10ನೇ ತರಗತಿ ಅಧ್ಯಾಯ-9 ಅನುವಂಶೀಯತೆ ಮತ್ತು ಜೀವವಿಕಾಸ ವಿಜ್ಞಾನ ನೋಟ್ಸ್‌ | 10th Standard Science Chapter 9 Notes

10ನೇ ತರಗತಿ ಅಧ್ಯಾಯ-9 ಅನುವಂಶೀಯತೆ ಮತ್ತು ಜೀವವಿಕಾಸ ವಿಜ್ಞಾನ ನೋಟ್ಸ್‌, 10th Standard Science Chapter 9 Notes Question Answer in Kannada Medium 2024 chapter 9 science class 10 pdf Kseeb Solution For Class 10 Science Chapter 9 Notes in Kannada 10th Class Anuvamshiyate Mattu Jeeva Vikasa Science Notes

 

10th Standard Science Chapter 9 Notes

10th Standard Science Chapter 9 Notes
10th Standard Science Chapter 9 Notes

ಪಠ್ಯದ ಪ್ರಶೋತ್ತರಗಳು

10th Standard Science Chapter 9 Notes in Kannada

1.ಒಂದು ಗುಣ ‘A’ ಅಲೈಂಗಿಕವಾಗಿ ಪುನರುತ್ಪಾದನೆ ನಡೆಸುವ ಪ್ರಭೇದವೊಂದರ ಜೀವಿಸಂದಣಿಯ 10% ರಷ್ಟಿರುತ್ತದೆ.ಮತ್ತೊಂದು ಗುಣ B ಅದೇ ಸಮೂಹದ 60% ರಷ್ಟಿದೆ, ಯಾವ ಗುಣ ಮೊದಲು ಹುಟ್ಟಿಕೊಂಡಿರಬಹುದು?

ಗುಣ A ಯು ಶೇಕಡಾ 10 ಇರುವ ಕಾರಣ ಅದು ಇತ್ತೀಚಿಗೆ ಹುಟ್ಟಿಕೊಂಡಿರಬಹುದು ಮತ್ತು ಗುಣ B 60% ಇರುವ ಕಾರಣ ಮೊದಲು ಹುಟ್ಟಿಕೊಂಡಿರಬಹುದು.

2.ಪ್ರಭೇದಗಳಲ್ಲಿನ ಭಿನ್ನತೆಗಳ ಸೃಷ್ಟಿ ಅವುಗಳ ಉಳಿವನ್ನು ಹೇಗೆ ಪ್ರೋತ್ಸಾಹಿಸುತ್ತವೆ?

ಕೆಲವೊಮ್ಮೆ ಪರಿಸರದಲ್ಲಿ ಉಂಟಾಗುವ ಧಿಡೀರ್ ಬದಲಾವಣೆಗಳು ಒಂದು ಪ್ರಭೇದದ ಜೀವಿಗಳಿಗೆ ಬದುಕಲು ಅನಾನುಕೂಲವಾಗಿ ಪರಿಣಮಿಸುತ್ತದೆ. ಉದಾಹರಣರಗೆ ಜಲಪರಿಸರ ವ್ಯವಸ್ಥೆಯಲ್ಲಿ ನೀರಿನ ತಾಪದಲ್ಲಿ ಒಮ್ಮೆಲೇ ಏರಿಕೆ ಕಂಡುಬಂದರೆ ಅಲ್ಲಿ ವಾಸಿಸುವ ಬಹುತೇಕ ಬ್ಯಾಕ್ಟಿರಿಯಾಗಳು ಸಾಯುತ್ತವೆ.ಆದರೆ ಕೆಲವು ಬ್ಯಾಕ್ಟಿರಿಯಾಗಳು (ಭಿನ್ನತೆಯುಳ್ಳ) ತಾಪದಲ್ಲಿನ ಹೆಚ್ಚಳ ಸಹಿಸಿಕೊಂಡು ಬದುಕುಳಿಯುತ್ತವೆ. ಒಂದು ವೇಳೆ ಈ ಬ್ಯಾಕ್ಟಿರಿಯಾಗಳೂ ಬದುಕುಳಿಯದಿದ್ದರೆ ಅವುಗಳ ಪ್ರಭೇದವೇ ನಾಶವಾಗಿ ಬಿಡುತ್ತದೆ.

3. ಗುಣಗಳು ಪ್ರಬಲ ಅಥವಾ ದುರ್ಬಲವಾಗಿರಬಹುದು ಎಂಬುದನ್ನು ಮೆಂಡಲ್ ರ ಪ್ರಯೋಗಗಳು ಹೇಗೆ ತೋರಿಸುತ್ತವೆ?

