ ಈ ಅವ್ಯಯಕ್ಕೆ ಉದಾಹರಣೆ.
ಅ] ಭಾವಸೂಚಕವ್ಯಯ ಆ] ಕೃದಂತಾವ್ಯಯ ಇ] ತದ್ಧಿತಾಂತವ್ಯಯ ಈ] ಸಾಮಾನ್ಯವ್ಯಯ
೫. ‘ರವಿಯು ಮೂಡಣದಲ್ಲಿ ಹುಟ್ಟುತ್ತಾನೆ’ ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದ
ಅ] ಗುಣವಾಚಕ ಆ] ದಿಗ್ವಾಚಕ ಇ] ವಸ್ತುವಾಚಕ ಈ] ಪರಿಮಾಣವಾಚಕ
೬. ‘ಪುದಿವಿನೊಳ್’ ಈ ಪದದಲ್ಲಿರುವ ವಿಭಕ್ತಿ
ಅ] ಚತುರ್ಥೀ ಆ] ದ್ವಿತಿಯಾ ಇ] ಪಂಚಮೀ ಈ] ಸಪ್ತಮೀ.
೭. ‘ಆದಿತ್ಯೋದಯ’ ಈ ಸಂಧಿಗೆ ಉದಾಹರಣೆ .
ಅ] ವೃದ್ಧಿ ಆ] ಗುಣ ಇ] ಯಣ್ ಈ] ಆಗಮ ಸಂಧಿ
೮. ‘ತಮ್ಮ ತಮ್ಮ ಮನೆಗೆಲ್ಲರುಂ ಪೋದರ್’ ಅಡಿಗೆರೆ ಎಳೆದ ಪದದ ಸರ್ವನಾಮರೂಪ.
ಅ] ಸಾಂದರ್ಭಿಕ ಆ] ಆತ್ಮಾರ್ಥಕ
ಇ] ಪ್ರಶ್ನಾರ್ಥಕ ಈ] ಪುರುಷಾರ್ಥಕ.
೯. ಕಂದ ಪದ್ಯಗಳ ಸಾಲುಗಳ ಸಂಖ್ಯೆ
ಅ] ೬ ಆ] ೨ ಇ] ೪ ಈ] ೩
೧೦. ಕಂದ ಪದ್ಯದಲ್ಲಿ ಒಟ್ಟು ಮಾತ್ರೆಗಳ ಸಂಖ್ಯೆ
ಅ] ೬೪ ಆ] ೬೨ ಇ] ೬೦ ಈ] ೫೦
೧೧. ಭ, ರ, ನ, ಭ, ಭ, ರ, ಇದು ಯಾವ ವೃತ್ತದ ಗಣಗಳು
ಅ] ಉತ್ಪಲಮಾಲಾವೃತ್ತ ಆ] ಚಂಪಕಮಲಾ ಇ] ಸ್ರಗ್ಧರಾವೃತ್ತ ಈ] ಮಹಾಸ್ರಗ್ದರಾವೃತ್ತ
೧೨. ಮ, ರ, ನ, ಭ, ನ, ಯ, ಯ, ಯ . ಈ ವೃತ್ತದ ಗಣಗಳು.
ಅ] ಉತ್ಪಲಮಾಲಾವೃತ್ತ ಆ] ಚಂಪಕಮಾಲಾ ಇ] ಸ್ರಗ್ದರಾವೃತ್ತ ಈ] ಮಹಾಸ್ರಗ್ದ ರಾವೃತ್ತ
೧೩. ಮಹಾಸ್ರಗ್ದರಾವೃತ್ತ ಗಣಗಗಳು .
ಅ] ಭ,ರ,ನ,¨ಭ ಭ,ರ, ಆ] ಮ,ರ,ನ,ಭ,ನ,ಯ,ಯ,ಯ. ಇ] ಸ,ತ,ತ,ನ,ಸ,ರ,ರ ಈ] ಮ,ಸ,ಜ,ಸ,ತ,ತ
೧೪. – – – ಇದು
ಅ] ಮಗಣ ಆ]ತಗಣ
ಇ] ಸಗಣ ಈ]ನಗಣ
೧೫. ಸಾಕ್ಷಿಮಾಡಿ ಇದು
ಅ] ದ್ವಿಗು ಆ] ಕ್ರಿಯಾಸಮಾಸ ಇ] ತತ್ಪುರು ಷ ಈ] ಕರ್ಮಧಾರಯ.
೧೬. ಕ್ರಿಯಾ ಸಮಾಸಕ್ಕೆ ಉದಾ
ಅ] ಕೈಕೊಳ್ವುದು ಆ] ಪರಧನ ಇ] ಅತಿಕುಟಿಲ ಈ] ಕಪಟ
೧೭. ಅತಿಕುಟಿಲ ಈ ಸಮಾಸಕ್ಕೆ ಉದಾ
ಅ] ದ್ವಿಗು ಆ] ಕ್ರಿಯಾಸಮಾಸ ಇ] ತತ್ಪುರುಷ ಈ] ಕರ್ಮಧಾರಯಾ.
೧೮) ಖ್ಯಾತ ಕರ್ನಾಟಕಗಳೆಂದು ಪ್ರಸಿದ್ಧವಾಗಿರುವ ಅಕ್ಷರ ವೃತ್ತಗಳು.
ಅ) ೪ ಬ) ೬ ಕ) ೨೧ ಡ) ೮
೧೯) ಚಂಪಕಮಾಲ ವೃತ್ತದಲ್ಲಿರುವ ಗಣಗಳ ಸಂಖ್ಯೆ.
ಅ) ೭ ಗಣ ಬ) ೬ ಗಣ ಕ) ೫ ಗಣ ಡ) ೪ಗಣ
೨೦) ವೃತ್ತದಲ್ಲಿ ಎಷ್ಟು ಪಾದಗಳಿರುತ್ತವೆ.
ಅ) ೧ ಪಾದ ಬ) ೩ ಪಾದ ಕ) ೪ ಪಾದ ಡ) ೬ ಪಾದ
೨೧) ಚಂಪಕಮಾಲ ವೃತ್ತದಲ್ಲಿರುವ ಅಕ್ಷರಗಳ ಸಂಖ್ಯೆ.
ಅ) ೧೯
ಬ) ೨೦
ಕ) ೨೧
ಡ) ೨೨
೨೨] ಖ್ಯಾತಕರ್ನಾಟಕ ವೃತ್ತವು
ಅ) ಅಕ್ಷರಗಣ
ಬ) ಮಾತ್ರಗಣ
ಕ) ಗಣ
ಡ) ಮಾತ್ರೆ
೨೩] ಕಂದ ಪದ್ಯವು
ಅ) ಅಕ್ಷರಗಣ
ಬ) ಮಾತ್ರಗಣ
ಕ) ಗಣ
ಡ) ಮಾತ್ರೆ
೨೪] ‘ಪೋಗಲ್‌ವೇೞ್ಕುಂ’ ಈ ಸಂಧಿಗೆ ಉದಾಹರಣೆ
ಅ] ವೃದ್ಧಿ ಆ] ಗುಣ ಇ] ಯಣ್ ಈ] ಆಗಮ ಸಂಧಿ
ಉತ್ತರಗಳು
೧]ಆ ೨]ಆ ೩]ಆ ೪]ಇ ೫]ಆ ೬]ಈ ೭]ಆ ೮]ಆ ೯]ಇ ೧೦]ಇ ೧೧]ಅ ೧೨]ಇ
೧೩]ಇ ೧೪]ಅ ೧೫]ಆ ೧೬]ಅ ೧೭]ಈ ೧೮]ಬ ೧೯]ಅ ೨೦]ಕ ೨೧]ಕ ೨೨]ಅ ೨೩]ಬ ೨೪] ಈ
ಮೊದಲೆರೆಡು ಪದಗಳಿಗಿರುವ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸಂಬAಧಿಸಿದ ಪದ ಬರೆಯಿರಿ.