ಮೆಂಡಲರು ಶುದ್ಧ ಎತ್ತರ ಮತ್ತು ಕುಬ್ಬ ವಾದ ಬಟಾಣಿ ತಳಿಗಳನ್ನು ಸಂಕರಿಸಿದರು. ಅವುಗಳಿಂದ ದೊರೆತ ಬೀಜಗಳನ್ನು ಬಿತ್ತಿದರು ಮತ್ತು ಪಡೆದ ಸಸ್ಯಗಳನ್ನು ಮೊದಲನೆಯ ತಳಿ ಪೀಳಿಗೆ (F1) ಎಂದು ಕರೆದರು. ಈ ಸಸ್ಯಗಳೆಲ್ಲವೂ ಎತ್ತರವಾಗಿದ್ದವು. ಈ ಎತ್ತರದ ಸಸ್ಯಗಳಲ್ಲಿ ಸ್ವಕೀಯ ಪರಾಗ ಸ್ಪರ್ಶವಾಗುವಂತೆ ನೋಡಿಕೊಂಡರು. ದೊರೆತ ಬೀಜಗಳನ್ನು ಬಿತ್ತಿದಾಗ ಪಡೆದ ತಳಿ ಪೀಳಿಗೆಯನ್ನು ಎರಡನೆಯ ತಳಿ ಪೀಳಿಗೆ( F2 ) ಎಂದು ಕರೆದನು. ಈ ಸಸ್ಯಗಳೆಲ್ಲವೂ ಮೊದಲನೆಯ ತಳಿ ಪೀಳಿಗೆಯಂತೆ ಎತ್ತರವಾಗಿರಲಿಲ್ಲ. ಬದಲಾಗಿ ಇವುಗಳಲ್ಲಿ ನಾಲ್ಕನೇ ಒಂದು ಭಾಗದ ಸಸ್ಯಗಳು ಕುಬ್ಬವಾಗಿದ್ದವು. ಈ ಪ್ರಯೋಗದಿಂದ ಮೆಂಡಲರು ತೆಗೆದುಕೊಂಡ ತೀರ್ಮಾನವೆಂದರೆ ಮೊದಲನೆಯ ತಳಿ ಪೀಳಿಗೆಯಲ್ಲಿ ದೊರೆತ ಎತ್ತರ ಸಸ್ಯಗಳು ಶುದ್ಧ ಸಸ್ಯಗಳಾಗಿರಲಿಲ್ಲ.ಬದಲಾಗಿ ಅವುಗಳಲ್ಲಿ ಎತ್ತರ ಮತ್ತು ಕುಬ್ಬ ಎರಡೂ ಗುಣಗಳು ಇದ್ದವು. ಅವುಗಳೆಲ್ಲವೂ ಎತ್ತರವಾಗಿರಲು ಕಾರಣ ಎತ್ತರ ಗುಣ ಪ್ರಬಲವಾಗಿರುವುದು ಮತ್ತು ಕುಟ್ಟ ಗುಣ ದುರ್ಬಲವಾಗಿರುವುದು

10th Standard Science Chapter 9 Notes

4. ಗುಣಗಳು ಸ್ವತಂತ್ರ ವಾಗಿ ಅನುವಂಶೀಯವಾಗುತ್ತದೆ ಎಂದು ಮೆಂಡಲರ ಪ್ರಯೋಗಗಳು ಹೇಗೆ ತೋರಿಸುತ್ತವೆ ?

ಮೆಂಡಲರು ದುಂಡಾದ ಹಸಿರು ಮತ್ತು ಸುಕ್ಕಾದ ಹಳದಿ ಬೀಜಗಳನ್ನು ಹೊಂದಿರುವ ಬಟಾಣಿ ಸಸ್ಯಗಳನ್ನು ಸಂಕರಿಸಿದರು.

10th Standard Science Chapter 9 Notes

ಮೊದಲನೆಯ ತಳಿ ಪೀಳಿಗೆಯಲ್ಲಿ ದುಂಡಾದ ಹಳದಿ ಬೀಜಗಳನ್ನು ಹೊಂದಿರುವ ಸಸ್ಯಗಳು ದೊರೆತ ಕಾರಣ ದುಂಡಗೆ ಮತ್ತು ಹಳದಿ ಗುಣಗಳು ಪ್ರಬಲವಾದವು ಎಂದು ತಿಳಿಯಬಹುದಾಗಿದೆ. ಈ ಮೊದಲನೆಯ ತಳಿ ಪೀಳಿಗೆಯ (FI) ಸಸ್ಯಗಳನ್ನು ಸ್ವಕೀಯ ಪರಾಗಸ್ಪರ್ಶವಾಗುವಂತೆ ಮಾಡಿದಾಗ ಎರಡನೆಯ ತಳಿ ಪೀಳಿಗೆಯಲ್ಲಿ (F2) ದುಂಡನೆಯ ಹಳದಿ,ದುಂಡನೆಯ ಹಸಿರು,ಸುಕ್ಕಾದ ಹಳದಿ ಮತ್ತು ಸುಕ್ಕಾದ ಹಸಿರು ಸಸ್ಯಗಳು 9:3:3:1ಅನುಪಾತದಲ್ಲಿ ದೊರೆತವು.ಈ ರೀತಿಯ ತಳೀಕರಣದಲ್ಲಿ ( ದ್ವಿತಳೀಕರಣ) ಎರಡು ಜೊತೆ ಗುಣಗಳು ಸ್ವತಂತ್ರವಾಗಿಅನುವಂಶೀಯವಾಗುತ್ತವೆ ಎಂದು ತಿಳಿದು ಬರುತ್ತದೆ.

10th Standard Science Chapter 9 Notes

5. A ರಕ್ತದ ಗುಂಪು ಹೊಂದಿರುವ ಗಂಡಸು, O ರಕ್ತದ ಗುಂಪಿನ ಮಹಿಳೆಯನ್ನು ಮದುವೆಯಾಗುತ್ತಾನೆ. ಅವರ ಮಗಳು O ರಕ್ತದ ಗುಂಪನ್ನು ಹೊಂದಿದ್ದಾಳೆ, ಈ ಮಾಹಿತಿಯು ನಿಮಗೆ ರಕ್ತದ A ಅಥವಾ O ಗುಣಗಳಲ್ಲಿ ಯಾವುದು ಪ್ರಬಲ ಎಂದು ಹೇಳಲು ಸಾಕಾಗುತ್ತದೆಯೇ? ಹೌದಾದರೆ ಏಕೆ ? ಇಲ್ಲವಾದರೆ ಏಕಿಲ್ಲ ?

ಇಲ್ಲ. ಈ ಮಾಹಿತಿಯು ಯಾವ ರಕ್ತದ ಗುಂಪು ಪ್ರಬಲ ಎಂದು ಹೇಳಲು ಸಾಕಾಗುವುದಿಲ್ಲ. ಏಕೆಂದರೆ ಅವರ ವಂಶದ ರಕ್ತದ ಗುಂಪುಗಳ ಮಾಹಿತಿಯು ಲಭ್ಯವಿಲ್ಲ.