೧. ಮೇದಿನಿ : ಭೂಮಿ :: ಆದಿತ್ಯ : __________
೨. ಪೊನ್ನಮ್ : ದ್ವಿತೀಯಾ :: ಪರಿಗ್ರಹಮೆಲ್ಲಂ :________
೩. ಬೀಣೇಯಂ : ಭಗಣ :: ಲೋಕೇಶ : _______
೪. ದೈವಭಕ್ತಿ : ತತ್ಪುರುಷ :: ಅಬ್ಜೋದರ : _______
೫. ಉತ್ಪಲಮಾಲಾವೃತ್ತ : ಇಪ್ಪತ್ತು ಅಕ್ಷರ :: ಸ್ರಗ್ಧರಾವೃತ್ತ: ……………………………
೬. ತಸ್ಕರ : ಕಳ್ಳ :: ಅನೃತ : …………………………………………………
೭. ಕೂರ್ಮೆ : ಸ್ನೇಹ :: ಚೋದ್ಯ : ………………………………………………………
೮.ವ್ಯಾಪಾರಿ : ಬೇಹಾರಿ :: ಕೋಕಿಲಾ : …………………………………………
೯. ಪರಧನ : ತತ್ಪುರುಷ :: ಬಲವಂದು : ……………………………
೧೦. ತಕ್ಕನಿತು : ಲೋಪ :: ಪೂೞ್ದೆಡೆ : ………………………………
೧೧. ಧನಹರಣ : ಕ್ರಿಯಾಸಮಾಸ :: ಸ್ವಾಮಿದ್ರೋಹ : ……………………………
ಉತ್ತರಗಳು
೧] ಭಾಸ್ಕರ ೨] ಪ್ರಥಮಾ ೩] ತಗಣ ೪] ಬಹುವ್ರೀಹಿ
ಕ್ರಿಯಾಸಮಾಸ ೧೦] ಆದೇಶ ೧೧. ತತ್ಪುರುಷ ಸಮಾಸ
೫] ಇಪ್ಪತ್ತೊಂದು ಅಕ್ಷರ೬] ಅಸತ್ಯ
೭] ಅಧ್ಬುತ ೮] ಕೋಗಿಲೆ]
ಪಾಠದ ಆಶಯ ಭಾವ
ಗುಣಾಢ್ಯನಿಂದ ಪೈಶಾಚಿಕ ಭಾಷೆಯಲ್ಲಿ ರಚಿತವಾದ ಬೃಹತ್ಕಥೆಯನ್ನಾಧರಿಸಿ ವಸುಭಾಗಭಟ್ಟನು ಸಂಸ್ಕೃತದಲ್ಲಿ ಪಂಚತಂತ್ರ ಕೃತಿಯನ್ನು ರಚಿಸಿದ್ದಾನೆ.ಈ ಸಂಸ್ಕೃತ ಕೃತಿಯನ್ನಾಧರಿಸಿ ಕನ್ನಡದಲ್ಲಿ ಪಂಚತಂತ್ರವನ್ನು ಬರೆದಿರುವುದಾಗಿ ದುರ್ಗಸಿಂಹ ಹೇಳಿಕೊಂಡಿದ್ದಾನೆ. ಪಂಚತಂತ್ರ ಕೃತಿಯಿಂದ ಆಯ್ದವೃಕ್ಷಸಾಕ್ಷಿ
ಕಥೆಯ ಮೂಲಕ ಹಳೆಗನ್ನಡ ಚಂಪೂಕಾವ್ಯವನ್ನು ಪರಿಚಯಿಸುವ ಆಶಯದೊಂದಿಗೆ ವೃಕ್ಷಸಾಕ್ಷಿ ಕಥೆಯು “ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆಸುಖವಿಲ್ಲ” ಎಂಬ ನೀತಿಯನ್ನು ಪ್ರತಿಪಾದಿಸುತ್ತದೆ. ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಪಾತ್ರಗಳು ಹೆಸರಿಗೆ ತಕ್ಕಂತೆ ಗುಣವನ್ನು ಹೊಂದಿದ್ದು ಧರ್ಮಬುದ್ದಿಯ ಪಾತ್ರವು ಸಹನಶೀಲತೆ , ಸುಸಂಸ್ಕೃತ ವ್ಯಕ್ತಿತ್ವವನ್ನು ನಿರೂಪಿಸಿದರೆ ದುಷ್ಟಬುದ್ಧಿಯ ಪಾತ್ರವು ತನ್ನ ವಂಚನೆ ಕಪಟತನ,ಮೋಸದಿಂದ ತಾನು ಹಾಳಾಗುವುದಲ್ಲದೆ, ಸಂಪತ್ತಿಗಾಗಿ ತನ್ನ ತಂದೆಯನ್ನು ಬಲಿಕೊಡುವ ಹೃದಯಹೀನ ಕೃತ್ಯದಿಂದ “ಮಾಡಿದುಣ್ಣೊಮಾರಾಯ”ನೀತಿಯಂತೆ ಕೆಟ್ಟ ಫಲವನ್ನು ಅನುಭವಿಸುವಂತಾಗುತ್ತದೆ. ಈ ಕಥೆಯು “ಹಣಕ್ಕಿಂತ ಗುಣ ಮೇಲು” ಎಂಬ ಆಶಯವನ್ನು ಪ್ರತಿಪಾದಿಸುತ್ತದೆ.
ವೃಕ್ಷಸಾಕ್ಷಿ ಪಾಠದ ಸರಳ ಸಾರಾಂಶ
vruksha sakshi summary in kannada
ಮಧುರಾ ನಗರದಲ್ಲಿ ಧರ್ಮಬುದ್ಧಿ, ದುಷ್ಟಬುದ್ಧಿ ಎಂಬ ಇಬ್ಬರು ವ್ಯಾಪಾರಿಗಳ ಮಕ್ಕಳು ಇದ್ದರು. ಅವರು ಜೊತೆಯಲ್ಲಿ ವ್ಯಾಪಾರಕ್ಕಾಗಿ ದೂರದೇಶಕ್ಕೆ ಪ್ರಯಾಣ ಮಾಡಿದರು. ಅಲ್ಲಿ ವ್ಯಾಪಾರ ಮಾಡಿ ಹೆಚ್ಚಿನ ಹೊನ್ನನ್ನು ಸಂಪಾದಿಸಿಕೊಂಡು ಹಿಂತಿರುಗಿ ಬಂದು, ತಮ್ಮ ಹುಟ್ಟಿದ ಸ್ಥಳವಾದ ಮಧುರಾಪುರನಗರ ಹೊರವಲಯದ ಉದ್ಯಾನವನದೊಳಗೆ ಬೀಡುಬಿಟ್ಟರು(ತಂಗಿದರು).ಅರ್ಧರಾತ್ರಿಯಲ್ಲಿ ಧರ್ಮಬುದ್ಧಿಯು ದುರ್ಬುದ್ಧಿಯುಳ್ಳವನಾದ ದುಷ್ಟಬುದ್ಧಿಯನ್ನು ಕರೆದು ಹೊನ್ನನ್ನು ಹಂಚಿಕೊಳ್ಳೋಣ ಎನ್ನಲು, ದುಷ್ಟಬುದ್ಧಿಯು ಪಾಪಬುದ್ಧಿಯವನಾಗಲು
ಯೋಚಿಸಿ ಹೀಗೆ ಹೇಳಿದನು . “ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲ ಸ್ವೇಚ್ಛೆಯಿಂದ ಇರುವವರಲ್ಲ ಮತ್ತೆ ವ್ಯಾಪಾರಕ್ಕಾಗಿ ದೂರದೇಶಕ್ಕೆ ಹೋಗಬೇಕಾಗುತ್ತದೆ. ಆಕಾರಣದಿಂದನಿನಗೂ ನನಗೂ ವ್ಯಯಕ್ಕೆ(ಖರ್ಚಿಗೆ) ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು, ಉಳಿದ ಹೊನ್ನನೆಲ್ಲವನ್ನು ಇಲ್ಲೆಯೇ ಇಡೋಣ”ಎಂದ ಸಲಹೆಯಿತ್ತನು . ಆಗ ಆ ಧರ್ಮಬುದ್ಧಿಯು ಆ ಪಾಪಕರ್ಮನನ್ನು(ದುಷ್ಟಬುದ್ಧಿ) ತನ್ನ ಆತ್ಮೀಯ ಸ್ನೇಹಿತನೆಂದು ತಿಳಿದು, ಅದಕ್ಕೆ ಒಪ್ಪಿಕೊಂಡು , ದೊಡ್ಡ ಕೊಂಬೆಗಳುಳ್ಳ ಒಂದು ಆಲದ ಮರದ ಪಕ್ಕದಲ್ಲಿ ಹೊನ್ನನ್ನುಹೂತುಹಾಕಿ, ಮರುದಿವಸ ಇಬ್ಬರು ಮಧುರಾಪಟ್ಟಣವವನ್ನು ಹೊಕ್ಕು, ಇಷ್ಟವಾದ ವಿಷಯ ಸುಖಗಳನ್ನು ಅನುಭವಿಸುತ್ತಿದ್ದರು.
ಒಂದು ದಿನ ದುಷ್ಟಬುದ್ಧ್ಧಿಯು ಧರ್ಮಬುದ್ಧಿಯನ್ನು ಮೋಸಗೊಳಿಸಿ ಹೋಗಿ ಹೂತಿಟ್ಟ ಹೊನ್ನನೆಲ್ಲವನ್ನು ತೆಗೆದುಕೊಂಡು ಕುಳಿಯನ್ನುಮೊದಲಿನಂತೆ ಮುಚ್ಚಿ, ಕೆಲವಾನು ದಿವಸಗಳನ್ನು ಬಿಟ್ಟು, ತಾನೇ ಧರ್ಮಬುದ್ಧಿಯಲ್ಲಿಗೆ ಬಂದು, ವ್ಯಯಕ್ಕೆ (ಖರ್ಚಿಗೆ) ಹೊನ್ನಿಲ್ಲ. ಇನ್ನು ಸ್ವಲ್ಪ ಹೊನ್ನನ್ನು ತಗೆದುಕೊಳ್ಳೋಣ ಬನ್ನಿರಿ ಎಂದು ಜೊತೆಗೂಡಿ ಕರೆದುಕೊಂಡು ಹೊನ್ನು ಹೂತಿಟ್ಟ ಸ್ಥಳಕ್ಕೆ ಹೋದನು. ಹೂತುಹಾಕಿದ ಸ್ಥಳದಲ್ಲಿಹೊನ್ನನ್ನು ಕಾಣದೆ, ಇನ್ನು ಮಾತನಾಡದೆ ಇದ್ದರೆ ಅಪವಾದವು ತನ್ನ ಮೇಲೇ ಬರುವುದೆಂದು,“ಪೆ, ಪೊನ್ನನೆಲ್ಲಮಂ ನೀನೆ ಕೊಂಡೆ (ಹೊನ್ನನೆಲ್ಲವನ್ನುನೀನೆ ತೆಗೆದುಕೊಂಡು ಹೋಗಿದ್ದೀಯಾ ) ಎಂದು ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನನ್ನು ಕದ್ದ ಆರೋಪವನ್ನು ಹೊರಿಸಿದನು.