6.ಮಾನವರಲ್ಲಿ ಮಗುವಿನ ಲಿಂಗವು ಹೇಗೆ ನಿರ್ಧರಿತವಾಗುತ್ತದೆ?

ಮಾನವರಲ್ಲಿ ಹೆಣ್ಣು ಎರಡು X ಮತ್ತು ಗಂಡು ಒಂದು X ಮತ್ತು ಒಂದು Y ವರ್ಣತಂತುಗಳನ್ನು ಹೊಂದಿರುತ್ತಾರೆ.ಆದ್ದರಿಂದ ಮಹಿಳೆಯರು XX ಮತ್ತು ಪುರುಷರು XY ಆಗಿದ್ದಾರೆ, ಲಿಂಗಾಣುಗಳು ಉತ್ಪತ್ತಿಯಾಗುವಾಗ ಅಂದರೆ ಮಿಯಾಸಿಸ್ ವಿಭಜನೆಯ ಸಮಯದಲ್ಲಿ ವರ್ಣತಂತುಗಳು ಅರ್ಧದಷ್ಟಾಗುತ್ತವೆ. ಅಂದರೆ ಹೆಣ್ಣಿನಿಂದ X ಮತ್ತು ಗಂಡಿನಿಂದ X ಅಥವಾ Y ವರ್ಣತಂತುಗಳು ಉತ್ಪತ್ತಿಯಾಗುತ್ತವೆ, ಆದ್ದರಿಂದ ಲಿಂಗ ನಿರ್ಧಾರವು ಗಂಡಿನ ವರ್ಣತಂತುಗಳಿಂದ ಆಗುತ್ತದೆ. ಗಂಡಿನ X ವರ್ಣತಂತು ಹೆಣ್ಣಿನ X ವರ್ಣತಂತುವಿನ ಜೊತೆಗೂಡಿದರೆ ಹುಟ್ಟುವ ಮಗುವು ಹೆಣ್ಣಾಗಿರುತ್ತದೆ ಮತ್ತು ಗಂಡಿನ Y ಹೆಣ್ಣಿನ X ಜೊತೆಗೂಡಿದರೆ ಹುಟ್ಟುವ ಮಗುವು ಗಂಡಾಗಿರುತ್ತದೆ.

10th Standard Science Chapter 9 Notes

7. ನಿರ್ದಿಷ್ಟ ಗುಣವಿರುವ ಜೀವಿಗಳು ಜೀವಿಸಮೂಹವೊಂದರಲ್ಲಿ ಹೆಚ್ಚಾಗುವ ವಿವಿಧ ರೀತಿಗಳಾವುವು ?

ನಿರ್ದಿಷ್ಟ ಗುಣವಿರುವ ಜೀವಿಗಳು ಜೀವಿಸಮೂಹವೊಂದರಲ್ಲಿ ಈ ಕೆಳಗಿನ ವಿಧಾನಗಳಲ್ಲಿ ಹೆಚ್ಚಾಗಬಹುದು.

೧. ನಿಸರ್ಗದ ಆಯ್ಕೆಯ ಮೂಲಕ

೨. ಉತ್ಪರಿವರ್ತನೆಗಳ ಮೂಲಕ

೩. ಅರ್ಜಿಸಿದ ಲಕ್ಷಣಗಳು ಅನುವಂಶೀಯವಾದಾಗ,

8. ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಗಳಿಸಿಕೊಂಡ ಗುಣಗಳು ಅನುವಂಶೀಯವಾಗುವುದಿಲ್ಲ . ಏಕೆ?

ಜೀವಿತಾವಧಿಯಲ್ಲಿ ಗಳಿಸಿಕೊಂಡ ಗುಣಗಳು ಕಾಯಕಕೋಶಗಳಲ್ಲಿ ಬದಲಾವಣೆ ತರುತ್ತವೆ ಹೊರತು ಲಿಂಗಾಣುಕೋಶಗಳಲ್ಲಿ ಬದಲಾವಣೆ ತರುವುದಿಲ್ಲ.ಆದ್ದರಿಂದ ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಗಳಿಸಿಕೊಂಡ ಗುಣಗಳು ಅನುವಂಶೀಯವಾಗುವುದಿಲ್ಲ.

9, ಕಡಿಮೆ ಸಂಖ್ಯೆಯ ಹುಲಿಗಳು ಬದುಕುಳಿಯುತ್ತಿರುವುದು ತಳಿಶಾಸ್ತ್ರದ ದೃಷ್ಟಿಕೋನದಿಂದ ಚಿಂತೆಗೆ ಕಾರಣವಾಗಿದೆ ಏಕೆ?

ಹುಲಿಗಳ ಕಡಿಮೆ ಸಂಖ್ಯೆಯು ಕಡಿಮೆ ಬಿನ್ನತೆಯ ಸೂಚಕವಾಗಿದೆ.ಇದರಿಂದ ಮುಂದಿನ ಪೀಳಿಗೆಯ ಹುಲಿಗಳಲ್ಲಿ ಭಿನ್ನತೆಯು ಕಡಿಮೆಯಾಗುತ್ತದೆ ಎಂಬುದು ತಳಿಶಾಸ್ತ್ರದ ದೃಷ್ಟಿಕೋನದಿಂದ ಚಿಂತೆಗೆ ಕಾರಣವಾಗಿದೆ.

10, ಹೊಸ ಪ್ರಭೇದವೊಂದರ ಉಗಮಕ್ಕೆ ಕಾರಣವಾಗುವ ಅಂಶಗಳು ಯಾವುವು ?

೧. ನಿಸರ್ಗದ ಆಯ್ಕೆ

೨. ಉತ್ಪರಿವರ್ತನೆಗಳು

೩. ಅರ್ಜಿಸಿದ ಲಕ್ಷಣಗಳು ಅನುವಂಶೀಯವಾದಾಗ.