ದುಷ್ಟಬುದ್ಧಿಯು ಅತಿ ಮೋಸದ ಮನಸ್ಸಿನಿಂದ, ಹಣದ ದುರಾಸೆಯಿಂದ ಬುದ್ಧಿಕೆಡಿಸಿಕೊಂಡು ‘ಕಕಳ್ಳನಾದವನಿಗೆ ಸುಳ್ಳೇ ಬಲಬಲ’ ಎನ್ನುವ ಮಾತನ್ನು ನೆನೆಯುತ್ತ ಸುಳ್ಳನ್ನು ಹೇಳಿದನು . ಅಲ್ಲದೆ ದುಷ್ಟಬುದ್ಧಿಯು ಮೊದಲೇ ಹಾ! ಹಾ! ಕೆಟ್ಟೆನೆಂದು ಬಾಯನ್ನು ಹೊಟ್ಟೆಯನ್ನು ಬಡಿದುಕೊಂಡು, ಕೂಗಾಡಿ ಧರ್ಮಬುದ್ಧಿಯ ಮೇಲೆ ಕಳ್ಳತನದ ಆಪಾದನೆಯನ್ನು ಮಾಡಿದನು. ಅಳುವಂತೆ ನಟಿಸುತ್ತಾ ರಕ್ಷಣೆಯಿಲ್ಲದಂತಾದುದು ಎಂದು ಕಾತರಿಸಿ ನುಡಿಯಲು, ಸ್ನೇಹ ಕೆಡುವಂತೆ ಮಾತನಾಡಿ, ನೀನು ಜಯಗಳಿಸಲಾರೆ ಎಂದು ಬಾಯನ್ನು ಬಡಿದುಕೊಂಡು ದುಷ್ಟ ಬುದ್ಧಿಯು ಹೋಗಲು ಸಿದ್ಧನಾದಾಗ, ವಿಚಾರಿಸೋಣ ಎಂದು ಧರ್ಮಾಧಿಕರಣರಲ್ಲಿಗೆ ಬಂದರು . ಆ ಇಬ್ಬರೂ ನಡೆದ ಎಲ್ಲ ಸಂಗತಿಯನ್ನು (ವಿಷಯ) ಸವಿಸ್ತಾರವಾಗಿ ಹೇಳಿ ಕೊನೆಯಲ್ಲಿ ದುಷ್ಟಬುದ್ಧಿಯು ಹೊನ್ನನೆಲ್ಲವನ್ನು ಈತನೇ ಕದ್ದುಕೊಂಡಿರುವುದದಕ್ಕೆ ಸಾಕ್ಷಿ ಉಂಟು ಎಂದು ಹೇಳಿದದನು .
ಆಗ ಸಭೆಯ ಸದಸ್ಯರು ಸಾಕ್ಷಿಯನ್ನು ಹೇಳು ಎನ್ನಲು ದುಷ್ಟಬುದ್ಧಿಯು ಆ ಸ್ಥಳದಲ್ಲಿ ಹೊನ್ನನ್ನು ಇಡುವಾಗ ಈತನೂ ಮತ್ತು ನಾನು ಬಿಟ್ಟು ಬೇರೆಯಾರು ಮನುಷ್ಯರು ಇರಲಿಲ್ಲ . ಆ ಸ್ಥಳದಲ್ಲಿ ಇರುವ ವಟವೃಕ್ಷವೇ (ಆಲದಮರ) ಸಾಕ್ಷಿ ಎಂದಾಗ ಧರ್ಮಾಧಿಕರಣರು ವಿಸ್ಮಯಗೊಂಡರು. ಆಗ ಧರ್ಮಾಧಿಕರಣರು “ಈತನ ಮಾತು ಅಶ್ರುತಪೂರ್ವಮ್”(ಈತನ ಮಾತು ಈ ಮೊದಲು ಕೇಳಿಲ್ಲದ್ದು ) ಈ ಆಶ್ಚರ್ಯವನ್ನು ನೋಡೋಣವೆಂದು ಧರ್ಮಬುದ್ಧಿಯನ್ನು ಕರೆದು ನೀನು ಈ ಸಾಕ್ಷಿಯನ್ನು ಒಪ್ಪಿಕೊ ಳ್ಳುವೆಯಾ? ಎಂದರು .
ಆಗ ಧರ್ಮಬುದ್ಧಿಯು , ಮರವನ್ನು ಸಾಕ್ಷಿ ಎಂದು ಈ ಮುಂಚೆ ಹೇಳಿದವರು , ಕೇಳಿದವರು ಯಾರು ಇಲ್ಲ ಹೇಗೆ ಒಪ್ಪಿಕೊಳ್ಳಲಿ ಎಂದನು. ಆಗ ಧರ್ಮಾಧಿಕರಣರು ಮನುಷ್ಯರ ಒಳ್ಳೆಯ ಮತ್ತು ಕೆಟ್ಟಕಾರ್ಯಗಳನ್ನು ದೇವರುಗಳು ಅರಿಯುತ್ತಾರೆ. ಆದ್ದರಿಂದ ಈ ಸಾಕ್ಷಿ ಸರಿಯಾದದ್ದು . ಮರವನ್ನು ಮಾತನಾಡಿಸುವುದು ಬಹು ದೂರದ ಮಾತು .ಈ ಸಾಕ್ಷಿಯನ್ನು ಒಪ್ಪಿಕೊಳ್ಳುವುದು ಎಂದಾಗ ಧರ್ಮಬುದ್ಧಿಯು ಬಹಳ ಒಳ್ಳೆಯದು ಒಪ್ಪಿಕೊಂಡೆನು ಎಂದನು. ಆಗ ಧರ್ಮಾಧಿಕರಣರು ಇಂದುಸಮಯವಾಗಿದೆ, ನಾಳೆ ಕೇಳೋಣ ಎಂದಾಗ ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು.
vruksha sakshi lesson summary in kannada
ಅಷ್ಟರಲ್ಲಿ ದುಷ್ಟಬುದ್ಧ್ಧಿಯು ತನ್ನ ಮನೆಗೆ ಬಂದು, ತನ್ನ ತಂದೆಯ ಕೈಯನ್ನು ಹಿಡಿದು, ಏಕಾಂತದಲ್ಲಿ (ಯಾರು ಇಲ್ಲದ ಸ್ಥಳಕ್ಕೆ) ಕರೆದುಕೊಂಡು ಹೋಗಿ ನಡೆದ ಸಂಗತಿಯನ್ನೆಲ್ಲ ತಿಳಿಯುವಂತೆ ಹೇಳಿ “ನಿವನಿಮ್ಮ ಒಂದು ಮಾತಿನಿಂದ ನಮ್ಮ ಪರಿಜನರೆಲ್ಲರೂ(ಮನೆಯವರೆಲ್ಲರೂ) ಹಲವು ಕಾಲ
ಹಸಿಯದೆ ಊಟಮಾಡಿ ಬಾಳುವಷ್ಟು ಹಣವು ಲಭಿಸುವುದು. ನೀವು ಆ ಮುರರದ ಪೊಟರೆಯಲ್ಲಿ ಅವಿತುಕೊಂಡು ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡು ಹೋದನು ಎಂದು ಹೇಳಿರಿ” ಎಂದು ಹೇಳಿದನು.ಆಗ ದುಷ್ಟಬುದ್ಧಿಯ ತಂದೆ“ ಪರರಧನವನ್ನು ಅಪಹರಿಸುವುದು ನಂಬಿಕೆದ್ರೋಹಮಾಡುವುದು, ಸ್ವಾಮಿದ್ರೋಹ ಮಾಡುವುದು ಇವೆಲ್ಲವೂ ಏನೇ ಮಾಡಿದರು ನಮ್ಮನ್ನು ಕೆಡಿಸುತ್ತವೆ. ಇಂತಹದೆಲ್ಲವನ್ನು ನೀನು ತಿಳಿದಿದ್ದು ನನನ್ನು ಸಾಕ್ಷಿ ಮಾಡಿ ಮಾತನಾಡಿಸಿ, ನನ್ನನ್ನು ಕೆಡಿಸಲು ಬಯಸಿದೆ.“ನಿನನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞಿವ ಬಗೆ”( ನಿನ್ನ ಕೆಟ್ಟಬುದ್ಧಿಯು ನಮ್ಮ ಕುಲವನ್ನೆಲ್ಲವನ್ನು(ಮನೆತನವನ್ನೆಲ್ಲ) ಹಾಳು ಮಾಡುವ ರೀತಿಯದಾಗಿದೆ)” ಎಂದು ಹೇಳಿದಾಗ ದುಷ್ಟಬುದ್ಧಿಯು ಇದನ್ನು ಕೇಳಿ, ನನ್ನ ಕಾರ್ಯವನ್ನು ಕೆಡಿಸದೆ ನಾನು ಹೇಳಿದುದನ್ನು ಮಾಡೆಂದು ತನ್ನ ತಂದೆಯನ್ನು ಒಪ್ಪಿಸುತ್ತಿರುವಾಗ ಸೂರ್ಯನು ಪಶ್ಚಿಮ ದಿಕ್ಕನ್ನು ಸೇರಿದನು (ಮುಳುಗಿದನು ).
ಭೂಮಿಯನ್ನು ಕ್ರಮಕ್ರಮವಾಗಿ ಆವರಿಸಿದ ವಿಸ್ತಾರವಾದ ಆಕಾಶದಲ್ಲಿ ದಿಗಂತವನ್ನು ಮುಚ್ಚಲ್ಪಟ್ಟ ದಿಕ್ಕುಗಳು , ಎಲ್ಲವನ್ನು ಮರೆಮಾಡಿದ ಕಣ್ಣಿನನೋಟವು, ಕಪ್ಪಾದ ದುಂಬಿಯಂತೆ ಮೋಡಗಳ ಸೇರಿ, ದಟ್ಟವಾದ ಕಾಡಿಗೆಯಷ್ಟು ಕಪ್ಪಾದ ಕೋಗಿಲೆಯಂತೆ, ವಿಷ್ಣುವಿನ ದೇಹದಂತೆ ಕಪ್ಪಾದ,ನೀಲಕಂಠನ ಕುತ್ತಿಗೆಯ ಬಣ್ಣದಂತೆ ಕಪ್ಪಾದ ಹೋಲಿಸಲು ಅಸಾದ್ಯವಾದಷ್ಟು ಕತ್ತಲು ಹಬ್ಬಿತು.
ಅಂತು ಈ ರೀತಿ ಕವಿದ ಕತ್ತಲೆಯಲ್ಲಿ ದುಷ್ಟಬುದ್ಧಿ ತನ್ನ ತಂದೆಯನ್ನು ಕೊಲ್ಲದೆ ಬಿಡೆನು ಎಂಬಂತೆ ಕರೆದುಕೊಂಡು ಹೋಗಿ, ಮಾರಿಯ ಮನೆಗೆಹರಕೆಯ ಕುರಿಯನ್ನು ಒಳಹೊಗಿಸುವಂತೆ ಆಲದ ಮರದ ಪೊಟರೆಯ ಒಳಭಾಗಕ್ಕೆ ಹೊಗಿಸಿ, ಜಗಳವನ್ನು ಗೆದ್ದೆನೆಂದು ಸಂತಸಪಟ್ಟು ಮನೆಗೆ ಬಂದು ನಿದ್ರೆಯಲ್ಲಿ ಆಸಕ್ತನಾದನು .
ಸೂರ್ಯೋದಯವಾದೊಡನೆ ಧರ್ಮಬುದ್ಧಿಯು ದೇವರು, ಗುರುಗಳು, ವೇದಾಧ್ಯಯನ ನಿರತರಾದವರನ್ನು ಪೂಜೆ ಮಾಡುತ್ತ ಬೆಳಗಿನ ಹೊತ್ತನ್ನು ಕಳೆದನು. ಇದರಿಂದ ತಡವಾಗಲು, ಇತ್ತ ದುಷ್ಟಬುದ್ಧಿಯು ಮುಖವವನ್ನು ತೊಳೆಯದೆ ಬಂದು ಧರ್ಮಾಧಿಕರಣರಿಗೆ ಹೀಗೆ ಹೇಳಿದನು.ಪ್ರತಿವಾದಿಯು ಇನ್ನು ಬಂದಿಲ್ಲ ಬಹಳ ಹೊತ್ತಾಯಿತು, ನನ್ನ ಕಾರ್ಯವು ಯಾವುದೆಂದು ಹೇಳುತ್ತಿರುವಷ್ಟರಲ್ಲಿ ಧರ್ಮಬುದ್ಧಿಯು ಬರುತ್ತಿರುವುದನ್ನು ಕಂಡರು . ನಡೆಯಿರಿ ಎಂದು ಆ ಕ್ಷಣದಲ್ಲಿ ಧರ್ಮಾಧಿಕರಣರು ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯ ಜಗಳವನ್ನು ಬಗೆಹರಿಸಲು ,ವೃಕ್ಷಸಾಕ್ಷಿಯನ್ನು ಕೇಳಲು ವಟವೃಕ್ಷದ ಸಮೀಪಕ್ಕೆ ಬಂದರು. ನಂತರ ಆ ವಟವೃಕ್ಷಕ್ಕೆ ಅಷ್ಟವಿಧವಾದ ಅರ್ಚನೆಯಿಂದ ಪೂಜಿಸಿ, ಆನಂತರ ಆ ಇಬ್ಬರನ್ನು ಮಾತನಾಡಿಸಿ,ಬಳಿಕ ಆ ಮರವನ್ನು ಕುರಿತು ಧರ್ಮಾಧಿಕರಣರು “ನೀನಾದರೋ ಯಕ್ಷಾದಿದಿವ್ಯ ದೇವತೆಗಳಿಗೆ ವಾಸಸ್ಥಾನವು ಮತ್ತು ಅವರ ಸೇವೆಯನ್ನು ಮಾಡುವಂತಹವೃಕ್ಷವೂ ಆಗಿದ್ದೀಯಾ, ಆ ಕಾರಣದಿಂದ ನಿನ್ನನ್ನು ಸಾಕ್ಷಿ ಮಾಡಿ ಕೇಳುವೆವು, ನೀನುತಪ್ಪದೆ ಸಾಕ್ಷಿಯನ್ನು ನುಡಿ”ಎಂದ ಹೇಳುತ್ತಾ ಧರ್ಮಶ್ರವಣ (ಕಿವಿಗೊಟ್ಟುಕೇಳಲು)ಮಾಡಲು, ಮರವು ಮಾತನಾಡಲಿಲ್ಲ.
ಮರದ ಪೊಟರೆಯೊಳಗೆ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿಯು ಬುದ್ಧಿಗೆಟ್ಟು, ಧರ್ಮಮಾರ್ಗವನ್ನು ಬಿಟ್ಟು“ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗುಂ ” (ಪ್ರಕೃತಿ ವಿಕೃತಿಯಾದ (ಸಹಜ ಗುಣ ಬದಲಾವಣೆಯಾದ) ಮನುಷ್ಯನ ಆಯುಷ್ಯವು ಕಡಿಮೆಯಾಗುತ್ತದೆ) ಎಂದು ಹೇಳುವಂತೆ ಧರ್ಮಬುದ್ಧಿಯೇ ಧನವನ್ನು (ಹೊನ್ನನ್ನು) ತೆಗೆದುಕೊಂಡನು ಎಂದು ಹೇಳುವುದನ್ನು ಕೇಳಿ ಅಲ್ಲಿ ಸೇರಿದ್ದ ಜನರು ಹಾಗು
ಹಾಗೂಧರ್ಮಾಧಿಕರಣರು ಆಶ್ಚರ್ಯಗೊಂಡಾಗ , ಧರ್ಮಬುದ್ಧಿಯು ಆಶ್ಚರ್ಯಕರವಾದುದು, ಇದು ದೇವರಲ್ಲ, ಅದು ದೇವರಾಗಿದ್ದರೆ ಸತ್ಯವನ್ನು ಏಕೆ ಹೇಳದು. ಇದರಲ್ಲಿ ಏನಾದರೊಂದು ಮೋಸವಾಗಿರಲೇ ಬೇಕು ಆ ಮರವನ್ನು ಸುತ್ತು ಹಾಕಿ ನೋಡಿ ದೊಡ್ಡದಾದ ಪೊಟರೆಯಲ್ಲಿ ಮನುಷ್ಯ
ಸಂಚಾರವಾಗಿರುವುದನ್ನು ಕಂಡು ತೀರ್ಮಾನಿಸಿಸಿ ಧರ್ಮಬುದ್ಧಿಯು ಧರ್ಮಾಧಿಕಾರಿಗಳಿಗೆ ಹೀಗೆ ಹೇಳಿದನು . “ಹುಸಿಯದ ಬೇಹಾರಿಯೇ ಇಲ್ಲ.” (ಸುಳ್ಳು ಹೇಳದ ವ್ಯಾಪಾರಿಯೇ ಇಲ್ಲ) ನಾನು ವ್ಯಾಪಾರಿ ಆಗಿರುವುದರಿಂದ ನಮ್ಮ ವೃತ್ತಿಧರ್ಮಕ್ಕೆ ಧರ್ಮಬುದ್ಧಿಯು ಅಧರ್ಮಬುದ್ಧಿಯಾಗಿ
ಧನವನ್ನು ವಂಚನೆಯಿಂದ ನನ್ನ ಮನೆಗೆ ತೆಗೆದುಕೊಂಡು ಹೋಗುವೆ ಎನ್ನುವಷ್ಟರಲ್ಲಿ ಸೂರ್ಯೋದಯವಾದಾಗ ತೆಗೆದುಕೊಂಡು ಹೋಗಲುಅವಕಾಶವಿಲ್ಲ್ಲದೆ ಮರದ ಪೊಟರೆಯೊಳಗೆ ಇಟ್ಟು ಬಂದುಮರುದಿವಸ ಹೋಗಿ ನೋಡುವಷ್ಟರಲ್ಲಿ ಆ ಹೊನ್ನನ್ನು ಒಂದು ಹಾವು ಸುತ್ತಿಕೊಂಡಿದ್ದಾಗ ಅದನ್ನು ತೆಗೆದುಕೊಳ್ಳಲು ಹೆದರಿ ಹೋದೆನು. ನೀವು ಇಲ್ಲಿದ್ದಂತೆ ನೋಡುತ್ತ ಇರಿ, ಪೊಟರೆಯೊಳಗೆ ಹೊಗೆಯನ್ನು ಹಾಕಿ,ಹಾವನ್ನು ಹೊರಬರಿಸಿ, ಕದ್ದುಕೊಂಡ ಒಡವವೆಯನ್ನು ಕೊಡುವೆನು ಎಂದನು .