11. ಸ್ವಕೀಯ ಪರಾಗಸ್ಪರ್ಶ ಹೊಂದುವ ಸಸ್ಯ ಪ್ರಭೇದಗಳ ಪ್ರಭೇದೀಕರಣದಲ್ಲಿ ಭೌಗೋಳಿಕ ಬೇರ್ಪಡುವಿಕೆಯು ಒಂದು ಪ್ರಮುಖ ಅಂಶವಾಗುತ್ತದೆಯೇ ? ಹೌದಾದರೆ ಏಕೆ ಇಲ್ಲವಾದರೆ ಏಕಿಲ್ಲ?

ಇಲ್ಲ.ಏಕೆಂದರೆ ಭೌಗೋಳಿಕ ಬೇರ್ಪಡುವಿಕೆಯು ಸ್ವಕೀಯ ಪರಾಗಸ್ಪರ್ಶಕ್ಕೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ.

ಯಾಕೆಂದರೆ ಸ್ವಕೀಯ ಪರಾಗಸ್ಪರ್ಶದಲ್ಲಿ ಒಂದು ಹೂವಿನ ಪರಾಗವು ಅದೇ ಹೂವಿನ ಶಲಾಕೆಯ ಮೇಲೆ ಬೀಳುತ್ತದೆ.

12. ಅಲೈಂಗಿಕ ಸಂತಾನೋತ್ಪತ್ತಿ ಮಾಡುವ ಜೀವಿಗಳ ಪ್ರಭೇಧೀಕರಣದಲ್ಲಿ ಭೌಗೋಳಿಕ ಬೇರ್ಪಡುವಿಕೆಯು ಒಂದು ಪ್ರಮುಖ ಅಂಶವಾಗುತ್ತದೆಯೇ ? ಹೌದಾದರೆ ಏಕೆ ಇಲ್ಲವಾದರೆ ಏಕಿಲ್ಲ ?

ಅಲೈಂಗಿಕ ಸಂತಾನೋತ್ಪತ್ತಿ ಮಾಡುವ ಜೀವಿಗಳಲ್ಲಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಕೇವಲ ಒಂದು ಜೀವಿ ಪಾಲ್ಗೊಳ್ಳುತ್ತದೆ .ಇವುಗಳಲ್ಲಿ ಡಿ.ಎನ್‌.ಎ ಸರಿಯಾಗಿ ಅನುವಂಶೀಯವಾಗದಿದ್ದರೆ ಭಿನ್ನತೆಯು ಉಂಟಾಗಲು ಕಾರಣವಾಗುತ್ತದೆ. ಆದ್ದರಿಂದ ಭೌಗೋಳಿಕ ಬೇರ್ಪಡುವಿಕೆಯು ಈ ಜೀವಿಗಳ ಪ್ರಬೇಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುವುದಿಲ್ಲ .

13. ಜೀವವಿಕಾಸೀಯ ನಿಯಮಗಳನುಸಾರ ಎರಡು ಪ್ರಭೇದಗಳು ಎಷ್ಟು ಹತ್ತಿರವಾಗಿವೆ ಎಂದು ತಿಳಿಸುವ ಗುಣಗಳಿಗೆ ಒಂದು ಉದಾಹರಣೆ ಕೊಡಿ

ಡೈನೋಸಾರ್ ಗಳಲ್ಲಿ ಕಂಡು ಬಂದ ರೆಕ್ಕೆಗಳು ಮತ್ತು ಹಕ್ಕಿಗಳ ರೆಕ್ಕೆಗಳನ್ನು ಹೋಲಿಸಿದಾಗ ಸರೀಸೃಪಗಳಿಂದ ಹಕ್ಕಿಗಳ ಉಗಮವಾಯಿತು ಎಂದು ತಿಳಿದು ಬರುತ್ತದೆ. ಡೈನೋಸಾರಗ ಳಲ್ಲಿ ರೆಕ್ಕೆಗಳು ತಮ್ಮ ದೇಹದ ಉಷ್ಣತೆಯನ್ನು ಕಾಪಾಡಲುಸಹಾಯವಾದರೆ ಹಕ್ಕಿಗಳಲ್ಲಿ ಅದು ಹಾರಾಡಲು ಸಹಾಯವಾಗಿದೆ. ಇದು ಸರೀಸೃಪಗಳಿಗೂ ಮತ್ತು ಹಕ್ಕಿಗಳಿಗೂ ಇರುವ ನಿಕಟ ಸಂಬಂಧವನ್ನು ತಿಳಿಸುತ್ತದೆ ಮತ್ತು ರೆಕ್ಕೆಗಳು ಸರೀಸೃಪಗಳಿಂದ ವಿಕಾಸಗೊಂಡಿವೆ ಎಂದು ತಿಳಿದು ಬರುತ್ತದೆ.

14.ಚಿಟ್ಟೆಯ ರೆಕ್ಕೆ ಹಾಗು ಬಾವಲಿಯ ರೆಕ್ಕೆಗಳನ್ನು ಸಮರೂಪಿ ಅಂಗಗಳೆಂದು ಪರಿಗಣಿಸಬಹುದೇ ? ಹೌದಾದರೆ ಏಕೆ ಇಲ್ಲವಾದರೆ ಏಕಿಲ್ಲ ?

ಚಿಟ್ಟೆಯ ರೆಕ್ಕೆ ಮತ್ತು ಬಾವಲಿಯ ರೆಕ್ಕೆ ಎರಡೂ ಕೂಡಾ ಹಾರಲು ಸಹಾಯ ಮಾಡುವ ಅಂಗಗಳು,ಅವು ಮಾಡುವ ಕಾರ್ಯ ಒಂದೇ ಆದರೂ ರಚನೆಯಲ್ಲಿ ವ್ಯತ್ಯಾಸ ಹೊಂದಿವೆ. ಆದ್ದರಿಂದ ಅವು ಕಾರ್ಯಾನುರೂಪಿ ಅಂಗಗಳೇ ಹೊರತು ಸಮರೂಪಿ ಅಂಗಗಳಲ್ಲ.