ಧರ್ಮಬುದ್ಧಿಯು ಹುಲ್ಲನ್ನು , ಪುಳ್ಳಿಗಳನ್ನು ತರಿಸಿ, ಆ ಪೊಟರೆಯೊಳಗೆ ಅಡಗಿಸಿ ತುಂಬಿ, ದುಷ್ಟಬುದ್ಧಿಯ ಮನೆಗೆಬೆಂಕಿಯನ್ನು ಇಡುವಂತೆ ಬೆಂಕಿಯನ್ನು ಇಟ್ಟೊಡನೆ ಹೊಗೆ ಸುತ್ತಿ ಬೆಂಕಿ ಉರಿಯುತ್ತಿರಲು,ಪ್ರೇಮಮತಿಧೃತಿಗೆಟ್ಟು(ಧೈರ್ಯಕಳೆದುಕೊಂಡು ) ಗೋಳಾಡಿ ಪೊಟರೆಯೊಳಗಿಂದ ಸುರುಳುತ್ತ ಉರುಳಿ ಉಸಿರುಗಟ್ಟಿ ಪ್ರಾಣತ್ಯಾಗ ಮಾಡಿದನು. ಇದನ್ನುಧರ್ಮಾಧಿಕರಣರು ನೋಡಿ ಇವನು ದುಷ್ಟಬುದ್ಧಿಯ ತಂದೆ ಸಂದೇಹವಿಲ್ಲ ಎಂದು ತಿಳಿದು, ಈ ಪಾಪಕರ್ಮನಾದ ದುಷ್ಟಮಗನಿಂದ ನಿನಗೆ ಇಂತಹ ದುರ್ಮರಣ ಬಂದೊದಗಿತು ಎಂದು ನುಡಿದರು.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊದು ವಾಕ್ಯಗಳಲ್ಲಿ ಉತ್ತರಿಸಿ.
Vruksha Sakshi 10th Kannada Lesson Question Answer
೧. ‘ವೃಕ್ಷ ಸಾಕ್ಷಿ’ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?
‘ವೃಕ್ಷ ಸಾಕ್ಷಿ’ ಕತೆಯನ್ನು ದುರ್ಗಸಿಂಹನ ಪಂಚತಂತ್ರ ಕೃತಿಯಿಂದ ಆರಿಸಲಾಗಿದೆ.
೨. ದುಷ್ಟಬುದ್ದಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು ?
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ ಆರೋಪವನ್ನು ಹೊರಿಸಿದನು.
೩. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು ?
ದುಷ್ಟಬುದ್ಧಿವ ವೃಕ್ಷವೇ (ಆಲದಮರ) ಸಾಕ್ಷಿ ಎಂದಾಗ ಧರ್ಮಾಧಿಕರಣರ ವಿಸ್ಮಯಗೊಂಡರು.
೪. ದುಷ್ಟಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕೆಳೆದನು ?
ಧರ್ಮಬುದ್ಧಿಯು ದೇವರು , ಗುರುಗಳು, ವೇದಾಧ್ಯಯನ ನಿರತರಾದವರನ್ನು ಪೂಜೆ ಮಾಡುತ್ತ ಬೆಳಗಿನ ಹೊತ್ತನ್ನು ಕಳೆದನು.
೫. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
ಧರ್ಮಾಧಿಕರಣರು ದುಷ್ಟಬುದ್ಧಿ ಮತ್ತು ದುಷ್ಟಬುದ್ಧಿಯ ಜಗಳವನ್ನು ಬಗೆಹರಿಸಲು , ವೃಕ್ಷಸಾಕ್ಷಿಯನ್ನು ಕೇಳಲುವಟವೃಕ್ಷದ ಸಮೀಪಕ್ಕೆ ಬಂದರು .
ಹೆಚ್ಚುವರಿ ಪ್ರಶ್ನೋತ್ತರಗಳು
೬. ದುಷ್ಟಬುದ್ಧಿಯ ತಂದೆಯ ಹೆಸರೇನು ?
ದುಷ್ಟಬುದ್ಧಿಯ ತಂದೆಯ ಹೆಸರು ಪ್ರೇಮಮತಿ.
೭. ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯರು ಎಲ್ಲಿ ಬೀಡುಬಿಟ್ಟಿದ್ದರು ?
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯರು ಮಧುರಾಪುರನಗರ ಹೊರವಲಯದ ಉದ್ಯಾನವನದೊಳಗೆ ಬೀಡುಬಿಟ್ಟರು.
೮. ಹೊನ್ನನ್ನು ಕದ್ದವರು ಯಾರು ?
ಹೊನ್ನನ್ನು ಕದ್ದವರು ದುಷ್ಟಬುದ್ಧಿ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕುನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
೧. ಧರ್ಮಬುದ್ಧಿಗೆ ದುಷ್ಟಬುದ್ಧಿಯು ಯಾವ ಸಲಹೆಯಿತ್ತನು ?
ಅರ್ಧರಾತ್ರಿಯಲ್ಲಿ ಧರ್ಮಬುದ್ಧಿಯು ದುರ್ಬುದ್ಧಿಯಾದ ದುಷ್ಟಬುದ್ಧಿಯನ್ನು ಕರೆದು , “ ಚಿನ್ನವನ್ನು ಹಂಚಿಕೊಳ್ಳೋಣ ” ಎಂದಾಗ ದುಷ್ಟಬುದ್ಧಿಯು ಪಾಪಬುದ್ಧಿಯವನಾಗಿ “ ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ಟೇಚ್ಛೆಯಿಂದ ಇರುವವರಲ್ಲ . ಮತ್ತೆ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ . ಆಕಾರದಿಂದ ನಿನಗೂ ನನಗೂ ಖರ್ಚಿಗೆ ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು , ಉಳಿದ ಹೊನ್ನೆಲ್ಲವನ್ನು ಇಲ್ಲಿಯೇ ಇಟ್ಟು ಬಿಡೋಣ ” ಎಂದು ಸಲಹೆಯಿತ್ತನು ,
೨. ದುಷ್ಟಬುದ್ದಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು ?
ದುಷ್ಟಬುದ್ದಿಯು ತನ್ನ ತಂದೆಗೆ ಏಕಾಂತದಲ್ಲಿ ಕರೆದುಕೊಂಡು ಹೋಗಿ “ನಿಮ್ಮ ಒಂದು ಮಾತಿನಿಂದ ನಮ್ಮ ಪರಿಜನರೆಲ್ಲರೂ (ಮನೆಯವರೆಲ್ಲರೂ)ಹಲವು ಕಾಲ ಹಸಿಯದೆ ಊಟಮಾಡಿ ಬಾಳುವಷ್ಟು ಹಣವು ಲಭಿಸುವುದು. ನೀವು ಆ ಮರದ ಪೊಟರೆಯಲ್ಲಿ ಅವಿತುಕೊಂಡು ಧರ್ಮಬುದ್ಧಿಯೇಹೊನ್ನನ್ನು ತೆಗೆದುಕೊಂಡು ಹೋದನು ಎಂದು ”ಹೇಳಿದನು.
೩. ಧರ್ಮಾಧಿಕರಣರು ವಟವೃಕ್ಷಕ್ಕೆ ಏನು ಹೇಳಿದರು ?
ಧರ್ಮಾಧಿಕರಣ ರು ವಟವೃಕ್ಷಕ್ಕೆ“ನೀನಾದರೋ ಯಕ್ಷಾದಿ ದಿವ್ಯ ದೇವತೆಗಳಿಗೆ ವಾಸಸ್ಥಾನವು ಮತ್ತು ಅವರ ಸೇವೆಯನ್ನು ಮಾಡುವಂತಹ ವೃಕ್ಷವೂಆಗಿದ್ದೀಯಾ, ಆ ಕಾರಣದಿಂದ ನಿನ್ನನ್ನು ಸಾಕ್ಷಿ ಮಾಡಿ ಕೇಳುವೆವು, ನೀನು ತಪ್ಪದೆ ಸಾಕ್ಷಿಯನ್ನು ನುಡಿ”ಎಂದು ಹೇಳಿದರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ವೃಕ್ಷ ಸಾಕ್ಷಿ ಪಾಠದಲ್ಲಿ ನೀವು ಮೆಚ್ಚುವ ಪಾತ್ರ ಯಾವುದು ? ಏಕೆ ?