15. ಪಳೆಯುಳಿಕೆಗಳು ಎಂದರೇನು ? ಅವು ಜೀವವಿಕಾಸ ಪ್ರಕ್ರಿಯೆಯ ಕುರಿತು ನಮಗೇನು ತಿಳಿಸುತ್ತದೆ?

ಸತ್ತ ಜೀವಿಗಳ ದೇಹ ಅಥವಾ ದೇಹಭಾಗಗಳ ಪಡಿಯಚ್ಚಿನ ಅವಶೇಷಗಳೇ ಪಳೆಯುಳಿಕೆಗಳು. ಪಳೆಯುಳಿಕೆಗಳು ಈಗಿರುವ ಸಸ್ಯ ಅಥವಾ ಪ್ರಾಣಿಗಳ ಪೂರ್ವಜರನ್ನು ಪ್ರತಿನಿಧಿಸುತ್ತವೆ. ಅವುಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡಿ ಈಗಿರುವ ಜೀವಿಗಳ ದೇಹ ರಚನೆಯಲ್ಲಿ ಅಥವಾ ಗುಣಲಕ್ಷಣಗಳಲ್ಲಿನ ವಿಕಾಸ ಹೇಗೆ ಆಯಿತು ಎಂದು ತಿಳಿಯಬಹುದಾಗಿದೆ.

16, ನೋಡಲು ಪರಸ್ಪರ ವಿಭಿನ್ನವಾಗಿರುವ ಗಾತ್ರ ಬಣ್ಣ ಮತ್ತು ರೂಪ ಹೊಂದಿರುವ ಮಾನವ ಜೀವಿಗಳೆಲ್ಲರೂ ಒಂದೇಪ್ರಭೇದಕ್ಕೆ ಸೇರಿರುವರೆಂದು ಹೇಳಲಾಗುತ್ತಿದೆ . ಏಕೆ ?

ತಮ್ಮ ತಮ್ಮಲ್ಲೇ ಸಂತಾನೋತ್ಪತ್ತಿ ಮಾಡಿ ತಮ್ಮನ್ನೇ ಹೋಲುವ ಫಲವಂತ ಪೀಳಿಗೆಯನ್ನು ಉತ್ಪತ್ತಿ ಮಾಡಬಲ್ಲ ಜೀವಿಗಳ ಗುಂಪಿಗೆ ಪ್ರಬೇಧ ಎನ್ನುವರು. ಮಾನವರಲ್ಲಿ ಕಂಡುಬರುವ ವಿಭಿನ್ನ ಗಾತ್ರ ಬಣ್ಣ,ರೂಪಗಳು ಪರಿಸರದಿಂದ ನಿಯಂತ್ರಣಕ್ಕೊಳಪಟ್ಟಿವೆ. ಈ ಲಕ್ಷಣಗಳನ್ನು ಆಧರಿಸಿ ವಿಭಿನ್ನ ಮಾನವ ಕುಲಗಳನ್ನು ನಾವು ಕಾಣಬಹುದಾಗಿದೆ, ಆದರೆ ಈ ವಿಭಿನ್ನ ಲಕ್ಷಣಗಳಿರುವ ಮಾನವ ಕುಲಗಳೆಲ್ಲವೂ ತಮ್ಮ ತಮ್ಮಲ್ಲಿ ಸಂತಾನೋತ್ಪತ್ತಿ ಮಾಡಿ ಫಲವಂತ ಪೀಳಿಗೆಯನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿರುವ ಕಾರಣ ಮಾನವ ಜೀವಿಗಳೆಲ್ಲವೂ ಒಂದೇ ಪ್ರಬೇಧಕ್ಕೆ ಸೇರಿವೆ ಎಂದು ಹೇಳಲಾಗುತ್ತದೆ.

17. ಜೀವವಿಕಾಸೀಯ ನಿಯಮಗಳನುಸಾರ ಬ್ಯಾಕ್ಟಿರಿಯಾ ಜೇಡ, ಮೀನು ಹಾಗು ಚಿಂಪಾಂಜಿಗಳಲ್ಲಿ ಯಾವುದು ಉತ್ತಮ ದೇಹ ವಿನ್ಯಾಸ ಹೊಂದಿದೆ ? ಏಕೆ ಮತ್ತು ಏಕಿಲ್ಲ ?

ಉತ್ತಮ ದೇಹ ವಿನ್ಯಾಸವನ್ನು ಜೀವವಿಕಾಸದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ.ವಿಕಾಸವು ಹೆಚ್ಚು ಸಂಕೀರ್ಣ ದೇಹ ವಿನ್ಯಾಸವುಳ್ಳ ಜೀವಿಗಳ ಉತ್ಪತ್ತಿಗೆ ಕಾರಣವಾಗಿದೆ. ಸರಳ ದೇಹ ವಿನ್ಯಾಸವನ್ನು ಹೊಂದಿರುವ ಬ್ಯಾಕ್ಟಿರಿಯಾ ಭೂಮಿಯ ಮೇಲಿನ ಎಲ್ಲಾ ರೀತಿಯ ಆವಾಸಗಳಲ್ಲಿ ಕಂಡು ಬರುತ್ತವೆ. ಅವು ಅತೀ ಉಷ್ಣ ವಾತಾವರಣದಲ್ಲಿ ಆಳ ಸಮುದ್ರದಲ್ಲಿ ಮತ್ತು ತಣ್ಣನೆಯ ವಾತಾವರಣದಲ್ಲೂ ಕೂಡಾ ಬದುಕುಳಿಯಬಲ್ಲವು .