ವೃಕ್ಷಸಾಕ್ಷಿ ಪಾಠದಲ್ಲಿ ನಾನು ಮೆಚ್ಚುವ ಪಾತ್ರವೆಂದರೆ ಧರ್ಮಬುದ್ಧಿಯ ಪಾತ್ರ. ಏಕೆಂದರೆ ಧರ್ಮಬುದ್ಧಿ ಧರ್ಮಮಾರ್ಗದಲ್ಲಿ ನಡೆಯುವ ವ್ಯಕ್ತಿ.ಹೆಸರಿಗೆ ತಕ್ಕಂತೆ ಗುಣವನ್ನು ಹೊಂದಿದ್ದು ದುಷ್ಟಬುದ್ಧಿಯ ಪಾತ್ರವು ಸಹನಶೀಲತೆ, ಸುಸಂಸ್ಕೃತ ವ್ಯಕ್ತಿತ್ವ ನಿರೂಪಿಸುತ್ತದೆ. ತನ್ನ ಸ್ನೇಹಿತನ ಮಾತನ್ನ್ನು ನಂಬುಗೆಯಿಂದ ನೋಡಿದವನಾಗಿದ್ದಾನೆ. ಆತನಲ್ಲಿ ತಾಳ್ಮೆ ಸ್ವಭಾವ ಉನ್ನತವಾದದ್ದು ಏಕೆಂದರೆ ದುಷ್ಟಬುದ್ಧಿ ಈತನ ಮೇಲೆ ಕಳ್ಳತನದ ಆರೋಪವರಿಸಿದರು ಭಯಪಡದೆ ಶಾಂತನಾಗಿ ವರ್ತಿಸಿದನು.ಸೂರ್ಯೋದಯವಾದೊಡನೆ ಧರ್ಮಬುದ್ಧಿಯು ದೇವರು, ಗುರುಗಳು, ವೇದಾಧ್ಯಯನ ನಿರತರಾದವರನ್ನು ಪೂಜೆ ಮಾಡುತ್ತ ಬೆಳಗಿನ ಹೊತ್ತನ್ನು ಕಳೆದನು ಎಂಬುದನ್ನು ನೋಡಿದರೆ ಆತನೊಬ್ಬ ದೈವಭಕ್ತನಾಗಿದ್ದನು ಎಂದು ಹೇಳಬಹುದು. ಅಲ್ಲದೇ ಮರದ ಪೊಟರೆಯೊಳಗಿದ್ದ ಪ್ರೇಮಮತಿ, ಧರ್ಮಬುದ್ಧಿಯೇ ಹೊನ್ನನ್ನು ಕದ್ದವನು ಎಂದು ಹೇಳಿದಾಗಲೂ ವಿಚಲಿತನಾಗದೆ ದೇವರು ಮಾತನಾಡಿದ್ದರೆ ಸತ್ಯವನ್ನು ಹೇಳುತ್ತಿತ್ತು ಇದರಲ್ಲಿ ಏನೋ ಮೋಸ ಅಡಗಿದೆ ಎಂದು ತನ್ನ ಬುದ್ಧಿವಂತಿಕೆಯಿಂದ ಮರದೊಳಗೆ ಮನುಷ್ಯ ಸಂಚಾರವಾಗಿರುವದನ್ನ ಗ್ರಹಿಸಿಕೊಂಡು ಮರದ ಪೊಟರೆಯೊಳಗೆ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿಯನ್ನು ಹೊರಗೆ ಬರುವಂತೆ ಮಾಡಿ ಸತ್ಯವನ್ನು ತೋರಿಸುತ್ತಾನೆ. ಆದ್ದರಿಂದ ಆತ ಸತ್ಯವಂತನಾಗಿದ್ದು. ದುಷ್ಟಬುದ್ಧಿಯ ತಂತ್ರ ಆತನಿಗೆ ತಿರುಗುಬಾಣವಾಗುವಂತೆ ಮಾಡಿ ಪಾಪಬುದ್ಧಿಯವನಾದ ದುಷ್ಟಬುದ್ಧಿಗೆ ಸರಿಯಾದ ಪಾಠವನ್ನು ಕಲಿಸಿದನು.ಆದ್ದರಿಂದ ನನಗೆ ಧರ್ಮಬುದ್ಧಿಯ ಪಾತ್ರ ಮೆಚ್ಚಿಗೆಯಾಯಿತು.
೨. ದುಷ್ಟಬುದ್ದಿಯ ತಂತ್ರ ಅವನಿಗೆ ತಿರುಗುಬಾಣವಾದ ಬಗೆಯನ್ನು ತಿಳಿಸಿ.
ದುಷ್ಟಬುದ್ಧಿಯು ಅತಿ ಮೋಸದ ಮನಸ್ಸಿನಿಂದ, ಧರ್ಮಬುದ್ಧಿಯನ್ನು ಮೋಸಗೊಳಿಸಿ ಹೋಗಿ ಹೂತಿಟ್ಟ ಹೊನ್ನನೆಲ್ಲವನ್ನು ತೆಗೆದುಕೊಂಡು ಬಂದು ,ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ ಆರೋಪವನ್ನು ಹೊರಿಸಿದರು . ಈ ವಿಚಾರ ಧರ್ಮಾದಿಕಾರಣರ ಬಳಿ ಬಂದಾಗ ಧರ್ಮಬುದ್ಧಿಯೇಹೊನ್ನು ಕದ್ದಿರುವುದಕ್ಕೆ ಅಲ್ಲಿದ್ದ ಆಲದ ಮರವೇ ಸಾಕ್ಷಿ ಎಂದು ಹೇಳುತ್ತಾನೇ ಸಾಕ್ಷಿ ಹೇಳಿಸಲುತನ್ನ ತಂದೆಯನ್ನೇ ಆ ಮರದ ಪೊಟರೆಯೊಳಗೆ ಕೂಡಿಸಿ ಧರ್ಮಬುದ್ಧಿಯೇ ಹೊನ್ನನ್ನು ಕದ್ದನು ಎಂದು ಹೇಳಿಸುತ್ತಾನೆ. ಇದರಲ್ಲಿ ಏನಾದರೊಂದು ಮೋಸವಾಗಿರಲೇಬೇಕು ಎಂದು ಅರಿತಧರ್ಮಬುದ್ಧಿ ಆ ಮರವನ್ನು ಸುತ್ತು ಹಾಕಿ ನೋಡಿ ದೊಡ್ಡದಾದ ಪೊಟರೆಯಲ್ಲಿ ಮನುಷ್ಯ ಸಂಚಾರವಾಗಿರುವುದನ್ನು ಕಂಡು ತೀರ್ಮಾನಿಸಿಧರ್ಮಬುದ್ಧಿಯು ಧರ್ಮಾಧಿಕಾರಿಗಳಿಗೆ ಹೀಗೆ ಹೇಳಿದನು. “ಹುಸಿಯದ ಬೇಹಾರಿಯೇ ಇಲ್ಲ.” ನಾನು ವ್ಯಾಪಾರಿ ಆಗಿರುವುದರಿಂದ ನಮ್ಮ ವೃತ್ತಿಧರ್ಮಕ್ಕೆ ಸುಳ್ಳನ್ನು ಹೇಳಿದ್ದೇನೆ.
ಧನವನ್ನು ವಂಚನೆಯಿಂದ ನನ್ನ ಮನೆಗೆ ತೆಗೆದುಕೊಂಡು ಹೋಗುವೆ ಎನ್ನುವಷ್ಟರಲ್ಲಿ ಸೂರ್ಯೋದಯವಾದಾಗ ತೆಗೆದುಕೊಂಡು ಹೋಗಲು ಅವಕಾಶವಿಲ್ಲದೆ ಮರದ ಪೊಟರೆಯೊಳಗೆ ಇಟ್ಟು ಬಂದು , ಮರುದಿವಸ ಹೋಗಿ ನೋಡುವಷ್ಟರಲ್ಲಿ ಆ ಹೊನ್ನನ್ನು ಒಂದು ಹಾವು ಸುತ್ತಿಕೊಂಡಿದ್ದಾಗ ಅದನ್ನು ತೆಗೆದುಕೊಳ್ಳಲು ಹೆದರಿ ಹೋದೆನು. ನೀವು ಇಲ್ಲಿದ್ದಂತೆ ನೋಡುತ್ತ ಇರಿ, ಪೊಟರೆಯೊಳಗೆ ಹೊಗೆಯನ್ನು ಹಾಕಿ, ಹಾವನ್ನು ಹೊರಬರಿಸಿ, ಕದ್ದುಕೊಂಡ ಒಡವೆಯನ್ನು ಕೊಡುವೆನು ಎಂದನು. ಧರ್ಮಬುದ್ಧಿಯು ಹುಲ್ಲನ್ನು , ಪುಳ್ಳಿಗಳನ್ನು ತರಿಸಿ, ಆ ಪೊಟರೆಯೊಳಗೆ ಅಡಗಿಸಿ ತುಂಬಿ, ಬೆಂಕಿಯನ್ನು ಇಟ್ಟೊಡನೆ ಹೊಗೆ ಸುತ್ತಿ ಬೆಂಕಿ ಉರಿಯುತ್ತಿರಲು,ಪ್ರೇಮಮತಿ ಧೃತಿಗೆಟ್ಟು ಗೋಳಾಡಿ ಪೊಟರೆಯೊಳಗಿಂದ ಸುರುಳುತ್ತ ಉರುಳಿ ಉಸಿರುಗಟ್ಟಿ ಪ್ರಾಣತ್ಯಾಗ ಮಾಡಿದನು. ಇದನ್ನು ಧರ್ಮಾಧಿಕರಣರು ನೋಡಿ ಇವನು ದುಷ್ಟಬುದ್ಧಿಯ ತಂದೆ ಸಂದೇಹವಿಲ್ಲ ಎಂದು ತಿಳಿದು, ಈ ಪಾಪಕರ್ಮನಾದ ದುಷ್ಟಮಗನಿಂದ ನಿನಗೆ ಇಂತಹ ದುರ್ಮರಣಬಂದೊದಗಿತು ಎಂದು ನುಡಿದರು. ಹೀಗೆ ದುಷ್ಟಬುದ್ಧಿಯ ತಂತ್ರ ಅವನಿಗೆ ತಿರುಗುಬಾಣವಾಯಿತು.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ಪೊನ್ನನೆಲ್ಲಮಂ ನೀನೆ ಕೊಂಡೆ”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರವಿರಚಿತ ‘ಪಂಚತಂತ್ರ ’ಎಂಬ ಕೃತಿಯಿಂದ ಆಯ್ದ ‘ವೃಕ್ಷಸಾಕ್ಷಿ ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ದುಷ್ಟಬುದ್ಧಿಯು ಧರ್ಮಬುದ್ಧಿಗೆ ಹೇಳಿದನು.ದುಷ್ಟಬುದ್ಧ್ಧಿಯು ಧರ್ಮಬುದ್ಧಿಯನ್ನು ಮೋಸಗೊಳಿಸಿ ಹೋಗಿ ಹೂತಿಟ್ಟ ಹೊನ್ನ ನೆಲ್ಲವನ್ನು ತೆಗೆದುಕೊಂಡು ಕುಳಿಯನ್ನು ಮೊದಲಿನಂತೆ ಮುಚ್ಚಿ, ಕೆಲವಾನು ದಿವಸಗಳನ್ನು ಬಿಟ್ಟು, ತಾನೇ ಧರ್ಮಬುದ್ಧಿಯಲ್ಲಿಗೆ ಬಂದು, ವ್ಯಯಕ್ಕೆ ಹೊನ್ನಿಲ್ಲ. ಇನ್ನು ಸ್ವಲ್ಪ ಹೊನ್ನನ್ನು ತೆಗೆದುಕೊಳ್ಳೋಣ ಬನ್ನಿರಿ ಎಂದು ಜೊತೆಗೂಡಿ ಕರೆದುಕೊಂಡು ಹೊನ್ನು ಹೂತಿಟ್ಟ ಸ್ಥಳಕ್ಕೆ ಹೋದನು. ಹೂತು ಹಾಕಿದ ಸ್ಥಳದಲ್ಲಿ ಹೊನ್ನನ್ನು ಕಾಣದೆ, ಇನ್ನು ಮಾತನಾಡದೆ ಇದ್ದರೆ ಅಪವಾದವು ತನ್ನ್ನ ಮೇಲೆ ಬರುವುದೆಂದು,,“ಪೊನ್ನನೆಲ್ಲಮ೦ನೀನೆ ಕೊಂಡೆ (ಹೊನ್ನನೆಲ್ಲವನ್ನು ನೀನೆ ತೆಗೆದುಕೊಂಡು ಹೋಗಿದ್ದೀಯಾ) ಎಂದು ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ ಆರೋಪವನ್ನು ಹೊರಿಸಿದ ಸಂದರ್ಭವಾಗಿದೆ.
ಸ್ವಾರಸ್ಯ : ತನ್ನ ಮೇಲೆ ಅಪವಾದ ಬರುವಂತೆ ನೋಡಿಕೊಳ್ಳುವ ಮತ್ತು ಇನ್ನೊಬ್ಬರ ಮೇಲೆ ಅಪವಾದವನ್ನು ಹೊರಿಸುವ ದುಷ್ಟಬುದ್ಧಿಯು ತಂತ್ರವನ್ನು ಕವಿ ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಎತ್ತಿ ತೋರಿಸಿದ್ದಾರೇ .
೨. “ಈತನ ಮಾತು ಅಶ್ರುತಪೂರ್ವಮ್”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರಚಿತ‘ಪಂಚತಂತ್ರ ’ಎಂಬಕೃತಿಯಿಂದ ಆಯ್ದ ‘ವೃಕ್ಷಸಾಕ್ಷಿ ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಧರ್ಮಾಧಿಕಾರಣರು ಹೇಳಿಕೊಂಡರು. ನ್ಯಾಯ ತೀರ್ಮಾನಕ್ಕಾಗಿ ಧರ್ಮಾಧಿಕರಣ ಬಳಿ ಬಂದಾಗ ದುಷ್ಟಬುದ್ಧಿಯುಹೊನ್ನನೆಲ್ಲವನ್ನು ಈತನೇ ಕದ್ದುಕೊಂಡಿರುವುದಕ್ಕೆ ಸಾಕ್ಷಿ ಉಂಟು ಎಂದು ಹೇಳಿದರು . ಆಗ ಸಭೆಯ ಸದಸ್ಯರು ಸಾಕ್ಷಿಯನ್ನು ಹೇಳು ಎನ್ನಲುದುಷ್ಟಬುದ್ಧಿಯು ಆ ಸ್ಥಳದಲ್ಲಿ ಹೊನ್ನನ್ನು ಇಡುವಾಗ ಈತನೂ ಮತ್ತು ನಾನು ಬಿಟ್ಟು ಬೇರೆ ಯಾರು ಮನುಷ್ಯರು ಇರಲಿಲ್ಲ . ಆ ಸ್ಥಳದಲ್ಲಿ ಇರುವವಟವೃಕ್ಷವೇ (ಆಲದಮರದ ) ಸಾಕ್ಷಿ ಎಂದಾಗ ಧರ್ಮಾಧಿಕರಣರು ವಿಸ್ಮಯಗೊಂಡು“ಈತಈತನ ಮಾತು ಅಶ್ರುತಪೂರ್ವಮ್”( ಈತನ ಮಾತು ಈ ಮೊದಲು ಕೇಳಿಲ್ಲದ್ದು ) ಈ ಆಶ್ಚರ್ಯವನ್ನು ನೋಡೋಣವೆಂದು ಧರ್ಮಬುದ್ಧಿಯನ್ನು ಕರೆದು ನೀನು ಈ ಸಾಕ್ಷಿಯನ್ನು ಒಪ್ಪಿಕೊಳ್ಳುವೆಯಾ?ಎಂದು ಕೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ವೃಕ್ಷ ಸಾಕ್ಷಿ ಹೇಳುವುದು ಎಂಬುದನ್ನು ಹಿಂದೆ ಎಂದೂ ಕೇಳಿಲ್ಲ ಎಂದು ಧರ್ಮಾಧಿಕರಣರು ವಿಸ್ಮಯಭಾವದಿಂದ ಈ ಮಾತನ್ನು
ಹೇಳುವುದು ಬಹು ಸ್ವಾರಸ್ಯಪೂರ್ಣವಾಗಿದೆ.
೩. “ನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞಿವ ಬಗೆ”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರಚಿತ ‘ಪಂಚತಂತ್ರ ’ಎಂಬ ಕೃತಿಯಿಂದ ಆಯ್ದ ‘ವೃಕ್ಷಸಾಕ್ಷಿ ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ದುಷ್ಟಬುದ್ಧಿಯ ತಂದೆ ಪ್ರೇಮಮತಿ ದುಷ್ಟಬುದ್ಧಿಗೆ ಹೇಳಿದನು .ದುಷ್ಟಬುದ್ಧ್ಧಿಯು ತನ್ನ ತಂದೆಯ ಕೈಯನ್ನು ಹಿಡಿದು, ಏಕಾಂತದಲ್ಲಿ ಕರೆದುಕೊಂಡು ಹೋಗಿ ನಡೆದ ಸಂಗತಿಯನ್ನೆಲ್ಲ ತಿಳಿಯುವಂತೆ ಹೇಳಿ “ನಿಮ್ಮ ಒಂದು ಮಾತಿನಿಂದ ನಮ್ಮ ಪರಿಜನರೆಲ್ಲರೂ (ಮನೆಯವರೆಲ್ಲರೂ) ಹಲವು ಕಾಲ ಹಸಿಯದೆ ಊಟಮಾಡಿ ಬಾಳುವಷ್ಟು ಹಣವು ಲಭಿಸುವುದು . ನೀವು ಆ ಮರದ ಪೊಟರೆಯಲ್ಲಿ ಅವಿತುಕೊಂಡು ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡು ಹೋದನು ಎಂದು ಹೇಳಬೇಕು ಎಂದಾಗ ದುಷ್ಟಬುದ್ಧಿಯ
ತಂದೆ“ ಪರರಧನವನ್ನು ಅಪಹರಿಸುವುದು ನಂಬಿಕೆದ್ರೋಹಮಾಡುವುದು, ಸ್ವಾಮಿದ್ರೋಹ ಮಾಡುವುದು ಇವೆಲ್ಲವೂ ಏನೇ ಮಾಡಿದರೊ ನಮ್ಮನ್ನು ಕೆಡಿಸುತ್ತವೆ. ಇಂತಹದೆಲ್ಲವನ್ನು ನೀನು ತಿಳಿದಿದ್ದು ನನ್ನನು ಸಾಕ್ಷಿ ಮಾಡಿ ಮಾತನಾಡಿಸಿ, ನನ್ನನು ಕೆಡಿಸಲು ಬಯಸಿದೆ. ““ನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞಿವ ಬಗೆ”( ನಿನ್ನ ಕೆಟ್ಟಬುದ್ಧಿಯು ನಮ್ಮ ಕುಲವನ್ನೆಲ್ಲವನ್ನು(ಮನೆತನವನ್ನೆಲ್ಲ) ಹಾಳು ಮಾಡುವ ರೀತಿಯದಾಗಿದೆ)” ಎಂದು ದುಷ್ಟಬುದ್ಧಿಗೆ ಬುದ್ಧಿ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಕೆಟ್ಟಬುದ್ಧಿಯು ಕುಲವನ್ನೆಲ್ಲ ಹಾಳು ಮಾಡುತ್ತದೆ ಎಂದು ಪ್ರೇಮಮತಿ ತನ್ನ ಮಗನಾದ ದುಷ್ಟಬುದ್ಧಿಗೆ ಬುದ್ಧಿಮಾತನ್ನು ಹೇಳುವುದು ಸ್ವಾರಸ್ಯಪೂರ್ಣವಾಗಿದೆ.