10th Standard Science Chapter 9 Notes

ಅಭ್ಯಾಸದ ಪ್ರಶೋತ್ತರಗಳು

1. ಮೆಂಡಲರ ಪ್ರಯೋಗವೊಂದರಲ್ಲಿ ನೇರಳೆ ಹೂ ಬಿಡುವ ಎತ್ತರದ ಸಸ್ಯಗಳೊಂದಿಗೆ ಬಿಳಿ ಹೂ ಬಿಡುವ ಕುಬ್ಬ ಸಸ್ಯಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಿಂದ ಪಡೆದ ಸಂತತಿಯೆಲ್ಲವೂ ನೇರಳೆ ಹೂವುಗಳನ್ನು ಹೊಂದಿದೆ. ಆದರೆ ಅರ್ಧದಷ್ಟು ಕುಬ್ಬವಾಗಿವೆ. ಇದರಿಂದ ನಾವು ಎತ್ತರ ಸಸ್ಯದ ತಳಿಗುಣವನ್ನು ಹೀಗೆ ಸೂಚಿಸಬಹುದು.

ಸಿ) TtWW

2. ಸಮರೂಪಿ ಅಂಗಗಳಿಗೆ ಉದಾಹರಣೆಯೆಂದರೆ,

ಬಿ) ನಮ್ಮ ಹಲ್ಲುಗಳು ಮತ್ತು ಆನೆಯ ದಂತಗಳು,

3, ಈ ಕೆಳಗಿನವುಗಳಲ್ಲಿ ಜೀವವಿಕಾಸದ ದೃಷ್ಟಿಕೋನದಿಂದ ನಾವು ಹೆಚ್ಚು ಸಂಬಂಧಿಸಿರುವುದು

ಬಿ) ಒಬ್ಬ ಚೀನೀ ಶಾಲಾ ಬಾಲಕ

4.ಅಧ್ಯಯನವೊಂದರ ಪ್ರಕಾರ ತಿಳಿಬಣ್ಣದ ಕಣ್ಣುಗಳಿರುವ ಮಕ್ಕಳು ತಿಳಿಗಣ್ಣಿನ ಪೋಷಕರನ್ನು ಹೊಂದಿರುತ್ತಾರೆಂದು ತಿಳಿದು ಬಂದಿದೆ. ಇದನ್ನಾಧರಿಸಿದ ತಿಳಿಗಣ್ಣಿಗೆ ಕಾರಣವಾದ ಗುಣ ಪ್ರಬಲವೇ ಅಥವಾ ದುರ್ಬಲವೇ ? ಏಕೆ ಅಥವಾ ಏಕಿಲ್ಲ ?

ತಿಳಿಬಣ್ಣದ ಕಣ್ಣುಗಳಿರುವ ಮಕ್ಕಳ ಲಿಂಗಾಣುಗಳು LL ಅಥವಾ LI ಅಥವಾ II ಆಗಿರಬಹುದೆಂದು ಊಹಿಸೋಣ, ಒಂದು ವೇಳೆ ಮಕ್ಕಳು LL ಲಿಂಗಾಣುಗಳನ್ನು ಹೊಂದಿದ್ದರೆ ಅವರ ಪೋಷಕರೂ ಕೂಡಾ LL ಲಿಂಗಾಣುಗಳನ್ನು ಹೊಂದಿರಬೇಕು,

10th Standard Science Chapter 9 Notes

5. ನಿರ್ಜೀವ ದ್ರವ್ಯಗಳಿಂದ ಜೀವದ ಉಗಮವಾಗಿದೆ ಎಂಬುದಕ್ಕೆ ನಮ್ಮ ಬಳಿ ಇರುವ ಸಾಕ್ಷಾಧಾರಗಳೇನು ?

ಜೆ.ಬಿ.ಎಸ್.ಹಾಲ್ವೇನ್ ಎಂಬ ಬ್ರಿಟೀಷ್ ವಿಜ್ಞಾನಿ ಭೂಮಿಯು ರೂಪುಗೊಂಡ ನಂತರದಲ್ಲಿ ಕಂಡುಬಂದ ನಿರವಯವ ಅಣುಗಳಿಂದ ಜೀವದ ಉಗಮ ಪ್ರಾರಂಭವಾಗಿರಬಹುದೆಂದು ಸೂಚಿಸಿದರು. ಈಗಿರುವುದಕ್ಕಿಂತಲೂ ವಿಭಿನ್ನವಾಗಿದ್ದ ಆ ಸಮಯದಲ್ಲಿ ಭೂಮಿಯ ಮೇಲಿದ್ದ ಪರಿಸ್ಥಿತಿಯು ಬಹುಷ: ಜೀವದ ಉಗಮಕ್ಕೆ ಅಗತ್ಯವಾಗಿದ್ದ ಸಾವಯವ ಅಣುಗಳ ಉತ್ಪಾದನೆಗೆ ಸಹಾಯಕವಾಗಿರಬಹುದೆಂದು ಊಹಿಸಿದರು.ಹೀಗೇ ಮುಂದುವರೆದು ರಾಸಾಯನಿಕ ಸಂಶ್ಲೇಷಣೆಗಳಿಂದ ಪ್ರಾಚೀನ ಜೀವಿಗಳು ಉಂಟಾಗಿರಬಹುದು,