೪. “ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗು೦”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರಚಿತ‘ಪಂಚತಂತ್ರ ’ಎಂಬಕೃತಿಯಿಂದ ಆಯ್ದ ‘ವೃಕ್ಷಸಾಕ್ಷಿ ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಮರದ ಪೊಟರೆಯೊಳಗೆ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿಯು ಬುದ್ಧಿಗೆಟ್ಟು, ಧರ್ಮಮಾರ್ಗವನ್ನು ಬಿಟ್ಟು“ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗು೦ (ಪ್ರಕೃತಿ ವಿಕೃತಿಯಾದ (ಸಹಜ ಗುಣ ಬದಲಾವಣೆಯಾದ) ಮನುಷ್ಯನ ಆಯುಷ್ಯವು
ಕಡಿಮೆಯಾಗುತ್ತದೆ) ಎಂದು ಹೇಳುವಂತೆ ಧರ್ಮಬುದ್ಧಿಯೇ ಧನವನ್ನು ತೆಗೆದುಕೊಂಡನು ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ದುಷ್ಟಬುದ್ಧಿಯ ತಂದೆಯಾದ ಪ್ರೇಮಮತಿಯು ಹೇಳಿದ ಸುಳ್ಳು ಆತನ ಆಯುಷ್ಯವನ್ನು ಕಡಿಮೆ ಮಾಡಿತು ಎಂದು ಪರೋಕ್ಷವಾಗಿ ಕವಿ ಬಳಸಿರುವ ಈ ಮಾತು ಸ್ವಾರಸ್ಯಪೂರ್ಣವಾಗಿದೆ.
೫. “ಹುಸಿಯದ ಬೇಹಾರಿಯೇ ಇಲ್ಲ.”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರವಿರಚಿತ ‘ಪಂಚತಂತ್ರ ’ಎಂಬಕೃತಿಯಿಂದ ಆಯ್ದ ‘ವೃಕ್ಷಸಾಕ್ಷಿ ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ಧರ್ಮಬುದ್ಧಿಯು ಧರ್ಮಾಧಿಕರಣರಿಗೆ ಹೇಳಿದನು. ಧರ್ಮಬುದ್ಧಿಯೇ ಧನವನ್ನು ತೆಗೆದುಕೊಂಡನು ಎಂದು ಹೇಳುವುದನ್ನು ಕೇಳಿದ ಧರ್ಮಬುದ್ಧಿಯು ಇದರಲ್ಲಿ ಏನಾದರೊಂದು ಮೋಸವಾಗಿರಲೇಬೇಕು ಎಂದು ಆ ಮುರರವನ್ನು ಸುತ್ತು ಹಾಕಿ ನೋಡಿದೊಡ್ಡದಾದ ಪೊಟರೆಯಲ್ಲಿ ಮನುಷ್ಯ ಸಂಚಾರವಾಗಿರುವುದನ್ನು ಕಂಡು ತೀರ್ಮಾನಿಸಿ ಧರ್ಮಬುದ್ಧಿಯು ಧರ್ಮಾಧಿಕಾರಿಗಳಿಗೆ ಹೀಗೆ ಹೇಳಿದನು.“ಹುಸಿಯದ ಬೇಹಾರಿಯೇ ಇಲ್ಲ.” (ಸುಳ್ಳು ಹೇಳದ ವ್ಯಾಪಾರಿಯೇ ಇಲ್ಲ) ನಾನು ವ್ಯಾಪಾರಿ ಆಗಿರುವುದರಿಂದ ನಮ್ಮ ವೃತ್ತಿಧರ್ಮಕ್ಕೆ ಧರ್ಮಬುದ್ಧಿಯು ಅಧರ್ಮಬುದ್ಧಿಯಾಗಿ ಧನವನ್ನು ವಂಚನೆಯಿಂದ ತೆಗೆದುಕೊಂಡು ಹೋದೆನು ಎಂದು ದುಷ್ಟಬುದ್ಧಿಯ ತಂತ್ರವನ್ನು ಬಯಲುಮಾಡುವ ಸಂದರ್ಭವಾಗಿದೆ .
ಸ್ವಾರಸ್ಯ :- ವ್ಯಾಪಾರಿಗಳು ವೃತ್ತಿಧರ್ಮದಲ್ಲಿ ಕೆಲವೊಂದು ಸಲ ಸುಳ್ಳು ಹೇಳುತ್ತಾರೆ ಎಂಬು ಲೋಕರೂಡಿಯ ಮಾತು ಬಹು ಸ್ವಾರಸ್ಯಪೂರ್ಣವಾಗಿ ಇಲ್ಲಿ ಮೂಡಿಬಂದಿದೆ.
ಉ) ಮೊದಲೆರಡು ಪದಗಳಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂದಿಸಿದ ಪದವನ್ನು ಬರೆಯಿರಿ.
೧) ವಡ್ಡಾರಾಧನೆ : : ಶಿವಕೋಟ್ಯಾಚಾರ್ಯ : : ಪಂಚತಂತ್ರ : ದುರ್ಗಸಿಂಹ
೨) ಕಬ್ಬ : ಕಾವ್ಯ : : ಬೇಹಾರಿ : ವ್ಯಾಪಾರಿ
೩) ಅನೃತ : ಸುಳ್ಳು : : ಕೃತ್ರಿಮ : ಮೋಸ , ವಂಚನೆ
೪) ಬಂದಲ್ಲದೆ : ಲೋಪಸಂದಿ : : ಧೃತಿಗೆಟ್ಟು : ಆದೇಶ ಸಂಧಿ
೫) ದೈವಭಕ್ತಿ – ತತ್ಪುರುಷ ಸಮಾಸ : : ಅಬ್ಜೋದರ : ಬಹುವ್ರೀಹಿ ಸಮಾಸ
ಭಾಷಾ ಚಟುವಟಿಕೆ
೧. ಈ ಪದಗಳನ್ನು ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.
ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
ಅತಿಕುಟಿಲ, ಕೈಕೊಳ್ವುದು, ಕಟ್ಟೇಕಾಂತ, ಸ್ವಾಮಿದ್ರೋಹ, ಪರಧನ , ಧನಹರಣ , ಸಾಕ್ಷಿಮಾಡಿ, ಬಲವಂದು.
ಅತಿಕುಟಿಲ – ಅತಿಯಾದ + ಕುಟಿಲ =ಕರ್ಮಧಾರೆಯ ಸಮಾಸ
ಕೈಕೊಳ್ವುದು – ಕೈಯನ್ನು + ಕೊಳ್ವುದು =ಕ್ರಿಯಾ ಸಮಾಸ
ಕಟ್ಟೇಕಾಂತ – ಕಡಿದು + ಏಕಾಂತ =ಕರ್ಮಧಾರೆಯ ಸಮಾಸ
ಸ್ವಾಮಿದ್ರೋಹ – ಸ್ವಾಮಿಗೆ + ದ್ರೋಹ =ತತ್ಪುರಷ ಸಮಾಸ
ಪರಧನ – ಪರರ + ಧನ =ತತ್ಪುರಷ ಸಮಾಸ
ಧನಹರಣ – ಧನದ + ಹರಣ =ತತ್ಪುರಷ ಸಮಾಸ
ಸಾಕ್ಷಿಮಾಡಿ – ಸಾಕ್ಷಿಯನ್ನು + ಮಾಡಿ = ಕ್ರಿಯಾ ಸಮಾಸ
ಬಲವಂದು – ಬಲಕ್ಕ + ಬಂದು = ಕ್ರಿಯಾ ಸಮಾಸ
೩. ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ.
ಅ) ಅತಿಕುಟಿಲಮನಂ ಧನಲು ಬ್ಧತೆಯಿಂದ೦ ದುಷ್ಟಬುದ್ಧಿ ನುಡಿದಂ ಪುಸಿಯಂ
ಛಂದಸ್ಸು – ಕಂದ ಪದ್ಯ
ಲಕ್ಷಣ : ಒಂದನೇ ಸಾಲಿನಲ್ಲಿ ೪ ಮಾತ್ರೆಯ ೩ ಗಣಗಳು ಮತ್ತು ಎರಡನೆಯ ಸಾಲಿನಲ್ಲಿ ೪ ಮಾತ್ರೆಯ ೫ ಗಣಗಳು ಬಂದಿದ್ದು ಕಂದಪz್ಯÀ ದ
ಪೂರ್ವಾರ್ಧದ ಲಕ್ಷಣ ಹೊಂದಿದೆ ಆದ್ದರಿಂದ ಇದು ಕಂದಪದ್ಯ ಛಂದಸ್ಸಾಗಿದೆ
ಆ) ಮೇದಿನಿಯಂ ಕ್ರಮಕ್ರಮದೆ ಪರ್ವಿದುದಾತನಭೋ ವಿಭಾಗಮಾ
ಛಂದಸ್ಸು – ಉತ್ಪಲ ಮಾಲಾ ವೃತ್ತ
ಲಕ್ಷಣ : ಈ ಪಾದದಲ್ಲಿ ೨೦ ಅಕ್ಷರಗಳು, ೨೮ ಮಾತ್ರೆಗಳು , ಭರನಭಭರಲಗ ಗಣಗಳು ಹಾಗೂ ಪಾದದ ಆದಿಯಲ್ಲಿ ಒಂದು ಗುರುಬಂದಿದ್ದು
ಇದು ಉತ್ಪಲ ಮಾಲಾ ವೃತ್ತ ಛಂದಸ್ಸಿನ ಲಕ್ಷಣವನ್ನು ಹೊಂದಿದೆ. ಆದ್ದರಿಂದ ಇದು ಉತ್ಪಲ ಮಾಲಾ ವೃತ್ತ ಛಂದಸ್ಸಾಗಿದೆ.
FAQ :
‘ವೃಕ್ಷ ಸಾಕ್ಷಿ’ ಕತೆಯನ್ನು ದುರ್ಗಸಿಂಹನ ಪಂಚತಂತ್ರ ಕೃತಿಯಿಂದ ಆರಿಸಲಾಗಿದೆ.
ದುಷ್ಟಬುದ್ಧಿಯ ತಂದೆಯ ಹೆಸರು ಪ್ರೇಮಮತಿ.
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ ಆರೋಪವನ್ನು ಹೊರಿಸಿದನು.
ಇತರೆ ವಿಷಯಗಳು :
10th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.