ಪ್ರಾಚೀನ ಭೂಮಿಯ ಮೇಲಿದ್ದ ಪರಿಸ್ಥಿತಿಯನ್ನು ಹೋಲುವ ( ಮೀಥೇನ್ , ಅಮೋನಿಯಾ, ಹೈಡೋಜನ್ ಸಲೈಡ್ ಆದರೆ ಆಕ್ಸಿಜನ್ ರಹಿತ ) ವಾತಾವರಣವನ್ನು ನೀರಿನ ಮೇಲೆ ಸ್ಕ್ಯಾನ್ದೀ ಎಲ್‌ ಮಿಲ್ಲರ್ ಮತ್ತು ಹೆರಾಲ್ಡ್ ಸಿ ಯೂರಿಯವರು ನಿರ್ಮಿಸಿದರು.ಇದನ್ನು 100 ಡಿಗ್ರಿ ಸೆಲ್ಸಿಯಸ್‌ ಗಿಂತ ಕಡಿಮೆ ತಾಪದಲ್ಲಿಟ್ಟರು ಮತ್ತು ಮಿಂಚಿನ ರೀತಿಯ ವಿದ್ಯುತ್‌ ಕಿಡಿಗಳನ್ನು ಅನಿಲ ಮಿಶ್ರಣದೊಳಗೆ ಹಾಯಿಸಿದರು ಒಂದು ವಾರದ ನಂತರ ನೋಡಿದಾಗ ಮೀಥೇನ್ ನಲ್ಲಿದ್ದ 15% ಕಾರ್ಬನ್ ಸರಳ ಸಾವಯವ ಸಂಯುಕ್ತಗಳಾಗಿ ಪರಿವರ್ತನೆಯಾಗಿದ್ದವು. ಇದರಲ್ಲಿ ಪ್ರೋಟೀನ್‌ ರಚನೆಗೆ ಅಗತ್ಯವಾಗಿದ್ದ ಅಮೈನೋ ಆಮ್ಲಗಳು ಉಂಟಾಗಿದ್ದವು.

6. ಅಲೈಂಗಿಕ ಸಂತಾನೋತ್ಪತ್ತಿಯಿಂದಾದ ಭಿನ್ನತೆಗಳಿಗಿಂತ ಲೈಂಗಿಕ ಸಂತಾನೋತ್ಪತ್ತಿಯಿಂದಾದ ಭಿನ್ನತೆಗಳು ಹೆಚ್ಚು ಸಮರ್ಥವಾಗಿರುತ್ತವೆ ಎಂಬುದನ್ನು ವಿವರಿಸಿ.

ಲೈಂಗಿಕ ಸಂತಾನೋತ್ಪತ್ತಿಯು ಸಂತಾನೋತ್ಪತ್ತಿಯ ಸಮಯದಲ್ಲಿ ಎರಡು ವಿಭಿನ್ನ ಜೀವಿಗಳ ಡಿ.ಎನ್.ಎ ಅಣುಗಳ ಸೇರುವಿಕೆಯ ಪ್ರಕ್ರಿಯೆಯನ್ನು ಸಂಯೋಜಿಸುತ್ತದೆ ಈ ಪ್ರಕ್ರಿಯೆಯಲ್ಲಿ ಹೆಚ್ಚು ಭಿನ್ನತೆಗಳು ಉಂಟಾಗುತ್ತವೆ ಈ ಭಿನ್ನತೆಗಳು ಜೀವಿಗಳು ಯಾವುದೇ ಭೌಗೋಳಿಕ ಪರಿಸ್ಥಿತಿಗಳಲ್ಲೂ ಬದುಕುಳಿಯುವಂತೆ ಮಾಡುತ್ತವೆ ತನ್ಮೂಲಕ ಹೊಸ ಪ್ರಬೇಧದ ಉಗಮಕ್ಕೆ ಕಾರಣವಾಗುತ್ತದೆ, ಆದರೆ ಅಲೈಂಗಿಕ ರೀತಿಯ ಸಂತಾನೋತ್ಪತ್ತಿಯಲ್ಲಿ ಡಿ.ಎನ್‌.ಎ ಪ್ರತೀಕರಣದಲ್ಲಿನ ಸಣ್ಣ ತಪ್ಪುಗಳಿಂದ ಸ್ವಲ್ಪ ಪ್ರಮಾಣದ ಭಿನ್ನತೆಗಳು ಉಂಟಾಗುತ್ತವೆ,ಅಧಿಕ ಪ್ರಮಾಣದ ಭಿನ್ನತೆಗಳು ಉಂಟಾದಲ್ಲಿ ಜೀವಿಗಳು ಬದುಕುಳಿಯುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

7. ಒಂದು ಸಂತತಿಯಲ್ಲಿ ಗಂಡು ಮತ್ತು ಹೆಣ್ಣು ಪೋಷಕರ ಸಮಾನ ಅನುವಂಶೀಯ ಕೊಡುಗೆಯನ್ನು ಹೇಗೆ ಖಚಿತಪಡಿಸಿಕೊಳ್ಳುವಿರಿ ?

ಮಾನವನ ಪ್ರತಿಯೊಂದು ಜೀವಕೊಶವು 22 ಜೊತೆ ಕಾಯಕ ವರ್ಣತಂತುಗಳನ್ನು ಮತ್ತು ಒಂದು ಜೊತೆ ಪ್ರಜನನ ವರ್ಣತಂತುಗಳನ್ನು ಹೊಂದಿರುತ್ತವೆ.ಹೆಣ್ಣಿನಲ್ಲಿ ಎರಡು X ರೀತಿಯ ಪ್ರಜನನ ವರ್ಣತಂತುಗಳಿದ್ದರೆ ಗಂಡಿನಲ್ಲಿ ಒಂದು X ಮತ್ತು ಒಂದು Y ರೀತಿಯ ಪ್ರಜನನ ವರ್ಣತಂತುಗಳಿರುತ್ತವೆ.

ಮಿಯಾಸಿಸ್ ವಿಭಜನೆಯಿಂದ ಲಿಂಗಾಣುಗಳು ಅರ್ದದಷ್ಟು ಸಂಖ್ಯೆಯ ವರ್ಣತಂತುಗಳನ್ನು ಪಡೆಯುತ್ತವೆ, ಆದ್ದರಿಂದ ಗಂಡು ಲಿಂಗಾಣುಗಳು 22 ಕಾಯಕ ವರ್ಣತಂತುಗಳು ಮತ್ತು X ಅಥವಾ Y ಎಂಬ ಪ್ರಜನನ ವರ್ಣತಂತುವನ್ನು ಪಡೆಯುತ್ತದೆ, ಮತ್ತು ಹೆಣ್ಣು ಲಿಂಗಾಣುಗಳು 22 ಕಾಯಕ ವರ್ಣತಂತುಗಳು ಮತ್ತು X ಎಂಬ ಪ್ರಜನನ ವರ್ಣತಂತುವನ್ನು ಪಡೆಯುತ್ತದೆ.

ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಮತ್ತು ಹೆಣ್ಣು ಲಿಂಗಾಣುಗಳು ಸಂಯೋಗವಾಗಿ ಉತ್ಪತ್ತಿಯಾಗುವ ಮರಿ ಕೋಶವು 22 ಕಾಯಕ ವರ್ಣತಂತುಗಳು ಮತ್ತು X ಅಥವಾ Y ಎಂಬ ಪ್ರಜನನ ವರ್ಣತಂತುವನ್ನು ಗಂಡು ಲಿಂಗಾಣುವಿನಿಂದ ಮತ್ತು 22 ಕಾಯಕ ವರ್ಣತಂತುಗಳು ಮತ್ತು X ಎಂಬ ಪ್ರಜನನ ವರ್ಣತಂತುವನ್ನು ಹೆಣ್ಣು ಲಿಂಗಾಣುವಿನಿಂದ ಪಡೆಯುತ್ತದೆ.

10th Standard Science Chapter 9 Notes

8. ಜೀವಿಯೊಂದಕ್ಕೆ ಬದುಕುಳಿಯುವ ಅರ್ಹತೆ ಒದಗಿಸುವ ಭಿನ್ನತೆಗಳು ಮಾತ್ರ ಜೀವಿಸಮೂಹದಲ್ಲಿ ಉಳಿಯುತ್ತವೆ ನೀವು ಈ ಹೇಳಿಕೆಯನ್ನು ಸಮರ್ಥಿಸುತ್ತೀರಾ ? ಹೌದಾದರೆ ಏಕೆ ಇಲ್ಲವಾದರೆ ಏಕಿಲ್ಲ?

ಜೀವಿಸಮೂಹದಲ್ಲಿ ನಿಸರ್ಗದ ಆಯ್ಕೆಯಿಂದಾಗಿ ಭಿನ್ನತೆಗಳು ಆ ಜೀವಿಗಳ ಬದುಕುಳಿಯುವಿಕೆಗೆ ಅನುಕೂಲವಾಗುತ್ತದೆ. ಜೀವಿಗಳು ಪರಿಸರದಲ್ಲಿನ ಬದಲಾವಣೆಗಳಿಗೆ ಈ ಭಿನ್ನತೆಗಳಿಂದಾಗಿ ಹೊಂದಿಕೊಂಡು,ಈ ಭಿನ್ನತೆಗಳು ಮುಂದಿನ ಪೀಳಿಗೆಗೆ ಅನುವಂಶೀಯವಾಗುತ್ತದೆ. ಜೀವಿಗಳ ವಿಕಾಸವು ಈ ರೀತಿ ನಿಸರ್ಗದ ಆಯ್ಕೆಯಿಂದ ನಡೆಯುತ್ತದೆ.

ಕೆಲವೊಮ್ಮೆ ಭಿನ್ನತೆಗಳು ಆ ಜೀವಿಯ ಉಳಿವಿಗೆ ಅನುಕೂಲವಾಗಿರದೆ ಆಕಸ್ಮಿಕವಾಗಿ ಉಂಟಾಗಿರುತ್ತದೆ. ಬದುಕುಳಿಯುವ ಪ್ರಯೋಜನವನ್ನು ನೀಡದಿದ್ದರೂ ಸಹಾ ಸಣ್ಣ ಸಮೂಹದಲ್ಲಿನ ಅವಘಡಗಳು ಕೆಲವು ವಂಶವಾಹಿಗಳ ಪುನರಾವರ್ತನೆಯನ್ನು ಬದಲಾಯಿಸಬಹುದು. ಇದನ್ನು ಅನುವಂಶೀಯ ದಿಕ್ಕುತಿ ಎನ್ನುವರು, ಈ ರೀತಿಯ ಅನುವಂಶೀಯ ದಿಕ್ಕುತಿಯು ಜೀವಿಯ ಬದುಕುಳಿಯುವ ಅರ್ಹತೆಯನ್ನು ಒದಗಿಸದೆ ಭಿನ್ನತೆಯನ್ನು ಉಂಟುಮಾಡುತ್ತದೆ.

FAQ

1, ಕಡಿಮೆ ಸಂಖ್ಯೆಯ ಹುಲಿಗಳು ಬದುಕುಳಿಯುತ್ತಿರುವುದು ತಳಿಶಾಸ್ತ್ರದ ದೃಷ್ಟಿಕೋನದಿಂದ ಚಿಂತೆಗೆ ಕಾರಣವಾಗಿದೆ ಏಕೆ?

ಹುಲಿಗಳ ಕಡಿಮೆ ಸಂಖ್ಯೆಯು ಕಡಿಮೆ ಬಿನ್ನತೆಯ ಸೂಚಕವಾಗಿದೆ.ಇದರಿಂದ ಮುಂದಿನ ಪೀಳಿಗೆಯ ಹುಲಿಗಳಲ್ಲಿ ಭಿನ್ನತೆಯು ಕಡಿಮೆಯಾಗುತ್ತದೆ ಎಂಬುದು ತಳಿಶಾಸ್ತ್ರದ ದೃಷ್ಟಿಕೋನದಿಂದ ಚಿಂತೆಗೆ ಕಾರಣವಾಗಿದೆ.

2. ಸಮರೂಪಿ ಅಂಗಗಳಿಗೆ ಉದಾಹರಣೆ ಕೊಡಿ.

ನಮ್ಮ ಹಲ್ಲುಗಳು ಮತ್ತು ಆನೆಯ ದಂತಗಳು,

ಇತರೆ ವಿಷಯಗಳು:

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

10ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh